ಗುರುವಾಣಿ
-----------
ಕುಕ್ಕೇ ಶ್ರೀ ಸುಬ್ರಮಣ್ಯೇಶ್ವರ
ಮತ್ತು ಶ್ರೀ ಆವನೀ ಮಹಾಸ್ವಾಮಿಗಳ ಕೃಪೆಯಿಂದ
=====================================
ವಿಶೇಷ; ಸಮರ್ಪಣೆ;ಶೃಂಗೇರಿ ಮಹಾಸ್ವಾಮಿಗಳ
ಚರಣಾರವಿಂದಗಳಿಗೆ
==================================
ಈ ಜಗತ್ತಿನ ಸೃಷ್ಟಿಕರ್ತ ಭಗವಂತ. ಅದರೊಂದಿಗೆ ಮಾನವ ಮತ್ತು ವಿವಿಧ ಚರಾಚರವಸ್ತುಗಳನ್ನು
ಸೃಷ್ಟಿಸಿ ಅವರ ಬಾಳು ಸುಗಮವಾಗಲು ಶರೀರ, ಬುದ್ಧಿ, ಪ್ರಾಣ, ಇವುಗಳನ್ನಿತ್ತು,ಜಗದಲ್ಲಿ ಬಾಳಲು ಆಹಾರ
ಜಲ, ವಾಯು, ಇತ್ಯಾದಿ ಪ್ರಕೃತಿ ಸಂಪತ್ತನ್ನಿತ್ತು, ಜಗತ್ತಿಗೆ ಬರಲು, ಮಾತಾ-ಪಿತೃಗಳು, ಜ್ಞಾನಾರ್ಜನೆಗೆ ಗುರುಗಳು,
ಸ್ನೇಹ-ಪ್ರೀತಿಗೆ, ಕುಟುಂಬ, ಬಂಧು-ಬಳಗವನ್ನಿತ್ತು, ಜೀವನ ನಿರ್ವಹಣೆಗೆ ಉದ್ಯೋಗ, ದ್ರವ್ಯಾರ್ಜನೆಗೆ ದಾರಿ
ಮಾಡಿ, ಬಾಳನ್ನು ಸುಗಮವಾಗಿಸಲು ನೆರವಿತ್ತ ಭಗವಂತನಿಗೆ ನಮ್ಮ ಕೃತಜ್ಞತೆಯನ್ನು ತೋರಬೇಕಲ್ಲವೇ.
ಬಾಳಿನ ಗುರಿ ಕೇವಲ ಪ್ರಾಪಂಚಿಕ ಸುಖವೇ. ಹುಟ್ಟು-ಸಾವಿನ ಶೈಂಖಲೆಯಿಂದ ಬಿಡುಗಡೆ ಹೊಂದಿ ಅವನನ್ನು
ಸೇರುವುದು ಗುರಿಯಲ್ಲವೇ. ಇದಕ್ಕೇನು ಮಾರ್ಗ.
ನಮ್ಮ ಋಷಿ-ಮುನಿಗಳು ಸಹಸ್ರಾರು ವರ್ಷಗಳು ತಪಸ್ಸನ್ನು ಗೈದು ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಮಾನವನು ಬರೀ ಶರೀರ-ಮೂಳೆ-ಮಾಂಸಗಳ ಮೊತ್ತವಲ್ಲ. ಅವನು ಅತ್ಮಸಮೇತ ಪರಮಾತ್ಮನ ಅಂಶ.
ಇದನ್ನೇ ’ಅಧ್ಯಾತ್ಮ ವಿದ್ಯೆ’ ಎನ್ನುವರು. ಕೇಳಿ ತಿಳಿದುಕೊಳ್ಳುವುದು ’ಶೃತಿ.’ ಮನಸ್ಸಿನ್ನಲ್ಲಿಟ್ಟುಕ್ಕೊಳ್ಳುವುದು ’ಸ್ಮೃತಿ.’
ಆ ಕಾರ್ಯದಲ್ಲೇ ನಿರತರಾದವರನ್ನು ’ಗುರು’ ಎಂದರು. ಮೊದಲು ಶ್ರೀ ವಿಷ್ಣು, ಶ್ರೀ ಬ್ರಹ್ಮ, ವಸಿಷ್ಟರು,ವೇದವ್ಯಾಸರು, ಎಲ್ಲರೂ, ಈ ಗುರಿಯತ್ತ ಶ್ರಮಿಸಿದರು.. ಪರಮಾತ್ಮನೂ ಹಲವು ಅವತಾರಗಳೆನ್ನೆತ್ತಿ, ಮಾರ್ಗವೆಂದು ತೋರಿದರು. ರಾಮಾಯಣ, ಮಹಾಭಾರತ, ಭಾಗವತ, ಭಕ್ತ ಧ್ರುವ, ಪ್ರಹ್ಲಾದ, ಮೊದಲಾದವರು ’ಅಚಲ
ಭಕ್ತಿಯೇ ಅಚ್ಯುತನನ್ನು ಪಡೆಯಲು ಮಾರ್ಗ ಎಂದು ತೋರಿದರು. ಶ್ರೀ ಶಂಕರ, ಶ್ರೀ ಮಧ್ವ,ಶ್ರೀ ರಾಮಾನುಜ, ಇವರುಗಳು,ಕ್ರಮವಾಗಿ,
ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ತತ್ವಗಳ ಮೂಲಕ ಈ ದಿಶೆಯಲ್ಲಿ ದಾರಿ ತೋರಿದರು. ಆದರಲ್ಲಿ ಶ್ರೀ ಶಂಕರರ
ಪಾತ್ರ ಅಪಾರ. ಅಸದೃಶ, ಅದ್ಭುತ. ಯಾವುದೇ ವಸ್ತುವನ್ನು ಭೂತಗನ್ನಡಿಯ ಮೂಲಕ ನೋಡಿದಾಗ ದೊಡ್ಡದಾಗಿ ಕಾಣುವಂತೆ,, ಶ್ರೀಭಗವತ್ಪಾದರ ಸಾಧನೆಯನ್ನು ಶ್ರೀ ಶೃಂಗೇರಿ ಮಹಾಸನ್ನಿಧಾನಂಗಳವರ ವಿದ್ವತ್ ಪೂರ್ಣ ವಿವರಣೆಯೊಂದಿಗೆ,, ವೀಕ್ಷಿಸಿದಾಗ, ಭಗವಂತನ ಪದತಲವನ್ನು ಸೇರುವುದರಲ್ಲಿ ನಂಬಿಕೆ,ಪ್ರಯತ್ನ, ಯಶಸ್ಸು, ನಿಶ್ಚಿತ.. ಅದನ್ನು ಪರಿಚಯಿಸುವದರಲ್ಲಿ ಇದು ಒಂದು ಕಿರು ಪ್ರಯತ್ನ,
೧.ಆಚಾರ್ಯರು ಯಾರು
=============
ಶ್ರೀ ಶಂಕರರು ಸನಾತನ ಧರ್ಮದ ಉದ್ಧಾರಕ್ಕೆ ಸುಮಾರು ೧೨೦೦ ವರ್ಷಗಳ ಹಿಂದೆ ಜನಿಸಿದರು ಎಂಬುದು
ಸರ್ವ ವಿದಿತ.ಅವರನ್ನ್ನು ’ಜಗದ್ಗುರು’ ಎನ್ನುತ್ತೇವೆ. ಅದರ ಅರ್ಥ ’ಜಗತ್ತಿಗೇ ಅವರು ಗುರು’ ಎಂದು. ’ಗುರು’ ಎಂದರೆಸಕಲ ಶಾಸ್ತ್ರವೇತ್ತರಾಗಿ,
ಶಿಷ್ಯನಿಗೆ ನಲ್ಮೆಯನ್ನು ಅನುಗ್ರಹಿಸುವರೋ ’ಅವರೇ’. ಇವೆರಡು ಅರ್ಹತೆಯಿಲ್ಲದಿದ್ದರೆ ಅವನು ಗುರುವಲ್ಲ.. ಇದರಿಂದಾಗಿಯೇ, ಹಿಂದಿನವರು,’ ಆಚಾರ್ಯ’, ಎಂದರೆ,’ ಆಶಿನೋತಿ, ಆಚರಯತಿ, ಆಚರತ್’ ಎಂಬ
ಮೂರು ವಿವರಗಳನ್ನು ನೀಡಿದ್ದಾರೆ.
ಪುಸ್ತಕದ ಅಧ್ಯಯನದಿಂದ ಗಳಿಸಿದ ಙ್ಯಾನ ಸ್ಥಿರವಾದುದಲ್ಲ. ಗುರುವಿನ ಮೂಲಕ ಕಲಿಯಬೇಕು. ಅವನ ನಲ್ಮೆ-
ಯಲ್ಲಿ, ಪ್ರಗತಿಯ ಬಗ್ಗೆ ಚಿಂತೆಯಿರಬೇಕು. ಅವನ ಸಂದೇಹಗಳನ್ನು ಪರಿಹರಿಸಬೇಕು.
ಆಶಿನೋತಿ-
===========
ಸಂಪ್ರದಾಯಕ್ರಮಕ್ಕನುಗುಣವಾಗಿ ತತ್ವಜ್ಞಾನ ಪಡೆದವರೇ ’ಗುರು. ಪುಸ್ತಕಗಳ ಪಠನೆಯಿಂದ ಙ್ಯಾನ ಪಡೆದವನು ನಿಜವಾದ ಗುರುವಲ್ಲ.. ’ಶಾಸ್ತ್ರವೇತ್ತನೆಂದರೆ ’ ಸಂಪ್ರದಾಯಪ್ರಕಾರ ಗುರುವಿನ ಮೂಲಕ ಅರಿತವನು’ ಎಂದರ್ಥ..’ ಶ್ರೀ ಭಗವತ್ಪಾದರೂ. ಗುರು-ಶಿಷ್ಯರ ಸಂಪ್ರದಾಯದಲ್ಲಿ ಕಲಿತವರು ಎಂದರ್ಥ.
ಈ ’ಗುರು-ಶಿಷ್ಯ ಸಂಪ್ರದಾಯ ಅನಾದಿಕಾಲದಿಂದಲೂ ನಡೆದು ಬಂದಿದೆ. ಮೊದಲ ’ಗುರು’ ಶ್ರೀ ದಕ್ಷಿಣಾಮೂರ್ತಿ.
ಅವರಿಂದ ಶ್ರೀ ನಾರಾಯಣನಿಗೆ, ಅವರಿಂದ ಬ್ರಹ್ಮನಿಗೆ, ಅವರಿಂದ ವಸಿಷ್ಠರಿಗೆ, ಅವರಿಂದ ಶಕ್ತಿಗೆ,ಶಕ್ತಿಯಿಂದ ಪರಾಶರರಿಗೆ,, ಅವರಿಂದ ವೇದವ್ಯಾಸರಿಗೆ, ಹೀಗೆ ಗುರು-ಶಿಷ್ಯ ಪರಂಪರೆ , ಆಚರಣೆಯಲ್ಲಿದ್ದಿತು.
’ಶಿಷ್ಯನಿಗೆ ಗುರುವಿನಲ್ಲಿ ಅಪಾರ ಭಕ್ತಿ, ಗುರುವಿಗೆ ಶಿಷ್ಯನಲ್ಲಿ ಅಪಾರ ಪ್ರೀತಿ, ’ ಇದರ ವಿಶೇಷ. ಶ್ರೀ ಶಂಕರರೂ
ಶಂಕರನ ಅಪರಾವತಾರವಾದರೂ, ಅವರೂ, ಶ್ರೀ ಗೋವಿಂದ ಭಗವತ್ಪಾದರ ಶಿಷ್ಯರಾಗಿ, ವೇದಂತ ತತ್ವ ಜ್ಞಾನವನ್ನು ಪಡೆದರು, ಎನ್ನುತ್ತದೆ, -’ಶ್ರೀ ಶಂಕರ ದಿಗ್ವಿಜಯ’. ’ಅವರು ಪರಮೇಶ್ವರನ ಅವತಾರ. ’ಅವರು ಗುರುವರಸಿ ತೆರಳಬೇಕಾಗಿತ್ತೇ’ ಇದು ಪ್ರಶ್ನೆ.. ಅವರು ತಿಳಿದು ಹೋದರಾ, ತಿಳಿಯದೇ ಹೋದರಾ, ಪರೀಕ್ಷಿಸಲು ಹೋದರಾ-
ಅವರು ಗುರುವಿನಿಂದ ‘ಙ್ಯಾನವನ್ನರ್ಜಿಸಲು ತೆರಳಿದರು, ಎಂಬುದೇ ತೀರ್ಮಾನ. ಶ್ರೀ ರಾಮ, ಶ್ರೀ ಕೃಷ್ಣರೂ, ಇದೇ ಪದ್ದತಿಯನ್ನನುಸರಿಸಿದರು.ಸಂಪ್ರದಾಯ ಗುರುವಿನಿಂದ ಉಪದೇಶಿಸಲ್ಪಟ್ಟ ‘ಙ್ಯಾನವೇ ಸಫಲವಾಗುತ್ತದೆ.
’ಉಪನಿಷತ್.’ಉದಾಹರಣೆ;’ಕರ್ಮ ಮಾದುವಾಗ ’ಹೋಮ ಮಾದಬೇಕು’ ಎನ್ನುತ್ತದೆ, ಶಾಸ್ತ್ರ ವಿಧಿ. ಹೋಮ ಮಾಡುವದಕ್ಕೆ
ಅದಕ್ಕೆ ಒಂದು ’ಸಂಸ್ಕಾರ’ ಮಾಡ ಬೇಕೆನ್ನುತ್ತದೆ. ಅದು ಅಲ್ಲಿ ಇರುವ ಮಂತ್ರಗಳನ್ನುಚ್ಚರಿಸಿ, ಧರ್ಬೆಯಿಟ್ಟು ಆ ಜಾಗವನ್ನು ಶುದ್ಧೀಕರಿಸ-
ಬೇಕೆನ್ನುತ್ತದೆ. ಹಾಗೆ ಮಾಡದಿದ್ದರೆ ’ಏನು’ ಎಂದರೆ,’ ಯಾಗದ ಫಲ ದೊರಕುವುದಿಲ್ಲ’.. ನಮ್ಮದು ಒಂದು ಆಸ್ತೀಕ ಪರಂಪರೆ.’ ಕಣ್ಣಿಗೆ ಕಾಣದ ವಿಷಯಗಳೆಷ್ಟೊ ಇವೆ’ ಎಂದು ನಂಬುತ್ತೇವೆ.
’ಕಾಣುವದನ್ನು ನಂಬುತ್ತೇನೆ.ಕಾಣದ್ದನ್ನು ನಂಬುವಿದಿಲ್ಲ.’ ಇದು ಚಾರ್ವಾಕರ ವಾದ. ಕಣ್ಣಿಗೆ ಕಾಣದ ವಸ್ತುವಿನ ಬಗ್ಗೆ ವಿಮರ್ಶಿಸುವ ಅಧಿಕಾರ ಶಾಸ್ತ್ರಕ್ಕಿದೆ.. ನಮಗಿಲ್ಲ.’ನೀನು ಈ ವಸ್ತುವಿಗೆ ಸಂಸ್ಕಾರಮಾಡಿ, ಅದರಿಂದ ಪುನೀತವಾದ ವಸ್ತುವಿನಿಂದ ಹೋಮ ಮಾಡಿದರೆ ಫಲ ಎನ್ನುತ್ತದೆ’ ಶಾಸ್ತ್ರ. ಅಲ್ಲಿ ಕುತರ್ಕಕ್ಕೆ ಸ್ಥಾನವಿಲ್ಲ.
ಹೋಮ ಮಾಡಬೇಕೆಂಬ ಪ್ರೇರಣೆ ಹೇಗೆ ಬಂದಿತು. ’ಯಾವ ಶಾಸ್ತ್ರ ಈ ಹೋಮ ಮಾಡಿದರೆ ಈ ಫಲ ದೊರಕುತ್ತೆ ಎನ್ನುವುದೋ ಅದೇ ಶಾಸ್ತ್ರ ಈ ಸಂಸ್ಕಾರ ಮಾಡಿ ಈ ಹೋಮ ಮಾಡಿದರೆ ಫಲ ಬರುವುದು’ ಎನ್ನುತ್ತದೆ.’ ಶಾಸ್ತ್ರದ ಈ ಭಾಗವನ್ನು ಒಪ್ಪುತ್ತೇನೆ, ಇನ್ನೊಂದನ್ನು ಒಪ್ಪುವುದಿಲ್ಲ’ ಎಂದರೆ ಅದು ಅಂಗಿಕಾರಾರ್ಹವಲ್ಲ. ಅಂತೆಯೇ,’ ಪುಸ್ತಕದಿಂದ ಕಲಿತರೆ ಏನು,
ಗುರುವಿನಿಂದ ಅರಿತರೆ ಏನು,’ ಎಂದರೆ, ಸಂಸ್ಕರ ಮಾಡದ ಹೋಮಕ್ಕೆ ಪಲವಿಲ್ಲದಂತೆ, ಗುರುವಿನಿಂದ ಕಲಿಯದ ವಿದ್ಯೆಗೆ ಫಲವಿಲ್ಲ.. ಈ ವಿಷಯವನ್ನು, ಗಮನದಲ್ಲಿಟ್ಟೇ, ಶ್ರೀ ರಾಮ, ಶ್ರೀ ಕೃಷ್ಣ, ಶ್ರೀ ಆದಿ ಶಂಕರರು,ಗುರುವಿನ ಮೂಲಕ, ತಮ್ಮ ಗುರುವಿನ ಸನ್ನಿಧಿಯಲ್ಲಿ ‘ಙ್ಯಾನಾರ್ಜನೆಯನ್ನು ಮಾಡಿದರು. ಇದೇ,ನಮ್ಮ ಪರಂಪರೆಯಲ್ಲಿ,, ಸನಾತನ ಧರ್ಮದಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ಇರುವ ಒಂದು ತತ್ವ.
ಶ್ರೀ ಕೃಷ್ಣನು ’ತತ್ವದರ್ಶಿಗಳಾದ ಮಹಾತ್ಮರು,‘ಜ್ಞಾನವನ್ನುಪದೇಶಿಸುತ್ತಾರೆ’ ಎನ್ನುತ್ತಾನೆ.’ಭಗವದ್ಗೀತೆ.. ಮತ್ತೆ,’ ಇದನ್ನು ನಾನು ಸೃಷ್ಟಿಯ ಪ್ರಾರಂಭದಲ್ಲಿಯೇ ಸೂರ್ಯನಿಗೆ ಉಪದೇಶಿಸಿದೆನು ಎನ್ನುತ್ತಾನೆ..ಭಗವದ್ಗೀತೆ.. ಅದರ ಅರ್ಥ ಈ ಗುರು-ಶಿಷ್ಯ ಪರಂಪರೆ ಸೃಷ್ಟಿಯ ಪ್ರಾರಂಭದಿಂದಲೂ ಚಾಲ್ತಿಯಲ್ಲಿದೆ ಎಂದರ್ಥ.
’ಗುರುವಿಲ್ಲದೇ ಬಾಳಿಲ್ಲ. ಗುರು-ಶಿಷ್ಯ ಪರಂಪರೆಯ ಮೂಲಕ ಶಾಸ್ತ್ರ-ತತ್ವಗಳನ್ನು ಕಲಿತರೆ, ಆಚರಣೆಯಲ್ಲಿ ತಂದು ಮತ್ತೊಬ್ಬನಿಗೆ ಧರ್ಮವನ್ನುಪದೇಶಿಸಬೇಕು.. ಈ ಮೂರು ಯೋಗ್ಯತೆಗಳಿರದ್ಪ್ದರೆ, ಅವನು, ಅಚಾರ್ಯ ಸ್ಥಾನಕ್ಕೆ ಅರ್ಹನಲ್ಲ.. ’ಅಧಿಕ ತತತ್ತವಃ’=ಗುರು ಸಂಪ್ರದಾಯಪೂರ್ವಕವಾಗಿ ಶಾಸ್ತ್ರವನ್ನು ಕಲಿತವರೂ=ತನ್ನ ಶಿಷ್ಯರ
ಹಿತವನ್ನು ಸದಾ ಚಿಂತಿಸುವವರೂ.’ತನ್ನ ಶಿಷ್ಯನು ಸತತವೂ ಸೌಖ್ಯವಾಗಿರಬೇಕು; ಅವನಿಗೆ ಸರಿಯಾಗಿ ‘ಙ್ಯಾನ ಬರಬೇಕು., ಅವನ ಸಂದೇಹಗಳು ನಿವಾರಣೆಯಾಗಬೇಕು,’ ಎಂದು ಸದಾ ಚಿಂತಿಸುವವರೇ ’ನಿಜವಾದ ಗುರು.’ ಇವೆರಡೂ ಯೊಗ್ಯತೆಯಿದ್ದವರೇ ನಿಜವಾದ ಗುರು..’ ಶಾಸ್ತ್ರರೀತಿಯಲ್ಲಿ ವಿಷಯವರಿತು, ಶಿಷ್ಯನಲ್ಲಿ ಅನುಕಂಪವಿದ್ದರೂ, ,
ಅವರ ಸಂದೇಹಗಳನ್ನು ನಿವಾರಿಸಲು ಅಶಕ್ಯರಾದರೆ ಅವರು ಗುರುವಾಗುವುದಿಲ್ಲ. ಇವೆಲ್ಲ ಅರ್ಹತೆಗಳು ಶ್ರೀ ಶಂಕರರಲ್ಲಿ ಸಂಪೂರ್ಣವಾಗಿದ್ದುವು.. ಅವರನ್ನು ವಿಮರ್ಶಿಸುವ ಶಕ್ತಿ, ಸಾಮರ್ಥ್ಯ ಯಾರಿಗೂ ಇಲ್ಲ. ಅವರ ಗ್ರಂಥಗಳನ್ನವಲೋಕಿಸಿದರೆ,ಅವರ ಜ್ಞ್ಯಾನಭಂಡಾರ ವ್ಯಕ್ತವಾಗುತ್ತದೆ.. ಅವರ ಕಾರುಣ್ಯ, ನುಡಿಗೆ ಅಸದಳ. ’ಕೇವಲ ೩೨ ವಯಸ್ಸಿನಲ್ಲಿ ಭಾರತವನ್ನು ಸಂಚರಿಸಿ, ನಾಸ್ತಿಕ
ವಾದಗಳನ್ನು ಖಂಡಿಸಿ ದೂರ ಮಾಡಿ, ಆಸ್ತೀಕ ವಾದಗಳನ್ನು ಜನರಿಗೆ ಉಪದೇಶಿಸಿ,, ಇಷ್ಟು ಗ್ರಂಥಗಳನ್ನು ಬರೆದು, ಇಷ್ಟು ಪಂಡಿತರನ್ನು ಗೆದ್ದು, ಶಿಷ್ಯರನ್ನು ಸಂಗ್ರಹಿಸಿ, ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿ ಕಾಶ್ಮೀರದಲ್ಲಿ ಸರ್ವಜ್ಞ್ಯ ಪೀಠವನ್ನಲಂಕರಿಸಬೇಕಾದರೆ ಅವರ ಮಹಿಮೆ ಎಂಥದ್ದಾಗಿರಬೇಕು.. ಮೇಲೆ ಹೇಳಿದ ಕಾರ್ಯಗಳೆಲ್ಲವನ್ನೂ, ಶಿಷ್ಯರ ಹಿತಕ್ಕಾಗಿಯೇ ಮಾಡಿದರು. ಅವರಿಗೇನೂ ವೈಯ್ಯುಕ್ತಿಕ ಲಾಭವೇನಿರಲಿಲ್ಲ. ಅವರು ಭಾಷ್ಯ ಗ್ರಂಥಗಳನ್ನು ರಚಿಸದಿದ್ದರೆ, ನಮಗೆ ವೇದಂತದ ಬಗ್ಗೆ ತಿಳಿಯಲು ಸಾಧ್ಯವಾಗುತ್ತಿತ್ತೇ.
ಅವರ ಭಾಷ್ಯದ ಬಗ್ಗೆ ಶ್ರೀ ವಿದ್ಯಾರಣ್ಯರು’ ಶ್ರೀ ಶಂಕರ ವಿಜಯದಲ್ಲಿ ಈ ರೀತಿ ತಿಳಿಸುತ್ತಾರೆ.
ಆಗಿನ ವಿದ್ವಾಂಸರು ಗೈದ ತಪಸ್ಸಿನ ಫಲವೇ ಈ ಭಾಷ್ಯಗಳು. ವಿದ್ವಾಂಸರೆಲ್ಲರೂ, ಯಾರು-ಯರೋ ಮನಬಂದಂತೆ ವಿಮರ್ಷಿಸುತ್ತಿರುವರಲ್ಲಾ’. .
ಈ ಪ್ರಕರಣ ಗ್ರಂಥಗಳಿಗೆ ಸೂಕ್ತವಾದ ಭಾಷ್ಯವನ್ನು ಬರೆಯುವ ವ್ಯಕ್ತಿ ಯಾವಾಗ ಉದಯಿಸುತ್ತಾನೋ.. ಅವನ್ನು ನೋಡುವ ಭಾಗ್ಯವನ್ನು ನಾವು ಯಾವಾಗ ಗಳಿಸುತ್ತೇವೆಯೋ, ಎಂದು ಯೋಚಿಸುತ್ತಿದ್ದರು. ಈ ಭಾಷ್ಯಗಳ ಉದಯ ವಿದ್ವನ್ಮಣಿಗಳ ತಪಸ್ಸಿನ ಫಲ. ವೇದವ್ಯಾಸರ ಭಾಷ್ಯ ಸೂತ್ರಗಳಿಗೆ ಇಂತಹ ಸೊಗಸಾದ ಭಾಷ್ಯಗಳು ದೊರೆಯಬೇಕಾದರೆ, ಆ ವೇದವ್ಯಾಸರ ಸೂತ್ರಗಳು ಅತೀವ ಪುಣ್ಯ ಮಾಡಿದ್ದವು.
ಎಂತಲೇ ಶ್ರೀ ಭಗವತ್ಪಾದರ ಭಾಷ್ಯಗಳು ಆ ಸೂತ್ರಗಳಿಗೆ ದೊರಕಿವೆ. ಇಂತಹ ಭಾಷ್ಯಗಳ ರಚನೆ ಅವರ ಕಾರುಣ್ಯದ ಪ್ರತೀಕ.. ಚತುರಾಮ್ನಾಯ ಪೀಠಗಳ ಸ್ಥಾಪನೆ ಅವರ ದೀರ್ಘದರ್ಶಿತ್ವದ ಕುರುಹು. ಇನ್ನೂ ಸಾವಿರಾರು ವರ್ಷಗಳಾದರೂ, ನಾವು
ಗೈದ ಈ ಕಾರ್ಯಕ್ಕೆ ಸಾವಿರಾರು ವರ್ಷಗಳಾದರೂ ತಡೆ ಬರಬಾರದು. ಅವು ಅವಿಚ್ಚಿನ್ನವಾಗಿ ನಡೆಯಬೇಕೆಂದು,ಚತುರಾಮ್ನಾಯ ಪೀಠಗಳ ಸ್ಥಾಪನೆ ಅವರ ಧೀರ್ಘ ದರ್ಶಿತ್ವದ ಪ್ರತೀಕ.
ಈ ರೀತಿಯ ಕಾರುಣ್ಯಸಿಂಧುವಾದ್ದರಿಂದ ಅವರು ಜಗತ್ತಿಗೇ ಗುರುವಾಗಿ ಆ ವಾಕ್ಯವನ್ನು ಸಾರ್ಥಗೊಳಿಸಿದರು. ಅಂತಹ ಆದಿಗುರುವಾಗಿರುವ, ಆದಿಶಂಕರ ಭಗವತ್ಪಾದರು ಎಷ್ಟೋ ಉಪದೇಷಗಳನ್ನಿತ್ತಿಡ್ಡಾರೆ. ಅವುಗಳಲ್ಲಿ ಒಂದನ್ನಾದರೂ ಶ್ರದ್ಧೆಯಿಂದ ಪಾಲಿಸಿದರೆ, ನಮ್ಮ ಬಾಳು ಧನ್ಯ.
ಪ್.ಸ್.-------. ಅಲ್ಲದೆ, ಅವರು ಶಾಸ್ತ್ರ ರೀತಿಯಲ್ಲಿ ಆಚರಿಸುವವರಾಗಿರಬೇಕು. ’ನಾನು ಪುಸ್ತಕವನ್ನೊದಿದೆ. ಚೆನ್ನಾಗಿ
ಪಾಠ ಮಾಡುತ್ತೇನೆ. ಆಚರಿಸುವುದಿಲ್ಲ ಎಂದರೆ, ಅವರನ್ನು ಗುರುವಾಗಿ ಸ್ವೀಕರಿಸುವುದು ಅಸಾಧ್ಯ.’
===============
ಅಧ್ಯಾಯ-೨.
--------------
ಶ್ರೀ ಶೃಂಗೇರಿ ಪೀಠವೂ ಆಚಾರ್ಯ ಪರಂಪರೆಯೂ
-----------------------------------------------------
ಶ್ರೀ ಶಂಕರ ಭಗವತ್ಪಾದರ ಮತ್ತು ಶ್ರೀ ಶಾರದಾಂಬೆಯ ಅನುಗ್ರಹದಿಂದ ಸ್ಥಾಪಿತವಾದ ಶ್ರೀ ದಕ್ಷಿಣಾಮ್ನಾಯ ಶೃಂಗೇರಿ ಒದು ಅವಿಛ್ಚಿನ್ನವಾದ ಗುರು ಪರಂಪರೆಯನ್ನು ಹೊಂದಿ ಬೆಳಗುತ್ತಿದೆ.
ಉಂ
ಈ ಪರಂಪರೆಯಲ್ಲಿ ಸದಾ ನೆನೆಪಿನಲ್ಲಿ ಉಳಿಯುವ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಈ ಪರಂಪರೆಯಲ್ಲಿಮಕುಟಪ್ರಾಯರಾಗಿ ಜೀವಿಸಿದರು.. ಭಾರತದ ಎಲ್ಲೆಡೆ ನೆಲೆಸಿರುವ ಭಕ್ತ ವೃಂದದ ಗೌರವ, ಭಕ್ತಿ, ಪ್ರೀತಿಗೂ, ನಂಬಿಕೆಗೂ, ಪಾತ್ರರಾದವರು. ಅಂತಹ ಪರಮ ಜ್ಞ್ಯಾನಿಯ ಶಿಷ್ಯರೆಂದು ಹೇಳಿಕೊಳ್ಳುವುದು ನಮಗೆ ಹೆಮ್ಮೆಯೇ.
ನಮ್ಮ ಸನಾತನ ಧರ್ಮವನ್ನು ಪ್ರಸಾರ ಮಾಡಲು, ಶ್ರೀ ಶಂಕರ ಭಗವತ್ಪಾದರಿಂದ ಶ್ರೀ ಶೃಂಗೇರಿ ಪೀಠ ಸ್ಥಾಪಿಸಿದರು.. ನಮ್ಮ ಧರ್ಮ ಉತ್ತುಂಗದಲ್ಲಿರುವವರೆಗೆ ದೇಶ ಸಮೃದ್ಧವಾಗಿರುವುದು. ಧರ್ಮಕ್ಕೆ ಸ್ಥಾನವಿರದೆ, ನಾಡಿನ ಪ್ರಗತಿ ಅಸಾಧ್ಯ.. ಎಷ್ಟೇ ವಿಜ್‘ಜ್ಯಾನ, ಆರ್ಥಿಕ ರೀತಿಯಲ್ಲಿ ಪ್ರಗತಿಯಾದರೂ, ಧರ್ಮದಲ್ಲಿ ನಂಬಿಕೆ-
ಯಿಲ್ಲದೆ ಅದನ್ನು ಕಡೆಗಾಣಿಸಿದರೆ, ಅದರಿಂದ ನಮಗೆ ಭಾರಿ ಆಪತ್ತು, ಅಳಿವು ನಿಶ್ಚಿತ. ’ವಿಜ್ಞ್ಯಾನರೀತಿಯಲ್ಲಿ ದೇಶ ಬೆಳೆಯುತ್ತಿರುವಾಗ,ಬಾಳಿನಲ್ಲಿ ಧರ್ಮಕ್ಕೇಕೆ ಸ್ಥಾನ ಎಂದು
ಹಲವರು ಪ್ರಶ್ನಿಸಬಹುದು. ’ಧರ್ಮದ ಸ್ವಭಾವನ್ನೂ ,ಅದರ ಮೌಲ್ಯವನ್ನೂ, ಧರ್ಮದ ಆಧಾರವಾದ ವೇದದ ಹಿರಿಮೆಯನ್ನರಿಯದೆ. ಇಂತಹ ಪ್ರಶ್ನೆಗಳನ್ನು ಎಬ್ಬಿಸಿದರೆ,ನಮ್ಮ
ನಾಡಿನ ಕಲಾಚರದ ಬಗ್ಗೆ ಇರುವ ಅಜ್ಞ್ಯಾನವೇ ಈ ರೀತಿಯ ಪ್ರಶ್ನೆಗಳಿಗೆ ಕಾರಣ. ’ತಾನು
ಚಿಂತಿಸುವುದೇ ಸರಿ ಎಂದು ವಾದಿಸುವವರೇ ಈ ಪ್ರಶ್ನೆಗಳ ಕಾರಣಕರ್ತರು.
ವೇದ ರೂಪದಲ್ಲಿ ಪರಮಾತ್ಮ ನಮಗೆ ಧರ್ಮವನ್ನು ತಿಳಿಸಿದ್ದಾನೆ. ’ಧರ್ಮವೇನೆಂದು ನಮಗೆ ತಿಳಿಸುವ ಜ್ಞ್ಯಾನವೇ ವೇದ.. ಕೆಲವರು, ’ದೇವರು ನಮ್ಮ ಮುಂದೆ ಪ್ರತ್ಯಕ್ಷನಾಗುವನೇ. ಎನಾದರೂ ಹೇಳುವನೇ. ದೇವರ ದಯೆಯೆಂದರೆ ಅರ್ಥವೇನು.. ಜನಗಳನ್ನು ವಂಚಿಸಲು, ಇವು ಕೆಲವರು ಹೇಳಿದ ಅಪ್ರಬುದ್ಧ ನುಡಿಗಳಾಗಿರಬಹುದು . ಈ ನವೀನ ಯುಗದಲ್ಲಿ
ಕೆಲವರು ಪ್ರಜ್ಞ್ಯಾವಂತರು ಈ ರೀತಿ ವಾದಿಸಬಹುದು. ’ಭಗವಂತನ ದಯೆ’ ಎಂದರೆ ಏನೆಂದು ನಮ್ಮಹಿರಿಯರು ನಮಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
.’
’ದನ ಮೇಯಿಸುವವನು ಕೈಯಲ್ಲಿ ಕೋಲನ್ನು ಹಿಡಿದು ದನವನ್ನು ಅಟ್ಟುವಂತೆ ದೇವರು ತೋರುವದಿಲ್ಲ. ನಾವು ಸತ್ಕರ್ಮವನ್ನುಮಾಡಲು ಪರಮಾತ್ಮ ಪ್ರೇರೇಪಿಸುತ್ತಾನೆ.. ನಾವು ಮಾಡಲು ಬಯಸುವ ಕಾರ್ಯಗಳೆಲ್ಲಕ್ಕೂ ನಮ್ಮ ಅಂಥಕರಣ ಪ್ರೇರೇಪಿಸುತ್ತದೆ.. ಆ ಪ್ರೇರಣೆಯಿಲ್ಲದೆ ಕಾರ್ಯವಿಲ್ಲ. ಈ ಪ್ರೇರಣೆಯನ್ನ್ನು ನೀಡುವುದು ಭಗವಂತ. ಅವನ ಪ್ರೇರಣೆಯಿಲ್ಲದೆ ಸತ್ಕಾರ್ಯ
ಗಳನ್ನು ಮಾಡಲು ಸಾಧ್ಯವೇ. ನಮ್ಮ ದುಷ್ಕರ್ಮಗಳನ್ನು ಮಾಡುವಾಗ ಅದಕ್ಕೂ ಅವನೇ ಪ್ರೇರಕ. ಹಾಗಾದರೆ, ನಾವು
ಅತ್ಯುನ್ನತ ಸ್ಥಾನವನ್ನಿತ್ತಿರುವ, ಭಕ್ತಿಗೂ, ಮಾರ್ಗದರ್ಶನಕ್ಕೂ ಕಾರಣನಾದ ಸ್ವಾಮಿ ನಮ್ಮನ್ನು ತಪ್ಪು ಮಾಡಲು ಪ್ರೇರೇಪಿಸಬಹುದೇ. ನಮ್ಮ ಹಿಂದಿನ ಜನ್ಮದ ಕರ್ಮಾನುಸಾರವಾಗಿ ಒಳ್ಳೆಯ ಯಾ ಕೆಟ್ಟ ಕಾರ್ಯಗಳ ಪ್ರೇರೇಪಣೆಉಆಗುವುದು.. ಇದಕ್ಕೆ ಯಾವರೀತಿಯಲ್ಲಿಯೂ ಭಗವಂತ ಜವಾಬ್ದಾರನಲ್ಲ.
ಹಿಂದೆ ಮಾಡಿದ ಕರ್ಮದ ಪಲವನ್ನು ಈ ಜನ್ಮದಲ್ಲಿಯೂ, ಈ ಜನ್ಮದಲ್ಲಿಯ ಕರ್ಮದ ಫಲವನ್ನು ಮುಂದಿನ ಜನ್ಮದಲ್ಲಿಯೂ, ಅನುಭವಿಸಬೇಕೆಂಬ ನಿಯಮ ಮೊದಲಿನಿಂದಲೂ ಇದೆ.. ಈ ಸಂಸಾರದ ಪ್ರಾಚೀನ ಪದ್ಧತಿಯನ್ನು ತಮ್ಮ ಬ್ರಹ್ಮ ಸೂತ್ರದಲ್ಲಿಯೂಎದವ್ಯಾಸರೂ, ಶ್ರೀ ಭಗವತ್ಪಾದರು ತಮ್ಮ ಪ್ರವಚನಗಳಲ್ಲಿಯೂ ವಿವರಿಸಿದ್ದಾರೆ.. ಆದ್ದರಿಂದ, ಒಬ್ಬನು ತನ್ನ ಕರ್ಮದ ಪಲವನ್ನು ಅನುಭವಿಸಬೇಕೆಂಬುದು, ನಿಯಮ ಬಾಹಿರವೋ, ಶಾಸ್ತ್ರ ವಿರುದ್ದವೋ ಆಗದೆ,ಸಂಸಾರ ಅವಿರತವಾಗಿ, ನಡೆಯಿತ್ತಲೇ ಇರುತ್ತದೆ. ಆದ್ದರಿಂದ, ಸಂಸಾರಚಕ್ರದಿಂದ ಬಿಡುಗಡೆ,, ಧರ್ಮಮಾರ್ಗ ಬಯಸುವವರು, ದೇವರ ಆನುಗ್ರಹವನ್ನು ಪಡೆಯಲು ಧರ್ಮದಲ್ಲಿ ಉಲ್ಲೇಖಿಸಿರುವ ನಿಯಮವನ್ನು ಅನುಸರಿಸಬೇಕು.. ಎಂತಲೇ, ಭಗವಂತನಿತ್ತಿರುವ ಬುದ್ಧಿಯನ್ನು, ಶಕ್ತಿಯನ್ನೂ ಸರಿಯಾದ ರೀತಿಯಲ್ಲಿ, ಉಪಯೋಗಿಸಬೇಕು.
ಹಾಗೆ ಮಾಡದಿದ್ದರೆ, ಅದಕ್ಕೆ ದೈವ ಜವಾಬ್ದಾರಿಯಲ್ಲ.
ಇದನ್ನು, ನಮ್ಮ ಹಿರಿಯರು ಒಂದು ಉದಾಹರಣೆಯ ಮೂಲಕ ತಿಳಿಸುತ್ತಾರೆ.ಒಬ್ಬ ತಂದೆಯು,ತನ್ನ ಮಗನಿಗೆ ಯುದ್ಧದಲ್ಲಿ ಉಪಯೋಗಿಸಲು ಖಡ್ಗ ಒಂದನ್ನಿತ್ತ. ಅವನು ಅದನ್ನು ಅದಕ್ಕುಪಯೋಗಿಸದೆ, ತನ್ನ ಶಿರವನ್ನೇ ಕತ್ತರಿಸಿಕೊಂಡ. ಇದು ಖಡ್ಗವನ್ನಿತ್ತ ತಂದೆಯ ತಪ್ಪೇ, ದುರುಪಯೋಗ ಮಾಡಿಕೊಂದವನ ತಪ್ಪೇ. ಅದರ ಪರಿಣಾಮ ಅವನ ಅಳಿವೇ. ಅಂತೆಯೇ,ಧರ್ಮಪಥವನ್ನನುಸರಿಸಲು, ಕೊಡಲ್ಪಟ್ಟ ಜ್ಞಾನವನ್ನು ಸರಿಯಾದ ರೀತಿಯಲ್ಲುಪಯೋಗಿಸದೆ,ಸದ್ಗ್ರಂಥಗಳಿತ್ತ, ಉಪದೇಶಗಳನ್ನರಿತುಕೊಳ್ಳದೆ, ನಮಗೆ ನಾವೇ ಕೇಡು ತಂದುಕ್ಕೊಂಡರೆ ಅದಕ್ಕಾರು ಹೊಣೆ.
’ಇರುವವರೆಗೂ, ಸಾಲಮಾಡಿಯಾದರೂ, ಬಳನ್ನು ಅನುಭವಿಸುತ್ತ, ಅದನ್ನು ಯಾರೂ ಗಮನಸುವಿದಿಲ್ಲ ಎಂದು, ಬಾಳನ್ನು ಕೆಡಿಸಿಕೊಂದರೆ, ಅದಕ್ಯಾರು ಹೊಣೆ..ಎಂತಲೇ, ಮಾನವ ದೈವವಿತ್ತ ಅರಿವಿನ ಶಕ್ತಿಯಿಂದ, ತನ್ನ ಕಾರ್ಯವಿಧಾನವನ್ನು ನಿರ್ಣಯಿಸಿ,ನಮ್ಮ ಹಿರಿಯರು,ಧರ್ಮಸೂತ್ರಗಳನ್ನು, ನಮ್ಮ ನಲ್ಮೆಗಾಗಿಯೇ, ರೂಪಿಸಿದ್ದಾರೆ’ ಎಂಬ ನಂಬಿಕೆಯೊಂದಿಗೆ,ಅವರ ಉಪದೇಶವನ್ನನುಸರಿಸಬೇಕು..
ಕೆಲ ಸಂಧರ್ಭಗಳಲ್ಲಿ, ನಾವು ಹೇಗೆ ನಡೆಯಬೇಕೆಂದು ಸಂದೇಹಗಳು ಬಂದಾಗ ಶಾಸ್ತ್ರವನ್ನು ಚೆನ್ನಾಗಿ ಅಭ್ಯಸಿಸಿ, ತನ್ನ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು.. ಅಂತಹ ಅರಿವಿಲ್ಲದಿದ್ದರೆ, ಉಪನಿಷತ್ತುಗಳು, ತಿಳಿಸುವಂತೆ, ಹಿರಿಯರು ತೋರಿದ ದಾರಿಯಲ್ಲಿ, ನಡೆಯಬಹುದೆನ್ನುತ್ತದೆ.
ಹಿರಿಯರೆಂದರೆ, ಉತ್ತಮ ಜ್ಞಾನಿಗಳೂ, ಶಾಸ್ತ್ರವನ್ನು ಸಂಶೋದಿಸಬಲ್ಲ, ಯೋಗ್ಯತೆಯಿರುವವರೂ ಎಂದರ್ಥ.
ಅವರು ಸೂಚಿಸಿದ ಮಾರ್ಗಲ್ಲಿ ನೀನು ಸಾಗಿದರೆ ಶ್ರೇಯಸ್ಸನ್ನು ಗಳಿಸುತ್ತಿಯೆ, ಎನ್ನುತ್ತದೆ ಉಪನಿಶತ್ತು.
ಎಲ್ಲರಿಗೂ, ಶಾಸ್ತ್ರವನ್ನು ಅಭ್ಯಸಿಸಿ, ಸಂದೇಹಗಳು ನಿವಾರಿಸಿಕೊಳ್ಳಲು ಶಕ್ತಿಯಿರದಿದ್ದರೆ, ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಬಹುದು. ಸಂಪೂರ್ಣ ವಿಶ್ವಾಸವನ್ನಿಟ್ಟು ನಮ್ಮ ಹಿರಿಯರು ಅಜ್ಞ್ಯಾನಿಗಳು. ನಾವೇ ಜ್ಞ್ಯಾನಿಗಳು,ಎಂದುಕೊಂದರೆ,ಅದಕ್ಕಿಂತ ಅಜ್ಞ್ಯಾನ ಬೇರಿಲ್ಲ.. ನಮ್ಮ ಹಿರಿಯರು, ದೀರ್ಘವಾಗಿ ಆಲೋಚಿಸಿ, ನಮಗೆ ಮಾರ್ಗ ತೋರಿದರು, ಆ ಮಾರ್ಗದಲ್ಲಿ ಧರ್ಮಮಾರ್ಗವನ್ನನುಸರಿಸಿ ಶ್ರೇಯಸ್ಸನ್ನು ಪಡೆದರು. ಅಂತೆಲೇ, ನಾವು ಆ ಮಾರ್ಗದಲ್ಲೇ ತೆರಳೋಣ ಎಂಬ ಧೃಢ ನಂಬಿಕೆಯಿಂದ ಮುಂದುವರಿಯಬೇಕು.
ಶ್ರೀ ಭಗವತ್ಪಾದರ ಆಸೆ, ಧರ್ಮ ಪ್ರಚಾರವು ಅವಿಛ್ಛಿನ್ನವಾಗಿ ನಡೆಯಬೇಕೆಂಬುದೇ. ಸತ್ಕಾರ್ಯಗಳು ಸತತವೂ ನಡೆಯಬೇಕೆಂಬುದೇ ಅವರ ಕನಸು.. ತತ್ವ‘ಜ್ಞ್ಯಾನಿಗಳೆಲ್ಲಾ ಅವರೆ ಶ್ರೇಷ್ಠರು ಎಂದರೆ ಅತಿಶಯೋಕ್ತಿಯಲ್ಲ.
. ೩೨ ವಯಸ್ಸಿನ್ನಲ್ಲಿಯೇ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಚಾರ, ಸೂಕ್ಷ್ಮ ಜ್ಞ್ಯಾನ,
ಅವರ ಚತುರಾಮ್ನಾಯ ಪೀಠಗಳ ಸ್ಥಾಪನೆ,, ಅವರ ಅಪಾರ ಜ್ಞ್ಯಾನ, ದೀರ್ಘದರ್ಶಿತ್ವವನ್ನು ಸೂಚಿಸುತ್ತದೆ.
ಅವರ ಚಿಂತನ-ಅಪೇಕ್ಷೆಯ ಫಲವೇ ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಪೀಠದ ಸ್ಥಾಪನೆ.ಬ್ರಹ್ಮವಿದ್ಯಾ ಸ್ವರೂಪಿಣಿಯೂ,, ಸಕಲ ಜ್ಞ್ಯಾನ ಸ್ವರೂಪಿಣಿಯೂ ಆದ ಶ್ರೀ ಶಾರದಾಂಬೆಯನ್ನು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ್ದು.. ಯಾವ ಶ್ರೇಷ್ಠ ಮುಹೂರ್ತದಲ್ಲಿ ಈ ಪೀಠವನ್ನು ಸ್ಥಾಪಿಸಿದರು ಎಂದರಿಯಲು ನಮಗೆ ಆಸಕ್ತಿಯಿಲ್ಲ.
ಅತ್ಯುನ್ನತ ಪರಂಪರೆಯ ಈ ಪೀಠದ ಆಚಾರ್ಯರುಗಳು ಅಲಂಕರಿಸಿರಿವುದರಿಂದಲೇ, ಆ ಸ್ಥಾಪನಾ ಘಳಿಗೆಯ ಮಹತ್ವ ತಿಳಿಯುತ್ತದೆ..ಎಷ್ತೋ, ಕಷ್ಟಗಳನ್ನೂ, ಅಡೇತಡೆಗಳನ್ನೂ ಎದುರಿಸಿದರೂ, ಅವಿಛ್ಛಿನ್ನ ಗುರುಪರಂಪರೆ ಬಾಧೆ, ತಡೆಗಳಿಲ್ಲದೆ, ಇಲ್ಲಿಯವರೆಗೂ ಆಗಮಿಸಿದೆ..
ಶೃಂಗೇರಿ ಮಠದ ಚರಿತ್ರೆಯಲ್ಲಿ, ’ಕರ್ಣಾಟಕ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯ’, ಎಂದು ಖ್ಯಾತರಾದ ಶ್ರೀ ವಿದ್ಯಾರಣ್ಯರ ಕಾಲ ’ಸುವರ್ಣಕಾಲ ಎಂಬುದನ್ನು ಅರಿಯದವರಾರು.. ಕೆಲವರು ನನ್ನನ್ನು[ಗುರುಗಳನ್ನು] ಕೇಳುತ್ತಾರೆ..’ ಸರ್ವಸಂಗ ಪರಿತ್ಯಾಗಿಗಳಾದ ಯತಿಗಳಿಗೆ,,’ ಈ ರೀತಿಯ ಪಟ್ಟಾಭಿಷೇಕ, ಇತ್ಯಾದಿ ಸಮಾರಂಭಗಳು ನಡೆಯಬಹುದೇ. ಅದು ಪ್ರಾಪಂಚಿಕ ವ್ಯವಹಾರದಲ್ಲಿ-ಇರುವರಿಗೆ ಮಾತ್ರ ಹೊಂದುತ್ತದೆ,’ ಎನ್ನುತ್ತಾರೆ.
ನಿಜವೆಂದರೆ, ಶ್ರೀ ಶಂಕರಾಚಾರ್ಯರ ಕಾಲದಲ್ಲಾಗಲಿ, ತದನಂತರವೂ, ರಾಜ ಲಾಂಛನಗಳೋ, ಪಟ್ಟಾಭಿಷೇಕದಂತಹ ವೈಭವಗಳೋ ಶ್ರೀ ಶೃಂಗೇರಿ ಆಚಾರ್ಯರುಗಳಿಗೆ ಇರಲಿಲ್ಲ, ಶ್ರೀ ಶಂಕರಾಚಾರ್ಯರ ಕಾಲದಿಂದ ಶ್ರೀ ವಿದ್ಯಾರಣ್ಯರವರೆಗೂ,ನಮ್ಮ ಆಚಾರ್ಯರು ಶಿಷ್ಯರಿಗೆ ಉಪದೇಶಿಸುವದರಲ್ಲೂ,ಜ್ಞ್ಯಾನವರಸಿ ಬಂದವರಿಗೆ, ಅದಕ್ಕೆ ಸಂಭಂದಪಟ್ಟ ಮಾರ್ಗ ತೋರುವದರಲ್ಲೂ, ಮಗ್ನರಾಗಿದ್ದರು. ಕರ್ಣಾಟಕ ಸಿಂಹಾಸನ ಸ್ಥಾಪನಾಚಾರ್ಯ,, ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳೂ, ಒಬ್ಬ ಮಹಾ ತಪಸ್ವಿಯಾಗಿದ್ದರೆಂಬುದನ್ನು, ನಾವು ಮನಗಾಣಬೇಕು.. ಮಿಕ್ಕ ಆಚಾರ್ಯರು, ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳಂತೆ, ಹೊರ ರಾಜ್ಯ ವ್ಯವಹಾರಗಳಲ್ಲಿ, ಏಕೆ ಭಾಗವಹಿಸಲಿಲ್ಲ,ಎಂದು ಪ್ರಶ್ನಿಸುವರು.ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳೂ, ಹೊರ ವ್ಯವಹಾರಗಳಲ್ಲಿ, ಸಂಪೂರ್ಣವಾಗಿ ಭಾಗವಹಿಸಿದ್ದರೆಂಬುದಕ್ಕೆ ಸ್ಪಷ್ಟ ಆಧಾರವಿಲ್ಲ.
ಹಕ್ಕ-ಬುಕ್ಕರೇ ಶ್ರೀ ವಿದ್ಯಾರಣ್ಯರನ್ನು ಅರಸಿ ಬಂದರೇ ಹೊರತು, ಅವರು ಇವರನ್ನರಸಿ ಹೋಗಲಿಲ್ಲ. ಅವರನ್ನು ಅನುಗ್ರಹಿಸಿದರು.
. ತಮ್ಮ ಅಪೂರ್ವ ಜ್ಞ್ಯಾನದಿಂದಲೂ, ತಪೋಬಲದಿಂದಲೂ, ಅವರಿಗೆ, ಕರ್ನಾಟಕ ಆಧಿಪತ್ಯವನ್ನು
ದೊರಕಿಸಿಕೊಟ್ಟರೂ, ಅವರು ತಪೋಮಗ್ನರಾಗಿ, ಸನ್ಯಾಸಿಯಾಗಿಯೇ ಇದ್ದರು. ಶ್ರೀ ಗುರುವರ್ಯರ ಅನುಗ್ರಹದ ಕುರುಹಾಗಿ
ಹಕ್ಕ ಬುಕ್ಕರು, ರಾಜಲಾಂಛನಗಳನ್ನು ಅವರ ಪದತಲದಲ್ಲಿ ಸಮರ್ಪಿಸಿದರು. ಶಿಷ್ಯರ ಮನನೋಯಿಸಲು ಬಯಸದೆ ಅವರ ರಾಜಲಾಂಛನಗಳನ್ನು ಅಭಿಮಾನದಿಂದ ಸ್ವೀಕರಿಸಿದರು.. ಅವರು. ಅದಕ್ಕೆ ಆಸೆಪಟ್ಟರೆಂದೋ,ಹುಡುಕಿ ಹೋದರೆಂದೋ, ಭಾವಿಸುವುದು ತಪ್ಪಾಗುತ್ತದೆ.. ಶ್ರೀ ವಿದ್ಯಾರಣ್ಯರು ತೋರಿದ ಪಥದಲ್ಲಿ ನಡೆಯುತ್ತಿರುವ
ಶೃಂಗೇರಿ ಆಚಾರ್ಯರುಗಳು ಒಬ್ಬೊಬ್ಬರೂ, ಶ್ರೀ ವಿದ್ಯಾರಣ್ಯರಂತೆ, ಈ ರಾಜಮರ್ಯಾದೆಗಳನ್ನು ಸ್ವೀಕರಿಸಿ ವಹಿಸಿಕೊಂಡು ಬರುತ್ತಿದ್ದಾರೆ.
.
