Sunday, November 13, 2016

jayakrishnavilasa

ಶ್ರಿ.ಜಯಕೃಷ್ಣ ವಿಲಾಸ
=========================

ಕುಕ್ಕೆ ಶ್ರೀ ಸುಬ್ರಮಣ್ಯ ಸ್ವಾಮಿಯ ಕೃಪೆಯಿಂದಲೂ
ಆವನಿ ಮಹಾಸ್ವಾಮಿಗಳ ಆಶೀರ್ವದದಿಂದಲೂ’
======================================.
೧.ಮುನ್ನುಡಿ.
===========
೨ಶ್ರೀ ಕ್ಷೇತ್ರ ಮಹಿಮೆ[ಶ್ರೀ ರಂಗ ಪಟ್ಟಣ].
===========================================

೩.ಮೊದಲ ಪ್ರಜೆ.
================
೪.ಧರ್ಮ.
==============
೫.ದಯೆ.
೬.ದಾನ.
೭.ದೇವರು.
೮.ನಾಲ್ಕು ಸೋದರರು.
[ಶ್ರೀ ರಾಮಾಯಣದ ರತ್ನಗಳು].
೯.ಪಂಚ ಕನ್ಯೆಯರು.
೧೦.ಆ ದಿನದ ಸವಿನೆನಪುಗಳು
೧೧.ಅಧ್ಯಾತ್ಮ-ಧರ್ಮ ರಕ್ಷಣೆ.
೧೨.ಮುಂದಿನ ಪೀಳಿಗೆಗೆ ಸಂದೇಶ.

ಅರವತ್ತು ಸಂವತ್ಸರಗಳ ವಸಂತವನ್ನು ಮುಗಿಸಿದ ’ಅಧ್ಯಾತ್ಮ ಅಧ್ವರ್ಯು’
ಶ್ರೀ ರಮೇಶ ಶಾಸ್ತ್ರಿಗಳಿಗೆ ಅರ್ಪಣೆ
ಅ೧.ಮುನ್ನುಡಿ
=========
ಜಗದೊಡೆಯ ಪರಮಾತ್ಮ ಈ ವಿಶ್ವವನ್ನು ಸೃಷ್ಟಿಸಿ, ಮಾನವನನ್ನೂ, ಇತರ ಚರಾಚರ-
ಗಳೊಂದಿಗೆ ಸೃಷ್ಟಿಸಿ, ದೇಹವಿತ್ತು, ಜೊತೆಗೆ, ಬುದ್ಧಿ, ಮನಸ್ಸು, ಇಂದ್ರಿಯಗಳು,[೫]ಕರ್ಮ],
೫ ಜ್ಞಾನೇಂದ್ರಿಯಗಳು, ಅವನ ಆಹಾರ,ಜೀವನಕ್ಕಾಗಿ, ಪಂಚಭೂತಗಳನ್ನು ಸೃಷ್ಟಿಸಿ, ಅವನ
ಏಕಾಂಗಿತನವನ್ನು ನೀಗಲು, ಬಂಧು-ಬಳಗ, ಮಿತ್ರರು, ಮಡದಿ-ಮನೆ-ಮಕ್ಕಳುಗಳನ್ನಿತ್ತು,
ಬಾಳಿನ ಪಥವನ್ನು ಸುಗಮವಾಗಿಸಿದ್ದಾನೆ. ಅವನಿಗೆ ನಮ್ಮ ಕೃತಜ್ಞತೆಯನ್ನು ಅರ್ಪಿಸುವುದು
ಕರ್ತವ್ಯವಲ್ಲವೇ.
ಇದಕ್ಕೆ ಮಾರ್ಗವಿದೆಯೇ. ಇದೆ. ಹಿಂದೆ, ಮುನಿವರೇಣ್ಯರು, ದೀರ್ಘ ತಪವನ್ನಾಚರಿಸಿ, ಪ್ರಕೃತಿಯ
ರಹಸ್ಯವನ್ನು ಕಂಡುಹಿಡಿದು ಅದನ್ನು ನೆನಪೆನಲ್ಲಿಟ್ಟುಕ್ಕೊಳ್ಳುವಂತೆ,ಮಾಡಿದ್ದೇ ’ ಸ್ಮೃತಿ.’ಅದನ್ನು
ಅರ್ಹರಾದವರಿಗೆ, ವರ್ಗಾಯಿಸಿದ್ದೇ, ’ಶೃತಿ.’.[ಕೇಳಿಕೆ]. ’ಕೃತಯುಗದಲ್ಲಿ ತಪಸ್ಸು, ತ್ರೇತಾ-
ಯುಗದಲ್ಲಿ,ಯಜ್ಞ-ಯಾಗಾದಿಗಳು, ದ್ವಾಪರದಲ್ಲಿ ಪೂಜೆ, ಪುನಸ್ಕಾರ, ಕಲಿಯುಗದಲ್ಲಿ, ಕೇಶವ ಚಿಂತನೆ,ಎಂದು ನಿರ್ಣಯಿಸಿದರು.

’ಮಾನವನ ಉದ್ಧಾರಕ್ಕೆ, ಭಗವಂತನೇ ಹಲವು ಅವತಾರಗಳನ್ನು ಎತ್ತಿದನು. ಕೆಲವು ಭಕ್ತ-
ರನ್ನು ಕಳುಹಿಸಿದನು. ಶ್ರೀ ವಾಲ್ಮೀಕಿ, ವ್ಯಾಸ, ಮುಂತಾದ ಮಹಾನ್ ಋಷಿಗಳಿಂದ,ಪುರಾಣ ಗ್ರಂಥಗಳು ಸೃಷ್ಟಿಯಾದವು.
ಶ್ರೀ ಶಂಕರ ಭಗವತ್ಪಾದರು, ಅತಿ ಅಲ್ಪಕಾಲದಲ್ಲೇ, ದೇಶಪರ್ಯಟನೆ, ಮಹಾನ್ ಗ್ರಂಥ-
ಗಳ ರಚನೆ, ಶ್ರೀಸಾಮಾನ್ಯನಿಗೆ, ’ಶಿವಪಂಚಾಯತನ’, ಅವರ ಇಷ್ಟದೈವದ ಆರಾಧ-
ನೆಗೆ, ’ಷಣ್ಮತ, ಶೃಂಗೇರಿಯಲ್ಲಿ, ಶ್ರೀ ಶಾರದಾ ಪೀಠ ಸ್ತಾಪನೆ,ಆಚಾರ್ಯ ಪರಂಪರೆಯ
ಮೂಲಕ ಧರ್ಮಪ್ರಸಾರವನ್ನು ಕೈಗೊಂಡಿದ್ದಾರೆ. ಈ ಪರಿವರ್ತನೆ ಹೇಗೆ ಆಗುವುದೆಂದು, ಅಲ್ಲಿ ಹೋಗಿ
ಬಂದವರಿಗೇ ಗೊತ್ತು.
ಹಾಗೆಯೇ, ಮಾನವನಿಗೆ, ಬಾಲ್ಯ, ಯೌವನ, ವಾನಪ್ರಸ್ಥ,ನಾಲ್ಕು ಅವಸ್ಥೆಗಳನ್ನು ಕೊಟ್ಟು,
ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ,ನಂತರ, ಮೋಕ್ಷವನ್ನು ಅರಸುವುದೇ, ಬಾಳಿನ
ಧ್ಯೇಯ, ಎಂದು, ನಿರ್ಧರಿಸಿದ್ದಾರೆ.
ಅಂತಹ ಮಹನೀಯರೊಬ್ಬರು, ಅವರ ಮಡದಿಯೊಂದಿಗೆ, ಈ ಕ್ಷೇತ್ರದಲ್ಲಿ ಬಾಳಿ, ಬದುಕಿ, ದಾರಿ
ದೀವಿಗೆಯಾಗಿದ್ದಾರೆ.
ಬಾಳಿನಲ್ಲಿ, ನಮ್ಮ ಬಾಲ್ಯದಲ್ಲಿ, ಕಳೆದ, ಸವಿನೆನಪಿನ ಜೊತೆ, ಆದರ್ಶ ಬಾಳಿಗೆ, ಆಧಾರವಾದ,ಅಧ್ಯಾತ್ಮ ಮಾರ್ಗವನ್ನು ಅನುಸರಿಸುವುದು ಅಗತ್ಯ, ಎಂಬುದೇ, ಈ ಅಲ್ಪ ಕೃತಿಯ
ಸಂದೇಶ, ಉದ್ದೇಶ. ಅದು ಸಫಲವಾದರೆ, ಈ ಯತ್ನ, ಜಯಪ್ರದ, ಸುಖಪ್ರದ.

ಅಧ್ಯಾಯ-೨.
===========
ಶ್ರೀ ಕ್ಷೇತ್ರ ಮಹಿಮೆ. ಶ್ರೀರಂಗಪಟ್ಟಣ.
=========================================
ಬೆಂಗಳುರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದೀರಿ. ಮೊದಲು ಕಾಣುವ ಸುಂದರ ಊರು
ಚನ್ನಪಟ್ಟಣ. ಇಲ್ಲಿ, ಮರ ಆಟಿಕೆಗಳು ಪ್ರಸಿದ್ಧ. ಎಂದರೆ, ಭಗವಂತನಿಂದ, ಮಾನವನ
ಸೃಷ್ಟಿ. ನಂತರ, ಮದ್ದೂರು. ಇಲ್ಲಿಯ ’ವಡೆ,’ ಬಹು ಪ್ರಸಿದ್ಧ. ಒಳಗೆ, ಖಾರದ ಅಡಕ-
ಗಳಿದ್ದರೂ, ಮೇಲೆ ಹೊದಿಕೆ ಇರುವುದು. ಬಾಳಿನಲ್ಲಿ, ’ರುಚಿ.’ ಬೇಕಾದರೆ, ಅದರ ಹೊದಿಕೆ,ಎಂದರೆ
’ಸಮಚಿತ್ತ.’ ಅದರ ಪರಿಣಾಮ, ಸಂತೃಪ್ತಿ. ’ಕೆಂಗೇರಿ’- ಸೂರ್ಯನ ತಾಣ.’ ಬಿಡದಿ’-ಬಿಡದು ಈ ಮೋಹ. ’ಹೆಜ್ಜಾಲ.- ಹೆಜ್ಜೆಯ ಆಳ. ನಂತರ,’ ಮಂಡ್ಯ.ಅದು ಸಕ್ಕರೆಗೆ ಪ್ರಸಿದ್ಧಿ.ಬಾಳಿ-
ನಲ್ಲಿ ಸಿಹಿಯನ್ನೇ ಅನುಭವಿಸಬೇಕೆಂದು ಬಯಸುವುದು, ಮಾನವನ ಬಯಕೆ. ’ಸಿಹಿ ಅವಶ್ಯ.’
ಅತಿಯಾಗಿರಬಾರದು.
ಶ್ರೀ ಶ್ರೀರಂಗಪಟ್ಟಣಕ್ಕೆ ಬನ್ನಿ. ಕಾಲಿಟ್ಟ ಒಡನೆ, ಕರುಣಾಮಯ, ಶ್ರೀ ರಂಗನಾಥ
ಭಕ್ತರಿಗೆ ನಲ್ಮೆ ನೀಡಲು, ಶ್ರೀ ಆದಿಶೇಷನ ಮೇಲೆ ಪವಡಿಸಿದ್ದಾನೆ. ಪಾದದ ಬಳಿ
’ಶ್ರೀದೇವಿ.’.ಪುರಾತನ ಕಾಲದ ಪ್ರಸಿದ್ಧ ದೇವಾಲಯ. ಶ್ರೀ ಶ್ರೀನಿವಾಸ, ಶ್ರೀ ಹನು-
ಮಂತ, ಶ್ರೀ ಕೃಷ್ಣ,ಶ್ರೀ ರಂಗನಾಯಕಿ, ಶ್ರೀ ರಾಮಾನುಜರು, ಎಲ್ಲರೂ, ವಿರಾಜಮಾನ-
ರಾಗಿದ್ದಾರೆ.
’ಬಾಳಿನಲ್ಲಿ, ನೆಮ್ಮದಿ ಅವಶ್ಯಕ.ಅದಕ್ಕೆ ಮನದಲ್ಲಿ ’ಶಾಂತಿ’ ಅವಶ್ಯಕ.’
ಜಾಗೃತಿ; ’ನಾವು ನಮ್ಮೆದುರಿನಲ್ಲಿರುವುದೆಲ್ಲವನ್ನೂ ನೋಡುತ್ತಿದ್ದೇವೆ.’
 ’

ಸ್ವಪ್ನ;’ಮನಸಿನಲ್ಲಿ ಸುಪ್ತವಾಗಿರುವ ಚಿಂತನೆಗಳು ನಿದ್ರೆಯಲ್ಲಿ ಪ್ರತಿಪಲಿಸುತ್ತವೆ.’
ಸುಷುಪ್ತಿ;’ಆಂದೋಳನ ರಹಿತ, ಚಿಂತನ ರಹಿತ ಸ್ಥಿತಿ.
ತುರ್ಯ;’ದೈನಂದಿನ ಆಗುಹೋಗುಗಳ ಪರಿವೆ ಇಲ್ಲದೆ, ನಿಶ್ಚಲವಾಗಿ,ನಿರ್ಭಯವಾಗಿ, ನಿರ್ಮಲ-
ವಾಗಿ, ಪರಮಾತ್ಮನ ಧ್ಯಾನದಲ್ಲಿಯೇ ಇರುವ ಸ್ಥಿತಿ. ’ಇದೇ ಶ್ರೀ ರಂಗನಾಥ.’
