Sunday, November 13, 2016

jayakrishnavilasa

ಶ್ರಿ.ಜಯಕೃಷ್ಣ ವಿಲಾಸ
=========================

ಕುಕ್ಕೆ ಶ್ರೀ ಸುಬ್ರಮಣ್ಯ ಸ್ವಾಮಿಯ ಕೃಪೆಯಿಂದಲೂ
ಆವನಿ ಮಹಾಸ್ವಾಮಿಗಳ ಆಶೀರ್ವದದಿಂದಲೂ’
======================================.
೧.ಮುನ್ನುಡಿ.
===========
೨ಶ್ರೀ ಕ್ಷೇತ್ರ ಮಹಿಮೆ[ಶ್ರೀ ರಂಗ ಪಟ್ಟಣ].
===========================================

೩.ಮೊದಲ ಪ್ರಜೆ.
================
೪.ಧರ್ಮ.
==============
೫.ದಯೆ.
೬.ದಾನ.
೭.ದೇವರು.
೮.ನಾಲ್ಕು ಸೋದರರು.
[ಶ್ರೀ ರಾಮಾಯಣದ ರತ್ನಗಳು].
೯.ಪಂಚ ಕನ್ಯೆಯರು.
೧೦.ಆ ದಿನದ ಸವಿನೆನಪುಗಳು
೧೧.ಅಧ್ಯಾತ್ಮ-ಧರ್ಮ ರಕ್ಷಣೆ.
೧೨.ಮುಂದಿನ ಪೀಳಿಗೆಗೆ ಸಂದೇಶ.

ಅರವತ್ತು ಸಂವತ್ಸರಗಳ ವಸಂತವನ್ನು ಮುಗಿಸಿದ ’ಅಧ್ಯಾತ್ಮ ಅಧ್ವರ್ಯು’
ಶ್ರೀ ರಮೇಶ ಶಾಸ್ತ್ರಿಗಳಿಗೆ ಅರ್ಪಣೆ
ಅ೧.ಮುನ್ನುಡಿ
=========
ಜಗದೊಡೆಯ ಪರಮಾತ್ಮ ಈ ವಿಶ್ವವನ್ನು ಸೃಷ್ಟಿಸಿ, ಮಾನವನನ್ನೂ, ಇತರ ಚರಾಚರ-
ಗಳೊಂದಿಗೆ ಸೃಷ್ಟಿಸಿ, ದೇಹವಿತ್ತು, ಜೊತೆಗೆ, ಬುದ್ಧಿ, ಮನಸ್ಸು, ಇಂದ್ರಿಯಗಳು,[೫]ಕರ್ಮ],
೫ ಜ್ಞಾನೇಂದ್ರಿಯಗಳು, ಅವನ ಆಹಾರ,ಜೀವನಕ್ಕಾಗಿ, ಪಂಚಭೂತಗಳನ್ನು ಸೃಷ್ಟಿಸಿ, ಅವನ
ಏಕಾಂಗಿತನವನ್ನು ನೀಗಲು, ಬಂಧು-ಬಳಗ, ಮಿತ್ರರು, ಮಡದಿ-ಮನೆ-ಮಕ್ಕಳುಗಳನ್ನಿತ್ತು,
ಬಾಳಿನ ಪಥವನ್ನು ಸುಗಮವಾಗಿಸಿದ್ದಾನೆ. ಅವನಿಗೆ ನಮ್ಮ ಕೃತಜ್ಞತೆಯನ್ನು ಅರ್ಪಿಸುವುದು
ಕರ್ತವ್ಯವಲ್ಲವೇ.
ಇದಕ್ಕೆ ಮಾರ್ಗವಿದೆಯೇ. ಇದೆ. ಹಿಂದೆ, ಮುನಿವರೇಣ್ಯರು, ದೀರ್ಘ ತಪವನ್ನಾಚರಿಸಿ, ಪ್ರಕೃತಿಯ
ರಹಸ್ಯವನ್ನು ಕಂಡುಹಿಡಿದು ಅದನ್ನು ನೆನಪೆನಲ್ಲಿಟ್ಟುಕ್ಕೊಳ್ಳುವಂತೆ,ಮಾಡಿದ್ದೇ ’ ಸ್ಮೃತಿ.’ಅದನ್ನು
ಅರ್ಹರಾದವರಿಗೆ, ವರ್ಗಾಯಿಸಿದ್ದೇ, ’ಶೃತಿ.’.[ಕೇಳಿಕೆ]. ’ಕೃತಯುಗದಲ್ಲಿ ತಪಸ್ಸು, ತ್ರೇತಾ-
ಯುಗದಲ್ಲಿ,ಯಜ್ಞ-ಯಾಗಾದಿಗಳು, ದ್ವಾಪರದಲ್ಲಿ ಪೂಜೆ, ಪುನಸ್ಕಾರ, ಕಲಿಯುಗದಲ್ಲಿ, ಕೇಶವ ಚಿಂತನೆ,ಎಂದು ನಿರ್ಣಯಿಸಿದರು.

’ಮಾನವನ ಉದ್ಧಾರಕ್ಕೆ, ಭಗವಂತನೇ ಹಲವು ಅವತಾರಗಳನ್ನು ಎತ್ತಿದನು. ಕೆಲವು ಭಕ್ತ-
ರನ್ನು ಕಳುಹಿಸಿದನು. ಶ್ರೀ ವಾಲ್ಮೀಕಿ, ವ್ಯಾಸ, ಮುಂತಾದ ಮಹಾನ್ ಋಷಿಗಳಿಂದ,ಪುರಾಣ ಗ್ರಂಥಗಳು ಸೃಷ್ಟಿಯಾದವು.
ಶ್ರೀ ಶಂಕರ ಭಗವತ್ಪಾದರು, ಅತಿ ಅಲ್ಪಕಾಲದಲ್ಲೇ, ದೇಶಪರ್ಯಟನೆ, ಮಹಾನ್ ಗ್ರಂಥ-
ಗಳ ರಚನೆ, ಶ್ರೀಸಾಮಾನ್ಯನಿಗೆ, ’ಶಿವಪಂಚಾಯತನ’, ಅವರ ಇಷ್ಟದೈವದ ಆರಾಧ-
ನೆಗೆ, ’ಷಣ್ಮತ, ಶೃಂಗೇರಿಯಲ್ಲಿ, ಶ್ರೀ ಶಾರದಾ ಪೀಠ ಸ್ತಾಪನೆ,ಆಚಾರ್ಯ ಪರಂಪರೆಯ
ಮೂಲಕ ಧರ್ಮಪ್ರಸಾರವನ್ನು ಕೈಗೊಂಡಿದ್ದಾರೆ. ಈ ಪರಿವರ್ತನೆ ಹೇಗೆ ಆಗುವುದೆಂದು, ಅಲ್ಲಿ ಹೋಗಿ
ಬಂದವರಿಗೇ ಗೊತ್ತು.
ಹಾಗೆಯೇ, ಮಾನವನಿಗೆ, ಬಾಲ್ಯ, ಯೌವನ, ವಾನಪ್ರಸ್ಥ,ನಾಲ್ಕು ಅವಸ್ಥೆಗಳನ್ನು ಕೊಟ್ಟು,
ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ,ನಂತರ, ಮೋಕ್ಷವನ್ನು ಅರಸುವುದೇ, ಬಾಳಿನ
ಧ್ಯೇಯ, ಎಂದು, ನಿರ್ಧರಿಸಿದ್ದಾರೆ.
ಅಂತಹ ಮಹನೀಯರೊಬ್ಬರು, ಅವರ ಮಡದಿಯೊಂದಿಗೆ, ಈ ಕ್ಷೇತ್ರದಲ್ಲಿ ಬಾಳಿ, ಬದುಕಿ, ದಾರಿ
ದೀವಿಗೆಯಾಗಿದ್ದಾರೆ.
ಬಾಳಿನಲ್ಲಿ, ನಮ್ಮ ಬಾಲ್ಯದಲ್ಲಿ, ಕಳೆದ, ಸವಿನೆನಪಿನ ಜೊತೆ, ಆದರ್ಶ ಬಾಳಿಗೆ, ಆಧಾರವಾದ,ಅಧ್ಯಾತ್ಮ ಮಾರ್ಗವನ್ನು ಅನುಸರಿಸುವುದು ಅಗತ್ಯ, ಎಂಬುದೇ, ಈ ಅಲ್ಪ ಕೃತಿಯ
ಸಂದೇಶ, ಉದ್ದೇಶ. ಅದು ಸಫಲವಾದರೆ, ಈ ಯತ್ನ, ಜಯಪ್ರದ, ಸುಖಪ್ರದ.

ಅಧ್ಯಾಯ-೨.
===========
ಶ್ರೀ ಕ್ಷೇತ್ರ ಮಹಿಮೆ. ಶ್ರೀರಂಗಪಟ್ಟಣ.
=========================================
ಬೆಂಗಳುರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದೀರಿ. ಮೊದಲು ಕಾಣುವ ಸುಂದರ ಊರು
ಚನ್ನಪಟ್ಟಣ. ಇಲ್ಲಿ, ಮರ ಆಟಿಕೆಗಳು ಪ್ರಸಿದ್ಧ. ಎಂದರೆ, ಭಗವಂತನಿಂದ, ಮಾನವನ
ಸೃಷ್ಟಿ. ನಂತರ, ಮದ್ದೂರು. ಇಲ್ಲಿಯ ’ವಡೆ,’ ಬಹು ಪ್ರಸಿದ್ಧ. ಒಳಗೆ, ಖಾರದ ಅಡಕ-
ಗಳಿದ್ದರೂ, ಮೇಲೆ ಹೊದಿಕೆ ಇರುವುದು. ಬಾಳಿನಲ್ಲಿ, ’ರುಚಿ.’ ಬೇಕಾದರೆ, ಅದರ ಹೊದಿಕೆ,ಎಂದರೆ
’ಸಮಚಿತ್ತ.’ ಅದರ ಪರಿಣಾಮ, ಸಂತೃಪ್ತಿ. ’ಕೆಂಗೇರಿ’- ಸೂರ್ಯನ ತಾಣ.’ ಬಿಡದಿ’-ಬಿಡದು ಈ ಮೋಹ. ’ಹೆಜ್ಜಾಲ.- ಹೆಜ್ಜೆಯ ಆಳ. ನಂತರ,’ ಮಂಡ್ಯ.ಅದು ಸಕ್ಕರೆಗೆ ಪ್ರಸಿದ್ಧಿ.ಬಾಳಿ-
ನಲ್ಲಿ ಸಿಹಿಯನ್ನೇ ಅನುಭವಿಸಬೇಕೆಂದು ಬಯಸುವುದು, ಮಾನವನ ಬಯಕೆ. ’ಸಿಹಿ ಅವಶ್ಯ.’
ಅತಿಯಾಗಿರಬಾರದು.
ಶ್ರೀ ಶ್ರೀರಂಗಪಟ್ಟಣಕ್ಕೆ ಬನ್ನಿ. ಕಾಲಿಟ್ಟ ಒಡನೆ, ಕರುಣಾಮಯ, ಶ್ರೀ ರಂಗನಾಥ
ಭಕ್ತರಿಗೆ ನಲ್ಮೆ ನೀಡಲು, ಶ್ರೀ ಆದಿಶೇಷನ ಮೇಲೆ ಪವಡಿಸಿದ್ದಾನೆ. ಪಾದದ ಬಳಿ
’ಶ್ರೀದೇವಿ.’.ಪುರಾತನ ಕಾಲದ ಪ್ರಸಿದ್ಧ ದೇವಾಲಯ. ಶ್ರೀ ಶ್ರೀನಿವಾಸ, ಶ್ರೀ ಹನು-
ಮಂತ, ಶ್ರೀ ಕೃಷ್ಣ,ಶ್ರೀ ರಂಗನಾಯಕಿ, ಶ್ರೀ ರಾಮಾನುಜರು, ಎಲ್ಲರೂ, ವಿರಾಜಮಾನ-
ರಾಗಿದ್ದಾರೆ.
’ಬಾಳಿನಲ್ಲಿ, ನೆಮ್ಮದಿ ಅವಶ್ಯಕ.ಅದಕ್ಕೆ ಮನದಲ್ಲಿ ’ಶಾಂತಿ’ ಅವಶ್ಯಕ.’
ಜಾಗೃತಿ; ’ನಾವು ನಮ್ಮೆದುರಿನಲ್ಲಿರುವುದೆಲ್ಲವನ್ನೂ ನೋಡುತ್ತಿದ್ದೇವೆ.’
 ’

ಸ್ವಪ್ನ;’ಮನಸಿನಲ್ಲಿ ಸುಪ್ತವಾಗಿರುವ ಚಿಂತನೆಗಳು ನಿದ್ರೆಯಲ್ಲಿ ಪ್ರತಿಪಲಿಸುತ್ತವೆ.’
ಸುಷುಪ್ತಿ;’ಆಂದೋಳನ ರಹಿತ, ಚಿಂತನ ರಹಿತ ಸ್ಥಿತಿ.
ತುರ್ಯ;’ದೈನಂದಿನ ಆಗುಹೋಗುಗಳ ಪರಿವೆ ಇಲ್ಲದೆ, ನಿಶ್ಚಲವಾಗಿ,ನಿರ್ಭಯವಾಗಿ, ನಿರ್ಮಲ-
ವಾಗಿ, ಪರಮಾತ್ಮನ ಧ್ಯಾನದಲ್ಲಿಯೇ ಇರುವ ಸ್ಥಿತಿ. ’ಇದೇ ಶ್ರೀ ರಂಗನಾಥ.’
ಕಾವೇರಿ;ಭಗವಂತನ ಸೃಷ್ಟಿಯಲ್ಲಿ, ’ಜಲ’ ಮಹತ್ವ ಪಾತ್ರ ವಹಿಸುತ್ತದೆ. ’ಮೇಘದಿಂದ
ಮಳೆಯಾಗಿ ಧರೆಗೆ ಹರಿದು ನದಿ, ತೊರೆ, ಕೊಳಗಳ ರೂಪದಲ್ಲಿ ಹರಿದು, ಸಾಗರವನ್ನು
ಸೇರುತ್ತದೆ. ಪ್ರತಿಯೊಬ್ಬ ಮಾನವನೂ, ಧರೆಗೆ ಬಂದು, ಜನನ-ಮರಣಗಳ ದಡಗಳತ್ತ
ಪಯಣಿಸಿ, ರಭಸದಿಂದ ಅಲೆಗಳು ಅಪ್ಪಳಿಸಿದರೂ, ತೀರದಲ್ಲಿ ಸೌಮ್ಯವಾಗಿರುವಂತೆ,
ಕಷ್ಟಗಳೇನೇ ಬಂದರೂ, ಸ್ವಲ್ಪ ಕಾಲದನಂತರ, ಶಾಂತವಾಗುವುದು.
’ಈಜು ಕಲಿತವರು ಆನಂದಿಸುವರು. ಮುಳುಗುವವರು ಉತ್ಸಾಹಗೊಳ್ಳುವರು. ಮೆಟ್ಟಲಿನಿಂದ,
ಚೊಂಬಿನಲ್ಲಿ ಸ್ನಾನ ಮಾಡುವವರು, ಅರ್ಧ ಭಯ, ಅರ್ಧ ಪುಣ್ಯದ ಆಸೆಯ ಮಿಶ್ರಣ.
ಪ್ರೋಕ್ಷಣೆ ಮಾಡಿಕೊಳ್ಳುವವರು ಅಲ್ಪ ತೃಪ್ತರು.
’ಆದರೆ ಎಲ್ಲರ ಗುರಿಯೂ ಒಂದೇ.’ಅದೇ ;ಪುಣ್ಯ ಸಂಪಾದನೆ.ವಾಸ್ತವಿಕ ದರ್ಶನ.’
’ಶ್ರೀ ಗಂಗಾಧರೇಶ್ವರ;-ಪ್ರಪಂಚದಲ್ಲಿ ತ್ರಿಮೂರ್ತಿಗಳ ಪಾತ್ರ ಹಿರಿದು.’ಇದರಲ್ಲಿ
ಸಂಹಾರಕನಾದ ಶಿವ, ಅಮೃತ ಮಥನ ಸಮಯದಲ್ಲಿ ಹೊರಬಿದ್ದ, ಹಾಲ ಹಲ ವಿಷವ-
ನ್ನುಂಡಾಗ, ಮಡದಿ ಉಮೆ, ಸ್ವಾಮಿಯನ್ನು ಬಿಗಿದಪ್ಪಿದಳು. ಅದು ಕಂಠದಲ್ಲೇ ಉಳಿಯಲು, ಶಿವ
ನೀಲಕಂಠನಾದ.ತಾನು ವಿಷವನ್ನುಂಡು, ಲೋಕ ಸಂತಸದಿಂದಿರಲು, ಗಂಗೆಯನ್ನಿತ್ತ.
ಅಂತೆಯೇ, ಮಾನವ ತನಗೆಷ್ಟೇ ಕಷ್ಟ ಬಂದರೂ, ಲೋಕಕ್ಷೇಮಕ್ಕೆ ಶ್ರಮಿಸಬೇಕು.ಎಂಬುದೇ
ಇದರ ಸಂದೇಶ. ಸಮತ್ವಂ ಯೋಗ ಉಚ್ಯತೆ’ ಎಂಬುದರ ಅರ್ಥ ಇದೇ.ಮೆಂಟಲ್ ಆಗದೆ
ಮೆಟಲ್ ಆಗಬೇಕು.’
ಮುಂದೆ ಬಂದರೆ, ಗಂಜಾಂ. ಬ್ರಿಟಿಷರು-ಭಾರತೀಯರಿಗೆ ಯುದ್ಧ ನಡೆಸಿದ ಸ್ಥಳ.
ಗನ್-ತುಪಾಕಿ ಜಾ-ಮ್.-ಸೆಣೆದಾಡಿದ ಸ್ಥಳ. ಇಲ್ಲಿ ತಾಯಿ ನಿಮಿಷಾಂಬಾ ನೆಲೆಸಿದ್ದಾಳೆ.
’ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ’. ಎಂಬಂತೆ, ಕಾಲನ ಕರೆ ಬರುವ ಮುನ್ನ,
ಜಾಗೃತರಾಗಿ, ಕೇಶವನ ನೆನೆಯುತ್ತಿದ್ದರೆ, ಕೈವಲ್ಯ ಖಚಿತ.
’ಸುಖ-ದುಃಖ, ನೋವು-ನಲಿವು, ದ್ವಂದಗಳಿಂದ ದೂರಾಗಿ, ಗುರುತರವಾದ ಗುರಿಯಾದ
ಭಗವಂತನ ಪ್ರಾಪ್ತಿಗೆ ಬಯಸುವುದೇ ಗುರಿಯಾಗಬೇಕು. ಶಾಂತತೆ, ಸಮತ್ವತೆ, ಸ್ವಾಮಿಯ
ಸಾಮೀಪ್ಯ, ಈ ನಾಲ್ಕು ಗುರಿಗಳನ್ನು ಸಾಧಿಸುವುದೇ ಈ ಕ್ಷೇತ್ರದ ಮಹಿಮೆ.
=============================================================
ಅಧ್ಯಾಯ-೩.ಮೊದಲ ಪ್ರಜೆ
=======================
ಪರಮಾತ್ಮ ವಿಶ್ವದ ಮೊದಲ ಪ್ರಜೆ. ನೀತಿ ನಿಯಮಳಿಗನುಸಾರವಾಗಿ,ನಡೆಯುತ್ತಾನೆ.[ಲೋಕ-
ಸಂಗ್ರಹಮೇವಾಪಿ]. ಹಾಗೆಯೇ, ಶ್ರೀರಂಗಪಟ್ಟಣ ರೈಲು ನಿಲ್ದಾಣದಿಂದ ಇಳಿದು ಬಂದರೆ,
ಮೊದಲು ಕಾಣುವುದು ಶ್ರೀ ರಂಗನಾಥನ ಆವಾಸ.
ಬಸ್ ನಿಲ್ದಾಣದಿಂದ ಬಂದರೆ, ಅಂಚೆ ತಿಪ್ಪೈಯ್ಯ ರಸ್ತೆಯಲ್ಲಿ ಇವರೇ ಮೊದಲ ಪ್ರಜೆ.
ಈ ಮನೆಯ ನಾಯಕ ಶ್ರೀ ಕೃಷ್ಣಮೂರ್ತಿ. ದ್ವಾರಕಾಧೀಶ, ಶ್ರೀ ಕೃಷ್ಣ ಮದುರೆಯಲ್ಲಿ
ಜನಿಸಿ, ಗೋಕುಲಕ್ಕೆ ಬಂದು, ಕೆಲವು ಅಧ್ಭುತಗಳೆನ್ನಸಗಿ, ’ಕಂಸನ್’ ಎಂದು, ಕರೆದು,
ಕಂಸನಿಗೆ ಮುಕ್ತಿಯನ್ನಿತ್ತು,ಧರ್ಮರಕ್ಷಣೆಗೆ, ಪಾಂಡವರನ್ನು ಬೆಂಬಲಿಸಿ, ಕೌರವರನ್ನು
ನಿಗ್ರಹಿಸಿ, ಶ್ರೀ ಭಗವದ್ಗೀತೆಯನ್ನು ಜಗತ್ತಿಗಿತ್ತು, ಪ್ರೀತಿಗೆ ರುಕ್ಮಿಣಿಯನ್ನು ವಿವಾಹ-
ವಾಗಿ, ಭಾಮೆಯ ಸ್ವಾರ್ಥವನ್ನಳಿಸಿ ರಾಧೆಯ ಸಮ್ಮಿಲನದಿಂದ, ’ವಿಶ್ವಪ್ರೇಮಿಯಾದನು.’
ಅಂತೆಯೇ, ಚನ್ನಪಟ್ಟಣದ ಬಳಿಯ, ಮಳೂರಿನಲ್ಲಿರುವ ಶ್ರೀ ಅಪ್ರಮೇಯಸ್ವಾಮಿಯೇ ಅವರ
ಆರಾಧ್ಯದೈವ
ಶ್ರೀ ಕೃಷ್ಣನಂತೆಯೇ, ಧರ್ಮಮಾರ್ಗವನ್ನು ಅನುಸರಿಸಿ,ದೈವ,ಧರ್ಮಕ್ಕೆ, ಮಾರ್ಗದರ್ಶನ-
ವನ್ನಿತ್ತು, ಬಡವ-ಬಲ್ಲಿದರೆಂಬ ಭೇದವಿಲ್ಲದೆ, ಸೇವೆ ಸಲ್ಲಿಸಿ, ಸಜೀವರಿಗೆ, ಸಕಾರಾತ್ಮಕ ಕಾರ್ಯಗಳಲ್ಲಿ ನೆರವನ್ನಿತ್ತು, ಬದುಕಿನನಂತರದ ಕಾರ್ಯದಲ್ಲಿ, ಮೋಕ್ಷಕ್ಕೆ ನೆರವಿತ್ತು
ಬಳಿಯ, ಪಶ್ಚಿಮವಾಹಿನಿಯಲ್ಲಿರುವ, ಶ್ರೀ ಪರಮೇಶ್ವರನ ಸೇವೆ ಗೈದು,ಬಾಳಿದರು.ತಮ್ಮ
ಕಾರ್ಯಗಳಲ್ಲಿ, ಜಯಗಳಿಸಲು ನೆರವಿತ್ತ, ಶ್ರೀ ಜಯಲಕ್ಷ್ಮಿಯವರ ಪಾಲು ಸ್ತುತ್ಯಾರ್ಹ.

ಗೃಹ ಪ್ರವೇಶಿಸಿದೊಡನೆ, ಸಣ್ಣ ಕೋಣೆ. ಬಂದವರಿಗೆ, ಜ್ಯೋತಿಷ್ಯ ವಾಣಿ, ಚಿಕ್ಕ ಕೋಣೆ,
ಭಾನುವಾರದ ಬಿಡದಿ. ನಂತರ, ವಿಶಾಲ ಕೋಣೆ[ಹಾಲ್]. ಪಕ್ಕದಲ್ಲಿ ಕೂರಲು ಮೂರು ಆಸನ.
ಸುಖಾಸನದಲ್ಲಿ ಕುಳಿತು, ಅವರು ಮಾತನಾಡುತ್ತಿದ್ದರೆ, ಅದೇನು ರಾಜಠೀವಿ. ಒಳಗೆ ಪ್ರವೇಶಿಸಿ.
ಉದ್ದದಕೋಣೆ. ಅರ್ಧ ಮಲಗಲು, ಅರ್ಧ ಭೊಜನಕ್ಕೆ. ಅದಕ್ಕೆ ಸೇರಿದಂತೆ ಒಂದು ಚಿಕ್ಕ ಕೋಣೆ.
ಅದು ಯಜಮಾನರ ಲೇಖನ ಗೃಹ. ಅದಕ್ಕೆ ಸೇರಿದಂತೆ, ಮತ್ತೊಂದು ಕೋಣೆ.ಅದು ನವವಿವಾಹಿತರು
ಮಲಗುವ ಕೋಣೆ. ಅಡಿಗೆ ಮನೆಗೆ ಎದುರಿಗಿರುವ ಕೋಣೆಯಲ್ಲಿ  ಸಂಗೀತಾಭ್ಯಾಸ. ಅಡಿಗೆಮನೆಯಲ್ಲೇ
ಪೂಜಾ ಗೃಹ. ಮನೆಯೊಡತಿಯೇ, ಬಂದವರಿಗೆ, ಮನೆಯವರಿಗೆ, ಯಾತ್ರಿಕರಿಗೆ, ಬಂಧುಗಳಿಗೆ
ಉಣಿಸಿದ ಸವಿಯೂಟ ಮರೆಯಲಾಗದ ಅನುಭವ. ಪುಟ್ಟ ಮಕ್ಕಳು, ನದಿಯಲ್ಲಿ ಸ್ನಾನಮಾಡಿ ಬಂದರೆ,’ತಿಂಡಿ ರೆಡಿ.’ಹಸಿವು ತಡಿ.’ ಒಟ್ಟಿನಲ್ಲಿ, ’ಧರ್ಮಸ್ಥಳವೇ ಧರೆಗೆ ಇಳಿದು ಬಂದಿತೋ’
ಮನೆಗೆ ಅಂಟಿಕೊಂದಂತೆ ಇರುವ ಮನೆಯೇ, ಕುಮಾರ ನಿಲಯ.’ ಗೋ-ಶಾಲೆಗೆ ಸೇರಿದಂತೆ ಇರುವ
ಮನೆಯೇ ’ಮಿತ್ರ ಭವನ.”ಅಪ್ರಮೇಯನೂ, ಅನ್ನಪೂರ್ಣೇಶ್ವರಿಯೂ, ಜತೆಯಲ್ಲಿಯೇ ಇದ್ದು, ದಂಪತಿಗಳ ಅತಿಥಿಸೇವೆಗೆ ನೆರವು ನೀಡಿದರು. ’ನಾಲ್ಕು ವೇದಗಳು, ಪಂಚಕನ್ಯೆಯರು.’
ಜನಿಸಿ, ಬೆಳೆದು, ಬಾಳಿ, ಬದುಕಿದುದು ಒಂದು ಇತಿಹಾಸ. ಆ ಪರ್ವಕಾಲದಲ್ಲಿ, ನಾವು ಭಾಗವಹಿಸಿ
ಭಾಗ್ಯವಂತರಾಗಿದ್ದೇವೆ.
’ಧರ್ಮ, ದಯೆ, ದೇವರು,ದಾನ’, ಈ ನಲ್ಕು ಆಧಾರಸ್ಥಂಬಗಳ ಮೇಲೆ ನಿಂತ ಧರ್ಮ ಗೃಹ.
’ಯತ್ರ ಯೋಗೀಶ್ವರ ಕೃಷ್ಣೋ, ತತ್ರ ಪಾರ್ಥೋ ಧನುಧರಃ. ತತ್ರ ಶ್ರೀ ವಿಜಯೋದ್ಭೂತಿಹಿ,
ಧೃವಾ ನೀತಿರ್ಮತಿರ್ಮಮ.’ ಈ ಶ್ಲೋಕವು ಈ ದಂಪತಿಗಳನ್ನು ನೋಡಿಯೇ ರಚಿತವಾಗಿದೆಯೆಂದು
ಭಾಸವಾಗುತ್ತದೆ. ’ನಾಲ್ಕು ವೇದಗಳು, ಶಿವ ಪಂಚಾಯತನ, ಷಣ್ಮತಗಳಿರುವಾಗ, ಅದ್ವೈತ
ವಿದೇ ಅಲ್ಲದೆ ಇದೇನು.’
ಕೃತಜ್ಞತೆ ಇರುವೆಡೆ ಕೃಷ್ಣನ ವಾಸ. ಉಷ್ಣ ಇರುವೆಡೆ ಶೈತವೂ ಉಂಟು.ಗುಣ ಮೂರು
ಜಯಿಸಿದವರಿಗೆ, ಶಾಂತಿ.ಭರ್ತಿಯಾದರೆ ಪುಣ್ಯದ ಕೊಡ, ಮೋಕ್ಷ ಖಚಿತ.
ಜಗತ್ತೇ ಮೆಚ್ಚುವಂತಹ ಮಾಧುರ್ಯ, ಯಕ್ಷಿಣಿಯಂತೆ ಆಕರ್ಷಿಸುವ ಮಮತೆ.
ಲಕ್ಷ್ಯವೊಂದೇ, ಅದೇ ಲೋಕಹಿತ.
ಲಕ್ಷ್ಮಿ ಇದ್ದರೆ ಸೌಭಾಗ್ಯಕ್ಕೆ ಕೊರತೆಯೇ.