ಆದ್ದರಿಂದ, ಈ ಪಟ್ಟಾಭಿಷೇಕ ವೈಭವಗಳನ್ನು ಶ್ರ್ರೀ ಆಚಾರ್ಯಗಳು ಬಯಸಿ ನಡೆಸಿಕ್ಕೊಳ್ಳುತ್ತಾರೆ ಎಂದುಕೊಂಡರೆ ಅದು ತಪ್ಪು. ಅವರುಗಳಿಗೆ, ಇದರ ಬಗ್ಗೆ, ಯಾವ ವ್ಯಾಮೋಹವೂ ಇಲ್ಲ. ಶ್ರೀ ಶಂಕರ ಭಗವತ್ಪಾದರ ಉಪದೇಶಗಲ್ಲಿ ಲೀನರಾಗಿರುವ ಆಚಾರ್ಯರುಗಳಿಗೆ ಇಂತಹ ಬಯಕೆಗಳನ್ನು ಕಲ್ಪಿಸುವುದು ತಪ್ಪ್ಪಾಗುತ್ತದೆ. ಶಿಷ್ಯರ ಪ್ರಾರ್ಥನೆಗೆ ಮಣಿದು., ಅವರ ಸಂತೃಪ್ತಿಗಾಗಿಯೂ ಪರಂಪರೆಯನ್ನನುಸರಿಸಬೇಕೆಂದೂ, ಗುರುವರ್ಯರುಗಳು,ಈ ಪಟ್ಟಾಭಿಷೇಕ ವೈಭವಕ್ಕೆ ಸಮ್ಮತಿಸಿದ್ದಾರೆ.. ಬೇರೆ ಯಾವ ರೀತಿಯ, ಕಾರಣವೂ. ನಿರೀಕ್ಷೆಯೂ ಇಲ್ಲ.
ನಮ್ಮ ಗುರುಗಳು ಯಾವುದರಲ್ಲಿಯೂ ಆಪೇಕ್ಶೆಯುಳ್ಳವರಾಗಿರಲಿಲ್ಲ. ನೈಜ ಸನ್ಯಾಸಿಯಾಗಿದ್ದರು. ನಮ್ಮ ಗುರಿಯೂ ಅದೇ.
ಅದುವೇ ಬಯಸುವದಾಗಿಯೂ, ಹಿಂಬಾಲಿಸುವುದಾಗಿಯೂ ಇರಬೇಕು. ಅದೇ, ಸಮಯ, ಗುರುವಿನ ಕಟ್ಟಳೆಗೆ ಮಣಿಯುವುದರೊಂದಿಗೆ ಶಿಷ್ಯರ ಸಂತೋಷ,ಗುರುವಿನ ಕರ್ತವ್ಯವಾದ್ದರಿಂದ,ಪರಂಪರೆಯ-
ಯನ್ನು ಅನುಸರಿಸಬೇಕೆಂಬ ಕಾರಣಕ್ಕಾಗಿ, ನಾವು ಈ ಪಟ್ಟಾಭಿಷೇಕ ವೈಭವಗಳಿಗೆ ಸಮ್ಮತಿ-
ಸಿದೆವು. ಎಲ್ಲರೂ, ಗುರು ತೋರಿದ ಮಾರ್ಗದಲ್ಲಿ ನಡೆದು, ಅವರು ತೋರಿದ ಮಾರ್ಗವನ್ನನುಸರಿಸಿ, ಶ್ರೀ ಶಾರದಾದೇವಿಯನ್ನಾರಾಧಿಸಿ,ಮಾತೆಯ ಅನುಗ್ರಹವನ್ನು ಪಡೆಯಬೇಕೆಂಬುದೇ ನಮ್ಮ ನಿಶ್ಚಿತ ಗುರಿ.
===============================
ಅಧ್ಯಾಯ.೩.
========
ನಮ್ಮ ಆಚಾರ್ಯರು
================
ಶ್ರೀ ಪರಮೇಶ್ವರನ ಅವತಾರವಾದ ಶ್ರೀ ಶಂಕರ ಭಗವತ್ಪಾದರು ಸನಾತನ ಧರ್ಮದ ವೃದ್ಧಿಗೆ
ಮೂರು ಮಹತ್ ಕಾರ್ಯಗಳನ್ನು ಮಾಡಿದರು. ಅವು, ’ಪ್ರಸ್ಥಾನತ್ರಯಗಳೆನಿಸಿದ’, ಬ್ರಹ್ಮ ಸೂತ್ರಗಳು, ಉಪನಿಷತ್ತು-
ಗಳು, ಮತ್ತು ಭಗವದ್ಗೀತೆಗೆ ಭಾಷ್ಯವನ್ನು ಬರೆದದ್ದು. ಎರಡೆನಯದು,ಸಮಗ್ರಭಾರತ ದೇಶವನ್ನು
ಸಂಚರಿಸಿ, ದೋಷಯುಕ್ತವಾದ ವಿವಿದ ಕ್ರಮಗಳನ್ನು ಅನುಸರಿಸುತ್ತಿದ್ದ, ಪಂಡಿತರನ್ನು ವಾದದಲ್ಲಿ ಗೆದ್ದು,
ಸನ್ಮಾರ್ಗದಲ್ಲಿ ನಡೆಸಿದ್ದು, ನಾಡಿನ ನಾಲ್ಕು ಮೂಲೆಗಳಲ್ಲಿಯೂ ಧರ್ಮ ಪ್ರಸಾರ ಅವಿರತವಾಗಿ ಸಾಗಲು ನಿರಂತರವಾಗಿ ನೆಲೆಸಲು ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದ್ದು ಶ್ರೀ ಭಗವಾತ್ಪಾದರ, ಅಮೂಲ್ಯ ಅರಿವು,ಧೀರ್ಘದರ್ಶಿತ್ವಕ್ಕೆ,ಈ ಚತುರಾಮ್ನಾಯ ಪೀಠಗಳ ಸ್ಥಾಪನೆಯೇ ಸಾಕ್ಷಿ.. ಶ್ರೀ ಆದಿಶಂಕರರೊಬ್ಬರೇ ಇದುವರೆಗೆ ಜಗದಲ್ಲವತರಿಸಿದ ಙ್ಯಾನಿಗಳಲ್ಲಿ, ಈ ರೀತಿಯ ಅತಿಶಯವಾದ, ದೀರ್ಘದರ್ಶಿತ್ವ ಹೊಂದಿರುವವರು ಎಂದು,ನಮ್ಮ ಆಚಾರ್ಯರು, ಹೇಳುವುದೂಂಟು.
.
ದಕ್ಷಿಣದ ಪೀಠವಾದ ಶೃಂಗೇರಿಗೂ, ಉತ್ತರ ಪೀಠವಾದ, ಬದರಿಗೂ, ಗಿರಿಗಳಿಂದ ಆವರಿಸಲ್ಪಟ್ಟ ಸ್ಥಳಗಳಲ್ಲಿಯೂ,, ಪಶ್ಚಿಮ ಪೀಠವಾದ ದ್ವಾರಕೆಗೂ, ಪೂರ್ವದ ಪೀಠವಾದ ಪೂರಿಗೂ, ಕಡಲಿನ ಬಳಿ ಇರುವ ಸ್ಥಳಗಳನ್ನು
ಶ್ರೀ ಭಗವತ್ಪಾದರು ಚುನಾಯಿಸಿದರು. ದೊಡ್ಡ ಪಟ್ಟಣಗಳಲ್ಲಿಯೋ, ಅವಕ್ಕೆ ಹತ್ತಿರವೋ, ಸ್ಥಳಗಳನ್ನು, ಆಯ್ಕೆ
ಮಾಡಬಹುದಿತ್ತು. ಹಾಗೆ ಮಾಡದೆ, ಜನಗಳು ಆ ಸ್ಥಳಗಳನ್ನು ಪ್ರವೇಶಿಸುತ್ತಿದ್ದಂತೆಯೇ,ಅವರ ಚಿಂತೆಗಳನ್ನು
ಮರೆತು, ಸುಲಭವಾಗಿ ಶಾಂತಿಯನ್ನು ಪಡೆಯಲು, ಅನುಕೂಲವಾಗುವಂತೆ, ಈ ಸ್ಥಳಗಳ ಆಯ್ಕೆಯಾಯಿತು. ದಕ್ಷಿಣಾಮ್ನಾಯ ಪೀಠಕ್ಕೆ, ಶಾಂತಿಯನ್ನೂ, ಅದ್ಭುತ ಪ್ರಕೃತಿ ಸೌಂದರ್ಯವನ್ನೂ, ಪಡೆದಿರುವ ಶ್ರೀ ಶೃಂಗೇರಿಯನ್ನು ಆಯ್ಕೆಮಾಡಿದರು. ವೇದಗಳು ನಾಲ್ಕು, ದಿಕ್ಕುಗಳು ನಾಲ್ಕು, ಬ್ರಹ್ಮ್ಮನ ಮುಖವೂ ನಾಲ್ಕು. ಅದನ್ನನುಸರಿಸಿಯೇ, ಶ್ರೀ ಶಂಕರರು ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಅಲ್ಲದೇ, ಒಂದೊಂದು ಪೀಠಗಳಿಗೂ, ದೇವತೆ, ಕ್ಷೇತ್ರ,ತೀರ್ಥ, ಅಚಾರ್ಯ ಪುರುಷರು, ಎಲ್ಲವನ್ನೂ, ತೀರ್ಮಾನಿಸಿದರು. ಹಾಗೆಯೇ, ಆಯಾ, ಪೀಠಗಳನ್ನಲಂಕರಿಸುವ, ಆಚಾರ್ಯರುಗಳಿಗೆ,, ಇರಬೇಕಾದ ಅರ್ಹತೆಗಳನ್ನು, ಉಲ್ಲೇಖಿಸಿ, ಅವರು ತಮ್ಮ ’ಮಠಮಾನ್ಯ ಶಾಸನದಲ್ಲಿ ಬರೆದಿಟ್ಟಿರುವುದು,
’ಶುಚಿಃ, ಜಿತೇಂದ್ರಿಯಃ, ವೇದ ವೇದಾಂಗಾದಿ ವಿಚಕ್ಷಣಃ’.
ಎಂದರೆ, ದೋಷರಹಿತ ಗುಣಗಳು, ಇಂದ್ರಿಯಗಳನ್ನು, ಜಯಿಸಿದವರೂ, ವೇದ ಮತ್ತು ಅವುಗಳ ಅಂಗಗಳು,ಶಾಸ್ತ್ರದಲ್ಲಿ ಪಾರಂಗತರಾಗಿರಬೇ- ಕೆಂಬುದು ಇದರ ಅರ್ಥ. ಕಿರಿಯ ವಿದ್ವತ್ತು,ಜನಾಕರ್ಷಣೆಯ ಕಲೆ,, ಮಾತ್ರ ಇದ್ದರೆ ಸಾಲದು. ದೋಷರಹಿತ ಗುಣವಿದ್ದರೆ, ಪೀಠವನ್ನು ನಿರ್ವಹಿಸಬಹುದು.
ತನ್ನ ಇಂದ್ರಿಯಂಗಳನ್ನೇ, ನಿಯಂತ್ರಿಸದವರು, ಹೇಗೆ ಮಿಕ್ಕವರಿಗೆ ಉಪದೇಶಿಸಬಹುದು. ವಿವೇಕ ಚೂಡಾಮಣಿಯಲ್ಲಿ, ಶ್ರೀ ಶಂಕರರು,’ ಇಂದ್ರಿಯಗಳ ಮಾರ್ಗದಲ್ಲಿಯೇ ಸಾಗುವವನು ವಿನಾಶವಾಗುವನು ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಪಂಚೇಂದ್ರಿಯಗಳನ್ನು ನಿಯಂತ್ರಿಸದವರು ಹೇಗೆ, ದಡ ಸೇರುವರು.. ನಿಜ ಗುರುವು,ಙ್ಯಾನಿಯಾಗಿಯೂ, ಬುದ್ಧಿವಂತನಲ್ಲದೆ, ತನ್ನ ಶಿಷ್ಯರ ನಲ್ಮೆಯಲ್ಲಿ ಅಕ್ಕರೆಯುಳ್ಳವನಾಗಿಯೂ, ಇರಬೇಕೆಂದು ಕಟ್ಟು ನಿಟ್ಟಾಗಿ, ಸ್ಪಷ್ಟವಾಗಿ ತಿಳಿಸಿದ್ದಾರೆ.
ನಮ್ಮ ಹಿರಿಯರಾದ, ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು
ಶ್ರೀ ಶಂಕರರು ಹೇಳಿದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು,ಪ್ರಕಾಶಿಸಿದರು.. ಶ್ರೀ ಆಚಾರ್ಯರ, ಅತ್ಯುತ್ತಮ ಗುಣಾತಿಶಯ-
ಗಳನ್ನೂ, ಪೂರ್ಣ ಜಿತೇಂದ್ರಿಯತ್ವವನ್ನೂ, ಆಶ್ಚರ್ಯಪಡುವಂತೆ, ಇರುವ
ಜ್ಞಾನಾಸಕ್ತಿಯನ್ನೂ, ನುಡಿಗಳಿಂದ ವಿವರಿಸಲು, ನನಗೆ ಅಸಾಧ್ಯ,ಎಂದೇ ನಂಬುತ್ತೇನೆ.
ನಮ್ಮ ಗುರುಗಳು, ಜ್ಞಾನಿಗಳಲ್ಲಿ ಅಗ್ರಗಣ್ಯರು.ಶ್ರೀ ಆದಿಶಂಕರರಂತೆಯೇ, ನಮ್ಮ ಆಚಾರ್ಯರೂ, ಚಿಕ್ಕ ವಯಸ್ಸಿನಲ್ಲಿಯೇ,ಸನ್ಯಾಸ ಸ್ವೀಕರಿಸಿದ್ದರಿಂದ, ಮೂರನೇ
ಆಚಾರ್ಯರರು, ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದ್ದರಿಂದ , ಮೂರನೇಪುರುಷಾರ್ಥವಾದ ಕಾಮದ ವಿಷಯದಲ್ಲಿ ವಿರಾಗಿಯಾಗಿಯೂ, ನಾಲ್ಕನೇ ಪುರುಷಾರ್ಥವಾದ ’ಮೋಕ್ಷ ಒಂದರಲ್ಲೇ, ಪ್ರಾಜ್ಞರಾಗಿದ್ದರು. ’ .
ನಮ್ಮ ಗುರುಗಳು, ಬಂದ ಭಕ್ತರ ಬಳಿ, ’ಅನಾವಶ್ಯಕವಾದ ವಿಷಯಗಳನ್ನು ಚರ್ಚಿಸಿ,ಕಾಲಹರಣ ಮಾಡಬೇಡಿ ಎನ್ನುತ್ತಿದ್ದರು. . ಆದರೆ, ಉಪಯುಕ್ತವಾದ ವಿಷಯಗಳನ್ನು, ಮಾತಾಡುವವರನ್ನು ಇಷ್ಟಪಡುತ್ತಿದ್ದರು.. ಅವರ ಅಪಾರ ಙ್ಯಾನ,ಉಪನಿಷತ್ತುಗಳನ್ನು ಸದಾ ಮನಸಿನಲ್ಲಿ ಚಿಂತಿಸುತ್ತಿದ್ದರಿಂದಲೂ,ಅವರು ಸಾರವಿಲ್ಲದ ಮಾತುಗಳನ್ನು, ಬಹಿಷ್ಕರಿಸಲು ಕಾರಣವಾಗಿದ್ದಿತ್ತು. ’ಅಧಿಕ ಮಾತು ಕಂಠಶೋಷಣೆ-
ಯಲ್ಲಿಯೇ, ಮುಕ್ತಾಯವಾಗುವುದು’ ಎಂಬ ಉಪನಿಷದ್ ವಾಕ್ಯದಂತೆ,’ ಅಧಿಕ ಮಾತಾಡುವದಕ್ಕಿಂತ ಮಾತಾಡದಿರುವುದೇ ಒಳ್ಳೆಯದು.’
.
ಅವರಿಗೆ, ಶ್ರೀ ಶಂಕರರ ಗ್ರಂಥಗಳಲ್ಲಿಯೂ, ಅವರು ವಿವರಿಸಿದ ತತ್ವೋಪದೇಶಗಳಲ್ಲಿಯೂ, ಬಹಳ ಆಸಕ್ತಿಯಿದ್ದಿತು.
ನಡೆದಾಡುವಾಗಲೂ, ಶ್ರೀ ಶಂಕರರ ಉಪದೇಶಗಳನ್ನು ಸ್ಮರಿಸಿಕೊಂಡಿರುವಂತೆ, ಪ್ರಸಕ್ತ ಗುರುಗಳಿಗೆ ಉಪದೇಶಿಸುತ್ತಿದ್ದರು. .. ಶ್ರೀ ಶಾರದಾ ದೇಗುಲಕ್ಕೆ ಹೋಗುವುದೂ, ತಾಯಿಯನ್ನು ನಮಸ್ಕರಿಸುವದೂ, ಹೊರಗಿನ ಕಾರ್ಯ.
ಒಳ ಕಾರ್ಯವೆಂದರೇ, ಸದಾ ಶ್ರೀ ಶಂಕರರ ತತ್ವವನ್ನು ಮನಸಿನಲ್ಲಿ ಚಿಂತಿಸುವುದೇ ಆಗುತ್ತದೆ.ಇದೇ, ನಮ್ಮ ಬಾಳನ್ನು ಫಲಪ್ರದವಾಗಿಸುತ್ತದೆ.. ಇಲ್ಲದಿದ್ದರೆ ನಮ್ಮ ಬಾಳು ಹೇಗೆ ದಡ ದಾಟುವುದು-ಎನ್ನುತ್ತಾರೆ ಹಿರಿಯ ಗುರುಗಳು.
ಶ್ರೀ ಶಂಕರರ ಉಪದೇಶಗಳನ್ನೂ, ಉಪನಿಷತ್ತುಗಳ ಉಪದೇಶಗಳನ್ನೂ ಸದಾ ಚಿಂತಿಸುತ್ತಿರುವುದೇ ಅವರ ಮಹಾ ಹಿರಿಯ ಗುಣ.
ಕಾಳಿದಾಸ ಮಹಾಕವಿಯ ರಘುವಂಶದಲ್ಲಿ ಬರುವ ದಿಲೀಪ ಮಹಾರಾಜನಂತೆ ನಮ್ಮ ಜೀವನವೂ ರೂಪುಗೊಳ್ಳಬೇಕೆಂದು ಅವರ ಗುರುಗಳು ಹೇಳುವರು. ಈ ಶ್ಲೋಕದಲ್ಲಿ ’ಸ್ವೀಕರಿಸಲ್ಪಡಲು, ಅರ್ಹರು
ಯಾರು, ಎಂಬುದು ವಿವರಿಸಲ್ಪಟ್ಟಿದೆ. ಸಾಧಾರಣವಾಗಿ, ಒಬ್ಬ ವ್ಯಕ್ತಿಗೆ, ಸ್ನೇಹವೋ, ಸಂಭಂಧವೋ ಮತ್ತವರನ್ನು ಸ್ವೀಕರಿಸಲು ನೆರವಾಗುವುದು. ಆದರೆ, ದಿಲೀಪ ಮಹಾರಾಜನೋ, ಮತ್ತವರಲ್ಲಿ ಯೋಗ್ಯತೆಯನ್ನು ಮಾತ್ರ ನಿರೀಕ್ಷಿಸಿದನು..’ ಬೇರೊಬ್ಬನು, ನನ್ನನ್ನು ಮೆಚ್ಚುತ್ತಾನೋ, ಇಲ್ಲವೋ,
ಎಂಬುದು, ಮುಖ್ಯವಲ್ಲ. ಅವನಿಗೆ, ಒಳ್ಳೆಯ ಯೋಗ್ಯತೆಯಿದ್ದರೆ, ಅವನು ನನಗೆ ಬೇಕಾದವನೆ.
ನನ್ನ ಬಗ್ಗೆ ಅವನು ಉದಾಸೀನಾವಾಗಿದ್ದರೂ, ನನಗೆ ಅವನು ಬೇಕಾದವನೇ’, ಎನ್ನುವುದು ದಿಲೀಪ ಮಹಾರಾಜನ ಮನೋಭಾವವಾಗಿತ್ತು..ಕವಿ ಕಾಳಿದಾಸರು, ಒಂದು ಉದಾಹರೆಣೆಯನ್ನು ನೀಡುತ್ತಾರೆ.
ಔಷದಿ ಕಹಿಯಾದರೂ, ರೊಗಿಗೆ ಅದು ಅವಶ್ಯಕ. ಅದರ ಚಿಕಿತ್ಸಾಶಕ್ತಿಯೇ ಮುಖ್ಯ, ರುಚಿಯಲ್ಲ.. ’ಸರ್ಪದಿಂದ ಕಚ್ಚಲ್ಪಟ್ಟ, ಬೆರಳು, ನಮ್ಮದಾದರೂ, ಅದನ್ನು ಕತ್ತರಿಸಲೇಬೇಕು.
’ಪ್ರಾಣ ಉಳಿಸುವ ಗುರಿ, ಮುಖ್ಯವಾದದ್ದಿರಂದ, ನಮ್ಮ ಶರೀರದ ಭಾಗವೆಂದು, ಅದರ ಮೇಲೆ ಅಭಿಮಾನವನ್ನಿಡಬಾರದು.. ಮತ್ತವರನ್ನು, ಸ್ವೀಕರಿಸುವದೋ, ತ್ಯಜಿಸುವುದೋ, ಇದರಂತೆಯೇ. ದಿಲೀಪ ಮಹಾರಾಜನ ಈ ಗುಣವು ನಮ್ಮ ಗುರುಗಳಿಗೆ ಬಹಳ ಹಿಡಿಸಿದ್ದಿತು. ಯೊಗ್ಯತೆಯಿದ್ದವನು, ಬಹಳ ದೂರದಲ್ಲಿದರೂ, ನಮ್ಮ ಆಚಾರ್ಯರು ಅವನನ್ನು ಇಷ್ಟಪಡುತ್ತಿದ್ದರು. ಯೋಗ್ಯತೆ ಇಲ್ಲದವನು ಹತ್ತಿರವಿದ್ದರೂ, ಅವನನ್ನು ಕಡೆಗಣಿಸುತ್ತಿದ್ದರು.ನಮ್ಮ ಗುರುಗಳೂ, ದಿಲೀಪ ಮಹಾರಾಜನಂತೆಯೇ, ಗಾಂಭೀರ್ಯ, ಮಹಾ‘ಜ್ಯಾನಿಗಳೂ, ಧೈರ್ಯ, ನಿಧಾನ, ಮೊದಲಾದ ಸದ್ಗುಣಗಳು,ಅವರಲ್ಲಿ ತುಂಬಿದ್ದುವು.. ಒಬ್ಬೊಬ್ಬರಲ್ಲಿಯೂ,ಬಹು ಕರುಣೆಯನ್ನು ಕೊಂಡವರಾಗಿದ್ದರು.’ಪರೋಪಕಾರಾರ್ಥಮಿದಂ ಶರೀರಂ’ ಎಂಬ ತೀರ್ಮಾನವನ್ನು ಹೊಂದಿದ್ದರು.
ಒಬ್ಬನು, ಮತ್ತೊಬ್ಬರಿಗೆ ಅನ್ಯಾಯ ಮಾಡಿದರೆ, ಸಮಯಕಾದು, ಹಗೆ ತೀರಿಸಿಕೊಳ್ಳುವುದು, ಮಾನವ ಸ್ವಭಾವ.. ನಮ್ಮ ಗುರುನಾಥರು, ತಪ್ಪು ಮಾಡುವವನನ್ನೂ, ಕ್ಷಮಿಸುವ ಉದಾತ್ತ ಗುಣಗಳನ್ನು ಹೊಂದಿದ್ದರು.’ ತಪ್ಪು ಮಾಡುವವನನ್ನು ದಂಡಿಸುವ ಸ್ವಭಾವವೇ ಇರಬಾರದು ಎಂದು ಭೋದಿಸುತ್ತಿದ್ದರು..’ರಾಜಸ ಗುಣವುಳ್ಳವನು, ತಪ್ಪು ಮಾಡುತ್ತಾನೆ. ಸನ್ಯಾಸಿಗಳಾದ ನಾವು, ಸತ್ವಗುಣವನ್ನೇ ಪಾಲಿಸಬೇಕು’ ಎನ್ನುತ್ತಿದ್ದರು.
’
ಅವರು, ಮತ್ತವರ ಮನಸ್ಸನ್ನು, ಸ್ವಲ್ಪವೂ, ನೋಯಿಸುತ್ತಿರಲಿಲ್ಲ. ಅವರು ’ನಿನ್ನ ಮನಸ್ಸು ನೋವಾಗುವಂತೆ, ನಾನೇಕೆ ನುಡಿಯಬೇಕು. ನೀನು ಹಾಗೆ
ನೋವಾಗುವಂತೆ, ನಾನೇಕೆ ನುಡಿಯಬೇಕು,’ ನೀನು ಹಾಗೆ ಮಾತನಾಡಲು ನಿನಗೇನು, ಚಿಂತೆಗಳು,ಸಂಧರ್ಭಗಳಿದ್ದುವೋ, ಅಲ್ಲದೆ,ನಿನ್ನ ಮನಸ್ಸನ್ನು ನೋಯಿಸುವದರಲ್ಲಿ, ನನಗೇನು ಲಾಭ,’ಎನ್ನುತ್ತಿದ್ದರು.
.
ಶಿಷ್ಯರು, ಆಚಾರ್ಯರನ್ನು, ಅವರು ಊರಿಗೆ ಹೋಗಲು ಅನುಮತಿ ಕೇಳಲು ಬಂದಾಗಲೆಲ್ಲಾ, ಅವರು,
’ನೀವು ಇಲ್ಲಿಗೆ ಬಂದಿದ್ದೀರಿ. ನಿಮಗೆ, ಬೇರೆ ನಿರ್ಭಂದವಿರುವವರೆಗೆ,
ನೀವು ಇಲ್ಲಿ ಇರುವಿರೆಂಬುದನ್ನು, ನಾನು ಅರಿತಿರುವೆ’, ಎನ್ನುತ್ತಿದ್ದರು. ಮತ್ತೊಬ್ಬರನ್ನು, ನಿರ್ಭಂದಿಸಲು, ಇಚ್ಚಿಸದಿದ್ದುದು, ಅವರ ಗುಣಗಳಲ್ಲಿ ಇದುವೂ ಒಂದು.
’ನಾನು ಆಚಾರ್ಯರ ಆಶ್ರಯದಲ್ಲಿ ಇದ್ದ ೨೩ ವರ್ಷಗಳಲ್ಲಿ, ಇಂತಹ ಚಿಂತನೆಯನ್ನೆಬ್ಬಿಸುವ ಎಷ್ಟೋ, ಅನುಭವಗಳನ್ನು ಕಂಡು, ಅನುಭವಿಸಿ, ಹರ್ಷಪಟ್ಟಿದ್ದು ನನ್ನ ಭಾಗ್ಯ. ಇದರಲ್ಲಿ ವಿಶೇಷವೇನೆಂದರೆ, ನಮ್ಮ, ಗುರುಗಳು, ಅವರ ಆಚಾರ್ಯರೊಂದಿಗೆ, ೨೩ ವರ್ಷಗಳಿದ್ದರು. ಆದರೆ
ಒಂದು ವೆತ್ಯಾಸವೆಂದರೆ,’ ಅವರು, ತಮ್ಮ ಗುರುಗಳೊಂದಿಗೆ, ಸಂನ್ಯಾಸಾಶ್ರಮ ಸ್ಸ್ವೀಕರಿಸಿದನಂತರ ೨೩ ವರ್ಶಗಳಿದ್ದರು. ನಾನು ಮೊದಲ ಎಂಟು ವರ್ಷಗಳು ಬ್ರಹ್ಮಚಾರಿಯಾಗಿ ಅವರೊಡನಿದ್ದೆ.’
ಅವರಿಗೆ ’ನನ್ನ ಮೇಲೆ ಅತೀವ ಪ್ರೀತಿಯಿದ್ದಿತು’ ಎಂಬುದು ಅವರ ನುಡಿಗಳಿಂದಲೇ ತಿಳಿಯಿತು.
ನಾನು ಶೃಂಗೇರಿಯಲ್ಲಿದ್ದಾಗ, ನಾನು ಒಂದು ಪ್ರದೋಷದ ದಿನ ನದಿಯ ಮತ್ತೊಂದು ಪಕ್ಕಕ್ಕೆ ಹೋಗಿ ಬಂದೆ. ಆ ದಿನ ಪೂಜೆಗೆ ಕೂರುವ ಮುಂಚೆ ಗುರುಗಳು, ನನ್ನನ್ನು, ’ನೀನು ನದಿಯ ಮತ್ತೊಂದು ಪಕ್ಕಕ್ಕೆ ಹೋಗಿ ಬಂದೆಯಾ’ ಎಂದು ಕೇಳಿದರು. ಹೌದೆನ್ನಲು, ಅವರು, ’ನೀನು ನರಸಿಂಹ ವನದಲ್ಲಿಯೇ ಇರು.”. ಬೇರೆಲ್ಲೂ, ಹೋಗ ಬೇಡ, ನಾನು ನಿನ್ನನ್ನು ಗಮನಿಸುತ್ತ್ತಲೇ, ಇರುತ್ತೇನೆ ಎಂದರು.
ನನ್ನ ಚಲನವಲನಗಳನ್ನು ಅವರು ಗಮನಿಸುತ್ತಿದ್ದಾರೆ, ಎಂಬುದನ್ನು ಅರಿತೆ. ’ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ, ನರಸಿಂಹವನವನ್ನು ಬಿಟ್ಟು ಎಲ್ಲಿಗೂ ಹೋಗದಿರು’ , ಎಂಬ ನುಡಿಗಳು,ಅವರಿಗೆ ನನ್ನ ಮೇಲಿದ್ದ ಅಪಾರ ಕರುಣೆಯನ್ನು ಪ್ರತಿಫಲಿಸಿತು.
’ಪಾಠದ ಸಮಯದಲ್ಲಿ ಸಂಪೂರ್ಣ ’ಏಕಾಗ್ರತೆ ಅವಶ್ಯ, ಎನ್ನುತ್ತಿದ್ದರು. ಮನಸ್ಸು ಅಲೆಯುತ್ತಿದ್ದರೆ, ಪಾಠವನ್ನು ಗ್ರಹಿಸುವುದು ಕಷ್ಟ ಎನ್ನುತ್ತಿದ್ದರು. ಪಾಠದಲ್ಲಿ, ಸ್ವಲ್ಪ ಅಜಾಗ್ರತೆ ವಹಿಸಿದರೆ,, ಶ್ರೀ ಗುರು ಚಂದ್ರಶೇಖರ ಭಾರತಿಗಳು, ಕೋಪಿಸಿಕೊಳ್ಳುವರು, ಎನ್ನುತ್ತಿದ್ದರು.
ಅದೇ ರೀತಿ, ಮಠದ ಸಂರದಾಯಗಳ ಬಗ್ಗೆಯೂ, ಶಿಷ್ಯರ ಬಳಿ ನಡೆದುಕೊಳ್ಳುವ ಬಗ್ಗೆಯೂ,ಹೇಳಿ ಕೊಟ್ಟಿದ್ದಾರೆ..ಸಮಯ ಸಿಕ್ಕಿದಾಗಲೆಲ್ಲಾ ಕೆಲವು ವ್ಯಕ್ತಿಗಳ ಗುಣಾತಿಶಯಗಳ ಬಗ್ಗೆ ತಿಳಿಸಿದ್ದಾರೆ.. ಆದರೆ, ಕೊನೆಯಲ್ಲಿ, ’ಮಿಕ್ಕವರು ಎಷ್ಟೇ ಭಿನ್ನವಾದ, ಗುಣಾತಿಶಯಗಳನ್ನು
ಹೊಂದಿದ್ದರೂ, ನಾವು ಅವರ ಬಗ್ಗೆ ಒಂದೇ ರೀತಿಯಾದ ಅಭಿಪ್ರಾಯವನ್ನು ,
ಹೊಂದಿರಬೇಕು. ಒಬ್ಬರು, ಈ ವಿಷಯದಲ್ಲಿ, ಕೊರತೆ ಇರುವುದಾಗಿ, ನೆನೆಸಿಕೊಳ್ಳಲು, ನಾವು ಕಾರಣರಾಗಿರಬಾರದು, ಎಂದು ಬುದ್ಧಿ ಹೇಳುತ್ತಿದ್ದರು.
.
ಶ್ರೀ ದಶರಥ ಮಹಾರಾಜನು ’ಹೇಗೆ ನಡೆದುಕೊಂಡನು’ ಎಂಬುದನ್ನು ಕವಿ ಕಾಳಿದಾಸನು ತಿಳಿಸುತ್ತಾನೆ.
.ಪ್ರಜೆಗಳು ಅರಸನು ’ತನ್ನನ್ನೇ ಅಧಿಕವಾಗಿ, ಪ್ರೀತಿಸುತ್ತಾನೆ’ ಎಂದು ಭಾವಿಸುವಂತೆ ನಡೆದುಕೊಳ್ಳುತ್ತಿದ್ದನು ಎನ್ನುತ್ತಾನೆ.. ಇದು ’ದಶರಥನ ಕಾಲಕ್ಕೆ ಮಾತ್ರ ಅನ್ವಯಿಸುದಿಲ್ಲ.
ಅದು ಎಲ್ಲಾ ಕಾಲಕ್ಕೂ, ಅನ್ವಯವಾಗುವುದು. ಈಗಲೂ, ಮತ್ತೊಬ್ಬರ ಬಗ್ಗೆ ನಡೆದುಕೊಳ್ಳುವದರಲ್ಲಿ,, ಈ ತತ್ವವು ಅನ್ವಯಿಸುವುದು ಎನ್ನುತ್ತಾರೆ. ಈ ರೀತಿ, ಹಲವು ವಿಷಯಗಳನ್ನು ಕಲಿಸಿ,ನನ್ನನ್ನು ಹಿರಿಯ ಗುರುಗಳು
ಅನುಗ್ರಹಿಸಿದ್ದಾರೆ, ಎನ್ನುತ್ತಾರೆ,ಗುರುಗಳು.
ಮತ್ತೊಂದು ಅತಿಶಯ ನನ್ನ ಮನಸಿನಲ್ಲಿ ತೋರಿತು. ನಮ್ಮ ಗುರುಗಳು, ೧೯೩೧ ರಲ್ಲಿ ಸನ್ಯಾಸ ದೀಕ್ಷೆ ಪಡೆದು,ಅವರ ಗುರುವಿಗೆ ೨೩ ವರ್ಷಗಳು ಸೇವೆ ಗೈದು, ೧೯೫೪ ರಲ್ಲಿ, ಪೀಠಾಧಿಪತಿಯಾಗಿ ಪಟ್ಟಾಭಿಷಕ್ತರಾದರು.. ಇವರು, ಶೃಂಗೇರಿ ಪೀಠದ ೩೫ನೇ ಪೀಠಾಧಿಪತಿಗಳಾಗಿದ್ದುದಲ್ಲದೆ, ಅದು ೩೫ ವರ್ಷಗಳು ಮುಂದುವರಿಯಿತು. ಇದು, ಏನು ಈಶ್ವರ ಸಂಕಲ್ಪವೋ, ನಾನರಿಯೆ.
ಈ ೩೫ ವರ್ಷಗಳಲ್ಲಿ, ಶ್ರೀ ಮಠದ ಅಭಿವೃದ್ಧಿಗೆ, ಎಷ್ಟು ಶ್ರಮಿಸಿದ್ದಾರೆ, ಎಂಬುದು,ನುಡಿಗಳಿಂದ ವರ್ಣಿಸಲು ಅಸದಳ.
.
ಶ್ರೀ ಮಠದ ನಿರ್ವಹಣೆಯ ವಿಷಯದಲ್ಲಾಗಲಿ, ಶ್ರೀ ಮಠಕ್ಕೂ, ಮತ್ತು ಅದರ ಶಿಷ್ಯರ ನಡುವೆ, ಸಂಭಂದವನ್ನು ಬಲಪಡಿಸುವುದರಲ್ಲಾಗಲಿ, ನಾಡಿನ ಹಲವು ಭಾಗಗಗಳಲ್ಲಿ,ಮಠದ ಹಲವು ಶಾಖೆಗಳನ್ನು ತೆರೆಯುವುದರಲ್ಲಾಗಲಿ, ವೇದಶಾಸ್ತ್ರಗಳ ಉದ್ಧಾರಕ್ಕೆ, ಕ್ರಮ
ಕೈಕೊಂಡಿದ್ದರಲ್ಲಾಗಲಿ,ಕ್ಲುಪ್ತವಾಗಿ, ಹೇಳುವುದಾದರೆ, ಜನಗಳಲ್ಲಿ, ಆತ್ಮೀಕ ಪ್ರಜ್ಞ್ಯೆ ಬೆಳಸುವದರಲ್ಲಿ ಅವರ ಸಾಧನೆ ಅವರ್ಣನೀಯ.
.
ಪ್ರಾರಂಭದಿಂದಲೂ, ಶೃಂಗೇರಿಯ ಶಾರದಾ ಪೀಠದ ಆಚಾರ್ಯರುಗಳು,
ಶಿಷ್ಯರುಗಳನ್ನು ಅನುಗ್ರಹಿಸುವುದಕ್ಕಾಗಿ, ಯಾತ್ರೆಗಳನ್ನು ಕೈಗೊಂಡರು. ಆದರೆ ನಮ್ಮ ಗುರುಗಳಂತೆ, ಕಾಶ್ಮೀರದಿಂದ
ಕನ್ಯಾಕುಮಾರಿಯವರೆಗೆ, ಧೀರ್ಘ ಪ್ರವಾಸವನ್ನೂ, ಮತ್ತೆ, ಮತ್ತೆ, ಕೈಕೊಂಡದ್ದಲ್ಲದೆ, ಆ ರೀತಿ,
ಸಂಚರಿಸಿದವರು ಶ್ರೀ ಮಠದ ಇತಿಹಾಸದಲ್ಲೇ ಅಪರೂಪ. ಅಲ್ಲದೇ, ಶ್ರೀ ಶಂಕರರ
ನಂತರ ನಮ್ಮ ಗುರುಗಳೇ ೧೯೫೭ರಲ್ಲಿ, ನೇಪಾಳವನ್ನು ಸಂಚರಿಸಿ, ಮಹಾ ಶಿವರಾತ್ರಿಯನ್ನು
ಆಚರಿಸಿದರು. ಅದು, ಅಲ್ಲಿನ ಅರಸರ ಬೇಡಿಕೆಯ ಮೇಲೇ ಹೊರತು, ಅವರಾಗಿಯೇ ಹೋಗಲಿಲ್ಲ,
ನೇಪಾಳದ ಮಹಾರಾಜರಾಗಿದ್ದ, ಶ್ರೀ ಮಹೇಂದ್ರರು, ಅವರ ತಂದೆ, ತ್ರಿಭುವನ ಮಹಾರಾಜರಿಗೆ,
ಶೃಂಗೇರಿ ಮಹಾಸ್ವಾಮಿಗಳು, ಗೈದ, ಅನುಗ್ರಹಕ್ಕೆ ಕೃತಜ್ಞ್ಯತೆ ತೋರುವ ರೀತಿಯಲ್ಲಿ,ನೇಪಾಳಕ್ಕೆ
ಬರುವಂತೆ, ನಮ್ಮ ಆಚಾರ್ಯರನ್ನು ಬಹಳ ಭಕ್ತಿ-ಶ್ರದ್ಧೆಯಿಂದ ಆಹ್ವಾನಿಸಿದರು. ತ್ರಿಭುವನ
ಆಹ್ವಾನಿಸಿದ್ದರು. ತ್ತಿಭುವನ ಮಹಾರಾಜರಿಗೆ ಬಂದ ಅನಿರೀಕ್ಷಿತ ಕಷ್ಟದಿಂದ ಅವರು ಭಾರತದಲ್ಲಿ ಬಂದು ಅಜ್ಞಾತವಾಸದಲ್ಲಿರಬೇಕಾದ ಪ್ರಸಂಗವೊದಗಿತು. ಆ ಸಮಯದಲ್ಲಿ, ಜಗದ್ಗುರು, ಶ್ರೀ ಚಂದ್ರಶೇಖರಹಾ ಮಹಾಸ್ವಾಮಿಗಳು, ಅಂತರ್ಮುಖಿಯಾಗಿದ್ದರೂ, ಒಂದು ವಿಶೇಷ ಶ್ರೀಮುಖವನ್ನು, ತ್ರಿಭುವನ ಮಹಾರಾಜರಿಗೆ ಕಳುಹಿಸಿ,ರಾಜ್ಯ ಮರಳಿ ಪಡೆಯುವುದಕ್ಕೆ,’ ಶ್ರೀ ಶಾರದಾ ಮಾತೆಯೂ, ಶ್ರೀ ಪಶುಪತಿನಾಥ-
ಸ್ವಾಮಿಯೂ, ಅನುಗ್ರಹಿಸುತ್ತಾರೆ,’ ಎಂದು ಆಶೀರ್ವದಿಸಿದ್ದರು.ಅದನ್ನು
ಮನಸಿನಲ್ಲಿಟ್ಟು,ಅರಸು ಶ್ರೀ ಮಹೇಂದ್ರರು, ನಮ್ಮ ಆಚಾರ್ಯರ ಬಳಿ ಅಧಿಕ ಭಕ್ತಿ ಪ್ರಕಟಿಸಿ, ಶ್ರೀ ಪಶುಪತಿನಾಥನ ವಿಶೇಷ ದರ್ಷನಕ್ಕೆ ನೆರವಾದರು.
ನಮ್ಮ ಆಚಾರ್ಯರು, ೧೯೫೬ರಲ್ಲಿ, ಅವರ ಮೊದಲ ಯಾತ್ರೆಯನ್ನು ಪ್ರಾರಂಭಿಸಿ, ಕರ್ಣಾಟಕ, ತಮಿಳು ನಾಡು, ಆಂಧ್ರ,ಕೇರಳ, ಪ್ರಾಂತ್ಯಗಳಲ್ಲಿ ಆರು ವರ್ಷಗಳು ಪ್ರವಾಸ ಕೈಗೊಂಡರು.
.ಮತ್ತೆ, ೧೯೬೪ರಲ್ಲಿ, ಉತ್ತರ-ದಕ್ಷಿಣ ಭಾರತದ ಪ್ರವಾಸ ೪ ವರ್ಷಗಳು ಕೈಗೊಂಡರು.. ಇದು ಅವರ ಎರಡೆನೆಯ ದೀರ್ಘಯಾತ್ರೆ ಕೈಗೊಂಡರು. ಅನೇಕ ಕಡೆಗಳಲ್ಲಿ,ಶ್ರೀ ಮಠದ ಶಾಖೆಗಳನ್ನು ಸ್ಠಾಪಿಸಿ, ಶ್ರೀ ಶಾರದಾ ಮಾತೆಯ, ಮತ್ತು ಶ್ರೀ ಭಗವತ್ಪಾದರ ಪ್ರತಿಷ್ಠಾಪನೆ ಮಾಡಿಸಿದರು.
. ಅನೇಕ ಧರ್ಮಕಾರ್ಯಗಳನ್ನೂ, ಪ್ರಾರಂಭಿಸಿ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಠಶಾಲೆಗಲೊಂದಿಗೆ, ಒಂದು ವೇದ ಪಾಠಶಾಲೆಯನ್ನು ವಿಲೀನಗೊಳಿಸಿದರು. .
ನೂರು ವರ್ಷಗಳಿಂದ ನಡೆದು ಬರುತ್ತಿರುವ ಶ್ರೀ ಶೃಂಗೇರಿ ಪಾಠಶಾಲೆಯ ಅಭಿವೃದ್ಧಿ ಸರ್ವ ವಿದಿತ. ಅಂತೆಯೇ,
ಸಂಸ್ಕ್ರುತ ಭಾಷೆಯ ಅಭಿವೃದ್ಧಿಗೆ ’ಸುರ ಸರಸ್ವತಿ ಸಭ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ವರ್ಷಕ್ಕೆರೆಡು ಬಾರಿ ಪರೀಕ್ಷೆಯನ್ನು ನಡೆಸಿ,, ಇಲ್ಲಿಯವರೆವಿಗೂ, ೬೦೦೦ ವಿದ್ಯಾರ್ಥಿಗಳು, ಉತ್ತೀರ್ಣರಾಗಲು, ನೆರವಾಗಿದ್ದಾರೆ.
ಸನಾತನ ಧರ್ಮ ಪ್ರಚಾರಕ್ಕಾಗಿ, ಮತ್ತು ವೇದಾಂತ ಪ್ರಚಾರಕ್ಕಾಗಿ, ಕೆಲವು ಪತ್ರಿಕೆಗಳನ್ನು, ಪ್ರಾರಂಭಿಸಿದರು.
ತಮಿಳಿನಲ್ಲಿ ಪ್ರಬಲವಾದ ’ಶ್ರೀ ಶಂಕರ ಕೃಪಾ’ ಎಂಬ ಸಂಚಿಕೆಗೆ, ಹೆಸರನ್ನಿಟ್ಟವರೂ, ಅವರೇ. ೧೯೫೯ ರಲ್ಲಿ ಇದರ ಪ್ರಸಾರ ಪ್ರಾರಂಭವಾಗಿ, ಈಗ ೫೮ ವರ್ಷಗಳಾಗಿವೆ.. ೧೯೬೧ದರಲ್ಲಿ, ಆಂಧ್ರಪ್ರದೇಶ ಪ್ರವಾಸದ ಸಮಯದಲ್ಲಿ, ಶ್ರೀ ಆಚಾರ್ಯರಿಂದ, ಇದರ ತೆಲುಗು ಸಂಚಿಕೆ ಪ್ರಾರಂಭವಾಗಿ, ೫೬ ವರ್ಷಗಳಾಗಿವೆ. ನಂತರ ಇದರ ಕನ್ನದ ಅವತರಣಿಕೆಯೂ ಪ್ರಾರಂಭವಾಗಿ ೫೦ ವರ್ಷಗಳು ಸಂದಿವೆ. ಇದರ ಮಲೆಯಾಳದ ಅವತರಿಣಿಕೆಯೂ ೨೦೧೧ರಲ್ಲಿ ಪ್ರಾರಂಭವಾಗಿದೆ.. ಹೇಗಾದರೂ, ಜನಗಳಿಗೆ, ದೈವ ಭಕ್ತಿ, ಧರ್ಮದಲ್ಲಿ ಆಸಕ್ತಿ, ನ್ಯಾಯವಾದ ಜೀವನ,ಎಲ್ಲರಿಗೂ, ದೊರಕಬೇಕೆಂದುಆವು ಪ್ರಯತ್ನಿಸಬೇಕೆಂದೇ ಈ ಪತ್ರಿಕೆಗಳು ಪ್ರಾರಂಭಿಸಲ್ಪಟ್ಟವು.
ಶ್ರೀ ಶೃಂಗೇರಿ ಮಠದ ಅಭಿವೃದ್ದಿಗೆ, ಅವರು ಕೈಕೊಂಡ ಕ್ರಮಗಳು, ಎಣಿಸದಳವಾದುದು. ಇಲ್ಲಿ ಭಕ್ತರಿಗೆ ಇದ್ದ ವಸತಿ ಸೌಲಭ್ಯಗಳು ಅತಿ ಕಡಿಮೆ.. ಅವರ ಪ್ರಯತ್ನದಿಂದ, ಈಗ, ಒಮ್ಮೆಗೇ, ೧೦೦೦ ಜನರು ತಂಗಬಹುದು.
ಶ್ರೀ ಆಚಾರ್ಯರ ಮತ್ತೊಂದು ಸ್ವಭಾವವನ್ನೂ, ಇಲ್ಲಿ ವಿಶ್ಲೇಷಿಸಬೇಕು. ಅದು,ಯಾವ ಕಾರ್ಯವನ್ನು ಮಾಡಿದರೂ,ಅದರ ಫಲವನ್ನು ಮತ್ತವರು ಅನುಭವಿಸಬೇಕು; ಸ್ವಾರ್ಥವಿರಬಾರದೆಂದು ಅವರು, ಸಾವಿರಾರು, ತೆಂಗಿನ ಮರಗಳನ್ನು ನೆಟ್ಟರು., ವಸತಿ ಸೌಲಭ್ಯವನ್ನು ಕಲ್ಪಿಸಿದರು, ’ ಇದರ ಫಲ ತನಗಲ್ಲ, ಪರರಿಗೆ, ಎನ್ನುತ್ತಿದ್ದರು.
ನಮ್ಮ ಗುರುಗಳು, ಒಂದು ಆಸ್ಪತ್ರೆಯನ್ನು ಸ್ಥಾಪಿಸಿ, ಅದರಲ್ಲಿ ತಾವು, ಚಿಕಿತ್ಸೆ ಪಡೆದುಕೊಳ್ಳದೆ, ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು,, ಎಂದು ತಿಳಿಯಲು, ಭೇಟಿ, ನೀಡುತ್ತಿದ್ದರು. ಕಿರು ಬೆಟ್ಟದಲ್ಲಿರುವ, ಶ್ರೀ ಮಲಹಾನಿಕಲೇಶ್ವರ ದೇವಾಲಯದ ಜೀರ್ಣೋದ್ಧಾರ ಒಂದು ವಿಸ್ಮಯಕಾರಿ ಕಾರ್ಯ.
ಇವೆಲ್ಲವೂ, ನಮ್ಮ ಆಚಾರ್ಯರ ದೀರ್ಘದರ್ಶಿತ್ವವನ್ನೂ, ವಿಶಾಲ ಮನೋಭಾವನೆಯನ್ನೂ ಸೂಚಿಸುತ್ತದೆ. ಘಂಟೆಗಟ್ಟಲೆ ವಿವರಿಸಿದರೂ,, ಅವರ ಗುಣಾತಿಶಯಗಳನ್ನು ಪೂರ್ಣವಾಗಿ ವಿವರಿಸುವುದು ಅಸಾಧ್ಯ. ಅವರ ’ಸಿದ್ಧಿ’ ನಮಗೆ ಅಪೂರ್ವ ಖೇದ ಪ್ರಸಂಗ. ಆ ಸಮಯದಲ್ಲಿ, ಪುಣೆಯಲ್ಲಿ ಚಾತುರ್ಮಾಸ್ಯದಲ್ಲಿದ್ದ ನಾನು, ವಿಷಯವರಿತು, ಧಾವಿಸಿ ಬಂದದ್ದು ನಿಮಗೆ ತಿಳಿದೇ ಇದೆ. ನನಗೆ ಸನ್ಯಾಸ ದೀಕ್ಷೆಯಿತ್ತು ಕಮಂಡಲವಿತ್ತ ಅದೇ ಸ್ಥಳದಲ್ಲಿಯೇ, ಅವರ ಶರೀರಕ್ಕೆ, ಅದೇ
ಕಮಂದಲದಿಂದ ಅಭಿಷೇಕ ಮಾಡಿದ ಸಮಯ, ಎಷ್ಟು ಪ್ರಯತ್ನಪಟ್ಟರೂ,
ದುಃಖ ಉಮ್ಮಳಿಸಿ ಬಂದು, ಅತಿ ಕಷ್ಟಪಟ್ಟು ನಿಯಂತ್ರಿಸಬೇಕಾಯಿತು.
ಶರೀರ ನಿರ್ಗಮಿಸಿದಾಗ, ಅಗುವ ದುಃಖ ಭರಿಸುವುದು ಕಷ್ಟವೇ. ಆದರೆ, ಎಲ್ಲಾ ಶರೀರಗಳು ಆ ಸ್ಥಿತಿಯನ್ನು ಹೊಂದಲೇಬೇಕೆಂದು ನಮ್ಮ ಅಚಾರ್ಯರು ಹೇಳುತ್ತಾರೆ.. ಇದನ್ನೇ, ಶ್ರೀ ನರಸಿಂಹ ಭಾರತಿ ಸ್ವಾಮಿಗಳು, ಅವರ ಶಿಷ್ಯರು, ಶ್ರೀ ಶಿವಾಭಿನಯ ನರಸಿಂಹಸ್ವಾಮಿಗಳಿಗೆ ಹೇಳಿದರು. ನಮ್ಮ ಆಚಾರ್ಯರ ಪ್ರತ್ಯಕ್ಷ ಶರೀರವು ನಮ್ಮೊಡನೆ ಇಲ್ಲದಿರುವುದು ಅತೀವ ವ್ಯಸನವನ್ನು ತರುತ್ತದೆ. ಕವಿ ಬಾಣ ಭಟ್ಟರು, ಭಗವತ್ ಸಂಕಲ್ಪದ ಮುಂದೆ, ನಾವು ಅಶಕ್ತರು ಎಂದು ತಿಳಿಸುತ್ತಾರೆ.. ಈ ರೀತಿ ಚಿಂತಿಸಿಯೇ, ನಾವು ಸಮಾಧಾನಗೊಳ್ಳಬೇಕು.
ಶ್ರೀ ಶಾರದಾಂಬೆಯ ಅನುಗ್ರಹದಿಂದಲೂ, ನಮ್ಮ ಆಚಾರ್ಯರ ಆಶೀರ್ವಾದದಿಂದಲೂ, ಅವರು ನಮಗಿತ್ತ ಕಟ್ಟಳೆಯನ್ನು ನರವೇರಿಸುವುದೇ , ಅವರಿಗೆ ನಾವು ಸಲ್ಲಿಸುವ ಪ್ರಣಾಮವಾಗುವುದು.
========================================================
ಅಧ್ಯಾಯ-೪.
=========
ತಪ್ಪುಗಳಿಗೆ ಮೂಲ ಕಾರಣ
==========================
ಜಗತ್ತಿನಲ್ಲಿ ಪ್ರತಿ ಮನುಷ್ಯನಿಗೂ ಎರಡು ವಿಷಯಗಳಲ್ಲಿ ’ಮೋಹವಿದೆ. ಒಂದು, ’ಹೊನ್ನು, ಮತ್ತೊಂದು ’ಹೆಣ್ಣು,’
ಇದೆರಡರಲ್ಲೂ ಮೋಹವಿಲ್ಲದವನು ’ಮಹಾತ್ಮ’ ಎನಿಸಿಕೊಳ್ಳುತ್ತಾನೆ.
ಇವೆರಡರ ಮೋಹದಿಂದ ಹಾಳಾದವರ ಉದಾಹರಣೆ ಶ್ರೀ ರಾಮಾಯಣದಲ್ಲಿ ಮತ್ತು ಶ್ರೀ ಮಹಾಭಾರತದಲ್ಲಿ ಸಿಕ್ಕುತ್ತದೆ.. ’ಹೆಣ್ಣಿನ ಆಸೆಯಿಂದ ರಾವಣನು ನಾಶವಾದರೆ,’ ಹೊನ್ನು ಮತ್ತು ರಾಜ್ಯದ ಆಸೆಯಿಂದ’ ಕೌರವ ನಾಶವಾದನು.