ಕಾವೇರಿ;ಭಗವಂತನ ಸೃಷ್ಟಿಯಲ್ಲಿ, ’ಜಲ’ ಮಹತ್ವ ಪಾತ್ರ ವಹಿಸುತ್ತದೆ. ’ಮೇಘದಿಂದ
ಮಳೆಯಾಗಿ ಧರೆಗೆ ಹರಿದು ನದಿ, ತೊರೆ, ಕೊಳಗಳ ರೂಪದಲ್ಲಿ ಹರಿದು, ಸಾಗರವನ್ನು
ಸೇರುತ್ತದೆ. ಪ್ರತಿಯೊಬ್ಬ ಮಾನವನೂ, ಧರೆಗೆ ಬಂದು, ಜನನ-ಮರಣಗಳ ದಡಗಳತ್ತ
ಪಯಣಿಸಿ, ರಭಸದಿಂದ ಅಲೆಗಳು ಅಪ್ಪಳಿಸಿದರೂ, ತೀರದಲ್ಲಿ ಸೌಮ್ಯವಾಗಿರುವಂತೆ,
ಕಷ್ಟಗಳೇನೇ ಬಂದರೂ, ಸ್ವಲ್ಪ ಕಾಲದನಂತರ, ಶಾಂತವಾಗುವುದು.
’ಈಜು ಕಲಿತವರು ಆನಂದಿಸುವರು. ಮುಳುಗುವವರು ಉತ್ಸಾಹಗೊಳ್ಳುವರು. ಮೆಟ್ಟಲಿನಿಂದ,
ಚೊಂಬಿನಲ್ಲಿ ಸ್ನಾನ ಮಾಡುವವರು, ಅರ್ಧ ಭಯ, ಅರ್ಧ ಪುಣ್ಯದ ಆಸೆಯ ಮಿಶ್ರಣ.
ಪ್ರೋಕ್ಷಣೆ ಮಾಡಿಕೊಳ್ಳುವವರು ಅಲ್ಪ ತೃಪ್ತರು.
’ಆದರೆ ಎಲ್ಲರ ಗುರಿಯೂ ಒಂದೇ.’ಅದೇ ;ಪುಣ್ಯ ಸಂಪಾದನೆ.ವಾಸ್ತವಿಕ ದರ್ಶನ.’
’ಶ್ರೀ ಗಂಗಾಧರೇಶ್ವರ;-ಪ್ರಪಂಚದಲ್ಲಿ ತ್ರಿಮೂರ್ತಿಗಳ ಪಾತ್ರ ಹಿರಿದು.’ಇದರಲ್ಲಿ
ಸಂಹಾರಕನಾದ ಶಿವ, ಅಮೃತ ಮಥನ ಸಮಯದಲ್ಲಿ ಹೊರಬಿದ್ದ, ಹಾಲ ಹಲ ವಿಷವ-
ನ್ನುಂಡಾಗ, ಮಡದಿ ಉಮೆ, ಸ್ವಾಮಿಯನ್ನು ಬಿಗಿದಪ್ಪಿದಳು. ಅದು ಕಂಠದಲ್ಲೇ ಉಳಿಯಲು, ಶಿವ
ನೀಲಕಂಠನಾದ.ತಾನು ವಿಷವನ್ನುಂಡು, ಲೋಕ ಸಂತಸದಿಂದಿರಲು, ಗಂಗೆಯನ್ನಿತ್ತ.
ಅಂತೆಯೇ, ಮಾನವ ತನಗೆಷ್ಟೇ ಕಷ್ಟ ಬಂದರೂ, ಲೋಕಕ್ಷೇಮಕ್ಕೆ ಶ್ರಮಿಸಬೇಕು.ಎಂಬುದೇ
ಇದರ ಸಂದೇಶ. ಸಮತ್ವಂ ಯೋಗ ಉಚ್ಯತೆ’ ಎಂಬುದರ ಅರ್ಥ ಇದೇ.ಮೆಂಟಲ್ ಆಗದೆ
ಮೆಟಲ್ ಆಗಬೇಕು.’
ಮುಂದೆ ಬಂದರೆ, ಗಂಜಾಂ. ಬ್ರಿಟಿಷರು-ಭಾರತೀಯರಿಗೆ ಯುದ್ಧ ನಡೆಸಿದ ಸ್ಥಳ.
ಗನ್-ತುಪಾಕಿ ಜಾ-ಮ್.-ಸೆಣೆದಾಡಿದ ಸ್ಥಳ. ಇಲ್ಲಿ ತಾಯಿ ನಿಮಿಷಾಂಬಾ ನೆಲೆಸಿದ್ದಾಳೆ.
’ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ’. ಎಂಬಂತೆ, ಕಾಲನ ಕರೆ ಬರುವ ಮುನ್ನ,
ಜಾಗೃತರಾಗಿ, ಕೇಶವನ ನೆನೆಯುತ್ತಿದ್ದರೆ, ಕೈವಲ್ಯ ಖಚಿತ.
’ಸುಖ-ದುಃಖ, ನೋವು-ನಲಿವು, ದ್ವಂದಗಳಿಂದ ದೂರಾಗಿ, ಗುರುತರವಾದ ಗುರಿಯಾದ
ಭಗವಂತನ ಪ್ರಾಪ್ತಿಗೆ ಬಯಸುವುದೇ ಗುರಿಯಾಗಬೇಕು. ಶಾಂತತೆ, ಸಮತ್ವತೆ, ಸ್ವಾಮಿಯ
ಸಾಮೀಪ್ಯ, ಈ ನಾಲ್ಕು ಗುರಿಗಳನ್ನು ಸಾಧಿಸುವುದೇ ಈ ಕ್ಷೇತ್ರದ ಮಹಿಮೆ.
=============================================================
ಅಧ್ಯಾಯ-೩.ಮೊದಲ ಪ್ರಜೆ
=======================
ಪರಮಾತ್ಮ ವಿಶ್ವದ ಮೊದಲ ಪ್ರಜೆ. ನೀತಿ ನಿಯಮಳಿಗನುಸಾರವಾಗಿ,ನಡೆಯುತ್ತಾನೆ.[ಲೋಕ-
ಸಂಗ್ರಹಮೇವಾಪಿ]. ಹಾಗೆಯೇ, ಶ್ರೀರಂಗಪಟ್ಟಣ ರೈಲು ನಿಲ್ದಾಣದಿಂದ ಇಳಿದು ಬಂದರೆ,
ಮೊದಲು ಕಾಣುವುದು ಶ್ರೀ ರಂಗನಾಥನ ಆವಾಸ.
ಬಸ್ ನಿಲ್ದಾಣದಿಂದ ಬಂದರೆ, ಅಂಚೆ ತಿಪ್ಪೈಯ್ಯ ರಸ್ತೆಯಲ್ಲಿ ಇವರೇ ಮೊದಲ ಪ್ರಜೆ.
ಈ ಮನೆಯ ನಾಯಕ ಶ್ರೀ ಕೃಷ್ಣಮೂರ್ತಿ. ದ್ವಾರಕಾಧೀಶ, ಶ್ರೀ ಕೃಷ್ಣ ಮದುರೆಯಲ್ಲಿ
ಜನಿಸಿ, ಗೋಕುಲಕ್ಕೆ ಬಂದು, ಕೆಲವು ಅಧ್ಭುತಗಳೆನ್ನಸಗಿ, ’ಕಂಸನ್’ ಎಂದು, ಕರೆದು,
ಕಂಸನಿಗೆ ಮುಕ್ತಿಯನ್ನಿತ್ತು,ಧರ್ಮರಕ್ಷಣೆಗೆ, ಪಾಂಡವರನ್ನು ಬೆಂಬಲಿಸಿ, ಕೌರವರನ್ನು
ನಿಗ್ರಹಿಸಿ, ಶ್ರೀ ಭಗವದ್ಗೀತೆಯನ್ನು ಜಗತ್ತಿಗಿತ್ತು, ಪ್ರೀತಿಗೆ ರುಕ್ಮಿಣಿಯನ್ನು ವಿವಾಹ-
ವಾಗಿ, ಭಾಮೆಯ ಸ್ವಾರ್ಥವನ್ನಳಿಸಿ ರಾಧೆಯ ಸಮ್ಮಿಲನದಿಂದ, ’ವಿಶ್ವಪ್ರೇಮಿಯಾದನು.’
ಅಂತೆಯೇ, ಚನ್ನಪಟ್ಟಣದ ಬಳಿಯ, ಮಳೂರಿನಲ್ಲಿರುವ ಶ್ರೀ ಅಪ್ರಮೇಯಸ್ವಾಮಿಯೇ ಅವರ
ಆರಾಧ್ಯದೈವ
ಶ್ರೀ ಕೃಷ್ಣನಂತೆಯೇ, ಧರ್ಮಮಾರ್ಗವನ್ನು ಅನುಸರಿಸಿ,ದೈವ,ಧರ್ಮಕ್ಕೆ, ಮಾರ್ಗದರ್ಶನ-
ವನ್ನಿತ್ತು, ಬಡವ-ಬಲ್ಲಿದರೆಂಬ ಭೇದವಿಲ್ಲದೆ, ಸೇವೆ ಸಲ್ಲಿಸಿ, ಸಜೀವರಿಗೆ, ಸಕಾರಾತ್ಮಕ ಕಾರ್ಯಗಳಲ್ಲಿ ನೆರವನ್ನಿತ್ತು, ಬದುಕಿನನಂತರದ ಕಾರ್ಯದಲ್ಲಿ, ಮೋಕ್ಷಕ್ಕೆ ನೆರವಿತ್ತು
ಬಳಿಯ, ಪಶ್ಚಿಮವಾಹಿನಿಯಲ್ಲಿರುವ, ಶ್ರೀ ಪರಮೇಶ್ವರನ ಸೇವೆ ಗೈದು,ಬಾಳಿದರು.ತಮ್ಮ
ಕಾರ್ಯಗಳಲ್ಲಿ, ಜಯಗಳಿಸಲು ನೆರವಿತ್ತ, ಶ್ರೀ ಜಯಲಕ್ಷ್ಮಿಯವರ ಪಾಲು ಸ್ತುತ್ಯಾರ್ಹ.

ಗೃಹ ಪ್ರವೇಶಿಸಿದೊಡನೆ, ಸಣ್ಣ ಕೋಣೆ. ಬಂದವರಿಗೆ, ಜ್ಯೋತಿಷ್ಯ ವಾಣಿ, ಚಿಕ್ಕ ಕೋಣೆ,
ಭಾನುವಾರದ ಬಿಡದಿ. ನಂತರ, ವಿಶಾಲ ಕೋಣೆ[ಹಾಲ್]. ಪಕ್ಕದಲ್ಲಿ ಕೂರಲು ಮೂರು ಆಸನ.
ಸುಖಾಸನದಲ್ಲಿ ಕುಳಿತು, ಅವರು ಮಾತನಾಡುತ್ತಿದ್ದರೆ, ಅದೇನು ರಾಜಠೀವಿ. ಒಳಗೆ ಪ್ರವೇಶಿಸಿ.
ಉದ್ದದಕೋಣೆ. ಅರ್ಧ ಮಲಗಲು, ಅರ್ಧ ಭೊಜನಕ್ಕೆ. ಅದಕ್ಕೆ ಸೇರಿದಂತೆ ಒಂದು ಚಿಕ್ಕ ಕೋಣೆ.
ಅದು ಯಜಮಾನರ ಲೇಖನ ಗೃಹ. ಅದಕ್ಕೆ ಸೇರಿದಂತೆ, ಮತ್ತೊಂದು ಕೋಣೆ.ಅದು ನವವಿವಾಹಿತರು
ಮಲಗುವ ಕೋಣೆ. ಅಡಿಗೆ ಮನೆಗೆ ಎದುರಿಗಿರುವ ಕೋಣೆಯಲ್ಲಿ  ಸಂಗೀತಾಭ್ಯಾಸ. ಅಡಿಗೆಮನೆಯಲ್ಲೇ
ಪೂಜಾ ಗೃಹ. ಮನೆಯೊಡತಿಯೇ, ಬಂದವರಿಗೆ, ಮನೆಯವರಿಗೆ, ಯಾತ್ರಿಕರಿಗೆ, ಬಂಧುಗಳಿಗೆ
ಉಣಿಸಿದ ಸವಿಯೂಟ ಮರೆಯಲಾಗದ ಅನುಭವ. ಪುಟ್ಟ ಮಕ್ಕಳು, ನದಿಯಲ್ಲಿ ಸ್ನಾನಮಾಡಿ ಬಂದರೆ,’ತಿಂಡಿ ರೆಡಿ.’ಹಸಿವು ತಡಿ.’ ಒಟ್ಟಿನಲ್ಲಿ, ’ಧರ್ಮಸ್ಥಳವೇ ಧರೆಗೆ ಇಳಿದು ಬಂದಿತೋ’
ಮನೆಗೆ ಅಂಟಿಕೊಂದಂತೆ ಇರುವ ಮನೆಯೇ, ಕುಮಾರ ನಿಲಯ.’ ಗೋ-ಶಾಲೆಗೆ ಸೇರಿದಂತೆ ಇರುವ
ಮನೆಯೇ ’ಮಿತ್ರ ಭವನ.”ಅಪ್ರಮೇಯನೂ, ಅನ್ನಪೂರ್ಣೇಶ್ವರಿಯೂ, ಜತೆಯಲ್ಲಿಯೇ ಇದ್ದು, ದಂಪತಿಗಳ ಅತಿಥಿಸೇವೆಗೆ ನೆರವು ನೀಡಿದರು. ’ನಾಲ್ಕು ವೇದಗಳು, ಪಂಚಕನ್ಯೆಯರು.’
ಜನಿಸಿ, ಬೆಳೆದು, ಬಾಳಿ, ಬದುಕಿದುದು ಒಂದು ಇತಿಹಾಸ. ಆ ಪರ್ವಕಾಲದಲ್ಲಿ, ನಾವು ಭಾಗವಹಿಸಿ
ಭಾಗ್ಯವಂತರಾಗಿದ್ದೇವೆ.
’ಧರ್ಮ, ದಯೆ, ದೇವರು,ದಾನ’, ಈ ನಲ್ಕು ಆಧಾರಸ್ಥಂಬಗಳ ಮೇಲೆ ನಿಂತ ಧರ್ಮ ಗೃಹ.