ಅಧ್ಯಾಯ;೪.ಧರ್ಮ
==================
’ಧರ್ಮೋ ರಕ್ಷತಿ ರಕ್ಷಿತಃ
=============================
ಇದು ಒಂದು ವೇದ ವಾಕ್ಯ. ಇದನ್ನು ಒಂದು ಹಸುವಿಗೆ ಹೋಲಿಸಬಹುದು. ಕೃತಯುಗದಲ್ಲಿ ನಾಲ್ಕು,
ತ್ರೇತಾಯುಗದಲ್ಲಿ ಮೂರು, ದ್ವಾಪರಯುಗದಲ್ಲಿ ಎರಡು, ಕಲಿಯುಗದಲ್ಲಿ ಒಂದು ಪಾದದಲ್ಲಿ
ಇರುತ್ತದೆ ಎಂದು ಉಲ್ಲೇಖಿಸಲಾಗಿದೆ.
’ಕೃತಯುಗದಲ್ಲಿ ತಪಸ್ಸು, ಧ್ಯಾನ, ತ್ರೇತಾಯುಗದಲ್ಲಿ ಯಜ್ಞ-ಯಾಗಾದಿಗಳು, ದ್ವಾಪರಯುಗ-
ದಲ್ಲಿ, ಪೂಜೆ-ಪುನಸ್ಕಾರ, ಕಲಿಯುಗದಲ್ಲಿ ’ಹರಿ ಸ್ಮರಣೆ’, ಎಂದು ಉಲ್ಲೇಕಿಸಲಾಗಿದೆ.’ಬರೀ
ನಾಮಸ್ಮರಣೆಯೇ ಸಾಕೇ.’
ವಿಶ್ವಾಮಿತ್ರರು ಲೋಕಕ್ಷೇಮಕ್ಕಾಗಿ, ಶ್ರೀ ಗಾಯತ್ರಿ ಮಂತ್ರವನ್ನಿತ್ತರು..’ ಇದರ ಜಪ
ಪ್ರತಿಯೊಬ್ಬ ಬ್ರಾಹ್ಮಣನ ಕರ್ತವ್ಯ.’ವಾಹನವಿದ್ದರೆ ಸಾಕೆ. ಲೈಸೆನ್ಸ್ ಬೇಡವೇ.
’ಮುಂಜಿ ಅರ್ಹತೆಯನ್ನು ಕೊಡುತ್ತದೆ. ಜನಿವಾರ, ಯೊಗ್ಯತೆಯನ್ನು ಕೊಡುತ್ತದೆ. ಸಂಧ್ಯಾವಂದನೆ
ಬ್ರಹ್ಮ ತೇಜಸ್ಸನ್ನು ಕೊಡುತ್ತದೆ.
ನಿತ್ಯಕರ್ಮ;ದಿನವೂ ನಡೆಸಬೇಕಾದ ಸೇವೆ. ಸಂಧ್ಯಾವಂದನೆ, ಅಗ್ನಿಕಾರ್ಯ, ಪೂಜೆ.
ನೈಮಿತ್ತಿಕ ಕರ್ಮ;ಯಾವುದೇ ಒಂದು ಉದ್ದೇಶಕ್ಕಾಗಿ ನಡೆಸುವ ಕರ್ಮ. ರಾಜಸೂಯ, ಪುತ್ರ-
ಕಾಮೇಷ್ಟಿ ಯಾಗ.
ದೇವ, ಋಷಿ ಪಿತೃ, ಮನುಷ್ಯ, ಪ್ರಾಣಿ ಯಜ್ಞಗಳು.
ನ್ಯಾಯಾಲಯದಲ್ಲಿ ಹಲವು ಮಜಲುಗಳಿವೆ. ನಗರ ನ್ಯಾಯಾಲಯ, ಹೈ ಕೋರ್ಟ್, ಫರಮೋಛ್ಚ
ನ್ಯಾಯಲಯ ಎಂದು. ಹಾಗೆಯೇ, ನಿತ್ಯಕರ್ಮಗಳ ಜೊತೆ, ಧರ್ಮಶಾಸ್ತ್ರಗಳ ಅಧ್ಯಯನ,ಇಷ್ಟ,
ಕುಲದೇವತಾ ಪೂಜೆ, ದೇವರಲ್ಲಿ ನಂಬಿಕೆ, ಅವನಿಗೆ ನಮ್ಮ ಕರ್ತವ್ಯದ ಅರ್ಪಣೆ.
ಪ್ರಾರಂಭ;ಶ್ರೀ ಪರಮೇಶ್ವರ ಪ್ರೀತ್ಯರ್ಥಮ್. ಮುಕ್ತಾಯ; ಶ್ರೀ ಕೃಷ್ಣಾರ್ಪಣಮಸ್ತು.
’ವಿಷ್ಣುವೇ’ ಮೊದಲ ಗುರು.  ಅವನು ಮೋಕ್ಷದಾತ. ಶಿವ ಜ್ಞಾನದಾತ.’ಶಿವನೇ ಶ್ರೀ
ಭಗವತ್ಪಾದರ ರೂಪದಲ್ಲಿ ಬಂದು, ಮೋಕ್ಷಕ್ಕೆ ದಾರಿ ತೋರಿದ್ದರಿಂದ, ದೇವನಲ್ಲಿ ಪ್ರೀತಿಯೇ
ಭಕ್ತಿ.’ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು;’
ಮೇಲೆ ಹೇಳಿದ ಎಲ್ಲವನ್ನೂ, ಈ ಪುಣ್ಯಕ್ಷೇತ್ರದಲ್ಲಿ ನೆಲೆಸಿದ ಈ ದಂಪತಿಗಳು, ಚಾಚೂ ತಪ್ಪದೆ
ನಡೆಸಿದ್ದರಿಂದ, ಆ ಕುಟುಂಬ, ಇಂದು, ಆಚಂದ್ರಾರ್ಕವಾಗಿಯೂ, ಅಪೂರ್ವವಾಗಿಯೂ, ಬೆಳಗುತ್ತಿದೆ.
’ಸಮುದ್ರದಲ್ಲಿ ಈಜು ಬರದವನು ಮುಳುಗಿದರೆ’ ರಬ್ಬರ್ ಟೈರೇ’ ಆಧಾರ, ತೀರ ಸೇರಲು.
ಸಂಸಾರ-ಸಮುದ್ರ. ದಾಟಲು-ರಬ್ಬರ್ ಟೈರು.ಕಡೇ ದಡ-ಮೋಕ್ಷ.ಅದರ್ಶಿ;ಭಗವಂತ.
ದಾನವ;ದಾ ತೆಗೆದು ಮಾ ಸೇರಿಸಲು ಮಾನವ. ದಾವನ್ನು ’ದೇಗೆ” ಬದಲಾಯಿಸಿ ’ವ’ ಸೇರಿಸಿದರೆ
’ದೇವ’ ಆಗುತ್ತದೆ.
ಅಧ್ಯಾಯ-೫,ದಯೆ.
================
’ದಯೆಯೇ ಧರ್ಮದ ಮೂಲವೈಯ್ಯಾ;ಶ್ರೀ ಬಸವಣ್ಣನವರು-
ದಯೆ ಎಂದರೆ,’ಪರರ ಬಗ್ಗೆ ಅನುಕಂಪ.’ಎಂದು ಅರ್ಥೈಸಬಹುದು. ಇದಕ್ಕೆ, ಬೇರೆ, ಬೇರೆ,
ಮಜಲುಗಳಿವೆ.
ಮೊದಲು ದೇವರ ದಯೆ;ಪರಮಾತ್ಮ ನಮಗೆ ಈ ಶರೀರವನ್ನು ಕೊಟ್ಟಿದ್ದಾನೆ. ಜೊತೆಗೆ, ಅರಿವು,
ಮನಸ್ಸು, ಆತ್ಮಗಳನ್ನು ಕೊಟ್ಟಿದ್ದಾನೆ. ಪ್ರಕೃತಿ, ಮಾನವ ಸಂಭಂದಗಳನ್ನಿಟ್ಟಿದ್ದಾನೆ.
ಒಟ್ಟಿನಲ್ಲಿ, ಮಾನವಜೀವನ ಸುಲಭವಾಗುವಂತೆ, ಎಲ್ಲಾ, ಉಪಕಾರಗಳನ್ನೂ, ಮಾಡಿದ್ದಾನೆ.
ಅವನು ಪ್ರಥಮ ದಯಾಮಯನಲ್ಲವೇ.
ಇತಿಹಾಸಕ್ಕೆ ಬಂದರೆ;ಶ್ರೀ ಶಂಕರಾಚಾರ್ಯರು ದೇಶಪರ್ಯಟನೆ ಮಾಡುತ್ತಾ, ಶ್ರೀ
ಶೃಂಗೇರಿಗೆ ಬಂದರು. ಅಲ್ಲಿ ಸರ್ಪವೊಂದು ಗರ್ಭಿಣಿ ಮಂಡೂಕಕ್ಕೆ, ಆಶ್ರಯವಿತ್ತದ್ದನ್ನು
ಕಂಡು, ಆಶ್ಚರ್ಯಚಕಿತರಾದರು. ಅದೆ ಶೃಂಗೇರಿಯ ಶಾರದಾ ಪೀಠ ಸ್ಥಾಪನೆಗೆ ನಾಂದಿಯಾಯಿತು.
ರಾಮಾಯಣದಲ್ಲಿ;ದಿಲೀಪ ರಾಜನು, ಗೋವನ್ನು ರಕ್ಷಿಸಲು ಮುಂದೆ ಬಂದಾಗ,ಸಿಂಹವು ಅವನನ್ನು
ಪರೀಕ್ಷಿಸಿ, ಮೆಚ್ಚಿ, ಅವನ ಹಿರಿಮೆಯನ್ನು ಸಾರಿತು. ಶಿಬಿ ಚಕ್ರವರ್ತಿಯು, ಪಾರಿವಾಳವನ್ನು
ರಕ್ಷಿಸಲು, ಗಿಡುಗನಿಗೆ, ತನ್ನ ಮಾಂಸವನ್ನೇ ಕೊಡಲು ಮುಂದಾದಾಗ, ಅದರಲ್ಲಿ ಯೆಶಸ್ವಿ-
ಯಾದನು.ದಾನಶೂರ ಕರ್ಣನನ್ನು ಅರಿಯದವರಾರು.’ಮಂತ್ರ ಪರೀಕ್ಷೆಯಿಂದ ವಿವಾಹಕ್ಕೆ ಮುನ್ನವೇ,
ದ್ರೌಪದಿಗೆ ಜನಿಸಿ, ನದಿಯಲ್ಲಿ ಬಿಡಲ್ಪಟ್ಟು, ರಾಧೇಯನಾಗಿ, ಶ್ರೀ ಪರಶುರಾಮರು ಮತ್ತು
ಶ್ರೀ ದ್ರೋಣರಿಂದ ಧನುರ್ವಿದ್ಯೆ, ನಿರಾಕರಿಸಲ್ಪಟ್ಟು, ಕೌರವನಿಂದ, ಅಂಗದೇಶದ ಅರಸ-
ನಾಗಿ, ನಿಶ್ಚಲ ಮೈತ್ರಿಯನ್ನು ನಿರೂಪಿಸಿ, ತನಗೆ, ಮೈಗೂಡಿದ ದಾನದ ಬಲದಿಂದ, ಒಬ್ಬ
ಬ್ರಾಹ್ಮಣನ ಯಜ್ಞಕ್ಕಾಗಿ, ಅರಮನೆಯ ಬಾಗಿಲನ್ನೇ, ಕೊಟ್ಟು, ರಣರಂಗದಲ್ಲಿ ಶ್ರೀ ಕೃಷ್ಣ-
ನಿಗೆ, ರಕ್ತರೂಪದಲ್ಲಿ ಅರ್ಘ್ಯವಿತ್ತು ಅರ್ಪಿಸಿ, ಶ್ರೀ ಕೃಷ್ನನಿಂದ ’ದಾನಶೂರ ಕರ್ಣನೆಂದು’
ವರ ಪಡೆದ ಮಹಿಮಾನ್ವಿತ.
ಮಾನವನಿಗೆ ಬಂದಾಗ; ಹೃದಯವೆಂಬುದಿದೆ. ಕಷ್ಟ ಬಂದಾಗ ದೇವರಿಗೆ ಮೊರೆಯಿಡುತ್ತೇವೆ.
ಅವನು ಪರಿಹಾರ ನೀಡುತ್ತಾನೆ. ತಂದೆ-ತಾಯಿಯರಲ್ಲಿ, ಮಾತೆ, ಮಕ್ಕಳಿಗೆ, ತನ್ನ ಪ್ರೀತಿಯ
ಧಾರೆಯೆರದು, ಮಕ್ಕಳನ್ನು ಬೆಳೆಸುತ್ತಾಳೆ.
ತಂದೆ;ಮಗನು, ಪ್ರಪಂಚದಲ್ಲಿ, ವಿದ್ಯೆ, ಬುದ್ಧಿ, ಉದ್ಯೋಗಗಳನ್ನು ನಡೆಸಿ, ಉನ್ನತ ವ್ಯಕ್ತಿ-
ಯಾಗಲು,ನೆರವೀಯುತ್ತಾನೆ. ಗುರುವು ಜ್ಞಾನವನ್ನಿತ್ತು ಜ್ಞಾನಿಯಾಗಿಸುತ್ತನೆ. ಅಧ್ಯಾತ್ಮ ಗುರುವು
ಅಧ್ಯಾತ್ಮದತ್ತ ಸೆಳೆದು, ದೈವಭಕ್ತಿಯನ್ನು ಬೆಳೆಸುತ್ತಾನೆ. ನಿತ್ಯಕರ್ಮಾನುಷ್ಟಾನದಿಂದ
ದೇವತೆಗಳು ಹರಸುತ್ತಾರೆ.
ಮಾನವನ ಪಾತ್ರವೇನು;ಮೊದಲು ತನ್ನ ತಂದೆ-ತಾಯಿಯರಿಗೆ, ವಯಸ್ಸಾದನಂತರ ನೆರವು ನೀಡು-
ವುದು. ತನ್ನ ಬಂದು-ಮಿತ್ರರು ಆಪತ್ತಿನಲ್ಲಿದ್ದರೆ, ನೆರವು ನೀಡುವುದು. ಬಡವರ ಮಕ್ಕಳಿಗೆ
ದ್ರವ್ಯ ದಾನ, ಪುಸ್ತಕದಾನ, ಉಚಿತ ಶಿಕ್ಷಣ, ಹಿರಿಯರ ಹೆಸರಿನಲ್ಲಿ ಪಾರಿತೋಷಕ
ನೀಡುವಂತಿಗೆ, ಅಪಘಾತವಾದವರನ್ನು, ಆಸ್ಪತ್ರೆಗೆ ಕೊಂಡೊಯ್ಯುವುದು, ರಕ್ತದಾನ, ಮನೆಗೆ
ಬಂದವರಿಗೆ, ಅಶನ  ನೀಡುವುದು, ಹೊರಗಿನವಿರಿಗೆ ಅಶನದಾನ, ಇವೆಲ್ಲವೂ, ದಯೆಯ
ವಿವಿಧ ಮುಖಗಳು. ಇಂದಿನ ಯುವಕರು, ತಮ್ಮ ತಂದೆ-ತಾಯಿಯರನ್ನು, ವೃದ್ದಾಶ್ರಮಕ್ಕೆ
ಸೇರಿಸಿ, ಅಥವಾ, ಎಲ್ಲಾ ಅನುಕೂಲಗಳನ್ನೂ ಕೊಟ್ಟು, ಮನೆಯಲ್ಲಿರಿಸಿ, ಅವರು ಸಂತೋಷವಗಿ-
ದ್ದಾರೆ ಎನ್ನುತ್ತಾರೆ. ಅದಲ್ಲ ಸಂತೋಷ.
ಅವರಿಗೆ, ಎರಡು ಹಿತವಾದ ಮಾತುಗಳನ್ನಾಡಿ, ಅವರ ಅನಿಸಿಕೆಗೆ ಸ್ಪಂದಿಸಿ, ಅವರ ಇಷ್ಟ-
ಅನಿಷ್ಟಗಳನ್ನು ಗುರ್ತಿಸಿ, ಪ್ರತಿಕ್ರಯಿಸುವುದಾಗ, ಹೃದಯದಲ್ಲಿ ಹೊಮ್ಮುವ ಆನಂದವೇ ದಯೆ.
ಅದನ್ನು ಅನುಷ್ಟಾನಕ್ಕೆ ತರಲು ಮನವಿದೆಯೇ.ಅದಕ್ಕೆ ಅಗತ್ಯವಾದ ಸಂಪನ್ಮೂಲವಿದೆಯೇ.
ಹಾಗಾದರೆ, ಇಂದೇ, ಕಂಕಣಬದ್ಧರಾಗಿರಿ.
ಅಧ್ಯಾಯ-೬.ದಾನ.
===========
ದಾನವೆಂದರೆ, ಬರೀ, ಧನ, ವಸ್ತುಗಳನ್ನು ಮಾತ್ರ ನೀಡುವುದಲ್ಲ. ಇತರ ಹಲವು ದಾನಗಳಿವೆ.
ಪ್ರದಾನ; ಅತ್ಯುನ್ನತವಾದದ್ದು. ಅದು ಅಧ್ಯಾತ್ಮ ಸಂಭಂಧವಾದದ್ದು.
’ದೇವಾನ್ ಭಾವಯತಾನೇನ, ತೇ ದೇವಾ ಭಾವಯನ್ತುವಃ. ಪರಸ್ಪರಂ ಭಾವಯಂತಃ, ಶ್ರೇಯಃ
ಪರಮವಾಪ್ಸ್ನುಯಾತ್.’ಭಗವದ್ಗೀತೆ;
’ನಾವು ನಮ್ಮ ನಿತ್ಯಕರ್ಮಗಳನ್ನು, ನಡೆಸುವುದರ ಮೂಲಕ ದೇವತೆಗಳನ್ನು ತೃಪ್ತಿಗೊಳಿಸಿದರೆ
ಅವರು ನಮ್ಮ ಬಾಳಿನಲ್ಲಿ ಸನ್ಮಂಗಳವಾಗಲು ನೆರವೀಯುತ್ತಾರೆ.ಪಿತೃಗಳಿಗೆ, ಅವರ ಕ್ರಿಯೆ-
ಗಳನ್ನು ನಡೆಸುವದರ ಮೂಲಕ ಅವರು ಹರಸುತ್ತಾರೆ.
ನಿಧಾನ;ಮನಸ್ಸಿಗೂ, ಉದ್ರೇಕಕ್ಕೂ, ಬಲು ಸಂಭಂದ. ಈಗಿನ ಕಾಲದಲ್ಲಿ, ಪತಿ-ಪತ್ನಿಯರು,
ತಂದೆ-ಮಕ್ಕಳು, ಸ್ನೇಹಿತರು, ಆಸ್ತಿಗೆ, ಸ್ಥಿರಾಸ್ತಿಗೆ, ಚರಾಸ್ತಿಗೆ ಮನಸ್ತಾಪ.ಈ
ಹಿಂದೆ, ಹೆಂಡತಿಗೆ, ತವರಿಗೆ, ಹೋಗೆಂದು ಹೇಳಿದರೆ, ಅವಳು ತವರಿಗೆ ಹೋದರೆ, ಪತಿ,
ಬಂದು ಮತ್ತೆ ಕರೆದೊಯ್ಯುತ್ತಿದ್ದ. ಈಗ, ಒನ್-ವೇ-ಟ್ರಾಫ಼ಿಕ್ ಆಗಿದೆ. ಕಾರಣ, ಪರಸ್ಪರ,ಅಪ ನಂಬಿಕೆ,
ಅರಿವಿಕೆಯ ಅಭಾವ. ’ತಾಳಿ’ ಎಂದರೆ, ಎಂತಹ ಪರಿಸ್ಥಿತಿಯಲ್ಲೂ, ’ತಾಳಿ’ ಎಂದು ಅದು ಅದೇಶಿ-
ಸುತ್ತದೆ. ’ಕೂಲ್ ಆಗದೆ,’ಫ಼ೂಲ್’ ಆಗುವದನ್ನು ಬಿಟ್ಟು, ’ಕಾಂ’ ಅಗಿದ್ದು, ’ವಾರಂ’ ಆಗಿ, ’ಸ್ಟಾರಂ’
ಆಗದೆ,’ಫ಼ಾರಂಗೆ’ ಬಂದರೆ, ಅದೇ, ಬಾಳಿಗೆ ಅಲಾರಂ. ಅದಕ್ಕೆ ನಿಧಾನವೇ ಆಧಾರ.
ಸಮಾಧಾನ;’ನಾರದೋ ಕಲಹಪ್ರಿಯಃ’ ಎಂದರೂ, ಅಂತಿಮದಲ್ಲಿ ಸುಖಾಂತವಾಗುತ್ತದೆ.
’ಕಲಹ ಸನಿಹದಲ್ಲಿದ್ದರೂ, ಅದು ಒಂದು ’ಮತಿಭ್ರಮಣೆಯ’ ತರಹ. ಅದೇ, ’ವಿರಹ’ ಎಂದರೆ,
ಬಾಳಿನಲ್ಲಿ, ಅದು, ’ಸುಖ ಬರಹ.’ಅದರ ಆನಂದವೇ ಒಂದು ತರಹ. ಆಗ,’ವ್ಯಕ್ತಿ ಕುಣಿದು
ಕುಪ್ಪಳಿಸುವನು, ಸಂತಸದಲ್ಲಿ, ಕೂಗುತ್ತಾ,’ಅಹಾಹ.’
ಸಂಧಾನ;ಎರಡು ತಂಡಗಳ ನಡುವೆ, ಪಂದ್ಯ ನಡೆಯುತ್ತದೆ. ಸೋಲು-ಗೆಲುವು, ಸಾಮಾನ್ಯ.
ಪ್ರೇಕ್ಷರಿರುತ್ತಾರೆ. ಅದಕ್ಕೆ ಒಂದು ವಿಧಿಯಿದೆ. ’ಅಂಪೈರ್’ ಮಾತನಾಡುವದಿಲ್ಲ. ’ಶೀಟಿ
ಊದುತ್ತಾನೆ. ಅತಿ ಉದ್ರೇಕ ಪ್ರಕಟಣೆ, ’ಗೇಟ್-ಪಾಸ್.’ ಇನ್ನೊಬ್ಬನಿದ್ದಾನೆ. ಮೂರನೇ, ’ನಿರ್ಣಾಯಕ’.
ಅವನ ನಿರ್ಧಾರವೇ ಅಂತಿಮ.
’ಬಾಳ ಪಂದ್ಯದಲ್ಲಿ, ’ಸುಖ-ದುಃಖ, ’ನೋವು-ನಲಿವುಗಳಲ್ಲಿ ಗೆಲ್ಲಬೇಕಾದರೆ,  ’ಮೂರನೇ
ನಿರ್ಣಾಯಕ, ದೇವರ ಮೊರೆ ಹೋಗಬೇಕು. ’ ಶ್ರಮಕ್ಕೆ, ನ್ಯಾಯಕ್ಕೆ, ಜಯ.’
ವಿಧಾನ;;ಸುಗಮ ಜೀವನಕ್ಕೆ ಅವಶ್ಯ ’ಸಾವಧಾನ.’ ಅದು ’ಸ್ವಾಮಿಯ ವರದಾನ.’
ಅಧ್ಯಾಯ-೭, ದೇವರು
====================
’ದೇವರೆಂದರೆ ಯಾರು.’. ಇದರ ವಿಷ್ಲೇಶಣೆ, ಗಹನ, ಕುತೂಹಲಕರ. ವಿವಾದಗಳಿವೆ.
ಸ್ವಾಮಿ ಚಿನ್ಮಯಾನಂದ;’ ನಾಸ್ತಿಕರು ’ಗಾಡ್ ಈಸ್ ನೋ ವೇರ್’ ಎನ್ನುತ್ತಾರೆ.’ಆಸ್ತಿಕರು, ’ ಗಾಡ್ ಈಸ್
ನೌ ಹಿಯರ್,’ ಎನ್ನುತ್ತಾರೆ.
ಹಿಂದೆ, ನಮ್ಮ ಋಷಿಗಳು ಕಠಿಣ ತಪವನ್ನಾಚರಿಸಿ, ಇದರ ರಹಸ್ಯವನ್ನು ಕಂಡು ಹಿಡಿದರು.
’ಶೃತಿ, ಸ್ಮೃತಿ ಗಳ ಮೂಲಕ ಅದು ಪ್ರಸಾರವಾಯಿತು. ವೇದ, ಇತಿಹಾಸ, ಪುರಾಣಗಳ ಮೂಲಕ
ಅದು ಇನ್ನೂ ಪ್ರಚಾರವಾಯಿತು.
’ಭಗವಂತನೇ ಹಲವು  ಅವತಾರಗಳೆನ್ನಿತ್ತಿ, ’ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೆ
ನಾಂದಿಯಾಯಿತು. ಶ್ರೀ ರಾಮಾಯಣ, ಶ್ರೀ ಮಹಾಭಾರತ, ಭಗವದ್ಗೀತೆ, ಶ್ರೀಮದ್ ಭಾಗವತಗಳು ಉದಯವಾಯಿತು. ನಂತರ ಮಹಾತ್ಮರ ಅವತಾರ.
’ಸ್ವಾಮಿಯೇ ಇಚ್ಚಿಸಿದ್ದು ಕೆಲವು ಕ್ಷೇತ್ರಗಳು, ಋಷಿಗಳು ಬೇಡಿ, ಸ್ವಾಮಿ, ನಿಂತ ಕ್ಷೇತ್ರಗಳು.
ಅರಸರು, ಭಕ್ತರು ನಿರ್ಮಿಸಿದ ಕ್ಷೇತ್ರಗಳು.
ನಂತರ ಆರಾಧನೆಯಲ್ಲಿ ಎರಡು ವಿಭಾಗ. ಓಂದು ನಿತ್ಯ, ನೈಮಿತ್ತಿಕ, ಕರ್ಮಗಳ ಕರ್ಮಾ-
ಚರಣೆ, ಇದು ಒಂದು ವಿಭಾಗ. ಮತ್ತೊಂದು, ತಪಸ್ಸು, ಧ್ಯಾನದ ಮೂಲಕ, ಆ, ಸ್ವಾಮಿಯನ್ನು
ಕಂಡು, ಅರಿತು, ಆನಂದದ ಅಮೃತತ್ವವನ್ನು ಅನುಭವಿಸುದು.
ಒಂದು ಟೀವೀ ಇದೆ. ಅದರ ನಿರ್ಮಾಣಕ್ಕೆ ಪ್ರತಿಭೆ ಅಗತ್ಯ. ನಂತರ, ಅದರ ಕಾರ್ಯಕ್ರಮಗಳ
ವಿವರಣೆಗೆ ವ್ಯಕ್ತಿಗೆ ಪ್ರತಿಭೆ ಅಗತ್ಯ.ವೀಕ್ಷಕರಿಗೆ, ಅದನ್ನು ತಿಳಿದುಕೊಳ್ಳಲು ಪ್ರತಿಭೆ
ಅಗತ್ಯ. ಮೂವರಿಗೂ, ಈ, ಅರಿವು ಎಲ್ಲಿಂದ ಬಂದಿತು.
ನಮ್ಮಲ್ಲಿರುವ ಸ್ವಭಾವಕ್ಕೆ ’ನೇಚರ್’ ಎನ್ನುತ್ತರೆ. ಇದು, ಜೀವಾತ್ಮ, ಪ್ರಕೃತಿ ಸಂಪತ್ತು, ಬಾಳಿನ ನಿರ್ವಹಣೆಗೆ ನೆರವಾಗುವುದರಿಂದ, ಅದನ್ನು ’ನೇಚರ್’ ಎನ್ನುತ್ತಾರೆ. ಇದನ್ನು ನಿರ್ವ-
ಹಿಸುವ ವ್ಯಕ್ತಿಗೆ, ’ದೇವರು’ ಎನ್ನುತ್ತಾರೆ.
’ಒಂದು ಸಂಸ್ಥೆಯಲ್ಲಿ, ಎಂ.ಡಿ. ಇದ್ದಾರೆ. ಅವರ ಪರ ಬೇರೆಯವರು, ಕೆಲಸ ನಿರ್ವಹಿಸುವು-
ದರಿಂದ, ಅವರು, ಇಲ್ಲವೆಂತಲ್ಲ. ಎಲ್ಲೋ ಒಂದೆಡೆ ಇದ್ದಾರೆ. ಇದು, ದೇವರಿಗೂ ಅನ್ವಯಿಸುತ್ತದೆ.
ಇದಕ್ಕೆ, ಶ್ರೀ ಶಂಕರ ಭಗವತ್ಪಾದರು, ’ಅತಿ ಪ್ರತಿಭಾವಂತರಿಗೆ ವೇದ, ಉಪನಿಷತ್ತು,
ಮಧ್ಯಮ ವರ್ಗದವರಿಗೆ, ಪೂಜೆ-ಪುನಸ್ಕಾರಗಳು, ಪಾಮರರಿಗೆ, ಸ್ತೋತ್ರಗಳನ್ನು ರಚಿಸಿ,
ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು, ಬುನಾದಿಯಾದರು.
ಶ್ರೀ ಶಂಕರರಿಂದ ನಿಯುಕ್ತರಾದ ಗುರುವಿನ ಮೂಲಕ, ಭಕ್ತನಿಗೆ, ಮೋಕ್ಷಕ್ಕೆ, ದಾರಿ-
ಮಾಡಿರುವದರಿಂದ  ’ನಾನು’ ಎಂಬ ಅಜ್ಞಾನವನ್ನು ಕಳಚಿ, ಜ್ಞಾನವೆಂಬ ಪೀತಾಂಬರವನ್ನು
ಧರಿಸಿ, ಅದರಲ್ಲಿ, ಭಕ್ತಿಯನ್ನು ಬೆರಸಿ, ಮೆದುಳಿನಲ್ಲಿ ಚಿಂತೆಯನ್ನು ಬದಿಗಿರಿಸಿ,
ಅವನಲ್ಲಿ ಮನವಿರಿಸಿ, ಅವನ ಅರಸಿ, ಪಯಣಿಸಿ, ಅಧ್ಭುತ ಆನಂದವನ್ನು ಎಲ್ಲರಿಗೂ ಉಣಿಸಿ.
================================================================================’
ಅಧ್ಯಾಯ-೮
==========
ನಾಲ್ಕು ಸೋದರರು-ರಾಮಾಯಣದ ರತ್ನಗಳು.
--------------------------------------
ಶ್ರೀಮದ್ ರಾಮಾಯಣದಲ್ಲಿ, ಶ್ರೀ ವಾಲ್ಮೀಕಿಯು, ಶ್ರೀ ನಾರದರನ್ನು, ವಿಶ್ವದಲ್ಲಿಯೇ,
ಗುಣವಂತನಾದ, ವೀರ, ಶೂರನೂ, ಕೃತಜ್ಞನೂ, ಆದ, ವ್ಯಕ್ತಿ, ಯಾರೆಂದು ಕೇಳಲು, ನಾರದರು,
ಶ್ರೀ ರಾಮಚಂದ್ರನನ್ನು ಉದ್ಧರಿಸುತ್ತಾರೆ.
ಪುತ್ರಕಾಮೇಷ್ಠಿ ಯಾಗದ ಪಲದಿಂದ ದಶರಥನಿಗೆ ಜನಿಸಿದ, ನಾಲ್ಕು ಮಕ್ಕಳೂ. ಶ್ರೀರಾಮ,
ಲಕ್ಷ್ಮಣ, ಭರತ ಶತ್ರುಘ್ನರು, ಇದು ಶ್ರೀರಂಗಪಟ್ಟನದಲ್ಲಿ ಪುನರಾವರ್ತನೆ
ಆಗಿದೆ, ಎಂದರೆ, ಉಪೇಕ್ಷೆಯಲ್ಲ.
ಶ್ರೀ ರಾಮ;ಹಿರಿಯ ಮಗ ಶ್ರೀ ಸುಬ್ರಮಣ್ಯನ ಹೆಸರನ್ನು ಹೊತ್ತು,ಸ್ವಾಮಿಯಂತೆ,ಪ್ರಾಜ್ಞನೂ,
ನಿಸ್ಪೃಹನೂ, ಖಂಡಿತವಾದಿಯೂ, ನಿಯಮಬದ್ಧನೂ, ಆಗಿದ್ದಾನೆ.
ಬಾಲ್ಯದಿಂದಲೂ, ಈಜು ಕಲಿತಿದ್ದರಿಂದ, ಸಂಸಾರಸಾಗರವನ್ನು ದಾಟುವುದು ಸುಲಭವಾಯಿತು. ಹಾಗೆಯೇ,
ಕಾಲ್ಚೆಂಡು ಕಲಿತಿದ್ದರಿಂದ, ಗುರಿ ಸಾಧಿಸುವುದನ್ನು, ಕಲಿತಾಯಿತು.
ಅವರ ಕುಟುಂಬದಲ್ಲೇ, ಪ್ರಥಮ ಪದವೀಧರನಾಗಿ, ಸರ್ಕಾರಿ ಕೋಶಾಗಾರದ ಅಧಿಕಾರಿ
ಕಾರ್ಯವನ್ನು, ಯೆಶಸ್ವಿಯಾಗಿ, ನಿರ್ವಹಿಸಿ, ಸ್ಟಿಕ್ ಅಂಡ್ ಕ್ಯಾರಟ್ [ವಜ್ರದಂತೆ ಕಠಿಣ,
ಹೂವಿನಂತೆ ಮೃದು], ವಿಧಾನವನ್ನು ಅನುಸರಿಸಿ, ನಿವೃತ್ತಿಯನಂತರ, ಶಿವನ ಅರಾಧನೆ-
ಯಲ್ಲೇ ಮಗ್ನರಾಗಿದ್ದಾರೆ.’ಬ್ರಹ್ಮನ ಆರಾಧನೆಗೆ, ಅಗತ್ಯವಾದ, ’ಗಾಯತ್ರಿ’ದೇವಿಯೇ, ಬಳಿ-
ಯಿರುವಾಗ, ಕೊರತೆಗೆ ಅವಕಾಶವೆಲ್ಲಿ.
ಅನಂತ; ಶ್ರೀ ರಾಮಾನುಜರು, ಶ್ರೀ ಲಕ್ಷ್ಮಣನನ್ನು, ’ನಿಂತರೆ, ಕೊಡೆ, ನಡೆದರೆ ಪಾದುಕೆ,
ಮಲಗಿದರೆ ಹಾಸಿಗೆ, ಎಂದು ವರ್ಣಿಸಿದ್ದಾರೆ. ’ಲಕ್ಷ್ಮೀವಾನ್ ಲಕ್ಷ್ಮಿವರ್ಧನಃ,ಎಂಬಂತೆ,
ಸೇವೆಗೆ, ಹೆಸರಾದ ಅವರು, ಶ್ರೀ ಸುಬ್ರಮಣ್ಯನ, ಹೆಸರನ್ನೇ, ಪಡೆದು,ಸೇವೆಯಲ್ಲೇ
ನಿರತರಾಗಿದ್ದಾರೆ. ಸ್ನೇಹ ಪರ, ಆಪಾರ ಚಾತುರ್ಯ, ಇವುಗಳ ಮಿಶ್ರಣ ಈ ವ್ಯಕ್ತಿ.
’ಭರತೋ, ಬ್ರಾತ್ರುವತ್ಸಲಃ;’ಕೈಗೆ ಬಂದ ರಾಜ್ಯವನ್ನು ಕಡೆಗಣಿಸಿ, ಕಾಡಿಗೆ ತೆರಳಿ,
ಅಣ್ಣನನ್ನು ಕಂಡು, ಪಾದುಕೆ ಪಡೆದು, ನಂದೀಗ್ರಾಮದಲ್ಲಿ ನೆಲೆಸಿ, ನಾಮಕಾವಸ್ತೆಯ ಪ್ರತಿ-
ನಿಧಿಯಾಗಿ, ಹದಿನಾಲ್ಕು ವರ್ಷ ಮುಗಿದ ದಿನ ಬರದಿದ್ದರೆ, ಅಗ್ನಿಪ್ರವೇಶ ಮಾಡುವೆನೆಂದ
ಅವನಲ್ಲವೇ ಪ್ರಿಯ ಸೋದರ. ಅದಕ್ಕೇ ’ಭರತೋ ಬ್ರಾತೃವತ್ಸಲಃ’ ಎಂದು ಸಾರಿದ್ದಾರೆ.
 ತಂದೆ ನಡೆಸಿದ ಕಾರ್ಯವನ್ನು, ನಿರ್ವಹಿಸುತ್ತಾ, , ಪುರ-ಹಿತ,
[ಊರಿನ ಹಿತರಕ್ಷಣೇ], ಪುರೋಹಿತರಾಗಿದ್ದಾರೆ. ಮಾನವಕಲ್ಯಾಣದ ರುವಾರಿಯಾಗಿದ್ದರೆ.
ಪ್ರಕಾಶ್ ಬಾಬು;ಶತ್ರುಘ್ನಃ ಶತ್ರುಮರ್ಧನಃ-ಶತ್ರುಘ್ನ ಯಾವ ಒಂದು ನಿಯಮವನ್ನೂ
ಪಾಲಿಸಲಿಲ್ಲ. ಭರತನನ್ನೆ, ಗುರುವಾಗಿ ಸ್ವೀಕರಿಸಿ, ಅವರ ನೆರಳಿನಲ್ಲೇ ಸಾಗಿದ್ದಾರೆ.
ಜ್ಞಾನಪ್ರಸಾರವನ್ನು ಕೈಗೊಂಡು, ’ತಿಳಿವಳಿಕೆಯ ಮೂಲಕ, ಇನ್ನು, ಹೆಚ್ಚು ಸಮರ್ಪಕ-
ವಾಗಿ ಕಾರ್ಯ ನಿರ್ವಹಿಸಲು ನೆರವೀಯುತ್ತಿದ್ದಾರೆ.
’ರಾಮಾಯಣದ ನಾಲ್ಕು ಮಹಾತ್ಮರು, ಕಲಿಯುಗದಲ್ಲಿ , ಶ್ರೀರಂಗಪಟ್ಟಣಕ್ಕೆ ಬಂದಿಳಿದರೋ,
ಎಂಬ, ಭಾಸವಾಗುತ್ತದೆ. ಒಟ್ಟಿನಲ್ಲಿ, ಇವರನ್ನು ಹೆತ್ತ, ಮಾತಾ-ಪಿತರು ಧನ್ಯರು.
===============================================================================
ಅಧ್ಯಾಯ-೯.
==========
ಪಂಚ ಕನ್ಯೆಯರು
==================
’ಅಹಲ್ಯಾ ದ್ರೌಪತಿ ತಾರಾ ಸೀತಾ ಮಂಡೋದರೀ ತಥಾ, ಪಂಚಕನ್ಯಾಂ ಸ್ಮರೇನ್ ನಿತ್ಯಮ್,
ಮಹಾಪಾತಕ ನಾಶನಂ.
=====================
ಶ್ರೀರಂಗಪಟ್ಟಣದಲ್ಲಿದ್ದ ನಾಯಕರಿಗೆ ಪಂಚಕನ್ಯೆಯರಿದ್ದರು. ಅವರ ಸ್ಥೂಲ
ಪರಿಚಯ;
ಶ್ರೀಮತಿ ಸುಂದರಿ;ಶ್ರೀ ಶಂಕರಾಚಾರ್ಯರು ರಚಿಸಿದ ಸೌಂದರ್ಯಲಹರಿಯಲ್ಲಿ ತಾಯಿಯ ಸೌಂದರ್ಯವರ್ಣನೆ ಬರುತ್ತದೆ. ಹಿರಿಯ ಮಗಳು, ಶ್ರೀಮದ್ ಗಾಂಭೀರ್ಯ, ವಿನಯ, ವಿವೇಕ,
ವಿಶ್ವಾಸಗಳ ಪ್ರತಿರೂಪವಾಗಿ, ಮನೆಯ ಕಣ್ಮಣಿಯಾಗಿದ್ದಳು. ಶ್ರೀ ಸುಬ್ರಮಣ್ಯ ನಾಮಾಂಕಿತನ, ಕೈಹಿಡಿದು, ಆಳಿದ ಮಹಾಸ್ವಾಮಿಗಳ, ನಗರದಲ್ಲಿ, ಸುಖ ಸಂಸಾರವನ್ನು ನಡೆಸಿ,
ಅನಾರೋಗ್ಯದಿಂದ, ಅಸು ನೀಗಿದರೂ, ಶ್ರೀ ಸುಬ್ರಮಣ್ಯನರಸಿಯ ಹೆಸರಿನ, ಮುದ್ದು ಮಗಳನ್ನಿತ್ತು
ಕೃತಾರ್ಥಳಾದಳು. ’ಸುಂದರಿಯಾಗಿದ್ದು, ದಯಾಮಯಿಯಾಗಿ, ರಿಕ್ತಹಸ್ತದಿಂದ ದಾನಮಾಡಿದ
ಸ್ತ್ರೀರತ್ನ.
============
ರಾಜಲಕ್ಷ್ಮಿ; ಪ್ರೀತಿಯ ಹೆಸರು ’ ರಾಜಿ.’ನಾವು ಶಾಂತಿಪ್ರಿಯರು.’ ಯಾವುದೇ ಜಗಳವಿದ್ದರೂ,
ಸಂಧಾನದ ಮೂಲಕ ಪರಿಹರಿಸಿಕ್ಕೊಳ್ಳಬಹುದು. ಇದನ್ನೇ, ರಾಜೀ ಸೂತ್ರ’ ಎನ್ನುವರು. ಇವರು
ವಿವೇಕ, ವಿವೇಚನೆ, ವಿಮರ್ಶೆಯ ಪ್ರತೀಕ. ಅವರು ಮನೆಯ ಆಡಳಿತವನ್ನು ನಿರ್ವಹಿಸುತ್ತಿದ್ದ
ವೈಖರಿಯೇ, ಒಂದು ಅಪೂರ್ವ ಅನುಭವ. ಅವರು ಮೆಟ್ರಿಕ್. ಪರೀಕ್ಷೆಗೆ ಹೋದಾಗ, ನಾನು ಊಟ
ಕೊಂಡುಹೋದ ನೆನಪಿದೆ. ಶ್ರೀ ಸುಬ್ರಮಣ್ಯ ನಾಮಾಂಕಿತನ ಜೊತೆ ವಿವಾಹ, ಒಂದು ಚರಿತ್ರಾರ್ಹ
ಘಟನೆ. ಮನೆಯಲ್ಲೇ, ’ಆಧುನೀಕತೆಯ’ ಮಾರ್ಪಾಟಾಯಿತು. ’ಕುವರ-ಕುವರಿಯರೊಡನೆ ಅವರು
ಭವ್ಯವಾಗಿ ಬಾಳಿದ ಅವರು ಹರೆಯದಲ್ಲೇ ವಿಧಿವಶರಾದುದು, ವೇದನೆ ತಂದರೂ, ಮನದಲ್ಲಿ
ಆಚಂದ್ರಾರ್ಕವಾಗಿ ನೆಲೆಸಿದ್ದಾರೆ.’- ರಾಣಿಯಂತೆ ಬಾಳಿ ಜನಪ್ರಿಯರಾಗಿ, ಲಕ್ಷ್ಯದತ್ತ ಸಾಗಿದ
ವೀರ ಲಕ್ಷ್ಮಿ.’------------------------------------------------------------------
===============
ವಸಂತ;’ವಸಂತ ಬಂದ ಋತುಗಳ ರಾಜ ತಾ ಬಂದ..’ ಇದು ನಮ್ಮ ಕಾಲದ ಜನಪ್ರಿಯ ಪದ್ಯ.ವರ್ಷ-
ದಲ್ಲಿ ವಸಂತಋತುವನ್ನು, ಮಾನವರು, ಪಶುಪಕ್ಷಿಗಳು, ರೈತರು, ಕಾತರದಿಂದ ನಿರೀ-
ಕ್ಷಿಸುತ್ತಾರೆ.’ರೈತರು ಫಸಲನ್ನು ತೆಗೆದು, ಮಾರುಕಟ್ಟೆಗೆ ಕಳುಹಿಸುವ ಕಾಲ. ಉಗಾದಿಯಿಂದ
ಹಬ್ಬಗಳ ಸಾಲು ಪ್ರಾರಂಭ. ’ ಈ ರೀತಿ ಹರ್ಷವೇ, ಧರೆಗಿಳಿದು ಬಂದಿತೋ’ ಎನಿಸಿತು.ಅವರ
ಜೀವನ, ’ವಸಂತಗೆ ಸಂತಸ ತಂದ ತರುಣಿ.’
========================================
ನಾಗರತ್ನ;[ಡಾಲಿ];=ಡಾಲ್ ಎಂದರೆ ಆಂಗ್ಲದಲ್ಲಿ ಬೊಂಬೆ.
. ಮುದ್ದುಮುದ್ದಾಗಿ, ಮಾತನಾಡುವ ಹವ್ಯಾಸ.
ಶಿಕ್ಷಣಕ್ಷೇತ್ರದಲ್ಲಿ, ಪ್ರಾವೀಣ್ಯತೆಯನ್ನು ಪಡೆದು, ಶಿಕ್ಷಕಿಯಾಗಿ, ಶಿಶ್ಯರಿಗೆ,-
ಶಿಕ್ಷಣವನ್ನಿಯುತ್ತಾ, ಇಂದು ’ಶಿರೋರತ್ನವಾಗಿದ್ದಾರೆ.’ನಾವು ಗಳಿಸಿದ್ದನ್ನು ರಕ್ಷಿಸಲು, ಯತ್ನಿಸಬೇಕು.
.
ವೀಣಾ;= ಸಂಗೀತದಲ್ಲಿ, ಪಿಟೀಲು, ವೀಣೆಗಳಿಗೆ, ಮಹತ್ವವಾದ ಸ್ಥಾನವಿದೆ. ಪಿಟೀಲಿನಲ್ಲಿ
ಕಮಾನು , ತಂತಿಯೊಡನೆ ಮೆಳೈಸುವುದರಿಂದ, ಇಂಪಾದ ನಾದವನ್ನು ಹೊರಹೊಮ್ಮಿಸುತ್ತದೆ.
ಕಮಾನು-ತಂತಿ-ಘರ್ಶಣೆ. ಫಲ.ದುಃಖ.’ ಸಹೃದಯತೆಯ ರಾಗದಿಂದ, ವಿಶ್ವಾಸದ ವೀಣೆ-
ಯನ್ನು ಮೀಟಿದಾಗ ವಿಶ್ವವೇ ನಿನ್ನದಾಗುತ್ತದೆ.’ ಜೊತೆಗೆ, ತಂತಿಯನ್ನು ಮೀಟುತ್ತಾ, ಮನೆಮನೆ-
ಯನ್ನು ಮೀಟಿದರೆ, ಹೆಜೆಜೆಗೂ, ಸುಖದ ಮಜಲನ್ನು ಪ್ರತಿಬಿಂಬಿಸುತ್ತದೆ.
ಜೊತೆಗೆ, ಶ್ರೀ ಸೂರ್ಯನಾರಾಯಣನ ಬೆಂಬಲವಿರುವುದರಿಂದ, ಜಗತ್ತಿಗೆ ಬೆಳಕು ನೀಡುವದ-
ರಿಂದ, ಪ್ರಕೃತಿಯ ಸ್ನೇಹಿತನಾಗುತ್ತಾನೆ.
’ವೀಣೆಯ ಕಂಪನದಿಂದ, ಮಳೆ ಸುರಿಸಿರುವ ಘಟನೆಗಳಿವೆ.’ಸೂರ್ಯನ ಪ್ರಿಯವಾದ ’ಗಾಯತ್ರಿ
ಮಂತ್ರದಿಂದ ಬಾಳು ಸುಗಮವಾಗುತ್ತದೆ.’ ಸಂಗೀತದ ಮಳೆ ಹರಿದಾಗ, ಸಂತೋಷ, ಸೌಭಾಗ್ಯ,
ಸನ್ಮಂಗಳ ನಿಶ್ಚಯ.
================================================================================
ಅ ದಿನದ ಸವಿನೆನಪುಗಳು-ಅಧ್ಯಾಯ.೧೦