.
ರಾವಣನು ಸೀತೆಯನ್ನು ತಪ್ಪು ದೃಷ್ಟಿಯಿಂದ ನೋಡಿದ್ದರಿಂದ ಅಳಿದ. ಇದರ ಪಾಠ ಏನೆಂದರೆ, ’ಜಗತ್ತಿನಲ್ಲಿ ಯಾವ ಹೆಣ್ಣನ್ನೂ ತಪ್ಪು ದೃಷ್ಟಿ-
ಯಿಂದ ನೋಡಬಾರದೆಂಬುದೇ. ನಮ್ಮ ನಾಡಿನ ಸಂಸ್ಖ್ರುತಿಯಲ್ಲಿಯೂ,
ಪ್ರತಿಯೊಂದು ಹೆಣ್ಣನ್ನೂ ತಾಯಿಗೆಸಮಾನವೆಂದು ಹೇಳುತ್ತದೆ. ಒಬ್ಬ್ಬನು, ಎಷ್ಟೇ ಕೆಟ್ಟವನಾಗಿದ್ದರೂ, ತನ್ನ ಮಾತೆಯ ವಿಷಯದಲ್ಲಿ ಯಾವ ರೀತಿಯ ಕೆಟ್ಟ ಭಾವನೆಯಿಂದ ಇರುವುದಿಲ್ಲ. ಎಲ್ಲಾ ಹೆಣ್ಣು ಮಕ್ಕಳನ್ನೂ, ತಾಯಂತೆ
ಕಂಡರೆ, ಮನದಲ್ಲಿ ಯಾವ ವಿಕಾರವೂ ಹುಟ್ಟುವುದಿಲ್ಲ. ದೇವತೆಗಳು, ಶ್ರೀಮಾತೆಯನ್ನು ಸ್ತುತಿಸುವಾಗ, ’ಸಕಲ ಸ್ತ್ರೀಯರೂ ನಿನ್ನ ಸ್ವರೂಪವೇ’, ಎಂದು ಸ್ಥುತಿಸುತ್ತಾರೆ.’ ಇದನ್ನು ಅನುಸರಿಸುವ ವಿಧದಲ್ಲೇ ನಮ್ಮ ಹಿರಿಯರು ನಮಗೆ ಮಾರ್ಗವನ್ನು ರೂಪಿಸಿದ್ದಾರೆ.. ಅದಕ್ಕೆ ವಿರೋಧವಾಗಿ ನಡೆದರೆ ಮಹಾ ದೋಷವಾಗುವುದು.
ಮೋಹದ ವಿಷಯದಲ್ಲಿ ಎರಡನೇ ಸ್ಥಾನ ’ಹೊನ್ನಿಗೆ’. ಚಿಕ್ಕವಯಸ್ಸಿನಲ್ಲಿ, ನಾನು [ಗುರುಗಳು] ಒಂದು ಸಂಗತಿಯನ್ನು ಕೇಳಿದ್ದೇನೆ.. ಅಲೆಕ್ಸಾಂಡರ್ ಎಂಬ ಅರಸನೊಅಬ್ಬನು, ವಿಶ್ವವನ್ನೇ ಗೆಲ್ಲುವ ಆಸೆಯಿಂದ ಭಾರತಕ್ಕೆ ಬಂದು, ಒಂದು ಗ್ರಾಮಕ್ಕೆ ಬಂದಾಗ, ಇಬ್ಬರು ರೈತರು, ವ್ಯಾಜ್ಯ ಮಾಡುತ್ತಿದ್ದರು. ವಿಷಯ; ಒಬ್ಬ ರೈತನು ಮತ್ತೊಬ್ಬನಿಗೆ, ಜಮೀನು ಮಾರಿದ್ದ.. ಅದರಲ್ಲಿ ನಿಧಿಯೊಂದು ದೊರಕಿತು. ಮಾರಿದವನು ಕೊಂಡವನಿಗೆ ನೆಲದೊಂದಿಗೆ, ಅವನಿಗೇ ನಿಧಿಯೂ ಸೇರಬೇಕು ಎಂದಾಗ,, ಕೊಂಡವನು, ’ನಾನು, ಬರೀ ನೆಲ ಕೋಂಡೆ. ಅದರ ನಿಧಿಯು ನಿನಗೇ ’ಸೇರಬೇಕೆಂದನು’. ಈ ರೀತಿಯ ವಿಚಿತ್ರ ಜಗಳವನ್ನು ಕಂಡು, ಅರಸನು ಆಶ್ಚರ್ಯಭರಿತನಾಗಿ, ’ಇಂತಹ ದೇಶದ ಮೇಲೆ ಆಕ್ರಮಣ ಮಾದಲು ಬಂದೆನೇ’ ಎಂದು ಮರುಗಿ ವಾಪಸಾದನಂತೆ.. ’ಮತ್ತವರ ಸಂಪತ್ತಿಗೆ ಆಸೆಪಡದ ಮಹಾತ್ಮರಿರುವ ಈ ನಾಡನ್ನು ಜಯಿಸಲು ಬಂದನೇ ಎಂದು ತಲೆ ತಗ್ಗಿಸಿದನಂತೆ.’ ಸಾಧಾರಣ ಗ್ರಾಮದಲ್ಲಿದ್ದುಕ್ಕೊಂಡು, ವ್ಯವಸಾಯ ಮಾಡುತ್ತಾ, ಮನಸಲ್ಲಿ ಸ್ವಲ್ಪ ಆಸೆಯೂ ಇಲ್ಲದೆ, ಇರುವುದರಲ್ಲಿ ತೃಪ್ತಿ ಪಡುತ್ತಾ, ಪರಿಶುದ್ಧವಾದ ಬಾಳನ್ನು, ಅವರು, ನಡೆಸುತ್ತಿದ್ದುದು, ನಮ್ಮ
ನಾಡಿನ ಸಂಸ್ಕೃತಿಯ ಹಿರಿಮೆಯನ್ನು ತೋರುತ್ತದೆ.
ಮತ್ತವರ ಆಸ್ತಿಗೆ ನಾವು ಸ್ವಲ್ಪವೂ ಆಸೆಪದಾಕೂಡದು. ರಸ್ತೆಯಲ್ಲಿರುವ ಕಲ್ಲು, ಮಣ್ಣಿಗೆ ಯಾರಾದರೂ ಆಸೆಪಡುವರೇ.
ಅಂತೆಯೇ, ನಾವು ಮತ್ತೊಬ್ಬರ ಸ್ವತ್ತಿಗೆ ಆಸೆಪಡಕೂಡದು. ಇದೇ ಭಾವನೆಯಿಲ್ಲದೆ, ಮತ್ತೊಬ್ಬನ ಸ್ವತ್ತಿಗೆ ಆಸೆ ಪಟ್ಟರೆ
ಪರಿಣಾಮ ಸುಯೋಧನನ ಗತಿಯೇ. ಅವನು ಪಾಂಡವರಿಗೆ ಕೊಡಬೇಕಾದ ಪಾಲನ್ನೂ ಕೊಡದೆನೇ, ತಾನೇ ಅನುಭವಿಸಲು ಇಛ್ಛಿಸಿದ್ದರಿಂದ ದುರಾಸೆಯಿಂದ ದುಷ್ಪರಿಣಾಮವನ್ನೆದುರಿಸಿದನು.
ನಮ್ಮ ಕರ್ಮ ಫಲಕ್ಕೆ ತಕ್ಕ್ಕಂತೆ ನಮಗೆ ದೊರಕುವ ವಸತಿ ಸೌಲಭ್ಯಗಳನ್ನು, ಇಟ್ಟುಕೊಂಡು, ನಾವು ಜೀವಿಸಬೇಕು.
ತೃಪ್ತಿ ಇಲ್ಲದವನಗೆ, ಸಂತೋಷವೂ ಇಲ್ಲ, ಸೌಖ್ಯವೂ ಇಲ್ಲ. ಇದರ ಬಗ್ಗೆ ಶ್ರೀ ಭಗವತ್ಪಾದರು, ’ವಿವೇಕರಹಿತನೇ,ಸಂಪತ್ತು ಬರಬೇಕೆಂಬ ದುರಾಸೆಯನ್ನು ಬಿಡು. ಮನದಲ್ಲಿ ದುರಾಸೆಯಿಲ್ಲದ ಬುದ್ಧಿಯನ್ನು ಬೇಡು,’. ಎನ್ನುತ್ತಾರೆ.
ನಮ್ಮ ನಾಡಿನಲ್ಲಿದ್ದ ಹೆಸರಾಂತ ಮಹಾತ್ಮರೂ ಮತ್ತು ಭಾಗವತೋತ್ತಮರೂ, ಹಣವಂತರಾಗಿರದಿದ್ದರೂ,ತೃಪ್ತಿಯಾಗಿದ್ದರು, , ಸಂತೋಷವಾಗಿಯೂ, ಬಾಳನ್ನು ನಡೆಸಿದರು. ಅವರಲ್ಲಿ ದೈವ ನಂಬಿಕೆ ಅಪಾರವಾಗಿದ್ದಿತು. ಅವರ ವಿಶ್ವಾಸ, ಹಿಮಾಲಯ ಗಿರಿಯಷ್ಟು, ಅಚಲವಾಗಿಯೂ,, ಮಾದರಿಯಾಗಿಯೂ ಇದ್ದಿತು.
ಅಪ್ಪೈಯ್ಯ ದೀಕ್ಶಿತರ ಜೀವನದಲ್ಲಿ ನಡೆದ ಒಂದು ಘಟನೆ;ಒಮ್ಮೆ ಅವರು ರಾಜಸಭೆಗೆ ತೆರಳಿ, ಶಾಸ್ತ್ರ ವಿವರಣೆ ನೀಡಿದರು.. ಅವರ ಪ್ರತಿಭೆಗೆ ಮೆಚ್ಚಿ, ಅರಸನು ಅವರಿಗೆ ಅಮೂಲ್ಯ ಬೆಲೆಯುಳ್ಳ ಶಾಲೊಂದನ್ನಿತ್ತನು.
ಅವರು ಅದನ್ನು ಮನೆಗೆ ತಂದು, ಅವರ ಅಗ್ನಿಹೋತ್ರ ಕುಂಡದಲ್ಲಿ ಹಾಕಿಬಿಟ್ಟರು. ಅದನ್ನರಿತು, ಕೋಪಗೊಂಡ ಅರಸನು ದೀಕ್ಷಿತರನ್ನು, ಅವರ ಕಾರಣವನ್ನು ಕೇಳಲು, ಅವರು,’ತಮ್ಮ ಶ್ರೇಯಸನ್ನು ಬಯಸಿಯೇ, ಆ ರೀತಿ,ಮಾಡಿದೆ, ಎಂದರು.. ನಂಬದ ಅರಸನು, ’ಶಾಲುವನ್ನು ಬೆಂಕಿಯಲ್ಲಿ ಹಾಕಿದರೆ,ಶ್ರೇಯಸ್ಸು ಹೇಗೆ ಆಗುತ್ತದೆ, ಎಂದು ಕೋಪದಿಂದ ಪ್ರಶ್ನಿಸಿದ, ’ಅದು ಬೆಂಕಿಯಲ್ಲಿ ಸುಡಲಿಲ್ಲ. ಅದು ಚಿದಂಬರ ನಟರಾಜನ ಶರೀರವನ್ನಲಂಕರಿಸಿದೆ,ಎಂದು ದೀಕ್ಷಿತರು ತಿಳಿಸಿದರು.. ಅದನ್ನು ನಂಬದ ಅರಸನು, ಚಿದಂಬರದಲ್ಲಿ ಸನ್ನಿಧಿಯಲ್ಲಿ ಸ್ವಾಮಿಯನ್ನು ಕಂಡಾಗ
ಅದೇ ಶಾಲು ಸ್ವಾಮಿಯ ವದನವನ್ನಲಂಕರಿಸಿಕೊಂಡಿದ್ದನ್ನು ಕಂಡು ಅರಸನು ಆಶ್ಚರ್ಯಗೊಂಡನು. ಇದು ಧೃಢವಾದ ಈಶ್ವರ ಭಕ್ತಿಯ ನಿದರ್ಶನವಲ್ಲವೇ. ಆದ್ದರಿಂದಲೇ, ಮಹಾತ್ಮರೂ, ಭಕ್ತರೂ, ತಮಗೆ
ಬೇಕಾದ್ದನ್ನು ಭಗವಂತನು ನೀಡುತ್ತಾನೆಂದು, ದೃಢ ನಿರ್ಧಾರದಿಂದ ತೃಪ್ತರಾಗಿದ್ದರು. ಧನದಲ್ಲಿ ದುರಾಸೆಯಿರಲಿಲ್ಲ.
ಎಂತಲೇ, ’ಹಣವಿದ್ದರೇ ಮಾತ್ರ ಸಂತೊಷವೆಂಬುದಿಲ್ಲ. ಎಂತಹಾ ಸಂಧರ್ಭದಲ್ಲಿಯೂ, ಸುಖವಾಗಿರಬಹುದು.
ಇದನ್ನು ಮರೆತುಬಿಟ್ಟರೆ,,ಅಧರ್ಮಗಳೂ,ಅನ್ಯಾಯಗಳು,,ಅಧಿಕವಾಗುತ್ತವೆ. ,. ಎಂತಲೇ, ’ಹೊನ್ನಿನ ಮೇಲಿನ ಆಸೆಯನ್ನು,
ಬಿಟ್ಟರೆ, ಎಲ್ಲರೂ, ಸುಖದಿಂದಲೂ, ಸಂತೋಷದಿಂದಲೂ, ಇರಬಹುದು.
===========================================================
ಅಧ್ಯಾಯ-೫=
==========-
ತೃಪ್ತಿಯಾದವನೇ ಭಾಗ್ಯವಂತ.
=============================
ಜನರು ಯಾವುದನ್ನು ದ್ವೇಷಿಸುತ್ತಾರೆ,’ ದಾರಿದ್ರ್ಯವನ್ನು.’ ಯಾರೂ ದರಿದ್ರನಾಗಿರಲು ಇಚ್ಚಿಸುವುದಿಲ್ಲ. ದಾರಿದ್ಯ’ ಎಂದರೇನು.’ದರಿದ್ರ’ ಎಂದರೇನು. ’ಹಣವುಳ್ಳವನು
’ಭಾಗ್ಯವಂತನೆಂದೂ, ಹಣವಿಲ್ಲದವನು ’ದರಿದ್ರನೆಂದೂ,’ ಸಾಮಾನ್ಯ ಅಭಿಪ್ರಾಯ.
ಕೂಲಂಕುಶವಾಗಿ ಪರಿಶೀಲಿಸಿದರೆ, ಸಿರಿಗೂ, ದಾರಿದ್ರ್ಯಕ್ಕೂ, ಯಾವುದೇ ಸಂಭಂದವಿಲ್ಲ.
ಎಂದು ತಿಳಿಯುತ್ತದೆ. ’ಅಸೆಯಿರುವವನು ದರಿದ್ರ. ಇಲ್ಲದವನು ಭಾಗ್ಯಶಾಲಿ. ಇದೇ,
’ದಾರಿದ್ರ್ಯದ’ ನಿಜವಾದ ಅರ್ಥ. ಒಬನಲ್ಲಿ, ’ನೂರು ರೂ ಇದ್ದರೆ, ತಾನು ’,
ಭಾಗ್ಯಶಾಲಿಯೆಂತಲೂ, ಸುಖವಾಗಿ ಬಾಳಬಹುದೆಂತಲೂ, ಬಯಸುತ್ತಾನೆ. ’ಅದೇ, ನೂರು ಸಾವಿರವಾದರೆ, ಅದು ಲಕ್ಷ್ಯವಾದರೆ, ಎಂದು ಯೋಚಿಸುತ್ತಾನೆ. ಅಂದರೆ, ದುಡ್ಡೇ ಇಲ್ಲದವನು, ದರಿದ್ರ ಎನ್ನಲಾಗುವುದಿಲ್ಲ.
ಹಿಂದೆ ಬಾಳಿದ ಋಷಿಗಳನ್ನು ನೋಡಿದರೆ, ಅವರು, ಆಶಾರಹಿತರಾಗಿಯೂ, ತೃಪ್ತರಾಗಿಯೂ,
ಬಾಳಿದರು. ಅವರ ಬಳಿ ಹಣವಿಲ್ಲದಿದ್ದರೂ, ಅವರು ತಮ್ಮನ್ನು, ಎಂದೂ, ದರಿದ್ರರೆಂದು,
ಭಾವಿಸಲಿಲ್ಲ. ಆದರೆ, ಈಗಲೋ, ಹಣವಿದ್ದವರೂ,’ ದರಿದ್ರರೆಂದು’ ಭಾವಿಸುತ್ತಾರೆ, ಇದಕ್ಕೆ,
ಕಾರಣ, ಋಷಿಗಳು ಆಶಾರಹಿತರಾಗಿದ್ದರು. ಆದರೆ, ನಮ್ಮ ಮನಸ್ಸಿನಲ್ಲಿ, ಅವಿರತ ಆಸೆಗಳಿವೆ.
ಆದ್ದರಿಂದ, ದಾರಿದ್ರ್ಯವೆಂಬ, ಶೈಂಖಲೆಯಿಂದ ಬಿಡುಗಡೆಯಾಗಲು, ಆಸೆಗಳನ್ನು, ಮನಸ್ಸಿನಿಂದ
ಬುಡಸಹಿತ ಕಿತ್ತುಹಾಕಬೇಕು.’ ಅಸೆಯನ್ನು ಸಂಪೂರ್ಣವಾಗಿ ಬಿಡಲು ಹೇಳುವುದು’ ಒಂದು ವಿಷಯ.
ಅದನ್ನು ”ಸಂಪೂರ್ಣವಾಗಿ ತ್ಯಜಿಸುವುದು ಮತ್ತೊಂದು ವಿಷಯ. ಆಸೆಗಳನ್ನು, ತ್ಯಜಿಸಲು, ಶಾಸ್ತ್ರದಲ್ಲಿ, ಎಷ್ಟೋ, ಮಾರ್ಗಗಳಿದ್ದರೂ,.’, ಅದನ್ನು, ಸ್ವೀಕರಿಸುವುದು, ತ್ಯಜಿಸುವುದು,’ ನಮ್ಮ ಕೈಯ್ಯಲ್ಲಿದೆ.
ಹಸಿವಾದವನಿಗೆ, ಊಟ ಮಾಡುವುದೇ ಪರಿಹಾರ. ಬಡಿಸಿದಮೇಲೆ, ತಿನ್ನುವುದೋ, ತ್ಯಜಿಸುವುದೋ,ಅವನ ಕೈಯಲ್ಲಿಯೇ ಇದೆ.. ಅಂತೆಯೇ, ವಸ್ತುಗಳ ಮೇಲಿರುವ ಆಸೆಯನ್ನು ಬಿಡುವುದೇ, ವಸ್ತುಗಳ ತ್ಯಾಜ್ಯಕ್ಕೆ ನೆರವಾಗುವುದು.. ಹಲವರು, ಹಲವು ರೀತಿಯ ವಸ್ತುಗಳನ್ನು, ಬಯಸುವದೋ, ಬಿಡು-
ವುದೋ, ಮಾಡುತ್ತಾರೆ. ಕೆಲವರಿಗೆ ಸಿನಿಮಾ ನೋಡುವುದು, ಕೆಲವರಿಗೆ ದೇಗುಲಕ್ಕೆ ಹೋಗುವುದು ಇಷ್ಟವಾಗುವುದಿಲ್ಲ.. ಕಾರಣ ಕೇಳಿದರೆ, ’ಆಸಕ್ತಿಯಿಲ್ಲ’ ಎನ್ನುತ್ತಾರೆ. ’ನಾವು ಬಯಸದ ವಸ್ತುಗಳೋ,
ಕಾರ್ಯಗಳೋ, ಬೇರಾದರೂ, ’ಆಸಕ್ತಿಯಿಲ್ಲ,’ ಎಂಬ ಒಂದೇ ಉತ್ತರ. ’ಒಬ್ಬನಿಗೆ ಒಂದು ವಿಷಯದಲ್ಲಿ ’ನಿರಾಸಕ್ತಿ ಬರಬೇಕಾದರೆ, ಅದರಿಂದ ಕಿಂಚಿತ್ತೂ ಲಾಭವಿಲ್ಲ’, ಎಂಬ ಭಾವನೆ ಬರಬೇಕು.
ಆ ರೀತಿಯ ಭಾವನೆ ಬಂದುಬಿಟ್ಟರೆ, ಆ ವಿಷಯದಲ್ಲಿ ’ನಿರಾಸಕ್ತಿ’ ತಾನಾಗಿಯೇ ಬರುತ್ತದೆ.
ಇಲ್ಲಿ ಒಂದು ಪ್ರಶ್ನೆ ಏಳುತ್ತದೆ.’ ಉಪಯುಕ್ತವಿರುವ ವಸ್ತುವೊಂದನ್ನು, ಅದು, ಉಪಯೋಗವುಳ್ಳದ್ದು,ಉಪಯೋಗವಿಲ್ಲದ್ದು, ಎಂದು ನಿರ್ಧರಿಸುವುದು ಹೇಗೆ.’. ಈ ಪ್ರಶ್ನೆಗೆ ಉತ್ತರ, ’ಆಸಕ್ತಿ-ನಿರಾಸಕ್ತಿ’ವಸ್ತುಗಳಿಲ್ಲ.’. ಅದನ್ನು ನೋಡುವ ವೀಕ್ಷಕನ ದೃಷ್ಟಿಯಲ್ಲಿದೆ. ಉದಾಹರಣೆಗೆ, ಒಬ್ಬನಿಗೆ ’ಸಿಹಿ’ ಇಷ್ಟವಾದರೆ, ಸಕ್ಕರೆ ವ್ಯಾಧಿಯವನಿಗೆ ಅದು ನಿಷಿದ್ಧ.’ ಸಿಹಿ ಬೇಕು-ಬೇಡ ಎಂಬುದು,ವಸ್ತುಗಳಲ್ಲಿಲ್ಲದೆ, ವೀಕ್ಷಕನ ಭಾವನೆಯಲ್ಲಿದೆ.’. ಹಾಗಿರಲು,’ ಒಂದು ವಸ್ತುವು ಉಪಯೋಗಯೋಗ್ಯ,ಫಲವಿಲ್ಲದ್ದು,ಎಂಬುದನ್ನು,, ಅದು, ನಿಸ್ಸಾರ, ನಿಶ್ಫಲ, ಎಂದು ಭಾವಿಸಿದರೆ ತಪ್ಪಲ್ಲ.’
ಹಾಗೆ ನೆನೆದರೆ, ನಮಗೆ ’ನೆಮ್ಮದಿ’ ದೊರೆಯುತ್ತದೆ. ಉದಾಹರಣೆಗೆಂದು, ಒಂದು ವಸ್ತು, ಬಯಸಿ ’ಸಿಗಲಿಲ್ಲ,ಅಥವಾ, ಆ ವಸ್ತುವು ಕೈ ತಪ್ಪಿ ಹೋಗುವ ಸಂಭವವಿದ್ದಾಗ, ಎರಡೂ, ದುಃಖಕ್ಕೆ ಹೇತು.. ಉದಾಹರಣೆ; ಹಣ ಸಂಪಾದಿಸುವುದು ಎಷ್ಟು ಕಷ್ಟವೋ, ಅದರ, ಕಳ್ಳತನ, ತೆರಿಗೆ, ರೂಪದಲ್ಲಿ ಹೋದರೆ, ಅದು ಚಿಂತೆಗೆ ಕಾರಣ.. ಇದೆಲ್ಲವನ್ನೂ, ಅರಿತೂ, ವ್ಯಕ್ತಿಯೊಬ್ಬನು ವಸ್ತುವಿನ ವ್ಯಾಮೋಹವನ್ನು ಬಿಡದಿದ್ದರೆ, ಅವನನ್ನು ಏನೆನುವುದು. ವಿಷಯ ತಿಳಿಯದವನಿಗೆ ಹೇಳಬಹುದು.
ತಿಳಿದಿದ್ದರೂ, ಅಜ್ಞನಂತೆ ನಟಿಸುವವನಿಗೆ, ಏನೆನ್ನುವುದು.’ ತಿಳಿಯದೇ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವುಂಟು.. ತಿಳಿದು ಮತ್ತೆ ಮತ್ತೆ ತಪ್ಪು ಮಾಡುವವನಿಗೆ ಎಲ್ಲಿದೆ ಪ್ರಾಯಶ್ಚಿತ್ತ.’
ಆದ್ದರಿಂದ, ’ಆಸೆಗಳು, ಕಷ್ಟಗಳನ್ನು ಕೋಡುತ್ತವೆಯೆಂದು ಜ್ಞ್ಯಾನದ ಮೂಲಕ ಅರಿಯುವುದೊಂದೇ ಮಾರ್ಗ..’ದರಿದ್ರನಾಗಬಾರದೆಂದು ಒಬ್ಬನು ಬಯಸಿದರೆ, ವಿಷಯಸುಖಕ್ಕೆ ದಾಸನಾಗಬಾರದು.’
’ಗಳಿಸಿದ್ದರಲ್ಲಿ ತೃಪ್ತಿ ಪಡುವುದೇ ಪ್ರಾಙ್ಯರ ಲಕ್ಷಣ.’ ಶ್ರೀ ಭಗವತ್ಪಾದರು, ’ವಿಧಿವಶಾತ್ ಪ್ರಾಪ್ತೇನ ಸಂತುಷ್ಯತಾಂ’, ಎಂದರೆ, ವಿಧಿಯಿಂದ ಪಡೆದದ್ದರಲ್ಲಿ ಸಂತೃಪ್ತನಾಗು, ಎನ್ನುತ್ತರೆ.
. ’ನಮಗೆ ಸಿಗಬೇಕಾದದ್ದು ಸಿಕ್ಕೇ ಸಿಕ್ಕುತ್ತದೆ. ಅದು ಕಾಡಿನಲ್ಲಿದ್ದರೂ
ದೊರಕುವುದು ಖಚಿತ.’ಎರಡು ವಸ್ತುಗಳು ಒಂದಾಗಬೇಕೆಂದು ವಿಧಿಲಿಖಿತವಿದ್ದರೆ,ಅವು,ಬೇರೆ, ಬೇರೆ, ದ್ವೀಪಗಳಲ್ಲಿದ್ದರೂ,ಕಡಲುದರ-ದಲ್ಲಿದ್ದರೂ, ಬಹಳ ದೂರದಲ್ಲಿದ್ದರೂ,ವಿಧಿಯು ಅದನ್ನು ಒಂದು ಸೇರಿಸುವುದು.
.
ಶ್ರೀ ಪರೀಕ್ಷಿತ್ ಮಹಾರಾಜನಿಗೆ’ ಹಾವಿನಿಂದ ಕಡಿಯಲ್ಪಟ್ಟು ಸಾಯುವ ವಿಧಿಯಿದ್ದಿತು’.
ಅದನ್ನು ತಪ್ಪಿಸಲು, ಅವನು, ಕಡಲಿನ ನಡುವಿಲೊಂದು ಮನೆಯ ಮಾಡಿ ಅದರ ಮೇಲ್ಭಾಗದಲ್ಲಿದ್ದನು.
ಆ ದಿನ, ಆ ಸಮಯ,ಹಾವು ಪ್ರವೇಶಿಸಲಾಗದ ಸ್ಠಳವಾದರೂ, ಹಾವೊಂದು ಬಂದು ಅವನನ್ನು ಕಚ್ಚಿದ್ದರಿಂದ ಅವನು ವಿಧಿವಶನಾದನು. ಕಡು ಬಡವ ಕುಚೇಲನು, ಶ್ರೀ ಕೃಷ್ನನಿಗೆ ಅವಲಕ್ಕಿಯಿತ್ತಿದ್ದರಿಂದ,ಕುಬೇರ-
ನಂತೆ ಶ್ರೀಮಂತನಾದನು. ಇವೆಲ್ಲವೂ, ವಿಧಿ ಮಹಿಮೆ.
ಇದನ್ನು, ಭಾಗವತದಲ್ಲಿ ಉಲ್ಲೇಖಿಸಲಾಗಿದೆ.
ಈ ಕಾರಣಕ್ಕಾಗಿ, ಶ್ರೀ ಭಗವತ್ಪಾದರು,’ ವಿಧಿಯ ಮೂಲಕ ದೊರಕುವುದನ್ನು ಪಡೆದು ತೃಪ್ತನಾಗಿರು ಎನ್ನುತ್ತಾರೆ,’.’ ಹಣ,ಅಧಿಕಾರ-ವಿದ್ದರೂ, ಅಸೆಯನ್ನು ತೊರೆಯದಿದ್ದರೆ, ಇದರ ಪರಿಣಾಮ ದುಃಖ.’. ಇದನ್ನು ನಾವು ಪ್ರತ್ಯಕ್ಷವಾಗಿ ನೋಡುವದರಿಂದ, ಶ್ರೀ ಭಗವತ್ಪಾದರ ಸಂದೇಶ-
ಸಂದೇಶಗಳನ್ನು ಅನುಸರಿಸುತ್ತಾ,ಬಾಳಿನ ಗುರಿಯನ್ನು ಸೇರಬೇಕು.
==========================================ಮ್==============
ಅಧ್ಯಾಯ.೬.
==========
ಹತ್ತು ವಿಧ ಭಯಗಳು.
=====================
ಮನುಷ್ಯನ ಬಾಳಿನಲ್ಲಿ, ಇರುವ, ಒಂದು ಆಶ್ಚರ್ಯವನ್ನು, ಮಹಾನ್ ವಿದ್ಯಾರಣ್ಯರು;
’ಪುಣ್ಯಸ್ಯ ಫಲಮಿಛ್ಛಂತಿ ಪುಣ್ಯಾಂ ತೇಶ್ಯಂತಿ ಮಾನವಾಃ
ನ ಪಾಪಫಲಮಿಛ್ಛಂತಿ ಪಾಪಂ ಕುರ್ವಂತಿ ಯತ್ತತೈಃ
ಮನುಷ್ಯನಿಗೆ ಸುಖಗಳಿಸಬೇಕೆಂಬ ಆಸೆ ಸಹಜವಾಗಿಯೇಇದೆ. ಸುಖವು ಪುಣ್ಯದಿಂದ ದೊರಕುತ್ತದೆ ಎಂದು ಶಾಸ್ತ್ರವು ತಿಳಿಸುತ್ತದೆ.. ಅದನ್ನು ಅವನು ಬಲ್ಲ. ಅಂತೆಯೇ, ಅವನು ಎಂದಿಗೂ ದುಃಖವು ಬರಕೂಡದೆಂದು ಆಶಿ
ಸುತ್ತಾನೆ. ಅಲ್ಲದೆ, ದುಃಖವು ಮುಂಚೆ ಮಾಡಿದ ಕರ್ಮದ ಫಲವೇ ಎಂದು ಶಾಸ್ತ್ರವು ತಿಳಿಸುತ್ತದೆ. ಇದನ್ನೂ ಅವನು ಬಲ್ಲ.. ’ಸುಖಕ್ಕೆ ಕಾರಣವಾದ ಪುಣ್ಯವನ್ನು ಮಾತ್ರ ಮಾಡುವದಿಲ್ಲ. ದುಃಖ ಬೇಡ ಎನ್ನುವ ವ್ಯಕ್ತಿ ಪಾಪವನ್ನು ಮಾತ್ರ ಬಿಡುವುದಿಲ್ಲ.. ’ಪಾಪಂ ಕುರ್ವಂತಿ ಯತ್ನತಃ’ ಎಂದು ಹೇಳಲ್ಪಟ್ಟಂತೆ, ಜನರು ಪಾಪಕಾರ್ಯ-
ಗಳನ್ನು, ಮಾಡುತ್ತಲೇ ಹೋಗುತ್ತಾರೆ. ಇದು ಒಂದು ಆಶ್ಚರ್ಯವಾದ ವಿಷಯ ಎಂಬುದು ತೀವ್ರ ಅಧ್ಯಯನದಿಂದ ತಿಳಿಯುತ್ತದೆ..ಆದರೆ,’ ಮಗ ಓದುವದಿಲ್ಲ.’ ನಾನು ಜೈಲಿಗೆ ಹೋಗಬಾರದೆಂಬ ಆಸೆ ಇದೆ. ಆದರೆ ಕಳ್ಳನು, ಕಳ್ಳತನವನ್ನು ಮಾತ್ರ ಬಿಡುವುದಿಲ್ಲ.. ಇವು ಸಕಲರ ಅನುಭವದಲ್ಲೂ ಇದೆ.
’ಕಾಮಂ ಹಸಂತಿ ಲೋಕಾಃ ಕೈಲಾಸ ವಿಲಾಸ ವರ್ಣನಾವಸರೇ, ಸಾಧನಕತನಾವಸರೇ, ಸಾಶೀ ಕುರ್ವಂತಿ ವಕ್ತ್ರಾಣಿ’
’ಕೈಲಾಸ, ಸ್ವರ್ಗ ಸುಖ, ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಮೊದಲಾದವುಗಳ ಬಗ್ಗೆ, ಪುರಾಣಗಳಲ್ಲಿ ವಿವರಗಳನ್ನು ಕೇಳಿದಾಗ, ; ’ಆಹಾ’, .ಎಷ್ಟು ಚೆನ್ನಾಗಿದೆ ವಿವರಗಳನ್ನು ಕೇಳಲು,’ ಎನ್ನುತ್ತಾರೆ..
ಜನಗಳು. ಆದರೆ,ಅದನ್ನು, ಪಡೆಯಲು ಹೇಳಲ್ಪಟ್ಟಿರುವ ಸಾಧನೆಗಳನ್ನು ,ಹೇಗೆ ಮಾಡಬೇಕೆಂದು ತಿಳಿಸಿದರೆ ಜನರೂಒಬ್ಬೊಬ್ಬರೂ, ಸಭೆಯನ್ನು ಖಾಲಿ ಮಾಡಿ ವಿರಮಿಸುತ್ತಾರೆ.
’ಸಾಧನ ಕಥನಾವಸರೇ ಸಾಶೀ ಕುರ್ವಂತಿ ವಕ್ತ್ರಾಣಿ.; ’ಸಾಧನೆಗಳೆಲ್ಲವನ್ನೂ, ನಮ್ಮಿಂದ ಅನುಸರಿಸಲಾಗುವುದಿಲ್ಲ, ಎಂದು ಜನರೆನ್ನುತ್ತಾರೆ. ಇದರಿಂದ ಸಾಧನಗಳ ಬಗ್ಗೆ ಕೇಳಿ ತಿಳಿಯಲು ಅವರಿಗೆ ಇಛ್ಛೆ ಇಲ್ಲ. ಮತ್ತು,ಮನುಷ್ಯನು ತನಗೆ, ಒಳ್ಳೆಯದಾವುದು,, ಕೆಟ್ಟದ್ದಾವುದು, ಎಂದು ವಿವೇಚಿಸದಿರುವುದು, ಒಂದು ಕಾರಣ. ಆದರೂ,
ಪ್ರತಿವ್ಯಕ್ತಿಯೂ,’ ತಾನು ಮಾಡುವ ಕೆಲಸ ಸರಿಯೆಂದೇ ಸಾಧಿಸುತ್ತಾನೆ.’ ಕಳ್ಳನೂ, ತಾನು ಮಾಡುವುದು ಸರಿಯಾದ ಕಾರ್ಯವೆಂದು ತರ್ಕಬಡ್ಢವಾಗಿ ನುಡಿಯುತ್ತಾನೆ. ’ನಾನೇನು ತಪ್ಪು ಮಾಡಿದೆ. ನನಗೂ,ಹೆಂಡತಿ, ಮಕ್ಕಳಿದ್ದಾರೆ ಮಕ್ಕಳಿದ್ದಾರೆ.ಅವರಸಂರಕ್ಷಣೆ ನನ್ನ ಜವಾಬ್ದಾರಿ.. ನನ್ನ ಬಳಿ ಹಣವಿಲ್ಲ. ಸರ್ಕಾರ ಕೆಲಸ ಕೊಡುವುದಿಲ್ಲ. ಆದ್ದರಿಂದ,
ಆ ಶ್ರೀಮಂತನ ಮನೆಗೆ ತೆರಳಿದೆ.. ಅವರ ಬಳಿ, ಅಪಾರ ಹಣವಿತ್ತು. ಅದರೆ ಅವರಿಗೆ, ಅದರ ವಿನಿಯೋಗದಬಗ್ಗೆ ಅರಿವಿರಲಿಲ್ಲ. ಅದಕ್ಕೆ, ನನಗೆ ಅವಶ್ಯವಾದಷ್ಟನ್ನು ಮಾತ್ರ ಅಪಹರಿಸಿ ತಂದೆ. ಹೆಚ್ಚಿಲ್ಲ. ಇದರಿಂದ ನನ್ನಸಂಸಾರವು ಬದುಕಿ ಬಾಳುತ್ತಿದೆ. ಇದರಲ್ಲಿ ನನ್ನ ತಪ್ಪೆಲ್ಲಿ’ ಎನ್ನುತ್ತಾನೆ.’ ಇದು ಅವನ ತರ್ಕ. ’ಪ್ರತಿಯೊಬ್ಬನೂ, ತಾನು ಮಾಡಿದ್ದು ಸರಿಯೆಂದು ಸಾಧಿಸುತ್ತಾನೆಯೇ ಹೊರತು,’ ಇದು ಸರಿಯೇ, ತಪ್ಪೇ,’ ಎಂದು ವಿಮರ್ಷಿಸುವ ಮಟ್ಟದಲ್ಲಿ ಯಾರೂ ಇಲ್ಲ. ಇದರ ಬಗ್ಗೆ ಶ್ರೀ ಗೀತಾಚಾರ್ಯನ ಅಪ್ಪಣೆ;
’ತಸ್ಮಾತ್ ಶಾಸ್ತ್ರಂ ಪ್ರಮಾಣಮ್ ತೇ ಕಾರ್ಯಾ ಕಾರ್ಯೌ ವ್ಯವಸ್ತಿತೌ
ಜ್ಞ್ಯಾತ್ವಾ ಶಾಸ್ತ್ರ ಕರ್ಮವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ’
’ಯಾವುದು ಮಾಡಬಹುದು, ಯಾವುದು ಮಾಡಬಾರದು, ಯವುದು ಮಾಡಿದರೆ ಒಳ್ಳೆಯದಾಗುತ್ತದೆ, ಯಾವುದು ಮಾಡಿದರೆ ಕೆಟ್ಟದಾಗುತ್ತದೆ, ಎಂದು ತೀರ್ಮಾನಿಸಲು ನಮ್ಮಿಂದ ಆಗುವುದಿಲ್ಲ. ಒಬ್ಬೊಬ್ಬರ ಬುದ್ಧಿಯೂ
ಒಂದೇ ರೀತಿಯಲ್ಲಿ ಹೋಗುವುದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಶಾಸ್ತ್ರವೇ ಪ್ರಮಾಣ.
ಈ ಧರ್ಮ-ಅಧರ್ಮಗಳ ಬಗ್ಗೆ ಹೇಳುವುದಕ್ಕೆ, ಶಾಸ್ತ್ರಕ್ಕೆ ಮಾತ್ರ ಅಧಿಕಾರವುಂಟು. ಶಾಸ್ತ್ರ ಹೇಳುವುದನ್ನು ಮಾತ್ರ ನಾವು ಅನುಸರಿಸಬೇಕು.. ಶಾಸ್ತ್ರದ ಮೂಲಕವೇ, ಯವುದು ಸರಿ-ತಪ್ಪು
ಎಂಬುದನ್ನರಿಯಬೇಕು. ಶಾಸ್ತ್ರದಲ್ಲಿ ಪುಣ್ಯ-ಪಾಪಗಳ ಬಗ್ಗೆ ಸಂಕ್ಶೇಫ್ಪವಾಗಿ ಹೇಳಲಾಗಿದೆ.
ನಾವು ಮಾಡುವ ಪಾಪಕಾರ್ಯಗಳು ಮೂರು ವಿಧವಾದದ್ದು. ಅವು ಕಾಯ-ವಾಚ-ಮನಸ. ಈ ಮೂರು ವಿಧ ಪಾಪಗಳನ್ನು ಮಾಡದಿದ್ದರೆ, ದುಃಖ ಅನುಭ-ವಿಸಬೇಕಾದುದಿಲ್ಲ.
ಶಾಸ್ತ್ರದಲ್ಲಿ, ಅ, ಮೂರು ವಿಧ ಪಾಪಗಳನ್ನು;
’ಪರದ್ರವಯೇಷ್ವಪಿ ಧ್ಯಾನಂ ಮನಸಾನಿಷ್ಟ ಚಿಂತನಂ
ವಿತತಾಪಿ ವಿನೀ ವೇಛ್ಛ ತ್ರಿವಿಧಮ್ ಮಾನಸಂ ಸ್ಮೃತಂ
ಎಂದರೆ.೧.ಮತ್ತೊಬ್ಬರ ಸೊತ್ತನ್ನು ಅಪಹರಿಸಬೇಕೆಂಬ ಬಯಕೆ ಮನಸಿನಲ್ಲಿ ಉದಿಸುವುದು.
ಮೊದಲು, ಏನು ಮಾಡಬೇಕೆಂದು ಮನಸಿನಲ್ಲಿ ಯೋಚಿಸಿ, ಅದರ ಅನುಷ್ಟಾನಕ್ಕೆ ಪ್ರಯತ್ನಿಸುತ್ತಾನೆ.
ತಸ್ಮಾತ್ ಯತ್ ಪುರುಷೋ ಮನಸಾದಿಛ್ಛತಿ ತತ್ ವಾಚಾ ವದತಿ ತತ್ ಕರ್ಮಣಾ ಕರೋತಿ-ವೇದವಾಕ್ಯ;
ಮನಸಿನಲ್ಲಿ ಹುಟ್ಟಿದ್ದನ್ನೇ, ಬಾಯಲ್ಲಿ ಹೇಳುವರು. ಅದನ್ನೇ ನಡೆಸುವರು. ಅಂತೆಯೇ ಮನಸಿನಲ್ಲಿ’ಮತ್ತೊಬ್ಬರ ಸೊತ್ತನ್ನು ಅಪಹ-
ರಿಸಬೇಕೆಂದು ಆಸೆ ಹುಟ್ಟಿದರೆ, ಅದು ಮೊದಲನೆಯ ಪಾಪ. ಕೆಲವರು
’ನಾನು ಮತ್ತೊಬ್ಬರ ಸೊತ್ತನ್ನು ಅಪಹರಿಸಲಿಲ್ಲವಲ್ಲ’ ಎನ್ನುತ್ತಾರೆ.’ ಇದಕ್ಕೆ ಎದಿರಾಗಿ ನಾವುಒಂದು ವಾದವನ್ನು ಮಂಡಿಸಬಹುದು.. ’ ಆ ಸಮಯದಲ್ಲಿ ಸಂಧರ್ಭ ಸರಿಯಾಗಿರಲಿಲ್ಲವಾದ್ದರಿಂದ ನಮ್ಮಿಂದ ಏನೂ ಮಾಡಲಾಗಲಿಲ್ಲ’ ಎಂದು ನಾವು ಹೇಳಿಬಿದಬಹುದು.’ಆದ್ದರಿಂದ,ಮನದಲ್ಲಿ
ಮತ್ತೊಬ್ಬರ ಸ್ವತ್ತನ್ನು ಅಪಹರಿಸಬೇಕೆಂಬ ಆಸೆ ಉದಿಸಿದ್ದೇ ಮೊದಲ ತಪ್ಪು,
’ಮನಸಾ ಅನಿಷ್ಟ ಚಿಂತನಂ. ’ಮನದಿಂದ ಮತ್ತೊಬ್ಬನಿಗೆ ’ತೊಂದರೆ’ ಕೊಡಬೇಕೆಂಬ ಬಯಕೆ.
ಇದು ಒಂದು ಮಾನಸಿಕ ಪಾಪ. ನಮ್ಮ ಭಾರತೀಯ ಕಲಾಚಾರದಲ್ಲಿ, ಮೂಲಭೂತವಾಗಿ ವಿಷಯವೊಂದನ್ನು ತಿಳಿಸಿದ್ದಾರೆ.
.
’ಮಾತೃವತ್ ಪರದಾರೇಶು ಪರದ್ರವ್ಯೇಷು ಲೋಷ್ಟವತ್ ಅತ್ಮವತ್ ಸರ್ವ ಭೂತೇಷು ಯಃ ಪಷ್ಯತಿ ಸ ಪಶ್ಯತಿ.’ ಮೇಲೆ ಹೇಳಿದ್ದನ್ನು ನಾವು ಮರೆಯಲೇಬಾರದು. ’ಯಾವ ಸ್ತ್ರೀಯನ್ನು ನೋಡಿದರೂ,ಆಕೆಯನ್ನು ತಾಯಿಯೆಂದು ಭಾವಿಸಬೇಕು. ನಾವು ರಸ್ತೆಯಲ್ಲಿ ನಡೆಯುವಾಗ, ಕಲ್ಲು, ಮಣ್ಣನ್ನು
ಕಂಡರೆ ಕಾಣದೇ ಸಾಗುವಂತೆ, ಪರಸ್ವತ್ತನ್ನು ಕಂಡಾಗ, ಕಾಣದೇ, ಸಾಗಬೇಕು. ಮತ್ತೊಂದು ಮುಖ್ಯವಾದ ವಿಷಯ,ಎಲ್ಲರನ್ನೂ, ನನ್ನಂತೆಯೇ ಎಂದು ಭಾವಿಸುವುದು.’ನಮ್ಮ ಬಗ್ಗೆ ಮತ್ತೊಬ್ಬರು ಕೆಟ್ಟದಾಗಿ ಮಾತನಾಡಿದರೆ,, ನಮಗೆ ಎಷ್ಟು ನೋವಾಗುವುದೋ, ಅದೇರೀತಿ, ಮತ್ತೊಬ್ಬರ ಬಗ್ಗೆ
ನಾವು ಮಾತಾಡಿದರೆ, ಅವರ ಮನಸ್ಸೂ, ಅದೇ ರೀತಿ ನೋಯುವುದು, ಎಂಬುದನ್ನರಿಯಬೇಕು.’ ಬೇರೊಬ್ಬನು ನಮಗೆ ದ್ರೋಹ ಮಾಡಿದರೆ, ನಮ್ಮಿಂದ ತಡೆಯಲಾಗುವುದಿಲ್ಲ. ಹಾಗಿರುವಾಗ, ಮತ್ತೊಬ್ಬರಿಗೆ ನಾವು
ದ್ರೋಹ ಮಾಡಿದರೆ, ಅದನ್ನು ಅವರಿಂದ ತಡೆದುಕೊಳ್ಳಲಾಗುವುದಿಲ್ಲ. ಮತ್ತೊಬ್ಬರಿಗೆ, ದ್ರೋಹ ಮಾಡುವದನ್ನು ಚಿಂತಿಸಬಾರದು.
.
ಶ್ರೀ ಭಗವತ್ಪಾದರು; ’ತ್ವಯಿ ಮಯಿ ಸಾನ್ಯ ತ್ರೈಕೋ ವಿಷ್ಣುಃ ವ್ಯರ್ತಂ ಕುಪ್ಯಸಿ ಮೈಯ್ಯಸಹಿಷ್ಣುಃ’-’ನಿನ್ನಲ್ಲಿ, ನನ್ನಲ್ಲಿ, ಒಂದೇ ಚೈತನ್ಯವು ಪ್ರಕಾಶಿಸುತ್ತಿರುವಾಗ, ನನ್ನ ಮೇಲೆ ಏಕೆ ಅನವಶ್ಯಕವಾಗಿ ಕೋಪಿಸುತ್ತಿಯೇ’ ಎನ್ನುತ್ತಾರೆ. ನಾನು ನಿನಗೇನು ಅಪರಾಧವೆಸಗಿದೆ.
ಇದೆಲ್ಲವನ್ನೂ ಮನಸಿನಲ್ಲಿ ಇಟ್ಟುಕ್ಕೊಳ್ಳಬೇಕು. ’ಆದರೆ,ಮತ್ತೊಬ್ಬರಿಗೆ ಮತ್ತೊಬ್ಬರಿಗೆ ಕೆಡುಕನ್ನು ಮನಸಿನಲ್ಲಿ .
ಬಯಸುವುದು ದೊಡ್ಡ ಅಪರಾಧವಾಗುತ್ತದೆ
ಮುಂದಿನದು;’ವಿತ್ತಾಪಿನಿವೇಛ್ಛ’ ಎಂಬುದು.
’ವಿತ್ತಮ್’ ಎಂದರೆ,’ವ್ಯರ್ಥ’ ಎಂದರ್ಥ. ’ಅಪಿನಿವೇಶಂ’ ಎಂದರೆ, ’ವಾದ ಎಂದರ್ಥ.
’ಅನವಶ್ಯ ಬಯಕೆ’ ಎಂದರೆ, ’ನಮ್ಮ ಸಿದ್ಧಾಂತದ ಮೂಲಭೂತ ತತ್ವವಾದ, ’ದೇವರು’
ಎಂದರ್ಥ. ದೇವನಿಲ್ಲದೆ ಜಗವಿಲ್ಲ. ಈಶ್ವರನಿಲ್ಲದೆ, ನಮ್ಮ ಕರ್ಮಫಲಗಳನ್ನ್ನು ಅನುಭವಿಸಲಾಗುವುದಿಲ್ಲ. ಈಶ್ವರನ ಬಗ್ಗೆ ಹೇಳುವಾಗ, ಅನೇಕರಿಗೆ ನಂಬಿಕೆಯೇ ಬರುವುದಿಲ್ಲ, ತರ್ಕ ಶಾಸ್ತ್ರದಲ್ಲಿ ಬಹಳ ಪಾಂಡಿತ್ಯವಿದ್ದ ಮಹಾನ್ ಪಂಡಿತರೊಬ್ಬರಿದ್ದರು. ಅವರ ಹೆಸರು ’ಉದಯಣಾಚರ್ಯ’ರೆಂದು.. ಅವರು ’ಜಗದ ಕರ್ತ ದೇವನೆಂದು’ ನಿರೂಪಿಸಲೇ, ಅವರು ಮಹ್ಕಾವ್ಯವೊಂದನ್ನು ಬರೆದಿದ್ದಾರೆ.. ಅ ಕೃತಿಯ ಕೊನೆಯಲ್ಲಿ, ಅವರು ವಿಷಯವೊಂದನ್ನು ಹೇಳಿದ್ದಾರೆ.’ಈತ್ಯೇವಂ ನೀತಿಸಂಭವಜಲೈರ್ಭೂಯೋಬಿ ರಾಕ್ಷಾಲಿತೆ
ಯೇಶಾಂ ನೊಪಕಮಾದತಾಸಿಹೃದಯೇ ತೇ ಶೈಲಸಾರಾಶಯಾಃ
ಕಿಂತು ಪ್ರಸ್ತುತ ವಿಪ್ರ ದೀಪ ಮದಯೋಬ್ಯುಚೈರ್ ಭವಚಿಂತಕಾಃ
ಕಾಲೇ ಕಾರುಣಿಕತ್ವಯೈವ ಕೃಪಯಾ ತೇ ರಕ್ಷಣ್ಯಾ ನರಾಃ’
’ಸ್ವಾಮಿಯೇ, ನಿನ್ನ ಇರುವಿಕೆಯನ್ನು ದೃಧಪಡಿಸಲು, ಎಷ್ಟೋ ನಿಯುಕ್ತಿಗಳನ್ನೂ, ಪ್ರಮಾಣಗಳನ್ನೂ ಬಳಸಿದ್ದ್ದೇನೆ. ಆದರೂ,, ಕೆಲ ಪಾಷಾಣ ಹೃದಯಿಗಳಾದವರು ಇದನ್ನೊಪ್ಪುವುದಿಲ್ಲ. ಅದರೂ, ಅವರನ್ನು
ಕಂಡಾಗ, ಅವರ ಬಗ್ಗೆ ಕರುಣೆ ಉದ್ಭವಿಸುತ್ತದೆ. ದೇವನೇ, ನೀನೇ, ಅವರನ್ನೂ, ರಕ್ಷಿಸಬೇಕು.
ಕಾರಣ,’ ಅವರು ಸತತವೂ, ನಿಮ್ಮ ನಾಮವನ್ನುಛ್ಛರಿಸುತ್ತಿದ್ದಾರೆ.’ ಅವರು ’ಈಶ್ವರನಿಲ್ಲ’ ಎಂದು, ಘೋಷಿಸುತ್ತಿರುವಾಗ, ನಿನ್ನ ಆ ಮೂರು ಅಕ್ಷರಗಳನ್ನು ಹಲವು ಬಾರಿ ಉಛ್ಛರಿಸುತ್ತಾರೆ;
ಆದ್ದರಿಂದಲಾದರೂ, ನೀನವರನ್ನು ರಕ್ಷಿಸಬೇಕೆಂದು, ಕವಿವರ್ಯರು ಅವನಲ್ಲಿ ಮೊರೆಯಿಡುತ್ತಾರೆ.
ಇಷ್ಟು ಪ್ರಮಾಣಗಳನ್ನಿತ್ತು, ಈಶ್ವರನ ಇರುವಿಕೆಯ ಬಗ್ಗೆ ಹೇಳಿದರೂ, ,
ಇನ್ನೂ ನಂಬದಿದ್ದರೆ, ಅದು ಅವರ ಪೂರ್ವಾರ್ಜಿತ ಕರ್ಮ,;ಎಂದೇ ಹೇಳಬೇಕು. ಇದನ್ನೇ, ’ವಿತ್ತಾಪಿನಿವೇಶಃ’ ಎಂದರೆ’ ವ್ಯರ್ಥ
ಪ್ರಲಾಪ’ ಎನ್ನುತ್ತಾರೆ. ಅವರು, ’ನಾವು ಹೇಳುವುದೇ ಸರಿ.’ ನೀವು ಹೇಳುವುದನ್ನು ಖಂಡಿಸಲು, ನಮಗೆ ವಾದವಿಲ್ಲ. ಆದ್ದರಿಂದಲೇ, ಈಶ್ವರನ ಬಗ್ಗೆ, ನಮ್ಮ ಮನಸಿನಲ್ಲಿ, ನಂಬಿಕೆ ಬರ-
ಲಿಲ್ಲ ಎನ್ನುತ್ತಾರೆ’. ಇದು ಅನವಶ್ಯ ಹಠ. ಇಂತಹಾ ಪಾಪವನ್ನು ಮಾಡಬಾರದು.