’ಯತ್ರ ಯೋಗೀಶ್ವರ ಕೃಷ್ಣೋ, ತತ್ರ ಪಾರ್ಥೋ ಧನುಧರಃ. ತತ್ರ ಶ್ರೀ ವಿಜಯೋದ್ಭೂತಿಹಿ,
ಧೃವಾ ನೀತಿರ್ಮತಿರ್ಮಮ.’ ಈ ಶ್ಲೋಕವು ಈ ದಂಪತಿಗಳನ್ನು ನೋಡಿಯೇ ರಚಿತವಾಗಿದೆಯೆಂದು
ಭಾಸವಾಗುತ್ತದೆ. ’ನಾಲ್ಕು ವೇದಗಳು, ಶಿವ ಪಂಚಾಯತನ, ಷಣ್ಮತಗಳಿರುವಾಗ, ಅದ್ವೈತ
ವಿದೇ ಅಲ್ಲದೆ ಇದೇನು.’
ಕೃತಜ್ಞತೆ ಇರುವೆಡೆ ಕೃಷ್ಣನ ವಾಸ. ಉಷ್ಣ ಇರುವೆಡೆ ಶೈತವೂ ಉಂಟು.ಗುಣ ಮೂರು
ಜಯಿಸಿದವರಿಗೆ, ಶಾಂತಿ.ಭರ್ತಿಯಾದರೆ ಪುಣ್ಯದ ಕೊಡ, ಮೋಕ್ಷ ಖಚಿತ.
ಜಗತ್ತೇ ಮೆಚ್ಚುವಂತಹ ಮಾಧುರ್ಯ, ಯಕ್ಷಿಣಿಯಂತೆ ಆಕರ್ಷಿಸುವ ಮಮತೆ.
ಲಕ್ಷ್ಯವೊಂದೇ, ಅದೇ ಲೋಕಹಿತ.
ಲಕ್ಷ್ಮಿ ಇದ್ದರೆ ಸೌಭಾಗ್ಯಕ್ಕೆ ಕೊರತೆಯೇ.

ಅಧ್ಯಾಯ;೪.ಧರ್ಮ
==================
’ಧರ್ಮೋ ರಕ್ಷತಿ ರಕ್ಷಿತಃ
=============================
ಇದು ಒಂದು ವೇದ ವಾಕ್ಯ. ಇದನ್ನು ಒಂದು ಹಸುವಿಗೆ ಹೋಲಿಸಬಹುದು. ಕೃತಯುಗದಲ್ಲಿ ನಾಲ್ಕು,
ತ್ರೇತಾಯುಗದಲ್ಲಿ ಮೂರು, ದ್ವಾಪರಯುಗದಲ್ಲಿ ಎರಡು, ಕಲಿಯುಗದಲ್ಲಿ ಒಂದು ಪಾದದಲ್ಲಿ
ಇರುತ್ತದೆ ಎಂದು ಉಲ್ಲೇಖಿಸಲಾಗಿದೆ.
’ಕೃತಯುಗದಲ್ಲಿ ತಪಸ್ಸು, ಧ್ಯಾನ, ತ್ರೇತಾಯುಗದಲ್ಲಿ ಯಜ್ಞ-ಯಾಗಾದಿಗಳು, ದ್ವಾಪರಯುಗ-
ದಲ್ಲಿ, ಪೂಜೆ-ಪುನಸ್ಕಾರ, ಕಲಿಯುಗದಲ್ಲಿ ’ಹರಿ ಸ್ಮರಣೆ’, ಎಂದು ಉಲ್ಲೇಕಿಸಲಾಗಿದೆ.’ಬರೀ
ನಾಮಸ್ಮರಣೆಯೇ ಸಾಕೇ.’
ವಿಶ್ವಾಮಿತ್ರರು ಲೋಕಕ್ಷೇಮಕ್ಕಾಗಿ, ಶ್ರೀ ಗಾಯತ್ರಿ ಮಂತ್ರವನ್ನಿತ್ತರು..’ ಇದರ ಜಪ
ಪ್ರತಿಯೊಬ್ಬ ಬ್ರಾಹ್ಮಣನ ಕರ್ತವ್ಯ.’ವಾಹನವಿದ್ದರೆ ಸಾಕೆ. ಲೈಸೆನ್ಸ್ ಬೇಡವೇ.
’ಮುಂಜಿ ಅರ್ಹತೆಯನ್ನು ಕೊಡುತ್ತದೆ. ಜನಿವಾರ, ಯೊಗ್ಯತೆಯನ್ನು ಕೊಡುತ್ತದೆ. ಸಂಧ್ಯಾವಂದನೆ
ಬ್ರಹ್ಮ ತೇಜಸ್ಸನ್ನು ಕೊಡುತ್ತದೆ.
ನಿತ್ಯಕರ್ಮ;ದಿನವೂ ನಡೆಸಬೇಕಾದ ಸೇವೆ. ಸಂಧ್ಯಾವಂದನೆ, ಅಗ್ನಿಕಾರ್ಯ, ಪೂಜೆ.
ನೈಮಿತ್ತಿಕ ಕರ್ಮ;ಯಾವುದೇ ಒಂದು ಉದ್ದೇಶಕ್ಕಾಗಿ ನಡೆಸುವ ಕರ್ಮ. ರಾಜಸೂಯ, ಪುತ್ರ-
ಕಾಮೇಷ್ಟಿ ಯಾಗ.
ದೇವ, ಋಷಿ ಪಿತೃ, ಮನುಷ್ಯ, ಪ್ರಾಣಿ ಯಜ್ಞಗಳು.
ನ್ಯಾಯಾಲಯದಲ್ಲಿ ಹಲವು ಮಜಲುಗಳಿವೆ. ನಗರ ನ್ಯಾಯಾಲಯ, ಹೈ ಕೋರ್ಟ್, ಫರಮೋಛ್ಚ
ನ್ಯಾಯಲಯ ಎಂದು. ಹಾಗೆಯೇ, ನಿತ್ಯಕರ್ಮಗಳ ಜೊತೆ, ಧರ್ಮಶಾಸ್ತ್ರಗಳ ಅಧ್ಯಯನ,ಇಷ್ಟ,
ಕುಲದೇವತಾ ಪೂಜೆ, ದೇವರಲ್ಲಿ ನಂಬಿಕೆ, ಅವನಿಗೆ ನಮ್ಮ ಕರ್ತವ್ಯದ ಅರ್ಪಣೆ.
ಪ್ರಾರಂಭ;ಶ್ರೀ ಪರಮೇಶ್ವರ ಪ್ರೀತ್ಯರ್ಥಮ್. ಮುಕ್ತಾಯ; ಶ್ರೀ ಕೃಷ್ಣಾರ್ಪಣಮಸ್ತು.
’ವಿಷ್ಣುವೇ’ ಮೊದಲ ಗುರು.  ಅವನು ಮೋಕ್ಷದಾತ. ಶಿವ ಜ್ಞಾನದಾತ.’ಶಿವನೇ ಶ್ರೀ
ಭಗವತ್ಪಾದರ ರೂಪದಲ್ಲಿ ಬಂದು, ಮೋಕ್ಷಕ್ಕೆ ದಾರಿ ತೋರಿದ್ದರಿಂದ, ದೇವನಲ್ಲಿ ಪ್ರೀತಿಯೇ
ಭಕ್ತಿ.’ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು;’
ಮೇಲೆ ಹೇಳಿದ ಎಲ್ಲವನ್ನೂ, ಈ ಪುಣ್ಯಕ್ಷೇತ್ರದಲ್ಲಿ ನೆಲೆಸಿದ ಈ ದಂಪತಿಗಳು, ಚಾಚೂ ತಪ್ಪದೆ
ನಡೆಸಿದ್ದರಿಂದ, ಆ ಕುಟುಂಬ, ಇಂದು, ಆಚಂದ್ರಾರ್ಕವಾಗಿಯೂ, ಅಪೂರ್ವವಾಗಿಯೂ, ಬೆಳಗುತ್ತಿದೆ.
’ಸಮುದ್ರದಲ್ಲಿ ಈಜು ಬರದವನು ಮುಳುಗಿದರೆ’ ರಬ್ಬರ್ ಟೈರೇ’ ಆಧಾರ, ತೀರ ಸೇರಲು.
ಸಂಸಾರ-ಸಮುದ್ರ. ದಾಟಲು-ರಬ್ಬರ್ ಟೈರು.ಕಡೇ ದಡ-ಮೋಕ್ಷ.ಅದರ್ಶಿ;ಭಗವಂತ.
ದಾನವ;ದಾ ತೆಗೆದು ಮಾ ಸೇರಿಸಲು ಮಾನವ. ದಾವನ್ನು ’ದೇಗೆ” ಬದಲಾಯಿಸಿ ’ವ’ ಸೇರಿಸಿದರೆ
’ದೇವ’ ಆಗುತ್ತದೆ.
ಅಧ್ಯಾಯ-೫,ದಯೆ.
================
’ದಯೆಯೇ ಧರ್ಮದ ಮೂಲವೈಯ್ಯಾ;ಶ್ರೀ ಬಸವಣ್ಣನವರು-
ದಯೆ ಎಂದರೆ,’ಪರರ ಬಗ್ಗೆ ಅನುಕಂಪ.’ಎಂದು ಅರ್ಥೈಸಬಹುದು. ಇದಕ್ಕೆ, ಬೇರೆ, ಬೇರೆ,
ಮಜಲುಗಳಿವೆ.
ಮೊದಲು ದೇವರ ದಯೆ;ಪರಮಾತ್ಮ ನಮಗೆ ಈ ಶರೀರವನ್ನು ಕೊಟ್ಟಿದ್ದಾನೆ. ಜೊತೆಗೆ, ಅರಿವು,
ಮನಸ್ಸು, ಆತ್ಮಗಳನ್ನು ಕೊಟ್ಟಿದ್ದಾನೆ. ಪ್ರಕೃತಿ, ಮಾನವ ಸಂಭಂದಗಳನ್ನಿಟ್ಟಿದ್ದಾನೆ.
ಒಟ್ಟಿನಲ್ಲಿ, ಮಾನವಜೀವನ ಸುಲಭವಾಗುವಂತೆ, ಎಲ್ಲಾ, ಉಪಕಾರಗಳನ್ನೂ, ಮಾಡಿದ್ದಾನೆ.
ಅವನು ಪ್ರಥಮ ದಯಾಮಯನಲ್ಲವೇ.
ಇತಿಹಾಸಕ್ಕೆ ಬಂದರೆ;ಶ್ರೀ ಶಂಕರಾಚಾರ್ಯರು ದೇಶಪರ್ಯಟನೆ ಮಾಡುತ್ತಾ, ಶ್ರೀ
ಶೃಂಗೇರಿಗೆ ಬಂದರು. ಅಲ್ಲಿ ಸರ್ಪವೊಂದು ಗರ್ಭಿಣಿ ಮಂಡೂಕಕ್ಕೆ, ಆಶ್ರಯವಿತ್ತದ್ದನ್ನು
ಕಂಡು, ಆಶ್ಚರ್ಯಚಕಿತರಾದರು. ಅದೆ ಶೃಂಗೇರಿಯ ಶಾರದಾ ಪೀಠ ಸ್ಥಾಪನೆಗೆ ನಾಂದಿಯಾಯಿತು.
ರಾಮಾಯಣದಲ್ಲಿ;ದಿಲೀಪ ರಾಜನು, ಗೋವನ್ನು ರಕ್ಷಿಸಲು ಮುಂದೆ ಬಂದಾಗ,ಸಿಂಹವು ಅವನನ್ನು
ಪರೀಕ್ಷಿಸಿ, ಮೆಚ್ಚಿ, ಅವನ ಹಿರಿಮೆಯನ್ನು ಸಾರಿತು. ಶಿಬಿ ಚಕ್ರವರ್ತಿಯು, ಪಾರಿವಾಳವನ್ನು
ರಕ್ಷಿಸಲು, ಗಿಡುಗನಿಗೆ, ತನ್ನ ಮಾಂಸವನ್ನೇ ಕೊಡಲು ಮುಂದಾದಾಗ, ಅದರಲ್ಲಿ ಯೆಶಸ್ವಿ-
ಯಾದನು.ದಾನಶೂರ ಕರ್ಣನನ್ನು ಅರಿಯದವರಾರು.’ಮಂತ್ರ ಪರೀಕ್ಷೆಯಿಂದ ವಿವಾಹಕ್ಕೆ ಮುನ್ನವೇ,
ದ್ರೌಪದಿಗೆ ಜನಿಸಿ, ನದಿಯಲ್ಲಿ ಬಿಡಲ್ಪಟ್ಟು, ರಾಧೇಯನಾಗಿ, ಶ್ರೀ ಪರಶುರಾಮರು ಮತ್ತು
ಶ್ರೀ ದ್ರೋಣರಿಂದ ಧನುರ್ವಿದ್ಯೆ, ನಿರಾಕರಿಸಲ್ಪಟ್ಟು, ಕೌರವನಿಂದ, ಅಂಗದೇಶದ ಅರಸ-
ನಾಗಿ, ನಿಶ್ಚಲ ಮೈತ್ರಿಯನ್ನು ನಿರೂಪಿಸಿ, ತನಗೆ, ಮೈಗೂಡಿದ ದಾನದ ಬಲದಿಂದ, ಒಬ್ಬ
ಬ್ರಾಹ್ಮಣನ ಯಜ್ಞಕ್ಕಾಗಿ, ಅರಮನೆಯ ಬಾಗಿಲನ್ನೇ, ಕೊಟ್ಟು, ರಣರಂಗದಲ್ಲಿ ಶ್ರೀ ಕೃಷ್ಣ-
ನಿಗೆ, ರಕ್ತರೂಪದಲ್ಲಿ ಅರ್ಘ್ಯವಿತ್ತು ಅರ್ಪಿಸಿ, ಶ್ರೀ ಕೃಷ್ನನಿಂದ ’ದಾನಶೂರ ಕರ್ಣನೆಂದು’
ವರ ಪಡೆದ ಮಹಿಮಾನ್ವಿತ.
ಮಾನವನಿಗೆ ಬಂದಾಗ; ಹೃದಯವೆಂಬುದಿದೆ. ಕಷ್ಟ ಬಂದಾಗ ದೇವರಿಗೆ ಮೊರೆಯಿಡುತ್ತೇವೆ.
ಅವನು ಪರಿಹಾರ ನೀಡುತ್ತಾನೆ. ತಂದೆ-ತಾಯಿಯರಲ್ಲಿ, ಮಾತೆ, ಮಕ್ಕಳಿಗೆ, ತನ್ನ ಪ್ರೀತಿಯ
ಧಾರೆಯೆರದು, ಮಕ್ಕಳನ್ನು ಬೆಳೆಸುತ್ತಾಳೆ.