=========================== ========
೧೯೫೯-೬೦ ರ ಸಮಯ. ಆಗ ನಾನು ೧೫ ವರ್ಷದವನಾಗಿದ್ದೆ. ರಜೆಯಲ್ಲಿ ಈ ಕ್ಷೇತ್ರಕ್ಕೆ ಬರುವುದು
ವಾಡಿಕೆ.
ವಿದ್ಯಾರ್ಥಿಯಾಗಿದ್ದರಿಂದ ಹಣಬಲ ಅಷ್ಟಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ೨-೫೦ ರೂ.ಚಾರ್ಜು.
ಬರಲು, ರೂ.೨-೫೦ ಚಾರ್ಜು. ಒಟ್ತು, ರೂ.೫. ೦=೫೦ ಪೈಸೆ ಎಂತೆ, ೧ ದಿನಕ್ಕೆ ರೂ.೧೫. ಎಂದರೆ
೨೦ ರೂ ನಲ್ಲಿ ಸಂಪೂರ್ಣ ಪ್ರವಾಸ ಮುಗಿಯಬೇಕು. ’ಇದು ಸಾಧ್ಯವೇ ಎಂದರೆ, ಸಾಧ್ಯ. ಆಗಿನ
ಕಾಲಕ್ಕೆ.
ಮನೆಯ ಯೆಜಮಾನರು ಎಂದರೆ, ನಮ್ಮ ಭಾವನವರು, ದಯಾಪರರು, ಧಾರ್ಮೀಕರು. ಬಂದೊಡನೆ
’ಬಾ ಬೆಂಗಳೂರು’ ಎಂದು ಸ್ವಾಗತ. ಅತ್ತೆಯವರಿಂದ, ಯೋಗಕ್ಷೇಮ ವಿಚಾರ, ಸಂಜೆ, ಶ್ರೀ
ರಂಗನಾಥ, ಶ್ರೀ ಗಂಗಧರೇಶ್ವರನ ದರ್ಶನ. ಮೂರನೆಯ ದಿನದಿಂದ, ಹೊಸ ದಿನಚರಿ
ಪ್ರಾರಂಭ.
’ಬೆಳಗ್ಗೆ, ಕಾವೇರಿಯಲ್ಲಿ ಸ್ನಾನ. ಹಿರಿಯ ಮಗ ಭಾರೀ ಈಜುಗಾರ. ಬಸ್ ನಿಲ್ದಾಣದ ಸೇತುವೆ-
ಯಲ್ಲಿ ಬಿದ್ದು, ರೈಲ್ವೇ ನಿಲ್ದಾಣದ ಬಳಿ ಏಳುವ ರಣಧೀರ. ಅದೇ ಶಿಕ್ಷಣವನ್ನು ತಮ್ಮಂ-
ದಿರಿಗೂ ಇತ್ತು ಪ್ರವೀಣರಾಗಿಸಿದ. ನಂತರ, ಮನೆಗೆ ಬಂದರೆ, ಸಂಧ್ಯವಂದನೆ. ಅತ್ತೆಯವ-
ರಿಂದ ದೊಡ್ಡ ಹಾಲಿನಲ್ಲಿ, ಕುಳ್ಳಿರಿಸಿ, ತಿಂಡಿ ಪ್ರದಾನ. ಚಿಕ್ಕ ಮಕ್ಕಳ ನಡುವೆ, ಸಣ್ಣ
ಸಣ್ಣ ಜಗಳ. ಶಾಂತಿ. ನಂತರ ಪಶ್ಚಿಮವಾಹಿನಿಗೆ ಪ್ರಯಾಣ. ಅಲ್ಲಿರುವ, ಶ್ರಿ.ಉಮಾಮಹೇ-
ಶ್ವರನಿಗೆ ಪೂಜೆ.
ರೈಲು ನಿಲ್ದಾಣದ ಮಧ್ಯೆ ನಡೆದುಬರುತ್ತಿದ್ದರೆ, ಪ್ರಕೃತಿಸೌಂದರ್ಯದ ವೀಕ್ಷಣೆ ಕಣ್ಣಿಗೆ ಹಬ್ಬ. ಕೆಲವು ಪ್ರೇಕ್ಷಕರು, ಸ್ಥಳವನ್ನು ವೀಕ್ಷಿಸಲು ಬಂದಾಗ, ’ಗೈಡ್’ ಆಗಿ ಕೆಲಸಮಾಡಿ
ಸ್ವಲ್ಪ ಹಣ ಮಾಡಿದ್ದುಂಟು.
ಅಲ್ಲಿಂದ ೧೦ಕಿ.ಮಿ.ದೂರದಲ್ಲಿರುವ ಪಾಂಡವಪುರಕ್ಕೆ ಪ್ರಾಯಾಣ. ’ಸಾಹಸ ಸಿಂಹ’, ರಾಮಾನುಜ-
ನೊಡನೆ, ಸೈಕಲ್ ಏರಿ ಪಯಣಿಸಿ, ಮಾವಿನಕಾಯಿ ಕಿತ್ತು ತರುವುದೇ, ಒಂದು ಸಾಧನೆ. ಚೀಲವನ್ನು
ಹಿಡಿದು, ಮರದಿಂದ, ಮರಕ್ಕೆ ಏರಿ, ಒಂದು ಮೂಟೆ ಮಾವಿನಕಾಯಿ ಕಿತ್ತು, ಚೀಲದಲ್ಲಿ ಹಾಕಿ,
ಸೈಕಲ್ ಏರಿ, ಬಂದರೆ, ’ನೋ ಟ್ರಬಲ್.’ ಅವರ ಕೆಲಸ ’ಗ್ಯಾಂಬಲ್. ದೊಡ್ಡವರ ಮುಂದೆ ’ಹಂಬಲ್.’
ಶ್ರೀರಂಗಮುಡಿಯಲ್ಲಿ, ಶ್ರೀ ರಂಗನಾಥಸ್ವಾಮಿಯ ದೇವಾಲಯದಲ್ಲಿ, ನಂತರ ದೊರಕುವ
’ಪುಳಿಯೋಗರೆ’, ಪ್ರಸಾದ, ರುಚಿಕರ. ಅರೋಗ್ಯಕರ, ಆನಂದಕರ.’
’ ಪರೀಕ್ಷೆಯ ಸಮಯದಲ್ಲಿ, ಹಗಲಿರುಳು, ಸೋದರಿಯರು ಓದುವುದು ಒಂದು ಕಣ್ಣಿಗೆ ಹಬ್ಬ.
ನಾವು ಅವರಿಗೆ ಪರೀಕ್ಷೆಯ ಸಮಯದಲ್ಲಿ ’ಊಟ, ಕೊಂಡೊಯ್ಯುತ್ತಿದ್ದುದು, ಒಂದು ಅಪೂರ್ವ ಅನುಭವ.
ಒಮ್ಮೆ, ಒಂಟೀಕೊಪ್ಪಲ್ ಪಂಚಾಂಗದ ಶ್ರೀ ವೆಂಕಟರಮಣಾವಧಾನಿಗಳು ಬಂದು, ನಮ್ಮ ಶ್ಲೋಕ-
ವನ್ನು ಕೇಳಿ ಇತ್ತ ’ನಾಕಾಣೆಯ, ಮೌಲ್ಯವನ್ನು ’ನಾಕಾಣೆ.’ ಅಂತೆಯೇ, ಮೈಸೂರಿನ ಶ್ರೀ ಕೃಷ್-
ಣೈಯ್ಯರ್ ಅವರು, ’ಸಂಗೀತ ಸುಧೆಯನ್ನು ಹರಿಸಿದ್ದು, ಇಂದು ನಾವು ಸ್ವಲ್ಪ ಸೇವೆಯನ್ನು ಸಲ್ಲಿಸು-
ವುದಕ್ಕೆ ಸ್ಫೂರ್ತಿ.
ಹಲವು ಭಾರಿ ಮೈಸೂರಿಗೆ ಹೋಗುವುದುಂಟು. ಅದು ’ವಿನೋಬಾ ಸರ್ವೀಸ್.’ ಹೋಗಲು ಮೂರು ಘಂಟೆ.
ಮನೆಗೆ ಬಸ್ಸಿನಲ್ಲಿ ಬಂದರೆ, ’ಯಾವ ಬಸ್ಸಿನಲ್ಲಿ ಬಂದೆ,ಎಂದರೆ, ನಿರುತ್ತರ. ಸತ್ಯ
ಅರಿತಿರುವ ಅತ್ತೆಯಿಂದ ’ಬಿಸಿ ಬಿಸಿ ಊಟ.’ ಕೆ.ಆರ್.ಎಸ್.ಗೂ, ವಿನೋಬಾ ಸರ್ವೀಸ್. ಅತ್ತೆಯವರಿಂದ
ಹಿತ್ತಲ ಗೇರುಬೀಜದ ಹುಳಿ ಅತಿ ಮಧುರ. ನಮ್ಮ ಭಾವನವರಿಂದ ’ಸಿಹಿಮಾತಿನ ಉಪಚಾರ.’
ಚಾಪೆಯ ಮೇಲೆ ಮಲಗಿದರೆ, ’ಅಮರಲೋಕ ದರ್ಶನ.’ ಅವರ ಮಗ ನಾಗರಾಜ. ಕೇ.ಆರ್.ಎಸ್. ನ
ಅಪಾರ ಜ್ಞಾನದ ವೀಕ್ಷಕ ವಿವರಣೆಯಿಂದ ಅಲ್ಲಿ ಸುತ್ತಾಡಲು ಹೋದರೆ, ನಮ್ಮನ್ನು ಮರುಳು-
ಗೊಳಿಸುವ ಕಲೆ ಅವನಿಗೆ ಸೀಮಿತ.
ಹಿಂದಿರುಗುವಾಗ, ಹೃದಯದಲ್ಲಿ ’ಅನುರಾಗದ ಅನುಭವವನ್ನು’ ಹೊತ್ತು, ಬಂದರೆ, ಅದು ’ಅಫೂರ್ವ
ಅನುಭವ.’
’ಕೇಳುಗರನ್ನು ಕಲ್ಪನಾಲೋಕಕ್ಕೆ ಕೊಂಡೊಯ್ಯುವ ಕುತೂಹಲಕಾರಿ, ಚೇತೋಹಾರಿ, ಅನುಭವವನ್ನು
ಮುಂದಿಟ್ಟಿದ್ದೇವೆ. ಓದಿ ಆನಂದಿಸಿರಿ.
=================================================================================
ಅಧ್ಯಾಯ-೧೧.
============
ಅಧ್ಯಾತ್ಮ-ಧರ್ಮ ರಕ್ಷಣೆ.
==========================
’ಧರ್ಮೋ ರಕ್ಷತಿ ರಕ್ಷಿತಃ.’. ಇದು ಒಂದು ವೇದ ವಾಕ್ಯ. ಧರ್ಮವನ್ನು ರಕ್ಷಿಸುವನನ್ನು
ಧರ್ಮ ರಕ್ಷಿಸುವುದು.
’ಧರ್ಮ ಎಂದರೇನು.’ಧರತೀತಿ ಧರ್ಮಃ. ’ರಕ್ಷಣೆಯೇ ಧರ್ಮ.’
ಒಂದು ರೈಲಿನಲ್ಲಿ, ಮೂರು ವರ್ಗಗಳಿವೆ.’ ಮೇಲ್ದರ್ಜೆಗೆ ಬರುವವನು, [ಅಪ್ಪರ್ ಬರ್ತ್] ಹೊತ್ತಿಗೆ
ಸರಿಯಾಗಿ ಬರುತ್ತಾನೆಹಾಸಿಗೆಯನ್ನು ಬಿಡಿಸಿ, ಇಳಿದು, ಫ಼್ರೆಶ್ ಆಗಿ, ಮತ್ತೆ ಮೇಲೆ ಹತ್ತಿ, ಹಾಸಿಗೆ
ಬಿಡಿಸಿ,ನೀರು ಕುಡಿದು, ಮಲಗುತ್ತಾನೆ. ಇವನು’ತೃಪ್ತ.’
ಎರಡನೇ ಹಂತ’.ಮಿಡಲ್ ಬರ್ತ್; ಇವನು ಹತ್ತುವುದು ಬಲು ಕಷ್ಟ. ಸೀಟಿನಲ್ಲಿ ಕುಳಿತಿರುವವರು
ಮಾತನಾಡುವದನ್ನು ನಿಲ್ಲಿಸುವದೇ ಇಲ್ಲ, ದೀಪ ಆರಿಸದೆ ನಿದ್ದೆ ಬರುವದಿಲ್ಲ. ಇವರ ಮಾತು
ನಿಲ್ಲುವುದಿಲ್ಲ.  ಕೆಳಗೆ ಇಳಿದು ಟಾಯ್ಲೆಟ್,’ಗೆ ಹೋಗಲೂ ಅವಕಾಶವಿಲ್ಲ. ಇವರ ಸ್ಥಿತಿ ’
ಡೋಲಾಯಮಾನ.’ ಇವರು ’ನೊಂದವರು.’
ಕೆಳಗೆ ಕುಳಿತಿರುವವರು,[ಲೋಯರ್ ಬರ್ತ್] ಸುಖ ಪುರುಷರು.ಯಾವುದೇ ಚಿಂತೆಯಿಲ್ಲದೆ, ಬಂದ-
ದ್ದನ್ನು ಕೊಂಡು, ರಸಿಕತೆಯಿಂದ ತಿನ್ನುತ್ತಾ, ಲೋಕ ವ್ಯವಹಾರವನ್ನು ಮಾತನಾಡುತ್ತಾ, ಮಲಗುವ
ಹೊತ್ತಿಗೆ ಮಧ್ಯರಾತ್ರಿ. ಇವರು ’ನಿರ್ಲಿಪ್ತರು.’ಸುಖಪುರುಷರು.’
ಅಧ್ಯಾತ್ಮದಲ್ಲಿ ಮೊದಲು ಬರುವವರು ’ದೇವತೆಗಳು.’ ಅವರು ಸ್ವರ್ಗದಲ್ಲಿರುವುದರಿಂದ ಹಸಿ-
ವಿಲ್ಲ. ಕಣ್ಣು ರೆಪ್ಪೆ ಮುಚ್ಚುವುದಿಲ್ಲ. ಅಮೃತಪಾನದಿಂದ ಅಂತ್ಯವಿಲ್ಲ.ಆದರೆ, ಅವರಿಗೆ
ನಾವು ಮಾಡುವ ಹೋಮಗಳ ಹವಿಸ್ಸೇ ಆಧಾರ. ನಮ್ಮ ಆರಾಧನೆಯಿಂದ ಅವರು ಮೆಚ್ಚಿ ಅವರು ನಮ್ಮನ್ನು ಹರಸುತ್ತಾರೆ. ಆದರೆ, ಪುಣ್ಯ ಮುಗಿದ ಮೇಲೆ, ಧರೆಗೆ ಮಾನವರು ವಾಪಸ್.
ಮಾನವರು;’ ಈ ಧರೆ ಕರ್ಮಭೂಮಿ. ಭಗವಂತನಿತ್ತ ಎಲ್ಲಾ ಸಂಪತ್ತುಗಳೂ ಇವೆ. ಅವರ
ಹಿಂದಿನ ಜನ್ಮದ ಕರ್ಮಾನುಸಾರವಾಗಿ ಮಾನವರು ಜನಿಸುತ್ತಾರೆ.’ಹಾಗಾದರೆ ಬಾಳಿನ ಗುರಿಯೇನು.
ನ್ಯಾಯಾಲಯದಲ್ಲಿ, ಮೂರು ವ್ಯಕ್ತಿಗಳಿದ್ದಾರೆ. ಅಪರಾಧಿ, ನ್ಯಾಯವಾದಿ, ನ್ಯಾಯಮೂರ್ತಿ.
ನಾವು ತಿಳಿಯದೆ ಎಷ್ಟೋ ಅಪರಾಧಗಳನ್ನು ನಡೆಸುತ್ತೇವೆ. ಅದನ್ನು ಮಾಡಲಿಲ್ಲವೆಂದು ಸಾಧಿ-
ಸುತ್ತೇವೆ. ತೀರ್ಮಾನಿಸುವುದು ನ್ಯಾಯಾಧೀಶ.
’ಬಾಳಿನ ಗುರಿಯೇನು.’ ಧರ್ಮ, ಅರ್ಥ, ಕಾಮ, ಮೋಕ್ಷ.
ಮಾನವನ ಏಳಿಗೆಗೆ ಮಜಲು;
ಚಿಕ್ಕ ವಯಸಿನಲ್ಲಿ;ಸ್ತೋತ್ರಗಳು. ದೇವರ ಕಥೆ.ದೇವಾಲಯ ದರ್ಶನ.
ಬಾಲಕನಾಗಿ;ಉಪನಯನ. ಸಂಧ್ಯಾವಂಧನೆ.
ಗೃಹಸ್ಥ;ಪೂಜೆ, ಪುನಸ್ಕಾರ, ಕಾಮ್ಯ ಕರ್ಮಗಳು.
ವೃದ್ದಾಪ್ಯ;ಜಪ, ತಪಸ್ಸು, ಧ್ಯಾನ.
ಫಲ;ಮುಕ್ತಿ.
ಆ ಕಾಲದಲ್ಲಿ, ಪುಸ್ತಕ, ಚೀಲಗಳೇ ಇರಲಿಲ್ಲ. ಬರೀ ’ಶೃತಿ, ಸ್ಮೃತಿ.’ ಈಗ ಎಲ್ಲವೂ ಇದೆ.
ವಿದ್ಯೆಯಿಲ್ಲ. ಕಾರಣವೇನು. ’ಒಬ್ಬ ಹುಟ್ಟಿನಿಂದ ಸಾವಿನವರೆಗೆ, ೬೪ ಕರ್ಮಗಳಿವೆ.
ನಾಮಕರಣ.ಚೌಲ, ಮುಂಜಿ, ವಿವಾಹ, ಸೀಮಂತ. ಪುತ್ರನಿಗೆ;ಇದರ ಪುನರಾವರ್ತನೆ.
ಅರವತ್ತಕ್ಕೆ ಶಾಂತಿ. ೭೦.ಶಾಂತಿ.೮೦;ಸಹಸ್ರಚಂದ್ರ ದರ್ಶನ. ೧೦೦-ಶತಾಯು.
ನಂತರ;ವೇದಗಳಲ್ಲಿ ವಿವರಿಸಿರುವಂತೆ ಆ ಕಾರ್ಯ ನಡೆಸಬೇಕು. ಅವರಿಗೆ ಪುಣ್ಯಲೋಕ
ಪ್ರಾಪ್ತಿ. ಅವರ ಸಂತತಿಗೆ ಸನ್ಮಂಗಳ ಪ್ರಾಪ್ತಿ.
ಇದನ್ನು ನಡೆಸುವವರಿಗೆ ’ಪುರೋಹಿತರೆನ್ನುವರು.’  ’ನಗರದ ನಲ್ಮೆ ಬಯಸುವವವರು’
ಎಂದರ್ಥ. ’ವೇದವನ್ನು ಕಲಿತವರು, ’ವೈದೀಕರು.’ ಸ್ವಾಮಿಗೆ ಸೇವೆಯನ್ನು ಸಲ್ಲಿಸಿ,
ಭಕ್ತಿಗೆ ನಲ್ಮೆಯನ್ನು ಕೋರುವರು, ’ಅರ್ಚಕರು.’ ಸಮಾಜದಲ್ಲಿ, ಹಿಂದೆ ಹೇಳಿದ, ಕಾರ್ಯ-
ಗಳನ್ನು ನಡೆಸಿ, ಮಾನವನ ಏಳ್ಗೆಗೆ  ಶ್ರಮಿಸುವರು ’ಪುರೋಹಿತರು.’
’ನಿಷ್ಣಾತರಾದ ಅವರ ಅವಶ್ಯವಿದೆ. ಜನರು ’ ದೈವ ಮತ್ತು ಪಿತೃ’ ಕಾರ್ಯಗಳನ್ನು
ನಡೆಸಲು ಉತ್ಸುಕರಾಗಿದ್ದಾರೆ. ಅವರ ಹಿತರಕ್ಷಣೆ ಅವಶ್ಯ.’ಮೋಜಿಗೆ, ಮಣಗಟ್ಟಲೆ
ಹನ ಸುರಿಯುವವರು, ವೈದೀಕಕ್ಕೆ ಬಂದಾಗ, ’ಅಷ್ಟೇಕೆ’ ಎಂದು ಕೊರಗುವುದು, ಆಶ್ಚರ್ಯ.
ಅದಕ್ಕೇ, ಹಿಂದೆ ಹೇಳಿದಾರು, ’ತರ್ಪಣ,’ ಎಂದರೆ,’ತರ ಪಣಂ’ ಎಂದು ಬಿಡಿಸಿ, ಹೇಳಿದ್ದಾರೆ.
ಎಂದರೆ,’ಕೊಡುವ ಹಣ’ ಎಂದು. ಇಂಗ್ಲೀಷಿನಲ್ಲಿ, ’ಸರ್ಮನಿ’ ಎಂದರೆ,ಸಮಾರಂಭ, ಎಂದರೆ,
ಬಿಡಿಸಿ ಹೇಳಿದರೆ,ಸರ್, ಮನಿ ಎಂದರೆ ’ಸ್ವಾಮಿ ಹಣ’ ಎಂದು.
ಆಧುನಿಕ ಯುಗದಲ್ಲಿ, ಅರ್ಥವನ್ನು ಅರಸುವುದೇ ಗುರಿಯಾಗಿದೆ. ಇದರಿಂದ ನೆಮ್ಮದಿ, ಶಾಂತಿ, ದೂರಾಗಿದೆ. ಅದನ್ನು ಅಂಗಡಿಯಿಂದ ಕೊಳ್ಳಲು ಸಾದ್ಯವಿಲ್ಲ. ’ಬದುಕಿಗೆ ’ಅರ್ಥ ’ ಅಗತ್ಯ.
ಬಾಳಿನ ’ಅರ್ಥ’ ಅರಿಯಬೇಡವೇ..
ಎಂತಲೇ, ಐಹಿಕ ಸುಖದೊಂದಿಗೆ,’ದೈವ ಚಿಂತನೆಯೂ, ಸೇರಿದಾಗ,ಬಾಳು ಸುಗಮವಾಗುವುದು.
ಈ ಮಹಾನ್ಕಾರ್ಯವನ್ನು ಶ್ರೀ ರಂಗನಾಥನ ಕ್ಶೇತ್ರದಲ್ಲಿ ಆರಂಭಿಸಿದ ನಮ್ಮ ನಾಯಕರ
ಈ ನಿಟ್ಟಿನ ಕಾಣಿಕೆ, ಅಭೂತಪೂರ್ವವಾದುದು.
ಅವರ ಪರಂಪರೆಯನ್ನೇ ಯಶಸ್ವಿಯಾಗಿ ಮುಂದುವರಿಸಿಕೊಂಡು ಬರುತ್ತಿರುವ, ಶ್ರೀ ರಮೇಶ್-
ರವರ ಕಾರ್ಯ ಶ್ಲಾಘನೀಯ.
’ಅರವತ್ತರ ಹರೆಯದ ಅವರು ಶತಾಯುಷಿಗಲಾಗಿ, ಶಾಸ್ತ್ರ, ವೇದಂತ, ಅಧ್ಯಾತ್ಮ ಕ್ಷೇತ್ರ--
ಗಳಲ್ಲಿ, ಹೆಚ್ಚು ಹೆಚು ಪ್ರತಿಬಾವಂತರನ್ನು ಸೃಷ್ಟಿಸಿ, ಸಮಾಜದಲ್ಲಿ ’ಅಧ್ಯಾತ್ಮ ದ್ವಜ-
ವನ್ನು ಎತ್ತಿ ಹಿಡಿಯುವಂತೆ, ಶ್ರೀ ರಂಗನಾಥ, ಶ್ರೀ ಗಂಗಾಧರಸ್ವಾಮಿ, ತಾಯಿ ನಿಮಿಷಾಂಬಾ
ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.
================================
ಅಧ್ಯಾಯ.೧೨.
===========
ಮುಂದಿನ ಪೀಳಿಗೆಗೆ ಆದೇಶ.
=========================
ನಾವು ಎತ್ತ ಹೋಗುತ್ತಿದ್ದೇವೆ. ಇದು ವಿಶ್ಲೇಷಿಸಬೇಕಾದ ವಿಚಾರ. ’ಭಾರತವನ್ನು ’ಧರ್ಮ-
ಭೂಮಿ’ ಎನ್ನುತ್ತೇವೆ.’ ಇದರ ಬೆನ್ನೆಲುಬೇ ’ಧರ್ಮ.’ಎಷ್ಟೇ ಪರಕೀಯ ಧಾಳಿಯಾದರೂ, ಧೀರ
ಚಕ್ರವರ್ತಿಯಂತೆ ತಲೆಯೆತ್ತಿ ನಿಂತಿದೆ.
ಈ ಪುಣ್ಯಭೂಮಿಯ, ಎಲ್ಲಾ ಸಿರಿ ಸಂಪತ್ತುಗಳೂ, ಮಾನವರು, ಪಶು ಪಕ್ಶಿ ಪ್ರಾಣಿಯೊಂದಿಗೆ
ದೈವದೊಡನೆ ಸಮ್ಮಿಳಿತವಾಗಿದೆ. ’ಕಷ್ಟಂ’ ಎಂದು ಕಮ್ಮದಲ್ಲಿ ಹೇಳಿದರೂ, ಕಷ್ಟಮ್[ಆಂಗ್ಲ]
ಬಿಡದೇ ಇದ್ದರೆ ಬಾಳು ಸುಗಮ.
ಬಿಸಿಲಿಗೆ, ಮಳೆಗೆ, ’ಛತ್ರಿ’ ಇದ್ದಂತೆ, ಛಳಿಗೆ, ಸ್ವೆಟರ್’ ಇದ್ದಂತೆ,ನಮ್ಮ ಬಾಳಿಗೆ
’ಪರಂಪರೆ’ ಎಂಬ ಕವಚವಿದೆ.
ಬಾಳಿಗೆ ಎರಡು ಮುಖಗಳಿವೆ. ಒಂದು ಶರೀರ ಸಂಭಂದ ಎಂಬುದು. ಪ್ರಾಪಂಚಿಕ ಸುಖಕ್ಕೆ
ಸಂಭಂದಿಸಿದ್ದು. ’ಹಣ, ಅಧಿಕಾರ, ವಿದ್ಯೆ, ಆಸ್ತಿ, ಎಷ್ಟು ಬಂದರೂ ಸಾಲದು. ಕೆಲವು ವೇಳೆ,
ಮನಸ್ತಾಪ, ಅತೃಪ್ತಿ, ಬೇಡದ ವೈಮನಸ್ಯ, ಕೆಲವು ವೇಳೆ ಜೀವ ಹತ್ಯೆ ಆಗುವುದು.
ಬಾಳಿನಲ್ಲಿ ’ಕಾಂ ಪೆಟೀಷನ್’ ಇರಬೇಕು. ಕಾಂಪೆಟೀಷನ್’ ಇರಬಾರದು. ’ಗೋ ಸ್ಲೋ’ ಇರಬೇಕು.
’ಗೋಸ್-ಲೋ’ ಆಗಬಾರದು.
ಇನ್ನು ’ಅಧ್ಯಾತ್ಮ ಕ್ಶೇತ್ರಕ್ಕೆ ಬಂದರೆ, ಅದು ಹೃದಯಕ್ಕೆ ಸಂಭಂಧಿಸುದುದು. ಅಲ್ಲಿ,
’ಪರಮಾತ್ಮ’ ನೆಲೆಸಿದ್ದಾನೆ. ಪ್ರಪಂಚ, ನಮ್ಮ, ಪ್ರಕೃತಿ,ಬಾಳ, ಸೃಷ್ಟಿಕರ್ತನಿಗೆ,
’ಥಾಂಕ್ಸ್ ಗಿವಿಂಗ್’ ಬೇಡವೇ.’ಅದನ್ನೇ, ‘ಜ್ಯಾನ, ಭಕ್ತಿ, ಕರ್ತವ್ಯ,ಎಂದು ವಿಂಗಡಿಸಿದ್ದಾರೆ,
ಮಾನವನ ಉದ್ದಾರಕ್ಕೆ.’
ಅವತಾರಗಳು,ಮಹಾಪುರುಷರು,ಗ್ರಂಥಗಳು, ಪುರಾಣಗಳು, ಹರಿಕಥೆ, ಉಪನ್ಯಾಸ, ಸಂಗೀತಾ,
ನೃತ್ಯ.
ನಿತ್ಯ ಕರ್ಮ ನೈಮಿತ್ತಕ ಕರ್ಮಗಳು, ಕಾಂಯ ಕರ್ಮ, ಜಪ, ಧ್ಯಾನ,
’ಭೌತಿಕ ಬೆಳವಣಿಗೆಯ ಜೊತೆ, ಬೌದ್ಧಿಕ ಬೆಳವಣಿಗೆಯೂ, ಅವಶ್ಯ.’ ದೇಹದ ಬೆಳವ-
ಣಿಗೆಯ ಜೊತೆ, ದೈವಜ್ಞಾನವೂ ಅಗತ್ಯ. ಹೊರಗಿನ ಖಾಯಿಲೆಗೆ ವೈದ್ಯ ಚಿಕಿತ್ಸೆ ನೀಡಿದರೆ
ಆಂತರಿಕ ಖಾಯಿಲೆಗೆ, ಪರಮಾತ್ಮ ಭವರೋಗ ವೈದ್ಯ.
’ಅದಕ್ಕೇ, ಎಲ್ಲಾ ಚಿಕಿತ್ಸೆಯೂ ಆದಮೇಲೆ, ’ಐ.ಸಿ,ಯು, ಗೆ ಸೇರಿಸುತ್ತಾರೆ. ಅಲ್ಲಿ ’ರೋಗಿ-ಪರಮಾತ್ಮ’
ಮಾತ್ರ.ಐ,ಸೀ,ಯು, ಎಂದರೆ, ಭಗವಂತ ರೋಗಿಗೆ, ’ನಾನು ನಿನ್ನನ್ನು ನೋಡಿಕ್ಕೊಳ್ಳುತ್ತೇನೆ’ ಎನ್ನುತ್ತಾನೆ.
ಉದಾಹರಣೆ;ಟೀವಿ ಸಂದರ್ಶನದಲ್ಲಿ,’ಅಮೇರಿಕದ ಅಧ್ಯಕ್ಷರು ಯಾರೆಂದರೆ, ತಕ್ಷಣ
ಉತ್ತರ ದೊರೆಯುತ್ತದೆ. ’ರಾಮನ ತಮ್ಮ ಯಾರು ಯೆಂದರೆ, ಫೋನೋ ಫ಼ೆಂಡ್, ಲೈಫ಼್-ಲೈನ್ ಬೇಕು.
ಜ್ಞಾನಯೋಗದ ತಿರುಳು;’ಎಲ್ಲೆಲ್ಲೂ ದೇವರೇ.ಎಲ್ಲರಲ್ಲಿಯೂ ದೇವರೇ, ಎಲ್ಲವೂ ದೇವರೇ’
ಕರ್ಮ ಯೋಗ;’ಯಾವ ಕಾರ್ಯ ಮಾಡಿದರೂ, ’ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಎಂದು ಪ್ರಾರಂ-
ಭಿಸಿ, ಶ್ರೀ ಕೃಷ್ಣಾರ್ಪಣಮಸ್ತು’ ಎಂದು, ಮುಗಿಸಬೇಕು.ಭಕ್ತಿಯೋಗ;’ಪ್ರೀತಿಯಿಂದ,ಶ್ರದ್ಧೆಯಿಂದ,ಮಾಡಿದರೆ, ಕಾರ್ಯದಲ್ಲಿ ಗೆಲುವು ನಿಶ್ಚಿತ.
ದಾನವ;’ದಾರಿ ತಪ್ಪಿದವರು ನರಳುವರು. ವಧಿಸಲ್ಪಡುವರು.
ಮಾನವರು;ಮಾತು-ನರಳಾಟ.ಅವುಗಳ ನಿರ್ಮೂಲನದಿಂದ ಉದ್ಧಾರ ಸಾಧ್ಯ.
ದೇವ;ದೇವಾದಿದೇವರಿಂದ ವಂದಿಸಲ್ಪಡುವವನು’
’ಈ ಪುಸ್ತಕದ ಮುಖ್ಯ ಉದ್ದೇಶ, ನಾವು ಚಿಕ್ಕ ವಯಸ್ಸಿನಲ್ಲಿ ಭೇಟಿ ನೀಡಿ, ಆನಂದಿಸಿದ,
ಶ್ರೀ ರಂಗನಾಥಸ್ವಾಮಿ, ಶ್ರೀ ಗಂಗಾಧರಸ್ವಾಮಿ, ಮಾತೆ, ನಿಮಿಷಾಂಬಾ,ನೆಲಸಿದ ಶ್ರೀ
ಕ್ಷೇತ್ರದಲ್ಲಿ, ನಮ್ಮ ಇರುವಿಕೆ, ಸಿಹಿ ದಿನಗಾಳಾಗಿಸಿದ, ನಮ್ಮ ಅತ್ತೆ, ಭಾವ, ಅವರಿಗೆ
ಕೃತಜ್ಞತೆಯ ದ್ಯೋತಕ. ಅವರ,’ ಅಧ್ಯಾತ್ಮ ಅಧ್ವರ್ಯು’, ಕುಮಾರನಿಗೆ, ೬೦ ವರ್ಷ ತುಂಬಿದ
ಸವಿನೆನಪಿಗಾಗಿ, ಇತ್ತ ಕಾಣಿಕೆ. ಮಾನವನ ಕಲ್ಯಾಣಕ್ಕೆ ಮೇಲ್ಮೈಯಾಗಲೆಂದು, ಮಾಡಿರುವ
ಪ್ರಯತ್ನ. ಇದು ಸಫಲವಾದರೆ, ಲೇಖಕನ ಪ್ರಯತ್ನ ಯಶಸ್ವಿ.ಮುಂದಿನ ಜನಾಂಗಕ್ಕೆ,
ಪೀಳಿಗೆಗೆ ಒಬ್ಬ ಹಿತಚಿಂತಕನ ಬಳುವಳಿ.
==========================