ಅಂತೆಯೇ, ’ವೇದ ಶಾಸ್ತ್ರಗಳ ಬಗ್ಗೆಯೂ, ಅವು ನಮಗೆ ಹೇಳುವ ಧರ್ಮ,
ಅಧರ್ಮಗಳ ಬಗ್ಗೆಯೂ, ನಾನು ನಂಬುವಿದಿಲ್ಲ ಎಂದರೆ,ಅದೂ ಒಂದು ಪಾಪವಾಗುತ್ತದೆ. ಮತ್ತೆ ವ್ಯಕ್ತಿಯು, ಯಾವುದನ್ನು ನಂಬುತ್ತಾನೆ.. ಎಲ್ಲರೂ, ಮನಸಿಗೆ ಬಂದದ್ದನ್ನೇ, ಪ್ರಮಾಣವಾಗಿ ಸ್ವೀಕರಿಸಿ,ಅದನ್ನೇ,
ಮಾಡುವುದಾದರೆ, ಜಗದೊಲ್ಲೊಂದು ನೀತಿಯೇ ಇರುವುದಿಲ್ಲ.ಆದ್ದರಿಂದ, ಎಲ್ಲರಿಗೂ ಸಾಮಾನ್ಯವಾದ ಪ್ರಮಾಣವಿದ್ದರೆ ಮಾತ್ರ, ಜಗದಲ್ಲಿ,, ನೀತಿಯೊಂದಿರುತ್ತದೆ. ಅಂತಹಾ ಪ್ರಮಾಣವನ್ನೇ, ನಾವು, ವೇದ-ಶಾಸ್ತ್ರಗಳನ್ನುತ್ತೇವೆ. ಆದ್ದರಿಂದ,’ ನಾನು ವೇದವನ್ನು ನಂಬುವುದಿಲ್ಲ’ ಎಂಬುದು ಒಂದು ವ್ಯರ್ಥವಾದ.
’ಪುನರ್ಜನ್ಮದ ಬಗ್ಗೆ ನಂಬಿಕೆಯಿಲ್ಲ,’ ಎಂಬುದು ಕೆಲವರ ವಾದ.
’ಯಾವಜ್ಜೇವಂ ಸುಖಂ ಜೀವೇತ್ ಋಣಂ ಕೃತ್ವಾ ಗೃತಂ ಪಿಬೇತ್ ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ’
’ ಇರುವರೆಗೂ ಸಾಲ ಮಾಡಿಯಾದರೂ ತಿನ್ನುವ. ಆಮೇಲೆ, ನಾವು ಯಾರು ಯಾರನ್ನು ಕೇಳುವುದು. ಇದು ಚಾರ್ವಾಕರ ಸಿದ್ಧಾಂತ.
ಇಂತಹ ಆಸೆಗಳನ್ನು ಮನಸಿನಲ್ಲಿ ಬೆಳೆಸುವುದು ’ವಿತ್ತಾಪಿನಿವೇಶಂ’ ಎನ್ನುವ ಪಾಪವಾಗುತ್ತದೆ. ಅಂತಲೇ, ಈ ಮೂರು
ವಿಧವಾದ ಪಾಪಗಳನ್ನು ಮಾದಲೇ ಬಾರದು.
’ಪಾರುಷ್ಯಮನ್ರುತಂ ಚೈವ ಪೈಶೂನ್ಯಶ್ಚಾಪಿ ಸರ್ವಶಃ ಅಸಂಭದ್ದ ಪ್ರಲಾಪಶ್ಚ ವಾಜ್ಞ್ಮಯಸ್ಯಾ ಚತುರ್ವಿಧಂ
’,
’ನಾವು ಒಬ್ಬರ ಬಳಿ ಮಾತನಾಡುವಾಗ, ಅವರ ಮನಕ್ಕೆ ನೋವಾಗದಂತೆ ಮಾತನಾಡಬೇಕು.’
’ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ ಸ್ವಾಧ್ಯಾಯಾಹ್ಯಸನಂ ಚೈವ ವಾಜ್ಞ್ಮಯಮ್ ತಪ ಉಚ್ಯತೇ’
ಶ್ರೀ ಭಗವದ್ಗೀತೆ;
’ಒಂದು ವಿಷಯವನ್ನು ನಾವು ಹಲವು ವಿಧಗಳಲ್ಲಿ ಹೇಳಬಹುದು. ಒಬ್ಬರನ್ನು ಕರೆಯುವಾಗ, ’ಇಲ್ಲಿ ಬನ್ನಿ.ನಿಮ್ಮ ಬಳಿಒಂದು ವಿಷಯ ಹೇಳಬೇಕು’ ಹೇಳಲಿಚ್ಚಿಸುತ್ತೇನೆ, ಎಂದು ಹೇಳುವ ಬದಲು, ’ಏ’, ಬಾಯಿಲ್ಲಿ, ನಾನು ಹೇಳುವುದನ್ನು ಕೇಳು’ಎನ್ನುವದಕ್ಕೂ, ಬಹಲ ವೆತ್ಯಾಸವಿದೆ.. ಎರಡರ ಅರ್ಥ ಒಂದೇ ಆದರು, ಹೇಳುವ ಮಾತಿಂದ ಉಂಟಾಗುವ ಪರಿಣಾಮಗಳು ವೆತ್ಯಾಸವಾಗಿವೆ.. ಮೊದಲ ರೀತಿಯಲ್ಲಿ ಗೌರವದಿಂದ ಕರೆದರೆ, ಅವರು ಸಂತಸದಿಂದ ಬರುತ್ತಾರೆ. ಅದೇ ,
ಸಮಯ ಅಧಿಕಾರದಿಂದ ಕರೆದರೆ, ’ಇವನು ದೊಡ್ಡ ಮನುಷ್ಯನಂತೆ ಅಧಿಕಾರ ನಡೆಸುತ್ತಾನೆ ಎಂದುಕೊಳ್ಳುತ್ತಾನೆ.’
’ವಚನೇ ಕಾ ದರಿದ್ರತಾ’.ಗೌರವದಿಂದ ಮಾತನಾಡಿದರೆ ಏನು ವ್ಯಯಆಗುತ್ತದೆ. ಕೆಲವರಿಗೆ, ಇತರರನ್ನು ನೋಯಿಸುವಂತೆ, ಮಾತನಾಡುವುದು ಒಂದು ಹವ್ಯಾಸ.
ಮುಂದಿನ ಪಾಪ ’ಅನ್ರುತಮ್ ಚೈವ’; ’ ಸುಳ್ಳು ಹೇಳುವುದು ದೊಡ್ಡ ಪಾಪ. ಇದನ್ನರಿಯದವರು ಯಾರೂ ಇಲ್ಲ.’ ರೂಢಿಯಲ್ಲಿ, ಇದನ್ನು ಎಲ್ಲರೂ,. ಸುಳ್ಳು ಹೇಳುವುದು ತಪ್ಪೆಂದು ಎಲ್ಲರೂ ಅರಿತರೂ, ಯಾರಿಂದಲೂ, ಸುಳ್ಳನ್ನು ಹೇಳದೇ ಇರಲಾಗುವುದಿಲ್ಲ.
.’
ಶ್ರೀರಾಮನು ತನ್ನ ಜೀವಿತದಲ್ಲಿ ಎಂದೂ ಸುಳ್ಳನ್ನು ಹೇಳಲಿಲ್ಲ. ಯಾರ ಆಸ್ತಿಗೂ ಆಸೆಪಡಲಿಲ್ಲ. ಅದೇ ಸಮಯದಲ್ಲಿ,ಸುಳ್ಳು ಹೇಳದೇ ಕೆಲವರಿಂದ ಇರಲಾಗುವುದಿಲ್ಲ, ಎಂದು ಚಿಂತಿಸುತ್ತಾರೆ.ಇದು ದೊಡ್ಡ ತಪ್ಪು. ಅವರಿಗೆ ’ಪವಿತ್ರವಾಗಿ ಬಾಳಬೇಕೆಂಬ ತೀವ್ರತೆಯಿಲ್ಲ.. ಅಂತಹ ತೀವ್ರತೆಯಿದ್ದರೆ, ಅವನು ಸುಳ್ಳನ್ನು ಹೇಳುವುದೇ ಇಲ್ಲ.’
ಶ್ರೀ ಹರಿಶ್ಚಂದ್ರನು ಸತ್ಯವನ್ನು ಬಿಟ್ಟು ಬೇರೇನನ್ನು ಹೇಳಲೇ ಇಲ್ಲ. ಸತ್ಯರಕ್ಷಣೆಗೆ, ನಮ್ಮಿಂದ ಊಹಿಸಲಶಕ್ಯವಾದ ಕಷ್ಟ-ಅನುಭವಿಸಿದರು. ವಿಶ್ವಾಮಿತ್ರರು ಕೇಳಲು, ’ನಾನು ರಾಜ್ಯವನ್ನು ಬಿಡುತ್ತೇನೆ, ಆದರೆ ಸುಳ್ಳು ಹೇಳುವುದಿಲ್ಲ’, ಎಂದನು..’ ವಿಶ್ವಾಮಿತ್ರರು, ಆ ಮಾತನ್ನೇ ಗಟ್ಟಿಯಾಗಿ ಹಿಡಿದು, ರಾಜ್ಯವನ್ನು ಕೇಳಿದರು. ನಾವಾಗಿದ್ದರೆ,ಸುಮ್ಮನೆ ಹೇಳಿದೆ. ನೀವಿದನ್ನು, ಗಂಭಿರವಾಗಿ ತೆಗೆದುಕೊಳ್ಳಬೇಡಿ’ ಎನ್ನುತ್ತಿದ್ದರು. ಆದರೆ, ಹರಿಶ್ಚಂದ್ರನು,
’ಹೌದು. ನಾನು ಹೇಳಿದ್ದು ನಿಜವೇ. ರಾಜ್ಯವನ್ನು ಪಡೆಯಿರಿ’ ಎಂದನು.
ಹಾಗಾದರೆ,’ ನೀನು ಈ ರಾಜ್ಯವನ್ನು ಬಿಟ್ಟು ಹೋಗು ಎನ್ನಲು’, ಅವರ ಆಙ್ಯೆಯನ್ನು ಹರಿಸ್ಛಂದ್ರನು ಪಾಲಿಸಿದನು. ಬಿಡದ ವಿಶ್ವಾಮಿತ್ರರು,, ’ನೀ ಹಣ ಕೊಡುತ್ತೇನೆ ಎಂದೆಯೆಲ್ಲಾ, ಕೊಡು’, ಎಂದರು. ಅದಕ್ಕೂ ಒಪ್ಪಿದರು. ಸತ್ಯವನ್ನು ಕಾಪಾಡಲು ಎಷ್ಟು ಕಷ್ಟಗಳನ್ನಾದರೂ,., ಅನುಭವಿಸಲು ತಯಾರಾಗಿದ್ದರು. ಆದರೆ, ನಮ್ಮ ಬಾಳಿನಲ್ಲಿ ಅಸತ್ಯಕ್ಕೇ ಮಹತ್ವ ಕೊಡುತ್ತೇವೆ. ಅಸತ್ಯವನ್ನು ಹೇಳುವುದು ದೊದ್ದ ತಪ್ಪು.
ಮುಂದಿನದು, ’ಅಸೌಚಂ ಚಪಿ ಸರ್ವಶಃ’ ಎಂಬುದು. ಒಂದು ಪಾಪ. ಎಂದರೆ, ಒಬ್ಬನು ವಿಧೇಯತೆಯಿಂದ ಕೆಲಸ ಮಾಡುತ್ತಿದ್ದರೆ, ಅವನಿಗೆ, ಆಗದವರು, ಮೇಲಧಿಕಾರಿಯ ಬಳಿ, ಅವನ ಬಗ್ಗೆ, ಇಲ್ಲದ-ಸಲ್ಲದ ದೂರುಗಳನ್ನು ಹೇಳುವುದು.. ಅವನಿಗೆ, ಮೇಲಧಿಕಾರಿಯಿಂದ ದಂಡನೆ ಸಿಕ್ಕಿದರೆ, ಅದನ್ನು ನೋಡಿ ಸಂತೋಷಿಸುವರು. ಇದೂ ಒಂದು ದೊದ್ದ ಪಾಪ.
ಮುಂದಿನದು, ’ಅಸಂಬದ್ಧ ಪ್ರಲಾಪಃ’ ಎಂಬುದು., ’ನಾವೆಲ್ಲಿದ್ದೇವೆಯೋ, ಯಾವ ಸಂಧರ್ಬಲ್ಲಿದ್ದೇವೆಯೋ, ಅದಕ್ಕೆ ವ್ಯತಿರಿಕ್ತವಾಗಿ ಮಾತನಾದುವುದು. ’ಇದೇ ಅಸಂಭದ್ದ ಪ್ರಲಾಪ.’
’
ಮುಂದೆ ’ಶರೀರದಿಂದಾಗುವ ಪಾಪಗಳ ಬಗ್ಗೆ ತಿಳಿಯೋಣ.’
’ಅತತ್ತಾದಾನಾಮುಪಾದಾನಂ ಹಿಂಸಾಚೈವ ವಿಧಾನತಃ ಪಾತ್ರರೋಪ ಸೇವಾಚ’.
’ಮತ್ತೊಬ್ಬರ ವಸ್ತುವನ್ನು ಅವರ ಒಪ್ಪಿಗೆಯಿಲ್ಲದೇ ಬಲವಂತದಿಂದ ಪಡೆಯುವುದು.’ ಮತ್ತೊಬ್ಬನನ್ನು ಹಿಂಸಿಸುವುದು ಶರಿರಕ್ಕೆ ಸಂಭಂಧ ಪಟ್ಟ ಮತ್ತೊಂದು ಪಾಪ. ಆದರೆ, ಯುದ್ಧದಲ್ಲಿ, ಶತ್ರುಗಳನ್ನು ಹಿಂಸಿಸದರೆ, ಅದು ಪಾಪವಲ್ಲ.. ಅದರಿಂದಲೇ, ’ಅವಿ’ಧಾನತಃ’ ಎಂಬ ಪದವನ್ನುಪಯೋಗಿಸಲಾಗಿದೆ.
ಮುಂದಿನದು, ’ಪಾದಾರೋಪಸೇವಾಚ.’ ತನ್ನ ಪತ್ನಿಯಲ್ಲದ ಬೇರೊಬ್ಬ ಮಹಿಳೆಯೊಡನೆ, ತಪ್ಪಾಗಿ ನಡೆದುಕೊಳ್ಳುವುದು ಮಹಾಪಾಪ.. ಇದರ ಬಗ್ಗೆ ಮೊದಲೇ, ಹೇಳಿದ್ದೇವೆ. ’ಯಾವ ಹೆಣ್ಣನ್ನು ನೋಡಿದರೂ, ಮನದಲ್ಲಿ’ ತಾಯಿಯೆಂಬ ಭಾವನೆ ಬರಬೇಕು.’. ಅದಕ್ಕೆ ವಿರುದ್ಧ ಭಾವನೆ ಬಂದರೆ, ಮಹಾಪಾಪ. ರಾವಣನ ಅಂತ್ಯ ಅದರಿಂದಲೇ. ಇದನ್ನು ಮನಸಲ್ಲಿ
ಮನಸಿನಲ್ಲಿ,ಇಟ್ಟುಕ್ಕೊಂಡು ಇಂತಹ ಪಾಪವನ್ನು ಯಾರೂ ಮಾಡಬಾರದು.
ಹೀಗೆ, ಮನಸಿಕವಾಗಿ-೩, ಮಾತಿನಿಂದ-೪, ಶರೀರದಿಂದ-೩, .ಒಟ್ಟು ೧೦ ಪಾಪಗಳನ್ನು ಮನುಷ್ಯ ಮಾಡುತ್ತಾನೆ.
ಈ ೧೦ ಪಾಪಗಳನ್ನು ಮನುಷ್ಯನು ಮಾಡದಿದ್ದರೆ, ಅವನು ಪವಿತ್ರವಾದ ಬಾಳನ್ನು ನಡೆಸಬಹುದು. ಶಾಸ್ತ್ರಗಳಿಂದ ನಮಗೆ ಬೇರೇ ವಿಷಯಗಳೂ ತಿಳಿಯುತ್ತವೆ. ಶಾಸ್ತ್ರದಲ್ಲಿ ಪುಣ್ಯ-ಪಾಪಗಳನ್ನು ಎಲ್ಲರೂ ಅನುಭವಿಸಬೇಕೆಂದು ಹೇಳಲ್ಪಟ್ಟಿದೆ.. ಮಾನಸೀಕ ಪಾಪಗಳ ಫಲವನ್ನು ಮನಸ್ಸಿನಿಂದ, ವಾಕ್ಕಿನ ಪಾಪವನ್ನು ವಾಕ್ಕಿನಿಂದ, ಶರೀರದ
ಶರೀರದ ಪಾಪಫಲವನ್ನು ಶರೀರದಿಂದ ಅನುಭವಿಸಬೇಕು.
ಕೆಲವರು ಗುರುಗಳಬಳಿ, ’ನನ್ನಲ್ಲಿ ಹಣ, ಆಸ್ತಿಯಿದೆ, ಮನ ನೆಮ್ಮದಿಯಿಲ್ಲ,’ ಎನ್ನುತ್ತರೆ. ಅದಕ್ಕೆ ಕಾರಣ, ಅವರು
ಹಿಂದಿನ ಜನ್ಮದಲ್ಲಿ ಮಾಡಿದ ಮಾನಸೀಕ ಪಾಪದ ಫಲವೇ. ಹಾಗೆಯೇ, ವಾಕ್ಕಿನಿಂದ ಪಾಪ ಮಾಡಿದ್ದರೆ, ಅದರ ಫಲವಾಗಿ, ಮೂಗರಾಗಿಯೋ,, ಸರಿಯಾಗಿ ಮಾತನಾಡದವರಾಗಿಯೋ, ಹುಟ್ಟುತ್ತಾರೆ. ಶರೀರದಿಂದ ಮಾಡಿದ ಪಾಪಗಳಿಗೆ, ನಾವು ಅನುಭವಿಸುವ ವ್ಯಾಧಿಗಳು ಅಪರಿಮಿತ.. ಹೊಸ ಹೊಸ ವ್ಯಾಧಿಗಳು ಬರುತ್ತಿವೆ. ಸಾವಿರಗಟ್ಟಲೆ ವೈದ್ಯರಿದ್ದರೂ,
ವ್ಯಾಧಿಗಳು ಗುಣವಾಗಲಿಲ್ಲ. ಹಿಂದೆಲ್ಲಾ, ಎಲ್ಲಾ ವ್ಯಾಧಿಗಳಿಗೂ, ಒಂದೇ ಅಧ್ಯಯನ ಮಾಡಿದ ವೈದ್ಯರಿದ್ದರು.
ಈಗ, ನೇತ್ರ, ಕಿವಿ, ಮೂಗು, ಗಂಟಲು, ಹೃದಯ, ಎಂದು, ಬೇರೆ ಬೇರೆ ತಜ್ಞ್ಯರಿದ್ದಾರೆ. ಇನ್ನು ಮುಂದೆ, ಬಲಗಣ್ಣಿಗೊಬ್ಬ ವೈದ್ಯ, ಎಡಗಣ್ಣಿಗೊಬ್ಬ ವೈದ್ಯ, ಎಂದು ಬಂದರೆ, ಆಸ್ಚರ್ಯವಿಲ್ಲ. ಹೀಗೆ, ಶರೀರದಿಂದ ಮಾಡಿದ ಪಾಪದ ಫಲ ಹಲವು ವ್ಯಾಧಿಗಲ್ಲಿ ಮುಗಿಯುತ್ತದೆ.
ಪಾಪಗಳಲ್ಲಿ ೧೦ ವಿಧವಿದ್ದಂತೆ, ಪುಣ್ಯಗಳಲ್ಲೂ ೧೦ ವಿಧಗಳಿವೆ. ಮತ್ತೊಬ್ಬನಿಗೆ ದಾನ ಮಾಡಬೇಕೆಂದು ಬಯಸುವುದು ಮಾನಸಿಕ ಪುಣ್ಯ.. ಮತ್ತೊಬ್ಬರಿಗೆ ಉಪಕಾರ ಮಾಡ ಬಯಸುವುದು ಮತ್ತೊಂದು ರೀತಿಯದು. ಶಾಸ್ತ್ರ
ಶಾಸ್ತ್ರ ಸಂಭಂಧ ವಿಚಾರಗಳು ಮನಸಿನಲ್ಲಿ ಉದಿಸುವುದು. ಕೆಲವರಿಗೆ, ಚಿಕ್ಕ ವಯಸಿನಲ್ಲಿಯೇ ಒಳ್ಳೆಯ ಯೋಚನೆಗಳು
ಉದಿಸುತ್ತವೆ. ಇದು ಅವರ ಮಾನಸಿಕ ಪುಣ್ಯ. ಕೆಲವು ಮಕ್ಕಳು, ಚಿಕ್ಕ ವಯಸಿನಲ್ಲಿಯೇ,’ ದೇಗುಲಕ್ಕೆ ಹೋಗಬೇಕು, ಭಗವನ್ನಾಮವನ್ನು ಉಚ್ಚರಿಸಬೇಕು, ಪೂಜೆ ಮಾಡಬೇಕು,’ ಎಂದು ಬಯಸುತ್ತವೆ. ತಂದೆ ದೇಗುಲಕ್ಕೆ ಕೊಂಡೊಯ್ಯದಿದ್ದರೆ ಮಕ್ಕಳು ಅಳುತ್ತವೆ.
ತಂದೆ ಮನೆಯಲ್ಲಿ ಪೂಜೆ ಮಾಡುತ್ತಿದ್ದರೆ, ತಾನೂ ಪೂಜಿಸಬೇಕೆಂದು ಅಳುವ ಮಕ್ಕಳೂ ಇವೆ.ಇದಕ್ಕೆ ಕಾರಣ ಅವರ ಪುಣ್ಯ.. ಮತ್ತೊಬ್ಬನಿಗೆ, ನೋವಾಗದಂತೆ ಮಾತನಾಡುವುದು, ಸತ್ಯವನ್ನೇ ನುಡಿಯುವುದು, ಮತ್ತೊಬ್ಬನಿಗೆ
ಮತ್ತೊಬ್ಬನಿಗೆ,ಉಪಕರಿಸುವ ರೀತಿಯಲ್ಲಿ ಮಾತನಾಡುವುದು, ಇದು ವಾಕ್ಕಿನಿಂದ ಮಾಡುವ ಪುಣ್ಯಗಳು. ಅಂತೆಯೇ, ಮತ್ತೊಬ್ಬನಿಗೆ ಉಪಕಾರ
ಮಾಡುವುದು, ಮತ್ತವರನ್ನು ಹಿಂಸಿಸದೇ ಇರುವುದು, ಪರ ಸ್ತ್ರೀಯರನ್ನು ತಾಯಂತೆ ನೋಡುವದು, ಶಾರೀರಿಕ ಪುಣ್ಯಗಳು.
ಕೆಲವರು, ಗುರುಗಳ ಬಳಿ,’ ನಾನು ಸಂತೋಷವಾಗಿದ್ದೇನೆ; ನನ್ನ ಮನಸಿನಲ್ಲಿ ಯಾವ ಚಿಂತೆಯೂ ಇಲ್ಲ ಎನ್ನುತ್ತಾರೆ.
ಆಧಿಕ ಆಸ್ತಿ ಇರದಿದ್ದರೂ, .ಮನಸಿನಲ್ಲಿ ಯಾವ ಅತೃಪ್ತಿಯೂ ಇರುವುದಿಲ್ಲ. ಇದಕ್ಕೆ ಕಾರಣ, ಜನ್ಮಂತರದಲ್ಲಿ ಮಾಡಿದ ಮಾನಸಿಕ ಪುಣ್ಯದ ಫಲ. ಮನ ನೆಮ್ಮದಿ.. ಕೆಲವರು ಯಾವ ವ್ಯಾಧಿಯೂ ಇಲ್ಲದೆ, ಧೃಢಕಾಯರಾಗಿರುತ್ತಾರೆ. ಅದಕ್ಕೆ ಕಾರಣ, ಅವರು ಪೂರ್ವಜನ್ಮದಲ್ಲಿ ಮಾಡಿದ ಶಾರೀರಿಕ ಪುಣ್ಯದ ಫಲ.
.
ಪುಣ್ಯ-ಪಾಪದ ಬಗ್ಗೆ ನಮ್ಮ ಶಾಸ್ತ್ರ ಹೀಗೆ ವಿಸ್ತಾರವಾಗಿ ವಿವರಿಸಿದೆ. ಇದನ್ನು ನಾವು ಚೆನ್ನಾಗಿ ಅರಿತು, ಪಾಪವನ್ನೇ
ಬಾಳಿನಲ್ಲಿ ಮಾಡದೆ, ಪುಣ್ಯವನ್ನೇ ಅನುಷ್ಠಾನ ಮಾಡಿದರೆ, ಶ್ರೇಯಪ್ರಾಪ್ತಿಯಾಗುತ್ತದೆ. ವಿಶ್ವವು ಸಂವೃದ್ಧವಾಗಿರಲು. ಧರ್ಮವೊಂದೇ ಮಾರ್ಗ.. ಆದ್ದರಿಂದಲೇ, ಧಾರ್ಮೀಕವಾದ ಬಾಳನ್ನು ನಡಸಬೇಕೆಂದು, ನಮ್ಮ ಹಿರಿಯರು ಧರ್ಮದ ಬಗ್ಗೆ ನಮಗೆ ಇಷ್ಟು ವಿಸ್ತಾರವಾಗಿ ತಿಳಿಸಿದ್ದಾರೆ.
.
ಶ್ರೀ ಭಗವತ್ಪಾದರು ಈ ಪುಣ್ಯಭೂಮಿಯಲ್ಲವತರಿಸಿದ್ದು, ಈ ಸನಾತನ ಧರ್ಮನ್ನುಪದೇಶಿಸಿ, ಎಲ್ಲರನ್ನೂ ಧಾರ್ಮಿಕರಾಗಿ ಬಾಳಿಸುವುದಕ್ಕೇ. ಶ್ರೀ ರಾಮಾವತಾರವೂ, ಶ್ರೀ ಕೃಷ್ಣಾವತಾರವೂ, ಇತರ ಅವತಾರಗಳೂ, ಧರ್ಮಸ್ಥಿರ ನೆಲೆಗಾಗಿಯೇ.ಧರ್ಮವನ್ನು-ಉಳಿಸುವುದಕ್ಕಾಗಿಯೇ. ಎಂತಲೇ, ನಾವೆಲ್ಲರೂ, ಧಾರ್ಮಿಕರಾಗಿದ್ದು, ನಮ್ಮ ಬಾಳನ್ನು ನಡೆಸಿ, ಸದ್ಗತಿ ಪಡೆಯಬೇಕು.
ಅಧ್ಯಾಯ೭.
=======
ಧರ್ಮವೇ ಉತ್ತಮ ಮಾರ್ಗ
==================
ಪವಿತ್ರವಾದ ಈ ನಾಡು ಬಹಳ ಪ್ರಸಿದ್ಧಿಯಾದ ನಾಡು. ವಿಶ್ವದಲ್ಲಿ ಇತರ ಎಷ್ಟೇ ಧರ್ಮಗಳಿದ್ದರೂ, ಅವಕ್ಕಿಂತ ಬಹಳ ಹಿರಿದು ನಮ್ಮ ’ಸನಾತನ ಧರ್ಮ.” ಇಂತಹ ಪವಿತ್ರವಾದ ಭಾರತ ದೇಶದಲ್ಲಿ , ಇಷ್ಟು ಪ್ರಖ್ಯಾತ ಸನಾತನ ಧರ್ಮಕ್ಕೆ ಸೇರಿದ ವಂಶದಲ್ಲಿ ನಾವು ಜನಿಸಿದ್ದೇವೆ ಎಂಬುದು ಒಂದು ಹೆಮ್ಮೆಯ ಭಾಗ್ಯ
ಯಾವ ಸನಾತನ, ಧರ್ಮವನ್ನನುಸರಿಸಿ, ನಮ್ಮ ಹಿರಿಯರು ಪವಿತ್ರರಾದರೋ, ಅದೇ ಸನಾತನ ಧರ್ಮವನ್ನು ನಾವು ಅನುಷ್ಟಿಸಬೇಕಾದದ್ದು ನಮ್ಮ ಧರ್ಮ.. ಈ ಸನಾತನ ಧರ್ಮದ ಬಗ್ಗೆ, ಯಾರಿಗೂ, ಯಾವಾಗಲೂ, ಉಪೇಕ್ಷೆ ಇರಬಾರದು. ’ಅದನ್ನು ಮಾಡಿದರೆ ಏನು, ಮಾಡದಿದ್ದರೆ ಏನು, ಮಾಡಲೇಬೇಕೆ,
’ ಇದೇ, ’ಉಪೇಕ್ಷಾ’ ಭಾವನೆ.ಆ ಭಾವನೆ ವ್ಯಕ್ತಿಗೆ ಧರ್ಮದ ಬಗ್ಗೆ ಇರಕೂಡದು.. ಬೇರೆ ವಿಷಯದ ಬಗ್ಗೆ ಉಪೇಕ್ಷೆ ಇದ್ದರೂ, ಧರ್ಮದ ಬಗ್ಗೆ ಉಪೇಕ್ಷೆ ಮಹಾ ಪಾಪ-ತೊಂದರೆಗೆ ಕಾರಣವಾಗುವುದು.. ಮನುಷ್ಯ ಬಯಸುವ ’ಸುಖ’ ಧರ್ಮಾಚರಣೆಯಿಂದಲೇ ದೊರಕುವುದು. ಮನುಜರು ಬಯಸದ
ಮನುಷ್ಯ ಬಯಸದ ’ದುಃಖ, ಅಧರ್ಮದ ಪರಿಣಾಮ. ಹೀಗಿರುವಾಗ, ನಾವು ಬಯಸುವ ಸುಖವು, ಧರ್ಮಾಚರಣೆ ಇಲ್ಲದೆ, ಹೇಗೆ ಲಭ್ಯ,
ನಮಗೆ ಬೇಡವಾದ ’ದುಃಖ’ವನ್ನು ನೀಗಿಸಲು, ಅಧರ್ಮಾಚರಣೆಯನ್ನು ತಡೆಯಬೇಕಲ್ಲವೇ. ಬಾಳಿನಲ್ಲಿ ಇಂತಹ
ವಿಚಿತ್ರವಾದ ನಡವಳಿಕೆಯನ್ನು ಕಾಣುತ್ತೇವೆ. ’ತನಗೆ ಬೇಡವಾದ ವಿಷಯವನ್ನು ಶ್ರದ್ಧೆಯಿಂದ ಅನುಷ್ಟಿಸುತ್ತಾನೆ.
ತ್ತಾನೆ. ಬೇಕಾದ್ದನ್ನು ಅನುಷ್ಠಿಸುವುದಿಲ್ಲ. ಧರ್ಮಾಚರಣೆಯ ಫಲ, ’ಪುಣ್ಯ.’ ಅದನ್ನು ಯಾರು ಅನುಷ್ಠಿಸುವುದಿಲ್ಲ.
ಅಧರ್ಮದ ಫಲ, ಪಾಪ. ಅದನ್ನು ಎಲ್ಲರೂ ಅನುಷ್ಟಿಸುತ್ತಾರೆ. ಇದು ಓಂದು ವಿಚಿತ್ರ ನಡವಳಿಕೆ. ’ಎಷ್ಟೋ ಮಕ್ಕಳಿಗೆ
ಏಷ್ಟೋ ಮಕ್ಕಳಿಗೆ ಪಾಸಾಗಬೇಕೆಂಬ ಆಸೆ ಇರುತ್ತದೆ. ಆದರೆ ಓದುವುದಿಲ್ಲ. ಹಾಗಾದರೆ, ಪಾಸಾಗುವುದೆಂತು. ’ನಿರುತ್ತೀರ್ಣನಾಗುವನು.
ಹಾಗೆಯೇ,ಧರ್ಮಾಚರಣೆ ಇಲ್ಲದೆ ’ಸುಖ’ಎಲ್ಲಿ. ’ಅಧರ್ಮವನ್ನು ಆಚರಿಸುತ್ತಿದ್ದರೆ, ’ದುಃಖದ ಉಪಶಮನ ಹೇಗೆ’.
ಈ ಸತ್ಯವನ್ನು ನಾವು ಅರಿತುಕೊಳ್ಳಬೇಕು.
ಈಗ, ಧರ್ಮದ ಬಗ್ಗೆ, ಜನರು, ಹಲವು ರೀತಿಯಲ್ಲಿ ಮಾತನಾಡುತ್ತಾರೆ. ’ ಧರ್ಮಾಚರಣೆಗೆ ಸಮಯವಿಲ್ಲ. ಅದಕ್ಕೆ ಪೂಜೆ ಮಾದಬೇಕು. ಅದು ಮಾಡಬೇಕು. ಇದು ಮಾಡಬೇಕು. ಅದಕ್ಕೆಲ್ಲಾ ನಮಗೆ ವೇಳೆಯಿಲ್ಲ.; ನಮಗೆ ಇದನ್ನು ಏಕೆ ಹೇಳುವಿರಿ’ ಎಂದು ಗುರುಗಳನ್ನು ಪ್ರಶ್ನಿಸುತ್ತಾರೆ., ಇದನ್ನು ಗುರುಗಳು ಸುತರಾಂ ಒಪ್ಪುವುದಿಲ್ಲ.ಅವರಿಗೆ, ಪತ್ರಿಕೆ ವಾಚನ,ಟೀವಿ.ಅವಲೋಕನ,ರೇಡಿಯೋ, ಶ್ರವಣಕ್ಕೆ ವೇಳೆಯಿದೆ. ೧೦ ನಿಮಿಷ, ಸಂಧ್ಯಾವಂದನೆಗೆ, ಶಿವಪೂಜೆಗೆ, ವೇಳೆಯಿಲ್ಲ. ಇದು
ಆಶ್ಚರ್ಯದ ಸಂಗತಿ. ಇವರ ಮತ್ತೊಂದು ತರ್ಕ.’ ಮಾಡಿದರೆ ಸರಿಯಾಗಿ ಮಾಡಬೇಕು. ಆ ರೀತಿ ಮಾಡಲಾಗುವುದಿಲ್ಲ.
ಆದ್ದರಿಂದ ಬಿಡುವುದೇ ಒಳ್ಳೆಯದೆಂದು ನೆನೆದುಕೊಂಡಿದ್ದೇವೆಂದು ಹೇಳುತ್ತಾರೆ.
ಮಗ ಪರೀಕ್ಷೆಗೆ ಕಟ್ಟಿದ್ದಾನೆ. ಪರೀಕ್ಷಾ ಕೇಂದ್ರದಲ್ಲಿ, ಪ್ರಶ್ನಪತ್ರಿಕೆಯನ್ನು ನೋಡಿ,
ಭಯಗೊಂಡು, ಯಾವ ಪ್ರಶ್ನೆಗೂ, ಉತ್ತರಿಸಲಾಗದೆ, ಉತ್ತ್ತರ ಪತ್ರಿಕೆಯನ್ನು ಹಿಂದಿರುಗಿಸುತ್ತಾನೆಯೇ. ಇಲ್ಲ. ತಿಳಿದಷ್ಟು ಬರೆದು, ಉತ್ತೀರ್ಣನಾಗಲು,
೪೦ ಅಂಕಗಳು ಬಂದರೆ ಸಾಕೆಂದು ನಿರ್ಧರಿಸಿ, ಅಷ್ಟಕ್ಕೆ ಉತ್ತರ ಬರೆದು, ಉತ್ತರ ಪತ್ರಿಕೆಯನ್ನು ಕೊಡುತ್ತಾನೆ.
ಅಲ್ಲದೆ, ಇಷ್ಟು ಪ್ರಶ್ನೆಗಳಿಗೆ, ಉತ್ತರ ಬರೆಯಲಾಗುವುದಿಲ್ಲವೆಂದು ಖಾಲಿ ಹಾಳೆಯನ್ನಿತ್ತು, ಯಾರೂ, ಹಿಂದಿರುಗುವುದಿಲ್ಲ.
ಲೌಕಿಕ ವ್ಯವಹಾರದಲ್ಲೇ, ಇಂತಹ ವ್ಯವಸ್ಥೆಯಿರುವಾಗ, ಭಗವಂತ ಮಾಡಿರುವ ಧರ್ಮವ್ಯವಸ್ಥೆಯಲ್ಲಿ, ಈ, ಅವಕಾಶವಿಲ್ಲ್ಲವೇ.
ಭಗವದ್ಗೀತೆಯಲ್ಲಿ, ಶ್ರೀ ಕೃಷ್ಣನು, ’ಸ್ವಲ್ಪಮಪ್ಯಸ್ಯ ಧರ್ಮಸ್ಯ
ತ್ರಾಯತೋ, ಮಹತೋ,ಭಯಾತ್;ಎಂದನು.. ’ಧರ್ಮವನ್ನಾಶ್ರಯಿಸಬೇಕದದ್ದು ನಿಜವಾದರೂ, ಸಂಪೂರ್ಣವಾಗಚರಿಸಲು, ಸಾಧ್ಯವಾಗದಿದ್ದರೆ, ಯಥಾಶಕ್ತಿ ಆಚರಿಸಬಹುದು.
ಅಂತೆಯೇ,ಶ್ರೀ ಕೃಷ್ಣನು, ಮತ್ತೊಂದು ಕಡೆ, ’ ಆಚರಿಸಬೇಕಾದ ಧರ್ಮಧಲ್ಲಿ, ಸ್ವಲ್ಪ
ಕೊರತೆಯಿದ್ದರೂ, ’ಯಥಾಶಕ್ತಿ, ಆಚರಿಸಬಹುದು. ಹಾಗಿರುವಾಗ, ’ನಾನು, ಧರ್ಮಾಚರಣೆ ಮಾಡುವುದೇ ಇಲ್ಲ,ಸಂಪೂರ್ಣವಾಗಿ ಬಿಡುತ್ತೇನೆ ಎನ್ನುವುದು ಎಷ್ಟೊಂದು ಹಾಸ್ಯಾಸ್ಪದ.. ಅಂತಹ ಮಾತೇ, ನಮ್ಮ ವಾಕ್ಕಿಂದ ಬರಬಾರದು.
ನಮ್ಮಿಂದ ಸಾಧ್ಯವಾಗುವವರೆಗೂ, ಧರ್ಮವನ್ನಾಶ್ರಯಿಸಬೇಕು.
ಕೆಲವರು ಹೇಳುತ್ತಾರೆ.’ಗುರುಗಳೇ, ಈ ಶಾಸ್ತ್ರಗಳು, ಧರ್ಮಗಳು, ಹಳೆಯ ಕಾಲಕ್ಕೆ ಹೊಂದುತ್ತವೆ. ಈಗಿನ ಕಾಲಕ್ಕೆ,
ಹೊಂದುವಂತೆ, ಧರ್ಮ ಶಾಸ್ತ್ರವನ್ನು, ಬರೆದು ಕೊಡಿ. ಹಳೆಯ ಶಾಸ್ತ್ರಗಳು ನಮಗೆ ಹೊಂದುವಂತಿಲ್ಲ. ’ನೀವು
ಮಹಾತ್ಮರು. ಶಾರದಾ ಪೀಠವನಾಲಂಕರಿಸಿರುವವರು. ಆದ್ದರಿಂದ ನೀವು ಬರೆದು ಕೊಟ್ಟರೆ, ನಾವು ಪಾಲಿಸುತ್ತೇವೆ’ಎನ್ನುತ್ತಾರೆ..’ ಇದಕ್ಕೆ ಗುರುಗಳ ಉತ್ತರ, ’ಇಲ್ಲಿ ನೋಡಿ. ಧರ್ಮವೆಂಬುದು, ಒಂದೇ ರೀತಿಯಾಗಿರುವುದು. ಅದನ್ನು ಯಾವ ಕಾಲಕ್ಕೂ ಬದಲಿಸಲಾಗುವುದಿಲ್ಲ.
ಈಗಿರುವ ಧರ್ಮ ಶಾಸ್ತ್ರವು ಹಳೆಯ ಕಾಲಕ್ಕೆ ಹೊಂದುತ್ತದೆ. ಈಗಿನ ಕಾಲಕ್ಕಲ್ಲ’
ಎನ್ನುವುದು ಸರಿಯಲ್ಲ ಎಂಬುದೇ. ಒಂದು ವಿಷಯಕ್ಕೆ, ’ಹೀಗೆ ಮಾಡಬೇಕೆಂದು ಹೇಳಿ, ಹಾಗೆ ಮಾಡಲಾಗದಿದ್ದರೆ,
ಹೀಗೆ ಮಾಡಬಹುದು, ಎಂದು ಬೇರೊಂದು ಮಾರ್ಗವನ್ನೂ ಸೂಚಿಸುತ್ತದೆ.
’ಒಂದು ಉದಾಹರಣೆಯನ್ನು ಹೇಳಬಹುದು.’ ’ಸಂಧ್ಯಾವಂದನೆಯ ಬಗ್ಗೆ ಹೇಳುವಾಗ, ೧೦೦೦, ಇಲ್ಲ, ೧೦೮, ಇಲ್ಲ, ೧೦
ಜಪ ಮಾಡಿರಿ’ ಎನ್ನುತ್ತ್ತದೆ. ಆದರೆ, ಜನಗಳು, ಸಂಧ್ಯಾವಂದನೆಯನ್ನು, ಪೂರ್ತಿ ಬಿಟ್ಟು ಬಿಡುತ್ತೇವೆ. ಅದರಿಂದ
ನಮಗೆ ಕೆಡುಕಾಗದಂತೆ ಒಂದು ಧರ್ಮ ಶಾಸ್ತ್ರವನ್ನು ಬರೆಯಿರಿ.’ ಎನ್ನುತ್ತಾರೆ. ಅದನ್ನು ಬರೆಯಲು ನಮಗೆ
[ಗುರುಗಳಿಗೆ] ಸಾಧ್ಯವಿಲ್ಲ. ಶ್ರೀ ಭಗವತ್ಪಾದರು ಚತುರಾಮ್ನಾಯ’ ಪೀಠಗಳನ್ನು ಸ್ಥಾಪಿಸಿದ್ದು, ಧರ್ಮವನ್ನು ಕಾಪಾಡಬೇಕೆಂದೇ ಹೊರತು, ಜನಗಳು ಧರ್ಮವನ್ನು ಬಿಡುವುದಕ್ಕಲ್ಲ., . ಆದ್ದರಿಂದ, ನಾವು, ಯಾವ ರೀತಿಯಾದ ಕುತರ್ಕಕ್ಕೂ, ಅವಕಾಶ ಕೊಡದೆ, ಧರ್ಮಾಚರಣೆಯ ವಿಷಯದಲ್ಲಿ,
ಶಾಸ್ತ್ರದಲ್ಲಿ ಹೇಳೀರುವಂತೆ ’ ಯಥಾ ಶಕ್ತಿ; ಧರ್ಮವನ್ನಾಚರಿಸುವುದು, ಎಲ್ಲರಿಗೂ ಪರಮ ಶ್ರೇಯಸ್ಸಿನ ಸಾಧನ.
ಜನಗಳು ಬೇರೆ ವಿಧವಾದ ಧರ್ಮವನ್ನಾಚರಿಸುವುದು ಅಪ್ರಯೋಜಕ,
ಜಗತ್ತಿನಲ್ಲಿ ಮನುಷ್ಯನಾಗಿ ಹುಟ್ಟುವುದು ಮಹಾ ಪುಣ್ಯದ ಕೆಲಸ. ಅದನ್ನು ಸದುಪಯೋಗ
ಮಾಡಿಕೊಳ್ಳಬೇಕು. ಆಸ್ತಿಕತೆಯಿಲ್ಲ, ಧರ್ಮಾಚರಣೆಯಿಲ್ಲವೆಂದರೆ ಅಂತಹ ಬಾಳು ವ್ಯರ್ಥ.
ಪವಿತ್ರವಾದ ಭಾರತದಲ್ಲಿ ಪವಿತ್ರ ಮಾನವಜನ್ಮವನ್ನು ಗಳಿಸಿದ್ದರಿಂದ ಅದನ್ನು ಸಾರ್ಥಕ-
ಗೊಳಿಸಿಕೊಳ್ಳಬೇಕು. ಧರ್ಮ ರಕ್ಷಣೆಗೆ ಭಗವಂತನೇ ಅವತಾರವೆತ್ತಿದ್ದು ಅದರ ಹಿರಿಮೆ.
ಶ್ರೀ ರಾಮ, ಶ್ರೀ ಕೃಷ್ಣ, ಶ್ರೀ ಭಗವತ್ಪಾದರ ಅವತಾರಗಳು ಧರ್ಮ ರಕ್ಷಣೆಗಾಗಿಯೇ ಎನ್ನುವಾಗ ಧರ್ಮದ ಹಿರಿಮೆ ಅದೆಷ್ಟು. ನಮ್ಮ ಶಕ್ತಿಗೆ ತಕ್ಕಂತೆ ಧರ್ಮವನ್ನಾಚರಿಸುವುದು
ನಮ್ಮ ಕರ್ತವ್ಯ. ನಮ್ಮ ಹಿರಿಯರು ಇದೇ ಮಾರ್ಗವನ್ನನುಸರಿದರು, ಅದನ್ನು ಪಾಲಿಸುವುದೇ ನಮಗೂ ಶ್ರೇಯಸ್ಸು.ಭಗವತ್ಪಾದರು, ಮನುಷ್ಯನಿಗೆ, ’ನಿನಗೆ ಸಿಕ್ಕುವ ಸಮಯವನೆಲ್ಲಾ ಭಗವತ್
ಚಿಂತನೆಯಲ್ಲಿ ವ್ಯಯಿಸು ಎಂದರು.
ಚಿಂತನೆ, ಅವನ ನಾಮ ಸ್ಮರಣೆ, ಅವನ ಸೇವೆಯಲ್ಲೇ ಕಳೆದರೆ ವ್ಯರ್ಥ ಮಾತುಕಥೆಯಲ್ಲಿ ಸಮಯ ಕಳೆಯದೆ, ಭಗವತ್ ಸೇವೆಯಲ್ಲೇ ಕಳೆದರೆ ಎಷ್ತು ಚೆನ್ನಾಗಿರುತ್ತ್ತದೆ. ಅದೇ ವಿವೇಕದ ಹಾದಿ.
ಭಗವತ್ಪಾದರು, ;ಮಾನವಾ, ’ನಿನಗೆ ಸಿಕ್ಕುವ ಸಮಯವನ್ನೆಲ್ಲಾ ಭಗವತ್ ಚಿಂತನೆ, ನಾಮ-ಸ್ಮರಣೆ, ಸೇವೆಯಲ್ಲಿ ವ್ಯಯಿಸು. ಸಾಧ್ಯವಾದಷ್ಟೂ ಜನರಿಗೆ ಉಪಕಾರ ಮಾಡು, ತೊಂದರೆ ಮಾಡಬೇಡ, ಎಂದರು. ನಮಗೆ ತಿಳಿದೋ, ತಿಳಿಯದೆಯೋ, ಉಪಕಾರ ಮಾಡುತ್ತಲೇ ಇರುತ್ತೇವೆ. ಮತ್ತೊ-
ಬ್ಬರಿಗೆ ತೊಂದರೆ ಕೊಡುವುದು ಮಹಾಪಾಪ. ನಮ್ಮ ಮನಸಿನಲ್ಲಿ, ’ದಯೆ’ ಎಂಬುದು ಇರಬೇಕು.
ದಯೆ ಎಂದರೆ,; ಮತ್ತೊಬ್ಬರಿಗೆ ಸಹಾಯ ಮಾಡಬೇಕೆಂಬ ಮನಸ್ಸು;. ಮತ್ತೊಬ್ಬರು ಕಷ್ಟದಲ್ಲಿದ್ದಾ-
ರೆಂದರೆ ನೀಗಿಸಬೇಕೆಂದು ಮನುಷ್ಯನಿಗೆ ಇರುವ ಗುಣವೇ ದಯೆ. ಈ ಗುಣ ಮನುಷ್ಯನಿಗೆ ಬಹಳ
ಅವಶ್ಯಕ. ಅದು ಇಲ್ಲದವನು ರಾಕ್ಷಸ. ಅವರಿಗೆ ದಯವು ಸ್ವಲ್ಪವೂ ಇರುವುದಿಲ್ಲ.ಅವರೂ
ಯಾವಾಗಲೂ ಕ್ರೂರ ಸ್ವಭಾವದವರಾಗಿರುತ್ತಾರೆ. ಮತ್ತೊಬ್ಬರಿಗೆ ತೊಂದರೆ ಕೊಡುವದೇ ಅವರ
ಕೆಲಸ.
ನಾವು ಮತ್ತೊಬ್ಬರಿಗೆ ತೊಂದರೆ ಕೊಡುವ ಸ್ವಭಾವದವರಾಗಿದ್ದರೆ, ನಾವೂ ರಾಕ್ಷಸರಾಗಿಬಿಡುತ್ತೇವೆ. ಹಾಗಾಗಬಾರದು.
ನಮ್ಮ ಹೃದಯದಲ್ಲಿ ಎಂದೆಂದೂ ದಯೆ ತುಂಬಿರಬೇಕು. ದಯೆಯಿದ್ದವನು ಮತ್ತೊಬ್ಬರಿಗೆ ಉಪಕರಿಸುತ್ತಾನೆ. ಶ್ರೀ
ಭಗವತ್ಪಾದರು,’ ಸಾಧ್ಯವಾದಷ್ಟೂ, ಮತ್ತೊಬ್ಬರಿಗೆ ಉಪಕಾರವ ಮಾಡುವ ಸ್ಥಿತಿಯಲ್ಲಿರು’, ಎನ್ನುತ್ತಾರೆ. ’ನಾವು ಈ
ಎನ್ನುತ್ತಾರೆ. ನಾವು ಈ ಶರೀರವನ್ನು ಧರಿಸಿ ಬಂದಿದ್ದೇವೆ. ಇದನ್ನು ಬಿಟ್ಟು ಹೋಗುತ್ತೇವೆ. ಹೋಗುವಾಗ ಏನು ಕೊಂಡು ಹೋಗುತ್ತೇವೆ.
ಏನೂ ಇಲ್ಲ. ’ಬರುವಾಗ ಒಬ್ಬರೇ ಬಂದೆವು. ಹೋಗುವಾಗಲೂ ಒಬ್ಬರೇ ಹೋಗುತ್ತೇವೆ. ಆಗ ನಮ್ಮೊಡನೆ ಯಾರು ಬರುವರು.
ಯಾರೂ ಇಲ್ಲ. ನಮ್ಮ ಬಂಧುಗಳು ಯಾರೂ ಬರುವದಿಲ್ಲ. ಆಗ ನಮ್ಮೊಡನೆ ಬರುವುದು, ಧರ್ಮವೊಂದೇ. ಅದುವೇ,
ನಮ್ಮ ಮುಂದಿನ ಜನ್ಮದಲ್ಲಿ ಸುಖ ನೀಡುವುದು. ಆದ್ದರಿಂದ, ಮುಂದಿನ ಜನ್ಮದಲ್ಲಿ ಸುಖ ಬೇಕಾದರೆ ಧರ್ಮಾ-
ಚರಣೆ ಅಗತ್ಯ. ಅದನ್ನು ಆಶ್ರಯಿಸಬೇಕು. ಧರ್ಮಾಚರಣೆಯ ವಿಷಯದಲ್ಲಿ ಶ್ರೀ ಭಗವತ್ಪಾದರು,
ಧಾರಾಳವಾಗಿ, ಧರ್ಮವನ್ನಾಚರಿಸು. ಅದುವೇ ನಿನಗೆ ರಕ್ಷೆ. ಅದುವೇ ನಿನಗೆ ನಿಜ ಗೆಳೆಯ. ಈ ರೀತಿ,ನಿನಗೆ ದೊರೆತ ಸಮಯವನ್ನು
ಭಗವಂತನ ಸೇವೆಯಲ್ಲಿ ವಿನಿಯೋಗಿಸು. ಸಾಧ್ಯವಾದಷ್ಟೂ ಪರೋಪಕಾರಮಾಡು. ಯಾರಿಗೂ , ತೊಂದರೆ ಕೊಡದಿರು. ಈ ಧರ್ಮ-
ವನ್ನನುಸರಿಸುತ್ತಾ ಸತ್ಪುರುಷರ ಸಹವಾಸದಲ್ಲಿರು. ಅವರೇ ನಿನಗೆ ಸರಿದಾರಿಯನ್ನು ತೋರುತ್ತಾರೆ,; ಎನ್ನುತ್ತಾರೆ.
ಸತ್ಪುರುಷರೆಂದರೆ ಯಾರು. ’ಯಾರು ಮತ್ತೊಬ್ಬರಿಗೆ ತೊಂದರೆ ಮಾಡುವುದಿಲ್ಲವೋ, ಯಾರು ಎಲ್ಲರೊಡೆನೆಯೂ, ಸ್ನೇಹದಿಂದ
ನಡೆಯುತ್ತಾರೆಯೋ, ಯಾರು ಭಗವಂತನಲ್ಲಿ ಸ್ಥಿರವಾದ ಭಕ್ತಿಯಿಂದಿರುತ್ತಾರೆಯೋ, ಅವರೇ, ಸತ್ಪುರುಷರು,’
ಅಂತಹ ಸತ್ಪುರುಷರ ಸಹವಾಸ ಮಾಡಿದರೆ, ನಾವೂ ಅವರಂತೆ ಆಗಬಹುದು. ಮನುಷ್ಯನ ಸ್ವಭಾವ ಏನೆಂದರೆ,
ತಾನು ಯಾರ ಸಹವಾಸ ಮಾಡುತ್ತಾನೋ, ಅವರ ಸ್ವಭಾವವೇ ಇವನಿಗೂ ಬರುತ್ತದೆ. ’ದುಷ್ಟರ ಸಹವಾಸದಿಂದ ದುಷ್ಟ
ರಾಗುತ್ತಾರೆ. ಆದ್ದರಿಂದ, ನಾವು ಯಾವಾಗಲೂ, ಸತ್ಪುರುಷರ ಸಹವಾಸವನ್ನೇ ಮಾಡಬೇಕು. ಹೀಗಿದ್ದರೆ ಸುಖವಾಗಿರಬಹುದು.’ ಇದು ಶ್ರೀ ಭಗವತ್ಪಾದರ ಉಪದೇಶ. ಇಂತಹ ಧರ್ಮ ಮಾರ್ಗದಲ್ಲಿದ್ದರೆ, ಈ ಪವಿತ್ರ ಭಾರತ ಭೂಮಿಯಲ್ಲಿ ಜನಿಸಿದ್ದಕ್ಕೆ, ಈ ಸನಾತನ ಧರ್ಮಪರಂಪರೆಯಲ್ಲಿ ಬೆಳದಿದ್ದಕ್ಕೆ, ಅರ್ಥವಿರುತ್ತದೆ. ಇಲ್ಲದಿದ್ದರೆ, ನಮ್ಮ ಬಾಳು ಪ್ರಾಣಿಗಳಂತಾಗುತ್ತದೆ.