ತಂದೆ;ಮಗನು, ಪ್ರಪಂಚದಲ್ಲಿ, ವಿದ್ಯೆ, ಬುದ್ಧಿ, ಉದ್ಯೋಗಗಳನ್ನು ನಡೆಸಿ, ಉನ್ನತ ವ್ಯಕ್ತಿ-
ಯಾಗಲು,ನೆರವೀಯುತ್ತಾನೆ. ಗುರುವು ಜ್ಞಾನವನ್ನಿತ್ತು ಜ್ಞಾನಿಯಾಗಿಸುತ್ತನೆ. ಅಧ್ಯಾತ್ಮ ಗುರುವು
ಅಧ್ಯಾತ್ಮದತ್ತ ಸೆಳೆದು, ದೈವಭಕ್ತಿಯನ್ನು ಬೆಳೆಸುತ್ತಾನೆ. ನಿತ್ಯಕರ್ಮಾನುಷ್ಟಾನದಿಂದ
ದೇವತೆಗಳು ಹರಸುತ್ತಾರೆ.
ಮಾನವನ ಪಾತ್ರವೇನು;ಮೊದಲು ತನ್ನ ತಂದೆ-ತಾಯಿಯರಿಗೆ, ವಯಸ್ಸಾದನಂತರ ನೆರವು ನೀಡು-
ವುದು. ತನ್ನ ಬಂದು-ಮಿತ್ರರು ಆಪತ್ತಿನಲ್ಲಿದ್ದರೆ, ನೆರವು ನೀಡುವುದು. ಬಡವರ ಮಕ್ಕಳಿಗೆ
ದ್ರವ್ಯ ದಾನ, ಪುಸ್ತಕದಾನ, ಉಚಿತ ಶಿಕ್ಷಣ, ಹಿರಿಯರ ಹೆಸರಿನಲ್ಲಿ ಪಾರಿತೋಷಕ
ನೀಡುವಂತಿಗೆ, ಅಪಘಾತವಾದವರನ್ನು, ಆಸ್ಪತ್ರೆಗೆ ಕೊಂಡೊಯ್ಯುವುದು, ರಕ್ತದಾನ, ಮನೆಗೆ
ಬಂದವರಿಗೆ, ಅಶನ  ನೀಡುವುದು, ಹೊರಗಿನವಿರಿಗೆ ಅಶನದಾನ, ಇವೆಲ್ಲವೂ, ದಯೆಯ
ವಿವಿಧ ಮುಖಗಳು. ಇಂದಿನ ಯುವಕರು, ತಮ್ಮ ತಂದೆ-ತಾಯಿಯರನ್ನು, ವೃದ್ದಾಶ್ರಮಕ್ಕೆ
ಸೇರಿಸಿ, ಅಥವಾ, ಎಲ್ಲಾ ಅನುಕೂಲಗಳನ್ನೂ ಕೊಟ್ಟು, ಮನೆಯಲ್ಲಿರಿಸಿ, ಅವರು ಸಂತೋಷವಗಿ-
ದ್ದಾರೆ ಎನ್ನುತ್ತಾರೆ. ಅದಲ್ಲ ಸಂತೋಷ.
ಅವರಿಗೆ, ಎರಡು ಹಿತವಾದ ಮಾತುಗಳನ್ನಾಡಿ, ಅವರ ಅನಿಸಿಕೆಗೆ ಸ್ಪಂದಿಸಿ, ಅವರ ಇಷ್ಟ-
ಅನಿಷ್ಟಗಳನ್ನು ಗುರ್ತಿಸಿ, ಪ್ರತಿಕ್ರಯಿಸುವುದಾಗ, ಹೃದಯದಲ್ಲಿ ಹೊಮ್ಮುವ ಆನಂದವೇ ದಯೆ.
ಅದನ್ನು ಅನುಷ್ಟಾನಕ್ಕೆ ತರಲು ಮನವಿದೆಯೇ.ಅದಕ್ಕೆ ಅಗತ್ಯವಾದ ಸಂಪನ್ಮೂಲವಿದೆಯೇ.
ಹಾಗಾದರೆ, ಇಂದೇ, ಕಂಕಣಬದ್ಧರಾಗಿರಿ.
ಅಧ್ಯಾಯ-೬.ದಾನ.
===========
ದಾನವೆಂದರೆ, ಬರೀ, ಧನ, ವಸ್ತುಗಳನ್ನು ಮಾತ್ರ ನೀಡುವುದಲ್ಲ. ಇತರ ಹಲವು ದಾನಗಳಿವೆ.
ಪ್ರದಾನ; ಅತ್ಯುನ್ನತವಾದದ್ದು. ಅದು ಅಧ್ಯಾತ್ಮ ಸಂಭಂಧವಾದದ್ದು.
’ದೇವಾನ್ ಭಾವಯತಾನೇನ, ತೇ ದೇವಾ ಭಾವಯನ್ತುವಃ. ಪರಸ್ಪರಂ ಭಾವಯಂತಃ, ಶ್ರೇಯಃ
ಪರಮವಾಪ್ಸ್ನುಯಾತ್.’ಭಗವದ್ಗೀತೆ;
’ನಾವು ನಮ್ಮ ನಿತ್ಯಕರ್ಮಗಳನ್ನು, ನಡೆಸುವುದರ ಮೂಲಕ ದೇವತೆಗಳನ್ನು ತೃಪ್ತಿಗೊಳಿಸಿದರೆ
ಅವರು ನಮ್ಮ ಬಾಳಿನಲ್ಲಿ ಸನ್ಮಂಗಳವಾಗಲು ನೆರವೀಯುತ್ತಾರೆ.ಪಿತೃಗಳಿಗೆ, ಅವರ ಕ್ರಿಯೆ-
ಗಳನ್ನು ನಡೆಸುವದರ ಮೂಲಕ ಅವರು ಹರಸುತ್ತಾರೆ.
ನಿಧಾನ;ಮನಸ್ಸಿಗೂ, ಉದ್ರೇಕಕ್ಕೂ, ಬಲು ಸಂಭಂದ. ಈಗಿನ ಕಾಲದಲ್ಲಿ, ಪತಿ-ಪತ್ನಿಯರು,
ತಂದೆ-ಮಕ್ಕಳು, ಸ್ನೇಹಿತರು, ಆಸ್ತಿಗೆ, ಸ್ಥಿರಾಸ್ತಿಗೆ, ಚರಾಸ್ತಿಗೆ ಮನಸ್ತಾಪ.ಈ
ಹಿಂದೆ, ಹೆಂಡತಿಗೆ, ತವರಿಗೆ, ಹೋಗೆಂದು ಹೇಳಿದರೆ, ಅವಳು ತವರಿಗೆ ಹೋದರೆ, ಪತಿ,
ಬಂದು ಮತ್ತೆ ಕರೆದೊಯ್ಯುತ್ತಿದ್ದ. ಈಗ, ಒನ್-ವೇ-ಟ್ರಾಫ಼ಿಕ್ ಆಗಿದೆ. ಕಾರಣ, ಪರಸ್ಪರ,ಅಪ ನಂಬಿಕೆ,
ಅರಿವಿಕೆಯ ಅಭಾವ. ’ತಾಳಿ’ ಎಂದರೆ, ಎಂತಹ ಪರಿಸ್ಥಿತಿಯಲ್ಲೂ, ’ತಾಳಿ’ ಎಂದು ಅದು ಅದೇಶಿ-
ಸುತ್ತದೆ. ’ಕೂಲ್ ಆಗದೆ,’ಫ಼ೂಲ್’ ಆಗುವದನ್ನು ಬಿಟ್ಟು, ’ಕಾಂ’ ಅಗಿದ್ದು, ’ವಾರಂ’ ಆಗಿ, ’ಸ್ಟಾರಂ’
ಆಗದೆ,’ಫ಼ಾರಂಗೆ’ ಬಂದರೆ, ಅದೇ, ಬಾಳಿಗೆ ಅಲಾರಂ. ಅದಕ್ಕೆ ನಿಧಾನವೇ ಆಧಾರ.
ಸಮಾಧಾನ;’ನಾರದೋ ಕಲಹಪ್ರಿಯಃ’ ಎಂದರೂ, ಅಂತಿಮದಲ್ಲಿ ಸುಖಾಂತವಾಗುತ್ತದೆ.
’ಕಲಹ ಸನಿಹದಲ್ಲಿದ್ದರೂ, ಅದು ಒಂದು ’ಮತಿಭ್ರಮಣೆಯ’ ತರಹ. ಅದೇ, ’ವಿರಹ’ ಎಂದರೆ,
ಬಾಳಿನಲ್ಲಿ, ಅದು, ’ಸುಖ ಬರಹ.’ಅದರ ಆನಂದವೇ ಒಂದು ತರಹ. ಆಗ,’ವ್ಯಕ್ತಿ ಕುಣಿದು
ಕುಪ್ಪಳಿಸುವನು, ಸಂತಸದಲ್ಲಿ, ಕೂಗುತ್ತಾ,’ಅಹಾಹ.’
ಸಂಧಾನ;ಎರಡು ತಂಡಗಳ ನಡುವೆ, ಪಂದ್ಯ ನಡೆಯುತ್ತದೆ. ಸೋಲು-ಗೆಲುವು, ಸಾಮಾನ್ಯ.
ಪ್ರೇಕ್ಷರಿರುತ್ತಾರೆ. ಅದಕ್ಕೆ ಒಂದು ವಿಧಿಯಿದೆ. ’ಅಂಪೈರ್’ ಮಾತನಾಡುವದಿಲ್ಲ. ’ಶೀಟಿ
ಊದುತ್ತಾನೆ. ಅತಿ ಉದ್ರೇಕ ಪ್ರಕಟಣೆ, ’ಗೇಟ್-ಪಾಸ್.’ ಇನ್ನೊಬ್ಬನಿದ್ದಾನೆ. ಮೂರನೇ, ’ನಿರ್ಣಾಯಕ’.
ಅವನ ನಿರ್ಧಾರವೇ ಅಂತಿಮ.
’ಬಾಳ ಪಂದ್ಯದಲ್ಲಿ, ’ಸುಖ-ದುಃಖ, ’ನೋವು-ನಲಿವುಗಳಲ್ಲಿ ಗೆಲ್ಲಬೇಕಾದರೆ,  ’ಮೂರನೇ
ನಿರ್ಣಾಯಕ, ದೇವರ ಮೊರೆ ಹೋಗಬೇಕು. ’ ಶ್ರಮಕ್ಕೆ, ನ್ಯಾಯಕ್ಕೆ, ಜಯ.’
ವಿಧಾನ;;ಸುಗಮ ಜೀವನಕ್ಕೆ ಅವಶ್ಯ ’ಸಾವಧಾನ.’ ಅದು ’ಸ್ವಾಮಿಯ ವರದಾನ.’
ಅಧ್ಯಾಯ-೭, ದೇವರು
====================
’ದೇವರೆಂದರೆ ಯಾರು.’. ಇದರ ವಿಷ್ಲೇಶಣೆ, ಗಹನ, ಕುತೂಹಲಕರ. ವಿವಾದಗಳಿವೆ.
ಸ್ವಾಮಿ ಚಿನ್ಮಯಾನಂದ;’ ನಾಸ್ತಿಕರು ’ಗಾಡ್ ಈಸ್ ನೋ ವೇರ್’ ಎನ್ನುತ್ತಾರೆ.’ಆಸ್ತಿಕರು, ’ ಗಾಡ್ ಈಸ್
ನೌ ಹಿಯರ್,’ ಎನ್ನುತ್ತಾರೆ.
ಹಿಂದೆ, ನಮ್ಮ ಋಷಿಗಳು ಕಠಿಣ ತಪವನ್ನಾಚರಿಸಿ, ಇದರ ರಹಸ್ಯವನ್ನು ಕಂಡು ಹಿಡಿದರು.
’ಶೃತಿ, ಸ್ಮೃತಿ ಗಳ ಮೂಲಕ ಅದು ಪ್ರಸಾರವಾಯಿತು. ವೇದ, ಇತಿಹಾಸ, ಪುರಾಣಗಳ ಮೂಲಕ
ಅದು ಇನ್ನೂ ಪ್ರಚಾರವಾಯಿತು.
’ಭಗವಂತನೇ ಹಲವು  ಅವತಾರಗಳೆನ್ನಿತ್ತಿ, ’ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೆ
ನಾಂದಿಯಾಯಿತು. ಶ್ರೀ ರಾಮಾಯಣ, ಶ್ರೀ ಮಹಾಭಾರತ, ಭಗವದ್ಗೀತೆ, ಶ್ರೀಮದ್ ಭಾಗವತಗಳು ಉದಯವಾಯಿತು. ನಂತರ ಮಹಾತ್ಮರ ಅವತಾರ.
’ಸ್ವಾಮಿಯೇ ಇಚ್ಚಿಸಿದ್ದು ಕೆಲವು ಕ್ಷೇತ್ರಗಳು, ಋಷಿಗಳು ಬೇಡಿ, ಸ್ವಾಮಿ, ನಿಂತ ಕ್ಷೇತ್ರಗಳು.
ಅರಸರು, ಭಕ್ತರು ನಿರ್ಮಿಸಿದ ಕ್ಷೇತ್ರಗಳು.
ನಂತರ ಆರಾಧನೆಯಲ್ಲಿ ಎರಡು ವಿಭಾಗ. ಓಂದು ನಿತ್ಯ, ನೈಮಿತ್ತಿಕ, ಕರ್ಮಗಳ ಕರ್ಮಾ-
ಚರಣೆ, ಇದು ಒಂದು ವಿಭಾಗ. ಮತ್ತೊಂದು, ತಪಸ್ಸು, ಧ್ಯಾನದ ಮೂಲಕ, ಆ, ಸ್ವಾಮಿಯನ್ನು
ಕಂಡು, ಅರಿತು, ಆನಂದದ ಅಮೃತತ್ವವನ್ನು ಅನುಭವಿಸುದು.