Saturday, September 17, 2016

THAYIYA MADILU

 ತಾಯಿಯ ಮಡಿಲಲ್ಲಿ
==================
ಶ್ರೀ ಕುಕ್ಕೇ ಸುಬ್ರಮಣ್ಯಸ್ವಾಮಿಯವರ ಅನುಗ್ರಹದಿಂದಲೂ
ಶ್ರೀ ಆವನಿಮಹಾ ಸ್ವಾಮಿಗಳ ಆಶೀರ್ವಾದದಿಂದಲೂ
ಶ್ರೀ ಷಣ್ಮುಖಪ್ರಿಯಾ ಅವರಿಂದ
==============================
ನನ್ನ ನಲ್ಮೆಯ ನಲ್ಲೆ ನಮಗಾಗಿ ನಿರಂತರ
ನಿಸ್ಪ್ರೂಹತೆಯಿಂದ ಶ್ರಮಿಸುತ್ತಿರಲು ಅವರ
ಎಪ್ಪತ್ತನೆಯ ಹರೆಯದ ಸವಿನೆನಪಿಗಾಗಿ ನಲ್ಲ
ನೀಡುವ ನವಕುಸುಮ
============================================
ಅಡಕ
=======
.ಜಗತ್ತಿನ ಸೃಷ್ಟಿ, ಸ್ಥಿತಿ,ಲಯ ಕಾರಣ-ಪಾರ್ವತಿ ಪರಮೇಶ್ವರರು.
.ತ್ರಿಮೂರ್ತಿಗಳು-ಅವರೆಲ್ಲರ ಮೂಲಶಕ್ತಿ-ಜಗನ್ಮಾತೆ.
.ನವರಾತ್ರಿಯಲ್ಲಿ ತ್ರಿಶಕ್ತಿಗಳು.
.ಮಹಾಕಾಳಿ.
.ಮಧುರೆ ಮೀನಕ್ಷಿ.
.ಕಂಚಿ ಕಾಮಾಕ್ಷಿ
.ಕಾಶಿ ವಿಶಾಲಾಕ್ಷಿ.
.ದಾಕ್ಷಾಯಣಿ.
.ಗಿರಿಜಾಕಲ್ಯಾಣ.
.ಕನ್ಯಾ ಕುಮಾರಿ
.ಮೈಸೂರು ಚಾಮುಂಡೇಶ್ವರಿ.
.ವೈಷ್ಣೋದೇವಿ.
.ತಲಕಾಡು ಶ್ರೀ ವೈದ್ಯೇಶ್ವರ-ಮನೋನ್ಮನಿ
೧೦.ಶ್ರೀ ಶೈಲ ಮಲ್ಲಿಕಾರ್ಜುನ-ಭ್ರಮರಾಂಬ.
೧೧.ನಂಜನಗೂಡು ಶ್ರೀಕಂಠೇಶ್ವರ=ಗಿರಿಜಾಂಬಾ
೧೨.ಅರುಣಾಚಲೇಶ್ವರ.ಅಪಿತಕುಚಾಂಬಾ
೧೩.ಶ್ರೀ ಕಾಳಹಸ್ತೇಶ್ವರ.-ಉಮಾದೇವಿ
೧೪.ಶ್ರೀ ಕರುಮಾರಿಯಮ್ಮನ್.
೧೫.ಮಾಂಗಾಡು ಕಾಮಾಕ್ಷಿ.
೧೬.ತಿರುಕ್ಕಡೈಯೂರ್ ಅಭಿರಾಮಿ.
.ಮಹಾಲಕ್ಷ್ಮಿ.
===============
೧೭.ಕೊಲ್ಲೂರು ಮೂಕಾಂಬಿಕ.
೧೮.ಕೊಲ್ಲಾಪುರ ಮಹಾಲಕ್ಷ್ಮಿ.
೧೯.ಅಯೋಧ್ಯಾಪತಿ.ಸೀತಾಪತಿ-ಜಾನಕಿ.
೨೦.ತಿರುಪತಿ ಶ್ರೀ ವೆಂಕಟೇಶ್ವರ-ಪದ್ಮಾವತಿ.
೨೧.ಶ್ರೀ ಕ್ರಿಷ್ಣಾ-ರುಕ್ಮಿಣಿ-ಸತ್ಯಭಾಮ.ಆಂಡಾಳ್.

.ಮಹಾಸರಸ್ವತಿ.
==================
.ಶೃಂಗೇರಿ ಶರದಾಂಬ.
.ಶಿವಗಂಗೆ ಶಾರದಾಂಬ.
ಬೆಂಗಳುರು ಶಾರದಾಂಬ.
.ಕಾಶ್ಮೀರಪುರವಾಸಿನಿ
.ವೈಷ್ಣೋದೇವಿ.
.ಚೋಟಾನಿಕ್ಕರ ಭಗವತಿ.
.ವಿಜಯವಾಡ ದುರ್ಗಾಪರಮೇಶ್ವರಿ.
.ಕಾಳಿದಾಸನಿಗೆ ಒಲಿದ ಮಹಾಕಾಳಿ.
.ಭೂದೇವಿ.ಸಹನೆಯ ಪ್ರತಿರೂಪ
೧೦.ಮುಕ್ತಾಯ.
================

ಅಧ್ಯಾಯ-.
=============
ಸ್ಥಿತಿ, ಲಯ
ಜಗತ್ತಿನ ಸೃಷ್ಟಿ, ಸ್ಥಿತಿ,
 ಲಯಗಳ ಕಾರಣ. ಪಾರ್ವತಿ, ಪರಮೇಶ್ವರರು.
===================================================

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಹ ಪಿತರೌ ವಂದೇ ಪರ್ವತಿ ಪರಮೇಶ್ವರೌ
================================================
ಇದು ಕವಿರತ್ನ ಕಾಳಿದಾಸನ ಒಂದು ಶ್ಲೋಕ
ಜಗತ್ತು ಎಂಬುದು ತಾನಾಗಿಯೇ ಸೃಷ್ಟಿಯಾಗಿದ್ದಲ್ಲ. ಇದರ ರಹಸ್ಯವನ್ನು ಅರಿಯಲು ಮುನಿಪುಂಗವರು
ಸಹಸ್ರಾರು ವರ್ಷಗಳು ತಪಗೈದು ನಂತರ ಅದರ ಅರಿವನ್ನು ಪಡೆದರು.
ಪ್ರಳಯಕಾಲದಲ್ಲಿ ಪ್ರಪಂಚವೆಲ್ಲವೂ ಲಯವಾಗಿ ಶ್ರಿಹರಿಯ ಗರ್ಭದಲ್ಲಡಗಿರುತ್ತದೆ. ನಂತರ
ಅಲದೆಲೆಯಮೇಲೆ ಮಲಗಿದ್ದ ಪರಮಾತ್ಮ ಸೃಷ್ಟಿ ಮಾಡಲು ಸಂಕಲ್ಪಿಸಿದಾಗ ಕಾರ್ಯವನ್ನು ಬ್ರಹ್ಮನಿಗೆ
ಒಪ್ಪಿಸಿದ. ಆದರೆ ಬ್ರಹ್ಮನು ಅದರ ಬಗ್ಗೆ ಏನನ್ನೂ ತಿಳಿಯದಿದ್ದಾಗ, ತನ್ನ ತಂದೆ ಶ್ರೀಹರಿಯನ್ನು ಪ್ರಾರ್ಥಿಸಲು
 ಶ್ರೀಹರಿಯು ಬ್ರಹ್ಮನಿಗೆ ಸಹಸ್ರವರ್ಷಗಳು ತಪಸ್ಸನ್ನಾಚರಿಸಲು ಆಜ್ಞೆಯಿತ್ತ. ತಪಸ-
ನ್ನಾಚರಿಸಿದ ಬ್ರಹ್ಮನಿಗೆ ವೇದದಲ್ಲಿ ಉಕ್ತವಾಗಿರುವ ನಿಯಮದಂತೆ ಸೃಷ್ಟಿಕಾರ್ಯ ನಡೆಸಲು ಆಜ್ಞಾಪಿಸಿದ.
ಮೊದಲು ಬ್ರಹ್ಮ ಮಾನಸ ಪುತ್ರರು, ನಂತರ, ಮಾನವರು, ಪಶು ಪಕ್ಷಿಗಳು, ವೃಕ್ಷಗಳ ಸೃಷ್ಟಿಯಾಯಿತು.
ಮಾನವನ ಸೃಷ್ಟಿಗೆ ಮಾರ್ಗವೇನು.
ಪುರುಷರ ಜೊತೆಯಲ್ಲಿ ಸ್ತ್ರೀಯರನ್ನೂ ಸೃಷ್ಟಿಸಿ ಧರ್ಮಮಾರ್ಗದ ಹಾದಿಯಿಂದ ವಿವಾಹ ಮಾರ್ಗವನ್ನು ತೋರಿ 
ಅವರ ಸಮ್ಮಿಲನದಿಂದ ಸೃಷ್ಟಿಕಾರ್ಯ ಆರಂಭವಾಯಿತು. ಅಂಡದಲ್ಲಿ ತೋರಿದ ಜೀವಾಣುವು ಮಾಸಗಳು ಕಳೆದಂತೆ
ಅಂಗಗಳು, ಅವಯವಗಳು ವೃದ್ಧಿಯಾಗಿ, ತಾಯಿಯ ಮೂಲಕ ಅನ್ನಾಹರವನ್ನು ಸ್ವೀಕರಿಸಿ, ನವಮಾಸದನಂತರ
ಹೊರಬಂದಿತು. ತನ್ನರಿವೇ ಇಲ್ಲದೆ, ಮೊದಲು ತಾಯಿಯನ್ನು ಗುರುತಿಸಿ, ಆಕೆಯ ಮೂಲಕ ತಂದೆ ಮತ್ತು ಇತರರನ್ನು
ಗುರುತಿಸಿ, ತನ್ನ ಹಸಿವನ್ನು ಶಬ್ದದ ಮೂಲಕ ಪ್ರಕಟಿಸಿ, ಆರು  ತೀಂಗಳ ನಂತರ ಮೆಲ್ಲ ಮೆಲ್ಲ ತೆವಳಿ
ಒಂಬತ್ತು ತಿಂಗಳ ನಂತರ ಎದ್ದು ಬಿದ್ದು ನಡೆಯಲು ಪ್ರಾರಂಭಿಸಿ, ತೊದಲು ನುಡಿಗಳನ್ನಾಡುತ್ತಾ, ಆಹಾರಸೇವನೆಯಲ್ಲಿ
ದ್ರವದೀಂದ ಘನಕ್ಕೆ ತಿರುಗಿ, ಅನ್ನ, ಆಹಾರ ಸೇವಿಸಿ, ಕರೆಯಲು ಒಂದು ಹೆಸರು ಗಳಿಸಿ, ನಂತರ ನೋಟದಿಂದ,
ಕೇಳಿ, ಚಿಕ್ಕ-ಪುಟ್ಟ ಜ್ಞಾನ ಪಡೆದು, ಐದು ವರುಷದಲ್ಲಿ ಗುರುವಿನಿಂದ
ಜ್ಞಾನ ಪಡೆಯಲು ಪ್ರಾರಂಭಿಸಿ, ಒಂದುವರೆ ದಶಕದನಂತರ ಪದವಿ ಗಳಿಸಿ,, ಉದ್ಯೋಗ ಗಳಿಸಿ, ಹೆಂಡತಿಯೆಂಬ
ಸಹಚರಿಣಿಯನ್ನು ಪಡೆದು, ಕುಟುಂಬ ನಿರ್ವಹಣೆ, ಸಮಾಜಕ್ಕೆ ತನ್ನ ಕರ್ತವ್ಯವನ್ನು ಪೂರೈಸುತ್ತ, ಮೂರು ದಶಕ-
ಗಳನಂತರ, ಪರಮ ಪದವಿಯತ್ತ ಅಧ್ಯಾತ್ಮ ಜ್ಞಾನ ಪಡೆಯಲು ಹಂಬಲಿಸಿ, ಬಂಧನದ ಹಂದರದಿಂದ ಹೊರಬಂದು
ಸೃಷ್ಟಿಕರ್ತನ ಸವಿನೆನಪಿನೊಂದಿಗೆ ಸಮೀಪಿಸುತ್ತಾ ನಲಿದು ಅಂತಿಮದಲ್ಲಿ ಅವನೊಡನೆ ಐಕ್ಯವಾಗುವುದೇಜೀವನ ಚೈತ್ರ.’
ಇದು ಸಾಮಾನ್ಯ ಜೀವನದ ನಡಿಗೆಯಾದರೆ, ಪ್ರತಿಯೊಬ್ಬ ವ್ಯಕ್ತಿಯ ಹಿಂದೆ, ಮಾಡಿದ ಕರ್ಮಾನುಸಾರ[ಪ್ರಾರಬ್ಧ], ಇಂದಿನ
ಬಾಳನ್ನು ನಡೆಸಿ[ಸಂಚಿತ], ಈಗ ಸತ್ಕರ್ಮಗಳನ್ನು ಆಚರಿಸಲು, ಭವಿಷ್ಯದ ಜೀವನವು ಸುಖಪ್ರದವಾಗಿರುತ್ತದೆ.
[ಆಗಮ].
ಭಗವಂತ ನಿರ್ಣಯಿಸುವ ಬಾಳಿನಲ್ಲಿ, ಜನ್ಮಸಮಯದಲ್ಲಿ ನವಗ್ರಹಗಳ ಸಂಚಾರ ಅತಿ ಮುಖ್ಯ. ಇದೇಗ್ರಹಚಾರ.’
ಅದೇ ರೀತಿ ;ಕಾಣದ ಕೈಯ್ಯ ಕೈವಾಡವದವೂಇರುವುದು.[ಅದೃಷ್ಟ].ಶರೀರದ ಜೊತೆಗೆ, ಐದು ಜ್ಞಾನೇಂದ್ರಿಯಗಳು, ಐದು
ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಅಂತಃಕರಣ, ಚಿತ್ತ, ಅಹಂಕಾರ, ಮತ್ತು ಆತ್ಮಗಳ ಸಂಯೋಜನೆಯೂ ಉಂಟು.
ದೇಹೋ ದೇವಲಯ ಪ್ರೋಕ್ತೋ ದೇಹೋ ದೇವ ಸದಾಶಿವಃಎಂದರೆ, ದೇಹೋ- ದೇಹವೇ ದೇವಾಲಯವು.ದೇವನು ದೇವಾಲಯದ ವಾಸಿ.ನಮಗೆ ಮಾತಾಡಲು ಬಾಯಿ, ಅದಕ್ಕೆ ಪ್ರೇರಣೆಬುದ್ಧಿ.’.ರುಜು ಮಾರ್ಗದಲ್ಲಿ ನಡೆದರಿ ಉತ್ತಮ ಮಾತುಗಳ ಆವಿರ್ಭಾವ.
ದುರ್ಮಾರ್ಗಿಗಳಿಗೆ ಮಾತು ಹಾನಿಕರ.

ಮಾತು ಮತ್ತು ಅರ್ತಗಳ ಸಮ್ಮೇಳನವೇಪಾರ್ವತಿ-ಪರಮೇಶ್ವರರು. ಅವರೇ ಜಗತ್ತಿಗೆ ಒಡೆಯರು.ಸದಾ ಕಾಲವೂ ತನ್ನ
ಮಕ್ಕಳ ಹಿತವನ್ನೇ ಚಿಂತಿಸುತ್ತಾ, ಸನ್ಮಾರ್ಗದಲ್ಲಿ ನಡೆಸುತ್ತಾ, ಸನ್ಮಂಗಳವನ್ನು ಕೋರುತ್ತಾ, ಸದಾ ನಮ್ಮೊಡನಿರುವ,
ಸದಾಶಿವ-ಜಗನ್ಮಾತೆಯರಿಗೆ ನಮ್ಮ ಪ್ರಥಮ ನಮನ. ಸೃಷ್ಟಿಗೆ ನಮ್ಮ ತಾಯಿತಂದೆಯರು ಕಾರಣರಾದರೂ, ನಮ್ಮ ಜೀವನಕ್ಕೆ
ಬುನಾದಿ ಹಾಕಿ ನಡೆಸುವವರು ಶಿವ-ಪಾರ್ವತಿಯರು. ಇದೇ ಕಾಳಿದಾಸನ ಶ್ಲೋಕದ ಅರ್ತ.

ಅಧ್ಯಾಯ-.
==========
ತ್ರಿಮೂರ್ತಿಗಳು.
================
ಅವರೆಲ್ಲರ ಶಕ್ತಿ-ಜಗನ್ಮಾತೆ
============================

ಒಂದು ಸಂಸ್ತೆಯಲ್ಲು ಉತ್ಪಾದನೆಗೆ ಒಬ್ಬ ವ್ಯವಸ್ತಾಪಕ, ರಕ್ಷಣೆಗೆ ಒಬ್ಬ, ವಿಲೇವಾರಿಗೆ ಒಬ್ಬ, ಎಂದು ಇರುತ್ತಾರೆ.
ಇವರೆಲ್ಲರಿಗೂ ಮೇಲ್ಪಟ್ಟು ಒಬ್ಬ ನಿರ್ವಹಣಾಧಿಕಾರಿ 
. ಆದರೆ ಇವರೆಲ್ಲರ ಉದ್ದೆಶ ಒಂದೇ. ನಡೆಯುವ ಸಂಸ್ತೆಯ
ಅಭಿವೃದ್ಧಿ. ಜಗತ್ತಿನ ಮಹಾ ಸಂಸ್ತೆಯನ್ನು ನಿರ್ವಹಿಸಲು ಮೂವರು ವ್ಯವಸ್ತಾಪಕರು ಇರುತ್ತಾರೆ.

ಸೃಷ್ಟಿಕರ್ತ;-ಅವನಿಗೆ ಚತುರ್ಮುಖ ಬ್ರಹ್ಮ ಎಂದು ಹೆಸರು. ಶ್ರೀ ವಿಷ್ಣುವಿನ ಪುತ್ರ. ನಾಲ್ಕು ಕಡೆಯೂ
ನಡೆಯುವ ವ್ಯವಹಾರಗಳನ್ನು ಕಂಡು ಅದರಂತೆ ನಡೆಯುವ ವ್ಯಕ್ತಿ.ಅವನ ಕರ್ತವ್ಯವು ಶ್ರೀ ವಿಷ್ಣುವಿನ
ಆಣತಿಯಂತೆ ನಡೆಯುತ್ತದೆ.

ಶ್ರೀ ವಿಷ್ಣು;- ರಕ್ಷಣೆಯ ವಿಭಾಗದ ನಿರ್ವಾಹಕ. ಎಲ್ಲಾ ದೇವರುಗಳಲ್ಲಿಯೂ ಸರ್ವ ಶ್ರೇಷ್ಟನೆಂಬ ಹೆಗ್ಗಳಿಕೆ.
ಜಾಣ್ಮೆ, ಸಹನೆ, ಮನೋ-ನಿಗ್ರಹ, ಮನೋ ಸ್ಥೈರ್ಯ, ಹುಸಿನಗೆ, ಅತಿ ಸೂಕ್ಷ್ಮ ವಿವೇಕ, ಸಮಸ್ಯೆಗಳ ಪರಿಹಾರಕ್ಕೆ
ಸೂಕ್ತ ಮಾರ್ಗ, ಆಳವಾದ ಚಿಂತನೆ, ಭಕ್ತನನ್ನು ರಕ್ಷಿಸಲು ಯಾವ ಕಾಲಕ್ಕೂ ಯಾವ ಮಾರ್ಗಕ್ಕೂ ಸಿದ್ಧ.

ಹತ್ತು ಅವತಾರವೆತ್ತಿದರೂ ಒಂದೊಂದು ಉದ್ದೆಶದಿಂದ ಕಾಣಿಸಿಕೊಂಡು ಮತ್ಸ್ಯಾವತಾರದಿಂದ ವೇದ ರಕ್ಷಣೆ, ಕೂರ್ಮಾವತಾರಿ-
ಯಾಗಿ ಅಮೃತ ಮಥನಕ್ಕೆ ಸಹಾಯ, ವರಾಹನಾಗಿ ಭೂದೇವಿಯ ರಕ್ಷಣೆ,ನರಸಿಂಹನಾಗಿ ಭಕ್ತನ ರಕ್ಷಣೆ, ವಾಮನ-
ನಾಗಿ ಬಲಿ ಗರ್ವಭಂಗ, ತ್ರಿವಿಕ್ರಮನಾಗಿ ಮೂರ್ಲೋಕಗಳ ಅಳೆಯುವಿಕೆ, ಪರಶುರಾಮನಾಗಿ ಕ್ಷತ್ರಿಯರ ದಮನ,ಶ್ರೀ
ರಾಮನಾಗಿ ಧರ್ಮ ರಕ್ಷಣೆ, ಶ್ರೀ ಕ್ರಿಷ್ಣನಾಗಿ ಸಾಧು ರಕ್ಷಣೆ, ದುರ್ಜನರ ನಿಗ್ರಹ. ಬುದ್ಧನಾಗಿ ಶಾಂತಿ ಪ್ರಸಾರ,
ಕಲ್ಕಿಯಾಗಿ ಉದ್ದೇಶ ಪೂರ್ತಿಯನಂತರ, ಸ್ವಕ್ಷೇತ್ರ ಪಯಾಣ.

ಪರಮೇಶ್ವರ;ಹಿಮಗಿರಿಯಲ್ಲಿದ್ದು, ಹಿಮವಂತನ ಮಗಳನ್ನು ವರಿಸಿ, ಗಣಪ, ಸ್ಕಂದರಿಗೆ ಜನ್ಮವಿತ್ತು, ಶಿರದಲ್ಲಿ
ಗಂಗೆಯನ್ನು ಧರಿಸಿ, ಗಂಗಾಧರನಾಗಿ ಶಶಿಯನ್ನು ಧರಿಸಿ, ಚಂದ್ರಮೌಳಿಯಾಗಿ,
ತ್ರಿಶೂಲದಾರಿಯಾಗಿ, ಹಣೆಗಣ್ಣಿನೊಡನೆ ಮುಕ್ಕಣ್ಣನಾಗಿ, ನಂದಿವಾಹನಾಗಿ, ನಾಗಭೂಷಣನಾಗಿ, ವೃಷಭವಾಹನನಾಗಿ,
ಜಗದ ನಲ್ಮೆಗಾಗಿ ಕಾಲಕೂಟವನ್ನು ಕುಡಿದು, ಗಂಗೆಯನು ಧರೆಗೆ ಇತ್ತು, ದೂರ್ವಾಸರ ಶಾಪದಂತೆ ಲಿಂಗರೂಪಿಯಾಗಿ,
ಮಾರ್ಕಂಡೇಯನನ್ನು ರಕ್ಷಿಸಲು ಯಮನನ್ನೇ ದಂಡಿಸಿ, ತ್ರಿಪುರಾಂತಕನಾಗಿ, ಯೋಗೀಶ್ವರನಾಗಿ, ಸಿಡಿದೆದ್ದಾಗ ರುದ್ರತಾಂಡವ
ಮೂರ್ತಿಯಾಗಿ, ಪಾರ್ಥನಿಗೆ ಪಾಶುಪತಸ್ತ್ರವನ್ನಿತ್ತು, ಮಾವಿನ ಹಣ್ಣಿನ ಘಟನೆಯ ಮೂಲಕ ಮಾತಾಪಿತರ ಹಿರಿಮೆಯನ್ನು ಸಾರಿ
ಮಗನಿಂದ ಪ್ರಣವಾರ್ಥವನ್ನು ಪಡೆದು, ಗಿರಿಜೆಯ ಶರೀರದೊಂದಿಗೆ ಅರ್ಧನಾರೀಶ್ವರನಾಗಿ, ಜಗತ್ತಿನಲ್ಲಿ ಯಾರು ಹಿರಿಯ-
ರೆಂದು ಬ್ರಹ್ಮ, ವಿಷ್ಣು ದ್ವಯರು ಪ್ರಯತ್ನಿಸಲು, ವರಾಹರೂಪದಲ್ಲಿ ಶ್ರೀ ವಿಷ್ಣುವು ಭೂಮಿಯ ತಳವನ್ನು ಸೇರಿ ನಿರಾಶ-
ನಾಗಿ ಹಿಂದಿರುಗಲು, ಬ್ರಹ್ಮನು ಹಂಸರೂಪದಲ್ಲಿ ಗಗನವನ್ನರಸಿ ತೆರಳಿ, ನಿರಾಶನಾಗಿ ಹಿಂದಿರುಗಲು, ಕೇದಿಗೆಯನ್ನು
ಕೇಳಿ ಸುಳ್ಳಾಡಿ, ಮೂರ್ತಿಪೂಜೆಯಿಂದ ವಂಚಿಸಲ್ಪಟ್ಟದ್ದು ಸರ್ವ ವಿದಿತ.