ಬಾಳು ಪ್ರಾಣಿಗಳಿಗೆ ಸಮನಾಗಿಬಿಡುತ್ತದೆ. ಹಾಗಾಗ ಕೂಡದು. ಈ ಜನ್ಮ ಸಾರ್ಥಕವಾಗಬೇಕು ಈ ಧರ್ಮಾಚರಣೆಯ
ವಿಷಯದಲ್ಲಿ ಯಾರು ಮಹಾತ್ಮರೋ, ಅವರನ್ನೇ, ನಾವು ಆದರ್ಶವಾಗಿಟ್ಟುಕೊಳ್ಳಬೇಕು. ’ ನಾವು ಧಾರ್ಮೀಕರಾದರೆ,
ಉತ್ತಮ ಮನುಷ್ಯರಾಗಬಹುದು. ನಾವು, ಆಗಲೇ ಈಶ್ವರನುಗ್ರಹಕ್ಕೆ ಪಾತ್ರರಾಗಬಹುದು. ನಾವು ಮುಂದಿನ ಜನ್ಮ-
ದಲ್ಲೂ ಧರ್ಮವನ್ನಾಚರಿಸಿ ಸುಖ ಪಡೆಯಬಹುದು.
ಅಧ್ಯಾಯ-೮
==========
ಬದುಕುವ ದಾರಿಗಳು
===================
ಮಹಾತ್ಮರು ’ತಮಗೆ ಯಾವುದು ಸಿಕ್ಕಬೆಕೆಂಬುದನ್ನು ಭಗವಂತನಿಂದ ನಿರ್ಣಯಿಸಲ್ಪಡುವುದೋ’
ಅದು ಸಿಕ್ಕಿದರೆ ಸಾಕು ಎಂದು ನಿರ್ಧರಿಸಿ ನೆಮ್ಮದಿಯಿಂದ ಇರುತ್ತಾರೆ. ’ಭಗವಂತನು ಏನು
ಕೊಟ್ಟರೂ ನಮಗೆ ಅದೇ ತೃಪ್ತಿ’ ಎಂದೆನ್ನುತ್ತಾರೆ ಅವರು. ಈ ವಿಷಯದಲ್ಲಿ ಶ್ರೀ ಕೃಷ್ನನು
ಶ್ರೀ ಭಗವದ್ಗೀತೆಯಲ್ಲಿ ಮುಖ್ಯ ಉಪದೇಶವನ್ನೀಯುತ್ತಾನೆ.
’ಯದ್ರುಚ್ಚಾಲಾಭ ಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ಸಮಃ ಸಿದ್ಧಾವಸಿದ್ಧೌಚ
ಕೃತ್ವಾಪಿ ನ ನಿಪತ್ಯತೇ.’
’ನನ್ನ ಕರ್ತವ್ಯ ನಾನು ಮಾಡುತ್ತೇನೆ.’ ಯಾವ ಫಲ ಸಿಕ್ಕರೂ ನಮಗೆ ಸಂತೋಷವೇ,’
ಈ ರೀತಿಯ ಮನೋಭಾವನೆ ಎಲ್ಲರಲ್ಲೂ ಇರಬೇಕು. ಹೀಗಿಲ್ಲದೆ,’ ಫಲ ಇಷ್ಟು ಬರಬೇಕು,
ಅಷ್ಟು ಬರಬೇಕು, ಎಂದು ನಿರೀಕ್ಷಿಸಿದರೆ ಯಾವ ಪ್ರಯೋಜನವಿಲ್ಲ. ಏಕೆಂದರೆ, ’ನಿರೀಕ್ಷಿಸುವು-
ದೆಲ್ಲಾ ನಡೆಯುವುದಿಲ್ಲ.’ ಆದ್ದರಿಂದಲೇ ಭಗವಂತನು,’ ಕೊಡುವುದರಲ್ಲೇ ಸಂತೋಷ-
ವಾಗಿರುವುದರ ಬಗ್ಗೆ’,ಹೇಳುತ್ತಾನೆ;
ಮುಂದಿನ ಉಪದೇಶ; ’ದ್ವಂದ್ವಾತೀತಃ
=================================
ಈ ವಿಷಯದ ಬಗ್ಗೆ, ಭಗವಂತ, ಹಲವು ಜಾಗಗಳಲ್ಲಿ ಹೇಳಿದ್ದಾನೆ. ಒಬ್ಬನಿಗೆ, ಸುಖ
ಬಂದರೂ, ದುಃಖ ಬಂದರೂ,ಓಂದೇ ರೀತಿಯಲ್ಲಿರಬೇಕು. ’ದುಖ ಬಂದರೆ ಅಳುತ್ತೇವೆ.’ ಒಂದೇ
ರೀತಿಯಲ್ಲಿರಬೇಕೆಂದರೆ, ’ಸುಖ ಬಂದಾಗಲೂ ಅಳಬೇಕೆ.’ ಹೀಗೆ, ವಿಪರೀತವಾಗಿ, ವಿಮರ್ಶಿಸ-
ಬಾರದು. ’ಸುಖ-ದುಃಖ ಎರಡರಲ್ಲೂ, ಮನಸ್ಸು ಚಂಚಲವಾಗಬಾರದೆಂಬುದೇ, ಭಗವಂತನ
ಉಪದೇಶದ ತಾತ್ಪರ್ಯ. ಹಲವರಿಗೆ, ’ಸುಖ ಬಂದರೆ, ಅಟ್ಟಕ್ಕೇರುತ್ತಾರೆ,’
ದುಃಖ ಬಂದರೆ ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತಾಗುತ್ತಾರೆ. ಇವೆರಡೂ ಭಾವನೆಯೂ ತಪ್ಪು. ಇವೆರಡು ಭಗವಂತನ ಪ್ರಸಾದವೆಂದು ನಿಶ್ಚಯಿಸಿ,ಅಧಿಕ ಸುಖ-ದುಃಖಗಳಿಂದ ಬಿಡುಗಡೆ ಹೊಂದಬೇಕು.
ಮನುಷ್ಯನ ಬಾಳಿನಲ್ಲಿ ಸುಖವೂ-ದುಃಖವೂ ಕೂಡಿಯೇ ಬರುತ್ತವೆ. ದುಃಖದಿಂದ ಒಬ್ಬನ ಮನಸ್ಸು
ಚಂಚಲವಾದರೆ, ಪರರ ಬಗ್ಗೆ ತಪ್ಪಾದ ಅಭಿಪ್ರಾಯಗಳು ಮೂಡಬಹುದು. ’ನನ್ನ ದುಃಖಕ್ಕೆ
ಅವನೇ ಕಾರಣ. ಅವನ ಮೇಲೆ ಹಗೆ ಹೇಗೆ ತೀರಿಸುವುದು’, ಎಂಬ ಭಾವನೆ ಬರುತ್ತದೆ. ಯೋಚಿಸಿದರೆ, ಹಗೆ ತೀರಿಸುವುದಕ್ಕೂ, ನಮ್ಮ ದುಃಖಕ್ಕೂ ಸಂಭಂದವೇ ಇಲ್ಲ..’ ದುಃಖ ನಮಗೆ ಸ್ವಾಭಾವಿಕವಾಗಿಯೇ ಬಂದದ್ದೆಂದು ಅರಿಯಬಹುದು.. ಇಂದು ನಮಗೆ ಬಂದಿರುವ ಸುಖ-ದುಃಖಗಳಿಗೆ, ಜನ್ಮಾಂತರದಲ್ಲಿ ಮಾಡಿದ ಪಾಪ-ಪುಣ್ಯಗಳೇ ಕಾರಣ.. ಇಂತಹ ಭಾವನೆ ನಮಗೆ ಬಂದುಬಿಟ್ಟರೆ, ಮುಂದಿನ ಜನ್ಮದಲ್ಲಿ ದುಃಖವೇ ಬರಬಾರದೆಂದು ಈ ಜನ್ಮದಲ್ಲಿ ಒಳ್ಳೆಯ ಕೆಲಸಗಳನ್ನೇ ಮಾಡುತ್ತೇವೆ.’
.
ಈಗಿರುವ ದುಃಖಕ್ಕೆ ಜನ್ಮಂತರ ಪಾಪವೇ ಕಾರಣ ಎಂದು ಹೇಗೆ ಹೇಳುವುದು. ನಮಗಿದ್ದ ಜನಾಂತರ
ಗಳೆಷ್ಟು .ಲೆಕ್ಕವಿಲ್ಲದಷ್ಟು ಜನ್ಮಗಳನ್ನನುಭವಿಸಿದ್ದೇವೆ.’ ನಮಗೆ ಎಷ್ತೋ, ಜನ್ಮ-
ಗಳಾದುವು. ಮುಂದೆ, ಇನ್ನೂ ಎಷ್ರೋ ಜನ್ಮಗಳು ಬರಲಿವೆ.
’ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವಚಾರ್ಜುನ ತಾನ್ಯಹಂ ವೇದ ಸರ್ವಾಣಿ
ನತ್ವಮ್ ವೇತ್ತ ಪರಂತಪ.’ನಿನ್ನ ಜನ್ಮಗಳ ಬಗ್ಗೆ ನಿನಗರಿವಿಲ್ಲ. ನನಗರಿವಿದೆ’
ಎನ್ನುತ್ತಾನೆ ಶ್ರೀ ಕೃಷ್ಣ.
ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯಗಳು ಸುಖವನ್ನೂ, ಪಾಪಗಳು ದುಃಖವನ್ನೂ ತರುತ್ತವೆ.
ಎಂತಲೇ, ನಮ್ಮ ದುಃಕಕ್ಕೆ ಪರರನ್ನು ಹೊಣೆ ಮಾಡುವುದು ತಪ್ಪು. ಕೆಲವರು, ’ನನಗೆ ಬಂದಿರುವ
ದುಃಖ ನೋಡಿದರೆ,’ ಭಗವಂತನೊಬ್ಬನಿದ್ದಾನೆ’, ಎಂದು ನಂಬುವುದಕ್ಕೆ ಮನ ಬರುವುದಿಲ್ಲ,
ಎನ್ನುತ್ತಾನೆ. ಈಗಿನ ನಮ್ಮ ದುಃಖಕ್ಕೆ ನಮ್ಮ ಪಾಪಕರ್ಮದ ಫಲವನ್ನನುಭವಿಸುತ್ತಿರುವಾಗ
ಭಗವಂತನ ಮೇಲೆ ತಪ್ಪು ಹೊರಿಸುವುದು ಸರ್ವಥಾ ನ್ಯಾಯವಲ್ಲ.
’ಒಬ್ಬನು ಬೆಂಕಿಯಲ್ಲಿ ಕೈ ಇಟ್ಟರೆ ಸುಡುತ್ತದೆ. ಆಗ ಆ ವ್ಯಕ್ತಿ,’ ನಾನೇನು ತಪ್ಪು ಮಾಡಿದೆ. ನನ್ನನ್ನು ಬೆಂಕಿ ಸುಡಬೇಕಾ’ ಎಂದು ಮತ್ತವರ ಬಳಿ ಹಲುಬಿದರೆ, ಏನು ಪ್ರಯೋಜನ. ಅದಾಗ-
ಬಾರದೆಂದರೆ ’ಬೆಂಕಿಯಲ್ಲಿ ಕೈ ಇಡಬಾರದು.’ ಆದ್ದರಿಂದ, ಈಗ ಕೆಟ್ಟ ಕೆಲಸಗಳನ್ನು ಮಾಡ-
ದಿದ್ದರೆ ’ಭವಿಷ್ಯ ದುಃಖಗಳನ್ನು ತಡೆಯಬಹುದು.
ದುಃಖ ಬಂದಾಗ ಅದಕ್ಕೆ ಜನ್ಮಾಂತರ ಕರ್ಮವೇ ಕಾರಣ ಎಂದು ಶ್ರೀ ಗುರುಗಳು ಹೇಳುವುದು
ಹೊಸದೇನಲ್ಲ. ಶ್ರೀ ರಾಮ, ಮಹಾವಿಷ್ಣುವಿನ ಅವತಾರವಾದರೂ, ಒಬ್ಬ ಮನುಜನಂತೆ ಬಾಳಿ
ತೋರಿದ್ದರಿಂದ, ಅರಣ್ಯ ಕಾಂಡದಲ್ಲಿ, ಲಕ್ಷ್ಮಣನೊಡನೆ, ’ಲಕ್ಷ್ಮಣಾ, ಹೋದ ಜನ್ಮದಲ್ಲಿ
ನಾನೇನು ಪಾಪವನ್ನು ಗೈದಿದ್ದೆನೋ, ರಾಜ್ಯವನ್ನು ತೊರೆದು, ಸಕಲ ಭೋಗಭಾಗ್ಯಗಳನ್ನೂ ತೊರೆದು,
ಬಂದರೂ, ವಿಧಿ ನಮ್ಮನ್ನು ಸುಖವಾಗಿರಲು ಬಿಡುತ್ತಿಲ್ಲ’.ಎಂದನಂತೆ. ಮತ್ತೊಂದು ಕಡೆ,ಜಾನಕಿಯೂ ಈ ರೀತಿಯೇ ಚಿಂತಿಸಿದಳು ಎನ್ನುತ್ತಾರೆ,. ’ನಾನು ಹೋದ ಜನ್ಮದಲ್ಲಿ ಆನಂದವಾಗಿದ್ದ ಯಾವ ದಂಪತಿಗಳನ್ನು ಬೇರ್ಪಡಿಸಿದೆನೋ, ಅದಕ್ಕೆ ನನಗೆ ಈ ದುಃಖ ಪ್ರಾಪ್ತವಾಗಿದೆ, ಇದಕ್ಕೆ ನನ್ನ ಪತಿಯನ್ನು ಆಕ್ಶೇಪಿಸುವುದಿಲ್ಲ.. ನನ್ನ ತಪ್ಪಿಗೆ, ನಾನು ದುಃಖವನ್ನನುಭವಿಸುತ್ತಿದೇನೆ, ಎಂದಳಂತೆ. ಹೀಗೆಯೇ, ಹಲವು ಮಹಿಳೆಯರು, ’ನನ್ನ ಪತಿಗೆ ಬುದ್ಧಿಯಿಲ್ಲ. ಯಾರಿಗೆತಾನೆ
ಬುದ್ಧಿ ಹೇಳುವುದು, ಎಂದು ಹಲುಬುತ್ತಾರೆ.’ ಎಂತಲೇ ಸುಖ-ದುಃಖಗಳನ್ನು ಚಂಚಲತೆಯಿಲ್ಲದೆ
ಸಮನಾಗಿ ಸ್ವೀಕರಿಸುವುದನ್ನೇ, ಭಗವಂತ ’ದ್ವಂದ್ವಾತೀತಃ’ ಎನ್ನುತ್ತಾನೆ.
ಮುಂದಿನದು;’ವಿಮತ್ಸರಃ’ ಎಂಬುದು.
ಎಂದರೆ, ಮಾತ್ಸರ್ಯರಹಿತನಾಗಿರುವುದು. ’ನಮಗಿಂತ ಯಾರಾದರೂ ಅಧಿಕ ವಿದ್ಯಾವಂತನೋ, ಹಣವಂ
ತನಾಗಿದ್ದರೆ, ಅವನನ್ನು ಕಂಡು ಮತ್ಸರ ಪಡುವುದು. ’ಅವನೇನು ಆಷ್ಟು ಓದಿದವನಾ, ನನ್ನ ಬಳಿ
ಬರಲಿ. ಒಂದು ಕೈ ನೋಡುತ್ತೇನೆ’ ಎನ್ನುತ್ತಾನೆ. ಅವನು ಎಸ್ಟು ಓದಿದರೆ ನಮಗೇನು.’ ಅವನಂತೆ,
ನಾವೂ ಮೇಲೆಬರಲು ಪ್ರಯತ್ನಿಸಬೇಕು. ಅಸೂಯೆಯಿಂದ ನಮ್ಮ ವಿದ್ಯೆ ಹೆಚ್ಚಾಗುವುದಿಲ್ಲ.ಅವನ ಓದೂ
ಕಡಿಮೆಯಾಗುವುದಿಲ್ಲ.’ ಅಧಿಕ ಹಣವಂತನಾಗಿದ್ದರೆ, ಅವನು ಅನ್ಯಾಯವಾಗಿ ಹಣ ಸಂಪಾದಿಸಿದ್ದಾನೆ. ಅದಕ್ಕೇ ದಾನ ಮಾಡುತ್ತಿದ್ದಾನೆ’ ಎನ್ನುವನು. ತಾನು ಯಾವ ಸತ್ಕಾರ್ಯಗಳನ್ನೂ
ಮಾಡಲು ಪ್ರಯತ್ನಿಸುವುದಿಲ್ಲ.
ಎಂತಲೇ, ನಮ್ಮ ಸಂತೋಷವನ್ನೂ, ಅಭಿನಂದನೆಯನ್ನು, ಮತ್ತವರಿಗೆ ತಿಳಿಸಬೇಕೇ ಹೊರತು,
ನಮ್ಮ ಕೀಳರಿಮೆಯನ್ನು ಪ್ರಕಟಿಸುವುದರಿಂದ ಲಾಭವೇನೂ ಇಲ್ಲ.
ಯೋಗಸೂತ್ರದ ಸೂಕ್ತ;’ಮೈತ್ರಿ-ಕರುಣಾ-ಮುದಿಕೋಪಾಕ್ಷಾಣಾಂ-ಸುಖ-ದುಃಖ ವಿಶೇಷಾಣಾಂ
ಪರವನಾದಚಿತ್ತ ಪ್ರಸಾದನಂ’
ಒಬ್ಬನು ಸುಖವಾಗಿದ್ದರೆ ಅವನೊಡನೆ ಸ್ನೇಹಭಾವದಿಂದಿರಿ.ಅಸೂಯೆ ಪಡಬೇಡಿ. ಅವನ ಬಳಿ,
ಪರಮ ಸಂತೋಷ, ನೀವು ಇನ್ನೂ ಮೇಲೆ, ಮೇಲೆ ವೃದ್ಧಿಯಾಗಿ’ ಎಂದು ಹಾರೈಸಬೇಕು. ಒಬ್ಬನು,
ಕಷ್ಟದಲ್ಲಿದ್ದರೆ, ’ಅವನು ಚೆನ್ನಾಗಿ ಅನುಭವಿಸಲಿ ಎನ್ನಬಾರದು. ದಯೆ ತೋರಿಸಿ.ಏಕೆಂದರೆ,
ನಮಗೂ ಮುಂದೊಮ್ಮೆ ಕಷ್ಟ ಬರಬಹುದು. ಆಗ ಮತ್ತೊಬ್ಬರ ಸಹಾಯ ಅವಶ್ಯವಾಗಬಹುದು.
ಈ ದಿನ ಒಬ್ಬನಿಗೆ ನೆರವಾದರೆ, ನಾಳೆ ನಮಗೆ ನೆರವಿನ ಹಸ್ತ ಬರುತ್ತದೆ. ಎಂತಲೇ, ಮತ್ತೊ-
ಬ್ಬರಿಗೆ ಕಷ್ಟ ಬಂದಾಗ, ನೆರವೀಯಬೇಕು. ಮತ್ತೊಬ್ಬನ ಕಷ್ಟ ನೀಗಿಸಲು ನೆರವಾಗಲು
ಆಗದಿದ್ದರೆ, ಅವನ ಕಷ್ಟ ನಿವಾರಣೆಗೆ, ಭಗವಂತನಲ್ಲಿ ಪ್ರಾರ್ಥಿಸಬಹುದು.
ಭಗವದ್ಗೀತೆಯಲ್ಲಿ, ದೈವೀ ಸಂಪತ್ ಅಥವಾ ದೈವೀ ಗುಣಗಳ ಬಗ್ಗೆ ಶ್ರೀ ಕೃಶ್ಣ
ತಿಳಿಸುತ್ತಾನೆ.
’ದಯಾ ಭೂತೇಷ್ವಲೋಲುಪ್ತಂ ಮಾರ್ದವಂ ಹ್ರೀರಚಾಪಲಂ’
’ದಯೆ.ಶೌಚ ಇವು ದೈವೀಕ ಗುಣಗಳು. ನಾವು ಆಸುರೀ ಗುಣಗಳನ್ನು ಹೊಂದಿ ರಾಕ್ಶಸರಾಗ-
ಬಾರದು. ಧರ್ಮಕಾರ್ಯಗಳನ್ನು ಮಾಡುವವರಿಗೆ, ನಾವು ಸಂತೋಷವನ್ನು ಪ್ರಕಟಿಸಬೇಕು. ಅವರ
ಕರ್ತವ್ಯದಲ್ಲಿ ಲೋಪ ಹುಡುಕಬಾರದು. ಇನ್ನೂ ಹೆಚ್ಚು ಧರ್ಮ ಮಾಡಲು ಪ್ರೇರೇಪಿಸಬೇಕು.
ಪಾಪ ಮಾಡುವವರನ್ನು ನಿಂದಿಸದಿರಿ.ಅವರಿಗೆ ಸದುಪದೇಶ ನೀಡಿರಿ. ಹಾಗೆಯೂ, ಬದಲಾಗ-
ದಿದ್ದರೆ, ಅವರನ್ನು ವರ್ಜಿಸಿ. ನಿಂದಿಸಬೇಡಿ.
’ಸಮತ್ರೀ, ಕರುಣಾ,ಉಪೇಕ್ಷಾ;ಸುಖದಿಂದಿರುವವನೊಂದಿಗೆ ’ಮೈತ್ರಿ’, ಕಷ್ಟದಲ್ಲಿರುವವ-
ನೊಂದಿಗೆ, ಕರುಣೆ, ಪುಣ್ಯಶಾಲಿಯ ಬಳಿ ಸಂತೋಷ, [ಮುದಿತಾ, ಪಾಪ ಮಾಡುವನ ವಿಶಯದಲ್ಲಿ
ಉಪೇಕ್ಷೆ[ಈ ಗುಣಗಳು ಇರುವುದು, ಮುಖ್ಯವಾದದ್ದು. ಹೀಗಿದ್ದರೆ, ಮನ ಹರ್ಷ-
ವಾಗಿರುತ್ತದೆ. ಅದನ್ನು ಬಿಟ್ಟು, ಪ್ರಾಣಿಗಳಂತೆ ಬದುಕಿದ್ದರೆ ಪ್ರಯೋಜನವೇನೂ ಇಲ್ಲ.
’ಯದ್ರುಚ್ಚಾಲಾಭ ಸಂತುಷ್ಟೋ ದ್ವಂದ್ವಾತೀತೊ ವಿಮತ್ಸರಃ’
ಮೇಲೆ ಭಗವಂತ ಹೇಳಿದ ಮೂರು ಗುಣಗಳನ್ನು, ಎಂದು, ೧.ದೊರಕಿರುವದರಲ್ಲಿ ತೃಪ್ತಿ ಪಡುವುದು, ಸುಖ-ದುಃಖಗಳಲ್ಲಿ ಸಮತ್ವ, ಮತ್ತು, ಅಸೂಯೆಪಡದಿರುವುದು, ಇವನ್ನು ನಾವು
ಬಾಳಿನಲ್ಲಿ ಅನುಸರಿಸಿದರೆ, ನಮ್ಮ ಜೀವನ ಪವಿತ್ರವಾಗುತ್ತದೆ. ಇಂತಹ ಜೀವನ ಎಲ್ಲರೂ ನಡೇಸಲು ಭಗವಂತ ಅನುಗ್ರಹಿಸಲೆಂದು ಶ್ರೀ ಗುರುಗಳು ಪ್ರಾರ್ಠಿಸುತ್ತಾರೆ.
ಅಧ್ಯಾಯ-೯.
==========
ಪರೋಪಕಾರದ ಹಿರಿಮೆ.
=====================
ವಿಶ್ವದಲ್ಲಿ ನಾವು ಹಲವು ವಸ್ತುಗಳನ್ನು ನೋಡುತ್ತೇವೆ. ಒಂದಕ್ಕಿಂದ ಮತ್ತೊಂದು ಹೊಸಸದಾಗಿಯೂ, ಉತ್ತಮವಾಗಿಯೂ,
ಕಾಣುತ್ತದೆ. ಈ ಸ್ಥಿತಿಯಲ್ಲಿ, ’ಯಾವ ವಸ್ತುವು ಮಿಕ್ಕ ವಸ್ತುವಿಗಳಿಗಿಂತ ಉತ್ತಮವಾದದ್ದೂ, ಶ್ರೇಷ್ಟವಾದದ್ದೂ,ಅಗಿದೆ,’
ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಶ್ನೆಗಳಿಗೆ, ಉತ್ತರ ಒಂದೇ ರೀತಿಯಗಿರುವುದರಿಂದ., ಹಲವು ಜನರು ಹಲವು ವಿಧವಾಗಿ ಉತ್ತರಿಸುತ್ತಾರೆ.. ಅಧಿಕವಾದ ಜನರು,’ ಹಣವೇ ಉತ್ತ್ತಮವಾದದ್ದು. ಹಣವಿಲ್ಲದೆ, ಏನನ್ನೂ, ಸಾಧಿಸಲಾಗುವುದಿಲ್ಲ. ಎನ್ನುತ್ತಾರೆ. ಆ ಹಣ ಮಾತ್ರ ಇದ್ದರೆ,’ ಏನು ಬೇಕದರೂ, ಸಾಧಿಸುತ್ತೇನೆ, ಎಂದು ಉತ್ತರಿಸುತ್ತಾರೆ.’
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ ಸ ಪಂಡಿತಃ ಗುಣವಾನ್ ಗುಣಙ್ಯಃ ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತೇ. ಎಂದು ಒಂದು ಕಡೆ ಹೇಳಲಾಗಿದೆ.
’ಒಬ್ಬನು ಸುಂದರನಾಗಿರದಿದ್ದರೂ, ಅವನಲ್ಲಿ ಹಣವಿದ್ದರೆ ಜನರು ಅವನನ್ನು ಮನ್ಮಥನೆಂದು ವರ್ಣಿಸುತ್ತಾರೆ.
ಅವನು ಕೆಳಜಾತಿಯವನಾಗಿದ್ದರೂ ಅವನನ್ನುಉತ್ತಮಕುಲದವನೆನ್ನುತ್ತಾರೆ. ಅವನಿಗೆ ಸಹಿ ಮಾಡಲು ಬರದ ಹೆಬ್ಬೆಟ್ಟನಾದರೂ,ಅಜ್ಞಾನಿಯಾದರೂ, ದೊಡ್ಡ ಪಂಡಿತನೆಂದು ಹೊಗಳುತ್ತಾರೆ.. ಸಂಗೀತದ ಗಂಧವೇ ಇಲ್ಲದವನನ್ನು ಮಹಾ ರಸಿಕನೆನ್ನುತ್ತಾರೆ,.’ ಈ ಹೊಗಳಿಕೆಗೆ ಕಾರಣ, ಅವನಲ್ಲಿ ಹಣವಿರಿವುದೇ. ಹೀಗೆ, ’ಜಗದಲ್ಲಿ ಹಣವೇ ಹಿರಿದೆಂದು ಕೆಲ ಜನರು ಭಾವಿಸುತ್ತಾರೆ.’
ಆದ್ದರಿಂದ, ಸ್ವಲ್ಪ ಯೋಚಿಸಿ ನೋಡಿದರೆ, ಈ ರೀತಿಯ ಹಾರಾಟ ಸರಿಯಲ್ಲವೆನಿಸುತ್ತದೆ. ಏಕೆಂದರೆ, ’ಹಣ ಒಂದೇ ಎಷ್ಟು ದಿನ ಸ್ಠಿರವಾಗಿರುತ್ತದೆ’.. ಒಬ್ಬನು, ಎಷ್ತೇ, ದೊದ್ದ ಅರಸನಾಗಿದ್ದರೂ, ಕೆಲವೇ ದಿನಗಳಲ್ಲಿ, ಅವನು ಬಿಕ್ಷುಕನಾಗಿ ಬಿಕ್ಷಾಪಾತ್ರೆಯೊಂದಿಗೆ ಬಿಕ್ಷೆ ಬೇಡಬಹುದು.
’ ಪ್ರಾಥರ್ಯ ಏವ ಜಗದೀತಲ ಚಕ್ರವರ್ತಿ ಸಾಯಂ ಸ ಏವ ವಿಪಿನೇ ಜತಿಲಸ್ತಪಸ್ವಿ” ಎಂದು ಹೇಳಲ್ಪಟ್ಟಿದೆ.
ಎಂದರೆ,’ ಹಗಲಿನಲ್ಲಿ ಚಕ್ರವರ್ತಿಯಾಗಿದ್ದ ವ್ಯಕ್ತಿಯೊಬ್ಬನು ಸಂಜೆಯಲ್ಲಿ ವನದಲ್ಲಿ ಸಂನ್ಯಾಸಿಯಾಗಬಹುದು’ ಎಂಬುದೇ ಇದರ ಅರ್ಥ.. ಹಣವನ್ನೇ ನಂಬಿದ್ದರೆ, ನಾವು ಮೂರ್ಖರಾಗಿರುತ್ತೇವೆ..
’ಅಧಿಕಾರವೇ’, ಮತ್ತ ವಸ್ತುಗಳಿಗೆ ಹೋಲಿಸಿದರೆ, ಉತ್ತಮವಾದ ವಸ್ತು’ ಎನ್ನುತ್ತೇವೆ. ಏಕೆಂದರೆ,ಅಧಿಕಾರವಿದ್ದರೆ,ಏನನ್ನಾದರೂ ಸಾಧಿಸಬಹುದು, ಎಂಬ ನಂಬಿಕೆ. ’ಅಧಿಕಾರವಿದ್ದರೆ, ಏನು ಬೇಕಾದರೂ, , ಮನಸ್ಸಿನಲ್ಲಿ ತೋರಿದ್ದನ್ನೆಲ್ಲಾ ಸಾಧಿಸಬಹುದು, ಎಂಬುದರಿಂದ
ಮನಸಿನಲ್ಲಿ ತೋರಿದ್ದನ್ನೆಲ್ಲಾ, ಮಾಡಿಬಿಡಬಹುದು, ಎಂಬ ಈ ರೀತಿಯ ಆಸೆಯು,’ ಅಧಿಕಾರದ ಆಸೆ’ ”’ಇರುವವರ ಬಳಿ ನಾವು ನೋಡುತ್ತೇವೆ.. ಆದರೆ, ಸಿಕ್ಕಿದ ಅಧಿಕಾರ ಕೆಲವೇ ದಿನಗಳು, ಮಾತ್ರ ಇರುತ್ತದೆ. ಕೆಲವರಿಗೆ ಅದು, ಐದು ವರ್ಷಗಳು ಮಾತ್ರ ಇರುತ್ತದೆ.
ನಂತರ ಯಾವುದೇ ಅಧಿಕಾರವಿರುವುದಿಲ್ಲ.ಅಲ್ಪ ಅಧಿಕಾರವೂ, ಕೆಲ ದಿನಗಳೇ ನಡೆಯುತ್ತವೆ. ಎಂತಲೇ, ಅಧಿಕಾರದಲ್ಲಿ ಅಂತಹ ವಿಶೇಷವೇನೂ ಇಲ್ಲ.
ಹೀಗೆ, ಯಾವುದು ಉತ್ತಮವಾದದ್ದು, ಎಂದು ನೆನೆದರೂ, ಹಾಗಿರಿವುದೇ ಇಲ್ಲ. ಉದಾಹರಣೆಗೆ, ಒಬ್ಬನು, ’ಟೇಪ್ ರಿಕಾರ್ಡರ್’ಕೊಂಡುಕೊಳ್ಳುತ್ತಾನೆ.. ಅದು ಕೆಳಗೆ ಬಿದ್ದು ಒಡೆದರೆ, ಕೊಂಡ ಉದ್ದೇಶವೇ ನಿಷ್ಫಲವಾಗುತ್ತದೆ. ’ಯಾವುದು ಉತ್ತಮ ವಸ್ತು ಎಂಬುದು’ ಈಗಲೂ, ಪ್ರಶ್ನೆಯಾಗಿದೆ. ಈ ಪ್ರಶ್ನೆಯನ್ನು, ಭಗವಂತ ತಾನೇ, ಕೇಳಿಕೊಂಡಾಗ, ಸಿಕ್ಕಿದ ಉತ್ತರ ’ಪರೋಪಕಾರವೇ ಉತ್ತಮ ವಸ್ತುವೆಂದು.’
’ಭಗವಂತನಿಗೆ ಯಾವ ಕರ್ತವ್ಯವಾಗಲಿ, ಯಾವುದನ್ನಾದರೂ, ಹೊಂದಬೇಕೆಂಬುದಾಗಲೀ ಇಲ್ಲ.’ ಕಾರಣ,ಅವನು ’ಪೂರ್ಣ, ಪರಿಪೂಣ.’.’ಭಗವಂತನೇ ಹೇಳಿದ್ದಾನೆ.
’ನಮೇ ಪಾರ್ಥಾಸ್ತಿ ಕರ್ತವ್ಯಃ ತ್ರಿಷುಲೋಕೇಷು ಕಿಂಚನ ತನವಾಪ್ತಮವಾಪ್ತವ್ಯಂ’
’ಮೂರು ಲೋಕಗಳಲ್ಲಿಯೂ, ನಾನು ಮಾಡಬೇಕಾದ ಕರ್ತವ್ಯವೇನೂ ಇಲ್ಲ. ಹೊಂದಬೇಕ್ದಾದ್ದು ಏನೂ ಇಲ್ಲ.’ ಹೊಂದಬೇಡವಾದದ್ದೂ ಏನೂ ಇಲ್ಲ.
.’ ಹೀಗಿರಲು, ಭಗವಂತ, ’ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ’ಪರಶುರಾಮ, ರಾಮ, ಅವತಾರವನ್ನೇಕೆ ಎತ್ತಿದರು.. ’ಮತ್ತೊಬ್ಬರಿಗೆ ಸಹಾಯ ಮಾಡಲೆಂದೇ.’ ರಾಕ್ಷಸರು, ಬಹಳ ತೊಂದರೆ ಕೊಡುತ್ತಿದುದರಿಂದ ಜನಗಳಿಗೆ ಬಹಳ ತೊಂದರೆಯಾಯಿತು.. ಸ್ವಾಮಿಯು, ’ ನಾನು ನಿರ್ವಿಕಲ್ಪ ಸಮಾಧಿಯಲ್ಲಿರಲೋ, ಜನರನ್ನು ರಕ್ಷಿಸಲು ತೆರಳಲೋ,ಎಂದು ತರಾಸಿನಲ್ಲಿ ಒಂದು ಕಡೆ,ಕೈವಲ್ಯವನ್ನೂ, ಮತ್ತೊಂದು ಕಡೆ ಪರೋಪಕಾರವನ್ನೂ ಇಟ್ಟಾಗ,’ ಪರೋಪಕಾರವೇ ಅಧಿಕ ತೂಕವುಳ್ಳದೆಂದು’ ಅದು ತೋರಿತು.
ಪರೋಪಕೃತಿ ಕೈವಲ್ಯೇ ತೋಲಯಿತ್ವಾ ಜನಾರ್ಧನಃ ಕುರ್ವೀಮುಪಕೃತಿಂ ಮಥ್ವಾಃವದಾರನ್ ದಶಾಗ್ರಹೀತ್’
’ಕೈವಲ್ಯವನ್ನೂ, ಫರೋಪಕಾರವನ್ನೂ ತಾಳೆ ನೋಡಿದ ಪರಮಾತ್ಮ ಪರೋಪಕಾರವೇ ಅಧಿಕ ತೂಕದ್ದೆಂದು ನಿರ್ಧರಿಸಿ ದಶಾವತಾರಗಳನ್ನೆತ್ತಿದನು.. ಶ್ರೀ ರಾಮಾವತಾರದಲ್ಲಿ, ಶ್ರೀರಾಮನು ಅನುಭವಿಸಿದ ಕಷ್ಟಗಳೆಷ್ಟು.
ದಶರಥ ಸುತನಾದ ಅವನು, ಪಟ್ಟಾಭಿಷೇಕಕ್ಕೆ ಬದಲು ಕಾಡಿಗೆ ಹೋಗಬೇಕಾಯಿತು. ಪತ್ನಿ-ಸೋದರನೊಡನೆ ವನಕ್ಕೆ ತೆರಳಿ, ನೆಮ್ಮದಿಯ ಜೀವನ ದೊರಕಿದ್ದರೆ ಸಹಿಸಬಹುದು.. ಹಾಗಾಗಲಿಲ್ಲ. ಮೊದಲು ಅಸುರರ ತೊಂದರೆ.
ಸ್ವಲ್ಪ ಕಾಲದ ನಂತರ ಜಾನಕಿ ಅಪಹರಿಸಲ್ಪಟ್ಟಳು. ಇದೆಲ್ಲ ದುಃಖವನ್ನೂ ಶ್ರೀರಾಮನು ಪರರಿಗಾಗನುಭವಿಸಿದನು.. ಇಷ್ಟು ಕಷ್ಟಗಳನ್ನು ಶ್ರೀರಾಮನು ಸ್ವೀಕರಿಸದಿದ್ದರೆ ರಾವಣ ವಧೆಯಾಗುತ್ತಿರಲಿಲ್ಲ. ಜನಗಳಿಗೆ ಸಂತೋಷ ಸಿಗುತ್ತಿರಲಿಲ್ಲ.. ಮಹರ್ಷಿಗಳು ತಡೆಯಿಲ್ಲದೆ ಯಙ್ಯಗಳನ್ನು ಮಾಡಲಾಗುತ್ತಿರಲಿಲ್ಲ. ಮಹಿಳೆಯರು ಭಯವಿಲ್ಲದೆ ಸಂಚರಿಸಲಾಗುತ್ತಿರಲಿಲ್ಲ.. ಇದರಿಂದ ಮಹರ್ಷಿಗಳು ತಡೆಯಿಲ್ಲದೆ ಯಜ್ಞ್ಯ ಮಾಡುವುದಕ್ಕೂ, ಮಹಿಳೆಯರು ನಿರ್ಭಯವಾಗಿ ಸಂಚರಿಸುವುದಕ್ಕೂ, ಸ್ವತಂತ್ರವಾಗಿ ದೇಗುಲಕ್ಕೆ ತೆರಳುವುದಕ್ಕೂ, ಸಾಧ್ಯವಾಯಿತು. ’ಇಷ್ಟು ಕಷ್ಟಗಳನ್ನು ಶ್ರೀರಾಮ ಅನುಭವಿಸಿದ್ದು,ಪರೋಪಕಾರ ಮಾಡುವುದಕ್ಕಾಗಿ’ ಎನ್ನಬಹುದು.
ಶ್ರೀ ರಾಮಚರಿತ್ರೆಯಿಂದ ತಿಳಿಯುವ ನೀತಿಯೇನು. ’ಪರೋಪಕಾರಕ್ಕಿಂತ ಮಿಗಿಲಾದ ಧರ್ಮ ಬೇರೇನೂ ಇಲ್ಲ ಎಂದು ನಮ್ಮ ಬಾಳಿನಲ್ಲೂ ನಾವು ಅರಿತುಕೊಳ್ಳಬೇಕು.. ಮತ್ತೊಬ್ಬನು ಪರೋಪಕಾರ ಮಾಡುತ್ತಿರುವಾಗ ನಮ್ಮಿಂದಾದ ಉಪಕಾರ ಮಾಡಿದರೆ ಅದೇ ಹಿರಿಯ ಧರ್ಮ.. ಅಂತೆಯೇ, ಮತ್ತೊಬ್ಬರ ದುಃಖವನ್ನು ನೀಗಿಸುವದರಲ್ಲಿ, ನಾವು ಒಂದು ಸಾಧನವಾದರೆ ಅದುವೇ ಧರ್ಮವಾಗುತ್ತದೆ.. ಪರೋಪಕಾರಕ್ಕಿಂತ ಹಿರಿಯ ಧರ್ಮವಿಲ್ಲ. ಅದಕ್ಕೇ, ನಮ್ಮ ಹಿರಿಯರು ಪರೋಪಕಾರಕ್ಕೆ ಅಷ್ಟು ಮಹತ್ವವನ್ನಿತರು.
.
ಶ್ರೀ ಭಗವತ್ಪಾದರು ಹಲವು ಕಷ್ಟಗಳನ್ನನುಭವಿಸಿದರು. ಅವರ ೩೨ ವರ್ಷದಲ್ಲೇ ಭಾರತವನ್ನು ಮೂರು ಬಾರಿ ಸಂಚರಿಸಿದರು.,ಈಗಿನಂತೆ, ರೈಲುಗಳೋ, ವಾಹನಗಳೋ, ವಿಮಾನಗಳೋ ಇಲ್ಲದ್ದರಿಂದ ನಡೆದೇ ಹೋಗಬೇಕಾಯಿತು.
ಆದರೂ, ನಾಡಿನ ಮೂಲೆ-ಮೂಲೆಗಳಲ್ಲಿಯೂ, ಪಾದಚಾರಿಯಾಗಿಯೇ ಸಂಚರಿಸಿ, ವಾದಗಳಲ್ಲಿ, ಪಂಡಿತರನ್ನು ಗೆದ್ದು ಸನಾತನ ಧರ್ಮದ ತಿರುಳನ್ನರುಹಿ, ಉಪದೇಶಿಸಿದರು. ಮತ್ತವರಿಗೆ ನೆರವಾಗಬೇಕೆಂಬುದೇ ಅವರ ಉದ್ದೇಶವಾಗಿದ್ದುದರಿಂದ, ಅವರನ್ನು ಆ ರೀತಿ ನಡೆಯಲು ಪ್ರೆರೇಪಿಸಿತು. ಹಾಗಿಲ್ಲದಿದ್ದರೆ, ಅವರು, ಯಾವ ಚಿಂತೆಯೂ ಇಲ್ಲದೇ, ಆತ್ಮ-ನಿಷ್ಠೆಯಲ್ಲಿಯೇ ಇರಬಹುದಾಗಿತ್ತು.
ಪರೋಪಕೃತಿ ಶೂನ್ಯಸ್ಯ ಧಿಗ್ ಮನುಷ್ಯಸ್ಯ ಜೀವಿತಂ ಎಂದು ಒಂದು ಕಡೆ ಹೇಳಲಾಗಿದೆ.
’ಮತ್ತೊಬ್ಬನಿಗೆ ಉಪಕರಿಸದ ಮನುಜನ ಬಾಳು ವ್ಯರ್ಥ’.ಎಂದು. ’ಯಾಕಿಷ್ಟು ನಿರ್ಧಾರವಾಗಿ ಈ ವಾಕ್ಯ ಹೇಳಲ್ಪಟ್ಟಿದೆ’.
’.
ಬದುಕಿದ್ದಾಗಲೂ ಸರಿ, ಸತ್ತನಂತರವೂ ಸರಿ, ಉಪಕಾರ ಮಾಡದವನ ಬಾಳು ಪ್ರಾಣಿಗಳಿಗಿಂತ ಹೀನ.
’ಜೀವಂತು ಮಶವೋ ಯೇಷಾಂ ಚರ್ಮಾಪ್ಯುಪಕರಿಷ್ಯತಿ.’
ಪ್ರಾಣಿಗಳು ಸತ್ತಮೇಲೂ, ಅದರ ಚರ್ಮ ಉಪಯೋಗವಾಗುತ್ತದೆ. ಅದರಿಂದ ಪಾದರಕ್ಷೆ ತಯಾರಿಸಬಹುದು.
ಮನುಷ್ಯನ ಚರ್ಮದಿಂದ ಅದೂ ಪ್ರಯೋಜನವಿಲ್ಲ. ಮನುಷ್ಯ ಸತ್ತಮೇಲೆ ಸುಡುತ್ತಾರೆ. ಇರುವಾಗ ಉಪಯೊಗವಿಲ್ಲದ ವ್ಯಕ್ತಿ ಸತ್ತರೂ ಏನು ಪ್ರಯೋಜನ.
ನಮ್ಮ ಹಿಂದಿನವರು ಪರೋಪಕಾರದಲ್ಲಿಯೇ ತಮ್ಮ ಬಾಳನ್ನು ಸಮರ್ಪಿಸಿದರು. ನಾವು ಅವರ ಪರಂಪರೆಯಲ್ಲಿ ಬಂದವರು. ಅವರ ರಕ್ತವೇ ನಮ್ಮಲ್ಲಿ ಓಡುತ್ತಿದೆ. ಹೀಗಿದ್ದರೂ, ಮತ್ತೊಬನಿಗೆ ಉಪಕರಿಸದಿದ್ದರೆ, ಅವನ ಬಾಳು ವ್ಯರ್ಥ.
ಮತ್ತೊಬ್ಬರಿಗೆ ಉಪಕರಿಸಲು ದೈವ ಮತ್ತು ಗುರು ಕೃಪೆ ಅವಶ್ಯ. ಅವೆರಡೂ ಇಲ್ಲದಿದ್ದರೆ, ಬೇರೆಯವರನ್ನು ಹೊಡೆಯಬೇಕು.
ದುಃಖಗೊಳಿಸಬೇಕು ಎಂಬ ಆಸುರೀ ಭಾವನೆ ಉದಿಸುತ್ತದೆ. ಗುರು-ದೈವ ಕೃಪೆ ಗಳಿಸಲು ನಾವು ಅವರನ್ನು ಸೇವಿಸಬೇಕು.
ಹಾಗೆ ಸೇವಿಸುವದರಿಂದ ಮನಸ್ಸಿನ ಅಶುಚಿ ನೀಗಿಶುದ್ಧವಾಗುತ್ತದೆ. ಶುದ್ಧ ಮನಸಿನಲ್ಲಿ ಒಳ್ಳೆಯ ಚಿಂತೆಗಳು ತೋರಿ ನಮ್ಮ ಬಾಳು ಅರ್ಥಪೂರ್ಣವಾಗುವುದು.. ಆದ್ದರಿಂದ, ಗುರು-ಈಶ್ವರ- ನನ್ನು, ಹೊಂದಲು,ಪರೋಪಕಾರವೇ ಸಲಕರಣೆ.\
==========================================
ಅಧ್ಯಾಯ.೧೦.
============
ಶ್ರೀ ರಾಮಾಯಣ ತೋರಿಸುವ ಸದ್ಗುಣಗಳು.
=====================================
ನಾವು ಶ್ರೀ ರಾಮನವಮಿಯಂದು ಶ್ರೀರಾಮನನ್ನು ಆರಾಧಿಸುತ್ತೇವೆ. ಆಗ ಶ್ರೀ ರಾಮಾಯಣವನ್ನು ಪಠಿಸುತ್ತೇವೆ.. ಶ್ರೀ ರಾಮಾಯಣದ ಪ್ರವಚನವನ್ನು ನಡೆಸುತ್ತೇವೆ. ಇದು ಶ್ರೀರಾಮನ ಮೇಲೆ
ನಮಗಿರುವ ಭಕ್ಥಿ, ಶ್ರದ್ಧೆಯನ್ನು ತೋರಿಸುತ್ತದೆ. ಶ್ರೀರಾಮನು ಮಹಾ ವಿಷ್ಣುವಿನ ಅವತಾರ., ಎಂಬುದರಲ್ಲಿ, ಯಾರಿಗೂ, ಸಂದೇಹವಿಲ್ಲ. ಆದರೆ, ಅವರು ಒಬ್ಬ ಮಾನವನಂತೆ,ಈ ಭೂಮಿಯಲ್ಲಿ ಸಂಚರಿಸಿದರು.. ಆ ಸಮಯದಲ್ಲಿ, ಅವರ ಬಾಳು ಹೇಗಿತ್ತು, ಎಂದರಿಯಲು ಶ್ರೀ
ರಾಮಾಯಣ ನಮಗೆ ಅವಶ್ಯವಾಗಿದೆ.
ಶ್ರೀ ರಾಮಾಯಣವನ್ನು ಕೇಳುವುದರಿಂದ, ನಾವು ಯಾವ ತೀರ್ಮಾನಕ್ಕೆ ಬರಬೇಕು.ಎಂಬುದೊಂದು ಪ್ರಶ್ನೆ.
ಪರಮಾತ್ಮಾನ ಪವಿತ್ರ ಕಥೆ ಕೇಳುವುದರಿಂದ ನಮಗೆ ಪುಣ್ಯ ಬರುತ್ತದೆ.ಅದಲ್ಲದೆ, ಮತ್ತೊಂದು
ಉಪದೇಶವೂ ಇದೆ. ಶ್ರೀ ’ರಾಮಾಯಣದಿಂದ ನಮಗೆ ತಿಳಿಯಬೇಕಾದ ನೀತಿಯೇನು’, ಎಂಬುದನ್ನು ನಮ್ಮ ಹಿರಿಯರು, ಸಂಕ್ಷೇಪವಾಗಿ ಉತ್ತರವೊಂದನ್ನು ನೀಡಿದ್ದಾರೆ.
’ಯಾಂತಿ ನ್ಯಾಯ ಪ್ರವುರ್ತ್ತಸ್ಯ ತಿರ್ಯಂಚೋಪಿ ಸಹಾಯತಂ ಅಪದ್ದಾನಂತು ಕಚ್ಚಂತಂ ಸೋದರೋಪಿ ವಿಮುಂಚತಿ
’
ಇದು ನಾವು ಅರಿಯಬೇಕಾದ ನೀತಿ. ಮನುಷ್ಯನ ಬಾಳು ಎರಡು ರೀತಿಯದಾಗಿರುತ್ತದೆ. ಒಂದು ಸರಿಯಾದ ಮಾರ್ಗ. ಮತ್ತೊಂದು ತಪ್ಪಾದ ಮಾರ್ಗ. ಸರಿಯಾದ ಮಾರ್ಗದಲ್ಲಿ ನಡೆಯುವುದು ಧರ್ಮ ಮಾರ್ಗ., ತಪ್ಪಾದ ಮಾರ್ಗದಲ್ಲಿ ನಡೆಯುವುದು ಅಧರ್ಮ ಮಾರ್ಗ. ಇವೆರಡರಲ್ಲಿ, ನಾವು ಯಾವುದನ್ನು ಆಇದುಕೊಳ್ಳಬೇಕು.. ’ನ್ಯಾಯವಾದ ಮಾರ್ಗದಲ್ಲಿ ನಡದರೆ ಸಿಗುವ ಫಲವೇನು’ ಎಂದು ಶ್ರೀ ರಾಮಾಯಣ ತಿಳಿಸಿಕೊಡುತ್ತದೆ.. ’ಆ ಮರ್ಗದಲ್ಲಿ ನಡೆದರೆ ಆ ಫಲ, ಈ ಮರ್ಗದಲ್ಲಿ ನೀಡಿದರೆ ಈ ಫಲ’.
ನಿನಗೆ ಬೇಕಾದ ಮಾರ್ಗದಲ್ಲಿ ನಡೆಯಬಹುದು ಎಂದು ಶ್ರೀ ರಾಮಾಯಣ ತಿಳಿಸುತ್ತದೆ.
ಒಬ್ಬ ವ್ಯಕ್ತಿ ಬಸ್ ಸ್ಟಾಂಡಿನಲ್ಲಿ ನಿಂತಿದ್ದಾನೆ.’ ಯಾವ ಬಸ್ಸಿನಲ್ಲಿ ಹೋಗಬೇಕೆಂಬ ತೀರ್ಮಾನ’ ’ಅವನಿಗೆ ಸುಲಭವಾಗಿ ದೊರಕುತ್ತದೆ.. ಒಂದು ಬಸ್ಸು ಮಧುರೆಗೂ, ಮತ್ತೊಂದು ತಿರುನೆಲ್ವೇಲಿಗೂ ಹೋಗುತ್ತದೆ.
ಯಾವ ಬಸ್ಸಿನಲ್ಲಿ ಹೋಗಬೇಕೆಂಬುದನ್ನು, ಅವನು ಸಾಗುವ ಸ್ಥಳವನ್ನುಸರಿಸಿ ಅವನೇ ತೀರ್ಮಾನಿಸುತ್ತಾನೆ.. ನಾವು ಅವನನ್ನು ನಿರ್ಭಂದಗೊಳಿಸಬೇಕಾದಿಲ್ಲ. ಹಾಗೆಯೇ, ಯಾವ ಮಾರ್ಗದಲ್ಲಿ ತೆರಳ-
ಬೇಕೆಂದು, ಶ್ರೀ ರಾಮಾಯಣವೇ, ತಿಳಿಯಾಗಿ, ತಿಳಿಸುತ್ತದೆ.
’ಯಾಂತಿ ನ್ಯಾಯಪ್ರವೃತ್ತಸ್ಯ, ತಿರ್ಯಂಚೋಪಿ ಸಹಾಯತಾಂ’
ಧರ್ಮಮಾರ್ಗದಲ್ಲಿ ಇರುವರಿಗೆ, ಎಲ್ಲರೂ ಸಹಾಯ ಮಾಡುತ್ತಾರೆ. ಹಾಗೆ ನೋಡಿದರೆ, ಪ್ರಾಣಿಗಳೂ,
ನೋಡಿದರೆ, ಪ್ರಾಣಿಗಳೂ, ಅವರಿಗೆ ಸಹಾಯಮಾಡುತ್ತವೆ. ಇದಕ್ಕೆ,ಶ್ರೀ ರಾಮನ ಜೀವನವೇ ಸಾಕ್ಷಿ.
ಭಗವಾನ್ ಶ್ರೀರಾಮರ ಬಗ್ಗೆ ಎಷ್ಟು ಹೊಗಳಿದರೂ, ಶ್ರೀ ವಾಲ್ಮೀಕಿ ಮಹರ್ಷಿಗೆ ತೃಪ್ತಿಯೇ
ಇಲ್ಲ. ಕಾರಣ, ಸದ್ಗುಣಗಳೆಲ್ಲವೂ ಸೇರಿ ಒಂದು ಸಮುದ್ರದಂತಿದ್ದವರೇ ಶ್ರೀರಾಮ. ಅಂತಹ-
ಶ್ರೀರಾಮರ. ಅಂತಹವರ ಬಗ್ಗೆ, ಎಷ್ಟು ಮಾತಾಡಿದರೂ, ಕಮ್ಮಿಯೇ ಆಗುತ್ತದೆ. ಆದ್ದರಿಂದಲೇ, ಕವಿ ಪುಷ್ಪದಂತರು
ಒಂದು ಕಡೆ ಭಗವಾನ್ ಶ್ರೀರಾಮನ ಬಳಿ ಪ್ರಾರ್ಥಿಸುವಾಗ,
’ಮಹಿಂನಃ ಬಾರಂ ತೆ ಪರಮವಿದುಷೋ ಯದ್ಯಸದ್ರುಚಿಃ
ಸ್ತುತಿರ್ಬ್ರಹ್ಮಾದೀನಾಮಪಿ ತತವಸನ್ನಾಸ್ತ್ವಯಿ ಗಿರಃ
ಅತಾವಾಚ್ಯಃ ಸರ್ವಃಸ್ವಮದಿಪರಿಣಾಮಾವದಿ ಕ್ರುಣನ್
ಮಮಾಪ್ಯೇಶ ಸ್ತೋತ್ರೇ ಹರ ನಿರಪಾವಾದಃ ಪರಿಕರಃ’-ಎಂದರು.