ಒಂದು ಟೀವೀ ಇದೆ. ಅದರ ನಿರ್ಮಾಣಕ್ಕೆ ಪ್ರತಿಭೆ ಅಗತ್ಯ. ನಂತರ, ಅದರ ಕಾರ್ಯಕ್ರಮಗಳ
ವಿವರಣೆಗೆ ವ್ಯಕ್ತಿಗೆ ಪ್ರತಿಭೆ ಅಗತ್ಯ.ವೀಕ್ಷಕರಿಗೆ, ಅದನ್ನು ತಿಳಿದುಕೊಳ್ಳಲು ಪ್ರತಿಭೆ
ಅಗತ್ಯ. ಮೂವರಿಗೂ, ಈ, ಅರಿವು ಎಲ್ಲಿಂದ ಬಂದಿತು.
ನಮ್ಮಲ್ಲಿರುವ ಸ್ವಭಾವಕ್ಕೆ ’ನೇಚರ್’ ಎನ್ನುತ್ತರೆ. ಇದು, ಜೀವಾತ್ಮ, ಪ್ರಕೃತಿ ಸಂಪತ್ತು, ಬಾಳಿನ ನಿರ್ವಹಣೆಗೆ ನೆರವಾಗುವುದರಿಂದ, ಅದನ್ನು ’ನೇಚರ್’ ಎನ್ನುತ್ತಾರೆ. ಇದನ್ನು ನಿರ್ವ-
ಹಿಸುವ ವ್ಯಕ್ತಿಗೆ, ’ದೇವರು’ ಎನ್ನುತ್ತಾರೆ.
’ಒಂದು ಸಂಸ್ಥೆಯಲ್ಲಿ, ಎಂ.ಡಿ. ಇದ್ದಾರೆ. ಅವರ ಪರ ಬೇರೆಯವರು, ಕೆಲಸ ನಿರ್ವಹಿಸುವು-
ದರಿಂದ, ಅವರು, ಇಲ್ಲವೆಂತಲ್ಲ. ಎಲ್ಲೋ ಒಂದೆಡೆ ಇದ್ದಾರೆ. ಇದು, ದೇವರಿಗೂ ಅನ್ವಯಿಸುತ್ತದೆ.
ಇದಕ್ಕೆ, ಶ್ರೀ ಶಂಕರ ಭಗವತ್ಪಾದರು, ’ಅತಿ ಪ್ರತಿಭಾವಂತರಿಗೆ ವೇದ, ಉಪನಿಷತ್ತು,
ಮಧ್ಯಮ ವರ್ಗದವರಿಗೆ, ಪೂಜೆ-ಪುನಸ್ಕಾರಗಳು, ಪಾಮರರಿಗೆ, ಸ್ತೋತ್ರಗಳನ್ನು ರಚಿಸಿ,
ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು, ಬುನಾದಿಯಾದರು.
ಶ್ರೀ ಶಂಕರರಿಂದ ನಿಯುಕ್ತರಾದ ಗುರುವಿನ ಮೂಲಕ, ಭಕ್ತನಿಗೆ, ಮೋಕ್ಷಕ್ಕೆ, ದಾರಿ-
ಮಾಡಿರುವದರಿಂದ  ’ನಾನು’ ಎಂಬ ಅಜ್ಞಾನವನ್ನು ಕಳಚಿ, ಜ್ಞಾನವೆಂಬ ಪೀತಾಂಬರವನ್ನು
ಧರಿಸಿ, ಅದರಲ್ಲಿ, ಭಕ್ತಿಯನ್ನು ಬೆರಸಿ, ಮೆದುಳಿನಲ್ಲಿ ಚಿಂತೆಯನ್ನು ಬದಿಗಿರಿಸಿ,
ಅವನಲ್ಲಿ ಮನವಿರಿಸಿ, ಅವನ ಅರಸಿ, ಪಯಣಿಸಿ, ಅಧ್ಭುತ ಆನಂದವನ್ನು ಎಲ್ಲರಿಗೂ ಉಣಿಸಿ.
================================================================================’
ಅಧ್ಯಾಯ-೮
==========
ನಾಲ್ಕು ಸೋದರರು-ರಾಮಾಯಣದ ರತ್ನಗಳು.
--------------------------------------
ಶ್ರೀಮದ್ ರಾಮಾಯಣದಲ್ಲಿ, ಶ್ರೀ ವಾಲ್ಮೀಕಿಯು, ಶ್ರೀ ನಾರದರನ್ನು, ವಿಶ್ವದಲ್ಲಿಯೇ,
ಗುಣವಂತನಾದ, ವೀರ, ಶೂರನೂ, ಕೃತಜ್ಞನೂ, ಆದ, ವ್ಯಕ್ತಿ, ಯಾರೆಂದು ಕೇಳಲು, ನಾರದರು,
ಶ್ರೀ ರಾಮಚಂದ್ರನನ್ನು ಉದ್ಧರಿಸುತ್ತಾರೆ.
ಪುತ್ರಕಾಮೇಷ್ಠಿ ಯಾಗದ ಪಲದಿಂದ ದಶರಥನಿಗೆ ಜನಿಸಿದ, ನಾಲ್ಕು ಮಕ್ಕಳೂ. ಶ್ರೀರಾಮ,
ಲಕ್ಷ್ಮಣ, ಭರತ ಶತ್ರುಘ್ನರು, ಇದು ಶ್ರೀರಂಗಪಟ್ಟನದಲ್ಲಿ ಪುನರಾವರ್ತನೆ
ಆಗಿದೆ, ಎಂದರೆ, ಉಪೇಕ್ಷೆಯಲ್ಲ.
ಶ್ರೀ ರಾಮ;ಹಿರಿಯ ಮಗ ಶ್ರೀ ಸುಬ್ರಮಣ್ಯನ ಹೆಸರನ್ನು ಹೊತ್ತು,ಸ್ವಾಮಿಯಂತೆ,ಪ್ರಾಜ್ಞನೂ,
ನಿಸ್ಪೃಹನೂ, ಖಂಡಿತವಾದಿಯೂ, ನಿಯಮಬದ್ಧನೂ, ಆಗಿದ್ದಾನೆ.
ಬಾಲ್ಯದಿಂದಲೂ, ಈಜು ಕಲಿತಿದ್ದರಿಂದ, ಸಂಸಾರಸಾಗರವನ್ನು ದಾಟುವುದು ಸುಲಭವಾಯಿತು. ಹಾಗೆಯೇ,
ಕಾಲ್ಚೆಂಡು ಕಲಿತಿದ್ದರಿಂದ, ಗುರಿ ಸಾಧಿಸುವುದನ್ನು, ಕಲಿತಾಯಿತು.
ಅವರ ಕುಟುಂಬದಲ್ಲೇ, ಪ್ರಥಮ ಪದವೀಧರನಾಗಿ, ಸರ್ಕಾರಿ ಕೋಶಾಗಾರದ ಅಧಿಕಾರಿ
ಕಾರ್ಯವನ್ನು, ಯೆಶಸ್ವಿಯಾಗಿ, ನಿರ್ವಹಿಸಿ, ಸ್ಟಿಕ್ ಅಂಡ್ ಕ್ಯಾರಟ್ [ವಜ್ರದಂತೆ ಕಠಿಣ,
ಹೂವಿನಂತೆ ಮೃದು], ವಿಧಾನವನ್ನು ಅನುಸರಿಸಿ, ನಿವೃತ್ತಿಯನಂತರ, ಶಿವನ ಅರಾಧನೆ-
ಯಲ್ಲೇ ಮಗ್ನರಾಗಿದ್ದಾರೆ.’ಬ್ರಹ್ಮನ ಆರಾಧನೆಗೆ, ಅಗತ್ಯವಾದ, ’ಗಾಯತ್ರಿ’ದೇವಿಯೇ, ಬಳಿ-
ಯಿರುವಾಗ, ಕೊರತೆಗೆ ಅವಕಾಶವೆಲ್ಲಿ.
ಅನಂತ; ಶ್ರೀ ರಾಮಾನುಜರು, ಶ್ರೀ ಲಕ್ಷ್ಮಣನನ್ನು, ’ನಿಂತರೆ, ಕೊಡೆ, ನಡೆದರೆ ಪಾದುಕೆ,
ಮಲಗಿದರೆ ಹಾಸಿಗೆ, ಎಂದು ವರ್ಣಿಸಿದ್ದಾರೆ. ’ಲಕ್ಷ್ಮೀವಾನ್ ಲಕ್ಷ್ಮಿವರ್ಧನಃ,ಎಂಬಂತೆ,
ಸೇವೆಗೆ, ಹೆಸರಾದ ಅವರು, ಶ್ರೀ ಸುಬ್ರಮಣ್ಯನ, ಹೆಸರನ್ನೇ, ಪಡೆದು,ಸೇವೆಯಲ್ಲೇ
ನಿರತರಾಗಿದ್ದಾರೆ. ಸ್ನೇಹ ಪರ, ಆಪಾರ ಚಾತುರ್ಯ, ಇವುಗಳ ಮಿಶ್ರಣ ಈ ವ್ಯಕ್ತಿ.
’ಭರತೋ, ಬ್ರಾತ್ರುವತ್ಸಲಃ;’ಕೈಗೆ ಬಂದ ರಾಜ್ಯವನ್ನು ಕಡೆಗಣಿಸಿ, ಕಾಡಿಗೆ ತೆರಳಿ,
ಅಣ್ಣನನ್ನು ಕಂಡು, ಪಾದುಕೆ ಪಡೆದು, ನಂದೀಗ್ರಾಮದಲ್ಲಿ ನೆಲೆಸಿ, ನಾಮಕಾವಸ್ತೆಯ ಪ್ರತಿ-
ನಿಧಿಯಾಗಿ, ಹದಿನಾಲ್ಕು ವರ್ಷ ಮುಗಿದ ದಿನ ಬರದಿದ್ದರೆ, ಅಗ್ನಿಪ್ರವೇಶ ಮಾಡುವೆನೆಂದ
ಅವನಲ್ಲವೇ ಪ್ರಿಯ ಸೋದರ. ಅದಕ್ಕೇ ’ಭರತೋ ಬ್ರಾತೃವತ್ಸಲಃ’ ಎಂದು ಸಾರಿದ್ದಾರೆ.
 ತಂದೆ ನಡೆಸಿದ ಕಾರ್ಯವನ್ನು, ನಿರ್ವಹಿಸುತ್ತಾ, , ಪುರ-ಹಿತ,
[ಊರಿನ ಹಿತರಕ್ಷಣೇ], ಪುರೋಹಿತರಾಗಿದ್ದಾರೆ. ಮಾನವಕಲ್ಯಾಣದ ರುವಾರಿಯಾಗಿದ್ದರೆ.
ಪ್ರಕಾಶ್ ಬಾಬು;ಶತ್ರುಘ್ನಃ ಶತ್ರುಮರ್ಧನಃ-ಶತ್ರುಘ್ನ ಯಾವ ಒಂದು ನಿಯಮವನ್ನೂ
ಪಾಲಿಸಲಿಲ್ಲ. ಭರತನನ್ನೆ, ಗುರುವಾಗಿ ಸ್ವೀಕರಿಸಿ, ಅವರ ನೆರಳಿನಲ್ಲೇ ಸಾಗಿದ್ದಾರೆ.
ಜ್ಞಾನಪ್ರಸಾರವನ್ನು ಕೈಗೊಂಡು, ’ತಿಳಿವಳಿಕೆಯ ಮೂಲಕ, ಇನ್ನು, ಹೆಚ್ಚು ಸಮರ್ಪಕ-
ವಾಗಿ ಕಾರ್ಯ ನಿರ್ವಹಿಸಲು ನೆರವೀಯುತ್ತಿದ್ದಾರೆ.
’ರಾಮಾಯಣದ ನಾಲ್ಕು ಮಹಾತ್ಮರು, ಕಲಿಯುಗದಲ್ಲಿ , ಶ್ರೀರಂಗಪಟ್ಟಣಕ್ಕೆ ಬಂದಿಳಿದರೋ,
ಎಂಬ, ಭಾಸವಾಗುತ್ತದೆ. ಒಟ್ಟಿನಲ್ಲಿ, ಇವರನ್ನು ಹೆತ್ತ, ಮಾತಾ-ಪಿತರು ಧನ್ಯರು.
===============================================================================
ಅಧ್ಯಾಯ-೯.
==========
ಪಂಚ ಕನ್ಯೆಯರು
==================
’ಅಹಲ್ಯಾ ದ್ರೌಪತಿ ತಾರಾ ಸೀತಾ ಮಂಡೋದರೀ ತಥಾ, ಪಂಚಕನ್ಯಾಂ ಸ್ಮರೇನ್ ನಿತ್ಯಮ್,
ಮಹಾಪಾತಕ ನಾಶನಂ.
=====================
ಶ್ರೀರಂಗಪಟ್ಟಣದಲ್ಲಿದ್ದ ನಾಯಕರಿಗೆ ಪಂಚಕನ್ಯೆಯರಿದ್ದರು. ಅವರ ಸ್ಥೂಲ
ಪರಿಚಯ;
ಶ್ರೀಮತಿ ಸುಂದರಿ;ಶ್ರೀ ಶಂಕರಾಚಾರ್ಯರು ರಚಿಸಿದ ಸೌಂದರ್ಯಲಹರಿಯಲ್ಲಿ ತಾಯಿಯ ಸೌಂದರ್ಯವರ್ಣನೆ ಬರುತ್ತದೆ. ಹಿರಿಯ ಮಗಳು, ಶ್ರೀಮದ್ ಗಾಂಭೀರ್ಯ, ವಿನಯ, ವಿವೇಕ,
ವಿಶ್ವಾಸಗಳ ಪ್ರತಿರೂಪವಾಗಿ, ಮನೆಯ ಕಣ್ಮಣಿಯಾಗಿದ್ದಳು. ಶ್ರೀ ಸುಬ್ರಮಣ್ಯ ನಾಮಾಂಕಿತನ, ಕೈಹಿಡಿದು, ಆಳಿದ ಮಹಾಸ್ವಾಮಿಗಳ, ನಗರದಲ್ಲಿ, ಸುಖ ಸಂಸಾರವನ್ನು ನಡೆಸಿ,
ಅನಾರೋಗ್ಯದಿಂದ, ಅಸು ನೀಗಿದರೂ, ಶ್ರೀ ಸುಬ್ರಮಣ್ಯನರಸಿಯ ಹೆಸರಿನ, ಮುದ್ದು ಮಗಳನ್ನಿತ್ತು
ಕೃತಾರ್ಥಳಾದಳು. ’ಸುಂದರಿಯಾಗಿದ್ದು, ದಯಾಮಯಿಯಾಗಿ, ರಿಕ್ತಹಸ್ತದಿಂದ ದಾನಮಾಡಿದ
ಸ್ತ್ರೀರತ್ನ.