ಜಗತ್ತಿನಲ್ಲಿ ಯಾರು ಹುಟ್ಟಿದರೂ, ’ಯಾತಕ್ಕೆ ಹುಟ್ಟಿದೆಎಂದು ಕೇಳುವುದಿಲ್ಲ’.’ಎಂದು ಸಾಯುವೆಎಂದು ಕೇಳುವುದಿಲ್ಲ.ಆದರೆ,
ಹೇಗಿರುವಿರಿಎಂದು ಕೇಳುತ್ತಾರೆ. ಇದರಿಂದ ಶ್ರೀ ವಿಷ್ಣುವಿನ ಮಹಿಮೆಯನ್ನು ಅರಿಯಬಹುದು.
ಉಪನಿಷತ್ತಿನಲ್ಲಿ ಒಂದು ಸ್ವಾರಸ್ಯವಾದ ಕಥೆಯಿದೆ. ’ದೇವತೆಗಳು ತಾವೇ ಬಲಶಾಲಿಗಲೆಂದು ಭಾವಿಸಿದ್ದರು. ಆಗ ಜಗನ್ಮಾತೆ
ಅಶರೀರವಾಣಿಯಿಂದ, ಅವರನ್ನು ಕರೆದು ಬಲಪರೀಕ್ಷೆಯನ್ನು ಮಾಡಲು, ಒಂದು ಹುಲ್ಲುಕಡ್ಡಿಯನ್ನು ಕದಲಿಸಲು ಆಘಾಪಿಸಿದಳು.
ದೇವೇಂದ್ರ, ಅಗ್ನಿ, ವಾಯು, ಯಾರು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.ಅರಿವು ಪಡೆದ ದೇವತೆಗಳು ದೇವಿಗೆ ಶರಣಾಗಲು,
ತಾಯಿಯ ಹಿರಿಮೆಯನ್ನರಿತರು.

ತ್ರಿಮೂರ್ತಿಗಳ ಪತ್ನಿಯರು ಮೇಲ್ನೋಟಕ್ಕೆ, ಅವರ ಅರ್ಧಾಂಗಿಯಾದರೂ, ಶಕ್ತಿಯ ಪ್ರತಿರೂಪ. ’ಪುರುಶನು ಪರಮಾತ್ಮನಾದರೆ
ಪ್ರಕ್ರುತಿಯು ಶಕ್ತಿ ಸ್ವರೂಪಿಣಿ.ಸ್ವಾಮಿಯಸಂಕಲ್ಪಕ್ಕೆ ರೂಪು ನೀಡಲು ಪ್ರಕೃತಿ ನೆರವು ನೀಡುತ್ತಾಳೆ. ಎಂತಲೇ, ನವರಾತ್ರಿಯಲ್ಲಿ
ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಎಂದು ಅರಾಧಿಸುತ್ತಾರೆ. ಜಗನ್ಮಾತೆಯ ಪರೀಕ್ಷೆಯಿಂದ ಪರಿವರ್ತನಾದ ದೇವೇಂದ್ರನಿಗೆ
ಶ್ರೀ ಮಹಾಲಕ್ಷ್ಮಿ ಸ್ತೊತ್ರದ ಉಪದೇಶವಾಯಿತು.

ಪ್ರತಿ ವ್ಯಕ್ತಿಗೂ ಸಂಪತ್ತು ಅವಶ್ಯ. ಅದು ದ್ರವ್ಯ, ಜ್ಞಾನ, ಪಶು, ಗೃಹ, ಎನಾದರೂ ಅಗಬಹುದು. ಅದರಂತೆ ಜ್ಞಾನವು ಒಂದು ಆಸ್ತಿ.
ವಿದ್ಯಾ ವಿಹೀನ ಪಶುಃ  ಎಂಬುದು ನಾಣ್ಣುಡಿ. ಕಲ್ಲಾದರೂ ಶಿಲ್ಪಿಯ ಉಳಿಯ ಹೊಡೆತದಿಂದ ಶಿಲೆಯಾಗುವಂತೆ, ಚಿನ್ನವು ಅಕ್ಕಸಾಲಿಯಿಂದ ಬೆಂಕಿಯಲ್ಲಿ ಪಕ್ವಗೊಂಡು ಹೊಳೆಯುವಂತೆ, ಆಭರಣವಾಗುವಂತೆ, ಮಾನವ ದೇವಿಯ ಅನುಗ್ರಹದಿಂದ ದೇವನಾಗುವಂತೆ, ಸಮಸ್ತ ಕಾರ್ಯಗಳ ಅನುಷ್ಟಾನಕ್ಕೆ
ಸಾಮರ್ಥ್ಯ ನೀಡುವುದು ಜಗದಂಬೆಯೇ.

ಎಂತಲೇ ಮನುಷ್ಯನಿಗೆ ಪ್ರಾಣವಿದ್ದಂತೆ,’ ತ್ರಿಮೂರ್ತಿಗಳ ಕಾರ್ಯಕ್ಕೆ ಪ್ರೇರಣೆಯಾಗಿ, ಮಾರ್ಗದರ್ಶಿಯಾಗಿ, ದಾರಿ ದೀವಿಗೆಯಾಗಿ, ಉತ್ತೇಜಿಸುವ
ಸ್ಪೂರ್ತಿಯಾಗಿ, ನಡೆಸುವ ಶಕ್ತಿಯೇ ಜಗನ್ಮಾತೆ. ನವರಾತ್ರಿಯಲ್ಲಿ ನವವಿಧಾನಗಳಿಂದ ವಿಜ್ರಂಭಿಸುವ ನವಶಕ್ತಿಗೆ ನಮ್ರತೆಯಿಂದ
ನಮಿಸೋಣ.

ಅಧ್ಯಾಯ-.
============



ಶಕ್ತಿಗಳಲ್ಲಿ ಮೂರು ವಿಧ. ಅವುಇಚ್ಚಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ.ನಾವು ಮನಸಿನಲ್ಲಿ ಬೆಳೆಸಿಕೊಂಡ ಶಕ್ತಿಗಳೇ ಇಚ್ಚಾ ಶಕ್ತಿ.
ಅದನ್ನು ಹೇಗೆ ನಡೆಸಬೇಕೆಂಬುದೇ ಜ್ಞಾನ ಶಕ್ತಿ. ಅದರ ಅನುಷ್ಟಾನವೇ ಕ್ರಿಯಾ ಶಕ್ತಿ. ಭರುವ ಅಡೆತಡೆಗಳಣ್ಣು ನೀಗಿಸಿ, ಕಾರ್ಯವನ್ನು
ಯಶಸ್ವಿಯಾಗಲು ನೆರವು ನೀಡುವವಳೇ ಮಹಾಕಾಳಿ.ದುಷ್ಟರಿಗೆ ಆಕೆ ರುದ್ರಸ್ವರೂಪಿಣಿ. ಭಕ್ತರಿಗೆ ಮಾತೃ ಸ್ವರೂಪಿಣಿ.

ಒಳ್ಳೆಯದು- ಕೆಟ್ಟದ್ದು ಎಂಬ ದ್ವಂದ್ವ ಮೊದಲಿಲಿಂದಲೂ ಪ್ರಪಂಚದಲ್ಲಿ ಇದ್ದದ್ದೇ. ಆದರೆ, ಒಳಿತಿಗೆ ಗೆಲುವಾಗಲು ಕೆಡುಕಿಗೆ ಸೋಲಾಗಲೇಬೇಕು.
ಇದು ಮಹಾಕಾಳಿಯ ಕರ್ತವ್ಯ.

ನಮ್ಮ ಕಾರ್ಯಗಳಿಂದ ಆಗುವ ಪರಿಣಾಮದ ಚಿಂತೆ ಅಗತ್ಯ. ಅದರಿಂದ ಲೋಕೋಪಕಾರವಾಗುವುದೇ -ಲೋಕಕಂಟಕ ಆಗುವುದೇ ಎಂಬ ವಿಮರ್ಶೆ ಅಗತ್ಯ.

ಉದಾ; ಭಸ್ಮಾಸುರನು ಶಿವನಿಂದ ತಾನು ಯಾರ ಶಿರದ ಮೇಲೆ ಕೈ ಇಟ್ಟರೂ ಅವರು ಭಸ್ಮವಾಗಬೇಕೆಂದು ವರ ಪಡೆದ. ಶಿವನನ್ನೇ ಪರೀಕ್ಷಿಸಲು
 ಹೋದಾಗ ವಿಷ್ಣುವು ಉಪಾಯದಿಂದ ವರವನ್ನು ಊರ್ಜಿತಗೊಳಿಸಲು ತನ್ನ ತಲೆಯ ಮೇಲೆಯೇ ಕೈ ಇಟ್ಟುಕ್ಕೊಳ್ಳಲು ಹೇಳಿದ. ಇದರಿಂದ 
ಅಸುರನೇ ಅಸು ನೀಗಿದ.

ಅಂತೆಯೇ ಮಧು-ಕೈಟಭರು ಸಾವಿರ ವರ್ಷ ತಪಸ್ಸು ಮಾಡಿ ವಿಷ್ಣುವನ್ನೆ ವರ ಕೇಳೆಂದು ಹೇಳಿ ಅವರನ್ನು ತೊಡೆಯ ಮೇಲಿಟ್ಟುಕೊಂಡು ಸಮಸ್ಯೆ
ಪರಿಹರಿಸಿದ. ಇದು ಜ್ಞಾನಶಕ್ತಿಯ ಕೆಲಸ.

ನಾವು ಅಂದುಕ್ಕೊಂಡದ್ದೆಲ್ಲಾ ಆಗುವದಿಲ್ಲ. ದೇವರಿಗೆ ನಮಗೆ ಯಾವುದು ಸರಿಯೆಂದು ಕೊಡುವುದು ಗೊತ್ತು.

ಉದಾ;ಒಬ್ಬ ವ್ಯಕ್ತಿ ಚೆನ್ನೈಗೆ ರಾತ್ರಿ ರೈಲು ಸ್ಥಳ ಕಾದಿರುಸುತ್ತಾನೆ. ದಿನ ಅವನ ಮಗನ ಎಂಟ್ರೆನ್ಸೆ ಪರೀಕ್ಷೆಯಿರುವುದರಿಂದ ಅವನೂ
ಹೋಗಬೇಕಾಗಿದೆ. ಅಂದು ರೈಲು ಚಂಗಲ್ಪೆಟ್ ಬಳಿ ಹಳಿ ತಪ್ಪಿದ್ದರಿಂದ ಅಪಘಾತಕ್ಕೀಡಾಯಿತು. ಇದು ಅವನ ಅದೃಷ್ಟ. ’ಬೆಟ್ಟದ  ರೂಪದಲ್ಲಿ
ಬಂದ ಆಪತ್ತು ಹುಲ್ಲಿನ ರೂಪದಲ್ಲಿ ತಪ್ಪಿತು. ಇದು ದೈವಾನುಗ್ರಹವಲ್ಲವೇ.

ಪರಾಶಕ್ತಿಯಲ್ಲಿ ಭಕ್ತಿಯಿಟ್ಟು ಆರಾದಿಸಿದರೆ ಮೂರು ಶಕ್ತಿಗಳಿಂದ ಗೆಲುವು ಶತಸಿದ್ಧವಲ್ಲವೇ.

ನವರಾತ್ರಿ ಎಂದು ಕರೆದು ಹತ್ತು ದಿನ ಆಚರಿಸುತ್ತಾರಲ್ಲಾಎಂಬ ಸಂದೇಹ ಬರಬಹುದು. ಆದರೆ, ಒಂದು ಕಾರ್ಯ ಯಶಸ್ವಿಯಾದರೆ ಅದನ್ನು
ವಿಜಯೋತ್ಸವವಾಗಿ ಆಚರಿಸುವುದು ಕ್ರಮವಲ್ಲವೇ.

ರಾಮಾಯಣದಲ್ಲೂ ಸಹ ಸೀತಾದೇವಿಯನ್ನು ವಾನರರು ಕಂಡು ಬರುವಾಗ ಸುಗ್ರೀವನ ಮಧುವನದಲ್ಲಿ ಕುಣಿದು, ಕುಣಿದು, ಕುಪ್ಪಳಿಸಿ ವಿಜಯದ
ಸಂದೇಶವಿತ್ತ ಉಲ್ಲೇಖವಿದೆ. ಅದುದಸಕಂಠನ ಮೇಲೆ  ವಿಜಯದ ದಿನವೂ ಎನ್ನುತ್ತಾರೆ.

ಆದ್ದರಿಂದ ನವ ವಿಧ ಶಕ್ತಿಯ ಬಹುಮಾನವೂ ಮೋಕ್ಷವೇ. ಆಸೆ, ಅರಿವು, ಅನುಷ್ಟಾನ, ಇವುಗಳ ಸಮ್ಮಿಲನವೇ ವಿಜಯವಾದರೆ ಅದನ್ನು
ಸೇವಿಸಿ ವಿಜಯಲಕ್ಷ್ಮಿಯನ್ನು ಆದರಿಸುವದರಲ್ಲಿ ತಪ್ಪೇನಿದೆ.

ಅಧ್ಯಾಯ-.
-----------

ಮಹಾಕಾಳಿ
=========

ಸರ್ವ ಮಂಗಳ  ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇ ತ್ರಂಬಿಕೇ ದೇವಿ ನಾರಾಯಣಿ ನಮೋಸ್ತುತೇ

ಮಹಾಮಾತೆಯ ಮೊದಲ ಅವತಾರವೇ ಮಹಾಕಾಳಿ.ಅಂದ್ರೆ ಶಕ್ತಿಯ ಸ್ವರೂಪ. ನಮ್ಮಲ್ಲಿ ಶರೀರ ಇದೆ. ಅದಕ್ಕೆ ಶಕ್ತಿ ತುಂಬುವುದು ತಾಯಿ
.ಕಣ್ಣು ನೋಡುತ್ತದೆ. ಆದರೆ ನೋಟಕ್ಕೆ ಶಕ್ತಿ ಕೊಡುವುದು ತಾಯಿ. ಕಿವಿ ಕೇಳುತ್ತದೆ. ಕೇಳುವ ಶಕ್ತಿ ಕೊಡುವುದು ತಾಯಿ. ಬಾಯಿ  ಮಾತಾಡುವುದು.
ನಾಲಿಗೆ ರುಚಿ ನೋಡುವುದು. ಬುದ್ಧಿ ಯೋಚಿಸುವುದು. ನಾಸಿಕದ ಮೂಲಕ ಉಸಿರಾಟ, ಕೈಗಳ ಚಲನೆ, ಕಾಲ್ಗಳು ನಡೆಯುವುದು, ಜಠರದ
ಹಸಿವು, ಆಹಾರ ಸೇವನೆ, ಜೀರ್ಣ,  ನಂತರ ಹೊರತೆರುವುದು, ನಮ್ಮ ಶರೀರವನ್ನು, ಅವಯವಗಳನ್ನೂ ಇಟ್ಟು, ಯಂತ್ರ 
ನಿರ್ಮಿಸಿ ಅದರಲ್ಲಿ ಪ್ರಾಣವನ್ನಿಟ್ಟು, ಚಲನೆ ಮಾಡುವವನು ಪರಮಾತ್ಮ.

ಅಂತೆಯೇ ಪಂಚಭೂತಗಳ ನಿರ್ಮಾಣ, ವಾಯು, ಜಲ, ಅಗ್ನಿ, ಪ್ರುಥ್ವಿ, ಆಕಾಶ ಇವುಗಳನ್ನು ನಮಗಾಗಿ ನಿರ್ಮಿಸಿ,  ನಿಯಂತ್ರಿಸುವವನು ಪರಮಾತ್ಮ. ಐದು ಕಾರ್ಯಾಂಗಗಳ ನಿರ್ವಹಣೆಯೂ ಹೀಗೆಯೇ.
ಯೋಚನೇ ಹೇಗಾದರೂ ಇರಬಹುದು. ವಿವೇಚನೆ ಇದ್ದರೆ ಪರಿಣಾಮ ಒಳ್ಳೆಯದು. ದುಷ್ಪ್ರಯೋಗವಾದರೆ ಪರಿಣಾಮ
ಅಹಿತಕರ. ಅದನ್ನು ನಡೆಸುವವನು ಆತನೆ. ಜ್ಞಾನ ಸಂಪತ್ತು, ಶಕ್ತಿಗಳ ಸಮ್ಮಿಳನವೇ ಆದಿಶಕ್ತಿ.
ರುಜು ಮಾರ್ಗದಲ್ಲಿ ನಡೆದು ಭಕ್ತಿಯಿಂದ ಸಾಧನೆ ಮಾಡಿ, ಆಕೆಯನ್ನು ಆರಾಧಿಸುವವರಿಗೆ ಆಕೆಯ ಅನುಗ್ರಹ ಅವಿ-
ಸ್ಮರಣೀಯ. ಆದರೆ, ಲೋಕ ನಿಯಮಕ್ಕೆ ಎದುರಾಗಿ ನಡೆದರೆ ಹಿಂಸೆಯನ್ನೇ, ಮೂಲಧನವಾಗಿಸಿಕೊಂಡು, ಅಹಂಕಾರ-
ದಿಂದ ಮೆರೆದು, ಲೋಕನಿಯಮಕ್ಕೆ ಎದುರಾಗಿ ನಡೆದು, ನಿಯಮಗಳನ್ನು ಉಲ್ಲಂಘಿಸಿ, ಋಷಿ ಮುನಿಗಳ ಯಜ್ಞ
ಯಾಗಾದಿಗಳನ್ನು ಕೆಡಿಸಿ, ಅವರನ್ನು ಹಿಂಸಿಸುವವರ ಪಾಲಿಗೆ ಅವಳು ಕಾಳಿ ಯಾಗುತ್ತಾಳೆ.ಆದರೆ ಅಳಿಸುವುದಲ್ಲ
ಅವಳ ಉದ್ದೇಶ.
ಸಾಕಷ್ಟು ಅವಕಾಶ ನೀಡಿ ನಂತರ, ಕ್ರೌರ್ಯದಿಂದಲೂ, ರೌದ್ರದಿಂದಲೂ, ಮೈದೋರಿ, ಅವರೊಡನೆ ಯುದ್ಧ ಗೈದು,
ಕೊಂದು, ಅವರನ್ನು ತನ್ನ ಬಳಿ ಸೆಳೆದು ಮುಕ್ತಿಯನ್ನು ಕೊಡುತ್ತಾಳೆ.
ಮಾತೆಯದು ಮೃದು ಹೃದಯವಲ್ಲವೇ. ಮಗುವನ್ನು ಮುದ್ದು ಮಾಡುವುದರ ಜೊತೆಗೆ, ತಂಟೆ ಮಾಡಿದರೆ ಗದರಿಸುವುದೂ
ಉಂಟು. ಎರಡು ಏಟು ಕೊಡುವುದೂ ಉಂಟು. ಆದರೆ ಉದ್ದೇಶ  ಶಿಕ್ಷೆಯಲ್ಲ. ಸಮಾಧಾನಗೊಳಿಸುವುದು. ಎಂತಲೇ, ’ಕುಪುತ್ರೋ ಜಾಯತೆ
ಕುಮಾತಾ ಭವತಿಎಂಬುದು ಉಕ್ತಿ. ’ಕೆಟ್ಟ ಮಗನು ಇರಬಹುದು, ಕೆಟ್ಟ ತಾಯಿ ಇರುವುದಿಲ್ಲ ಎಂದರ್ಥ.
ಒಬ್ಬ ವ್ಯಕ್ತಿ ತನ್ನ ತಾಯನ್ನು ಕೊಂದು ಹೋಗುತ್ತಿದ್ದಾಗ, ಕರುಳು,’ನಿಧಾನವಾಗಿನಡೆಯಪ್ಪಾ,  ನಿನಗೆ ನೋವಾಗುತ್ತದೆ
ಎಂದಿತಂತೆ.
ಅದಕ್ಕೇ, ಭೂಮಿಯನ್ನು ತಾಯಿಯ ಸಹನೆಯ ಪ್ರತಿರೂಪ ಎನ್ನುವುದು. ’ ತುಳಿಯಿರಿ, ಎಗರಿರಿ, ನಡೆಯಿರಿ, ಭೂದೇವಿ
ಕೋಪಿಸುವುದಿಲ್ಲ. ಆದರೆ ಕೋಪಗೊಂಡಾಗ ಇದ್ದೇ ಇದೆ ಭೂಕಂಪ.ಪ್ರವಾಹ, ಪ್ರಳಯ. ಎಂತಲೇ, ನಡವಳಿಕೆಯಲ್ಲಿ
ಎಚ್ಚರ ಅಗತ್ಯ.

೪ಆ.ಮದುರೆ ಮೀನಾಕ್ಷಿ.
===================

ಚತುರ್ಮುಖ ಬ್ರಹ್ಮ ಮುಖಗಳು ನಾಲ್ಕು.ವೇದಗಳು ನಾಲ್ಕು,ದಿಕ್ಕುಗಳು ನಾಲ್ಕು. ಉಪಾಯಗಳು ನಾಲ್ಕು. ಜೀವನದ ಉದ್ದೇಶಗಳು ನಾಲ್ಕು.
ನಾಣ್ಣುಡಿ.’ ನಾಲ್ಕು ಜನರು ಮೆಚ್ಚುವಂತೆ ಬಾಳಬೇಕೆಂದು.

ಏನು ನಾಲ್ಕರ ಮಹತ್ವ. ಮದುರೆಯಲ್ಲಿ ಪಾಂಡ್ಯ ರಾಜನ ಮಗಳಾಗಿ ಜನಿಸಿ, ಸೌಂದರ್ಯದ ಖನಿ ಎಂದೆನಿಸಿ, ಶಿವನನ್ನೇ ವರಿಸಬೇಕೆಂದು ನಿರ್ಧ
ರಿಸಿ, ಅಖಂದ ತಪಗೈದು ಶಿವನನ್ನು ವರಿಸಿದ ಮಾತೆ ಮೀನಾಕ್ಷಿ.

ನಾಲ್ಕು ಕಡೆಗಳಲ್ಲೂ ಗೋಪುರಗಳು ಮುಗಿಲೆತ್ತರಕ್ಕೆ ನಿಂತಿರಲು, ಫಲ-ಪುಷ್ಪ ಅಂಗಡಿಗಳು ಬೀದಿಯನ್ನು ತುಂಬಿರಲು, ದೇವಾಲಯವನ್ನು ಪ್ರವೇಶಿ-
ಸಿದಾಗ, ಆಗುವ ಆನಂದ ಅದ್ಭುತ.

ಮೊದಲು ಭವ್ಯ ಕರ್ಪಗ ವಿನಾಯಕನ ದರ್ಶನ. ವಿಘ್ನಗಳೆನ್ನು ಹರಿಸಿ ಬೇದಿ ಸಾಗಿರಲು, ಭವ್ಯ ಶ್ರೀ ಸುಂದರೇಶ್ವರನ ಸಂದರ್ಶನ.
ಏನು ತೇಜಸ್ಸು. ಭವ್ಯ ಆಕ್ರುತಿ. ’ಭಕ್ತಿಯನ್ನು ಭಕ್ತನ ಮನಸ್ಸಿನಲ್ಲಿ ಪುಟಿದೆದ್ದು ನಿಲ್ಲುವಂತೆ ಮಾಡುವ ಭವ್ಯ ಆಕೃತಿ. ’ಬಾ, ಎಂದು
ಕರೆಸಿ ಬಳಿಯಲ್ಲಿ ನಿಲ್ಲಿಸಿ, ಭಾವುಕತೆಯಿಂದ ಕಣ್ಣೀರು ಹರಿದಿರಲು, ’ಭಕ್ತ, ಭಯವೇಕೆ, ಭವಹರ ನಾನಿಲ್ಲವೇ’, ಎಂದು ಅಭಯ ನೀಡುವ ಮೌನ ಉತ್ತರ. ಹಿಂದಿರುಗಿ ಬರಲು ಹೆಜ್ಜೆಯ ಹಿಂದೇಟು ಹಾಕಿದರೂ, ಹೋಗಲೇ ಬೇಕು.
 ಅದೇನು ಕಾರುಣ್ಯದ ಮನದ ಸೆಳತ.
ತಾಯಿ ಕರೆಯುತ್ತಿರುವಳಲ್ಲಾ. ಅದೇನು ಭವ್ಯ ತೇಜಸ್ಸು. ಅದೇನು ಮನ ಸೆಳೆವ ವ್ಯಕ್ತಿತ್ವ. ಅದೇನು ಕಾರುಣ್ಯದ ಮನದ ಸೆಳೆತ.

ಜಲದಲ್ಲಿ ಮೀನು ಸಂಚರಿಸುತ್ತಿರುವಾಗ ಕಾಲಿತ್ತರೆ ಮುಲುಗುಟ್ಟುವ ಅನುಭವ. ಒಂದು ಹಿಡಿ ಪುರಿಯನ್ನು ಹಕಿದರೆ, ಅದೆಷ್ಟು ಮೀನುಗಳು ಬಂದು 
ತಿನ್ನುವವು. ಅದೇನು ಆಸ್ವಾದನೆ. ಮಾನವರು ಮನೆಯಲ್ಲಿ ಹಿಡಿದು ಸಂಗ್ರಹಿಸಿದರೆ, ಅದರ ಆನಂದ ಅದೃಶ್ಯ. ಆಹಾರವಾಗಿ ತಿಂದರೆ ಹರ್ಷದ
ನಾಶ.

ಸ್ವಾತಂತ್ರವನ್ನು ಎಲ್ಲಾ ಜೀವಿಗಳೂ ಬಯಸುತ್ತವೆ. ನಮ್ಮ ಅವಯವಗಳಲ್ಲಿ, ಕಣ್ಣನ್ನು ಮೀನಿಗೆ ಹೋಲಿಸುತ್ತಾರೆ. ಮೀನಿನ ಹೋಲಿಕೆಯ ಕಂಗಳನ್ನು
ಹೊಂದಿರುವವಳು ತಾಯಿ ಮೀನಾಕ್ಷಿ. ’ಕಾರುಣ್ಯದ ಬಾಣ ಕಣ್ಣಿನಿಂದ ಹೊರಟು ನೇರವಾಗಿ ಭಕ್ತನ ಹೃದಯದಲ್ಲಿ ನಾಟಿ, ವಿದ್ಯುತ್ಸಂಚಾರ-
ವಾಗುತ್ತದೆ.  ’ತಾಯಿಯ ಅನುಗ್ರಹ ನಿಶ್ಚಿತ.’ ಭುಜದ ಮೇಲಿನ ಗಿಳಿ ಮತ್ತೊಂದು ಮೆರುಗು. ಪ್ರಕೃತಿ
ದೇವತೆ ಹಸಿರು ದುಕೂಲವುಟ್ಟು ಕಂಗೊಳಿಸಿದರೆ, ಹಸಿರು ಸಮೃದ್ಧಿಯ ಸಂಕೇತ. ’ಯಾವ ಕೆಲಸದ ಪ್ರಾರಂಭಕ್ಕೂ, ’ಹಸಿರು ಬಾವುಟ
ಎನ್ನುತ್ತಾರೆ. ಅಂತಲೇ ಗಿಳಿಯ ಬಣ್ಣ ಹಸಿರು. ಆದರೆ ಮಾತು ಮಧುರ. ’ಮಾತೆಯ ಮಾತೂ, ಮೃದುನಗೆಯು, ಮೋಹಕ.’

ಅಣ್ಣನಾದ ಶ್ರೀ ನಾರಾಯಣನುಅಳಗರ್ಎಂಬ ಹೆಸರಿನಲ್ಲಿ ಬಳಿಯಲ್ಲಿಯೇ ಇದ್ದಾನೆ. ತಂಗಿಯ ಮದುವೆಗೆ ಹೊತ್ತಾಗಿ ಬಂದನೆಂದು ಪ್ರತೀತಿ.
ಮಧುರೆಯಲ್ಲಿ ಮೀನಾಕ್ಷಿಯ ಮದುವೆ ಅದ್ಧೂರಿಯಾಗಿ ನಡೆಯುತ್ತದೆ. ಅದಾದಮೇಲೆ ಅಣ್ಣನ ಆಗಮನದೊಂದಿಗೆ ಹಾರೈಕೆ. ಬಳಿಯೇ ಪಳಮುದಿರ್-
ಚೋಲೈ ಮತ್ತು ತಿರುಪ್ಪರಕುಂಡ್ರಂ ನಲ್ಲಿ ಶ್ರೀ ಮುರುಗನಿದ್ದಾನೆ.
ಮಧುರವಾದ ಮಧುರೆಯಲ್ಲಿ ಮನದನ್ನೆಯನ್ನು ಮದುವೆಯಾಗಿ ನಿಂತು ಮಕ್ಕಳಾದ ಭಕ್ತರನ್ನು ಮುಕ್ತಮನಸ್ಸಿನಿಂದ ಹರಸುತ್ತಿರುವ ಆತಾಯಿ ಮಮತೆಯ ಪ್ರತಿರೂಪವಲ್ಲದೇ ಮತ್ತೇನು,
ಅಲ್ಲಿರುವ ಸಾವಿರ ಕಾಲಿನ ಮಂಟಪದ ದರ್ಶನ ಸಾವಿರ ಜನ್ಮಗಳ ಫಲ. ತಾಯ ಸಾಮೀಪ್ಯಕ್ಕೆ ಮಜಲು. ಸಾಯುಜ್ಯಕ್ಕೆ ಹೆದ್ದಾರಿ
.
೪ಅ.ಕಂಚಿ ಕಾಮಾಕ್ಷಿ.
====================
ನಗರೇಷು ಕಾಂಚಿ’, ಇದು ಸಂಸ್ಕೃತದ ಒಂದು ಉಕ್ತಿ. ಪಲ್ಲವ ಸಾಮ್ರಾಜ್ಯದ ಮಹಾನ್ ದೇವಾಲಯಗಳ ಅಂದವನ್ನು ನೋಡಿದರೆ ದೇವನ
ವಿಶಾಲ ಕಾರುಣ್ಯ ತುಂಬಿದ ಹೃದಯದ ಭಾಸವಾಗುತ್ತದೆ.
ಸಂಯಮದ, ಸಹಿಷ್ಣುತೆಯ ಪರಮಾವದಿಯನ್ನೇ ಇಲ್ಲಿ ಕಾಣಬಹುದು. ಇಷ್ಟಾರ್ಥಗಳನ್ನು ಪೂರೈಸುವ ಶಿವನ ಆವಾಸಸ್ತಾನ ಶಿವ ಕಂಚಿಯಾದರೆ,
ಶ್ರೀ ವಿಷ್ಣುವಿನ ವಿಶಾಲ ಹೃದಯದ ತಾಣವಾಗಿ ವಿಷ್ಣುಕಾಂಚಿ ಕಂಗೊಳಿಸುತ್ತದೆ. ವರದರಾಜಸ್ವಾಮಿಯು ವಿರಾಜಮಾನನಾಗಿದ್ದರೆ, ಶ್ರೀ
ತ್ರಿವಿಕ್ರಮನ ಅಜಾನುಬಾಹು ಮೂರ್ತಿ ಆಗಂತುಕರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲುರುವ ಸ್ವರ್ಣ ಹಲ್ಲಿಯನ್ನು ಮುಟ್ಟಿದರೆ ಯಾವುದೇ ಹಲ್ಲಿಯ
ದೋಷದ ಪರಿಣಾಮವಿರುವದಿಲ್ಲಾ ಎಂಬುದು ಪ್ರತೀತಿ.

ಆದರೆ, ಕಾಂಚಿಯ ನಿಜವಾದ ಆಕರ್ಷಣೆ ಕಂಚಿ ಕಾಮಾಕ್ಷಿ ಮತ್ತು ಕಾಂಚಿಯ ಮಠ. ಶ್ರೀ ಶಂಕರಾಚಾರ್ಯರು ಇಲ್ಲಿಗೆ ಆಗಮಿಸಿ, ತಾಯಿಯ
ಮಡಿಲಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ. ಅಂತೆಯೇ, ಇಲ್ಲಿ ಕಳೆದ ದಶಕದಲ್ಲಿ ತಪಶ್ಚರ್ಯೆಯಿಂದಲೂ, ತತ್ವ ನಿಷ್ಟೆಯಿಂದಲೂ, ಮಾನವ ಕಲ್ಯಾಣಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡು, ಶ್ರೀ ಶಂಕರರಂತೆ, ಮೂರು ಬಾರಿ, ಕಾಳ್ನಡಿಗೆಯಲ್ಲಿ, ಭಾರತ ಪ್ರವಾಸ-
ವನ್ನು ಕೈಗೊಂಡು, ಜನರ ಪ್ರತಿನಿಧಿಯಾಗಿ,ಜ್ಞಾನದೀವಿಗೆಯಾಗಿ, ಶಾಸ್ತ್ರ, ವೈದೀಕ ಕ್ರಮಗಳಲ್ಲಿ, ಅಧ್ವರ್ಯು ಎನಿಸಿ, ’ಮಾತೆಯ ಮಾತು ತಮ್ಮ
ಮಾತು, ಎಂದು, ತಾಯಿಯನ್ನು ಅಖಂಡವಾಗಿ ಆರಾಧಿಸಿ, ಆಕೆಯ ಅನುಗ್ರಹವನ್ನು ಮೈಗೂದಿಸಿಕೊಂಡು, ಮಮತೆಯ ಸ್ವರೂಪವಾಗಿ, ಸಮಸ್ಯೆಗಳ ಪರಿಹಾರ
 ಮಾರ್ಗವನ್ನು ತೋರಿ, ರಾಜಕೀಯದಲ್ಲೂ, ತಮ್ಮ ಪ್ರವೀಣ್ಯವನ್ನು ತೋರಿ, ದೇಶಭಕ್ತಿಯಲ್ಲಿ ತಮ್ಮ ಪಾಲನ್ನು ಸಲ್ಲಿಸಿ, ’ಕಾಂಚಿ ಪೆರಿಯವಾಳ್
ಎಂದುಖ್ಯಾತರಾದ, ಶ್ರೀ ಚಂದ್ರಶೇಖರಸ್ವಾಮಿಯವರ ಜೀವನವೇ ಒಂದು ಪಾವನ ಗಂಗೆ. ಅದರಲ್ಲಿ ಮಿಂದು ಬಂದವರಿಗೆ, ಬಂಧನ, ದುಃಖ
ಎಲ್ಲಿ.