’ಪರಮಾತ್ಮನ್’, ನಿನ್ನನ್ನು ಸಂಪೂರ್ಣವಾಗರಿತವರೇ, ನಿನ್ನನ್ನು,
ಸ್ತುತಿಸಬೇಕೆಂದು, ನೀನು ಕಾನೂನು ರಚಿಸಿದರೆ, ಬ್ರಹ್ಮನಂತವರಿಗೂ ಕೂಡ ನಿನ್ನನ್ನು ಹೊಗಳಲು ಸಾಧ್ಯವಾಗುವುದಿಲ್ಲ.
ಯಾರೂ ನಿನ್ನನ್ನು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅದ್ದರಿಂದ, ನಿನ್ನ ಕಾನೂನಿನಲ್ಲಿ ಒಂದು ಮಾರ್ಪಾಟು ಮಾಡಬೇಕು.. ’ಅವರವರ ಯೋಗ್ಯತೆಯನುಸರಿಸಿ ನಿನ್ನನ್ನು ಸ್ಥುತಿಸಬಹುದೆಂದರೆ,
ನಾನೂ ನಿನ್ನನ್ನು ಸ್ತುತಿಸಬಹುದು. ಕಾರಣ, ನಾನೂ ನಿನ್ನ ಬಗ್ಗೆ ಸ್ವಲ್ಪ ಅರಿತಿದ್ದೇನೆ, ಎನ್ನುತ್ತಾರೆ ಶ್ರೀ ಪುಷ್ಪದಂತರು.
. ಅಂತೆಯೇ, ಶ್ರೀ ವಾಲ್ಮೀಕಿ ಮಹರ್ಷಿಗಳು, ಶ್ರೀ ರಾಮನನ್ನು, ’ರಾಮೋ
ವಿಗ್ರಹವಾನ್ ಧರ್ಮಃ’ ಎಂದರು. ಎಂದರೆ, ’ಧರ್ಮವೇ ಶ್ರೀ ರಾಮನಾಗಿ ಧರೆಯಲ್ಲಿ ಸಂಚಚರಿಸುತ್ತ್ತೋ ಎನ್ನುತ್ತಾರೆ..’ಧರ್ಮಮೂರ್ತಿ ಶ್ರೀರಾಮ.’
’ಯಾಂತಿ ನ್ಯಾಯ ಪ್ರವೃತ್ತಸ್ಯ, ತಿರ್ಯಂಚೋಪಿ ಸಹಾಯತಾಂ’
ಅದಕ್ಕೇ, ಅವರಿಗೆ ಕಿರಿಯ ಜಂತುಗಳೂ, ನೆರವಿತ್ತವು, ರಾವಣನನ್ನು
ಎದುರಿಸಿ ಶ್ರೀರಾಮರು ಯುದ್ಧ ಮಾಡಿದಾಗ ಅಯೋಧ್ಯೆಯಿಂದ ಸೈನ್ಯ ಬರಲಿಲ್ಲ. ಕಿಷ್ಕಿಂದೆಯಿಂದಲೇ ವಾನರಸೈನ್ಯ ಬಂದಿತು. ಮೃಗಗಳೂ, ಶ್ರೀರಾಮರಿಗೆ ನೆರವಿತ್ತವು ಎಂಬುದಕ್ಕೆ ಶ್ರೀರಾಮಾಯಣದಲ್ಲಿ ಮತ್ತೊಂದು ಘಟನೆ ಇದೆ.. ಸೀತೆ ಅಪಹರಿಸಲ್ಪಟ್ಟಾಗ, ,
ಚಿಂತಾಸಕ್ತ ಶ್ರೀರಾಮನು, ವೃಕ್ಷಗಳನ್ನೂ, ಪ್ರಾಣಿಗಳನ್ನೂ, ’ಜಾನಕಿ ಎಲ್ಲಿ ತೆರಳಿದಳು, ಎಂದು ಶ್ರೀರಾಮರು ಕೇಳಿದಾಗ, ನುಡಿಯಲು
ಬಾರದಿದ್ದರೂ, ಅವುಗಳು, ದಕ್ಷಿಣ ದಿಕ್ಕಿನಲ್ಲಿಯೇ, ಆಕಾಶಮಾರ್ಗಲ್ಲಿ,
ಸೀತೆಯು ಅಪಹರಿಸಿ, ಕೊಂಡೊಯ್ಯಲ್ಪಟ್ಟಳು, ಎಂದು ಸೂಚಿಸಿದುವಂತೆ.’ಪ್ರಾಣಿಗಳೂ, ಒಳ್ಳೆಯವರಿಗೆ ಸಹಾಯ ಮಾಡುತ್ತವೆ’ಎಂಬುದಕ್ಕೆ, ಇದಕ್ಕಿಂತ ಬೇರೆ ಉದಾಹರಣೆ ಬೇಕೆ.’ ಶ್ರೀರಾಮರೂ ನಮ್ಮಂತೆ ಮನುಷ್ಯರು ತಾನೆ.
ಆದರೆ, ಈ ಬಗ್ಗೆ ನಮಗೂ, ಶ್ರೀರಾಮರಿಗೂ, ಇರುವ ವೆತ್ಯಾಸ ಅಗಣಿತ. ನಮಗೆ ಬರಬೇಕಾದ ಆಸ್ತಿಯಲ್ಲಿ, ಕಿಂಚಿತ್ತಾದರೂ, ನಾವು ಪರರಿಗೆ ಕೊಡುತ್ತೇವಾ. ನಮಗೆ ೧ ಲಕ್ಷ ಬರುವಲ್ಲಿ,೯೯ ಸಾವಿರ ಮಾತ್ರ ಬಂದರೆ, ಜಗಳ ಮಾಡುತ್ತೆವಲ್ಲವೇ. ಶ್ರೀ ರಾಮರ ಗುಣವು ಅಂತಿರದೆ,
ಅಪೂರ್ವವಾಗಿತ್ತು. ’ಯುವರಾಜ್ಯ ಪಟ್ಟಾಭಿಷೇಕ ನಿರ್ಣಯಿಸಲ್ಪಟ್ಟ ಮಾರನೇ ದಿನವೇ, ದಶರಥರಿಂದ ಶ್ರೀ ರಾಮರಿಗೆ, ಕಾಡಿಗೆ ತೆರಳಲು ಆಜ್ಞೆಯಾಯಿತು. ನಾವಾಗಿದ್ದರೆ, ಆ
ಕಟಳೆಯನ್ನು ಖಂಡಿತ ನರವೇರಿಸುತ್ತಿರಲಿಲ್ಲ. ಆದರೆ ಶ್ರೀರಾಮರು, ತಕ್ಷಣ ವನಕ್ಕೆ ತೆರಳಲು ಸಮ್ಮತಿಸಿದರು.. ಹೀಗೆ, ಬೇರೆ ಯಾರು ಮಾಡುತ್ತಾರೆ. ಅವರಿಗೆ’ ಬುದ್ಧಿ ಇರಲಿಲ್ಲವೇ.’ ಇದ್ದಿತು.
ಆದರೆ ಅವರು ಹಾಗೆ ಮಾಡಲು ಕಾರಣವಿದ್ದಿತು.
ವೇದವ್;’ಮಾತೃ ದೇವೋ ಭವ, ಪಿತೃ ದೇವೋ ಭವ. ಆಚಾರ್ಯ ದೇವೋ ಭವ’ಎಂದು ಉಪದೇಶಿಸುತ್ತದೆ.. ತಾಯಿಯನ್ನು, ದೇವರಿಗೆ ಸಮಾನವಾಗಿ ನೋಡು, ತಂದೆಯನ್ನು ದೇವರಿಗೆ ಸಮಾನವಾಗಿ ನೋಡು, ಗುರುಗಳನ್ನು ದೇವರಿಗೆ ಸಮಾನವಾಗಿ ನೋಡು- ಎನ್ನುತ್ತದೆ. ’ದೈವಕ್ಕೆ ಸಮಾನವಾಗಿ’ ಎಂದರೇನು. ದೇವರ ಭಾವಚಿತ್ರವನ್ನೂ, ತಂದೆಯ ಭಾವಚಿತ್ರವನ್ನೂ ಜೊತೆಯ-
ಲ್ಲಿಡಬೇಕೆಂದೇ. ಹಾಗಲ್ಲ. ಭಗವಂತನ ವಿಷಯದಲ್ಲಿ ನಮಗೆಷ್ಟು ಗೌರವವಿದೆಯೋ, ನಾವು
ಗೌರವವಿದೆಯೋ, ನವು ಹೇಗೆ, ಕಾಯಾ, ವಾಚಾ, ಮನಸಾ, ಪವಿತ್ರವಾಗಿ, ಭಗವಂತನನ್ನು ಆರಾಧಿಸುತ್ತೇವೆಯೋ, ಹಾಗೆಯೇ,ತಂದೆ, ತಾಯಿಯರಲ್ಲಿಯೂ,, ಗೌರವ ಇರಬೇಕು. ಭಗವಂತನ ಆಙ್ಯೆಯಾದ್ದರಿಂದ, ವೇದ-
ವಾಕ್ಯಕ್ಕೆ ಕೊಡುವ ಗೌರವವನ್ನೇ, ಮಾತಾ-ಪಿತೃಗಳ ಮಾತಿಗೂ ಕೊಡಬೇಕು. ಭಗವಂತನ ಅಪ್ಪಣೆಯನ್ನು ಯಾವ ಕಾಲದಲ್ಲಿಯೂ, ಮಿರದಂತೆ,, ತಂದೆ-ತಾಯಿಯರ ಕಟ್ಟಳೆಯನ್ನು ಯಾವ ಕಾಲಕ್ಕೂ ಮೀರಬಾರದು.
ಆಗಲೇ, ದೈವ, ಮಾತಾ-ಪಿತಾ ಇವರಬಳಿ ಸಮನಾಗಿ ನಡೆದುಕೊಂಡಂತೆ ಅರ್ಥ. ಅವರ ಚಿತ್ರಪಟಗಳನ್ನು ಮಾತ್ರ ಇಟ್ಟುಕೊಂಡು, ಅವರು ಹೇಳಿದ ವಿಷಯಗಳನ್ನು ಪಾಲಿಸದಿದ್ದರೆ, ಅದು ಅರ್ಥಹೀನ.
ನನಗೆ ಬೇಕಾದನ್ನು ಆಯ್ದುಕೊಳ್ಳುತ್ತೇನೆ, ಬೇಡದ್ದನ್ನು ಒಪ್ಪುವುದಿಲ್ಲ, ಎಂದರೆ, ಅದನ್ನು ಸ್ವೀಕರಿಸಲಾಗುವುದಿಲ್ಲ.. ಆದರೆ, ಶ್ರೀ ರಾಮರ ಇಚ್ಚೆ, ’ತಂದೆಯಿಂದ ಬರುವ ಯಾವ ಆಜ್ಞ್ಯೆಯಾದರೂ, ಅದನ್ನು ಪಾಲಿಸಬೇಕೆಂದು..ಅವರು ಆ ಅಜ್ಞ್ಯೆಯನ್ನು, ಯಾವ ರೀತಿ ಪಾಲಿಸಿದರು, ಎಂಬುದಕ್ಕೆ, ಒಂದು ಸೊಗಸಾದ ಪ್ರಸಂಗವಿದೆ.
.
೧೪ ವರ್ಷಗಳು, ಆರಣ್ಯವಾಸ ಮಾಡಬೇಕೆಂದು ಶ್ರೀ ರಾಮರು ಕಾಡಿಗೆ ತೆರಳಿದರು.. ಕಾಡಿನಲ್ಲಿ ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋದನು. ಆ ಸಮಯದಲ್ಲಿ, ಶ್ರೀ ರಾಮರ ಮನವು ಬಹಳ ವ್ಯಾಕುಲವಾಗಿದ್ದಿತು.. ’ನಾನೇಕೆ ಬದುಕಿರಬೇಕು,’ ಎಂದು ಚಿಂತಿಸಲು ಪ್ರಾರಂಭಿಸಿದರು.
ಅವರು ಮನುಷ್ಯರಾದ್ದರೀಂದ ಆ ರೀತಿ ನಡೆದುಕೊಂಡದ್ದು ಸಹಜವೇ.
ಮನುಷ್ಯರು ತಮ್ಮ ಬಂಧುಗಳು ತೀರಿಕೊಂದಾಗ,’ ನಾನೇಕೆ ಬದುಕಿರಬೇಕು,’ ಎಂದು ಹಲುಬುವದಿಲ್ಲವೇ. ಹಾಗೆಯೇ, ಶ್ರೀ ರಾಮರಿಗೂ ಈ ರೀತಿಯ ಯೋಚನೆ ಬಂದಿತು.. ತಕ್ಷಣ, ಲಕ್ಷ್ಮಣನೊಡನೆ,’ ನಾನು ಇನ್ನು ಬದುಕಿದ್ದೇನು ಪ್ರಯೋಜನ.. ’ನೀನು ಅಯೋಧ್ಯೆಗೆ ತೆರಳಿ, ಭರತನ ಬಳಿ, ಇನ್ನುಮೇಲೆ, ನೀನೇ, ರಾಜ್ಯಾಡಳಿತ-ವನ್ನು ನಿರ್ವಹಿಸು., ನಿನಗೆ ಇನ್ಯಾವ ಶತ್ರು ಭಯವಿರುವಿದಿಲ್ಲ’ ಎಂದು ಹೇಳಿಬಿಡು,’ ಎಂದರು.
ಆದರೆ ತಕ್ಷಣವೇ, ಅವರು ಯೋಚಿಸಿದರು. ’ನಾನು ೧೪ ವರ್ಷಗಳ ಮುಂಚಯೇ, ಪ್ರಾಣತ್ಯಾಗ
ಮುಂಚೆಯೇ, ಪ್ರಾಣತ್ಯಾಗ ಮಾಡಿದರೆ, ಪಿತೃವಾಕ್ಯಪಾಲನೆಯನ್ನು ಮೀರಿದಂತಾಗುವುದಿಲ್ಲವೇ. ಇದು ತಪ್ಪು. ಶರೀರತ್ಯಾಗ ಮಾಡುವುದಿಲ್ಲ.. ಪಿತೃವಾಕ್ಯಪಾಲನೆ ಮಾಡುತ್ತೇನೆ, ಎಂದು ತೀಮಾನಿಸಿದರು.
ಪಿತ್ರುವಾಕ್ಯಪರಿಪಾಲನೆಯಲ್ಲಿ ಅವರಿಗಿದ್ದ ಶ್ರದ್ಧೆ ಅದೆಷ್ಟು. ಆದ್ದರಿಂದಲೇ, ಲಕ್ಶೋಪಲಕ್ಷ ವರ್ಷಗಳಾದರೂ,ಆ ಮಹಾಪ್ರಭುವನ್ನು ಈಗಲೂ ಆದರಿಸುತ್ತೇವೆ.
ಶಾಸ್ತ್ರದಲ್ಲಿ ಒಂದು ಮುಖ್ಯವಾದ ಉಪದೇಶ ಬರುತ್ತದೆ. ಅದು ’ಶರಣಾಗತಸಂತ್ರಾಣಂ’ಎನ್ನುವುದು.. ನಮ್ಮಲ್ಲಿ ಯಾರಾದರೂ ’ರಕ್ಷಣೇ’ ಕೇಳಿದರೆ, ಅವರಿಗೆ ’ರಕ್ಷಣೆ ಕೊಡಬೇಕು.
ಅವರಿಗೆ ಅವಶ್ಯವಾದ ಸಹಾಯ ಮಾಡಬೇಕು. ಇದನ್ನೂ, ನಾವು ಶ್ರೀರಾಮರಿಂದಲೇ ಕಲಿಯಬೇಕು.
’ಶ್ರೀರಾಮರ ಪತ್ನಿಯಿಂದ ಆಕರ್ಷಿಸಲ್ಪಟ್ಟು ರಾವಣನು ಅಪಹರಿಸಿದನು. ಅವನನ್ನು ಸಂಹರಿಸಲು ಶ್ರೀರಾಮರು ಯುದ್ಧ ಮಾಡಿದರು.. ಆ ಸಮಯದಲ್ಲಿ, ರಾವಣನ ಸೋದರ ಶ್ರೀ ವಿಭೀಷಣನು ಶ್ರೀರಾಮರ ಬಳಿ ಬಂದು, ’ನೀವು ನನಗೆ ’ಆಶ್ರಯ ಕೊಡಬೇಕೆಂದು ಬೇಡಿದನು.
ನಾವಾಗಿದ್ದರೆ, ವಿಭೀಷಣನನ್ನು, ಆ ಸಮಯವೇ ಕೊಲ್ಲುತ್ತಿದ್ದೆವು. ಹೇಳಬೇಕೆಂದರೆ, ಶ್ರೀರಾಮರ ಬಳಿ ಇದ್ದವರು,’ದಯವಿಟ್ಟು ನೀವು ಇವನನ್ನು ನಂಬಕೂಡದು. ’ಇವನು ಒಂದು ಕೆಟ್ಟ ಉದ್ದೇಶದಿಂದ ಬಂದಿದ್ದಾನೆ., ಇವನ ವಧೆಯೇ ಉಚಿತ,’ ಎಂದರು. ಅದರೆ, ಶ್ರೀರಾಮರು, ತೀರ್ಮಾನ-
ವಾಗಿ ಉತ್ತರವೋಂದನ್ನು ಹೇಳಿದರು.
’ಸಕೃದೇವ ಪ್ರಪನ್ನಾಯ ತವಾಸ್ಮೀಚಿತ ಯಾಚತೆ
ಅಭಯಂ ಸರ್ವ ಭೂತೇಭ್ಯೋ ದದಾಂಏತದ್ ವ್ರತಂ ಮಮ
’ಯಾರಾದರೂ, ಒಬ್ಬನು ನನ್ನ ಬಳಿ ಬಂದು,’ ನಾನು ನಿಮಗೆ ಸೇರಿದವನು ನನಗೆ ಅಭಯ ನೀಡಿ’
ನನಗೆ ಸಹಾಯ ನೀಡಿ ಎಂದು ಒಮ್ಮೆ ಕೇಳಿದರೆ, ಅವರಿಗೆ ಅಭಯವೀಯುವುದು ನನ್ನ ವ್ರತ.’ ಎನ್ನುತ್ತಾರೆ.’ಇದರ ಅರ್ಥ ಏನೇ ಅದೆತಡೆಗಳು ಬಂದರೂ,, ಅದನ್ನು ನಾನು ಅನುಭವಿಸಲು ಸಿದ್ಧ’. ಆದರೆ ವ್ರತವನ್ನು
ಮಾತ್ರ ಬಿಡುವುದಿಲ್ಲ, ಎಂದರು ಶ್ರೀರಾಮರು. ಈ ರೀತಿ,’ ಮತ್ತೊಬ್ಬರಿಂದ ಹೇಳಲಾಗುವುದೇ-’ಶ್ರೀ ಭಗವಂತನು ಹೇಳಿದನು.
ಮುಂದಿನದು, ಸಹೋದರರ ಬಂಧವು ಹೇಗಿರಬೇಕೆಂದು ತಿಳಿಯಲು, ಶ್ರೀ ರಾಮರ ಚರಿತ್ರೆಯನ್ನು ನೋಡಬೇಕು.
ದಶರಥನು ಶ್ರೀ ರಾಮರನ್ನು ಕಾಡಿಗೆ ಹೋಗಲು ಹೇಳಿ ಭರತನನ್ನು ರಾಜ್ಯವಾಳಲು ಹೇಳಿದನು. ತಂದೆಯ ಮಾತನ್ನು ಕಾಪಾಡಲು ಶ್ರೀರಾಮರು ವನಕ್ಕೆ ತೆರಳಿದರು.. ಆದರೆ, ಭರತನು, ಶ್ರೀರಾಮರ ಬಳಿ ಬಂದು,’ದಯವಿಟ್ಟು ರಾಜ್ಯಭಾರವನ್ನು ನೀವೇ ವಹಿಸಿಕೊಳ್ಳಿ. ತಂದೆ ಕೊಟ್ಟದ್ದನ್ನು, ನೀವೇ, ಮರಳಿ ಪಡೆದುಕೊಳ್ಳಿ, ಎಂದು ಕೇಳಬಹುದೇ’ ಎಂದನು.
.ಆದರೆ, ಶ್ರೀ ರಾಮರು ಅದನ್ನು ಒಪ್ಪಿಕೊಳ್ಳಲಿಲ್ಲ. ’ಭರತ, ನನಗೆ ನಿನ್ನ ಮೇಲೆ ನಂಬಿಕೆಯಿದೆ. ನೀನು ಸಂತೋಷದಿಂದ ರಾಜ್ಯವನ್ನಾಳು. ತಂದೆಯ ಆಙೆಯಯನ್ನು ಪಾಲಿಸುವುದು ನಮ್ಮಿಬ್ಬರ ಕರ್ತವ್ಯ.
ನಿನ್ನ ವಿಷಯದಲ್ಲಿ ನನಗೆ ಯಾವ ರೀತಿಯ ಸಂದೇಹವಿಲ್ಲ, ಎಂದನು. ಇದರಲ್ಲಿ, ಒಂದು ಸ್ವಾರಸ್ಯವಿದೆ. ಭರತನ ಮೇಲೆ, ಶ್ರೀ ರಾನರಿಗೆ ಸ್ವಲ್ಪವೂ ಸಂದೇಹವಿರಲಿಲ್ಲ. ಎಂದು ತಿಳಿಸುವ ಘಟನೆ.. ಶ್ರೀರಾಮರನ್ನು ಕಾಣಲು, ಭರತನು ಸೈನ್ಯ ಸಮೇತ ಕಾಡಿಗೆ ಬಂದನು. ಬಂದಂತೆಯೇ, ಶ್ರೀರಾಮರ ಪಟ್ಟಾಭಿಷೇಕವನ್ನು ಸಂಭ್ರಮದಿಂದ ನಡೆಸಿ, ಮರಳಿ ಅಯೋಧ್ಯೆಗೆ ಕರೆದುಕೊಂಡು ಹೋಗಲು ಬಯಸಿದನು. . ಭರತನು ಸೈನ್ಯದೊಂದಿಗೆ ಬರುವುದನ್ನು ಲಕ್ಷ್ಮಣನು ದೂರದಿಂದ ನೋಡಿದನು.. ಎಲ್ಲಕ್ಕೂ ಸಂದೇಹಿಸುವ ಲಕ್ಷ್ಮಣನಿಗೆ ಅವನ ಮೇಲೆ ಸಂದೇಹ ಬಂದಿತು. ಆಗ, ಶ್ರೀರಾಮರನ್ನು ಕುರಿತು. ಅಣ್ಣಾ,’ ನಮ್ಮನ್ನು ಭರತನು ಇಲ್ಲೂ ನೆಮ್ಮದಿಯಾಗಿರಲು ಬಿಡುವುದಿಲ್ಲ, ಎಂದು ಕಾಣುತ್ತದೆ. ನೀವು ಅಪ್ಪಣೆ ಕೊಟ್ಟರೆ, ಅವನನ್ನು ಸಂಹರಿಸಿ ಬರುತ್ತೇನೆ’, ”ಎಂದನು. ಅದನ್ನು ಕೇಳಿದ ಶ್ರೀರಾಮರು, ’ಇಷ್ಟು ಅವಸರಪಡುತ್ತೀಯಲ್ಲಾ. ಭರತನ ಬಗ್ಗೆ, ನೀನು ಸರಿಯಾಗಿ ಇನ್ನೂ ತಿಳಿದುಕೊಂಡಿಲ್ಲವಲ್ಲಾ. ಅವನು ಆ ರೀತಿಯವನಲ್ಲ. ರಾಜ್ಯವನ್ನು ಮರಳಿ ಕೊಡಲೇ ಸೈನ್ಯದೊಂದಿಗೆ ಬರುತ್ತಿದ್ದಾನೆ.. ಯಾವ ಕೆಟ್ಟ ಭಾವನೆಯೊಂದಿಗೂ ಅವನು ಬರುತ್ತಿಲ್ಲ.
ಹೀಗೆ ನೀನು ಮಾತನಾಡುವುದನ್ನು ನೋಡಿದರೆ. ನಿನಗೆ ರಾಜ್ಯದ ಮೇಲೆ ಆಸೆ ಬಂದಂತಿದೆ. ಹಾಗಿದ್ದರೆ, ಭರತನಿಗೆ ಹೇಳಿ ನಿನಗೆ ರಾಜ್ಯವನ್ನು ಕೊಡಿಸುತ್ತೇನೆ, ಎಂದರು. ಇದರಿಂದ, ಶ್ರೀ ರಾಮರಿಗೆ, ಭರತನ ಬಗ್ಗೆ, ಇದ್ದ ಅಪಾರ ನಂಬಿಕೆ ತಿಳಿಯುತ್ತದೆ.
. ’
ನಾವು ಸೋದರರು, ಸಣ್ಣ ಸಣ್ಣ ವಿಷಯಗಳಿಗೆ ಜಗಳವಾದುತ್ತೇವೆ. ಆದರೆ, ಶ್ರೀ ರಾಮರು, ಸೋದರರೊಡನೆ ಎಷ್ಟು, ಹಿರಿಯತನ., ಸ್ನೇಹದೊಡನೆಯೂ, ನಡೆದುಕೊಂಡು ತೋರಿಸಿದ್ದಾರೆ. ಅದರಂತೆಯೆ, ಗುರುಭಕ್ತಿಯಲ್ಲೂ, ನಾವು ಶ್ರೀರಾಮರನ್ನೇ,ನೋಡಬೇಕು.. ಶ್ರೀ ವಿಶ್ವಾಮಿತ್ರರು-ಶ್ರೀ ವಶಿಷ್ಟರ ಬಳಿಯಲ್ಲಿ ಅವರಿಗಿದ್ದ ಭಕ್ತಿ-ಭಾವನೆ ಅಪಾರವಾದ್ದ್ದು.
ಆದರೆ ಶ್ರೀ ವಿಶ್ವಾಮಿತ್ರರಿಗೂ, ಶ್ರೀ ವಶಿಷ್ಟರಿಗೂ, ’ ಶ್ರೀರಾಮರು, ಸಾಧಾರಣ ಮನುಷ್ಯರಲ್ಲ, ಪರಮಾತ್ಮ ಎಂಬುದು ಗೊತ್ತು.ಹಾಗಿದ್ದರೂ, ಶ್ರೀ ರಾಮರು ಅವರಿಬ್ಬರ ವಿಷಯದಲ್ಲಿ, ನಡೆದುಕೊಂಡ ವಿಧಾನ, ಅಪಾರವಾದದ್ದು.
ಯಾರಾದರೂ, ನಮ್ಮನ್ನು ನೋಡಿ, ’ನೀವು ಸರ್ವಙ್ಯರು. ನಿಮ್ಮ ಬಗ್ಗೆ ಬಹಳ ಗೌರವವಿದೆ, ಎಂದರೆ, ’ಇನ್ನು ನಮಗೆ, ಈ ಜಗತ್ತಿನಲ್ಲಿ ಸಮಾನವಾದವರು ಯಾರಿದ್ದಾರೆ, ಎಂಬ ಗರ್ವ ಬಂದುಬಿಡುತ್ತದೆ. ಆದರೆ, ಶ್ರೀ ರಾಮರು, ತಾವೇ, ಪರಮಾತ್ಮ ಎಂದರಿತಿದ್ದರೂ., ಸ್ವಲ್ಪವೂ ಗರ್ವಗೊಳ್ಳಲಿಲ್ಲ.
ಶ್ರೀ ರಾಮರ ಬಳಿ ಇದ್ದ ಮತ್ತೊಂದು ವಿಶೇಷ ಗುಣ ಅವರ ’ಕ್ಷತ್ರಿಯ ಧರ್ಮ.’ ಒಬ್ಬ ಶತ್ರುವು ಯುದ್ಧ ಮಾಡುವಾಗ,
ತನ್ನಂತೆಯೇ, ಅವನಿಗೂ ಸಮ ನೆಲೆಯಿದ್ದರೆ ಮಾತ್ರ, ಯುದ್ಧ ಮಾಡಬಹುದು. ಶತ್ರುವು, ನಿರಾಯುಧನಾಗಲು, ಸಹಾಯವಿಲ್ಲದ ಸ್ಥಿತಿಯಲ್ಲಿದ್ದರೆ, ಆಗ ಯುದ್ಧ ಮಾಡುವಂತಿಲ್ಲ.. ರಾವಣನೊಡನೆ, ಯುದ್ಧ ಮಾಡುವಾಗ, ಅವನ ಸಾರಥಿ, ರಥ, ಅಸ್ತ್ರಗಳು,, ಕಿರೀಟ, ಎಲ್ಲವನ್ನೂ ಹೇಳಹೆಸರಿಲ್ಲದಂತೆ ಮಾಡಿದರು.. ಮಿಕ್ಕಿದ್ದು ರಾವಣನೇ.
ಶ್ರೀ ರಾಮರು,ಮತ್ತೊಂದು ಬಾಣವನ್ನು ಹಾಕಿದ್ದರೆ, ರಾವಣನ ಕಥೆ ಅಂದೇ ಮುಗಿಯುತ್ತಿತ್ತು.
ಆದರೆ,ಶ್ರೀರಾಮರು, ರಾವಣನಿಗೆ, ’ನಾನು ನಿನ್ನನ್ನು, ಈಗ ಏನೂ, ಮಾಡುವುದಿಲ್ಲ. ಆಯುಧಗಳೊಡನೆ, ನಾಳೆ ಯುದ್ಧಕ್ಕೆ ಬಾ’ ಎಂದರು.. ಶ್ರೀರಮರ ಸ್ಥಾನದಲ್ಲಿ ಮತ್ತೊಬ್ಬರು ಇದ್ದಿದ್ದರೆ, ಹಾಗೆ ಹೇಳುತ್ತಿರಲಿಲ್ಲ. ಆದರೆ, ಶ್ರೀರಾಮರು, ಹಾಗೆ ಮಾಡದೆ,, ಒಬ್ಬ ಕ್ಷತ್ರಿಯನು ಹೇಗೆ ಯುದ್ಧ ಮಾಡಬೇಕೆಂದು ತೋರಿಸಿದರು.
ಶ್ರೀರಾಮರು ತಮಗೆ ನೆರವಿತ್ತವರ ಬಗ್ಗೆ ಹೇಗೆ ನಡೆದುಕೊಂಡರು, ಎಂಬುದನ್ನೂ ಅರಿಯಬೇಕು.
ಯುದ್ಧಕಾಂಡದ ಪಟ್ಟಾಭಿಷೇಕ ಭಾಗವನ್ನು ಓದಿದರೆ, ಈ ವಿಷಯ ಚೆನ್ನಾಗಿ ತಿಳಿಯುತ್ತದೆ. ಪಟ್ಟಾಭಿಷೇಕವನ್ನು ಕಾಣಲು,ಶ್ರೀ ಸುಗ್ರೀವ, , ಶ್ರೀ ವಿಭೀಷಣ, ಮೊದಲಾದವರು ಬಂದಿದ್ದರು. ಆಗ ಸುಗ್ರೀವನಿಗೆ ಶ್ರೀರಾಮರು ತಮ್ಮ ಮನೆಯನ್ನಿತ್ತರು.
ಕಾರಣ, ಅವನು ತಮಗೆ ಮಾಡಿದ ಉಪಕಾರವನ್ನು, ಶ್ರೀರಾಮರು ಮರೆಯಲಿಲ್ಲ. ನಾವು ಉಪಕಾರವನ್ನು ಮಾಡಿದವರ ಹೆಸರನ್ನೂ ಙ್ಯಾಪಕವನ್ನಿಟ್ಟುಕೊಳ್ಳುವುದಿಲ್ಲ. ಶ್ರೀ ರಾಮರ ಬಗ್ಗೆ ಹೇಳುವಾಗ, ಶ್ರೀ ವಾಲ್ಮೀಕಿಯು,
’ಎಕೇನಾಉಪಕಾರೇಣ ಕೃತೇವ ಪರಿತುಷ್ಯತಿ ನಸ್ಮರತುಪಕಾರಾಣಾಂ ಶತಮಪ್ಯಾಟ್ಮವತ್ತಯಾ’ ಎನ್ನುತ್ತಾರೆ.
’ಒಂದೇ ಒಂದು ಉಪಕಾರವನ್ನು ಮಾಡಿದರೂ, ಅದನ್ನು ಸದಾ ನೆನೆಪಿನಲ್ಲಿಟ್ಟುಕೊಳ್ಳುವವರು ಶ್ರೀರಾಮರು. ನೂರು ಅಪಕಾರಗಳನ್ನು ಮಾಡಿದರೂ ಅವರು ಅದನ್ನು ಮರೆಯುತ್ತಾರೆ.. ಇಂತಹ ಮಹಾಗುಣವನ್ನು, ಬೇರೆ ಯಾರ ಬಳಿ ತಾನೆ ನೋದಬಹುದು.. ಶ್ರೀರಾಮನ ನೆಲೆಯಲ್ಲಿ, ನಾವಿದ್ದರೆ, ನಾವು ನಮ್ಮ ಮನೆಯಲ್ಲಿದ್ದುಕೊಂಡು, ಸುಗ್ರೀವನಿಗೆ ಬೇರೆ ಮನೆಯನ್ನು ನೋಡಿಕೊಳ್ಳಲು ಹೇಳುತ್ತಿದ್ದೆವು.. ಶ್ರೀರಾಮರು ಹಾಗೆ ಮಾಡಲಿಲ್ಲ. ಈ ರೀತಿಯ ಸ್ನೇಹವನ್ನು ಬೇರೆ ಯಾರ ಬಳಿ ಕಾಣಬಹುದು.
;’ರಾಮೋ. ವಿಗ್ರಹವಾನ್ ಧರ್ಮಃ-ಎಂದು ವಾಲ್ಮಿಕಿ ಹೇಳಿದರು. ತಪ್ಪು ದಾರಿಯಲ್ಲಿ ರಾವಣನು ನಡೆದನು.. ಅದರೆ, ಜೊತೆಯಲ್ಲಿ ಹುಟ್ಟಿದ ಸೋದರ ವಿಭೀಷಣನು ಅವನ ಕೈ ಬಿಟ್ಟನು.
ಅಪನ್ದಾನಾಂ ತು ಗಚ್ಚಂತಂ ಸೊದರೋಪಿ ವಿಮುಂಚತಿ-
ಸಮೀಪದಲ್ಲಿ ಒಬ್ಬರು, ಗುರುಗಳಲ್ಲಿ, ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋದನು. ಬೇರೇನು ತಪ್ಪನ್ನೂ ಮಾಡಲಿಲ್ಲ. ಅದಕ್ಕಾಗಿ, ಅವನನ್ನು ಹೀಗೆ ದೂಷಿಸಬೇಕೆ- ಎಂದು ಕೇಳಿದರು. ಅದಕ್ಕೆ, ಶ್ರೀ ಗುರುಗಳು’ಸೀತಾಪಹರಣ ಮನ್ನಿಸಲಾಗದ ತಪ್ಪು.. ಬೇರೆ ಯಾವ ತಪ್ಪನ್ನಾದರೂ ಮನ್ನಿಸಬಹುದು.
ಇದನ್ನು ಮನ್ನಿಸಲಾಗದು, ಎಂದು ಶ್ರೀ ಗುರುಗಳು ಉತ್ತರಿಸಿದರು.
’ಮಾತ್ರುತ್ವತ್ ಪರದಾರೇಷು; ನಮ್ಮ ಭಾರತೀಯ ಸಂಸ್ಕೃತಿಯಂತೆ, ಎಲ್ಲಾ ಸ್ಥ್ರೀಯರನ್ನೂ ಮಾತೃಸ್ವರೂಪವಾಗಿ ನೋಡಬೇಕು. ಹಾಗೆ ಮಾಡಿದರೆ, ಮಾತೆಯನ್ನು ಕಂಡರೆ ಯಾರಿಗಾದರೂ, ಕೆಟ್ಟ ಭಾವನೆ ಬರುತ್ತದೆಯೇ. ಇದು ನಮಗೆ ಹೇಳಪ್ಪಟ್ಟ ಒಂದು ಉಪದೇಶ.
ರಾವಣನು ಇಲ್ಲಿಯೇ ತಪ್ಪು ಮಾಡಿದನು. ಸೀತಾಮಾತೆಯನ್ನುಅಪಹರಿಸಿದ್ದರಿಂದ, ಅವನ ಮನ ತಪ್ಪಾದ
ದಾರಿಯಲ್ಲಿ ತೆರಳಿತು. ಅಲ್ಲದೆ, ಎಷ್ಟೋ, ಸತ್ಪುರುಷರಿಗೆ ಅವನಿಂದ ತೊಂದರೆಯಾಯಿತು. ಯಾವ ಸತ್ಕಾರ್ಯನ್ನು ಮಾಡಿದರೂ,ಅದಕ್ಕೆ ತಡೆಯೊಡ್ಡುವುದೇ, ಅವನ ಮತ್ತು ಅವನ ಸಹಚರರ ಉದ್ದೇಶವಾಗಿದ್ದಿತು. ಅವನನ್ನು ಮಾನವನೆನ್ನಲಾಗುವುದೇ.. ಸಾಧ್ಯವಿಲ್ಲ. ಆದ್ದರಿಂದ ಅವನಿಗೆ ಒಳ್ಳೆಯದಾಗಲಿಲ್ಲ.
ಕೆಲವರು ಕೆಟ್ಟ ದಾರಿಯಲ್ಲಿ ಹೋದರೂ ಅವರಿಗೆ ಒಳ್ಳೆಯದಾಗುತ್ತದಲ್ಲಾ. ಅದು ಹೇಗೆ ಎಂದು ಕೆಲವರು ಕೇಳುತ್ತಾರೆ.
ಅದರ್ಮೇಣೈತ್ತೇ ತಾವತ್ತದೋ ಭದ್ರಾಣಿ ಪಶ್ಯತಿ ತತಸಪತ್ನಾಙ್ಯಯತಿ ಸಮೂಲಸ್ತು ವಿನಶ್ಯತಿ. ಎಂದು ಹೇಳಲಾಗಿದೆ.
ಅಕ್ರಮ ಮಾಡುವವನು ಮೊದಲು ಮುಂದುವರಿಯುತ್ತಾನೆ. ಎಲ್ಲಾ ಸಂಪತ್ತನ್ನೂ ಗಳಿಸಿ, ತನ್ನ ಶತ್ರುಗಳಾನ್ನೂ, ಗೆಲ್ಲುತ್ತಾನೆ. ಇವೆಲ್ಲಾ ತಾತ್ಕಾಲಿಕ. ಕಡೆಯಲ್ಲಿ ಅಳಿಯುವನು. ಯಾವಾಗೆಂದರೆ, ಅವನ ಪಾಪದ ಕೊಡ ತುಂಬಿದ ಕ್ಷಣದಲ್ಲೇ.
ರಾವಣನು ಅಧರ್ಮ ಕಾರ್ಯದಲ್ಳೇ ಮಗ್ನನಾಗಿದ್ದನು. ಶ್ರೀರಾಮರ ಜನನಕ್ಕೆ ಮುಂಚೆಯೇ ರಾವಣನ ದುಷ್ಕರ್ಮಗಳು ಪ್ರಾರಂಭವಾಗಿದ್ದುವು.ಅವನ ಪಾಪದ ಕೊಡ ತುಂಬಿದ ಮೇಲೆ, ಅವನಿಗೆ ದಂಡನೆಯಾಯಿತು.
ಇದರಿಂದ ನಾವು ಶ್ರೀ ರಾಮಾಯಣದಿಂದ ಅರಿಯಬೇಕಾದ ನೀತಿ;
’ರಾಮವತ್ ವರ್ಧಿತ್ತ್ವ್ಯಂ ರಾವಣವನನವರ್ದಿತ್ವಂ
’ಶ್ರೀರಾಮರಂತಿರಬೇಕು. ರಾವಣನಂತಿರಬಾರದು’ ಎಂಬುದೇ. ಈ ಒಂದು ನೀತಿಯನ್ನು,ನಾವು ತಿಳಿದುಕೊಂಅರೆ, ನಾವು ರಾಮಾಯಣವನ್ನು ಕೇಳುವುದಕ್ಕೂ, ರಾಮೋತ್ಸವವನ್ನು ನಡೆಸುವುದಕ್ಕೂ, ಫಲ ದೊರಕಿದೆ ಎಂದಾಗಿಬಿಡುತ್ತದೆ... ಆದ್ದರಂತೆ, ನಾವೂ, ಶ್ರೀ ರಾಮರಂತೆ ಧಾರ್ಮಿಕ ಜೀವನ ನಡೆಸಬೇಕು.
===============================================================================
ಅಧ್ಯಾಯ-೧೧.
==========
ದೇವರ ದರ್ಶನ ಯಾವಾಗ ದೊರಕುವುದು
====================================
ಈ ಪ್ರಪಂಚದಲ್ಲಿ ಹಲವು ಜನರಿದ್ದಾರೆ. ಕೆಲವರು ಹಣವಂತರು. ಕೆಲವರು ಹಣವಿಲ್ಲದವರು. ಕೆಲವರು ವಿದ್ಯಾವಂತರು.
ಕೆಲವರು ಅವಿದ್ಯಾವಂತರು.ಕೆಲವರು ರೂಪವಂತರು. ಕೆಲವರು ಕುರೂಪಿಗಳು. ಹೀಗೆ, ಮನುಷ್ಯರಲ್ಲಿ ಭೇದವಿದ್ದರೂ,ಎಲ್ಲರಿಗೂ, ಸಮಾನವಾದ ವಿಷಯವೊಂದಿದೆ.. ಅವರೆಲ್ಲರೂ ಸುಖವಾಗಿರಬೇಕೆಂದು’ ಒಬ್ಬ ಕಳ್ಳನು ಅಪಹರಿಸುವುದು, ತಾನು, ಒಮ್ಮೆಲೇ. ಸಾಹುಕಾರನಾಗ-
ಬೇಕೆಂದು.’ತಾನು ಸದಾ ಸುಖವಾಗಿರಲು ಬಯಸಿ ಕಳ್ಳತನ ಮಾಡುತ್ತಾನೆ.
ಅದು ತಪ್ಪು ಕೆಲಸವಾದ್ದರಿಂದ ದಂಡೆನೆಯನ್ನನುಭವಿಸಲೇಬೇಕು.’ ಜನರಲ್ಲಿ ಭೇದವಿದ್ದರೂ, ಎಲ್ಲರೂ ಸುಖವಾಗಿರಬೇಕುಂದರಲ್ಲಿ ಒಮ್ಮತವಿದೆ..’ ಆದ್ದರಿಂದ ಒಬ್ಬನಿಗೆ, ’ತನಗಿಂತ, ಅತ್ಯಂತ ಪ್ರಿಯವಾದ ವಸ್ತು ಯಾವುದೆಂದರೆ ಅದು’ ನಾನು’ ಎನ್ನಲ್ಪಡುತ್ತದೆ.. ಒಬ್ಬನಿಗೆ ’ತನಗಿಂತ[ಆತ್ಮ] ಪ್ರಿಯವಾದ ವಸ್ತು ಯಾವುದೂ ಇಲ್ಲ.’ ಯಾವುದರಿಂದ ಆತ್ಮಕ್ಕೆ ಪರಮ ಸುಖ ದೊರೆಯುತ್ತದೆ.. ಭೋಜನದಿಂದಲೇ, ಸಂಗೀತ ಶ್ರವಣದಿಂದಲೇ. ಇದರಿಂದ ಖಂಡಿತ ಸುಖ ಲಭ್ಯವಿಲ್ಲ.
. ಹೊಟ್ಟೆ ತುಂಬ ಊಟ ಮಾಡಿದರೆ, ತತ್ಸಮಯಕ್ಕೆ, ಚೆನ್ನಾಗಿದ್ದರೂ, ನಂತರ, ಹೊಟ್ಟೆಯನೋವು, ಅಥವಾ ತಲೆಯ ನೋವೋ ಬರುತ್ತದೆ.. ನಂತರ ’ವೈದ್ಯರ ದರ್ಶನ.’ ಜನರು, ’ಹೀಗಾಯಿತಲ್ಲ,ಪ್ರಪಂಚ ಎನ್ನುತ್ತಾರೆ.. ಒಂದು ಭಾರಿ ಕಚೇರಿಗೆ ರೂ.೧೦೦-೨೦೦ ಕೊಟ್ಟು ಹೋದರೂ, ಸ್ವಲ್ಪ ಹೊತ್ತಿನ ನಂತರ ಹೊರಗೆ ಹೋಗಲು ಮನವಾಗುವುದು. ಹೀಗೆಯೇ,ಎಲ್ಲಾ ಲೌಕಿಕ ವಿಷಯಗಳೂ, ಪ್ರಾರಂಭದಲ್ಲಿ ಆಕರ್ಷಿತವಾದರೂ, ಕಡೆಯಲ್ಲಿ ಜಿಗುಪ್ಸೆಯಲ್ಲಿ ಕೊನೆಗೊಳ್ಳುವುದು.
. ಆದ್ದರಿಂದ,’ ಲೌಕೀಕ ವಿಷಯಗಳಿಂದ ಸುಖ ಲಭ್ಯ ’ಎನ್ನುವುದು ತಪ್ಪು.
’ನಿಜ ಸುಖ’ ಲೌಕಿಕ ಸುಖದ ವರ್ಜನೆಯಲ್ಲಿದೆ. ಪ್ರಾಪಂಚಿಕ ವಿಷಯಗಳಲ್ಲಿ ಆಸೆಯಿಟ್ಟು, ಅದಕ್ಕೆ ಬದ್ಧನಾಗಿರುವವರೆಗೂ,’ಆಸೆಗೆ ತಕ್ಕಂತೆ ಅದನ್ನು ವರ್ಜಿಸುವ ಇಚ್ಚೆ ಬರುತ್ತದೆ.
ಪ್ರಾರಂಭದಿಂದ ಲೌಕಿಕ ಆಸೆಗಳನ್ನು ಬಿಟ್ಟರೆ, ಮೊಸವೋ-ದುಃಖವೋ ಇರುವುದಿಲ್ಲ. ಲೌಕಿಕ ವಿಷಯದಲ್ಲಿ ಮನವನ್ನು ವರ್ಜಿಸಿ, ಭಗವಂತನತ್ತ ಮನ ಚಲಿಸಬೇಕು.. ಆಗಲೇ, ’ಸುಖ ಲಭ್ಯ,’ ಎಂದು ಹಿರಿಯರು ಹೇಳುತ್ತಾರೆ. ಒಂದು ವಿಷಯವನ್ನು ಜ್ಞ್ಯಾಪಕದಲ್ಲಿಟ್ಟುಕೊಳ್ಳಬೇಕು.. ’ ಈ ಸಮಸ್ತ ಜಗವನ್ನು ನಡೆಸುವುದಕ್ಕೆ ’ಈಶ್ವರನೊಬ್ಬನಿದ್ದಾನೆ’ ಎಂಬುದೇ.
’ದೇವರನ್ನು ಮರೆಯುವುದು ಮಹಾ ಪಾಪ.’ ಕೆಲವರಿಗೆ ಹಲವು ಪ್ರಶ್ನೆಗಳು. ’ಏಕೆ ದೇವರು ನಮ್ಮ ಕಾಣ್ಣಿಗೆ ಕಾಣುವುದಿಲ್ಲ.. ಹೇಗೆ ಅನುಗ್ರಹಿಸುತ್ತಾನೆ. ಏನೂ ತಿಳಿಯುವುದಿಲ್ಲ. ನಾವು ಕೆಲಸ ಮಾಡುತ್ತೇವೆ. ಅದಕ್ಕೆ ಫಲ ದೊರಕುತ್ತದೆ.”
’ಇದರಲ್ಲಿ ಭಗವಂತನ ಪಾತ್ರವೇನು’. ಇದೇ ಪ್ರಶ್ನೆ.
ಈಶ್ವರನು ಭಕ್ತರಿಗೆ ’ಸರಿಯಾದ ಪ್ರೇರಣೆಗಳನ್ನು ಕೊಡುವದರ ಮೂಲಕ ಅನುಗ್ರಹಿಸುತ್ತಾನೆ’ ಎಂದು ಶಾಸ್ತ್ರ ಹೇಳುತ್ತದೆ.
ಅಂದರೆ, ನಮ್ಮ ಬುದ್ಧಿ’ ಸರಿಯಾದ ರೀತಿಯಲ್ಲಿ ಹೋದರೆ ಮಾತ್ರ ನಾವು ಸುಖವಾಗಿರಬಹುದು. ಇದನ್ನು ವಿವರಿಸಲು ಒಂದು ಸಣ್ಣ ಕಥೆ.
ಒಮ್ಮೆ ಲಕ್ಶ್ಮಿದೇವಿಗೂ ಸರಸ್ವತಿಗೂ ವಾಗ್ವಾದ ಬಂದಿತಂತೆ. ಅವರಿಬ್ಬರಲ್ಲಿ’ ಹಿರಿಯರಾರೆಂದು’. ಲಕ್ಷ್ಮೀ ಹೇಳಿದಳು.
’ಸರಸ್ವತಿ, ನಿನ್ನ ಅನುಗ್ರಹ ಹಲವರಿಗಿದ್ದರೂ, ಅವರು ಒಪ್ಪತ್ತಿನ ಊಟಕ್ಕೂ ಅನುಕೂಲವಿಲ್ಲದವರಾಗಿರಬಹುದು.
ನಾನು ಆನುಗ್ರಹಿಸಿದರೆ, ಅವರು ಹಣವಂತರಾಗಿ ಬಾಳುತ್ತಾರೆ. ಅನಕ್ಷರಸ್ತನೂ, ಲಕ್ಷಾಧಿಪತಿಯಾಗಿಬಿಡುತ್ತಾನೆ.ಆದ್ದರಿಂದ ’ನಿನ್ನ ಕೃಪೆ ಅವಶ್ಯವಿಲ್ಲ’ ಎಂದಳು.. ಸರಸ್ವತಿ, ಲಕ್ಷ್ಮಿಗೆ, ’ನೀನು ಅನಕ್ಷರಸ್ತನಿಗೆ ಅನುಗ್ರಹಿಸು. ಆಮೇಲೆ ’ನೋಡೋಣ ಎಂದಳು.’ . ಲಕ್ಷ್ಮಿ ಅನುಗ್ರಹಿಸಲು, ಅನಕ್ಷರಸ್ತನೊಬ್ಬನು ದೊಡ್ಡ ಶ್ರೀಮಂತನಾದನು.
ಅವನು,ತನ್ನ ಮನೆಯ ಹತ್ತನೆಯ ಮಹಡಿಯಿಂದ ನಗರವನ್ನು ನೋಡಿದ.’ ನಾನು ಹತ್ತನೆಯ ಮಹಡೀಯಿಂದ ಕೆಳಗೆ ಧುಮಿಕಿದರೆ ಚೆನ್ನಾಗಿರುತ್ತದೆಂದು’ ಅವನಿಗನ್ನಿಸಿತು.. ಸರಸ್ವತಿಯು, ಲಕ್ಷ್ಮೀದೇವಿಗೆ,’ ಅವನು ಕೆಳಗೆ ಬಿದ್ದರೆ, ನಿನ್ನ ವರ ಪ್ರಯೋಜನವಾಗುವುದಿಲ್ಲ.. ಅವನು ಸತ್ತರೆ ನಿನ್ನ ಹಣ ಅವನನ್ನು ಕಾಯುವುದಿಲ್ಲ. ಈಗಲೂ, ’ನೀನು ಸೋಲೊಪ್ಪಿಕೊಂದರೆ ಅವನನ್ನು ’ಕಾಯುತ್ತೇನೆ ಎಂದಳು.. ಲಕ್ಷ್ಮಿದೇವಿ ಒಪ್ಪಲು, ಅವನಿಗೆ ಸರಸ್ವತಿಯು ಒಳ್ಳೆಯ ಬುದ್ಧಿಯನ್ನು ಕೊಟ್ಟಳು.
ಅವನು ತನ್ನ ಅಙ್ಯಾನವನ್ನರಿತು, ತನ್ನ ಕೆಳಗೆ ಧುಮುಕುವ ನಿರ್ಧಾರವನ್ನು ಬದಲಾಯಿಸಿದನು. ಗುರುಗಳು ಈ ಕಥೆಯನ್ನು ಹೇಳಿದ ಕಾರಣ, ’ದೇವರು ತಕ್ಕ ಸಮಯದಲ್ಲಿ ಪ್ರೇರಣೆಯನ್ನು ಕೊಟ್ಟು ಜನಗಳನ್ನು ಅನುಗ್ರಹಿಸುತ್ತಾನೆ’ ಎಂದು ತಿಳಿಸಲು.
ಸರಸ್ವತಿಯ ಕಥೆಯಲ್ಲಿ, ಆ ವ್ಯಕ್ತಿಗೆ ಸರಿಯಾದ ಬುದ್ಧಿಯನ್ನು ಕೊಡದಿದ್ದರೆ ಅವನು ಕೆಳಗೆ ಬೀದ್ದು ಸಾಯುತ್ತಿದ್ದ.
ಯಂಹಿರಕ್ಷಿತುಮಿಛ್ಛಂತಿ ಬುಧ್ಯಾ ಸಂಯೋಜೋಜಯಂತಿ ತಂ
’ನಾವು ಸತ್ಕಾರ್ಯಾಗಳನ್ನು ಮಾಡಲು ಭಗವಂತ ಪ್ರೇರೇಪಿಸುತ್ತಾನೆ’. ಮನುಷ್ಯನು ಯಾವ ಕಾರ್ಯ ಮಾಡಲೂ, ಮನದಲ್ಲಿ ಪ್ರೇರಣೆಯಾಗಬೇಕು.. ನಂತರ ಕಾರ್ಯಶೀಲನಾಗುವನು.” ಮನದ ಪ್ರೇರಕ ಭಗವಂತ,ಮತ್ತು ಅವನ ಇರುವಿಕೆಯಲ್ಲಿ ಯಾರಿಗೂ ಸಂದೇಹವಿರಬಾರದು.’
.