============
ರಾಜಲಕ್ಷ್ಮಿ; ಪ್ರೀತಿಯ ಹೆಸರು ’ ರಾಜಿ.’ನಾವು ಶಾಂತಿಪ್ರಿಯರು.’ ಯಾವುದೇ ಜಗಳವಿದ್ದರೂ,
ಸಂಧಾನದ ಮೂಲಕ ಪರಿಹರಿಸಿಕ್ಕೊಳ್ಳಬಹುದು. ಇದನ್ನೇ, ರಾಜೀ ಸೂತ್ರ’ ಎನ್ನುವರು. ಇವರು
ವಿವೇಕ, ವಿವೇಚನೆ, ವಿಮರ್ಶೆಯ ಪ್ರತೀಕ. ಅವರು ಮನೆಯ ಆಡಳಿತವನ್ನು ನಿರ್ವಹಿಸುತ್ತಿದ್ದ
ವೈಖರಿಯೇ, ಒಂದು ಅಪೂರ್ವ ಅನುಭವ. ಅವರು ಮೆಟ್ರಿಕ್. ಪರೀಕ್ಷೆಗೆ ಹೋದಾಗ, ನಾನು ಊಟ
ಕೊಂಡುಹೋದ ನೆನಪಿದೆ. ಶ್ರೀ ಸುಬ್ರಮಣ್ಯ ನಾಮಾಂಕಿತನ ಜೊತೆ ವಿವಾಹ, ಒಂದು ಚರಿತ್ರಾರ್ಹ
ಘಟನೆ. ಮನೆಯಲ್ಲೇ, ’ಆಧುನೀಕತೆಯ’ ಮಾರ್ಪಾಟಾಯಿತು. ’ಕುವರ-ಕುವರಿಯರೊಡನೆ ಅವರು
ಭವ್ಯವಾಗಿ ಬಾಳಿದ ಅವರು ಹರೆಯದಲ್ಲೇ ವಿಧಿವಶರಾದುದು, ವೇದನೆ ತಂದರೂ, ಮನದಲ್ಲಿ
ಆಚಂದ್ರಾರ್ಕವಾಗಿ ನೆಲೆಸಿದ್ದಾರೆ.’- ರಾಣಿಯಂತೆ ಬಾಳಿ ಜನಪ್ರಿಯರಾಗಿ, ಲಕ್ಷ್ಯದತ್ತ ಸಾಗಿದ
ವೀರ ಲಕ್ಷ್ಮಿ.’------------------------------------------------------------------
===============
ವಸಂತ;’ವಸಂತ ಬಂದ ಋತುಗಳ ರಾಜ ತಾ ಬಂದ..’ ಇದು ನಮ್ಮ ಕಾಲದ ಜನಪ್ರಿಯ ಪದ್ಯ.ವರ್ಷ-
ದಲ್ಲಿ ವಸಂತಋತುವನ್ನು, ಮಾನವರು, ಪಶುಪಕ್ಷಿಗಳು, ರೈತರು, ಕಾತರದಿಂದ ನಿರೀ-
ಕ್ಷಿಸುತ್ತಾರೆ.’ರೈತರು ಫಸಲನ್ನು ತೆಗೆದು, ಮಾರುಕಟ್ಟೆಗೆ ಕಳುಹಿಸುವ ಕಾಲ. ಉಗಾದಿಯಿಂದ
ಹಬ್ಬಗಳ ಸಾಲು ಪ್ರಾರಂಭ. ’ ಈ ರೀತಿ ಹರ್ಷವೇ, ಧರೆಗಿಳಿದು ಬಂದಿತೋ’ ಎನಿಸಿತು.ಅವರ
ಜೀವನ, ’ವಸಂತಗೆ ಸಂತಸ ತಂದ ತರುಣಿ.’
========================================
ನಾಗರತ್ನ;[ಡಾಲಿ];=ಡಾಲ್ ಎಂದರೆ ಆಂಗ್ಲದಲ್ಲಿ ಬೊಂಬೆ.
. ಮುದ್ದುಮುದ್ದಾಗಿ, ಮಾತನಾಡುವ ಹವ್ಯಾಸ.
ಶಿಕ್ಷಣಕ್ಷೇತ್ರದಲ್ಲಿ, ಪ್ರಾವೀಣ್ಯತೆಯನ್ನು ಪಡೆದು, ಶಿಕ್ಷಕಿಯಾಗಿ, ಶಿಶ್ಯರಿಗೆ,-
ಶಿಕ್ಷಣವನ್ನಿಯುತ್ತಾ, ಇಂದು ’ಶಿರೋರತ್ನವಾಗಿದ್ದಾರೆ.’ನಾವು ಗಳಿಸಿದ್ದನ್ನು ರಕ್ಷಿಸಲು, ಯತ್ನಿಸಬೇಕು.
.
ವೀಣಾ;= ಸಂಗೀತದಲ್ಲಿ, ಪಿಟೀಲು, ವೀಣೆಗಳಿಗೆ, ಮಹತ್ವವಾದ ಸ್ಥಾನವಿದೆ. ಪಿಟೀಲಿನಲ್ಲಿ
ಕಮಾನು , ತಂತಿಯೊಡನೆ ಮೆಳೈಸುವುದರಿಂದ, ಇಂಪಾದ ನಾದವನ್ನು ಹೊರಹೊಮ್ಮಿಸುತ್ತದೆ.
ಕಮಾನು-ತಂತಿ-ಘರ್ಶಣೆ. ಫಲ.ದುಃಖ.’ ಸಹೃದಯತೆಯ ರಾಗದಿಂದ, ವಿಶ್ವಾಸದ ವೀಣೆ-
ಯನ್ನು ಮೀಟಿದಾಗ ವಿಶ್ವವೇ ನಿನ್ನದಾಗುತ್ತದೆ.’ ಜೊತೆಗೆ, ತಂತಿಯನ್ನು ಮೀಟುತ್ತಾ, ಮನೆಮನೆ-
ಯನ್ನು ಮೀಟಿದರೆ, ಹೆಜೆಜೆಗೂ, ಸುಖದ ಮಜಲನ್ನು ಪ್ರತಿಬಿಂಬಿಸುತ್ತದೆ.
ಜೊತೆಗೆ, ಶ್ರೀ ಸೂರ್ಯನಾರಾಯಣನ ಬೆಂಬಲವಿರುವುದರಿಂದ, ಜಗತ್ತಿಗೆ ಬೆಳಕು ನೀಡುವದ-
ರಿಂದ, ಪ್ರಕೃತಿಯ ಸ್ನೇಹಿತನಾಗುತ್ತಾನೆ.
’ವೀಣೆಯ ಕಂಪನದಿಂದ, ಮಳೆ ಸುರಿಸಿರುವ ಘಟನೆಗಳಿವೆ.’ಸೂರ್ಯನ ಪ್ರಿಯವಾದ ’ಗಾಯತ್ರಿ
ಮಂತ್ರದಿಂದ ಬಾಳು ಸುಗಮವಾಗುತ್ತದೆ.’ ಸಂಗೀತದ ಮಳೆ ಹರಿದಾಗ, ಸಂತೋಷ, ಸೌಭಾಗ್ಯ,
ಸನ್ಮಂಗಳ ನಿಶ್ಚಯ.
================================================================================
ಅ ದಿನದ ಸವಿನೆನಪುಗಳು-ಅಧ್ಯಾಯ.೧೦

=========================== ========
೧೯೫೯-೬೦ ರ ಸಮಯ. ಆಗ ನಾನು ೧೫ ವರ್ಷದವನಾಗಿದ್ದೆ. ರಜೆಯಲ್ಲಿ ಈ ಕ್ಷೇತ್ರಕ್ಕೆ ಬರುವುದು
ವಾಡಿಕೆ.
ವಿದ್ಯಾರ್ಥಿಯಾಗಿದ್ದರಿಂದ ಹಣಬಲ ಅಷ್ಟಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ೨-೫೦ ರೂ.ಚಾರ್ಜು.
ಬರಲು, ರೂ.೨-೫೦ ಚಾರ್ಜು. ಒಟ್ತು, ರೂ.೫. ೦=೫೦ ಪೈಸೆ ಎಂತೆ, ೧ ದಿನಕ್ಕೆ ರೂ.೧೫. ಎಂದರೆ
೨೦ ರೂ ನಲ್ಲಿ ಸಂಪೂರ್ಣ ಪ್ರವಾಸ ಮುಗಿಯಬೇಕು. ’ಇದು ಸಾಧ್ಯವೇ ಎಂದರೆ, ಸಾಧ್ಯ. ಆಗಿನ
ಕಾಲಕ್ಕೆ.
ಮನೆಯ ಯೆಜಮಾನರು ಎಂದರೆ, ನಮ್ಮ ಭಾವನವರು, ದಯಾಪರರು, ಧಾರ್ಮೀಕರು. ಬಂದೊಡನೆ
’ಬಾ ಬೆಂಗಳೂರು’ ಎಂದು ಸ್ವಾಗತ. ಅತ್ತೆಯವರಿಂದ, ಯೋಗಕ್ಷೇಮ ವಿಚಾರ, ಸಂಜೆ, ಶ್ರೀ
ರಂಗನಾಥ, ಶ್ರೀ ಗಂಗಧರೇಶ್ವರನ ದರ್ಶನ. ಮೂರನೆಯ ದಿನದಿಂದ, ಹೊಸ ದಿನಚರಿ
ಪ್ರಾರಂಭ.
’ಬೆಳಗ್ಗೆ, ಕಾವೇರಿಯಲ್ಲಿ ಸ್ನಾನ. ಹಿರಿಯ ಮಗ ಭಾರೀ ಈಜುಗಾರ. ಬಸ್ ನಿಲ್ದಾಣದ ಸೇತುವೆ-
ಯಲ್ಲಿ ಬಿದ್ದು, ರೈಲ್ವೇ ನಿಲ್ದಾಣದ ಬಳಿ ಏಳುವ ರಣಧೀರ. ಅದೇ ಶಿಕ್ಷಣವನ್ನು ತಮ್ಮಂ-
ದಿರಿಗೂ ಇತ್ತು ಪ್ರವೀಣರಾಗಿಸಿದ. ನಂತರ, ಮನೆಗೆ ಬಂದರೆ, ಸಂಧ್ಯವಂದನೆ. ಅತ್ತೆಯವ-
ರಿಂದ ದೊಡ್ಡ ಹಾಲಿನಲ್ಲಿ, ಕುಳ್ಳಿರಿಸಿ, ತಿಂಡಿ ಪ್ರದಾನ. ಚಿಕ್ಕ ಮಕ್ಕಳ ನಡುವೆ, ಸಣ್ಣ
ಸಣ್ಣ ಜಗಳ. ಶಾಂತಿ. ನಂತರ ಪಶ್ಚಿಮವಾಹಿನಿಗೆ ಪ್ರಯಾಣ. ಅಲ್ಲಿರುವ, ಶ್ರಿ.ಉಮಾಮಹೇ-
ಶ್ವರನಿಗೆ ಪೂಜೆ.
ರೈಲು ನಿಲ್ದಾಣದ ಮಧ್ಯೆ ನಡೆದುಬರುತ್ತಿದ್ದರೆ, ಪ್ರಕೃತಿಸೌಂದರ್ಯದ ವೀಕ್ಷಣೆ ಕಣ್ಣಿಗೆ ಹಬ್ಬ. ಕೆಲವು ಪ್ರೇಕ್ಷಕರು, ಸ್ಥಳವನ್ನು ವೀಕ್ಷಿಸಲು ಬಂದಾಗ, ’ಗೈಡ್’ ಆಗಿ ಕೆಲಸಮಾಡಿ
ಸ್ವಲ್ಪ ಹಣ ಮಾಡಿದ್ದುಂಟು.
ಅಲ್ಲಿಂದ ೧೦ಕಿ.ಮಿ.ದೂರದಲ್ಲಿರುವ ಪಾಂಡವಪುರಕ್ಕೆ ಪ್ರಾಯಾಣ. ’ಸಾಹಸ ಸಿಂಹ’, ರಾಮಾನುಜ-
ನೊಡನೆ, ಸೈಕಲ್ ಏರಿ ಪಯಣಿಸಿ, ಮಾವಿನಕಾಯಿ ಕಿತ್ತು ತರುವುದೇ, ಒಂದು ಸಾಧನೆ. ಚೀಲವನ್ನು
ಹಿಡಿದು, ಮರದಿಂದ, ಮರಕ್ಕೆ ಏರಿ, ಒಂದು ಮೂಟೆ ಮಾವಿನಕಾಯಿ ಕಿತ್ತು, ಚೀಲದಲ್ಲಿ ಹಾಕಿ,
ಸೈಕಲ್ ಏರಿ, ಬಂದರೆ, ’ನೋ ಟ್ರಬಲ್.’ ಅವರ ಕೆಲಸ ’ಗ್ಯಾಂಬಲ್. ದೊಡ್ಡವರ ಮುಂದೆ ’ಹಂಬಲ್.’
ಶ್ರೀರಂಗಮುಡಿಯಲ್ಲಿ, ಶ್ರೀ ರಂಗನಾಥಸ್ವಾಮಿಯ ದೇವಾಲಯದಲ್ಲಿ, ನಂತರ ದೊರಕುವ
’ಪುಳಿಯೋಗರೆ’, ಪ್ರಸಾದ, ರುಚಿಕರ. ಅರೋಗ್ಯಕರ, ಆನಂದಕರ.’