ಅಂತೆಯೇ, ಅವರ ಉತ್ತರಾಧಿಕಾರಿಗಳಾದ ಶ್ರೀ ಜಯೀಂದ್ರ ಸರಸ್ವತಿಗಳು ಮಠದ ಏಳಿಗೆಗೆ ಬಹಳ ಶ್ರಮಿಸಿದ್ದಾರೆ. ಶೈಕ್ಷಣಿಕ ವೈದ್ಯ-
ಕೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇವರುಚಿನ್ನ ಪೆರಿಯವಾಳ್.’ ದೊಡ್ಡವರ ಪ್ರಿಯ ಶಿಷ್ಯರಾಗಿ, ತಮ್ಮನ್ನು ದೇವಿಯ ಅಹರ್ನಿಶಿ ಸೇವೆಗೆ
ಅರ್ಪಿಸಿಕೊಂಡವರು, ಶ್ರೀ ವಿಜಯೀಂದ್ರ ಸರಸ್ವತಿಯವರು. ಇವರ ಶಿಷ್ಯರುಬಾಲ ಪೆರಿಯವಾಳ್.’ಒಟ್ಟಿನಲ್ಲಿ, ತ್ರಿಮೂರ್ತಿಗಳು ಜಗನ್ಮಾತೆಯ ಸೇವೆಗೆ ತಮ್ಮನ್ನೇ
ಅರ್ಪಿಸಿಕೊಂಡಿದ್ದಾರೆ.  ಶ್ರೀ ಕಾಮಾಕ್ಷಿ ಎಂದರೆ, ಇಚ್ಚೆಗಳನ್ನು ಪೂರೈಸುವ ನೋಟವುಳ್ಳವಳು ಎಂದರ್ಥ. ಕಾಮೇಶ್ವರನಿಗೂ, ಅದೇ ಅರ್ಥ.
ಭಕ್ತಿಯ ತಾಯಿಯ ಬಳಿ ಬೇಡುವುದೇನನ್ನು. ಪ್ರೀತಿ, ಪ್ರೇಮ, ಮಮತೆ.ತಾಯಿ ಮಗನಲ್ಲಿ ಕೇಳುವುದು ಏನನ್ನು, ’ನಿಶ್ಚಲ ನಿರ್ಮಲ ಭಕ್ತಿ.
ಚಿನ್ನ ಗಟ್ಟಿಯನ್ನು ಪಡೆದವನು ಉಂಗುರವನ್ನು ಕೇಳಬಹುದೇ” ’ಕಲ್ಪ ವೃಕ್ಷವನ್ನು ಪಡೆದವನು ಕೇವಲ ಒಂದು ಹಣ್ಣನ್ನು ಕೇಳಬಹುದೇ.’
ಇದಕ್ಕೆ ಒಂದು ಉದಾಹರಣೆಯನ್ನು ಕೊಡಬಹುದು. ಒಬ್ಬ ವ್ಯಕ್ತಿಯು ಮರವನ್ನು ಕಡಿಯಲು ಕೊಂಬೆಯ ಮೇಲಿದ್ದನು. ಕೊಂಬೆಯಿಂದ ಬಿದ್ದರೆ ತಾನು  ಉಳಿಯುವುದಿಲ್ಲ
ಎಂಬ ಅರಿವು ಅವನಿಗಿಲ್ಲ. ಗಗನದಲ್ಲಿ  ಸಂಚರಿಸುತ್ತಿದ್ದ ಪಾರ್ವತಿ, ಜೊತೆಯಲ್ಲಿದ್ದ ಶ್ರೀ ಪರಮೇಶ್ವರನನ್ನು ಅವನನ್ನು ರಕ್ಷಿಸಲು
ಬೇಡಿದಳು. ಶ್ರೀ ಶಿವನು, ’ಅವನು ಬದುಕುವ ಯೋಗವಿಲ್ಲ. ಅಮ್ಮಾ ಎಂದರೆ ನೀನು ಕಾಪಾಡು, ಅಪ್ಪಾ ಎಂದರೆ ನಾನು ಕಾಪಾಡುತ್ತೇನೆ ಎಂದನು. ಆದರೆ
ಅವನುಅಯ್ಯೋಎಂದನು. ಅದಲ್ಲವೇ ಅವನ ಗ್ರಹಚಾರ.

ತಾಯಿಯ ಮುಂದೆ ನಿಂತಾಗ, ಅದಮ್ಯ ಕರುಣೆ ಕಾಣುತ್ತದೆ. ’ಆಕಣ್ಣುಗಳಲ್ಲಿ ತೀವ್ರ ಕಾಂತಿ, ಮನ ಸೆಳೆವ ಮಮತೆ. ’ ಕಂಡು ಕಂದನನ್ನು ಅಪ್ಪುವ
ಕಾರುಣ್ಯ. ಹಿಂದೆ ಹೋಗಲು ಒಲ್ಲದ ಆಕರ್ಷಣೆ. ಸಹಸ್ರನಾಮದ ಸವಿಜೇನು ಕರ್ಣಾಮೃತವಾಗಿರಲು, ಕುಂಕುಮ ತಾಯಿಯ ಅಡಿದಾವರೆಗಳನ್ನು ಅಲಂಕರಿಸಲು
ದಿವ್ಯಜ್ಯೋತಿಯ ಬೆಳಕು ತಾಯಿಯ ಹೊಳಪನ್ನು ಬೆಳಗುತ್ತಿರಲು, ಕೈ, ಕೈ ಅರಿಯದೇ ಮುಗಿಯುತ್ತಿರಲು, ಕಣ್ಣರಿಯದೆ ನೇತ್ರ-
ಧಾರೆ ಸುರಿಸುತ್ತಿರಲು, ಪಾದಗಳು ಜೋಡಿಸಿ, ಗೌರವ ಸೂಚಿಸಲು, ಮನವು ಮಾತೆಯಲ್ಲಿ ಐಕ್ಯವಾಗಿರಲು, " ಸಮಯವಲ್ಲವೇ ಅನಂದದ ಪರಮಾವಧಿ’.
ಆರತಿ, ತೀರ್ಥ, ಕುಂಕುಮಗಳ ವಿತರಣೆಯಾಗಲು, ಮತ್ತೆ ಮರಳಿ ಸಾಗಬೇಕೆಂಬ ಚಿಂತೆಯಿಂದ ಮನ  ನೊಂದಿರಲು, ’ನೀನೆಲ್ಲಿರುವಿಯೋ ಅಲ್ಲಿ ನಾನಿರುವೆ
ಎಂದು ಅಭಯವಿತ್ತು, ಕಳುಹಿಸುವ ಮಾತೆ, ಆಶ್ರಯದಾತೆ, ನಿತ್ಯ ವಂದಿತೆ. ಕಣ್ಣಿನ ಕಾರುಣ್ಯ ಕಂಠದಿಂದ ಹೊರಬಂದು, ಕಂಡಲ್ಲಿ ಬೇಡಲು
ಕಾರುಣ್ಯದಿಂದ ಕಾತುರದೊಡನೆ ತನ್ನ ಕುವರನನ್ನು ಕಾಯುವಳಲ್ಲವೇ ಕಾಮಾಕ್ಷಿ.

ನಾ ನಿರಕ್ಷರ ಕುಕ್ಷಿ. ನಿನೇ ಸರ್ವ ಶಕ್ತಿಎಂದು ಶರಣಾದಾಗ, ಪ್ರಾಣಪಕ್ಷಿ ತಾಯಿಯೊಂದಿಗೆ ಲೀನವಾಗದೆ ಇರುವುದೇ.


ಕಾಶಿ ವಿಶಾಲಾಕ್ಷಿ
==================
ಕಾಶಿ ಎಂದರೆ ಮೊದಲು ನೆನಪಿಗೆ ಬರುವುದು ಶ್ರೀವಿಶ್ವೇಶರ ಸ್ವಾಮಿ. ನಂತರ ಅನ್ನಪೂರ್ಣೇಶ್ವರಿ. ನಂತರ, ಪವಿತ್ರ ಗಂಗೆ ಮಾತೆ.
ಮತ್ತೆ ಮರೆಯಲಾಗದ ವಿಶಾಲ ಹೃದಯದ ಮಾತೆ ವಿಶಾಲಾಕ್ಷಿ. ಕಾಶಿ ಕ್ಷೇತ್ರಕ್ಕೆಮೋಕ್ಷಪುರಿ ಎಂಬ ಹೆಸರೂ ಉಂಟು. ಇಲ್ಲಿ ಮರಣಿಸಿದ
ವ್ಯಕ್ತಿಗೆ ಪುನರ್ಜನ್ಮವಿಲ್ಲ ಎಂಬುದು ಪ್ರತೀತಿ..
ಶ್ರೀ ವಿಶ್ವೇಸ್ವರಸ್ವಾಮಿಯನ್ನು ಯಾರು ಬೇಕಾದರೂ ಅರಾಧಿಸಬಹುದು. ಅಭಿಷೇಕ ಮಾಡುತ್ತಿರಲು ನೀರು ಚಿಮ್ಮಿ ಉಕ್ಕಿ ಬರುತ್ತಲೇ ಇರುತ್ತದೆ.
ಏಕೆಂದರೆ, ಅವನು ಕರುಣಾ ಸಮುದ್ರನಲ್ಲವೇ.
ಲೋಕಕ್ಷೇಮಕ್ಕಾಗಿ ಕಾಲಕೂಟವನ್ನುಂಡು ಜಗತ್ತಿಗೆ ಗಂಗೆಯನ್ನಿತ್ತ ನೀಲಕಂಠ. ವಿಶ್ವಾಮಿತ್ರ ಋಶಿಯು ರಾಜಾ ಹರಿಶ್ಚಂದ್ರನನ್ನು
ಶೋಧಿಸಿದ್ದು ಇಲ್ಲಿಯೇ. ಇನ್ನು, ಒಮ್ಮೆ ಚತುರ್ಮುಖ ಬ್ರಹ್ಮ್ಮನಿಗೆ ಐದು ಶಿರಗಳಿದ್ದುವು. ಒಮ್ಮೆ, ಬ್ರಹ್ಮನನ್ನು ಉಮೆ ಶಿವನೆಂದು ಬ್,ಹ್ರಮಿಸಿ
ಸಮೀಪಿಸಲು, ಕ್ರೋಧಗೊಂದ ಶಿವನು ಅವನ ಶಿರವನ್ನು ತರಿದ. ಅದು ಬ್ರಹ್ಮಕಪಾಲದಲ್ಲಿ ಬಿದ್ದಿತು. ಬ್ರಹ್ಮಹತ್ಯಾದೋಷದಿಂದ ನಿವೃತ್ತಿ
ಹೊಂದಲು ಶಿವ ಎಲ್ಲೆಲ್ಲಿ ಅಲೆದರೂ ಕಪಾಲ ತುಂಬಲೇ ಇಲ್ಲ. ಕಾಶಿಗೆ ಬಂದು ಶ್ರೀ ಅನ್ನಪೂರ್ಣೇಶ್ವರಿಯನ್ನು ಆಶ್ರಯಿಸಿದಾಗ, ಕಪಾಲವು
ತುಂಬಿತು. ವಿಶ್ವಕ್ಕೆ ಅನ್ನ ನೀಡುವ ಅನ್ನಪೂರ್ಣೆಯಲ್ಲವೇ ಮಾತೆ.
ಇನ್ನು ಗಂಗೆಗೆ ಬಂದಾಗ, ಗಂಗೆ ಯಾವಾಗಲೂ ಪವಿತ್ರಳು. ತನ್ನ ಹಿರಿಯರಿಗೆ ಸದ್ಗತಿಯನ್ನು ನೀಡಲು ಗಂಗೆಯನ್ನು ಧರೆಗೆ ಬರಲು ಬೇಡಿದಾಗ 
ತನ್ನ ಪ್ರವಾಹವನ್ನು ತಡೆಯಲು ಯಾರಿದ್ದಾರೆಎಂದಾಗ ಶಿವನು ಜಟೆಯಲ್ಲಿ ಗಂಗೆಯನ್ನು ಶಿರದಲ್ಲಿ ಸೆರೆ ಹಿಡಿದು ನಂತರ ಜಟೆಯಿಂದ
ಬಿಟ್ಟನು.
ಇಲ್ಲಿ ಸುಮಾರು ಇಪ್ಪೈತ್ತೈದು ಘಟ್ಟಗಳಿವೆ. ಮೊದಲು ಪ್ರಯಾಗದಲ್ಲಿ ಕಾರ್ಯವನ್ನು ಮುಗಿಸಿಕೊಂಡು, ಕಾಶಿಯಲ್ಲಿ ಮುಂದುವರಿಸಿ, ಗಯಾದಲ್ಲಿ
ಪರಿಸಮಾಪ್ತಿಯಾಗಲು ಮುಕ್ತಿ ಶತಸ್ಸಿದ್ಧ ಎಂದು ಪ್ರತೀತಿ. ಗಂಗೆಯಲ್ಲಿ ಮಿಂದವರೆಲ್ಲರೂ ಪವಿತ್ರರಾಗುವರೇ ಎಂದರೆಇಲ್ಲ.’.ಶಿವ-
ಪಾರ್ವತಿಯರು ವೃದ್ಧ ದಂಪತಿಗಳ  ವೇಷ ಧರಿಸಿ  , ಶಿವನು ಅಶಕ್ತನಂತೆ ಮಲಗಿರಲು, ’ಶಿವನನ್ನುಎತ್ತುವುದಕ್ಕೆ ಸಹಾಯ ಮಾಡ
ಯಾರಾದರೂ ಮುಂದೆ ಬರಬಹುದುಆದರೆ, ಯಾರೂ ಪಾಪ ಮಾಡಿರಬಾರದು, ಎಂದು ಉಮೆ  ನಿಯಮ ತಿಳಿಸಿದಳು. ಯಾರೂ ಮುಂದೆ ಬರಲಿಲ್ಲ. ಒಬ್ಬ ಅಸ್ಪೃಷ್ಯನು ಪಾಪ ತನಗೆ ಬರಲಿ ಎಂದು ಸಹಕರಿಸಿದನು. ’ಮುಗ್ದ ಮನಸ್ಸೇ ಮುಖ್ಯ.’
ಪ್ರಯಾಗ, ಕಾಶಿ, ಗಯಾಗಳ ತ್ರಿವೇಣಿ ಸಂಗಮದಲ್ಲಿ ನಡೆಸಿದ ಪಿತೃಕರ್ಮಗಳಿಂದ ಅವರ ಉದ್ದಾರದೊಡನೆ ಕರ್ತನ ಮುಂದಿನ ತಲೆಮಾರುಗಳೂ
ಸುಖವಾಗಿ ಇರಬಹುದೆಂದು ದೈವ ವಾಕ್ಯ.
ಇನ್ನು ವಿಶಾಲಾಕ್ಷಿಯ ವಿಷಯಕ್ಕೆ ಬಂದಾಗ, ’ವಿಶಾಲ ಎಂಬುದು ಯಾವುದು’. ನೆನಪಿಗೆ, ಗಗನ, ಭೂಮಿ, ವಾಯು, ಅಗ್ನಿ, ಸೂರ್ಯ ಇವರ ದ್ರುಷ್ಟಿಯೇ  
ವಿಶ್ವ ದೃಷ್ಟಿ. ಗುರಿ ವಿಶ್ವ ನಲ್ಮೆ. ಅವರಿಗೆಲ್ಲಿದೆ ವಿರಾಮ. ’ಯಾವ ಭೇದ ಭವಗಳಿಲ್ಲದೆ, ಅವಿರತವು, ಅವಿಶ್ರಾಂತವಾಗಿ ತಮ್ಮ
ಕರ್ತವ್ಯವನ್ನು ನಿರ್ವಹಿಸುವರು.
ಭೂಮಿಯಂತಹ ತಾಳ್ಮೆ, ಅಗ್ನಿಯಂತಹ ತೇಜಸ್ಸು, ಗಗನದಂತಹ ವೈಶಾಲ್ಯ, ಸೂರ್ಯನಂತೆ ಜ್ಞಾನದೀವಿಗೆಯನ್ನು ಬೆಳಗಿ, ವಾಯುವಿನಂತೆ 
ಕಾರುಣ್ಯಗಾಲಿಯನ್ನು ಪಸರಿಸುತ್ತಾ, ಭಕ್ತರ ಬವಣೆಯನ್ನು ನೀಗಿಸಿ, ಭಕ್ತರ ಭಕ್ತಿಗೆ ಮೆಚ್ಚಿ ಬಾಳನ್ನು ಭದ್ರ ಬುನಾದಿಯೊಂದಿಗೆ
ಭಕ್ತರ ಭವಿಷ್ಯವನ್ನು ಭವ್ಯವಾಗಿಸುವ ಭಕ್ತವತ್ಸಲೆ.ಒಮ್ಮೆ ಶಂಕರರು ಹಸಿವಾದಾಗ ಮಾತೆಯನ್ನು ಆಹಾರ ಬೇಡಿದರಂತೆ. ತಾವು ಯತಿಯೆಂಬ ಅರಿವಾಗಿ, : ವೈರಾಗ್ಯವನ್ನುಬೇಡಿದರಂತೆ.
ನಾವು ಅದರೊಂದಿಗೆ ಅನುಗ್ರಹವನ್ನು ಬೇಡುತ್ತಾ ಮಾತೆ ವಿಶಾಲಾಕ್ಷಿಯ ವಿಶಾಲ ಹೃದಯದಲ್ಲಿ ಐಕ್ಯವಾಗೋಣ.

ದಾಕ್ಷಾಯಿಣಿ
----------
ದಕ್ಷ ಬ್ರಹ್ಮನ ಮಗಳಾದ ದಾಕ್ಷಾಯಿಣಿ ಶಿವನನ್ನೇ ವರಿಸಬೇಕೆಂದು ಸಂಕಲ್ಪಿಸಿ, ಘೊರ ತಪಸ್ಸನ್ನಾಚರಿಸಿ, ಪರಮನನ್ನೇ ಫಡೆದಳು.
 ಆದರೆ ದಕ್ಷನು ಮಾಡಿದ ಯಾಗದಲ್ಲಿ ಶಿವನು ಬೇಡವೆಂದು, ಶಿವನು ಸಾಮನ್ಯ ವ್ಯಕ್ತಿ ಎಂದು ನೆನೆದು ಆಹ್ವಾನ ನೀಡಲಿಲ್ಲ.  ಶಿವನು ಬೇಡವೆಂದರೂ
ಆಸೆಯಿಂದ ಬಂದ ಉಮೆಗೆ ನಿರಾಸೆ ಕಾದಿತ್ತು.ಅಳಿಯನನ್ನು ಕೇವಲವಾಗಿ ನಿಂದಿಸಿದ್ದನ್ನು ತಾಳಲಾರದೆ, ಉಮೆಯು ಅಗ್ನಿಪ್ರವೇಶ ಮಾಡಿದಳು.
ಕ್ರೋಧಗೊಂಡ ಶಿವನು ತನ್ನ ಗಣಗಳೊಂದಿಗೆ ನುಗ್ಗಿ, ಯಗಶಾಲೆಯನ್ನೂ, ದಕ್ಷನ ಸೈನ್ಯವನ್ನೂ, ನಿರ್ಮೂಲಗೊಳಿಸಿ, ದಕ್ಷನನ್ನು ಸಂಹರಿಸಿದನು. ನಂತರ, ಪತ್ನಿಯ ಪ್ರಾರ್ಥನೆಗೆ , ಶಿವನು ಮೇಕೆಯ ತಲೆಯನ್ನಿಟ್ಟು ದಕ್ಷನನ್ನು ಬದುಕಿಸಿದನು. ಆದ್ದರಿಂದ, ಶ್ರೀ ರುದ್ರ-ಚಮಕ 
ಪಟಿಸುವಾಗ ಚಮಕದಲ್ಲಿ, ’ಮೇ, ಮೇ, ಎಂದು ಪಾರಾಯಣ ಮಾಡುವುದು ವಾಡಿಕೆಯಲ್ಲಿದೆ.
ದಕ್ಷನು ಪ್ರತಿಭಾವಂತನಾದರೂ, ಅಹಂಕಾರದಿಂದ, ಅದಕ್ಷನಾದನು. ಅದು ಜಗತ್ತಿನ ಹೆಣ್ಣು ಮಕ್ಕಳಿಗೆ ಒಂದು ಪಾಠವಾಯಿತು. ಮದುವೆಯಾದ 
ಹೆಣ್ಣು ಗಂಡನ ಮನೆಯವರೊಂದಿಗೆ ಹೊಂದಿಕೊಳ್ಳಬೇಕು. ಅಡಿಗಡಿಗೆ ತವರು ಮನೆಗೆ ಹೋಗುವುದರಿಂದ ಉಭಯ ಕುಟುಂಬಗಳ ಗುಟ್ಟು-ರಟ್ಟುಗಳು
ಮನಸ್ತಾಪಕ್ಕೆ ಎಡೆ ಮಾಡಿಕೊಡುತ್ತದೆ. ಗಂಡನ ಮನೆಯವರನ್ನು ಹಿಯಾಳಿಸಿದರೆ ಅದರ ಪರಿಣಾಮ ಅವರ್ಣನೀಯ.ಸಭೆ-ಸಮಾರಂಭಗಳಿಗೆ ಹೋದರೆ ತಪ್ಪಲ್ಲ.ತನ್ನ ಕುಟುಂಬದವರೊಂದಿಗೆ ಹೋಗಿ, ಭಾಗವಹಿಸಿ ಬಂದರೆ ತಪ್ಪಲ್ಲ. ಅನಾವಶ್ಯಕ ಮಾತು,
ವಿಚಾರ ವಿನಿಮಯಕ್ಕೆ ಕಡಿವಾಣ ಹಾಕಿ, ಉಭಯ ಕುಶಲೋಪರಿಯೊಂದಿಗೆ ಮುಗಿಸಿಕೊಂಡರೆ ಬಾಳು ಸುಗಮ.ಇಲ್ಲದಿದರೆ ಕದಡುವುದುಸಂಸಾರದಸರಿಗಮ.’

೪ದ್.ಗಿರಿಜಾ ಕಲ್ಯಾಣ.
====================
ಕಾಳಿದಾಸನ ಕುಮಾರಸಂಭವದಲ್ಲಿ ಇದರ ಉಕ್ತಿಯಿದೆ. ಪಾರ್ವತಿ ಹಿಮವಂತನ ಮಗಳು. ಚಿಕ್ಕಂದಿನಿಂದಲೂ ಶಿವನನ್ನೇ ಪತಿಯಾಗಿ ಪಡೆಯಲುನಿರ್ಧರಿಸಿದ್ದಳು. ಅದಕ್ಕೆ ಘೋರ ತಪಸ್ಸನ್ನು ಕೈಗೊಂಡು ಪಂಚಾಗ್ನಿಯ ನಡುವೆ ನಿಂತು, ತಪವನ್ನಾಚರಿಸಿದಳು. ಪರೀಕ್ಷಿಸಲು ಶಿವ ವೃದ್ಧ ರೂಪದಲ್ಲಿ ಬಂದು, ’ಶಿವನಲ್ಲಿ ಅಂತಹ ವಿಶೇಷವೇನಿದೆ ಎಂದು ಕೇಳಿದನು. ’ಅವನು ಭಸ್ಮಧಾರಿ, ಯತಿ, ಸ್ಮಶಾಣವಾಸಿ, ಗಜಚರ್ಮಾಂಬರವನ್ನು
ಧರಿಸಿ ಯೋಗಿಯಂತೆ ಇರುವವನುಎನ್ನಲು, ಕ್ರೊಧಗೊಂಡ ಉಮೆ ಉದ್ರೆಕಗೊಳ್ಳಲು, ತನ್ನ ನಿಜಸ್ವರೂಪವನ್ನು ತೋರಿಸಿದ ಶಿವ. ನಂತರ ನಡೆದಗಿರಿಜಾ ಕಲ್ಯಾಣ ಸರ್ವ ವಿದಿತ.
ಹಿನ್ನಲೆ; ರಕ್ಕಸರ ಆರ್ಭಟ ಹೆಚ್ಚಾಗಿ, ಮುನಿಗಳ ಯಾಗಕ್ಕೆ, ತಪಶ್ಚರ್ಯೆಗೆ, ತಡೆಯುಂಟಾಯಿತು.ಇವರನ್ನು ತಡೆಯಬಲ್ಲ ಒಬ್ಬ ವ್ಯಕ್ತಿಯ ಆವಿರ್ಭಾವದ ಅಗತ್ಯವಾಯಿತು.
ಸಮಯಕ್ಕೆ ಸನತ್ಕುಮಾರ ಋಷಿಗಳು ಧ್ಯಾನದಲ್ಲಿದ್ದಾಗ, ರಾಕ್ಷಸರನ್ನು ತಡೆಯುವ ಹಂಬಲ ಅತಿಯಾಯಿತು. ಅದು ಶಕ್ತಿ ಸಂಭವಕ್ಕೆ ಶಿವ-ಪಾರ್ವತಿಯರ ವಿವಾಹ ಅನಿವಾರ್ಯವಾಯಿತು.  ಇದಕ್ಕೆ ನಾಂದಿಯಾಗಿ ಮನ್ಮಥನು ನಾಟ್ಯವಾಡಿ, ಶಿವನಿಗೆ ಪುಷ್ಪಬಾಣ ಬಿಟ್ಟಾಗ, ಕ್ರೋಧದಿಂದ
ಶಿವನು ಹಣೆಗಣ್ಣನ್ನು ತೆರದು, ಆತನನ್ನು ಭಸ್ಮ ಮಾಡಿದ. ಅವನ ಪತ್ನಿ ರತಿಯ ಮೊರೆಗೆ ಕರಗಿ,  ಅವನನ್ನು ಅನಂಗನಾಗಿರಲು ಅನುಮತಿಯಿತ್ತ. ಅನಂಗನಾಗಿಯೇ, ಅವನ ಉಪಟಳ ಮಾನವರಿಗೆ ಸಹಿಸಲಸಾಧ್ಯ. ತಾಪಸಿಯಾಗಿರುವವರಿಗೂ ಬಿಡದ ಕಾಮನ ಪ್ರಭಾವ ಅವರ್ಣನೀಯ.
ಗಿರಿಜಾ ಕಲ್ಯಾಣವಾದ ಮೇಲೆ ಶಿವ-ಪಾರ್ವತಿಯರು ಸನತ್ಕುಮಾರರನ್ನು ತಮ್ಮ ಕುಮಾರನಾಗಿ ಜನಿಸಲು ಕೇಳಿಕೊಳ್ಳುತ್ತಾರೆ. ತಾನು, ಅಯೋನಿಜನಾಗಿಜನಿಸುವೆನೆಂದು ತಿಳಿಸಿ, ಶಿವನ ಹಣೆಗಣ್ಣಿನಿಂದ ಹೊರಬಂದ ತೇಜಸ್ಸನ್ನು ಅಗ್ನಿದೇವ ಭರಿಸಲಾಗಲಿಲ್ಲ. ಅದನ್ನು ಅಗ್ನಿದೇವನುಶರವಣಪೊಯ್ಗೈ ನದಿಯಲ್ಲಿ ಬೀಳಿಸಲು, ಶಾಂತವಾಗಿ ಆರು ಮಕ್ಕಳಾಯಿತು. ಕೃತ್ತಿಕಾ ಕನ್ಯೆಯರು ಅವುಗಳನ್ನು ಪೋಷಿಸಲು, ದೇವಿ ಪಾರ್ವತಿಯು ಒಗ್ಗೂಡಿಸಿದಳು.
ಶಕ್ತ್ಯಾಯುಧವನ್ನಿತ್ತು ಶಕ್ತಿಹಸ್ತನಾಗಿಸಿದಳು. ನಾರದನಿತ್ತ ಮಾವಿನ ಹಣ್ಣಿನ ಪಂದ್ಯದಲ್ಲಿ, ತಂದೆ ತಾಯಿಯರನ್ನು ಸುತ್ತಿ ಗಣಪ ಗೆಲ್ಲಲು,
ಕೋಪಗೊಂಡ ಮುರುಗ ಮಯೂರವನ್ನೇರೆ ಜಗವನ್ನು ಸುತ್ತಿ ಪಳನಿಯಲ್ಲಿ ನಿಂತನು. ಬ್ರಹ್ಮನನ್ನು ಪ್ರಣವದ ಅರ್ಥ ತಿಳಿದಿಲ್ಲವೆಂದು ಬಂದಿಸಿಟ್ಟ.
ತ್ರಿಮೂರ್ತಿಯರ ಪ್ರಾರ್ಥನೆಗೆ ಮಣಿದು ಮುಕ್ತನಾಗಿಸಿದ. ತಂದೆಗೆ ಪ್ರಣವದ ಅರ್ಥವನ್ನು ಭೊಧಿಸಿ ತಂದೆಗೇ ಗುರುವಾದನು. ಆರು ಕಡೆಯಲ್ಲಿ ನಿಂತು  ಆರುಮುಗನಾದನು. ನಂತರ, ದೇವಸೇನಾಪತಿಯಾಗಿ, ಶೂರಪದ್ಮನನ್ನು ಕೊಂದು, ’ಕುಕ್ಕುಟ ಧ್ವಜ ಮತ್ತು ಮಯೂರವಾಹನನಾದನು.’
ವಳ್ಳಿ ದೇವಯಾನಿಯರನ್ನು ವರಿಸಿ, ಕಲ್ಯಾಣ ಮುರುಗನಾದನು. ಶಷ್ಟಿ ಪ್ರಿಯನೆನಿಸಿ, ಸುಬ್ರಮಣ್ಯದಲ್ಲಿ ನೆಲೆಸಿ ಭಕ್ತರ ಬವಣೆಗಳನ್ನುಹರಿಸುತ್ತಾ, ಶ್ರೀ ವಾಸುಕಿ ಮತ್ತು ಸುಬ್ರಮಣ್ಯನ ರೂಪದಲ್ಲಿ ಕಂಗೊಳಿಸುತ್ತಿರುವನು.
ನಮ್ಮ ಶರೀರದಲ್ಲಿ, ಧ್ಯಾನದ ಉನ್ನತ ಸ್ಥಾನವಾದ ಕುಂಡಲಿನಿ ರೂಪದಲ್ಲಿದ್ದು, ನಿಯಂತ್ರಿಸುತ್ತಿರುವನು.
ಬ್ರಹ್ಮ ಜ್ಞಾನದ ಪ್ರತಿರೂಪವೇ ಶ್ರೀ ಸುಬ್ರಮಣ್ಯ. ತಮಿಳುನಾಡಿನ ಆರಾಧ್ಯದೆವವಾದ ಶ್ರೀ ಮುರುಗನು ಪಟ್ಟಿನತ್ತಾರ್, ಅರುಣಗಿರಿನಾತರ ಆರಾಧ್ಯ ದೈವ. ಶ್ರೀ ಶಂಕರಭಗವತ್ಪಾದರಿಂದ ತಿರುಚೆಂದೂರಿನಲ್ಲಿಶ್ರೀ  ಸುಬ್ರಮಣ್ಯಸ್ತೋತ್ರರಚನೆಯೊಂದಿಗೆ ಅರಾಧಿಸಲ್ಪಟ್ಟ ದೇವರು.
ಶಿವ ಎಂದರೆ ಮಂಗಳ ಸ್ವರೂಪ. ಉಮೆ ಎಂದರೆ ಶಕ್ತಿ ಸ್ವರೂಪ. ಗಣಪತಿಯು ವಿಘ್ನಹಾರಕ. ಜ್ಞಾನ ಪಂಡಿತ ಮುರುಗ, ಮಂಗಳ ಕಾರಕ.
ಕುಟುಂಬದ ಅವಿರತ ಸ್ಮರಣೆ, ವಿಶ್ವ ಜನತೆಯ ನಲ್ಮೆಗೆ ಪ್ರೇರಕ, ಉತ್ತೇಜಕ.

-.
====
ಶ್ರೀ ಕನ್ಯಾಕುಮಾರಿ.
====================
ಭಾರತದ ಶ್ರೀರಕ್ಷೆಯಾಗಿ, ಮೂರು ಕಡೆ ಸಮುದ್ರಗಳು ಇದ್ದರೆ, ಮತ್ತೊಂದೆಡೆ, ವಿಶಾಲವಾದ ಮುಗಿಲೆತ್ತರದ ಹಿಮಾಲಯಾ ಪರ್ವತವಿದೆ.
ಏನಿದರರ್ಥ.