’ದೇವರು ನಮ ಮುಂದೆ ಯಾಕೆ ತೋರುವುದಿಲ್ಲ., ಎಂಬುದು ಹಲವರ ಪ್ರಶ್ನೆ. ಅವನು ’ಸರ್ವಜ್ಜ್ಯ, ಪ್ರಾಙ್ಯ, ಸರ್ವವ್ಯಾಪಿ, ಸರ್ವ ಶಕ್ತ.’, ಅಂತಹವನನ್ನು, ಎದುರು ಕಂಡರೆ, ತಿರುಗಿ ಹೋಗಲು ಬಿಡುತ್ತೇವೆಯೇ. ಸಾಧಾರಣ ಸಚಿವರು ಬಂದರೆ,ವಿದ್ಯುತ್ಶಕ್ತಿ, ನೀರು,ಕೊಳಾಯಿಗಳು, ಬೇಕೆಂದು ಮುತ್ತಿಬಿಡುತ್ತಾರೆ.’ ದೇವರು ಬಂದರೆ, ಸುಮ್ಮನೆ, ಬಿಡುತ್ತೇವೆಯೇ.’. ’ಸ್ವರ್ಗವನ್ನು ಇಲ್ಲಿ ಕೊಂಡು ಬಾ, ಎನ್ನುತ್ತೇವೆ. ಇಲ್ಲದಿದ್ದರೆ, ಮರಳಿ ಹೋಗಲು ಬಿಡುವುದಿಲ್ಲ ಎನ್ನುತ್ತೇವೆ. ಆದ್ದರಿಂದ ದೇವರು ನಮ್ಮ ಎದುರು ಬರುವುದಿಲ್ಲ.
ಎಷ್ಟೋ ಮಹಾತ್ಮರಿಗೆ ದೈವ ದರ್ಶನವಾಗಿದೆ. ನಾವು ಅವರ ಮಾರ್ಗವನ್ನೂ, ಸಾಧನೆಗಳನ್ನು, ಕೈಗೊಳ್ಳದ್ದರಿಂದ ದರ್ಶನವಾಗುವುದಿಲ್ಲ.
.
ಕ್ಷಾಂತಂ ನ ಕ್ಷಮಯಾ ಗೃಹೋಚಿತಸುಖಂ ತ್ಯಕ್ತಂ ನ ಸಂತೊಷತಃ
ಸೋಡಾ ತುಃಸಹಶೀತವಾತತಪನ ಕ್ಲೇಶೋ ನ ತಪ್ತಂ ತಪಃ
ತ್ಯಾತಂ ವಿತ್ತಮಹರ್ನಿಶಂ ನಿಯಮಿತ ಪ್ರಾಣೈರ್ ನ ಶಂಭೋಃ ಪದಂ
ತತ್ತತ್ ಕರ್ಮ ಕೃತಂ ಯದೇವ ಮುನಿಭಿ ಸ್ತೈಸ್ತೈ ಫಲೈರ್ವಂಚಿತಾಃ
ಮೇಲಿನ ಶ್ಲೋಕದಂತೆ, ನಾವು ಹೀಂದಿನವರಂತೆ, ಸಾಧನೆಗಳನ್ನು ಮಾಡುತ್ತೇವೆಂದು ಹೇಳಬಹುದು. ಅವರು ತಪ,
ಸಾಧನೆಗಳನ್ನು ಗೈದು, ಬಿಸಿಲು ಮಳೆಗಳನ್ನು ಸಹಿಸಿದರು. ನಾವು, ಸಾಧನೆ, ತಪಗಳಾನ್ನು ಮಾಡಿ, ಬಿಸಿಲು, ಮಳೆ,ಸಹಿಸಿದೆವು.. ಫಲಾಮಾತ್ರ ಸಿಕ್ಕಲಿಲ್ಲ. ಏಕೆ.
ಅವರು, ’ಆಸೆರಹಿತ ಜೀವನಕ್ಕೆ ತಪ ಗೈದರು. ನಾವು ಸಾವಿರಾರು ಆಸೆಗಳ ಪೂರೈಕೆಗೆ ತಪ ಮಾಡುತ್ತೇವೆ’. ’ಅವರು, ಬಿಸಿಲು,ಮಳೆ, ಚಳಿಗಳನ್ನು ಹರ್ಷದಿಂದ ಸ್ವೀಕರಿಸಿದರು..’ ನಮಗೆ,ವಿದ್ಯುತ್ ಶಕ್ತಿ, ಜನರೇಟರ್, ಇಲ್ಲದಿದ್ದರೆ, ’ಸರಿ-ಹೋಗಲಿ,ಬಿಡು’, ಎನ್ನುತ್ತೇವೆ..’ ಛಳಿಗಾಲದಲ್ಲಿ ಸೌದೆ ಇಲ್ಲದೆ ತಣ್ಣಿರು ಸ್ನಾನ ಅವಶ್ಯವಾದರೆ,’ ’ಹೋಗಲಿ ಬಿಡು’ ಎನ್ನುತ್ತೇವೆ.ಇದು ನಮ್ಮ ದಾರಿ. ಅದು ಅವರ ದಾರಿ.
.
ಯತ್ಕಾಂಕ್ಷಂತಿ ತಪೋಭಿರನ್ಯಮುನಯಸ್ತೇಸ್ಮಿನ್ ತಪಸ್ಯನ್ತ್ಯಾಮಿ
’ಎಷ್ಟೇ ಅನುಕೂಲಗಳಿದ್ದರೂ, ಅದು ನನಗೆ ಅನವಶ್ಯ. ಭಗವಂತನ ಸಾಕ್ಷಾತ್ಕಾರವೇ ಸಾಕು.’ ಇದು ಅವರ ಅನಿಸಿಕೆ.
ಅವರು ಅಂತೆಯೇ,’ ಭಗವಂತನ ಪಾದವನ್ನು ನಿರಂತರವೂ ಧ್ಯಾನಿಸಿದರು.. ನಾವು ಧ್ಯಾನಿಸುತ್ತೇವೆ. ಯಾವುದಕ್ಕೆ.
’ಧ್ಯಾತಂ ವಿತ್ತಮಹರ್ನಿಶಂ’
’ಹಣದ ಬಗ್ಗೆ ಧ್ಯಾನ, ದ್ವಿಗುಣಗೊಳಿಸುವುದರ ಬಗ್ಗೆ ಧ್ಯಾನ’ ಸತತ’. ಅದಕ್ಕೇ, ಅದರ ಫಲ ನಮಗೆ ಸಿಗಲಿಲ್ಲ.
ತತ್ತತ್ ಕರ್ಮ ಕೃತ್ತಮ್ಯತೇವ ಮುನಿಭಿಸ್ತೈತೈರ್ಪಲೈರ್ವಂಚಿತಾಃ
ಅವರ ವಿಧಾನಕ್ಕೂ, ನಮ್ಮ ವಿಧಾನಕ್ಕೂ ಎಷ್ಟು ವ್ಯತ್ಯಾಸ.ಆದ್ದರಿಂದ ನಾವೂ ಅವರ ಹಾದಿಯಲ್ಲಿಯೇ ನಡೆಯಬೇಕು.
ಆಸೆಗಳ ಈಡೇರಿಕೆಗೆ ಭಗವಂತನ ಆರಾಧನೆ ಸರಿಯಲ್ಲ.’ ಆಶಾರಹಿತವಿದ್ದರೆ’ ನಿಜವಾದ ಸುಖ ಗಳಿಕೆ. ಬರುವ ಆಸೆಗಳ ಪೂರೈಕೆಗೆ ಪ್ರಯತ್ನ ಅಪಜಯವನ್ನು ತರುತ್ತದೆ.’ ಆಸೆ ತೀರದೆ ದುಃಖವೇ ಉಳಿಯುವುದು.’ ಆಸೆಯು ಯಾರಿಗು ಸುಖ ಸೇರಿಸುವದಿಲ್ಲ.
೧೦ರೂ ಇದ್ದರೆ, ನೂರು, ೧೦೦ ಇದ್ದರೆ ಸಾವಿರ, ೧೦೦೦ವಿದ್ದರೆ ಲಕ್ಷ, ೧,೦೦,೦೦೦/- ವಿದ್ದರೆ ೧೦,೦೦,೦೦೦-,ನಂತರ ಕೋಟಿ,ಇದಕ್ಕೆ ಕೊನೆಯಲ್ಲಿ.
’ನಮ್ಮ ಮನದಲ್ಲಿ ಆಸೆಗಳನ್ನು ಅಳಿಸಿ, ಈಶ್ವರ ಸಾಕ್ಷಾತ್ಕಾರವೇ ಗುರಿಯಾದರೆ, ನಮಗೆ ಈಶ್ವರ ದರ್ಶನ ಖಚಿತ.
ಭಗವಂತನಿಗೆ,’ ಬೇಕು-ಬೇಡ ಇವೆರಡರಿಂದ ಅವನು ದೂರ.’ ಮನುಷ್ಯರಿಗೆ, ಅವರವರ ಕರ್ಮದನುಸಾರವಾಗಿ ಫಲವನ್ನನುಭವಿಸುತ್ತಾನೆ...ನೀತಿಪತಿಯು, ಎಲ್ಲರಿಗೂ, ಸಮನಾಗಿ ಶಿಕ್ಷೆ ಕೊಡದೆ, ಅವರವರ ತಪ್ಪನ್ನನುಸರಿಸಿ ದಂಡನೆ ಕೊಡುತ್ತಾನೆ.. ಅದಕ್ಕೆ, ಅವನನ್ನು ದೂಷಿಸುವುದು ಸರಿಯೇ. ಅಂತೆಯೇ, ನಮ್ಮ ಕರ್ಮಾನುಸಾರವಾಗಿ ಭಗವಂತ ಫಲವನ್ನಿತ್ತರೆ, ಅವನನ್ನು ದೂಷಿಸಬಹುದೇ.
ನ ಮೇ ದ್ವೇಷ್ಯೋಸ್ತಿ ನಪ್ರಿಯಃ
ಇದು ಭಗವಂತನ ವಾಣಿ.’ ನನಗೆ[ಬೇಕು-ಬೇಡದವರೆಂಬುದಿಲ್ಲ..ಆದ್ದರಿಂದ’,ಭಗವಂತನನ್ನು, ಅತೀವ ಭಕ್ತಿಯಿಂದ ಆರಾಧಿಸಿ ಶ್ರೇಯಸ್ಸನ್ನು ಪಡೆಯಬಹುದು.
.
ಗುರುಗಳು ಈ ವಿಷಯಗಳನ್ನು ಹೇಳಲು ಕಾರಣ,ಒಬ್ಬನಿಗೆ ’ಅವನೇ ಪ್ರಿಯವಾದ ವಸ್ತು ಎಂದರಿತೆವು.’
’ಅವನು ತನಗೆ ಪರಮಸುಖ ಬೇಕೆಂದು ಬಯಸುತ್ತಾನೆ. ಅದನ್ನು ಬಯಸುವವನು ಪ್ರಾಪಂಚಿಕ ವಸ್ತುಗಳಿಂದ ಸುಖದೊರಕುವುದೆಂದು ಬಯಸಬಾರದು.. ಅದು ದೇವರ ಅನುಗ್ರಹದಿಂದ ದೊರೆಯುವುದು.’ ಆದ್ದರಿಂದ’ ವ್ಯಕ್ತಿಯು ಭಗವಂತನನ್ನು ಭಕ್ತಿಯಿಂದ ಆರಾದಿಸಿ ಅವನ ಅನುಗ್ರಹವನ್ನು ಪಡೆಯಬೇಕು.ಇದೇ, ಶ್ರೀ ಗುರುಗಳು, ಮಾತನಾಡಲು ತೆಗೆದುಕೊಂಡ ವಿಷಯ.
ದೇವರನ್ನು ನೆನೆಯುವ ಬಗ್ಗೆ ಪಿತಾಮಹ ಭೀಷ್ಮರು,ಯುಧಿಷ್ಠಿರನಿಗೆ,
ಏಷಮೇ ಸರ್ವಧರ್ಮಾಣಾಂ ಕರ್ಮೇಧಿಕತಮೋ ಮತಃ ಯದ್ ಭಕ್ತ್ಯಾ ಪುಂಡರೀಕಾಕ್ಶಂ ಸ್ಥವೈವರ್ಷೇನ್ನರಃಸದಾ
ಎನ್ನುತ್ತಾರೆ. ಎಲ್ಲಾ ಧರ್ಮಗಳಿಗು ಉತ್ತಮ ಧರ್ಮ ’ಭಕ್ತಿಯಿಂದ ಭಗವಂತನನ್ನು ಆರಾಧಿಸುವುದು. ’ಭಕ್ತಿಯಿಂದ’ಎಂದರೆ.
ಎಂದರೆ, ಭೀಷ್ಮರ ನುಡಿಯಂತೆ,’ ನಾವು ಮಾಡುವ ಪೂಜೆ, ಜಪ, ಮತ್ತವರ ವೀಕ್ಷಣೆಗಲ್ಲ. ಪ್ರಚಾರಕ್ಕಾಗಿಯೂ ಅಲ್ಲ.’
ಅದು ಭಗವಂತನಿಗೆ ಗೊತ್ತು. ಮತ್ತವರು ಅರಿಯಬೇಕಾಗಿಲ್ಲ’, ಎಂಬುದು ನಿಶ್ಚಯವಾಗಿ ತಿಳಿದಿರಬೇಕು.
ಕೆಲವರು ಸಂಕಲ್ಪ ಮಾಡುವಾಗ, ದೊಡ್ಡ ಪಟ್ಟಿಯನ್ನೇ ಸೇರಿಸುವರು. ;ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಅಯುಆರೋಗ್ಯ ಅಭಿವೃದ್ಯರ್ತಂ’ಎಂದು.
. ಇದು ಅವಶ್ಯವೇ. ಭಗವಂತ ಸರ್ವಜ್ಞ್ಯನು. ಅವನಿಗೆ ಗೊತ್ತು. ಆದ್ದರಿಂದ, ಶ್ರೀ ’ಪರಮೇಶ್ವರ ಪ್ರೀತ್ಯರ್ಥಂ’ ಎಂದರೆ ಸಾಕಲ್ಲವೇ.
. ಇನ್ನೂ ಸ್ವಲ್ಪ ಸೇರಿಸಿ ಎಂದು ಪುರೋಹಿತರಿಗೆ ಹೇಳುತ್ತಾರೆ. ಭಗವಂತ
’ಸರ್ವಜ್ಞ್ಯ, ಸರ್ವಶಕ್ತ. ಅವನಿಗೆ ತಿಳಿಸಿ ಹೇಳಬೇಕಾದ್ದಿಲ್ಲ. ಅವನು ತೃಪ್ತಿಯಾದರೆ ನಮಗೆ ಬೇರೇನೂ ಬೇಕಿಲ್ಲ.’
ಕುಚೇಲನು ಕೃಷ್ಣನ ಪರಮ ಭಕ್ತ. ಅವನ ಸನ್ನಿಧಿಗೆ ತೆರಳಿದಾಗ, ಅದು-ಇದು ಬೇಕೆಂದು ಕೇಳಲಿಲ್ಲ. ಒಂದು ಹಿಡಿ ಅವಲಕ್ಕಿಯನ್ನು ಭಗವಂತನಿಗೆ ನೀಡಿದ.’ಕೃಷ್ಣ ಪರಾಮಾತ್ಮನಿಗೆ ಸಂತೊಷವಾಗಲೆಂಬುದೇ ಉದ್ದೆಶವಾಗಿತ್ತು.’
ಶ್ರೀ ಹರಿಯು, ಅದನ್ನು ಬಾಯಲ್ಲಿ ಹಾಕಿಕೊಂಡು ’ತೃಪ್ತೋಸ್ಮಿ’ ಎಂದನು. ಅದೇ ಸಮಯದಲ್ಲಿ ಕುಚೇಲನು ಶ್ರೀಮಂತನಾಗಿಬಿಟ್ಟನು..’ ಭಗವಂತ ಸರ್ವಜ್ಞ್ಯ. ಅವನ ಬಳಿ ನಾವೇನೂ ಕೇಳಬೇಕಾದ್ದಿಲ್ಲ’. ಎಂಬುದಕ್ಕೆ, ಇದೊಂದೇ ಸಾಕಲ್ಲವೇ.
ಆದ್ದರಿಂದ,’ನಾವು ನಡೆಸುವ ಸತ್ಕಾರ್ಯಗಳೋ, ಪೂಜೆಯೋ,ಫ್ರಚಾರಕ್ಕಾಗಲ್ಲ.’ . ’ಅದರಿಂದ, ಅವುಗಳಿಂದ ಈಶ್ವರ
ತೃಪ್ತಿಯಾಗಬೇಕುಂಬುದೇ,’ ನಮ್ಮ ಅಭಿಪ್ರಾಯವಾಗಿರಬೇಕು. ಆದ್ದರಿಂದಲೇ, ಪಿತಾಮಹ ಭೀಷ್ಮರು;
’ಯತ್ಭಕ್ತ್ಯಾ ಪುಂಡರೀಕಾಕ್ಷಂ ಸ್ಥವೇರರ್ಚನ್ ನರಸ್ಸದಾ’ ಎನ್ನುತ್ತಾರೆ.’ ಭಕ್ತಿಯಿಂದ ವ್ಯಕ್ತಿಯೊಬ್ಬನು ಭಗವಂತನ ನಾಮವನ್ನು ಉಚ್ಚರಿಸಿದರೆ, ಅದೇ ದೊಡ್ಡ ಧರ್ಮ ಎನ್ನುತ್ತಾರೆ’., ಪಿತಾಮಹರು.
’ಹತ್ತು ನಿಮಿಷವಾದರೂ, ಭಗವನ್ನಾಮವನ್ನುಚ್ಚರಿಸಿದರೆ, ಅದೇ ದೊಡ್ಡ ಧರ್ಮವಾಗುತ್ತದೆ.’
ಕೆಲವರು, ಪೂಜೆ ಅಥವಾ ಸಂಧ್ಯಾವಂದನೆಯನ್ನು ಮಾಡುವಾಗ, ಮನದಲ್ಲಿ ಬೇಡದ ಯೋಚನೆ ಬರುತ್ತದೆ.ಅವನಿಂದ ಇಷ್ಟು ಹಣ ಬರಬೇಕು.. ಅವನ ಮೇಲೆ,’ ಕೇಸು ಹಾಕಬೇಕು, ಎಂದು ಚಿಂತಿಸುತ್ತಿರುತ್ತಾರೆ. ಅದು ತಪ್ಪು. ಆ ಹತ್ತು ನಿಮಿಷಗಳ,ಪೂಜಾಕಾಲದಲ್ಲಿ ’ಬಾಕಿ ವಿಶಯವನ್ನು ಮರೆತು ಭಗವತ್ ಚಿಂತನೆಯಲ್ಲಿಯೇ, ತಲ್ಲೀನರಾಗಿರಿ. ಅದು ನಿಮಗೆ ಪರಮ
ಶ್ರೇಯಸ್ಸಿಗೆ ಕಾರಣವಾಗುತ್ತದೆ.’ ಅಲ್ಪ ವೇಳೆಯಲ್ಲಿ ಪೂಜೆ ಮಾಡಿದರೂ, ಭಕ್ತಿಯಿಂದ ಮಾಡಿದರೆ, ಅದು ವಿಶೇಷಫಲವನ್ನು ಕೊಡುತ್ತದೆ.. ಆದ್ದರಿಂದ, ’ಶ್ರೇಯಸ್ಸನ್ನು ಬಯಸುವರೆಲ್ಲರೂ ಭಗವಂತನನ್ನು ಪೂಜಿಸಿ, ಅವನ ಅನುಗ್ರಹವನ್ನು ಪಡೆಯಲಿ.
==============================
ಅಧ್ಯಾಯ.೧೨.
============
ಭಗವಂತನ ದಯೆ ಅವಶ್ಯ.
===========================
ಎಲ್ಲರಿಗೂ ಚೆನ್ನಾಗಿ ಕೆಲಸ ಮಾದಬೇಕೆಂಬ ಅಭಿಪ್ರಾಯವಿರುತ್ತದೆ. ಮನಸ್ಸಿನಲ್ಲಿ ಅಂತೆಯೇ
ಸಂಕಲ್ಪಮಾಡಿ ನಾವು ಪ್ರಯತ್ನವನ್ನೂ ಮಾಡುತ್ತೇವೆ. ಎಲ್ಲರಿಗೂ ಫಲ ಒಂದೇ ರೀತಿಯಾಗಿರುವುದಿಲ್ಲ.
ಒಬ್ಬ ಹಿರಿಯರು;
ತುಲ್ಯಂ ಕರ್ಶಂತಿ ಪೃಥಿವೀಂ ತುಲ್ಯಂ ಶಾಸ್ತ್ರಾಣ್ಯತೀಯತೇ
ಉನ್ಮಜ್ಜಂತಿ ನಿಮಜ್ಜಂತಿ ದೈವಸ್ಯೈಕಸ್ಯ ಲೀಲಯಾ -ಎಂದರು.
ತುಲ್ಯಮ್ ಕರ್ಶಂತಿ ಪ್ರುತಿವಿಂ-ಸ್ವಲ್ಪ ಭೂಮಯನ್ನಿಟ್ಟುಕ್ಕೊಂಡಿದ್ದಾರೆ, ಇಬ್ಬರೂ, ಜಮೀನಿನಲ್ಲಿ ಸಮವಾಗಿಯೇ ದುಡಿಯುತ್ತಾರೆ. ಒಬ್ಬನಿಗೆ ಸ್ವಲ್ಪವೂ ಫಲ ಸಿಕ್ಕಲಿಲ್ಲ.ಮತ್ತೊಬ್ಬನಿಗೆ,ಬಹಳ ಸಿಕ್ಕಿತು.. ’ತುಲ್ಯಮ್ ಶಾಸ್ತ್ರಾಣ್ಯತೀಯತೇ’-. ಇಬ್ಬರೂ ಒಬ್ಬ ಹಿರಿಯರ ಬಳಿ ಶಾಸ್ತ್ರ
ಕೇಳಲು ಬಂದರು. ಅವರು ಇಬ್ಬರಿಗೂ ಸಮನಾಗಿಯೇ ಶಾಸ್ತ್ರವನ್ನು ಹೇಳಿಕೊಂಡು ಬಂದರು. ಪಕ್ಷ-
ಪಾತವಿಲ್ಲದೆ, ಇಬ್ಬರಿಗೂ, ಸಮನಾಗಿ ಭೊದಿಸಿದರು. ಇಬ್ಬರೂ ಒಂದೇ ರೀತಿ ಅಧ್ಯಯನ ಮಾಡಿದರು.
ಉನ್ಮಜ್ಜಂತಿ ನಿಮಜ್ಜಂತಿ- ಒಬ್ಬನು ಪರಮ ಪಂಡಿತನಾಗಲು, ಮತ್ತೊಬ್ಬನು ಎನೂ ಕಲಿಯಲೇ ಇಲ್ಲ.
ಅದಕ್ಕೆ ಏನು ಕಾರಣವನ್ನು ಹೇಳಬಹುದು. ಗುರುಗಳನ್ನೋ-.ಶಿಷ್ಯನನ್ನೋ, ತಪ್ಪು ಹೇಳುವಂತಿಲ್ಲ.
ಎಕೆಂದರೆ, ಅವನೂ ಶ್ರದ್ದೆಯಿಂದಲೇ, ಗಮನಿಸುತ್ತಿದ್ದನು. ಹಾಗಿದ್ದರೂ, ಅವನಿಗೆ ಅರಿವು ಬರಲಿಲ್ಲ ಎಂದರೆ,, ದೈವಸೇಕಸ್ಯ ಲೀಲಯಾ-ಕೇವಲ ’ಅದೃಷ್ಟವಾದ’ ಒಂದು ಕಾರಣ, ಒಬ್ಬನಿಗೆ,ಆ ರೀರಿಯ ಫಲವನ್ನೂ, ಇವನಿಗೆ, ಈ ರೀತಿಯ ಫಲವನ್ನೂ ಕೊಟ್ಟಿತು. ವಿಷಯದಲ್ಲಿ ’ದೃಷ್ಟ’
[ಪ್ರತ್ಯಕ್ಷ ] ಕಾರಣ ಯಾವುದನ್ನು ಹೇಳಲಾಗುವುದಿಲ್ಲ.
ಕೆಲವರಿಗೆ, ನಮ್ಮ ’ಇಂದ್ರಿಯಗಳಿಗೆ ಗೋಚರವಾಗುವ,ವಿಷಯಗಳನ್ನು
ನಂಬುತ್ತಾರೆಯೇ ಹೊರತು, ಇಂದ್ರಿಯಗಳಿಗೆ ಅಗೋಚರವಾದ ವಿಷಯಗಳನ್ನು ನಂಬುವುದಿಲ್ಲ, ಎಂಬ ಅಭಿಪ್ರಾಯವಿದೆ. ಹೀಗೆ ನಂಬುವದರಿಂದ, , ಮೇಲೆ ಹೇಳಿದ,ವಿಷಯಕ್ಕೆ, ಯಾವ ಕಾರಣವನ್ನೂ, ಹೇಳಲಾಗುವುದಿಲ್ಲ.
ದೃಷ್ಟವಾದ ಕಾರಣವನ್ನು ಹೇಳಲಾಗುವುದಿಲ್ಲ. ಅಲ್ಲಿ ಅದೃಷವೊಂದೇ ,
ಕಾರಣ. ಆದ್ದರಿಂದಲೇ ನಾವು ಎಷ್ಟೇ ಬುದ್ಧಿವಂತರಾದರೂ,ದೈವನುಗ್ರಹ- ವಿಲ್ಲದೇ, ನಮ್ಮ ಕಾರ್ಯ ಫಲಿಸುವುದಿಲ್ಲ,ಎನ್ನುತ್ತೇವೆ.. ನಮ್ಮ ಹಿರಿಯರು ಬಹಳ ವಿವೇಚಿಸಿ, ಒಂದು ನಿರ್ಧಾರಕ್ಕೆ ಬಂದರು.ಮಾನವನ ಬಾಳು ಒಂದು ರಥವಾಗುತ್ತದೆ.. ಅದ್ದಕ್ಕೆ, ಎರಡು ಪಕ್ಕಗಳಲ್ಲೂ, ಎರಡು ಚಕ್ರಗಳು ಬೇಕು.
ಅವೆರಡರಲ್ಲಿ ಒಂದು ಚಕ್ರವಿರದಿದ್ದರೂ, ರಥ ಚೆಲಿಸದು. ಮನುಷ್ಯನ ಬಾಳಿಗೆ ಎರಡುಚಕ್ರವೆಂದರೆ, ’ಒಂದು ’ಮಾನವ ಪ್ರಯತ್ನ,’, ಮತ್ತೊಂದು ’ಈಶ್ವರಾನುಗ್ರಹ.’ ಈ ಎರದು ಚಕ್ರಗಳಿಂದ, ನಮ್ಮ ಬಾಳು ಸಾಗುತ್ತಿದೆ. ನಾವು, ಒಂದೇ ಚಕ್ರದಿಂದ ರಥವನ್ನು ಓಡಿಸಲು
ಆಗುವುದಿಲ್ಲ. ಆದ್ದರಿಂದಲೇ, ಕೆಲವರಿಗೆ, ಅದೃಷ್ಟದಲ್ಲಿ ನಂಬಿಕೆಯಿಲ್ಲದೆ, ’ನಾನು ನೆನೆದರೆ, ’ಏನು ಕೆಲಸ ಬೇಕಾದರೂ, ಮಾಡುತ್ತೇನೆ., ಎನ್ನುತ್ತಾರೆ. ಇದು ಅಹಂಕಾರ. ಕೆಲವರಿಗೆ,’ಈಶ್ವರ ಸಂಕಲ್ಪವಿರುವಾಗ,’ ನಾನೇಕೆ ಪ್ರಯತ್ನಿಸಬೇಕು’ ಎಂಬ ಭಾವನೆ ಇರುತ್ತದೆ. ಇದು ಒಂದು ಖಾಯಿಲೆ. ಇದೂ ತಪ್ಪೇ.’ಪ್ರಯತ್ನ ಮಾಡಿದರೆ, ಈಶ್ವರ ಅನುಗ್ರಹ ದೊರಕುತ್ತದೆಯೇ ಹೊರತು, ಈಶ್ವರ ಅನುಗ್ರಹವಿದೆ,, ಪ್ರಯತ್ನ ಬೇಡ,’ ಎಂದರೆ, ಆ ಕಾರ್ಯವಾಗುವುದಿಲ್ಲ. ಅದ್ದರಿಂದ,ಎಷ್ಟು ಬುದ್ಧಿವಂತರಾದರೂ, ನಾವು ಈಶ್ವರನನ್ನು ಮರೆಯಬಾರದು.
ಒಮ್ಮೆ, ಚಂದ್ರಗುಪ್ತ ಅರಸನಿಗೂ, ಚಾಣಕ್ಯ ಮಂತ್ರಿಗೂ, ಮಧ್ಯೆ, ಒಂದು, ನಿರ್ಧರಿಸಿದ ವಿವಾದವಾಯಿತು.. ಆಗ, ಚಾಣಕ್ಯನು, ’ಅಂತಹ ನವನಂದರನ್ನು”’ ಯಾರು ಕೊಂದದ್ದು, ಎಂದು ಕೇಳಲು,’ ಅದಕ್ಕೆ,ಚಂದ್ರಗುಪ್ತನು, ’ನಂದಕುಲ ವಿದ್ವೇಷನಾ ದೈವೇನ, ಎಂದನು. ಎಂದರೆ,
ನಂದರ ಶತ್ರುವಾದ ದೈವವೇ, ಅವರನ್ನಳಿಸಿತು, ಎಂದನು. ’ವಿಷಯವರಿಯದ, ’ಭಯವಿರುವವರು, ದೈವವನ್ನು ಹೇಳುತ್ತಾರೆ. ನಾನು ಹಾಗೆ ಹೇಳದೆ,ನಾನೇ ಮಾಡಿದೆ ಎಂದು, ಚಾಣಕ್ಯನು ಹೇಳಲು, ಚಂದ್ರಗುಪ್ತನ ವದನಾರವಿಂದದಿಂದ, ’ವಿದ್ವಾಂಸೋಪಿ ಅವಿಗತ್ತನಾ ಭವಂತಿ.’ಎಂಬ
ನುಡಿಯು ಬಂದಿತು.’ಸತ್ಯವಾಗಿಯೇ, ನೀವು ವಿದ್ವಾಂಸರಾಗಿದ್ದರೆ, ಹೀಗೆ, ನಿಮ್ಮನ್ನೇ ಹೊಗಳಿಕೊಳ್ಳುವುದಿಲ್ಲ., ನಾನೇ ಮಾಡಿದೆ, ಎಂದು ಹೇಳುವುದಿಲ್ಲ’, ಎಂದನು. ಆದ್ದರಿಂದ,’ ದೈವವನ್ನು ನಂಬದೆ,ನಾನೇ ಮಾಡಿದೆ’ ಎನ್ನುವವುದು,ವಿವೇಕಿಗಳಿಗೆ ತಕ್ಕುದಲ್ಲ.. ಮನುಷ್ಯನಿಗಿರುವ ಪ್ರತ್ಯೇಕ ಗುಣ ’ವಿವೇಕ.’
.’
ಎಷ್ಟೊ ಲಕ್ಷೋಪಲಕ್ಷ ಜೀವರಾಶಿಗಳಿದ್ದೂ,-ಮನುಷ್ಯನಿಗೆ, ಏಕೆ ಪ್ರಧಾನ್ಯತೆಯನ್ನು ಕೊಟ್ಟಿದೆ.’.ತನ್ನ ಆಕಾರವನ್ನು ಸಂಪಾದಿಸಿಕೊಳ್ಳುವದರಲ್ಲಿ, ಮನುಷ್ಯ, ಪ್ರಾಣಿಗಳು ಎರಡೂ ಒಂದೇ.. ಶ್ರೀ ಭಗವತ್ಪಾದರು, ’ಪಷ್ವಾದಿಪಿಹಿ ಚ ಅವಿಶೇಷಾತ್’ ಎನ್ನುತ್ತಾರೆ.
ಪ್ರಾಣಿಗಳೂ, ಮನುಷ್ಯರೂ, ಒಂದೇ. ’ಹೇಗೆ’.ಒಬ್ಬ ವ್ಯಕ್ತಿಯು ತಿಂಡಿ ಪೊಟ್ಟಣವನ್ನು ಕೊಂಡು ಹೋಗುತ್ತಿದ್ದರೆ, ನಾಯಿ ಅವನನ್ನು ಹಿಂಬಾಲಿಸುವುದು.. ಅವನು ಕೈಯ್ಯಲ್ಲಿ ಕೋಲನ್ನು ಹಿಡಿದು ಹೊಡೆಯಲು ಬಂದರೆ, ಹೆದರಿ ಓಡುವುದು.. ಮನುಷ್ಯರೂ ಹಾಗೆಯೇ. ಯಾರಾದರೂ, ತೊಂದರೆ ಕೊಡುತ್ತಾರೆಂದರೆ,
ಅವರಿಂದ ದೂರವಿರಲು ಬಯಸುತ್ತಾರೆ. ’ಪಶ್ವಾದಿಬಿಃ ಚ ಅವಿಕ್ಷೇಪಾತ್’, ಎಂದು ಭಗವತ್ಪಾದರು ಹೇಳಿದಂತೆ ಪ್ರಾಣಿಗಳಿಗೂ, ನಮಗೂ, ಯಾವ ವೆತ್ಯಾಸವೂ ಇಲ್ಲ ಎನ್ನಲಾಗುವುದಿಲ್ಲ.
ನಿಶ್ಚಯವಾಗಿ ವೆತ್ಯಾಸವಿದೆ. ಯಾವುದರಲ್ಲೆಂದರೆ, ’ನಮಗೆ ದೇವರು ಬಹು ವಿವೇಕವಿತ್ತಿದ್ದಾನೆ.
ಯಾವುದು ಹಿತ, ಯಾವುದು ಅಹಿತ, ಯಾವುದು ವರ್ಜ್ಯ, ಇವನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಬುದ್ಧಿಗೆ ಮಿತಿಯೇ ಇಲ್ಲ.. ಈ ಕಾಲದಲ್ಲಿ, ವಿಙ್ಯಾನಿಗಳು, ಹೋಗುತ್ತಿರುವ ವೇಗವನ್ನು ನೋಡಿದರೆ,ಅವರ ಪರಿಶೋಧನೆ,, ಎಷ್ಟು ಪ್ರಮಾನದಲ್ಲಿದೆ ಎಂದು ತಿಳಿಯುತ್ತದೆ.ಒಂದು ವಿಷಯವನ್ನು ಎಷ್ಟು ಸೂಕ್ಷ್ಮವಾಗಿ ಪರಿಶೀಲಿಸುತ್ತಿದಾರೆ.ಅದು ಭಗವಾಂತನು ನಮಗಿತ್ತ ಬುದ್ಧಿಯ ಪ್ರಭಾವ ತಾನೆ.
ಇಂತಹ ಬುದ್ಧಿಯನ್ನು ದೇವರು ಬೇರೆ ಯಾವ ಪ್ರಾಣಿಗಳಿಗೂ ಕೊಡಲಿಲ್ಲ. ಆದ್ದರಿಂದ ಮನುಷ್ಯ ಬಹಳ ವಿವೇಕಿ..ಯಾವುದು ಒಳ್ಳೆಯದು, ಕೆಟ್ಟದ್ದು, ಎಂದು ವಿಮರ್ಶಿಸುವ ವಿವೇಚನೆಯಿದೆ.ಅಂತಹ
ಅಂತಹ ಗುಂಪಿಗೆ ಸೇರಿದ ನಾವು, ಈಶ್ವರನ ಬಗ್ಗೆಯೂ, ಅದೃಷ್ಟದ ಬಗ್ಗೆಯೂ ವಿಶ್ವಾಸವಿಲ್ಲದಿರುವುದು ಬಹಳ ಅನುಚಿತ.
.
ಹಾಗೆಯೇ, ಆಚರಿಸಬೇಕು. ಆದ್ದರಿಂದ, ನಾವು ಮಾಡುವ ಯಾವ ಕಾರ್ಯದಲ್ಲೂ, ಈಷ್ವರಾನುಗ್ರಹ ಇರಬೇಕು, ಎಂಬ ದೃಧ ವಿಷ್ವಾಸ ಬರಬೇಕು.. ಆ ವಿಶ್ವಾಸವಿದ್ದರೆ ನಾವು ಮಾಡುವ ಕಾರ್ಯವೆಲ್ಲಾ
ಬಹಳ ಚೆನ್ನಾಗಿ ನಡೆಯುತ್ತದೆ. ಈಶ್ವರನನ್ನು ಮರೆತು ನಾವು ಮಾಡುವ ಕಾರ್ಯ ಫಲಕಾರಿಯಾಗುವುದಿಲ್ಲ.ಸರಿಯಾದ ರೀತಿಯಲ್ಲಿ ನಡೆಯುವುದಿಲ್ಲ. ಆದ್ದರಿಂದ, ಪ್ರತಿ ವ್ಯಕ್ತಿಯೂ ತನ್ನ ಬಾಳಿನಲ್ಲಿ ದೈವಾನುಗ್ರಹ ಅವಶ್ಯ ಬೇಕು ಎಂಬ ದೃಢ ನಿಶ್ಚಯದೊಡನೆ,ಇದ್ದು,
ತನ್ನ ಬಾಳನ್ನು ನಡೆಸಿ ಶ್ರೇಯಸ್ಸನ್ನು ಪಡೆಯಬೇಕೆಂದು,ಸಂದೇಶವಿತ್ತು, ಶ್ರೀ ಗುರುಗಳು ಈ ಉಪನ್ಯಾಸವನ್ನು ಸಂಪೂರ್ಣಗೊಳಿಸುತ್ತಾರೆ..
================================
ಅಧ್ಯಾಯ-೧೩.
==========
ಭಕ್ತಿಯಲ್ಲಿ ಹಲವು ವಿಧಗಳು.
==============================
ಪರಮಾತ್ಮನ ಅನುಗ್ರಹವನ್ನು ಪಡೆಯಲು ಮುಖ್ಯವಾದ ಸಾಧನೆ ಭಕ್ತಿ. ಭಕ್ತಿಯಿದ್ದರೆ ಬೇರಾವ ಯೋಗ್ಯತೆಯ ಅವಶ್ಯವಿಲ್ಲ... ಆದ್ದರಿಂದಲೇ, ಶ್ರೀ ಭಗವತ್ಪಾದರು, ’ಭಕ್ತಿಃ ಕಿನ್ನ ಕರೋತ್ಯಹೋ ವನಚರೋ ಭಕ್ತಾವತಂ ಸಾಯತೇ ಎನ್ನುತ್ತಾರೆ.
.
ಭಕ್ತಿಯ ಪರಮಾವಧಿಯಿಂದ ಕಾಡಿನಲ್ಲಿರುವ ಒಬ್ಬ ಬೇಡನೂ ಎಲ್ಲರ ಗೌರವಕ್ಕೂ ಪಾತ್ರನಾಗಿಬಿಡುತ್ತಾನೆ.ಬೇಡರ ಕಣ್ಣಪ್ಪನ ಬಗ್ಗೆ ಕೇಳಿದ್ದೇವೆ.. ಅವನಿಗೆ ವಿದ್ಯೆಯಿದ್ದಿತೇ.ಆಚಾರವಿದ್ದಿತೇ.ಹಣವಿದ್ದಿತೇ. ಎನೂ ಇರಲಿಲ್ಲ. ಆದರೆ, ಅವನಿಗೆ ಅಪಾರ ಭಕ್ತಿಯಿದ್ದಿತು.
ಮಾರ್ಗಾವರ್ತಿತ ಪಾದುಕಾ ಪಶುಪತೇರಂಗಸ್ಯ ಕೂರ್ಚಾಯತೇ ಕಂಡೂಷಾಂಬುನಿ ಶೇಚನಂ ಪುರರಿಪೋರ್ದಿವ್ಯಾಭಿಷೇಕಾಯತೇ, ಕಿಂಚಿತ್ ಬಕ್ಷಿತ ಮಾಂಸಶೇಷಕಪಲಂ ನವ್ಯೋಪಹಾರಾಯತೇ
ಭಕ್ತಿಃ ಕಿನ್ನ ಕರೋತ್ಯಹೋವನಚರೋ ಭಕ್ತಾವತಂಸಾಯತೇ.
ಕಾಡಿನಲ್ಲಿದ್ದ ಒಂದು ಶಿವಲಿಂಗಕ್ಕೆ, ಬಹಳ ದಿನಗಳಿಂದ ಪೂಜೆಯೇ ನಡೆಯದಿದ್ದನ್ನು, ಕಣ್ಣಪ್ಪನು ಗಮನಿಸಿದನು.. ಶಿವಲಿಂಗದ ಮೇಲೆ ಧೂಳು ತುಂಬಿದ್ದಿತು. ತಕ್ಷಣವೇ, ಶಿವನಿಗೆ ಪೂಜೆ ನಡೆಸಲು ಕಣ್ಣಪ್ಪನು ನಿರ್ಧರಿಸಿದನು. ಆದ್ದರಿಂದ, ಪೂಜೆಗೆ ಅವಶ್ಯವಾದ ಸಾಧನಗಳಾವುವೂ ಇರಲಿಲ್ಲ. ತನ್ನ ಪಾದರಕ್ಷೆಯಿಂದ
ಶಿವಲಿಂಗವನ್ನು ಒರೆಸಿದನು. ಪಕ್ಕದಲ್ಲಿ ನದಿಯೊಂದಿದ್ದಿತು. ಆದರೆ, ಅಭಿಷೇಕಕ್ಕೆ, ಜಲ ತರಲು ಪಾತ್ರೆಯಿರಲಿಲ್ಲ.
ಅವನು ಬಾಯಲ್ಲಿ ನೀರನ್ನು ತುಂಬಿಕೊಂಡು ಶಿವಲಿಂಗದ ಮೇಲುಗಿದು, ಅಭಿಷೇಕವನ್ನು ಮಾಡಿದನು. ನೈವೇದ್ಯ
ಹೇಗೆ. ಅವನು ಯೋಚಿಸಿ, ತಾನು ಬೇಟೆಯಾಡಿ ತಂದ ಮೃಗಗಳನ್ನು, ನೈವೇದ್ಯ ಮಾಡಿದನು. ಅವನ ಪೂಜೆಯನ್ನು ಭಗವಂತನು ಹರ್ಷದಿಂದ ಸ್ವೀಕರಿಸಿದನು.
. ಕಾರಣ ಅವನ ಭಕ್ತಿ ಅಷ್ಟು ಉತ್ಕೃಷ್ಟವಾಗಿತ್ತು. ಈಗ ಕೆಲವರು
ಕೇಳಬಹುದು. ಕಣ್ಣಪ್ಪನಂತೆಯೇ, ನಾವೂ, ಆಚಾರರಹಿತರಾಗಿ, ಪೂಜೆ ಮಾಡಬಹುದು, ಎಂದು ಚಿಂತಿಸಬಹುದು.
ಕಣ್ಣಪ್ಪನು ಮಾಡಿದ ಮತ್ತೊಂದು ಅಧ್ಭುತವನ್ನು ನಾನು ಹೇಳುತ್ತೇನೆ. ಈ ಕಾರ್ಯವನ್ನು, ಅವರು ಮಾಡಲು ತಯಾರಾಗಿದ್ದರೆ, ಕಣ್ಣಪ್ಪನಂತೆ ಅವರೂ, ಪೂಜೆ ಮಾಡಬಹುದು. ಅದನ್ನು ಭಗವಂತನು ಸ್ವೀಕರಿಸುತ್ತಾನೆ.
ಪೂಜೆಯನ್ನು ಮುಗಿಸಿದ ಕಣ್ಣಪ್ಪನು, ಸ್ವಾಮಿಯ ಒಂದು ಕಣ್ಣಿನಿಂದ ಜಲ ಬರುವುದನ್ನು ಗಮನಸಿ,ತನ್ನ ಕಣ್ಣೊಂದನ್ನು, ಕಿತ್ತು ಸಮರ್ಪಿಸಿದರು. . ಮತ್ತೆ, ಮತ್ತೊಂದು ಕಣ್ಣಿನಲ್ಲಿ ಜಲ ಬರುವುದನ್ನು ಕಂಡು ಮತ್ತೊಂದು ಕಣ್ಣನ್ನು ಸಮರ್ಪಿಸಿದನು ಅವನ ಕೃತಿಯನ್ನು ಕಂಡು ಮೆಚ್ಚಿದ ಹರನು ಅವನಿಗೆ ಮೋಖವಿತ್ತನು.
ಕಣ್ಣಪ್ಪನ ಭಕ್ತಿಗೆ, ಆಷ್ಟು ಅತ್ಯುತ್ತ್ತಮವಾದ ಫಲ ದೊರಕಿತು.
ಮನುಷ್ಯನಿಗೆ, ಭಕ್ತಿ ಬಹಳ ಅವಶ್ಯ.ಭಕ್ತಿಯನ್ನು, ಹಲವು ರೀತಿಯಲ್ಲಿ, ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಹಲವರಿಗೆ, ’ಸ್ವಾಮಿಯ ಕಥೆಯನ್ನು ಕೇಳುವುದೇ’ ಅತಿ ಪ್ರಿಯ.. ಎಲ್ಲಿ,ಕಥಾಕಾಲಕ್ಷೇಪ ನಡೆಯುಉತ್ತಿದ್ದರೂ, ಅಲ್ಲಿ ಅವರನ್ನು ಕಾಣಬಹುದು.
ಅದು ಒಂದು ವಿಧವಾದ ಭಕ್ತಿ. ಕೆಲವರಿಗೆ, ಅವನ ನಾಮವನ್ನುಚ್ಚರಿಸುವುದೇ, ಪ್ರಿಯ. ಬೇರೆ ಏನೂ ಅವರಿಗೆ ಅವಶ್ಯವಿಲ್ಲ.. ಗೋಪಿಯರು ಶ್ರೀ ಕೃಷ್ಣನಲ್ಲಿ, ಅಪಾರ ಭಕ್ತಿಯನ್ನು ತೋರಿದರೆಂದು, ಶ್ರೀಭಾಗವತ ತಿಳಿಸುತ್ತದೆ.
ಈ ವಿಷಯವನ್ನು ಮಹಾಕವಿಯೊಬ್ಬರು;
ವಿಕ್ರೇತು ಕಾಮಾ ಕಿಲ ಗೋಪಬಾಲಾ ಮುರಾರಿಪಾದಾರ್ಪಿತಚಿತ್ತವೃತ್ತಿಃ
ತತ್ಯಾಧಿಕಂ ಮೋಹವಶಾತವೋಷತ್ ಗೋವಿಂದ ದಾಮೋದರ ಮಾಧವೇತಿ
ಎಂದು ವರ್ಣಿಸುತ್ತಾರೆ.
ಗೋಪಿಯರು, ಹಾಲು, ಮೊಸರು, ಇವುಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದರು. ತಲೆಯಮೇಲೆ, ಪಾತ್ರೆಗಳನ್ನು ಹೊತ್ತುಕೊಂಡು
’ಹಾಲು, ಮೊಸರು, ಎಂದು ಕೂಗುತ್ತಾ ರಸ್ತೆಯಲ್ಲಿ ಸಾಗುವುದು ಅವರ ವಾಡಿಕೆ. ಒಬ್ಬ ಗೋಪಿಕೆಯು, ಒಂದು ದಿನ, ವಾಡಿಕೆಯೆಂತೆ, ’ಹಾಲು, ಮೊಸರು, ಎಂದು ಕುಗುವ ಬದಲು., ಗೋವಿಂದಾ,, ದಾಮೋದರಾ, ಮಾಧವಾ, ಎಂದು ಕೂಗುತ್ತಾ, ಹೋದಳಂತೆ. ಭಗವಂತನ ಪಾದಾರವಿಂದಗಳಲ್ಲಿ, ತನ್ನ ಮನವನ್ನರ್ಪಿಸಿದ್ದರಿಂದ, ಅವಳ ಬಾಯಿಂದ, ಬೇರೆ ಯಾವ ಹೆಸರೂ, ಹೊರಡಲಿಲ್ಲ.. ಈ ದೃಶ್ಯವನ್ನು ಕಂಡವರು, ’ಇವಳಿಗೆ ಹುಚ್ಚು ಹಿಡಿಯಿತೇ’, ಎಂದುಕೊಂಡರು. ಆದರೆ, ಅವಳು, ತನ್ನ
ಮನವನ್ನು ಭಗವಂತನಲ್ಲಿ ಲೀನಗೊಳಿಸಿದ್ದಳು. ಮಹಾಭಕ್ತರನ್ನೂ, ಮಹಾಙ್ಯಾನಿಗಳನ್ನು ಕಂಡರೆ, ಕೆಲವೊಮ್ಮೆ, ಅವರಿಗೆ ಹುಚ್ಚು ಹಿಡಿದಿಯೇ ಎಂದು ಭಾಸವಾಗುವುದು.. ಶ್ರೀ ಸದಾಶಿವಬಹ್ಮೇಂದ್ರರ ಬಾಳಿನಲ್ಲಿ ಅಂತಹ ಒಂದು ಘಟನೆ ನಡೆಯಿತು.
ಸದಾಶಿವ ಬ್ರಹ್ಮೇಂದ್ರರು ಒಬ್ಬ ಮಹಾನ್ ಜೀವನ್ಮುಕ್ತರಾಗಿ ಬದುಕಿದವರು. ಅವರ ಸ್ಠಿತಿಯನ್ನು ಕಂಡು ಕೆಲವರು, ಅವರ ಗುರುಗಳ ಬಳಿಗೆ ಹೋಗಿ ಮೊರೆಯಿಟ್ಟರು.
ಉನ್ಮತ್ವತ್ ಸಂಚರತೀಹ ಶಿಷ್ಯಸ್ತವೇತಿ ಲೋಕಸ್ಯ ವಚಾಂಸಿ ಶೃಣ್ವನ್
ಕಿತ್ತನ್ನು ವಾಚಾಸ್ಯ ಗುರುಃ ಪುರಾಹೋ ಉನ್ಮತ್ತತಾಮೇ ನಹಿತಾತ್ರುಶೀತಿ
’ಅವನು ಬಹಳ ಅದೃಷ್ಟ ಶಾಲಿ. ಆ ಹುಚ್ಚು ನನಗೆ ಹಿಡಿಯಲಿಲ್ಲಾ’ ಎಂಬುದೇ ನನ್ನ ದುಖ;’
ಎಂದರು.
ಶುಕ ಬ್ರಹ್ಮರು ಪರೀಕ್ಷಿತ್ ಮಹಾರಾಜನಿಗೆ ಶ್ರೀಮದ್ ಭಾಗವತವನ್ನು ಹೇಳುತ್ತಿದ್ದರು. ಆಗ
ಅವರ ಮುಖಾರವಿಂದದಿಂದ ಭಗವಂತನ ಲೀಲೆಗಳು ಬರುತ್ತಿದ್ದವೇ ಹೊರತು ಬೇರೇನೂ ಬರುತ್ತಿರಲಿಲ್ಲ.
ಹಲವರು ಮಾತನಾಡುವಾಗ ಊಟ, ಲೇಖನ, ನಡೆಯುವುದು, ಇಂತಹ ಎಲ್ಲಾ ಕಾರ್ಯಗಳಲ್ಲೂ, ದೈವದ
ಬಗ್ಗೆಯೇ, ಚಿಂಸುತಿರುತ್ತಾರೆ.ಇದೂ, ಒಂದು ವಿಧ ಭಕ್ತಿಯೇ. ಸ್ವಾಮಿಯ ಚರಣಾರವಿಂದಗಳಿಗೆ,, ಸೇವೆ ಸಲಿಸುವುದು, ಮುಂದಿನ ರೀತಿಯ ಭಕ್ತಿ. ಭಗವಂತನಿಗೆ ಸತತವೂ, ಸೇವೆ ಸಲ್ಲಿಸುತ್ತಿರುವವರೇ ಈ ರೀತಿಯ ಭಕ್ತರು. ಕೆಲವರಿಗೆ, ಸದಾ ಪೂಜೆ ಮಾಡುವ ಆಸೆ. ಅವರನ್ನು
ತೊಂದರೆ ಕೊಡದೇ ಬಿಟ್ಟರೆ, ಘಂಟೆಗಟ್ಟಲೆ, ಪೂಜೆ ಮಾಡುತ್ತಿರುತ್ತಾರೆ. ಕೆಲವರಿಗೆ ಪೂಜೆಯಲ್ಲಿ ೫-೧೦ ನಿಮಿಷಗಳು ಕೂಡಾ ಕೂರಲಾಗುವುದಿಲ್ಲ.. ಪುರೋಹಿತರ ಬಳಿ ’ಸಹಸ್ರನಾಮವನ್ನು ಬೇಗ ಮುಗಿಸಿ’ಎನ್ನುವರು.. ಪೂಜೆ ಮುಗಿದಮೇಲೆ ನಡೆಸಬೇಕಾದ ಕಾರ್ಯದ ಬಗ್ಗೆಯೇ, ಪೂಜೆಯ ವೇಳೆಯಲ್ಲೂ, ಚಿಂತಿಸುತ್ತಿರುತ್ತಾರೆ.. ಅರ್ಧಘಂಟೆಯಾದರೂ, ಭಗವಂತನ ಸೇವೆಯಲ್ಲಿ, ಎಕಾಗ್ರತೆಯಿಂದ ಕೂರಬೇಕೆಂಬ ಆಸೆ ಅವರಿಗಿಲ್ಲ.. ಆದರೆ, ನಿಜ ಭಕ್ತನಿಗೆ, ಪೂಜೆಯಲ್ಲಿ, ಎಷ್ಟು ಸಮಯವಾದರೂ, ಅವರಿಗೆ ತಿಳಿಯುವುದಿಲ್ಲ..
ಕೆಲವರಿಗೆ ಎಷ್ಟು ಬಾರಿ ಭಗವತ್ಸನ್ನಿಧಿಯಲ್ಲಿ ನಮಸ್ಕರಿಸಿದರೂ, ತೃಪ್ತಿಯೇ ಇರುವುದಿಲ್ಲ.
ನೋಡಿದವರಿಗೆ,’ಇವನೇನು ನಮಸ್ಕರಿಸುತ್ತಲೇ ಇದ್ದಾನೆ’, ಎನ್ನಿಸುತ್ತದೆ.
ಆದರೆ, ಸ್ಕರಿಸುವವರಿಗೆ,ಅವರಿಗೆ, ಈ ವಿಷಯದಲ್ಲಿ, ’ಸಾಕು’ಎನಿಸುವುದೇ,ಇಲ್ಲ. ಭಗವಂತನಿಗೆ, ನಮಸ್ಕರಿವುದು ಒಂದು ವಿಧ ಭಕ್ತಿಯೇ.
.