’ ಪರೀಕ್ಷೆಯ ಸಮಯದಲ್ಲಿ, ಹಗಲಿರುಳು, ಸೋದರಿಯರು ಓದುವುದು ಒಂದು ಕಣ್ಣಿಗೆ ಹಬ್ಬ.
ನಾವು ಅವರಿಗೆ ಪರೀಕ್ಷೆಯ ಸಮಯದಲ್ಲಿ ’ಊಟ, ಕೊಂಡೊಯ್ಯುತ್ತಿದ್ದುದು, ಒಂದು ಅಪೂರ್ವ ಅನುಭವ.
ಒಮ್ಮೆ, ಒಂಟೀಕೊಪ್ಪಲ್ ಪಂಚಾಂಗದ ಶ್ರೀ ವೆಂಕಟರಮಣಾವಧಾನಿಗಳು ಬಂದು, ನಮ್ಮ ಶ್ಲೋಕ-
ವನ್ನು ಕೇಳಿ ಇತ್ತ ’ನಾಕಾಣೆಯ, ಮೌಲ್ಯವನ್ನು ’ನಾಕಾಣೆ.’ ಅಂತೆಯೇ, ಮೈಸೂರಿನ ಶ್ರೀ ಕೃಷ್-
ಣೈಯ್ಯರ್ ಅವರು, ’ಸಂಗೀತ ಸುಧೆಯನ್ನು ಹರಿಸಿದ್ದು, ಇಂದು ನಾವು ಸ್ವಲ್ಪ ಸೇವೆಯನ್ನು ಸಲ್ಲಿಸು-
ವುದಕ್ಕೆ ಸ್ಫೂರ್ತಿ.
ಹಲವು ಭಾರಿ ಮೈಸೂರಿಗೆ ಹೋಗುವುದುಂಟು. ಅದು ’ವಿನೋಬಾ ಸರ್ವೀಸ್.’ ಹೋಗಲು ಮೂರು ಘಂಟೆ.
ಮನೆಗೆ ಬಸ್ಸಿನಲ್ಲಿ ಬಂದರೆ, ’ಯಾವ ಬಸ್ಸಿನಲ್ಲಿ ಬಂದೆ,ಎಂದರೆ, ನಿರುತ್ತರ. ಸತ್ಯ
ಅರಿತಿರುವ ಅತ್ತೆಯಿಂದ ’ಬಿಸಿ ಬಿಸಿ ಊಟ.’ ಕೆ.ಆರ್.ಎಸ್.ಗೂ, ವಿನೋಬಾ ಸರ್ವೀಸ್. ಅತ್ತೆಯವರಿಂದ
ಹಿತ್ತಲ ಗೇರುಬೀಜದ ಹುಳಿ ಅತಿ ಮಧುರ. ನಮ್ಮ ಭಾವನವರಿಂದ ’ಸಿಹಿಮಾತಿನ ಉಪಚಾರ.’
ಚಾಪೆಯ ಮೇಲೆ ಮಲಗಿದರೆ, ’ಅಮರಲೋಕ ದರ್ಶನ.’ ಅವರ ಮಗ ನಾಗರಾಜ. ಕೇ.ಆರ್.ಎಸ್. ನ
ಅಪಾರ ಜ್ಞಾನದ ವೀಕ್ಷಕ ವಿವರಣೆಯಿಂದ ಅಲ್ಲಿ ಸುತ್ತಾಡಲು ಹೋದರೆ, ನಮ್ಮನ್ನು ಮರುಳು-
ಗೊಳಿಸುವ ಕಲೆ ಅವನಿಗೆ ಸೀಮಿತ.
ಹಿಂದಿರುಗುವಾಗ, ಹೃದಯದಲ್ಲಿ ’ಅನುರಾಗದ ಅನುಭವವನ್ನು’ ಹೊತ್ತು, ಬಂದರೆ, ಅದು ’ಅಫೂರ್ವ
ಅನುಭವ.’
’ಕೇಳುಗರನ್ನು ಕಲ್ಪನಾಲೋಕಕ್ಕೆ ಕೊಂಡೊಯ್ಯುವ ಕುತೂಹಲಕಾರಿ, ಚೇತೋಹಾರಿ, ಅನುಭವವನ್ನು
ಮುಂದಿಟ್ಟಿದ್ದೇವೆ. ಓದಿ ಆನಂದಿಸಿರಿ.
=================================================================================
ಅಧ್ಯಾಯ-೧೧.
============
ಅಧ್ಯಾತ್ಮ-ಧರ್ಮ ರಕ್ಷಣೆ.
==========================
’ಧರ್ಮೋ ರಕ್ಷತಿ ರಕ್ಷಿತಃ.’. ಇದು ಒಂದು ವೇದ ವಾಕ್ಯ. ಧರ್ಮವನ್ನು ರಕ್ಷಿಸುವನನ್ನು
ಧರ್ಮ ರಕ್ಷಿಸುವುದು.
’ಧರ್ಮ ಎಂದರೇನು.’ಧರತೀತಿ ಧರ್ಮಃ. ’ರಕ್ಷಣೆಯೇ ಧರ್ಮ.’
ಒಂದು ರೈಲಿನಲ್ಲಿ, ಮೂರು ವರ್ಗಗಳಿವೆ.’ ಮೇಲ್ದರ್ಜೆಗೆ ಬರುವವನು, [ಅಪ್ಪರ್ ಬರ್ತ್] ಹೊತ್ತಿಗೆ
ಸರಿಯಾಗಿ ಬರುತ್ತಾನೆಹಾಸಿಗೆಯನ್ನು ಬಿಡಿಸಿ, ಇಳಿದು, ಫ಼್ರೆಶ್ ಆಗಿ, ಮತ್ತೆ ಮೇಲೆ ಹತ್ತಿ, ಹಾಸಿಗೆ
ಬಿಡಿಸಿ,ನೀರು ಕುಡಿದು, ಮಲಗುತ್ತಾನೆ. ಇವನು’ತೃಪ್ತ.’
ಎರಡನೇ ಹಂತ’.ಮಿಡಲ್ ಬರ್ತ್; ಇವನು ಹತ್ತುವುದು ಬಲು ಕಷ್ಟ. ಸೀಟಿನಲ್ಲಿ ಕುಳಿತಿರುವವರು
ಮಾತನಾಡುವದನ್ನು ನಿಲ್ಲಿಸುವದೇ ಇಲ್ಲ, ದೀಪ ಆರಿಸದೆ ನಿದ್ದೆ ಬರುವದಿಲ್ಲ. ಇವರ ಮಾತು
ನಿಲ್ಲುವುದಿಲ್ಲ.  ಕೆಳಗೆ ಇಳಿದು ಟಾಯ್ಲೆಟ್,’ಗೆ ಹೋಗಲೂ ಅವಕಾಶವಿಲ್ಲ. ಇವರ ಸ್ಥಿತಿ ’
ಡೋಲಾಯಮಾನ.’ ಇವರು ’ನೊಂದವರು.’
ಕೆಳಗೆ ಕುಳಿತಿರುವವರು,[ಲೋಯರ್ ಬರ್ತ್] ಸುಖ ಪುರುಷರು.ಯಾವುದೇ ಚಿಂತೆಯಿಲ್ಲದೆ, ಬಂದ-
ದ್ದನ್ನು ಕೊಂಡು, ರಸಿಕತೆಯಿಂದ ತಿನ್ನುತ್ತಾ, ಲೋಕ ವ್ಯವಹಾರವನ್ನು ಮಾತನಾಡುತ್ತಾ, ಮಲಗುವ
ಹೊತ್ತಿಗೆ ಮಧ್ಯರಾತ್ರಿ. ಇವರು ’ನಿರ್ಲಿಪ್ತರು.’ಸುಖಪುರುಷರು.’
ಅಧ್ಯಾತ್ಮದಲ್ಲಿ ಮೊದಲು ಬರುವವರು ’ದೇವತೆಗಳು.’ ಅವರು ಸ್ವರ್ಗದಲ್ಲಿರುವುದರಿಂದ ಹಸಿ-
ವಿಲ್ಲ. ಕಣ್ಣು ರೆಪ್ಪೆ ಮುಚ್ಚುವುದಿಲ್ಲ. ಅಮೃತಪಾನದಿಂದ ಅಂತ್ಯವಿಲ್ಲ.ಆದರೆ, ಅವರಿಗೆ
ನಾವು ಮಾಡುವ ಹೋಮಗಳ ಹವಿಸ್ಸೇ ಆಧಾರ. ನಮ್ಮ ಆರಾಧನೆಯಿಂದ ಅವರು ಮೆಚ್ಚಿ ಅವರು ನಮ್ಮನ್ನು ಹರಸುತ್ತಾರೆ. ಆದರೆ, ಪುಣ್ಯ ಮುಗಿದ ಮೇಲೆ, ಧರೆಗೆ ಮಾನವರು ವಾಪಸ್.
ಮಾನವರು;’ ಈ ಧರೆ ಕರ್ಮಭೂಮಿ. ಭಗವಂತನಿತ್ತ ಎಲ್ಲಾ ಸಂಪತ್ತುಗಳೂ ಇವೆ. ಅವರ
ಹಿಂದಿನ ಜನ್ಮದ ಕರ್ಮಾನುಸಾರವಾಗಿ ಮಾನವರು ಜನಿಸುತ್ತಾರೆ.’ಹಾಗಾದರೆ ಬಾಳಿನ ಗುರಿಯೇನು.
ನ್ಯಾಯಾಲಯದಲ್ಲಿ, ಮೂರು ವ್ಯಕ್ತಿಗಳಿದ್ದಾರೆ. ಅಪರಾಧಿ, ನ್ಯಾಯವಾದಿ, ನ್ಯಾಯಮೂರ್ತಿ.
ನಾವು ತಿಳಿಯದೆ ಎಷ್ಟೋ ಅಪರಾಧಗಳನ್ನು ನಡೆಸುತ್ತೇವೆ. ಅದನ್ನು ಮಾಡಲಿಲ್ಲವೆಂದು ಸಾಧಿ-
ಸುತ್ತೇವೆ. ತೀರ್ಮಾನಿಸುವುದು ನ್ಯಾಯಾಧೀಶ.
’ಬಾಳಿನ ಗುರಿಯೇನು.’ ಧರ್ಮ, ಅರ್ಥ, ಕಾಮ, ಮೋಕ್ಷ.
ಮಾನವನ ಏಳಿಗೆಗೆ ಮಜಲು;
ಚಿಕ್ಕ ವಯಸಿನಲ್ಲಿ;ಸ್ತೋತ್ರಗಳು. ದೇವರ ಕಥೆ.ದೇವಾಲಯ ದರ್ಶನ.
ಬಾಲಕನಾಗಿ;ಉಪನಯನ. ಸಂಧ್ಯಾವಂಧನೆ.
ಗೃಹಸ್ಥ;ಪೂಜೆ, ಪುನಸ್ಕಾರ, ಕಾಮ್ಯ ಕರ್ಮಗಳು.
ವೃದ್ದಾಪ್ಯ;ಜಪ, ತಪಸ್ಸು, ಧ್ಯಾನ.
ಫಲ;ಮುಕ್ತಿ.
ಆ ಕಾಲದಲ್ಲಿ, ಪುಸ್ತಕ, ಚೀಲಗಳೇ ಇರಲಿಲ್ಲ. ಬರೀ ’ಶೃತಿ, ಸ್ಮೃತಿ.’ ಈಗ ಎಲ್ಲವೂ ಇದೆ.
ವಿದ್ಯೆಯಿಲ್ಲ. ಕಾರಣವೇನು. ’ಒಬ್ಬ ಹುಟ್ಟಿನಿಂದ ಸಾವಿನವರೆಗೆ, ೬೪ ಕರ್ಮಗಳಿವೆ.
ನಾಮಕರಣ.ಚೌಲ, ಮುಂಜಿ, ವಿವಾಹ, ಸೀಮಂತ. ಪುತ್ರನಿಗೆ;ಇದರ ಪುನರಾವರ್ತನೆ.
ಅರವತ್ತಕ್ಕೆ ಶಾಂತಿ. ೭೦.ಶಾಂತಿ.೮೦;ಸಹಸ್ರಚಂದ್ರ ದರ್ಶನ. ೧೦೦-ಶತಾಯು.
ನಂತರ;ವೇದಗಳಲ್ಲಿ ವಿವರಿಸಿರುವಂತೆ ಆ ಕಾರ್ಯ ನಡೆಸಬೇಕು. ಅವರಿಗೆ ಪುಣ್ಯಲೋಕ
ಪ್ರಾಪ್ತಿ. ಅವರ ಸಂತತಿಗೆ ಸನ್ಮಂಗಳ ಪ್ರಾಪ್ತಿ.
ಇದನ್ನು ನಡೆಸುವವರಿಗೆ ’ಪುರೋಹಿತರೆನ್ನುವರು.’  ’ನಗರದ ನಲ್ಮೆ ಬಯಸುವವವರು’
ಎಂದರ್ಥ. ’ವೇದವನ್ನು ಕಲಿತವರು, ’ವೈದೀಕರು.’ ಸ್ವಾಮಿಗೆ ಸೇವೆಯನ್ನು ಸಲ್ಲಿಸಿ,
ಭಕ್ತಿಗೆ ನಲ್ಮೆಯನ್ನು ಕೋರುವರು, ’ಅರ್ಚಕರು.’ ಸಮಾಜದಲ್ಲಿ, ಹಿಂದೆ ಹೇಳಿದ, ಕಾರ್ಯ-
ಗಳನ್ನು ನಡೆಸಿ, ಮಾನವನ ಏಳ್ಗೆಗೆ  ಶ್ರಮಿಸುವರು ’ಪುರೋಹಿತರು.’
’ನಿಷ್ಣಾತರಾದ ಅವರ ಅವಶ್ಯವಿದೆ. ಜನರು ’ ದೈವ ಮತ್ತು ಪಿತೃ’ ಕಾರ್ಯಗಳನ್ನು
ನಡೆಸಲು ಉತ್ಸುಕರಾಗಿದ್ದಾರೆ. ಅವರ ಹಿತರಕ್ಷಣೆ ಅವಶ್ಯ.’ಮೋಜಿಗೆ, ಮಣಗಟ್ಟಲೆ
ಹನ ಸುರಿಯುವವರು, ವೈದೀಕಕ್ಕೆ ಬಂದಾಗ, ’ಅಷ್ಟೇಕೆ’ ಎಂದು ಕೊರಗುವುದು, ಆಶ್ಚರ್ಯ.