ಸಮುದ್ರ ಯಾವಾಗಲೂ ವಿಶಾಲ. ಮೇಲಿಂದ ಬೀಳುವ ಮಳೆಯನ್ನು ಸ್ವಾಗತಿಸಿ, ದ್ರವರೂಪವಾಗಿ ಹರಿದು, ತೊರೆ, ಕೆರೆ, ನದಿ ರೂಪದಲ್ಲಿ
ಹರಿದು ಸಾಗರವನ್ನು ಸೇರುತ್ತದೆ.
ಅಲೆ ಅಬ್ಬರವಾಗಿ ಬಂದರೂ, ತೀರದಲ್ಲಿ ಬಂದು ಅಪ್ಪಳಿಸುತ್ತದೆ. ಮುಳುಗಿದರೆ, ಮೂರುಸಲ ಮೇಲೆತ್ತಿ ತನ್ನವಳನ್ನಾಗಿಸಿಕ್ಕೊಳ್ಳುತ್ತದೆ.
ಹಿಮಾಲಯವು ಮುಗಿಲೆತ್ತರಕ್ಕೆ ಬೆಳದರೂ, ಮಂಜಿನಿಂದ ಶೋಭಿಸುತ್ತಾ, ಶಿವನ ಆವಾಸಸ್ತಾನವಾಗಿದೆ.
ಆದ್ದರಿಂದಲೇ ಮಾನವನ ಹೃದಯವು ವಿಶಾಲವಾಗಿರಬೇಕು. ಅಲೆಗಳು ಬಂದಂತೆ ಕಷ್ಟಗಳು ಬಂದು ಅಪ್ಪಳಿಸಿದರೂ, ಛಲದಿಂದ ನಿಂತಾಗ
ನಮಸ್ಕರಿಸಿ ಹಿಂದಿರುಗುತ್ತದೆ. ಅಂತೆಯೇ, ಸಮುದ್ರವು ಅನೇಕ ಜಲರಾಶಿಗಳಿಗೆ ಆಶ್ರಯವಿತ್ತಂತೆ, ಮನಾವನನ್ನು ನಂಬಿ ಅನೇಕರು ಆಶ್ರಯಿಸುತ್ತಾರೆ. ನಾವಿಕನು ಹಡಗನ್ನು ಚಾಲೂಕಿನಿಂದ ನಡೆಸಿ ದಡವನ್ನು ಸೇರಿಸುವಂತೆ, ಸಂಸಾರವೆಂಬ ದೋಣಿಯಲ್ಲಿ ಸಾಗಲು ಭಗಂತನನ್ನುನಂಬಿದರೆ ಕರೆಯನ್ನು ಸೇರಬಹುದು.
ಹಿಮವತ್ ಪರ್ವತವು ಮುಗಿಲೆತ್ತರಕ್ಕೆನಿಂತಂತೆ, ಮಾನವನ ಗುರಿಯು ಉನ್ನತವಾಗಿರಬೇಕು. ಅದರಂತೆ ಹ್ರುದಯವು ಶುಭ್ರವಾಗಿರಬೇಕು.
ಲೋಕಕ್ಷೇಮಕ್ಕೆ ಶಿವನು ವಿಷವನ್ನುಂಡು ಗಂಗೆಯನ್ನಿತ್ತಂತೆ, ನಮ್ಮ ನೋವುಗಳನ್ನು ನುಂಗಿಕ್ಕೊಂಡು, ಜಗತ್ತಿನ ಒಳಿತಿಗೆ ಶ್ರಮಿಸಬೇಕು.
ವಿವಾಹವಾದ ಶಕ್ತಿಯರನ್ನು ಅನೇಕವಾಗಿ ನೋಡಬಹುದು. ಆದರೆ, ವರನಿಗಾಗಿ ಕಾದು ನಿಂತ ಶಕ್ತಿ ಕಾಣುವುದು ಅಪರೂಪ. ಇಲ್ಲಿ ನೆಲೆಸಿರುವ
ಕನ್ಯಾಕುಮಾರಿ ಮಾತೆಯು ಭಾರತವನ್ನು ರಕ್ಷಿಸಲು, ಸೃಷ್ಟಿ, ಸ್ಥಿತಿ ಮತ್ತು ಲಯವೆಂಬ ಮೂರು ಕ್ರಿಯೆಗಳನ್ನು ಮೂರು ಸಮುದ್ರಗಳಿಗೆ
ಹಂಚಿದ್ದಾಳೆ. ಶ್ವೇತ ರೂಪದಲ್ಲಿ ಬೆಳಗಿ, ಹುಸಿನಗೆಯನ್ನು ತೋರುತ್ತಾ, ನಾಸಿಕದಲ್ಲಿ ಧರಿಸಿದ ಮೂಗುಬೊಟ್ಟಿನ ಹೊಳಪು ನಾವಿಕರಿಗೆ
ದಾರಿದೀಪವಾಗಿದೆ. ನಮಗೂ ಬೆಳಕು ಕೊಡುತ್ತದೆ.  ಇಲ್ಲಿಯೇ, ಶ್ರೀ ರಾಮಕೃಷ್ಣರ ಪರಮಶಿಷ್ಯರಾಗಿ ವಿದೇಶದಲ್ಲಿ ಅಧ್ಯಾತ್ಮ ಡಿಂಡಿಮ
ವನ್ನು ಬೆಳಗಿದ ಶ್ರೀ ವಿವೇಕಾನಂದರ ಧೀಮಂತ ಪ್ರತಿಮೆಯಿದೆ. ಶ್ರೀ ತಿರುವಳ್ಳುವರ್ ಅವರ ಪ್ರತಿಮೆಯೂ ಇದೆ. ಯಾವ ವಿದೇಶೀಯರು ಭಾರತದ ಮೇಲೆ ಧಾಳಿ ನಡೆಸಲು ಮೂರು ಬಾರಿ ಯೋಚಿಸಬೇಕಾಗುತ್ತದೆ ಭಾರತೀಯರಾಗಿ ಹುಟ್ಟಿದ ಪ್ರತಿ ಪ್ರಜೆಯೂ, ಕ್ಷೇತ್ರಕ್ಕೆ ಬಂದು, ಅಂದವನ್ನು ಕಾಯುವ ಪಣ ತೊಟ್ಟು, ತನ್ನ ಪಾಲಿನ ಕರ್ತವ್ಯವನ್ನು ಮಾಡಿದರೆ ಅದೇ ತಾಯಿಗೆ ಸಲ್ಲಿಸುವ ಬೃಹತ್ ಸೇವೆ.
ಕರ ಮುಗಿದು, ಕಣ್ಮುಚ್ಚಿ ಧ್ಯಾನಿಸಿ, ನ್ಯಾಯಕ್ಕೆ ಹೋರಾಡುವ ಯೆಂದು ಬೇಡಿ, ಕುಳಿತಲ್ಲೇ, ಕಣ್ಮುಚ್ಚಿ ಧ್ಯಾನಿಸುತ್ತಾ, ಮಾನವತೆಯನ್ನು ವಿಶ್ವಕ್ಕೆಲ್ಲಾ ಪಸರಿಸಿ, ಮುದಗೊಂಡು, ರಿಕ್ತಹಸ್ತದಿಂದ ಸಹಾಯ ಗೈದರೆ, ಬಡತನ, ದಾರಿದ್ರ, ನೋವು, ಎಲ್ಲವೂ ಹೇಳ ಹೆಸರಿಲ್ಲದಂತೆ ಮಾಯವಾಗಿ, ಎಲ್ಲೆಲ್ಲೂ  ಸಂತಸದ ಸಾಗರವೇ  ಗೋಚರವಾಗುವುದು.

-.ಮೈಸೂರು ಚಾಮುಂಡೇಶ್ವರಿ
=============================
ಮಹಿಷ್ ಎಂದರೆ ಎಮ್ಮೆ.ಅದು ನಿರಾಸಕ್ತಿಯ ಯತಿಯೆಂತೆ ನೆಮ್ಮದಿಯಾಗಿರುವುದು. ಜಲದಲ್ಲಿದ್ದಾಗ ಯೋಗಿಯಂತೆ ಕಣ್ಮುಚ್ಚಿರುವುದನ್ನು ಕಾಣಬಹುದು.  ಪರೋಪಕಾರ ದೃಷ್ಟಿಯಿಂದ ಮಾನವರಿಗೆ ಹಾಲನ್ನು ಕೋಡುತ್ತದೆ. ರಸ್ತೆಯಲ್ಲಿ ಅಡ್ಡ ನಿಂತು ಎಷ್ಟೇ ಶಬ್ದ
ಮಾಡಿದರೂ ನಿರ್ಲಿಪ್ತವಾಗಿರುತ್ತದೆ. ಅದು ಸಮಚಿತ್ತಕ್ಕೆ ಒಂದು ಉದಾಹರಣೆ. ಇನ್ನು ಯಮನ ವಾಹನ ಮಾನವನ ಬಾಳಿನಲ್ಲಿ ಕೊನೆ ಯಾವಾಗ ಬರುವುದು ಎಂಬುದು ಗೊತ್ತಿಲ್ಲ. ಅದರ ಭಯ ಮಾನವನಿಗೆ ಇದ್ದೇ ಇರುತ್ತದೆ. ಆದ್ದರಿಂದ,’ ನಿದಾನವಾಗಿ ಅಲೋಚಿಸಿ,. ನಿರ್ಮಲಚಿತ್ತನಾಗಿ,
ಭಗವಂತನ ಧ್ಯಾನದಲ್ಲಿ ಇದ್ದರೆ, ಭಯವಿಲ್ಲ.’
 ಈಗಿನ ಮೈಸೂರು ಅಂದಿನ ಮಹಿಷೂರು. ವಿಜಯನಗರದ ಸಾಮ್ರಾಜ್ಯದ ಅರಸರ ಆಳ್ವಿಕೆ ಮುಂದುವರಿದು, ಶ್ರೀ ರಂಗಪಟ್ಟಣದಿಂದ ಮೈಸೂರಿಗೆ ಸುಮಾರು ಹದಿನೆಂಟರ ದಶಕದಲ್ಲಿ ಬಂದಿತು.ಧರೆಗೆ ಸ್ವರ್ಗ ಬಂದಿಳಿದಂತೆ ಭಾಸವಾಗುವ ನಗರ ಸೌಂದರ್ಯದ ಖನಿ. ಮೈಸೂರಿನ ಅರಮನೆಯನ್ನು ಒಂದು ಅಮರಾವತಿ ಎನ್ನಬಹುದು.
ನಾವು ಚಿಕ್ಕ ವಯಸಿನಲ್ಲಿ ಕಂಡ ದಸರ ಅವಿಸ್ಮರಣೀಯ. ಹತ್ತು ದಿನಗಳ ನಗರದ ತಳಿರು ತೋರಣ, ಜನರ ಉತ್ಸಾಹ, ಅರಮನೆಯ ವಿದ್ಯುತ್ದೀಪಾಲಂಕಾರ, ಅರಮನೆಯ ಆಯುಧ ಪೂಜೆ, ದರ್ಬಾರ್, ವಿಜಯದಶಮಿಯ ಮೆರವಣಿಗೆ, ಇಂದೂ  ಕಣ್ಣಿಗೆ ಕಟ್ಟಿದಂತಿದೆ. ಬಳಿಯಿರುವ ಕನ್ನಂ-
ಬಾಡಿ ಕಟ್ಟೆ ಕಾವೇರಿಯು ರೈತರಿಗೆ ಕೊಟ್ಟಿರುವ ಊಟದ ತಟ್ಟೆ.’
ಜಗತ್ಸುಖವು ಅಳಿಯಬಹುದು. ಅಧ್ಯಾತ್ಮ ಅಳಿಯುವದಿಲ್ಲ. ರಾಜಧನರದ್ದತಿಯಿಂದ ದಸರೆ ನಿರೀಕ್ಷಿತ ಮಟ್ಟಕ್ಕೆ ನಡೆಯುತ್ತಿಲ್ಲದಿದ್ದರೂ,
ಅಧ್ಯಾತ್ಮ ಕೇಮ್ದ್ರವಾದ ಶೃಂಗೇರಿ ಮತ್ತು ಇತರ ಸ್ಥಾಳಗಳಲ್ಲಿ, ನವರಾತ್ರಿಯಲ್ಲಿ, ಶ್ರೀ ಗುರುಗಳ ನೇತ್ರುತ್ವದಲ್ಲಿ, ಅದ್ಧೂರಿಯಿಂದ ನಡೆಯುತ್ತದೆ. ಯೊಗಕ್ಶೇಮದ ಸಲುವಾಗಿ, ನಡೆಯುವ ಜಗನ್ಮಾತೆಯ ಸೇವೆ ಆರಾಧನೆ, ಯಜ್ಞ, ಹೋಮ- ಹವನಗಳು, ಅಮರ. ನಿರಂತರ ಶ್ರೇಯಸ್ಕರ.
ತಾಯಿಯ ರಕ್ಷಣೆಯಲ್ಲಿ ಮಕ್ಕಳು ಯಾವುದಕ್ಕೂ ಚಿಂತಿಸುವಿದಲ್ಲ. ಅವಳ ರಕ್ಶಣೆಯಲ್ಲಿ ನೆಮ್ಮದಿಯಿಂದ ಇರುತ್ತವೆ. ’ಕಷ್ಟ ಕಾರ್ಪಣ್ಯಗಳು
ತಾಯಿಯ ದಯೆಯಿಂದ ಕರಗಿ ಹೋಗುತ್ತವೆಯೆಂಬ ನಂಬಿಕೆ.ಕಷ್ಟ, ನೋವು, ನಲಿವು, ಕ್ಷಾಮ, ದರೋಡೆ, ಹತ್ಯೆ, ಏನೇ ಇರಲಿ, ಎಲ್ಲಾ ಮಹಿಷನನ್ನೂ,ತಾಯಿ, ಚಂಡ, ಮುಂಡರನ್ನು ಕೊಂದದ್ದರಿಂದ,ತಾಯಿ ಚಾಮುಂಡಿ, ಚೆಂಡಾಡಿ, ಮಕ್ಕಳಿಗೆ ಚಿರಶಾಂತಿಯನ್ನು ಕೊಡುತ್ತಿದಾಳೆ. ಸಿಂಹರಾಜನ

ಮೇಲೆ ಕುಳಿತು, ಶೂಲಪಾಣಿಯಾಗಿ, ಮಹಿಷನನ್ನು ಮೆಟ್ಟಿ ನಿಂತ ಚಾಮುಂಡಿಯ ಬೆಟ್ಟ ಇಂದೂ ಎಂದೆಂದೂ ಪವಿತ್ರ. ಮಹಿಷ-ಜಡತೆ, ಸಿಂಹ-
ಅಹಂಕಾರ, ಇವೆರಡನ್ನೂ ಹತ್ತಿಕ್ಕಿ, ಅವನನನ್ನು ಉದ್ದಾರಗೊಳಿಸಲು, ತನ್ನಲ್ಲಿ ಐಕ್ಯವಾಗಿಸಿಕ್ಕೊಳ್ಳುವ, ಕರುಣಾಮಯಿ, ಚಾಮುಂಡಿ.ಎಂತಲೇ, ನಾಡಿನ ಎಲ್ಲೆಡೆಗಲಿಂದಲೂ, ಇಲ್ಲಿ ಬಂದು ನೆಲೆಸಿ, ನೆಮ್ಮದಿಯಾಗಿ ಜೀವನ ನಡೆಸುವ ಭಾರತದ ಪೌರರು ಎಷ್ಟೇ ಕಠಿಣ
ಪರಿಸ್ಥಿತಿಯಲ್ಲಿದ್ದರೂ, ಸವಾಲುಗಳಿದ್ದರೂ, ತಾಯಿಯ ಮಡಿಲಲ್ಲಿದ್ದು, ಕರುಳಿನ ಕರೆಗೆ ಸ್ಪಂದಿಸುವ ತಾಯಿಯ ಅನುರಾಗ ಅರಳಿತು ಎಂಬ ಧೈರ್ಯದಿಂದ, ಬಾಳನ್ನು ನಡೆಸುತ್ತಿದ್ದನೆ, ಕನ್ನದ ಕಂದ. ’ತಾಯಿ ಚಾಮುಂಡಿ  ನೀನೇ ಗತಿಎಂದು ಶರಣಾದಾಗ ಎಲ್ಲಾ ಆಪತ್ತುಗಳಿಂದ ಖಚಿತ ಮುಕ್ತಿ.’

.
೧೧..ಶ್ರೀ ಅರುಣಾಚಲೇಶ್ವರ ಮತ್ತು ಜಗನ್ಮಾತೆ
----------------------------------------------

ತಿರುವಣ್ಣಾಮಲೈಯನ್ನು ಅರಿಯವದರಿಲ್ಲ. ಪ್ರಸಿದ್ಧ ತತ್ವ ಜ್ಞಾನಿ ಶ್ರೀ ರಮಣ ಮಹರ್ಶಿಗಳು ಇಲ್ಲಿ ನೆಲೆಸಿ, ತಪಗೈದು ಶ್ರೀರಮಣಾಶ್ರಮ
ವನ್ನು ಸ್ಥಾಪಿಸಿಆತ್ಮಜ್ಞಾನ ಮೂಡಿಸಿದ ಪ್ರಸಿದ್ಧ ಸ್ಥಳ.
ಶ್ರೀ ರಮಣ ಮಹರ್ಷಿಗಳ ಮೂಲ ಹೆಸರು ಶ್ರೀ ವೆಂಕಟರಾಮನ್. ಬಾಲ್ಯದಿಂದಲೂ, ಪರತತ್ವ ಮತ್ತು ಅಧ್ಯಾತ್ಮ ತತ್ವಕ್ಕೆ ಒಲವು. ಅಂತಲೇ,ಒಮ್ಮೆ, ಅವರ ಸಮೀಪದ ಬಂಧುಗಳು ಮರಣ ಹೊಂದಿದಾಗ ಅವರು ಸಾವಿನನಂತರದ ಅನುಭವವನ್ನು ಪಡೆಯಲು ಕೆಲವು ಘಂಟೆಗಳ ಕಾಲ ಅಂತೆಯೇ ನಟಿಸಿದರು.
ನಂತರ ಕಾಲ್ನಡಿಗೆಯಲ್ಲೇ ತಿರುವಣ್ಣಾಮಲೈ ತಲುಪಿ ಅತ್ಯುತ್ತಮವಾದ ತಪವನ್ನು ಕೈಗೊಂಡು ಆತ್ಮಸಾಕ್ಷಾತ್ಕಾರವನ್ನು ಪಡೆದರು. ಅವರ
ಉಪದೇಶಸಾರದ ಪಾಠ;-’ ನಾನು ಎಂಬುದು ಶರೀರವಲ್ಲ. ಆತ್ಮ. ಅದು, ಶರೀರ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವುಗಳನ್ನು ಮೀರಿದ ಅವಸ್ತೆ. ’ ಜಗತ್ತಿನ ನಿಯಾಮಕ   ಭಗವಂತನೇ ಎಲ್ಲೆಲ್ಲಿಯೂ, ಎಲ್ಲರಲ್ಲಿಯೂ ಇದ್ದು ಬಾಳನ್ನುನಡೆಸುತ್ತಾನೆ. ಇದಕ್ಕೆ ಉದಾಹರಣೆ;
ಕನ್ನಡಿಯಲ್ಲಿ ಚಿಕ್ಕ ನಾಮನ್ನೀಡಬೇಕಾದರೆ, ಅದರಲ್ಲಿ ಕೈ ಹೋಗುವುದಿಲ್ಲ. ಅದು ಪ್ರತಿಬಿಂಬಕ್ಕೆ ಹೋಗುತ್ತದೆ. ಅದಕ್ಕೆ ಉತ್ತಮ ಮಾರ್ಗ
ನಾವೇ ನಾಮವನ್ನು ಇಟ್ಟುಕೊಳ್ಳುವುದು.  ಹಾಗೆಯೇ ನಾನು ಎಂಬ ವಸ್ತು ವಿಶ್ವವ್ಯಪಿಯಾದರೆ ಬದುಕು ಸಾರ್ಥಕವಾಗುವುದು.
ಅಂತೆಯೇ, ಒಮ್ಮೆ, ಭಕ್ತನನ್ನು ಕೆಳುತ್ತಾರೆ. ’ನೀನು ಒಂದು ದಿನ ಸ್ಮಶಾನದಲ್ಲಿರು. ಮತ್ತೆ ಯಾರಾದರೂ ಇದ್ದರೆ ಹೇಳುಎಂದು ಕೇಳಿದಾಗ ಬೆಳಿಗ್ಗೆ
ಯಾರೂ ಇರಲಿಲ್ಲವೆಂದನು. ’ನೀನು ಇರಲಿಲ್ಲವೇಎಂದಾಗ, ಅವನಿಗೆ ಇರುವಿಕೆಯ ಅರಿವಯಿತು. ಇದೇ, ’ಆತ್ಮ ಜ್ಞಾನ.’
ಇಲ್ಲಿರುವ ಗಿರಿಯನ್ನು ಸುತ್ತಿ ಬಂದರೆ, ಅದೇಗಿರಿವಲಂ’. ವರ್ಷಕ್ಕೊಮ್ಮೆ ನಡೆಯುವಕಾರ್ತಿಕ ದೀಪಂಉತ್ಸವ ಜಗತ್ ಪ್ರಸಿದ್ಧ. ಗಿರಿಯ
ಜ್ಯೊತಿ ಎಲ್ಲೆಲ್ಲೂ ಬೆಳಗುತ್ತದೆ.
ಪಂಚಭುತಗಳಲ್ಲಿ ಅಗ್ನಿಯ ಅಂಶ ಇಲ್ಲಿದೆ. ’ಅಗ್ನಿಯು ನಾವು ನಡೆಸುವ ಹೋಮಗಳ ಹವಿಸ್ಸನ್ನು ದೇವತೆಗಳಿಗೆ ಅರ್ಪಿಸಿ, ಅವರಿಂದ ನಲ್ಮೆ
ಪಡೆಯುವಂತೆ, ಸಮಸ್ತ ಅಪರಾಧಗಳನ್ನೂ ದಹಿಸುತ್ತದೆ. ಅಂತಯೆ, ನಮ್ಮಲ್ಲಿರುವ ದುಷ್ಟ ಬಯಕೆಗಳನ್ನು ನಿರ್ನಾಮಗೊಳಿಸಿ, ಜ್ಞಾನವನ್ನಿತ್ತು
ಪಾರಮಾರ್ಥದತ್ತ ಕೊಂಡೊಯ್ಯುವ   ಮಾತೆ ಇಲ್ಲಿದ್ದಾಳೆ.[ ಅಪಿತ ಕುಚಾಂಬಾಳ್].
ಶ್ರೀ ರಾಮಾಯಣದಲ್ಲಿ ಮಾತೆ ಸೀತೆಯು ಅಗ್ನಿಪರೀಕ್ಷೆಯಲ್ಲಿ ಶುದ್ಧವಾಗಿ ಜಯಿಸಿ ಬರುವಳಲ್ಲವೇ.ನಂತರ ಪದ್ಮಾವತಿಯಾಗಿ ಶ್ರೀ ಶ್ರೀನಿವಾಸ-
ನನ್ನು ವರಿಸಲಿಲ್ಲವೇ. ಶಿವನ ಹಣೆಗಣ್ಣಿನ ತೇಜಸ್ಸು ಮುರುಗನಾಗಿ ಬಂದು ಕೂಡಿಸಲಿಲ್ಲವೇ. ಶ್ರೀ ಅಪಿತ ಕುಚಾಂಬಾಳ್,ಮಾತೆಯ ನಾಮಧೇಯ.
ರಮಣೀಯ ಕ್ಷೇತ್ರ. ಶ್ರೀ ರಮಣರ ತಾಣ. ರಮ್ಯವಾದ ವಾತಾವರಣ. ಶ್ರೀ ಅರುಣಾಚಲೇಶ್ವರನ ಅಡಿದಾವರೆಯಲ್ಲಿ ಐಕ್ಯವಾಗಲು ಅಪೂರ್ವ
ಅವಕಾಶ.
===========================================================================================================================
.೧೩.ಶ್ರೀ ಕಾಳಹಸ್ತೀಶ್ವರ.ಮತ್ತು ಪಾರ್ವತಿ ದೇವಿ
================================================
ಹರಿಹರರು ಬೇರಲ್ಲ ಎಂಬ ನಾಣ್ಣುಡಿಯನ್ನು ಸತ್ಯವಾಗಿಸಲು ಶ್ರೀ ಶಂಕರನಾರಾಯಣರು ಒಂದಾಗಿದ್ದಾರೆ. ತಿರುಪತಿಯಲ್ಲಿ ಶ್ರೀ ಶ್ರೀನಿವಸ
ಬಳಿಯ ಕಾಳಹಸ್ತಿಯಲ್ಲಿ ಶ್ರೀ ಕಾಳಹಸ್ತೀಶ್ವರ ಇಬ್ಬರೂ ಬಳಿಯಲ್ಲಿದ್ದಾರೆ.
ಶ್ರೀ ಶ್ರೀನಿವಸನು ಗಿರಿಯ ಮೇಲೆ ಭಕ್ತರನ್ನು ಅನುಗ್ರಹಿಸಿದರೆ,ಶ್ರೀ ಪರಮೇಶ್ವರನು ಪಾರ್ವತಿಯೊಂದಿಗೆ ಅನುಗ್ರಹಿಸುತ್ತಿದ್ದಾನೆ.
ರಾಹುದೋಷದಿಂದ ಮದುವೆಯಾಗದ ಕನ್ಯಾಮಣಿಗಳು ಇಲ್ಲಿ ಬಂದು ಪರಿಹಾರ ನರವೇರಿಸಿದರೆ ಅವರ ವಿವಾಹ ನಿಶ್ಚಯ.
ಪಂಚಭೂತಗಳಲ್ಲಿ ಒಂದಾದ ವಾಯು ರೂಪದಲ್ಲಿ ಶ್ರೀ ಪರಮೇಶ್ವರ ಇದ್ದಾನೆ. ಮನುಷ್ಯನಿಗೆ ಎಷ್ಟೇ ಅವಯವಗಳಿದ್ದರೂ ಪ್ರಾಣವಿಲ್ಲದಿದ್ದರೆ
ಅವನು ಜಡ. ಅದು ಯಾವಾಗ ಹೊರಹೋಗುವುದೇಂಬುದು ತಿಳಿಯದ ವಿಷಯ.ಆದರೆ ನಿಶ್ಚಯ.ಶ್ರೀ ಶಿವನ ಅಡಿದಾವರೆಗೆ ಎರಗಿದರೆ, ಸಾವಿನ ಭಯದಿಂದ ಬಿಡುಗಡೆ. ಬೇಡನಾಗಿದ್ದ ಕಣ್ಣಪ್ಪನು ಮಾಂಸವನ್ನೇ ನೈವೇದ್ಯ ಮಾಡಿ, ಶಿವನ ಕಣ್ಣಲ್ಲಿ ರಕ್ತ ಬಂದಾಗ,ತನ್ನ ಕಣ್ಣನ್ನೇ ದಾನವಾಗಿತ್ತ. ’ಬೇಡರ ಕಣ್ಣಪ್ಪಎಂದು ಖ್ಯಾತನಾದ.
ಮ್ರುಕಂಡುವಿನ ಸುತ ಮಾರ್ಕಂಡೇಯನು ಅಲ್ಪಾಯುಷಿಯಾದರೂ, ಶಿವನನ್ನು ಧೃಢವಾಗಿ ಆರಾಧಿಸಿ, ಯಮನ ಮುಷ್ಟಿಯಿಂದ ತಪ್ಪಿ ದೀರ್ಘಾಯುವಾದ.
ಒಳ್ಳೆಯ ವಂಶದಲ್ಲಿ ಜನಿಸಿದ್ದರೂ, ದುಷ್ಚಟಗಳಿಗೆ ಬಲಿಯಾದ ಮಹಿಳೆಯೊಬ್ಬಳು, ಕುರುಡಿಯಾಗಿ ಅನ್ನವಿಲ್ಲದೇ, ಬೆಂದು, ಬವಳಿಯಾಗಿ,
ಯಾತ್ರಿಕನಿತ್ತ ಬಿಲ್ವಪತ್ರೆಯನ್ನು ಶಿವನ ಮೇಲೆ ಹಾಕಿ, ಶಿವರಾತ್ರಿಯಂದು ಉಪವಾಸವಿದ್ದು, ಮರಣಹೊಂದಿದ್ದರಿಂದ ಶಿವಲೋಕ ಪ್ರಾಪ್ತಿಯಾಯಿತು.[ಗುರುಚರಿತ್ರೆ].
ಶ್ರೀ ಶೈಲದಲ್ಲಿ ಪಾರ್ವತಿ ಮಾತೆಯು ಹರಸಲು ಭವ್ಯವಾಗಿ ನಿಂತಿದ್ದಾಳೆ. ಅಪೂರ್ವ ತೇಜಸ್ಸು, ಹುಸಿನಗೆ, ಅಭಯ ಮುದ್ರೆ, ಅಪೂರ್ವ ಗಾಂಭಿರ್ಯ, ನೋಡುತ್ತಿರಲೇಬೇಕೆನ್ನುವ ಆಕರ್ಷಣೆ.  ಮುದದಿಂದ ಐಕ್ಯವಾಗುವ ಮನಸ್ಸು, ಭಕ್ತರನ್ನು, ಭಕ್ತಿಪಾಶದಿಂದ ಕಟ್ಟಿಹಾಕಿ, ಭುವಿಯನ್ನು ಮರೆಸಿ,ಭವ್ಯ ಮೋಕ್ಷದತ್ತ ಕರೆದೊಯ್ಯುವ ಅಭಯ, ಹಿಂತಿರುಗಲು ಒಪ್ಪದ ಮನ.
ತಾಯನ್ನು ನೋಡುತ್ತಾ, ತನ್ನತ್ತ ತುಂಭಿಕೊಳ್ಳುವ ತನ್ಮಯತೆ,  ಪಾಪ ಮಾಡಿದವರನ್ನು, ’ಅಯ್ಯೋ ಪಾಪಎಂದು ಕನಿಕರಿಸಿ, ಅನುಗ್ರಹಿಸುವ, ಅನುಪಮ ಕಾರುಣ್ಯಮಾತೆ.’ಕಾಲನ ಪಾಶವನ್ನು ಕಡೆಗಣಿಸಿ, ತನ್ನತ್ತ ಕರೆದೊಯ್ಯುವ ಕೈಲಾಸನಾಥನ ಮನದನ್ನೆಯಲ್ಲವೇ.
ದ್ರೌಪದಿಯ ಕರೆಗೆ ಧಾವಿಸಿ ಬಂದ ದಾಮೋದರನಂತೆ, ತನ್ನ ಭಕ್ತರನ್ನು ಒಡನೇ ಕಾಯಲು ನಿಂತು, ಕರೆ ಕೇಳಿದೊಡನೆ, ಧಾವಿಸಿ ಬರುವ ದಯಾಮೂರ್ತಿಯಲ್ಲವೇ, ಮಾತೆ.
==================================================================================