ಅದಕ್ಕೇ, ಹಿಂದೆ ಹೇಳಿದಾರು, ’ತರ್ಪಣ,’ ಎಂದರೆ,’ತರ ಪಣಂ’ ಎಂದು ಬಿಡಿಸಿ, ಹೇಳಿದ್ದಾರೆ.
ಎಂದರೆ,’ಕೊಡುವ ಹಣ’ ಎಂದು. ಇಂಗ್ಲೀಷಿನಲ್ಲಿ, ’ಸರ್ಮನಿ’ ಎಂದರೆ,ಸಮಾರಂಭ, ಎಂದರೆ,
ಬಿಡಿಸಿ ಹೇಳಿದರೆ,ಸರ್, ಮನಿ ಎಂದರೆ ’ಸ್ವಾಮಿ ಹಣ’ ಎಂದು.
ಆಧುನಿಕ ಯುಗದಲ್ಲಿ, ಅರ್ಥವನ್ನು ಅರಸುವುದೇ ಗುರಿಯಾಗಿದೆ. ಇದರಿಂದ ನೆಮ್ಮದಿ, ಶಾಂತಿ, ದೂರಾಗಿದೆ. ಅದನ್ನು ಅಂಗಡಿಯಿಂದ ಕೊಳ್ಳಲು ಸಾದ್ಯವಿಲ್ಲ. ’ಬದುಕಿಗೆ ’ಅರ್ಥ ’ ಅಗತ್ಯ.
ಬಾಳಿನ ’ಅರ್ಥ’ ಅರಿಯಬೇಡವೇ..
ಎಂತಲೇ, ಐಹಿಕ ಸುಖದೊಂದಿಗೆ,’ದೈವ ಚಿಂತನೆಯೂ, ಸೇರಿದಾಗ,ಬಾಳು ಸುಗಮವಾಗುವುದು.
ಈ ಮಹಾನ್ಕಾರ್ಯವನ್ನು ಶ್ರೀ ರಂಗನಾಥನ ಕ್ಶೇತ್ರದಲ್ಲಿ ಆರಂಭಿಸಿದ ನಮ್ಮ ನಾಯಕರ
ಈ ನಿಟ್ಟಿನ ಕಾಣಿಕೆ, ಅಭೂತಪೂರ್ವವಾದುದು.
ಅವರ ಪರಂಪರೆಯನ್ನೇ ಯಶಸ್ವಿಯಾಗಿ ಮುಂದುವರಿಸಿಕೊಂಡು ಬರುತ್ತಿರುವ, ಶ್ರೀ ರಮೇಶ್-
ರವರ ಕಾರ್ಯ ಶ್ಲಾಘನೀಯ.
’ಅರವತ್ತರ ಹರೆಯದ ಅವರು ಶತಾಯುಷಿಗಲಾಗಿ, ಶಾಸ್ತ್ರ, ವೇದಂತ, ಅಧ್ಯಾತ್ಮ ಕ್ಷೇತ್ರ--
ಗಳಲ್ಲಿ, ಹೆಚ್ಚು ಹೆಚು ಪ್ರತಿಬಾವಂತರನ್ನು ಸೃಷ್ಟಿಸಿ, ಸಮಾಜದಲ್ಲಿ ’ಅಧ್ಯಾತ್ಮ ದ್ವಜ-
ವನ್ನು ಎತ್ತಿ ಹಿಡಿಯುವಂತೆ, ಶ್ರೀ ರಂಗನಾಥ, ಶ್ರೀ ಗಂಗಾಧರಸ್ವಾಮಿ, ತಾಯಿ ನಿಮಿಷಾಂಬಾ
ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.
================================
ಅಧ್ಯಾಯ.೧೨.
===========
ಮುಂದಿನ ಪೀಳಿಗೆಗೆ ಆದೇಶ.
=========================
ನಾವು ಎತ್ತ ಹೋಗುತ್ತಿದ್ದೇವೆ. ಇದು ವಿಶ್ಲೇಷಿಸಬೇಕಾದ ವಿಚಾರ. ’ಭಾರತವನ್ನು ’ಧರ್ಮ-
ಭೂಮಿ’ ಎನ್ನುತ್ತೇವೆ.’ ಇದರ ಬೆನ್ನೆಲುಬೇ ’ಧರ್ಮ.’ಎಷ್ಟೇ ಪರಕೀಯ ಧಾಳಿಯಾದರೂ, ಧೀರ
ಚಕ್ರವರ್ತಿಯಂತೆ ತಲೆಯೆತ್ತಿ ನಿಂತಿದೆ.
ಈ ಪುಣ್ಯಭೂಮಿಯ, ಎಲ್ಲಾ ಸಿರಿ ಸಂಪತ್ತುಗಳೂ, ಮಾನವರು, ಪಶು ಪಕ್ಶಿ ಪ್ರಾಣಿಯೊಂದಿಗೆ
ದೈವದೊಡನೆ ಸಮ್ಮಿಳಿತವಾಗಿದೆ. ’ಕಷ್ಟಂ’ ಎಂದು ಕಮ್ಮದಲ್ಲಿ ಹೇಳಿದರೂ, ಕಷ್ಟಮ್[ಆಂಗ್ಲ]
ಬಿಡದೇ ಇದ್ದರೆ ಬಾಳು ಸುಗಮ.
ಬಿಸಿಲಿಗೆ, ಮಳೆಗೆ, ’ಛತ್ರಿ’ ಇದ್ದಂತೆ, ಛಳಿಗೆ, ಸ್ವೆಟರ್’ ಇದ್ದಂತೆ,ನಮ್ಮ ಬಾಳಿಗೆ
’ಪರಂಪರೆ’ ಎಂಬ ಕವಚವಿದೆ.
ಬಾಳಿಗೆ ಎರಡು ಮುಖಗಳಿವೆ. ಒಂದು ಶರೀರ ಸಂಭಂದ ಎಂಬುದು. ಪ್ರಾಪಂಚಿಕ ಸುಖಕ್ಕೆ
ಸಂಭಂದಿಸಿದ್ದು. ’ಹಣ, ಅಧಿಕಾರ, ವಿದ್ಯೆ, ಆಸ್ತಿ, ಎಷ್ಟು ಬಂದರೂ ಸಾಲದು. ಕೆಲವು ವೇಳೆ,
ಮನಸ್ತಾಪ, ಅತೃಪ್ತಿ, ಬೇಡದ ವೈಮನಸ್ಯ, ಕೆಲವು ವೇಳೆ ಜೀವ ಹತ್ಯೆ ಆಗುವುದು.
ಬಾಳಿನಲ್ಲಿ ’ಕಾಂ ಪೆಟೀಷನ್’ ಇರಬೇಕು. ಕಾಂಪೆಟೀಷನ್’ ಇರಬಾರದು. ’ಗೋ ಸ್ಲೋ’ ಇರಬೇಕು.
’ಗೋಸ್-ಲೋ’ ಆಗಬಾರದು.
ಇನ್ನು ’ಅಧ್ಯಾತ್ಮ ಕ್ಶೇತ್ರಕ್ಕೆ ಬಂದರೆ, ಅದು ಹೃದಯಕ್ಕೆ ಸಂಭಂಧಿಸುದುದು. ಅಲ್ಲಿ,
’ಪರಮಾತ್ಮ’ ನೆಲೆಸಿದ್ದಾನೆ. ಪ್ರಪಂಚ, ನಮ್ಮ, ಪ್ರಕೃತಿ,ಬಾಳ, ಸೃಷ್ಟಿಕರ್ತನಿಗೆ,
’ಥಾಂಕ್ಸ್ ಗಿವಿಂಗ್’ ಬೇಡವೇ.’ಅದನ್ನೇ, ‘ಜ್ಯಾನ, ಭಕ್ತಿ, ಕರ್ತವ್ಯ,ಎಂದು ವಿಂಗಡಿಸಿದ್ದಾರೆ,
ಮಾನವನ ಉದ್ದಾರಕ್ಕೆ.’
ಅವತಾರಗಳು,ಮಹಾಪುರುಷರು,ಗ್ರಂಥಗಳು, ಪುರಾಣಗಳು, ಹರಿಕಥೆ, ಉಪನ್ಯಾಸ, ಸಂಗೀತಾ,
ನೃತ್ಯ.
ನಿತ್ಯ ಕರ್ಮ ನೈಮಿತ್ತಕ ಕರ್ಮಗಳು, ಕಾಂಯ ಕರ್ಮ, ಜಪ, ಧ್ಯಾನ,
’ಭೌತಿಕ ಬೆಳವಣಿಗೆಯ ಜೊತೆ, ಬೌದ್ಧಿಕ ಬೆಳವಣಿಗೆಯೂ, ಅವಶ್ಯ.’ ದೇಹದ ಬೆಳವ-
ಣಿಗೆಯ ಜೊತೆ, ದೈವಜ್ಞಾನವೂ ಅಗತ್ಯ. ಹೊರಗಿನ ಖಾಯಿಲೆಗೆ ವೈದ್ಯ ಚಿಕಿತ್ಸೆ ನೀಡಿದರೆ
ಆಂತರಿಕ ಖಾಯಿಲೆಗೆ, ಪರಮಾತ್ಮ ಭವರೋಗ ವೈದ್ಯ.
’ಅದಕ್ಕೇ, ಎಲ್ಲಾ ಚಿಕಿತ್ಸೆಯೂ ಆದಮೇಲೆ, ’ಐ.ಸಿ,ಯು, ಗೆ ಸೇರಿಸುತ್ತಾರೆ. ಅಲ್ಲಿ ’ರೋಗಿ-ಪರಮಾತ್ಮ’
ಮಾತ್ರ.ಐ,ಸೀ,ಯು, ಎಂದರೆ, ಭಗವಂತ ರೋಗಿಗೆ, ’ನಾನು ನಿನ್ನನ್ನು ನೋಡಿಕ್ಕೊಳ್ಳುತ್ತೇನೆ’ ಎನ್ನುತ್ತಾನೆ.
ಉದಾಹರಣೆ;ಟೀವಿ ಸಂದರ್ಶನದಲ್ಲಿ,’ಅಮೇರಿಕದ ಅಧ್ಯಕ್ಷರು ಯಾರೆಂದರೆ, ತಕ್ಷಣ
ಉತ್ತರ ದೊರೆಯುತ್ತದೆ. ’ರಾಮನ ತಮ್ಮ ಯಾರು ಯೆಂದರೆ, ಫೋನೋ ಫ಼ೆಂಡ್, ಲೈಫ಼್-ಲೈನ್ ಬೇಕು.
ಜ್ಞಾನಯೋಗದ ತಿರುಳು;’ಎಲ್ಲೆಲ್ಲೂ ದೇವರೇ.ಎಲ್ಲರಲ್ಲಿಯೂ ದೇವರೇ, ಎಲ್ಲವೂ ದೇವರೇ’
ಕರ್ಮ ಯೋಗ;’ಯಾವ ಕಾರ್ಯ ಮಾಡಿದರೂ, ’ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಎಂದು ಪ್ರಾರಂ-
ಭಿಸಿ, ಶ್ರೀ ಕೃಷ್ಣಾರ್ಪಣಮಸ್ತು’ ಎಂದು, ಮುಗಿಸಬೇಕು.ಭಕ್ತಿಯೋಗ;’ಪ್ರೀತಿಯಿಂದ,ಶ್ರದ್ಧೆಯಿಂದ,ಮಾಡಿದರೆ, ಕಾರ್ಯದಲ್ಲಿ ಗೆಲುವು ನಿಶ್ಚಿತ.
ದಾನವ;’ದಾರಿ ತಪ್ಪಿದವರು ನರಳುವರು. ವಧಿಸಲ್ಪಡುವರು.
ಮಾನವರು;ಮಾತು-ನರಳಾಟ.ಅವುಗಳ ನಿರ್ಮೂಲನದಿಂದ ಉದ್ಧಾರ ಸಾಧ್ಯ.
ದೇವ;ದೇವಾದಿದೇವರಿಂದ ವಂದಿಸಲ್ಪಡುವವನು’
’ಈ ಪುಸ್ತಕದ ಮುಖ್ಯ ಉದ್ದೇಶ, ನಾವು ಚಿಕ್ಕ ವಯಸ್ಸಿನಲ್ಲಿ ಭೇಟಿ ನೀಡಿ, ಆನಂದಿಸಿದ,
ಶ್ರೀ ರಂಗನಾಥಸ್ವಾಮಿ, ಶ್ರೀ ಗಂಗಾಧರಸ್ವಾಮಿ, ಮಾತೆ, ನಿಮಿಷಾಂಬಾ,ನೆಲಸಿದ ಶ್ರೀ
ಕ್ಷೇತ್ರದಲ್ಲಿ, ನಮ್ಮ ಇರುವಿಕೆ, ಸಿಹಿ ದಿನಗಾಳಾಗಿಸಿದ, ನಮ್ಮ ಅತ್ತೆ, ಭಾವ, ಅವರಿಗೆ
ಕೃತಜ್ಞತೆಯ ದ್ಯೋತಕ. ಅವರ,’ ಅಧ್ಯಾತ್ಮ ಅಧ್ವರ್ಯು’, ಕುಮಾರನಿಗೆ, ೬೦ ವರ್ಷ ತುಂಬಿದ
ಸವಿನೆನಪಿಗಾಗಿ, ಇತ್ತ ಕಾಣಿಕೆ. ಮಾನವನ ಕಲ್ಯಾಣಕ್ಕೆ ಮೇಲ್ಮೈಯಾಗಲೆಂದು, ಮಾಡಿರುವ
ಪ್ರಯತ್ನ. ಇದು ಸಫಲವಾದರೆ, ಲೇಖಕನ ಪ್ರಯತ್ನ ಯಶಸ್ವಿ.ಮುಂದಿನ ಜನಾಂಗಕ್ಕೆ,
ಪೀಳಿಗೆಗೆ ಒಬ್ಬ ಹಿತಚಿಂತಕನ ಬಳುವಳಿ.
==========================