=೧೩.   ತಿರುವೇರ್ಕಾಡು ಕರುಮಾರಿ ಅಮ್ಮನ್
-----------------------------------
ತಿರು ಎಂದರೆ ಲಕ್ಷ್ಮಿ. ವೇರ್ =ಬುಡ ಕಾಡು =ವನ. ಸಂಪತ್ಪ್ರದಾತೆ ಶ್ರೀ ಲಕ್ಶ್ಮಿ. ಅದರಲ್ಲಿ ಅತ್ಯುತ್ತಮ ಹಿರಿಯದಾದ ಸಂಪತ್ತು
ಆತ್ಮಜ್ಞಾನ. ಅದರ ಉದ್ದೇಶ ಮೋಕ್ಷ ಭಗವಂತನ ಸಾನ್ನಿದ್ಯ.
ವೇರ್ ಎಂದರೆ ಬುಡ. ಎಂದರೆ ಯಾವುದು ಮೂಲ. ಒಳ್ಳೆಯ ಬೀಜವನ್ನು ಆಯ್ದು, ನೆಟ್ಟು, ಉತ್ತಮ ಗೊಬ್ಬರವನ್ನು ಹಾಕಿ, ಜಲಪ್ರಯೋಗ ಮಾಡಬೇಕು. ಮಳೆಯ ಕೃಪೆಯೂ ಬೇಕು. ಗಿಡ ಹೆಮ್ಮರವಾಗಿ, ಪುಷ್ಪ, ನಂತರ ಫಲಗಳನ್ನು ಕೊಡುವುದು. ಅದನ್ನು ಸಂಗ್ರಹಿಸಿ, ಆಸ್ವಾದಿಸಿ, ಪಡೆಯುವುದೇ, ಅಪರಿಮಿತ
ಅಭಯವೇ
ಅನಂದವಾಗುತ್ತದೆ. ಮಾನವನು ಪಲಾಪೇಕ್ಷೆಪಡುವುದರೊಂದಿಗೆ, ’ಹೃದಯವೆಂಬ ತೋಟದಲ್ಲಿ, ಭಕ್ತಿಯ ಬೀಜವನ್ನು ಬಿತ್ತಿ, ಸಾಧನೆಯೆಂಬ
ಗೊಬ್ಬರವನ್ನು ಹಾಕಿ, ನಂತರ ನವವಿಧಭಕ್ತಿಯನ್ನು ಸಿಂಪಡಿಸಿದರೆ, ಬರುವ ಹೆಮ್ಮರವೇ ಭಗವಂತನ  ’ಸಾಕ್ಷಾತ್ಕಾರ.’ ಅವನ ಅಭಯವೇ ನೆರಳು. ನೆರಳಿನಲ್ಲಿ ತಂಪಾಗಿ ತಂಗಿ, ನಂತರ ಅವನ ಕರುಣೆಯೆಂಬ ಫಲವನ್ನು ಪಡೆದು, ಎಲ್ಲರೋಡನೆ ಹಂಚಿಕೊಂಡಾಗ,
ಆಗುವ ಆನಂದ ಅಪರಿಮಿತ. ’ತಾಯಿ ತಪ್ಪು ಮಾಡಿದ ಮಗನನ್ನು ಮೊದಲು ಗದರಿಸುವಳು, ನಂತರ ಮೃದು ಏಟು. ಇಲ್ಲ, ಕೋಣೆಯಲ್ಲಿ ಕೂಡಿ-ಹಾಕುವುದು. ಅಂತಿಮವಾಗಿ, ಉತ್ಕಟತೆಯನ್ನು ಮುಟ್ಟಿದಾಗ, ಪರಮಾತ್ಮ ತನ್ನ ಬಳಿ ಸೆಳೆದುಕೊಳ್ಳುವನು. ಶಕ್ತಿಯ ಪ್ರತಿರೂಪವೇದೇವಿ ಕರುಮಾರಿಯಮ್ಮನ್.’ ;ಮುಂಚೆ ಅಷ್ಟಾಗಿ ಪ್ರಸಿದ್ಧಿ ಪಡೆಯದ ಪ್ರದೇಶ, ಇಂದು ತಮಿಳುನಾಡಿನಲ್ಲಿ ಮನೆಮಾತಾಗಿದೆ. ಚೆನ್ನೈಯಿಂದ, ಸುಮಾರು ೪೦ ನಿಮಿಷಗಳ ಪಯಣ. ವಿಶಾಲವಾದ ದೇಗುಲ. ವಿನಾಯಕನ ಸ್ವಾಗತ. ಭಕ್ತವೃಂದ ಅಪಾರ.
ಶುಕ್ರವಾರ ಮತ್ತು ಮಂಗಳವಾರ ಅತಿ ಹೆಚ್ಚು ಜನಸಾಗರ.
ಮಾತೆ ಸ್ವಯಂಭುವಾಗಿದ್ದಾಳೆ. ಇದರ ಜೊತೆ, ಜಲ, ಕ್ಷೀರ, ಎಳನೀರು, ಇವುಗಲಿಂದ ಅಭಿಷೇಕ ಗೊಂಡು, ಮಂಗಳ ದ್ರವ್ಯ, ಹರಿದ್ರಾಕುಂಕುಮಗಳಿಂದ ಅಲಂಕೃತಳಾಗಿ, ಅರ್ಚಿಸಲ್ಪಟ್ಟು, ಭಕ್ತರಿಗೆ,ಶಾಂತಿಯನ್ನೂ, ಅಯು, ಆರೋಗ್ಯ, ಸಂಪದ, ಸಮಸ್ತವನ್ನೂ ನೀಡುತ್ತಾಳೆ.
ಮಾರಿಯಮ್ಮ ಎಂದರೆ, ಸಾಮಾನ್ಯವಗಿ,’ ನಗರ ಕಾಯುವ ದೇವತೆ..’ಈಕೆ ವಿಶ್ವವನ್ನೇ ಕಾಯುವ ದೇವತೆ.’ಅಸುರರು ಯಾವ ಸಮಯದಲ್ಲಾದರೂ ಆಕ್ರಮಿಸಬಹುದು. ಅಂತೆಯೇ, ಅಸುರರನ್ನು ಅಳಿಸಲು ತಾಯಿ ಸದಾ ಸಿದ್ಧ. ಆರಿಷಡ್ವರ್ಗ, ಅಹಂಕಾರ, ಆಸೆ, ದ್ವೇಷ, ಈರ್ಷೆ, ಅಸುರರನ್ನು ಹತ್ಯೆ ಗೈಯ್ಯದೆ, ನಮಗೆ ನಲ್ಮೆ ದೊರಕದು.ಜೊತೆಗೆ, ಸರ್ಪರಾಜನು ಕಾವಲಿದ್ದಾನೆ. ಅವನ ಬುಸುಗುಟ್ಟುವಿಕೆಗೇ ಅಸುರರು ಹೆದರಿ ಓಡಿ ಹೋಗುತ್ತಾರೆ. ಅಂತೆಯೇ, ತಾಯಿ ತನ್ನ ಮಕ್ಕಳನ್ನು ರಕ್ಷಿಸಲು, ಸಿಂಹವಾಹಿನಿಯಾಗಿ, ಶೂಲಧರಿಣಿಯಾಗಿ, ಸಿದ್ಧವಾಗಿದ್ದು, ಎರಗುವ, ದುಷ್ಟ ಶಕ್ತಿಗಳನ್ನು ಸಂಹರಿಸಿ, ವಾತಾವರಣವನ್ನು,ತಿಳಿಗೊಳಿಸಿ, ಸಜ್ಜನರ ಭಯವನ್ನು ಹರಿಸಿ, ತನ್ನ ಅಭಯ ಹಸ್ತವನ್ನು ಭಕ್ತರ ಶಿರದ ಮೇಲಿರಿಸಿ, ಜ್ಞಾನವನ್ನು ಕರುಣಿಸಿ, ತನ್ನ ಬಳಿಕರೆಸಿ, ಅಪೂರ್ವ ವರವಾದಮೋಕ್ಷವರವನ್ನು ಕರುಣಿಸುತ್ತಾಳೆ.
=========================================================================================================================
-೧೪.ಮಾಂಗಾಡು ಕಾಮಾಕ್ಷಿ
===============================================
ತಿರುವೇರ್ಕಾಡಿನಂತೆಯೇ ಇದು ಪವಿತ್ರ ಕ್ಷೆತ್ರ. ಏಕೆಂದರೆ, ಮಾಂಗಾಡು ಎಂದರೆ, ಮಾವಿನ ತೋಪು. ಒಂದು ಕಾಲದಲ್ಲಿ ಮಾವಿನ ಮರವೇ ದಟ್ಟ ಕಾಡಾಗಿತ್ತು.
ಮಾವಿನ ವಿಶೇಷವೇನು. ಹಳೆಯ ಓಟೆಯನ್ನೇ ಬಿತ್ತರೆ ಹೆಮ್ಮರವಾಗುತ್ತದೆ. ಮಾವಿನ ಎಲೆ, ಮನೆಯಲ್ಲಿ, ಶುಭ ಕಾರ್ಯಗಳಿಗೆ ಮನೆಯಲ್ಲಿ ಉಪಯೊಗವಾಗುತ್ತದೆ.ಶುಭ ಕಾರ್ಯಗಳಲ್ಲಿ, ಎಲೆಗಳನ್ನು, ದಾರ ಕಟ್ಟಿ, ಕಡ್ಡಿಗಳಿಂದ ಪೋಣಿಸಿ ಕಟ್ಟುವುದು ಒಬ್ಬರಿಂದ ಸಾಧ್ಯವಿಲ್ಲ. ಆದ್ದರಿಂದ ಎಲ್ಲರ ಸಹಕಾರ ಎಂಬ ದಾರಕ್ಕೆ ಒಂದೊಂದು ಎಲೆಯನ್ನೂಬೆಂಬಲಎಂಬ ಕಡ್ಡಿಯಿಂದ ಒಂದು ಗೂಡಿಸಿದರೆ, ತೋರಣವಾಗುವದು.ಮಾವಿನ ಕಾಯಿ ಅನ್ನ, ಗೊಜ್ಜು, ಉಪ್ಪಿನಕಾಯಿ, ಬಲು ರುಚಿ. ಹುಳಿಯೇ ಅದರ ಕೇಂದ್ರ ಬಿಂದು.  ಅಂತೆಯೇ, ಪೂರ್ವಜನ್ಮದ ಸತ್ಕಾರ್ಯವೆಂಬ ಓಟೆಯನ್ನು
ನೆಟ್ಟು, ಪ್ರಯತ್ನವೆಂಬ ಜಲ ಎರೆದು ಬಂದ ಮವಿನ ಹಣ್ಣನ್ನು, ಆಸೆ,ಬಯಕೆ ಎಂಬ ಸಿಪ್ಪೆಯನ್ನು ತೆಗೆದು, ಜ್ಞಾನವೆಂಬ ಕತ್ತಿಯಿಂದ ಕತ್ತರಿಸಿ ಹೋಳಾಗಿಸಬಹುದು. ಬರಿ ಓಟೆಯೂ ಇರುತ್ತದೆ. ನಾಮಸ್ಮರಣೆ, ಪೂಜೆ, ಇವುಗಳು ಹೋಳಾದರೆ, ತಪಸ್ಸು, ಜಪ, ಎಲ್ಲರಿಗೂ ಸಾಧ್ಯವಿಲ್ಲ. ಹಿಂದೆ ಋಷಿ ಮುನಿಗಳು ತಪಗೈಯ್ಯುತ್ತಿದ್ದರು. ಅದರಿಂದ ಗಳಿಸಿದ ಫಲವನ್ನು ಲೋಕಕ್ಷೇಮಕ್ಕೆ ಬಳಸುತ್ತಿದ್ದರು.ಕೆಲವು ಅಸುರರು ತಪ ಮಾಡಿದಾಗ, ಫಲವನ್ನು ಲೋಕಕಂಟಕಕ್ಕೆ ಬಳಸುತ್ತಿದ್ದರು. ಅವರ ಅಟಾಟೋಪವನ್ನು ತಡೆಯಲು ಶಕ್ತಿಯ ಉದ್ಭವ.
ಅದರಲ್ಲಿ ಶೂರಪದ್ಮನ  ನಿಗ್ರಹಕ್ಕೆ ಶ್ರೀ ಸುಬ್ರಮಣ್ಯನ ಅವತಾರವಾಗಬೇಕಾಯಿತು. ಅದಕ್ಕೇ ಶ್ರೀ  ಪಾರ್ವತಿ-ಪರಮೇಶ್ವರ ವಿವಾಹದ ಅವಶ್ಯವಾಯಿತು. ಅಸುರರ ಹಿಂಸೆಯೇ, ಅವರ ಅಳಿವಿನ ಕೋಪವಾಗಿ ಸನತ್ಕುಮಾರರು ಮುರುಗನಾಗಿ ಜನಿಸಲು ಕಾರಣವಾಯಿತು.
ತಾಯಿ ಉಮೆ ಹಿಮವಾನನ ಮಗಳಾಗಿ ಜನಿಸಿ, ಶಿವನನ್ನೇ ಪತಿಯಾಗಿ ಪಡೆಯುವ ಉದ್ದೆಶದಿಂದ ಪಂಚಾಗ್ನಿಯಲ್ಲಿ ಘೋರ ತಪಸ್ಸನ್ನು ಗೈಯ್ಯುತ್ತಾಳೆ.
ಪರೀಕ್ಷಿಸಲು ವೃದ್ಧನ ವೇಶದಲ್ಲಿ ಬಂದ ಪರಶಿವನನ್ನು ಮೃದುವಾಗಿ ಛೇಡಿಸಿ, ತನ್ನ ಅವಿಛಿನ್ನ ಪ್ರೇಮದಿಂದ ಶಿವನನ್ನು ವರಿಸುತ್ತಾಳೆ.
ಕಾಮದಹನವಾಗಿ, ಶಣ್ಮುಖನು ಜನಿಸಿ, ಆರುಮುಗನಾಗಿ, ವಳ್ಳೀಪತಿಯಾಗಿ, ದೇವಸೇನಾಪತಿಯಾಗಿ, ಶ್ರೀ ಸುಬ್ರಮಣ್ಯನಾಗಿ ಹರಸುವ ಕತೆ ಸರ್ವವೇದ್ಯ.
ಸೂಜಿ ಯಾವಾಗಲು ನೆಟ್ಟ ದೃಷ್ಟಿಯುಳ್ಳದ್ದು. ತುದಿಯಲ್ಲಿ ಮೊನಚು. ದಾರವನ್ನು ಪೋಣಿಸುವಾಗ ರಂದ್ರದಲ್ಲಿ ನಾಜೂಕಾಗಿ ಸೇರಿಸಬೇಕು. ನಂತರ ಕಾರ್ಯ 
ಸುಲಭ. ಒಂದೊಂದು ಹೂವೂ ಕಟ್ಟಿದನಂತರ ಹಾರವಾಗಿ ಭಗವಂತನನ್ನು ಸೇರುವುದು.
ಹಾಗೆಯೇ, ಜೀವಾತ್ಮ ಪರಮಾತ್ಮನನ್ನು ಸೇರಲು, ಏಕಾಗ್ರತೆಯೆಂಬ ಸೂಜಿ ಅವಶ್ಯ. ಅದರಲ್ಲಿ ಅನುಸಂಧಾನವೆಂಬ ಹಾರವನ್ನು ಮನಸ್ಸೆಂಬ ಸಣ್ಣ ರಂಧ್ರದಲ್ಲಿ ಪೋಣಿಸಿ, ಸಾಧನೆ, ನಾಮಸ್ಮರಣೆ, ಸೇವೆಯೆಂಬ ವಿವಿಧ ಹೂವುಗಳನ್ನು ಪೋಣಿಸಿದಾಗ ಅರ್ಪಣೆಯೆಂಬ ಮಾಲೆಯಾಗುತ್ತದೆ. ಅದಕ್ಕೆ,ಭಕ್ತಿಯೆಂಬ ಸುವಾಸನೆಯನ್ನು ಸೇರಿಸಿ, ಭಗವಂತನಿಗೆ ಅರ್ಪಿಸಿದಾಗ, ಅವನ ಕೊರಳಿನಲ್ಲಿಐಕ್ಯಎಂಬ ಮಾಲೆಯಾಗಿ ಶೋಭಿಸುತ್ತದೆ. ಅನಂತರ
ಅವನಿಂದ ದೊರಕುವ ವರ ಅವನಂಘ್ರಿಯಲ್ಲಿ ಐಕ್ಯ, ಮಿಲನ. ಇದೇ, ಮಾಂಗಾಡು ಮಹಾತಾಯಿಯ ಕ್ಷೇತ್ರದ ಮಹತ್ವ.
-೧೫. ಅನ್ನೈ ಅಭಿರಾಮಿ
-------------------- 
ಪಂಚಭೂತಗಳನ್ನು ಸ್ರುಷ್ಟಿಸಿದ್ದಾನೆ.ಆಕಾಶ ಮಳೆಯನ್ನು
ಕೊಟ್ಟರೆ, ಅಗ್ನಿ, ಶಾಖವನ್ನು ಕೊಟ್ಟು, . ಜಲ ಶರೀರ ಮತ್ತು ಮನಶುದ್ಧಿಗೆ ಕಾರಣವಾಗಿ ಬಾಯಾರಿಕೆಯನ್ನು ತಣಿಸಿದರೆ, ಶರೀರ, ಅವಯವ ಗಳಿದ್ದು, ಪ್ರಾಣವಿಲ್ಲದಿದ್ದರೆ, ಅದುಜಡಎನಿಸುವುದು. ಇದಕ್ಕೆ ಜೊತೆಯಾಗಿ, ಮನ, ಚಿತ್ತ,ಭುದ್ಧಿ, ಅಹಂಕಾರ, ಇವು ಸಹಚರಿಗಳು.ಜಗತ್ತಿನ ಪ್ರತ್ಯಕ್ಷ ದೈವ ಸೂರ್ಯ. ಮಾನವನನ್ನು ಎಚ್ಚರಿಸಿ, ಕ್ರಿಯಾಶೀಲನನ್ನಾಗಿ ಮಾಡುವುದರ ಜೊತೆಗೆ, ಸಸ್ಯಗಳ ಬೆಳವಣಿಗೆಗೆ,
ಬೆಳಕು ಅವಶ್ಯ. ಹಗಲು ಚಟುವಟಿಕೆಯ ಕಾಲವಾದರೆ, ರಾತ್ರಿ, ಚಂದ್ರನು ತನ್ನ ತಂಪಿನ ಕಿರಣಗಳಿಂದ ಆಕರ್ಷಿಸುವನು. ಇದರ ಜೊತೆಗೆ ತಾರಾ ಸಮೂಹ ನಕ್ಷತ್ರ ಮಾಲೆ, ಗಗನಕ್ಕೆ ಹಾಕಿದಂತೆ ಇರುವುದು.ಕಾಲದ ಆರೋಹಣ-ಅವರೋಹಣ ಎಂದರೆ, ಸೂರ್ಯನು ವೃದ್ಧಿಸುವ ಕಾಲಕ್ಕೆ ಉತ್ತರಾಯಣವೆಂದೂ, ಶುಭಕರವೆಂದೂ, ದಕ್ಷಿಣಾಯಣವೆಂದರೆ ಇಳಿತದ ಸರದಿ ಎಂದು ಪ್ರತೀತಿ. ಮರಣಕ್ಕೂ ಉತ್ತರಾಯಣವೇ ಸ್ವಾಗತಾರ್ಹ. ಪಿತಾಮಹ ಭೀಷ್ಮರು ಇಚ್ಚಾ ಮರಣಿಯಾದರೂ, ತಮ್ಮ ಕೊನೆಗೆ ಉತ್ತರಾಯಣವನ್ನೇ ಆಯ್ಕೆ ಮಾಡಿದರು.ಅಂತೆಯೇ, ಚಂದ್ರನು ವೃದ್ಧಿಯಾಗುವುದು, ಅಮಾವಾಸ್ಯೆಯಿಂದ ಪೌರ್ಣಮಿಯವರೆಗೆ. ನಂತರ ಇಳಿತ ಪೌರ್ಣಮಿಯಿಂದ ಅಮಾವಾಸ್ಯೆಯವರೆಗೆ.
ಪಿತೃಕಾರ್ಯಕ್ಕೆ ಅಮಾವಾಸ್ಯೆ ಪ್ರಶಸ್ತವಾದರೆ ಶ್ರೀ ಸತ್ಯನಾರಾಯಣ ಪುಜೆಗೆ ಪೌರ್ಣಮಿ ಪ್ರಶಸ್ತ.ಪ್ರಕೃತಿ ಮಾತೆ ಅಭಿರಾಮಿಯು ತಿರುಕಡೈಯೂರಿನಲ್ಲಿನೆಲೆಸಿದ್ದಾಳೆ. ಮುಗ್ಧ ಮೋಹನ ರೂಪ ಆಕರ್ಷಕ. ಅನುಕಂಪ, ದಯೆಯ ಪ್ರತಿರೂಪ.
ಶ್ರೀ ಕಾಂಚಿ ಪರಮಾಚಾರ್ಯರು ಮೊದಮೊದಲು, ತಾಯಿಗೆ ತಾಟಂಕವನ್ನು ಅರ್ಪಿಸಿದರು. ’ ತಾಟಂಕ ಯುಗಳೀ ಭೂತ ಕರ್ಣಪೂರ್ಣ ಮನೋಹರಾಎಂಬುದು ಶ್ರೀ ಲಲಿತಾ ಸಹಸ್ರನಾಮದ ಒಂದು ಸಾಲು. ತಾಟಂಕವು ತಾಯಿಯ ಕರ್ಣಗಳಿಗೆ, ಅಪೂರ್ವ ಶೋಭೆಯನ್ನು ನೀಡುತ್ತದೆ ಕಿವಿಯಲ್ಲಿಭಕ್ತರ ಮೊರೆ ಕೇಳಿ ಕಾಯುತ್ತೇನೆಎಂದು ಆಶಿರ್ವದಿಸಿದಾಗ, ತಾಟಂಕವೂ ಆಡಿದರೆ ಅದೇನು ಅಂದ
ಶ್ರೀ ಅಭಿರಾಮಭಟ್ಟರು ಮಹಾನ್ ದೇವೀ ಭಕ್ತರು.ಸತ್ಯವಾಕ್ಯ ಪ್ರಿಯರು. ಅಮಾವಾಸ್ಯೆಯ ದಿನ ಪೌರ್ಣಮಿಯೆಂದರು.’ಒಪ್ಪದ ರಾಜ,ಕೆಳಗೆ ಬೆಂಕಿ ಹೊತ್ತಿಸಿ, ಅವರನ್ನು ಒಂದು ಪಂಜರದಲ್ಲಿ ನಿಲ್ಲಿಸಿ, ಹಿಂಸಿಸಿದ. ತಾಯಿಗೆ ಶರಣಾದರು ಭಟ್ಟರು. ತಾಯಿ ಬಿಡುವಳೇ.ಅವರ ನುಡಿಯನ್ನುನಿಜಗೊಳಿಸಲು, ತನ್ನ ತಾಟಂಕವನ್ನು ಎಸೆಯಲು, ಬೆಳಕಿನ ಪ್ರಖರದಲ್ಲಿ ಜಗತ್ತೇ ಮತ್ತೊಂದು ಚಂದ್ರನಂತೆ ಪ್ರಕಾಶಿಸಿತ್ತು.ಘಾಭರಿಗೊಂಡ ಅರಸ ಭಟ್ಟರ ಕ್ಷಮೆ ಕೇಳಿದ.
ಸೂರ್ಯನನ್ನು ನಿಲ್ಲಿಸಲು ಅನುಸೂಯೆಯು ಪ್ರಾರ್ಥಿಸಿ, ಪಾತಿವ್ರತ್ಯದ ಮಹಿಮೆಯನ್ನು ಬೆಳಗಲಿಲ್ಲವೇ. ಸೂರ್ಯನ ಕುಲದಲ್ಲಿ ಜನಿಸಿದ ಶ್ರೀ ರಾಮಚಂದ್ರನುಧರ್ಮ ಸೂರ್ಯನಾಗಿ  ಮೆರೆಯಲಿಲ್ಲವೇ.
ಅಖಿಲವನ್ನು, ಅಖಂಡ ಅನುಗ್ರಹದಿಂದ ಅವಿರತವೂ, ಆಶ್ರಯ ನೀಡುವ ಅಭಿರಾಮಿಯ ಆಶೀರ್ವಾದ ಅಹರ್ನಿಶಿ ಇರಲು ಆಶಿಸೋಣವೇ

ಅಧ್ಯಾಯ-.
==========

ಮಹಾಲಕ್ಷ್ಮಿ
=============
ಸೃಷ್ಟಿ, ಸ್ಥಿತಿ, ಲಯಗಳಲ್ಲಿ ಸ್ಥಿತಿಯ ಪಾತ್ರ ಮಹತ್ವದ್ದು. ಯಾರನ್ನಾದರೂ, ಯಾವಾಗ ಹುಟ್ಟಿದೆ ಅಥವಾ ಯಾವಾಗ ಸಾಯುವೆ, ಎಂದು ಕೇಳುವುದಿಲ್ಲ.ಹೇಗಿದ್ದೀರಿಎಂದು ಕೇಳುತ್ತಾರೆ.
ರಕ್ಷಣೆಯ ಕಾರ್ಯವನ್ನು ಹೊತ್ತ ಮಹಾವಿಷ್ಣುವೇ ದೇವತೆಗಳಲ್ಲೇ ಅತ್ಯುತ್ತಮ ಎಂದುನಿರೂಪಿಸಲಾಗಿದೆ. ಹಿಂದೆ, ಋಷಿಗಳು ಒಮ್ಮೆ ಸಭೆ ಸೇರಿ,ಯಾವ ದೇವರು ಉತ್ತಮ’, ಎನ್ನಲು, ಶ್ರೀ ಹರಿಯೇ ಸರ್ವೊತ್ತಮ’, ಎಂದು ಶ್ರೀವತ್ಸರು ಘೋಶಿಸುತ್ತಾರೆ.
ಇದಕ್ಕೆ, ಪೂರಕವಾಗಿ, ಶ್ರೀ ಭೃಗು ಮಹರ್ಶಿಗಳು, ಬ್ರಹ್ಮ, ಶಿವರು
ಪತ್ನಿಯರೊಡನೆ ಸಂತೋಷದಿಂದಿರಲು, ಅವರನ್ನು ಶಪಿಸಿ, ವೈಕುಂಠ-
ದಲ್ಲಿ, ಅತಿ ಕ್ರೋಧಗೊಂಡು, ಶ್ರೀ ವಿಷ್ಣುವಿನ ವಕ್ಷಸ್ಥಳಕ್ಕೆ ಒದೆ-
ಯಲು, ಕೋಪಗೊಂಡ ಮಹಾಲಕ್ಷ್ಮಿ, ಬಿಟ್ಟು, ತೆರಳಿ, ಕೊಲ್ಲಾಪುರದಲ್ಲಿ ನೆಲೆಗೊಂಡಳು.  
ಶ್ರೀ ಲಕ್ಶ್ಮಿಯು ಕ್ಷೀರಾಬ್ಧಿಯಲ್ಲಿ ಜನಿಸಿ, ಶ್ರೀಹರಿಯನ್ನು, ವಿವಾಹವಾಗಿ, ಕಮಲಾಸನೆಯಾಗಿ, ಗಜವಾಹಿನಿಯಾಗಿ, ಅಷ್ಟೈಶ್ವರ್ಯಗಳನ್ನು ನೀಡುವ ಅಷ್ಟಲಕ್ಷ್ಮಿಯಾಗಿದ್ದಾಳೆ.
ಮೊದಲು ಧನ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ಸಂತಾನ
ಲಕ್ಷ್ಮಿ, ವೀರ ಲಕ್ಷ್ಮಿ, ವಿಜಯ ಲಕ್ಷ್ಮಿ, ಗಜ ಲಕ್ಷ್ಮಿ, ವಿದ್ಯಾ-ಲಕ್ಷ್ಮಿ, ಎಂದು ಬೆಳಗುತ್ತಿದ್ದಾಳೆ.
ಬಾಳಲು ಮಾನವನಿಗೆ ಸಂಪತ್ತು ಅಗತ್ಯ.ಹಾಗೆಯೇ, ಸಮಸ್ಯೆಗಳನ್ನು ಎದುರಿಸಲು, ಧೈರ್ಯ ಅಗತ್ಯ.ಅದಕ್ಕೇ, ಗೌರವ ಎಂದರೆ,ಗಜದ ಪ್ರತಿರೂಪ.ಅದರಲ್ಲಿ ಏರಿ ಬರುವ ಅರಸನಿಗೆ ಎಷ್ಟು ಗೌರವ.ಬರಿಯ ಹೊಟ್ಟೆಯಲ್ಲಿ ಬಾಳಲು ಸಾಧ್ಯವೆ. ಹೊಟ್ಟೆಯ ತುಂಬ ಆಹಾರ ಅಗತ್ಯ.ವಿವಾಹವಾದರೆ ಮನೆಯನ್ನು ಬೆಳಗಲು ಮಕ್ಕಳು  ಅಗತ್ಯ. ಎದುರಾಳಿಯನ್ನು ಎದುರಿಸಲು, ಸಾಹಸ ಅಗತ್ಯ. ಬರೀ ಪಶುವಿನಂತೆ ಬಾಳಿದರೆ,’ ವಿದ್ಯಾ ವಿಹೀನ ಪಶುಃ’  ಎನ್ನುವರು.ಅಂತೆಯೇ, ಜ್ಞಾನಾರ್ಜನೆ ಅಗತ್ಯ.ಕಾರ್ಯವನ್ನು ಮಾಡಿದರೆ, ಎಲ್ಲರೂ ಬಯಸುವುದು ಗೆಲುವು  ತಾನೇ. ಆಕೆಯೇ,ಜಯಲಕ್ಷ್ಮಿ. ;ಬಾಳಿನ ಸಮಸ್ಯೆಗಳನ್ನು ಎದುರಿಸಿ, ಹೋರಾಡಿ, ಅಂತಿಮದಲ್ಲಿ ಅಚ್ಯುತನಂಘ್ರಿಯನ್ನು ಪಡೆಯುವುದೇ ಮಹೋನ್ನತ ವಿಜಯ.’ಬಹುಶಃಲಕ್ಷ್ಮಿಎನ್ನುವ ಪದವೇ, ಲಕ್ಕಿ ಎನ್ನುವ ಆಂಗ್ಲಭಾಷೆಯ ತರ್ಜುಮೆಯಿರಬಹುದು. ’ಲಕ್ಷ್ಮಿಎಂದು ಹೆಸರಿಟ್ಟು, ಪ್ರೀತಿಯಿಂದಲಕ್ಕಿ ಎಂದು ಕರೆಯುತ್ತಾರೆ. ’ಲಕ್ಕಿಎಂದರೆ, ’ಅದೃಷ್ಟ.’ಕಾಣುವುದುದೃಷ್ಟ.
ಕಾಣದ್ದುಅದೃಷ್ಟ.’ ಅದುದೈವಾನುಗ್ರಹದ ಫಲ.’ ’‘ನಾವು ಬಯಸಿದ್ದು ಬಾಳಿನಲ್ಲಿ ದೊರಕದಿದ್ದರೆ, ದೊರಕಿದ್ದನ್ನೆ ಬಯಸಬೇಕು.’

ಅಧ್ಯಾಯ-.
=============
ಹೊರನಾಡು ಅನ್ನಪೂರ್ಣೇಶ್ವರಿ
============================
ಹೊರನಾಡು ಎಂದರೆ, ವಿದೇಶ ಎಂದಲ್ಲ.ಅದು ಬಾಹ್ಯ ಪ್ರಪಂಚದಿಂದ ಬೇರೆಯಾದ ಅಧ್ಯಾತ್ಮಿಕ ಲೋಕ ಎಂದು ಅರ್ಥೈಸಬೇಕು. ಶಿವನಂತೆ ಬ್ರಹ್ಮನಿಗೂ ಐದು ತಲೆಗಳಿದ್ದುವು. ಒಮ್ಮೆ ಬ್ರಹ್ಮ್ಮನನ್ನು ಪಾರ್ವತಿಯು ಶಿವನೆಂದು ಭಾವಿಸಿ ಸಮೀಪಿಸಿದಾಗ
ಕ್ರೊಧಗೊಂಡ ಶಿವನು ಬ್ರಹ್ಮನ ಶಿರವನ್ನು ತರಿದನು. ಶಿರವು [ಬ್ರಹ್ಮ ಕಪಾಲ] ಶಿವನ ಕೈಗೆ ಅಂಟಿಕೊಂಡಿತು. ಬ್ರಹ್ಮಹತ್ಯಾ ದೋಷದ ಸಲುವಾಗಿ ಕಪಾಲ ಬಿಡಿಸಲು ಸಾದ್ಯವಾಗಲಿಲ್ಲ ಬೇಸರಗೊಂದ ಶಿವನು ಎಲ್ಲಾ ಕಡೆಯೂ ಅಲೆದು ಕಡೆಯಲ್ಲಿ ಕಾಶಿಯಲ್ಲಿ ಅನ್ನಪೂರ್ಣೇಶ್ವರಿಯ ದಯೆಯಿಂದ ಕಪಾಲವು ಬಿಕ್ಷೆಯಿಂದ ತುಂಬಿತು.
ಬ್ರಹ್ಮಹತ್ಯಾ ದೋಷವು ನಿವಾರಣೆಯಾಯಿತು.
ಅನ್ನ ಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣ ವಲ್ಲಭೇ ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹೀಚ ಪಾರ್ವತಿಹೀಗೆ, ಶ್ರೀ ಶಂಕರಾಚರ್ಯರಿಗೆ ಒಮ್ಮೆ ಬಹಳ ಹಸಿವಾಯಿತು ಆಗ ತಾಯಿಯನ್ನು ಆಹಾರಕ್ಕಾಗಿ ಬೇಡಿದರು. ಎಚೆಚೆತ್ತು. ತಾವು ಪರಿವ್ರಾಜಕರೆಂಬುದನ್ನರಿತು, ಜ್ಞಾನ-ವೈರಾಗ್ಯದ ಭಿಕ್ಷೆಯನ್ನು ಬೇಡಿದರು.
ಕಾಶಿಯಲ್ಲಿ ಗಂಗೆಯಲ್ಲಿ ಮಿಂದು, ಶಿವ-ಪಾರ್ವತಿಯರನ್ನು ಆರಾಧಿಸಿ, ಅನ್ನಪೂರ್ಣೇಶ್ವರಿಯನ್ನು ಆರಾಧಿಸಿದರೆ, ಆತನಿಗೆ ಅನುಗ್ರಹ ನಿಶ್ಚಯ.ನಮ್ಮ ಅಗತ್ಯಗಳಲ್ಲಿ ಅತ್ಯಂತ ಅವಶ್ಯವಾದುದು ಅನ್ನ. ನಾದ ಬ್ರಹ್ಮ, ಜ್ಞಾನ ಬ್ರಹ್ಮದಂತೆ ಅನ್ನ ಬ್ರಹ್ಮವೂ ಮುಖ್ಯವಾದುದಾಗಿದೆ.
ನಮ್ಮ ಶರೀರದಲ್ಲಿ ಜಠರಾಗ್ನಿ ಇದೆ. ಅದರ ಶಮನಕ್ಕೆ ಆಹಾರ ಅಗತ್ಯ. ಇದಕ್ಕೆ, ಪಂಚಭೂತಗಳ ಅವಶ್ಯಕತೆಯು ಬೇಕಾಗಿದೆ. ಮೊದಲು
ಭೂಮಿ ಮತ್ತು ಹೊಲಗದ್ದೆ ಇರಬೇಕು.ನಂತರ ಬೀಜಗಳ ಬಿತ್ತನೆ, ಉಳುವಿಕೆ.ನಂತರ ಮಳೆಯನಿರೀಕ್ಷೆ. ಅದರಿಂದ ಉತ್ತಮ ಬೆಳೆಯ ಬೆಳೆವಣಿಗೆ.
ಅಗ್ನಿಸ್ಪರ್ಶದಿಂದ ಪಚನವಾಗುವುದು. ಗಾಳಿ ಅಧಿಕವಾದರೆ ಬೆಳೆಯ ನಾಶ. ಅದಕ್ಕೆ ವಾಯುವಿನ ಸಹಕಾರ ಅಗತ್ಯ. ಸೂರ್ಯನ ಆಗಮನವಾಗ-
ದಿದ್ದರೆ ರೈತನ ಕೆಲಸ ಸ್ಥಗಿತ. ಸುರ್ಯನ ಶಾಖವು ಅಗತ್ಯ. ಹೀಗೆ ಪಂಚಭೂತಗಳ ಸಹಕಾರ ಅಗತ್ಯ.
ಕಣ್ಣು ಆಹಾರ ಅರಸುತ್ತದೆ.[ಬೆಳಕು] ಕಿವಿ ಊಟದ ಕರೆಯನ್ನು ನಿರೀಕ್ಷಿಸುತ್ತದೆ.[ಶಬ್ದ]. ನಾಲಿಗೆ ರುಚಿಯನ್ನು ನೋಡುತ್ತದೆ.[ಜಲ].ಬೆಳೆ
ಭೂಮಿಯಲ್ಲಿ ಬೆಳೆದು, ಕೊಂಡು ನಾವು ಉಂಡು ನಂತರ ಸಂತಸ ಪಡುತ್ತೆ.[ಭೂಮಿ]. ಆಹಾರ ನಮ್ಮ ಪ್ರಾಣವಾಯುವಿಗೆ ಅವಶ್ಯಕ. ಹೀಗೆ, ಪಂಚ-
ಭೂತಗಳ ಸಮ್ಮಿಲನ.
ಹೊರನಾಡು ಸಸ್ಯಶ್ಯಾಮಲೆಯಂತೆ ವಿರಾಜವಾಗಿದೆ.ಭವ್ಯ ನಿಂತ ಭಂಗಿಯಲ್ಲಿ ಬೆಳಗುವ ಮಾತೆ. ಭಕ್ತರನ್ನು, ಮಾತೆ ಕರೆಯುತ್ತಾಳೆ. ಸ್ವಾಗತದ ನಂತರ ಫಲಹಾರ. ದೇವಿದರ್ಶನ.ಮಧ್ಯಾನದಲ್ಲಿ ಪೂಜೆ, ನಮ್ತರ ಸಂತೃಪ್ತ ಭೊಜನ.ವಿಶ್ರಾಂತಿಗೆ ಹಾಸಿಗೆ.ದಿಂಬು, ಇತ್ಯಾದಿ.ಸೌಲಭ್ಯವೂ ಉಂಟು.
ಶಾಂತ ಚಿತ್ತರಾಗಿ, ಸಸ್ಯಶಾಮಲೆಯಾದ ಮಾತೆಯನ್ನು ಭಕ್ತಿಭಾವದಿಂದ ಅರ್ಚಿಸಿ, ಶಾರೀರಿಕ, ಮಾನಸಿಕ,ಅಧ್ಯಾತ್ಮ ಸಂತೃಪ್ತಿ ಗಳಿಸಲು
ಇದು ಒಂದು ಪುಣ್ಯ ಸ್ಥಾನ.
ಮಗು ಹುಟ್ಟುತ್ತಲೇ ಅಳುವುದು ಆಹಾರಕ್ಕಾಗಿ. ಶ್ರೀ ಜ್ಞಾನಸಂಭಂದರಿಗೆ ತಾಯಿಯೇ ಆಹಾರ ಕೊಟ್ಟಳು.
ಅತ್ತರೆ, ಆಶ್ರಯ ಕೊಡುವ ತಾಯಿಗೆ, ನಾವು ಕೊಡುವ ಕ್ರುತಜ್ಞತೆಯೆಂದರೆ ಭಕ್ತಿ. ಅವಳಾನುಗ್ರಹವನ್ನು ಪಡೆಯಲು ಅದೇ ಯುಕ್ತಿ. ಅದಕ್ಕೆ
ಅವಶ್ಯ ವಿರಕ್ತಿ.