ಕೆಲವರಿಗೆ, ಭಗವಂತನಿಗೆ, ದಾಸನಾಗಿ,ಸದಾ ಸೇವೆ ಸಲ್ಲಿಸಬೇಕೆಂಬ ಅಭಿಲಾಷೆಯಿರುತ್ತದೆ.
ಅವರಿಗೆ, ಬೇರೆ ವಿಷಯಗಳಲ್ಲಿ ಆಸಕ್ತಿಯಿರುವುದಿಲ್ಲ. ಇದಕ್ಕೆ ಶ್ರೀ ಆಂಜನೇಯರು, ಒಂದು ಉದಾಹರಣೆ. ಸತತವೂ, ಸದಾಕಾಲವೂ, ಶ್ರೀ ರಾಮನ ಸೇವೆಯನ್ನು ಮಾಡುತ್ತಿರಬೇಕೆಂಬುದೇ, ಅವರ ಜೀವನ ಧ್ಯೇಯವಗಿತ್ತು..ಇದೂ ಒಂದು ಭಕ್ತಿ ಮಾರ್ಗ. ಹಲವರಿಗೆ,ಸ್ನೇಹಭಾವದಿಂದಿರಬೇಕೆಂಬ ಆಸೆಯಿರುತ್ತದೆ.; ’ಅದು ಎಲ್ಲರಿಗೂ, ಸಾಧ್ಯವೇ ಎಂದರೆ ಅರ್ಜುನನಿಗೆ ಅದು ಸಾಧ್ಯವಾಯಿತು..ಅರ್ಜುನನಿಗೆ ಭಗವಂತನು ವಿಶ್ವರೂಪವನ್ನು ತೋರಿದಾಗ, ಭಗವಂತನು ವಿಶ್ವರೂಪವನ್ನು ತೋರಿದ ಬಳಿಕ,
’ಸಖೇತಿ ಮತ್ವಾ, ಪ್ರಸಬಂ ಯದುಕ್ತಂ,ಹೇ ಕೃಷ್ಣ ಮಾಧವ ಹೇ ಸಖೇತಿ’ ಎಂದು ಅರ್ಜುನನೆಂದನು.
ಸ್ವಾಮಿ, ನಿನ್ನನ್ನು ಸ್ನೇಹಿತನೆಂದು ತಿಳಿದು ಪಳಗಿದೆ. ನನ್ನನ್ನು ಕ್ಷಮಿಸು, ಎಂದನು.
ಕೆಲವರಿಗೆ, ’ತಮ್ಮ ವಸ್ತುಗಳನ್ನೂ, ತಮ್ಮನ್ನೇ, ಅರ್ಪಿಸುವುದೇ,’ ಉತ್ತಮ ಭಕ್ತಿ ಎಂದುಕೊಳ್ಳುತ್ತಾರೆ. ಬಲಿಚಕ್ರವರ್ತಿಯಬಳಿ, ಸ್ವಾಮಿಯು, ಮೂರು ಅಡಿ ಜಾಗವನ್ನು ಬೇಡಿದನು.
ಬಲಿಯು,ಅದಕ್ಕೆ ಒಪ್ಪಿಕೊಂಡನು. ಪ್ರಥಮ ಹೆಜ್ಜೆಯಲ್ಲಿ ಭೂಮಿಯನ್ನೂ, ಎರಡನೆಯ ಹೆಜ್ಜೆಯಲ್ಲಿ, ಸ್ವರ್ಗವನ್ನೂ, ಮೂರನೆಯ ಹೆಜ್ಜೆಯಲ್ಲಿ, ತನ್ನ ಶಿರದ ಮೇಲೆ, ಹರಿಯು ಪಾದವನ್ನಿಡಲು, ’ನಾನು ಎಲ್ಲವನ್ನೂ ಅರ್ಪಿಸಿದ್ದೆನೆ
ಎಂದನು. ಇದೇ ’ಆತ್ಮ ನಿವೇದನೆ.’
’ಆತ್ಮ ನಿವೇದನ’ ಎಂದರೆ, ’ನನ್ನದೇನೂ, ಇಲ್ಲ, ಎಲ್ಲ ಭಗವಂತನದೇ,’ ಎಂಬ ಭಾವನೆ.’
ಹೀಗೆ, ಭಕ್ತಿಯಲ್ಲಿ ಶಾಸ್ತ್ರದಲ್ಲಿ ಒಂಭತ್ತು ವಿಧವೆಂದು ಹೇಳಲ್ಪಟ್ಟಿದೆ.
ಭಗವಂತನ ಕಥೆಗಳನ್ನು ಕೇಳುವುದು,ಅವನ ಲೀಲೆಗಳನ್ನು ಹೊಗಳುವುದು, ಅವನನ್ನು ಸದಾ ಚಿಂತಿಸುವುದು, ಅವರ ಪಾದಸೇವೆ ಮಾಡುವುದು,, ಪೂಜಿಸುವುದು, ನಮಸ್ಕರಿಸುವುದು, ದಾಸ್ಯ ಭಾವ-
ನೆಯಿಂದ ಸೇವಿಸುವುದು, ಸ್ನೇಹದಿಂದ ಪಳಗುವುದು, ಕಡೆಯಲ್ಲಿ, ತನ್ನನ್ನೇ, ಇವೆಲ್ಲವೂ ಭಕ್ತಿಯ ವಿಧಗಳು..ಇದರಲ್ಲಿ ಯಾವ ವಿಧವಾದ ಭಕ್ತಿಯನ್ನು, ಬೆಳೆಸಿಕೊಂಡರೂ, ಅದು ನಮಗೆ ನಲ್ಮೆಯನ್ನೇ ತರುತ್ತದೆ.. ನಾವು ಮುಂಚೆಯೇ, ನೋಡಿದಂತೆ, ಭಕ್ತಿಯ ಒಂದೊಂದು ಮಾರ್ಗದಲ್ಲೂ,ಎಷ್ಟೋ
ಉದಾಹರಣೆಗಳು, ಭಾಗವತ ಮತ್ತು ಇತರ ಪುರಾಣಗಳಲ್ಲಿ ಹೇಳಲ್ಪಟ್ಟಿವೆ.
ನಮಗೆ, ಯಾವ ವಿಧವಾದ ಭಕ್ತಿಯೂ ಇಲ್ಲದಿದ್ದರೆ, ನಮ್ಮ ಬಾಳು ಅರ್ಥರಹಿತವಾಗುತ್ತದೆ.
ಮಾನವ ಜನ್ಮ ಬಹಳ ದುರ್ಲಭವಾದದ್ದೆಂದು ಎಲ್ಲರಿಗೂ ವೇದ್ಯ. ನಮ್ಮ ಪೂರ್ವಜನ್ಮದಫಲವೇ,ಈ ಮಾನವಜನ್ಮ.. ಈ ಸಂಧರ್ಭವನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಚೆ ಇದ್ದರೆ, ಭಕ್ತಿಯಂತಹ ಮಾರ್ಗ-
ವನ್ನು ವ್ಯಕ್ತಿಯು ಅನುಸರಿಸುವುದು ಬಹಳ ಅವಶ್ಯ. ಶ್ರೀ ಭಗವತ್ಪಾದರು ಒಂದು ಕಡೆ;-;
ಇತಃ ಕೋನ್ವಸ್ತಿ ಮೂಢಾತ್ಮಾ, ಯಸ್ತು ಸ್ವಾರ್ಥೇ, ಬ್ರಮಾದ್ಯತಿ
ದುರ್ಲಭಂ ಮಾನುಷಮ್ ದೇಹಂ ಪ್ರಾಪ್ಯ ತತ್ರಾಪಿ ಪೌರುಷಂ
’ನಾವು ಎಷ್ಟು ಅನವಶ್ಯ ವಿಷಯಗಳನ್ನು ಮಾತನಾಡುತ್ತೇವೆ. ನಮ್ಮ ಶ್ರೇಯಸ್ಸು ಯಾವುದು ಎಂದು ಯೊಚಿಸುತ್ತೇವೆಯೇ.
. ಬದುಕಿನಲ್ಲಿ ಹೇಗೆ ತೀರ ಸೇರಬೇಕೆಂದು ಯೋಚಿಸುತ್ತೇವೆಯೇ. ನಾವು
ಪುನರ್ಜನ್ಮ ಪಡೆಯದಿರಲು ಪ್ರಯತ್ನಿಸುತ್ತೇವೆಯೇ. ನಮ್ಮ ಶ್ರೇಯಸ್ಸಿನ
ಬಗ್ಗೆ ಚಿಂತಿಸದೆ, ಇತರ ವಿಷಯಗಳ ಬಗ್ಗೆ ಯೋಚಿಸುವುದು ಎಷ್ಟು ವಿಚಿತ್ರ. ಈ ಸಂಧರ್ಭದಲ್ಲಿ, ನಮ್ಮ ಹಿರಿಯ ಗುರುಗಳು,, ಶ್ರೀ ಚಂದ್ರಶೇಖರ ಭಾರತಿಗಳ ಸಮಯದಲ್ಲಿ ನಡೆದ ಘಟನೆಯೊಂದು ನೆನೆಪಿಗೆ ಬರುತ್ತದೆ.. ಅವರು ಶ್ರೀ ಸದಾಶಿವ ಬ್ರಂಹೇಂದ್ರರಂತೆ , ಜೀವನ್ಮುಕ್ತರು.
ಯಾವಾಗಲೂ, ಅಂತರ್ಮುಖಿಯಾಗಿಯೇ ಇದ್ದರು. ಆತ್ಮ ತತ್ವದಲ್ಲೇ ಲೀನರಾಗಿದ್ದ ಅವರು ಹೊರ ವಿಷಯಗಳ ಬಗ್ಗೆ ಚಿಂತುಸುವುದನ್ನೇ ನಿಲ್ಲಿಸಿದ್ದರು. ಒಬ್ಬ ಮಠದ ಅಧಿಕಾರಿಗಳು, ಅವರ ಬಳಿ, ’ಮಹಾಸ್ವಾಮಿ, ನೀವು ಹೊರಗಡೆ ಬಂದು ಜನಗಳೊಡನೆ ಬೆರೆಯುವುದೇ ಇಲ್ಲ.
ತಮ್ಮ ಸಂದರ್ಶನವೇ ಇಲ್ಲದೆ, ನಿರಾಶರಾಗಿ ಹಿಂತಿರುಗುತ್ತಿದ್ದಾರೆ. ತಾವು ಬಂದು ಜನಗಳೊಡನೆ, ಮಾತಾಡಬೇಕೆಂದು ಕೇಳಿಕೊಂಡರು.
.
ಅದಕ್ಕೆ.ಮಹಾನ್ ಗುರು ಶ್ರೀ ಚಂದ್ರಶೇಖರ ಭಾರತಿಗಳು, ’ಮೊದಲು ನಾನು ಯಾರೆಂದು ವಿಚಾರ ಮಾಡುತ್ತಿದ್ದೇನೆ. ನಂತರ, ಮತ್ತವರನ್ನು ವಿಚಾರಿಸುತ್ತೇನೆ ಎಂದರು. ಯಾವಾಗಲೂ, ಆತ್ಮವಿಚಾರದಲ್ಲಿ ಲೀನವಾಗಿರುವುರಿಂದ ಇಂತಹ ಉತ್ತರವೇ ಹೊರಬರುವುದು. ಆದ್ದರಿಂದ, ನಾವು
ನಮ್ಮ ಬಾಳಿನ ಮುಖ್ಯ ಲಕ್ಷ್ಯವನ್ನರಿತು, ಅದನ್ನು ಗಳಿಸುವುದರಲ್ಲಿಯೇ ಮಗ್ನರಾಗಿರಬೇಕು.
ಸಾಧಾರಣ ಜನರು, ಭಕ್ತಿ ಮಾರ್ಗವೇ ಸುಲಭವೆಂದು ಅಭಿಪ್ರಾಯ ಪಡುತ್ತಾರೆ. ಕರ್ಮ ಮಾರ್ಗದಲ್ಲಿ ನಡೆಯುವುದು ಬಹಳ ನಿಯಮಗಳನ್ನನು-
ಸರಿಸಬೇಕು. ಅಷ್ಟು ನಿಯಯಮಗಳನ್ನರಿಸುವುದು,ಯಾರಿಗೂ, ಸಾಧ್ಯವಾಗುವುದಿಲ್ಲ. ಙ್ಯಾನಮಾರ್ಗವನ್ನನುಸರಿಸಲು,ಸಾಧನ ಚತುಷ್ಠಯವನ್ನು ಅನುಸರಿಸಬೇಕು..[ವಿವೇಕ, ವೈರಾಗ್ಯ, ಸಮತಮದಿಷ್ಟಕ ಸಂಪತ್ತಿ, ಮುಮುಕ್ಷುತ್ವ], ಎಂಬ ನಾಲ್ಕು ಅರ್ಹತೆಗಳು ಅವಶ್ಯಕ.. ಇವೆಲ್ಲವನ್ನೂ, ನೋಡಿದಾಗ, ಭಕ್ತಿ ಮಾರ್ಗವೇ ಸುಲಭ-
ವೆನಿಸುತ್ತದೆ. ಯುಧಿಷ್ಟಿರನು, ಪಿತಾಮಹರ ಬಳಿ,’ಧರ್ಮಗಳೆಲ್ಲಾ, ಉತ್ತಮ ಧರ್ಮ ಯಾವುದು ಎಂದು ಕೇಳಿದಾಗ ಪಿತಾಮಹರು,
ಏಶಮೇಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ ಯದ್ಭಕ್ತ್ಯಾ ಪುಂಡರಿಕಾಕ್ಷಂ
ಸ್ಥವೈರರ್ಚೇನ್ನರಸ್ಸದಾ. ’ಪರಮಾತ್ಮನನ್ನು ಭಕ್ತಿಯಿಂದ ಆರಾಧಿಸುವುದು ಉತ್ತಮ ಧರ್ಮವೆನ್ನುತ್ತಾರೆ.’.ಶ್ರೀ ವಿಷ್ಣು ಸಹಸ್ರೆನಾಮದಲ್ಲಿ ಬರುವ ಈ ಶ್ಳೋಕಕ್ಕೆ, ಶ್ರೀ ಭಗವತ್ಪಾದರು
ಬರೆದಿರುವ ಭಾಷ್ಯದಲ್ಲಿ ಕೆಲವು ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಕರ್ಮಗಳನ್ನು ಮಾಡುವುದಕ್ಕೆ, ಕೆಲ ನಿಯಮಗಳನ್ನನುಸರಿಸಬೇಕು. ಆದರೆ, ಭಕ್ತಿಗೆ ಅಂತಹ
ನಿಯಮಗಳಿಲ್ಲ. ಕರ್ಮಮಾರ್ಗಗಳನ್ನನುಸರಿಸುವಾಗ, ಕೆಲವು ಕೊರತೆಗಳುಂಟಾಗಬಹುದು.
ಶಾಸ್ತ್ರದಲ್ಲಿ ಒಂದು ಕಡೆ;’ಅವಿತಿನಾ ಕೃತಂ ಅಕೃತಂ’ ಎಂದು ಹೇಳಿರುವುದರಿಂದ, ಕ್ರಮವಿಲ್ಲದೆ ಮಾಡುವ ಕರ್ಮಗಳು ಮಾಡಕೂಡದ ಕರ್ಮವಾಗಿಬಿಡುತ್ತದೆ. ಭಕ್ತಿಯ ವಿಷಯದಲ್ಲಿ ಹೀಗೆಲ್ಲಾ. ಅಗುವುದಕ್ಕೆ ಅವಕಾಶವಿಲ್ಲ.ಆದ್ದರಿಂದ ಭಕ್ತಿ ಮಾರ್ಗವೇ, ಮೋಕ್ಷ ಪಡೆಯಲು
ಸುಲಭ ಮಾರ್ಗವಾಗುತ್ತ್ತದೆ.
ನಮ್ಮ ಶರೀರದಲ್ಲಿ ಇರುವ ಅವಯವಗಳೆಲ್ಲವೂ, ಭಗವಂತನನ್ನು ಆರಾಧಿಸಲು ಇವೆ.
ಶ್ರೀ ಶಂಕರರು,
’ಸಾರಸನಾ ತೇ ನಯನೇ ತಾವೇವ ಕರೌ ಸ ಏವ ಕೃತಕೃತ್ಯಃ
ಯಾ ಯೇ ಯೌ ಯೋ ಪರ್ಗಂ ವದದೀಕ್ಷೇತೇ ಸದಾರ್ಶತಃ ಸ್ಮರತಿ
ಎಂದು ಹೇಳಿದ್ದರೆ.
ನಮ್ಮ ನಾಲಿಗೆಯು ಭಗವ ನ್ನಾಮವನ್ನು ಉಚ್ಚರಿಸಿದರೆ ಮಾತ್ರ ಅದಕ್ಕೆ ಪವಿತ್ರತೆ ಬರುವುದು.ಬೇರೆ ವಿಷಯಗಳನ್ನು ನುಡಿದರೆ ಅದಕ್ಕೆ ಪವಿತ್ರತೆ ಬರುವುದಿಲ್ಲ.ಭಗವಂತನ ದಿವ್ಯ ಮಂಗಳ ವಿಗ್ರಹವನ್ನು ಕಂಡರೆ ಮಾತ್ರ ನಯನಗಳಿಗೆ ಪವಿತ್ರತೆ ಬರುತ್ತದೆ.ಬೇರೆ
ವಿಷಯಗಳನ್ನು ನೋಡುವುದರಿಂದಲ್ಲ. ನಮ್ಮ ಕೈಗಳು ಭಗವಂತನನ್ನು ಪೂಜಿಸಲೇ ಇರುವುದು.
ಭಗವಂತನನ್ನು ಪೂಜಿಸದ ಕೈಗಳನ್ನು ’ಕೈಗಳು’ ಎನ್ನಲಾಗುವುದಿಲ್ಲ. ನಮ್ಮ ಮನವು ಸದಾ
ಪರಮಾತ್ಮನ ಪಾದಾರವಿಂದಗಳನ್ನೇ ಚಿಂತಿಸಬೇಕು. ಹೀಗೆ, ಎಲ್ಲಾ ಅವಯವಗಳನ್ನು ದೇವರ ಆರಾಧನೆಯಲ್ಲಿ ಉಪಯೋಗಿಸಿದರೆ, ಅವನು ಧನ್ಯ.
.
ನಾರಾಯಣ ಕರುಣಾಮಯ ಶರಣಂ ಕರವಾಣಿ ತಾವಗೌ ಶರಣಂ
ಇತಿ ಷಟ್ಪದಿ ಮದೀಯೇ ವದನಸರೋಜೇ ಸದಾ ವಸತು
ಎಂದು ಹೇಳಿದರು.’ಹೇ ನಾರಾಯಣಾ, ಕರುಣಾ ಸಮುದ್ರನೇ, ನನಗೆ ನೀನೇ ಆಶ್ರಯ. ನನ್ನ ನಾಲಿಗೆ
ಈ ಆರು ನುಡಿಗಳನ್ನು ಸದಾ ಉಚ್ಚರಿಸುತ್ತಿರಲಿ.’
ಆ ಆರು ಪದಗಳು;’ನಾರಾಯಣ ಕರುಣಾಮಯ ಶರಣಂ ಕರವಾಣಿ ತಾವಗೌ ಶರಣೌ
ಹೀಗೆ, ನಮ್ಮ ಹಿರಿಯರು ಭಕ್ತಿ ಮಾರ್ಗವನ್ನು ಹಲವು ಶ್ಲೋಕಗಳ ಮೂಲಕವೂ ನಮಗೆ ಕೊಟ್ಟಿದ್ದಾರೆ.
ಇನ್ನೊಂದು ಸ್ವಾರಸ್ಯವಾದ ಶ್ಲೋಕ, ಕಾಡಿನಲ್ಲಿ, ಬೇಡರು, ಈ ಶ್ಲೋಕವನ್ನು ಹೇಳುತ್ತಿರುವರಂತೆ.
ವನೇ ಚರಾಮೋ ವಸುಚಾಹರಾಮೋ ನದೀಸ್ತರಾಮೋ ನ ಭಯಂ ಸ್ಮರಾಮಃ
ಇತೀರಯಂತೋ ವಿಪಿನೇ ಕಿರಾತಾ ಉಕ್ತಿಂ ಗತಾ ರಮಪದಾನುಶಂಕಾತ್
ಇದರ ಅರ್ಥ;
ವನೇ ಚರಾಮಃ= ಕಾಡಿನಲ್ಲಿ ಸಂಚರಿಸೋಣ.
ವಸುಚಾಹರಾಮಃ- ಹಣವನ್ನು ತರೋಣ
ನದೀಸ್ತರಾಮಃ- ನದಿಯನ್ನು ದಾಟೋಣ
ನ ಭಯಂ ಸ್ಮರಾಮಃ- ಭಯವೇನು ಅರಿಯೆವು.
ಈ ಶ್ಲೋಕದಲ್ಲಿ ಒಂದೊಂದು ವಾಕ್ಯದ ಕಡೆಯಲ್ಲೂ, ರಾಮ’ ಎಂಬ ಪದವನ್ನು ನಾವು ಕಾಣಬಹುದು.
ಈ ಶ್ಲೋಕವನ್ನು ಹೇಳುವಾಗ, ನಾಲ್ಕು ಬಾರಿ ರಾಮ ನಾಮವನ್ನು ಹೇಳಿದ್ದರಿಂದ ಬೇಡರು ಮೋಕ್ಷವನ್ನು ಪಡೆದರು ಎಂದು ಹೇಳಲ್ಪಡುತ್ತದೆ..ಭಗವಂತನ ನಾಮಕ್ಕೆ ಇರುವ ಬಲವನ್ನು ತಿಳಿಸಲೇ,
ಗುರುಗಳು ಈ ಶ್ಲೋಕವನ್ನುಹೇಳಿದರು. ನಾವು ನಮ್ಮ ಹಿರಿಯರು ತೋರಿದ ದಾರಿಯಲ್ಲಿ ನಡೆದು ಭಗವಂತನ ಕೃಪೆಗೆ ಪಾತ್ರರಗಬೆಕು..
ನಮ್ಮ ಪವಿತ್ರವಾದ ಈ ಭಾರತ ದೇಶದಲ್ಲಿ ಆಸ್ತೀಕತೆ ಬೆಳೆಯಲಿ. ದೇವರಿಲ್ಲವೆಂಬ ಅನಿಸಿಕೆ ಈ ನಾಡಿನಿಂದ ತೊಲಗಲಿ.. ಎಲ್ಲರೂ, ಭಗವತ್ ಭಕ್ತಿಯೊಡನಿದ್ದು ಭಗವಂತನ ಕೃಪೆಗೆ ಪಾತ್ರರಾಗಲಿ.. ನನ್ನ [ಗುರುಗಳು]. ಈ ಅಭಿಲಾಷೆಯನ್ನು, ಶ್ರೀ ಚಂದ್ರಮೌಳೀಶ್ವರರೂ,ಶ್ರೀ ಶಾರದಾಂಬೆಯೂ ನೆರವೇರಿಸಿ., ಈ ದೇಶದಲ್ಲಿ ಸುಭಿಕ್ಷವುಂಟಾಗಲಿ. ಕಡೆಯದಾಗಿ ಅವರ ಗುರುಗಳನ್ನು ಪ್ರಾರ್ಥಿಸಿ,
[ಗುರುಗಳನ್ನು] ಪ್ರಾರ್ಥಿಸಿ ಶ್ರೀ ಗುರುಗಳು ಈ ಉಪನ್ಯಾಸವನ್ನು ಮುಗಿಸುತ್ತಾರೆ.
==================================================
ಅಧ್ಯಾಯ=೧೪
==========
ಭಗವಂತನನ್ನು ಎಂದೆಂದೂ. ಚಿಂತಿಸಿರಿ.
=====================================
ಕೆಲವರಿಗೆ ಒಂದು ಪ್ರಶ್ನೆ. ’ಈ ಕೆಲಸದಿಂದ ನಮಗೆ ಸುಖ ದೊರೆಯುವುದಿಲ್ಲ ಎಂದು ಅರಿತಿದ್ದರೂ ಏಕೆ ಮತ್ತೆ ಮತ್ತೆ ಅದನ್ನೇ ಮಾಡುತ್ತಾರೆ ಎಂಬುದು’.. ಕಾಮದಿಂದಲೂ, ಕ್ರೋಧದಿಂದಲೂ ಈ ಕೆಲಸಗಳನ್ನು ಮಾಡುತ್ತಾನೆಂಬುದೇ, ಅದಕ್ಕೆ ಉತ್ತರ.. ಮತ್ತೊಂದು ಪ್ರಶ್ನೆ. ಸಾದಾರಣ ಮನುಷ್ಯನು ಈ ಕೆಲಸಗಳನ್ನು ಮಾಡುತ್ತಾನೆ ಎಂದರೆ ಅದನ್ನು ಒಪ್ಪಬಹುದು.. ವಿಷಯ ತಿಳಿದವರೂ ಏಕೆ ಮಾಡುತ್ತಾರೆ ಎಂಬುದೇ ಪ್ರಶ್ನೆ. ಚೆನ್ನಾಗಿ ಒದಿದವರೂ, ಪಂಡಿತರೂ ಮಾಡುತ್ತಾರಲ್ಲ. ಅದಕ್ಕೇನು ಕಾರಣ. ಅದಕ್ಕೆ ಭಗವಂತನ ಉತ್ತರ’ ಆ ಸಮಯದಲ್ಲಿಆಸಮಯದಲ್ಲಿ, ಅವರ ಜ್‘ಜ್ಯಾನ ಮರೆತುಹೋಗುತ್ತದೆ ಎಂಬುದು.
.
’ಆವೃತಂ ಜ್ಞ್ಯಾನಮೇತೇನ ಜ್ಞ್ಯಾನಿನೋ ನಿತ್ಯ ವೈರಿಣಾ ಕಾಮರೂಪೇಣ ಕೌಂತೇಯ ದುಷ್ಪೂರೇಣಾಲನೇನಚ’
ಶ್ರೀ ಕೃಷ್ಣನು ಅರ್ಜುನನನ್ನು ನೋಡಿ, ’ನೀನು ಕೇಳುವುದು ಸರಿ. ಮಹಾ ಪಂಡಿತರೂ. ಆ ರೀತಿ ಮಾಡುತ್ತಾರಲ್ಲಾ ಎಂದು
ಕೇಳುತ್ತಿಯೇ. ಆ ಜ್ಞ್ಯಾನವೆಲ್ಲವೂ, ಕೆಲ ಸಮಯಗಳಲ್ಲಿ ಮರೆತು ಹೋಗುತ್ತವೆ’ ಎಂದನು.’ ಅದು ಹೇಗೆಂದರೆ, ಭಗವಂತನು ಒಂದು ಉದಾಹರಣೆಯನ್ನು ಕೊಡುತ್ತಾನೆ.
.
ಕಾಮೇನಾ ವೃಯತೇ ವಹ್ನಿರ್ ಯತಾದರ್ಶೋ ಮಲೇನಚ ಯತೋಲ್ಪೇನಾರುತೋಗರ್ಭ ತತಾ ತೇನೇತಮಾವೃತಂ
ಒಂದು ಕನ್ನಡಿಯಲ್ಲಿ ನೋಡಿದರೆ, ನಮ್ಮ ಮುಖದ ಪ್ರತಿಬಿಂಬ ಅದರಲ್ಲಿ ತಿಳಿಯುವುದು. ಒಂದು .
ವಸ್ತುವಿನ ಪ್ರತಿಬಿಂಬವನ್ನು ಗ್ರಹಿಸುವ ಶಕ್ತಿ ಆ ಕನ್ನಡಿಗಿದೆ. ಆದರೆ, ಕನ್ನಡಿಯ ಮೇಲೆ ಧೂಳು ತುಂಬಿದೆ ಎಂದು ಇಟ್ಟುಕೊಳ್ಳೋಣ.. ಕೊಳೆಯಾಗಿರುವ ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿದರೆ ಪ್ರತಿಬಿಂಬ ಕಾಣುವುದಿಲ್ಲ.
ಕಾರಣ, ಧೂಳಿನಿಂದ, ಕನ್ನಡಿಯು, ವಸ್ತುವಿನ ಪ್ರತಿಬಿಂಬವನ್ನು ಪ್ರತಿಫಲಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ.. ಕೊಳೆಯನ್ನು ಶುದ್ಧಮಾಡಿದರೆ, ಆಗ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುತ್ತದೆ. ಅಂತೆಯೇ, ಮನುಷ್ಯನ ಜ್ಞ್ಯಾನವು ಕನ್ನಡಿಯ ಪ್ರತಿಬಿಂಬ ಗ್ರಹಣಶಕ್ತಿಯಂತೆ.. ಆದರೆ, ಈ ಜ್ಞ್ಯಾನ, ಕಾಮ-ಕ್ರೋಧಗಳಿಂದ ಮರೆಸಲ್ಪಟ್ಟಿದೆ.. ಹೇಗೆ ಧೂಳಿನಿಂದ ಕನ್ನಡಿಗೆ’ ಪ್ರತಿಬಿಂಬ ಗ್ರಹಣ ಶಕ್ತಿ’ ಮರೆಯಾಗುವುದೋ, ಅದೇ ರೀತಿಯಲ್ಲಿ, ಕಾಮ-ಕ್ರೋಧಗಳಿಂದ ನಮ್ಮ,ಜ್ಞ್ಯಾನ ಮರೆತುಹೋಯಿತು. ಆದ್ದರಿಂದ, ಪಂಡಿತರಾದರೂ, ಓದಿದವರಾದರೂ, ಆ ಕಾಮ-ಕ್ರೋಧ- ಮನುಷ್ಯನ ಜ್ಞ್ಯಾನವನ್ನು ಮರೆಸುತ್ತವೆ.,ಆದ್ದರಿಂದ, ಆ ಕಾಮ-ಕ್ರೋಧಗಳು ಬಂದಾಗ, ಪಂಡಿತರಾದರೂ,ಅಧಿಕ ಓದಿದವರೂ, ಕಾಮ-ಕ್ರೋಧಗಳು ಬರುವಾಗ ತಪ್ಪುಗಳು ನಡೆದುಬಿಡುತ್ತವೆ.. ಅಲ್ಲಿ ಯಾವ ವಿಧ ಯೋಚನೆಯೂ ಇರುವುದಿಲ್ಲ.ತಪ್ಪು ಮಾಡಿದ ಮೇಲೆ ಯೋಚನೆ ಬರುತ್ತದೆ.. ’ಆಯ್ಯೋ/ಹಾಗೆ ಮಾಡಬಾರದಾಗಿತ್ತಲ್ಲವೇ. ಹೀಗೆ ಮಾಡಿಬಿಟ್ಟೆನಲ್ಲಾ.’ ಆ ಸಮಯದಲ್ಲಿ ನಾನೇನೂ ಮಾಡಲಾಗಲಿಲ್ಲ.. ಹೇಗೋ, ತಪ್ಪಾಯಿತು. ಆ ಸಮಯದಲ್ಲಿ, ಏನೋ, ಆಸೆ ಹತ್ತಿತು, ಎಂದು ಪಂಡಿತರೂ ನುಡಿಯಬೇಕಾಗಿದೆ.
ಇದನ್ನು ಏಕೆ ಗುರುಗಳು ಹೇಳಲಾರಂಭಿಸಿದರೆಂದರೆ,’ ಮನುಷ್ಯ ತಾನು ಮಾಡುವ ಕಾರ್ಯದಿಂದ ಸುಖ ದೊರೆಯುವುದಿಲ್ಲ ಎಂದರಿತಿದ್ದರೂ, ಮತ್ತೆ ಮತ್ತೆ ಆ ಕಾರ್ಯದಲ್ಲಿಯೇ ಮಗ್ನನಾಗಲು ಕಾರಣವೇನು’ ಎಂಬುದು ಮೊದಲ ಪ್ರಶ್ನೆ.
’ಆ ಪ್ರಶ್ನೆಗೆ ಬದಲು ಈ ವಿಷಯ ಬಂದಿತು. ಇದು’ ಭಗವಂತ ನುಡಿದ ವಿಷಯ.’ ಮನುಷ್ಯನಿಗೆ, ಏಕೆ ಆ ಸ್ಥಿತಿ ಇದೆಯೆಂದರೆ,, ಈ ಕಾಮ-ಕ್ರೋಧಗಳು, ಅವನ ಹಿಂದಿದ್ದು, ಅವನ ಜ್ಞ್ಯಾನವನ್ನು ಮರೆಸಿ,ಅವನನ್ನು ತಪ್ಪು ಮಾಡಲು ಪ್ರೇರೇಪಿಸುತ್ತದೆ.. ಆದ್ದರಿಂದ, ನಾವು ಬಯಸುವ ನೈಜ ಸುಖವು ಈ ಲೌಕಿಕ ವಿಷಯಗಳಿಂದ ದೊರಕುವುದಿಲ್ಲ.ಅದ್ದರಿಂದ,
ಈ ವಿಷಯಗಳಲ್ಲಿ, ಮತ್ತೆ ಭಾಗವಹಿಸುವುದು ’ದಂಡ’ ಎಂಬ ಭಾವನೆ, ಬರಬೇಕು. ಆದ್ದರಿಂದ,’ ಯಾವುದರಲ್ಲಿ, ನೈಜ ಸುಖ ದೊರೆಯುತ್ತದೆ ಎಂದು ಕೇಳಿದರೆ,’, ’ಭಗವಂತನ ನೆನಪು ಮನಸಿನಲ್ಲಿದ್ದರೆ, ಮನಸಿನಲ್ಲಿ ಸದ್ವಿಷಯಗಳ ಬಗ್ಗೆ,ಚಿಂತಿಸುತ್ತಿದ್ದರೆ’,
ಆಗಲೇ,’ ವಾಸ್ತವ ಸುಖವನ್ನು ನಾವು ಅನುಭವಿಸಲು ಸಾಧ್ಯ, ಎಂಬುದೇ,’ ಅದಕ್ಕೆ ಉತ್ತರ. ಎಲ್ಲರೂ, ಇದನ್ನು ಅನುಭವಿಸಿ ನೋಡಬಹುದು.. ’ಮಿಕ್ಕ ಎಲ್ಲಾ ವಿಷಯಗಳನ್ನು ಮರೆತು, ಭಗವಂತನ ಸನ್ನಿಧಿಯಲ್ಲಿ ಕುಳಿತು, ಬೇರೆ ಏನನ್ನೂ, ಚಿಂತಿಸದೆ, ಒಂದು ಹತ್ತು ನಿಮಿಷ,ಭಗವಂತನ ರೂಪವನ್ನು ಚಿಂತಿಸುತ್ತಿದ್ದರೆ,ಆಗ, ಹೇಳಲಾಗದ ಒಂದು ಆನಂದ ಉಂಟಾಗುತ್ತದೆ.ಎಂಬುದನ್ನು, ನಾವು, ನಮ್ಮ ಅನುಭವದಿಂದ ನೋಡಬಹುದು.
.
ಆದರೆ, ಇದಕ್ಕೆ ಯಾರೂ ಪ್ರಯತ್ನಿಸುವುದೇ ಇಲ್ಲ. ಎಲ್ಲಾ ಸಮಯದಲ್ಲಿಯೂ, ಮನವು ಬೇರೆ ವಿಷಯಗಳಲ್ಲಿಯೇ, ಮಗ್ನವಾಗಿರುತ್ತದೆ.
ಅದರಿಂದ ಪ್ರಯೋಜನವೇನು.ಏನೂ ಇಲ್ಲ. ನಾವು, ನಮ್ಮ ಅಮೂಲ್ಯ ಸಮಯ ಫ್ರಯೋಜನವಿಲ್ಲದ ಕೆಲಸ
ಗಳಲ್ಲಿ, ವಿನಿಯೋಗಿಸುತ್ತಿದ್ದೇವೆ. ಅನಾವಶ್ಯ ಮಾತು, ಬೇಡದ ವಿಷಯಗಳ ವೀಕ್ಷಣೆ, ಬೇದದ ವ್ಯವಹಾರಗಳಿಗೆ ತಲೆಹಾಕುವುದು,, ಅದರಿಂದ ಮನುಷ್ಯರು ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಹಾಗಲ್ಲದೆ, ನಮ್ಮ ಸಮಸ್ತ ಸಮಯವನ್ನೂ, ಭಗವಂತನ ಚಿಂತನೆಯಲ್ಲಿ ಕಳೆದರೆ, ನಾವು ಬಹಳ ಪುಣ್ಯಶಾಲಿಗಳಾಗಬಹುದು.
ಶ್ರೀ ಕೃಷ್ಣನು ಒಂದು ಮಾತನ್ನು ಹೇಳುತ್ತಾನೆ.’ ಯಾವ ವ್ಯಕ್ತಿಯು ತನ್ನ ಪ್ರಾಣ ಬಿಡುವ ಸಮಯದಲ್ಲಿ ಯಾವ ವಿಷಯ ಚಿಂತಿಸುತ್ತಾನೋ, ಅವನು ಅದನ್ನೆ ಗಳಿಸುತ್ತಾನೆ’, ಎನ್ನುತ್ತಾನೆ.. ಆ ಸಮಯದಲ್ಲಿ ನಾವು ಭಗವಂತನನ್ನುನೆನೆಯುತ್ತಾ, ಅಸು ನೀಗಿದರೆ, ಭಗವಂತನ ಸಾನ್ನಿಧ್ಯ ನಮಗೆ ದೊರಕುತ್ತದೆ.
.
ಇದನ್ನು ಹೇಳಿದರೆ, ಕೆಲವರಿಗೆ, ಏನು ಭಾವನೆ ಬರುತ್ತದೆಯೆಂದರೆ,’ಕಡೆಯ ಘಳಿಗೆಯಲ್ಲಿ
ಭಗವಂತನನ್ನು ನೆನೆದರೆ ಸಾಕಲ್ಲಾ.ಈಗಲೇ ಏಕೆ ತೊಂದರೆ ಕೊಡುತ್ತೀರಿ. ಆ ಕಡೆಯ ಘಳಿಗೆ-
ಯಲ್ಲಿ ನೆನೆದರೆ, ಸಾಯುಜ್ಯ ದೊರಕಿಬಿಡುತ್ತದೆ. ಹಾಗೆಯೆ ಚಿಂತಿಸುತ್ತೇವೆ.ಆದ್ದರಿಂದ ನಮ್ಮನ್ನು
ಸುಮ್ಮನೆ ಬಿಡಿ.ಈಗ ನಮ್ಮನ್ನು ನಿರ್ಭಂದಿಸಬೇಡಿ’ ಎನ್ನುತ್ತಾರೆ. ಆದರೆ, ಈಗಿನಿಂದ ಅಭ್ಯಾಸ
ಮಾಡದಿದ್ದರೆ, ’ಕಡೆಯ ಘಳಿಗೆಯಲ್ಲಿ, ಇದ್ದಕ್ಕಿದ್ದಂತೆ ಭಗವಂತನ ನೆನೆಪು ಬರುತ್ತದೆಯೇ, ಎಂದು ಕೇಳಿದರೆ,ಖಂಡಿತ ಬರುವುದಿಲ್ಲ.’
ಆದ್ದರಿಂದಲೇ ಹೇಳುವುದು.’ ಈಗಿನಿಂದಲೇ, ಅಭ್ಯಾಸ ಮಾಡಿದರೆ ಕಡೇ ಘಳಿಗೆಯಲ್ಲಿ ಭಗವಂತನನೆಪು ಬರುವುದು.. ಅದನ್ನು ಇಂದಿನಿಂದಲೇ ಅಭ್ಯಸಿಸು. ಭಗವಂತನನ್ನು ಚಿಂತಿಸುತ್ತಿರು.
ಒಂದೊಂದು ಮಾತಿನಲ್ಲೂ ಭಗವಂತನನ್ನು ಜ್ಞ್ಯಾಪಿಸಿಕೊಂಡು ಅಭ್ಯಸಿಸಿದರೆ, ಕಡೆಯ ಘಳಿಗೆಯಲ್ಲಿ ಭಗವಂತನ ನೆನೆಪು ನಿನಗೆ ಬರುತ್ತದೆ, ಎಂದು.
.’
ಆದ್ದರಿಂದಲೇ, ಶ್ರೀ ಭಗವತ್ಪಾದರು’
ಗೇಯಂ ಗೀತಾ ನಾಮ ಸಹಸ್ರಂ ಧ್ಯೆಯಂ ಶ್ರೀಪತಿ ರೂಪಮಜಸ್ರಂ
’ಭಗವಂತನ ನಾಮವನ್ನು ಜಪಿಸು. ಅವನ ಮುಖಾರವಿಂದದಿಂದ ಬಂದ ಭಗವದ್ಗೀತೆಯನ್ನು ಓದು.
ಭಗವಂತನ ದಿವ್ಯ ಸ್ವರೂಪ, ಮತ್ತು ದಿವ್ಯಮಂಗಳ ವಿಗ್ರಹವನ್ನು ಮನದಲ್ಲಿ ಚಿಂತಿಸು.
ಇದೇ, ನಿಮ್ಮ ಜನ್ಮ ಸಾರ್ಥಕವಾಗುವುದಕ್ಕೂ, ನೀವು ಬಯಸುವ ಸುಖವನ್ನು ಪಡೆಯಲೂ ದಾರಿ.
ಇದನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲ.’ ಸೌಖ್ಯವಿದ್ದೇ ಇದೆ. ಅದರಲ್ಲಿ ನಡೆಯುವುದು ನಡೆಯುತ್ತದೆ.
ಆದರೆ, ಅದನ್ನೇ ಬಾಳಿನ ಗುರಿಯೆಂದು ಚಿಂತಿಸಬೇಡ. ಈ ಲೌಕಿಕ ವಿಷಯಗಳು ನಿನ್ನ ಬಾಳ
ಗುರಿಯಲ್ಲ. ನಿಜವಾದ ಗುರಿ, ’ಭಗವಂತನ ಸಾಯುಜ್ಯವನ್ನು ಹೊಂದುವುದು. ಅದಕ್ಕೆ ಪ್ರಯತ್ನಿಸು’
ಎಂದರು.
ಆದ್ದರಿಂದ ಎಲ್ಲರಿಗೂ ಸುಖ ಬೇಕೆಂಬ ಆಸೆಯಿದೆ. ಅದಕ್ಕೆ ಮಾರ್ಗ, ಭಗವಂತನ ಚಿಂತನೆ,ಸ್ಮರಣೆ, ಅವನ ಸೇವೆಯೇ ಮಾರ್ಗ. ಎಲ್ಲರೂ,ಆ ಮಾರ್ಗವನ್ನಾಚರಿಸಿ ತಮ್ಮ ಜನ್ಮವನ್ನು
ಸಾರ್ಥಕವಗಿಸ್ಕೊಳ್ಳಬೇಕು.
ಅಧ್ಯಾಯ-೧೫.
========
ಭಗವಂತನಲ್ಲಿ ಒಂದು ಪ್ರಾರ್ಥನೆ..
=================================
ನಮ್ಮ ಭಾರತ ದೇಶಕ್ಕೆ ಜಗದಲ್ಲಿರುವ ಮಿಕ್ಕ ಎಲ್ಲಾ ದೇಶಗಳಿಗಿಂತ ಒಂದು ಮಹತ್ವ, ಗೌರವವಿದೆ. ಕಾರಣ,
ಬೇರೆ ದೇಶಗಳನ್ನು ಮೀರಿಸುವ ದೊಡ್ಡ ದೊಡ್ಡ ಕಟ್ಟಡಗಳಿವೆ ಎಂದಲ್ಲ. ಅಲ್ಲಿರುವ ಕಟ್ಟಡಗಳಿಗೆ ಹೋಲಿಸಿದರೆ,
ಇಲ್ಲಿರುವ ಕಟ್ಟಡಗಳು ಏನೂ ಪ್ರಯೋಜನವಿಲ್ಲ ಎಂದು ನೋಡಿದವರು ಹೇಳುತ್ತಾರೆ; ಹಾಗಾದರೆ, ಈ ದೇಶಕ್ಕೆ, ಏಕೆ ಇಷ್ಟು
ಗೌರವ ಎಂದರೆ, ಇಲ್ಲಿರುವ ದೇಗುಲಗಳಿಂದ. ಎಷ್ಟೋ ಕಷ್ಟಗಳಿರುವವರೂ, ಇಂತಹ ಭಗವತ್ಸನ್ನಿಧಿಗೆ ಬಂದು
ಸ್ವಲ್ಪ ಹೊತ್ತು ಕುಳಿತರೆ, . ಸನ್ನಿವೇಶವು ಈ ದೇಗುಲಗಳಲ್ಲೇ ಇರುವುದು.ಈ ದೇಗುಳಗಳನ್ನು ನಾವು
ಚೆನ್ನಾಗಿ ರಕ್ಷಿಸಬೇಕು. ಈ ದೇಗುಲಗಳಲ್ಲಿ, ಅಧಿಕ ಶ್ರದ್ಧೆಯನ್ನೂ, ಆದರವನ್ನೂ, ಅಭಿಮಾನವನ್ನೂ, ಇಟ್ಟುಕೊಂಡಿರಬೇಕು.
ದೇಗುಲಗಳಿರುವುದು. ಭಗವಂತನ ಅನುಗ್ರಹವನ್ನು ಪಡೆಯುವುದಕ್ಕೆ. ನಿಜವಾಗಿ, ಭಗವಂತನು ಎಲ್ಲೆಲ್ಲೂ
ಇದ್ದಾನೆ. ದೇವರಿಲ್ಲದ ಸ್ಥಳವಿಲ್ಲ.ಆದರೆ, ಎಲ್ಲೆಡೆಯೂ, ದೆವರನ್ನು ಕಾಣುವ ಸಂಸ್ಕಾರ ನಮಗಿಲ್ಲ.ನಮ್ಮ ಸಂಸ್ಕಾರ ಬಹಳ ಅಪರಿಮಿತವಾದದ್ದು.. ಎಲ್ಲಾ ಸ್ಥಾನದಲ್ಲಿಯೂ, ದೇವನನ್ನು ಕಾಣುವ ಮಟ್ಟಕ್ಕೆ ನಾವಿಲ್ಲ, ಪ್ರಹ್ಲಾದನಂತೆ
ಮಹಾ ಭಾಗವತೋತ್ತಮರಿದ್ದರು. ಪ್ರಹ್ಲಾದನು ಎಲ್ಲಿ ನೋಡಿದರೂ, ಭಗವಂತನು ಮಾತ್ರ ಕಾಣುತ್ತಿದನು. ಅವನ
ತಂದೆ, ಅವನನ್ನು ಕಂಡು, ’ನಿನ್ನ ಭಗವಂತನು ಎಲ್ಲಿದ್ದಾನೆ’, ಎಂದು ಕೇಳಿದನು.ಅದಕ್ಕೆ ಪ್ರಹ್ಲಾದನು,’ ಎಲ್ಲಿ ಇಲ್ಲ ಎಂದು ನಾನು ಹೇಳುವುದು.. ನನಗೆ ಎಲ್ಲಿ ನೋಡಿದರೂ, ಭಗವಂತನೇ ಕಾಣುತ್ತಾನೆ’ ಎಂದನು. ಅದಕ್ಕೆ ಅವನ
ತಂದೆ,’ ಎಲ್ಲಿ ನೋಡಿದರೂ, ಭಗವಂತನು ಕಾಣುತ್ತಾನೆ ಎನ್ನುವೆಯಲ್ಲಾ, ಈ ಸ್ಥಂಬದಲ್ಲಿದ್ದಾನೆಯೇ’, ಎಂದು ಘರ್ಜಿಸಿದನು.. ಸ್ವಲ್ಪವೂ, ಭಯವಿಲ್ಲದೆ, ಪ್ರಹ್ಲಾದನು, ’ಅಲ್ಲೂ ಇರುವನೆಂದನು.’ ಇದನ್ನು ಕೇಳಿ ಕೆರಳಿದ ತಂದೆಯು, ’ನೀನು ಹೇಳುವ ಭಗವಂತನನ್ನು ನನಗೆ ತೋರುವೆಯಾ ಎಂದನು. ’ತೋರಿಸಲು ನಾನ್ಯಾರು. ಅಲ್ಲಿ ಭಗವಂತನು ನಿಶ್ಚಯವಾಗಿದ್ದಾನೆಂದು ಪ್ರಹ್ಲಾದನೆಂದನು..
ಆಗಲೇ, ಆ ಕಂಬದಿಂದ ಶ್ರೀ ನರಸಿಂಹಮೂರ್ತಿಯ ರೂಪದಲ್ಲಿ ಪ್ರತ್ಯಕ್ಷಆದನು; ಆ ನರಸಿಂಹ ,
ಅವತಾರವೇ, ’ಭಗವಂತ ಸರ್ವವ್ಯಾಪಿ’ ಎಂಬ ಸಿದ್ಧಾಂತವನ್ನು ನಿರೂಪಿಸಲು ಬಂದ ಅವತಾರ. ಭಗವಂತನು ಸರ್ವ-
ವ್ಯಾಪಿ ಎಂಬುದರಲ್ಲಿ ನಮಗೆ ಸಂದೇಹವೇ ಇಲ್ಲ. ಆದರೆ, ನಮ್ಮ ಸಂಸ್ಕಾರವನ್ನನುಸರಿಸಿ, ಒಂದು
ಸ್ಥಾನವನ್ನು ಕಲ್ಪಿಸಿ, ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಿ, ’ಇಲ್ಲಿ ನೀನು ಭಗವಂತನ ಸೇವೆಯನ್ನು ಮಾಡು, ಎಂದು ಹೇಳಿದರೆ,’ ನಮ್ಮ ಮನಸ್ಸು ಅಲ್ಲಿ ನಿಲ್ಲುವುದು. ಅಲ್ಲಿ ನಾವು ಭಗವಂತನಿಗೆ ಸೇವೆ ಸಲ್ಲಿಸಲು ಆಗುವುದು. ಅದಕ್ಕೇ ನಮ್ಮ ಹಿರಿಯರು, ಈ
ದೇಗುಲಗಳನ್ನು ಸ್ಥಾಪಿಸಿರಿ ಎಂದು ಉಪದೇಶಿಸಿದರು. ಆ ಆದೇಶದಂತೆ, ದೇಗುಲಗಳನ್ನು ನಿರ್ಮಿಸಿ,
ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ಸೇವೆ ಮಾಡಿಕೊಂಡು ಬರುತ್ತೇವೆ. ನಾವು ಭಗವಂತನ ಸನ್ನಿಧಿಯಲ್ಲಿ ಬಹಳ ಭಕ್ತಿಯೊಂದಿಗೂ,
ಶ್ರದ್ಧೆಯಿಂದಲೂ, ಪ್ರಾರ್ಥಿಸಬೇಕು. ನಾವು ಮಾಡುವ ಪ್ರಾರ್ಥನೆಯು ಫಲಕಾರಿಯಾಗಬೇಕಾದರೆ, ನಮ್ಮ ಮನದಲ್ಲಿ ಶ್ರದ್ಧೆಯೂ, ಭಕ್ತಿಯೂ, ಅವಶ್ಯಕವಾಗಿರಬೇಕು/. ಅದು ಯಾರಾದರಾಗಲಿ, ಎಷ್ಟೇ ಪಂಡಿತನಾಲಿ, ಶ್ರೀಮಂತನಾಗಲಿ,
ಭಕ್ತಿಯಿಲ್ಲದೆ, ಅವನು ಭಗವಂತನ ಬಳಿ ಬಂದರೆ, ಅವನ ಪ್ರಾರ್ಥನೆಯನ್ನು ಭಗವಂತನು ಸ್ವೀಕರಿಸುವುದಿಲ್ಲ.
ಅವನು ಭಕ್ತಿಯನ್ನು ಮಾತ್ರ ನೋಡುತ್ತಾನೆ. ಆದ್ದರಿಂದ, ಮೊದಮೊದಲಲ್ಲಿ ನಮ್ಮ ಮನದಲ್ಲಿ ಭಕ್ತಿಯು ಸ್ಥಿರವಾ-
ಗಿರಬೇಕು. ಅದು ಸ್ಥಿರವಾಗಿರಲು ಕೂಡ ಭಗವಂತನ ಅನುಗ್ರಹ ಅವಶ್ಯ. ಇಲ್ಲದಿದ್ದರೆ, ಆ ಭಕ್ತಿ ಸ್ಥಿರವಾಗುವುದಿಲ್ಲ. ಶ್ರೀ ಭಗವತ್ಪಾದರು ಶ್ರೀ ಪರಮೇಶ್ವರನ ಸನ್ನಿಧಿಯಲ್ಲಿ ನಾವು ಈ ರೀತಿಯಗಿ ಪ್ರಾರ್ಥಿಸಬೇಕೆನ್ನುತ್ತಾರೆ.
ಅಮಿತಮುದಮ್
ಋತಂ ಮುಹೂರ್ತುಹಂತೀಂ
ವಿಮಲ ಭವತ್ಪದಗೋಷ್ಟಮಾವಸಂತೀಂ
ಸದಯಪಶುಪತೇ ಸುಪುಣ್ಯಭಾಗಾಂ
ಮಮ ಪರಿಪಾಲಯ ಭಕ್ತಿತೇನು ಮೇಕಾಂ
ಭಗವಂತನೆ,ನೀನು ಪಶುಪತಿಯಲ್ಲವೇ. ’ಪಶುಪತಿ’ ಯೆಂದರೆ, ಹಸುವನ್ನು ಕಾಯುವವನು. ನನ್ನ ಬಳಿ ’ಭಕ್ತಿಯೆಂಬ ಪಶುವೊಂದಿದೆ.. ಅದನ್ನು ನೀನು ರಕ್ಶಿಸಬೇಕು. ಈ ಹಸುವುನಿಂದ ನನಗೆ ಅಮಿತಾನಂದ ದೊರೆಯುತ್ತದೆ.
ಭಕ್ತಿಯಿದ್ದವನಿಗೆ ಮಾತ್ರ ಪಶುಪತಿ ಸನ್ನಿಧಾನದಲ್ಲಿ ಕುಳಿತರೆ ಆನಂದ ದೊರಕುತ್ತದೆ. ಆ ಆನಂದವನ್ನವನು
ಬೇರೆಲ್ಲೂ ಪಡೆಯಲಾಗುವುದಿಲ್ಲ. ಎಷ್ಟು ಹಣ ಗಳಿಸಿದರೂ ಆ ಅನಂದ ದೊರಕುವುದಿಲ್ಲ. ಎಷ್ಟು ಭಕ್ಷಗಳನ್ನು ತಿಂದರೂ, ಆ ಅನಂದ ದೊರೆಯುವುದಿಲ್ಲ.. ಎಷ್ಟು ಹಾರಗಳನ್ನು ಹಾಕಿಕೊಂಡರೂ, ಆ ಆನಂದ ದೊರೆಯುವುದಿಲ್ಲ.
ಭಗವಂತನ ಸನ್ನಿಧಿಯಲ್ಲಿ ಕುಳಿತು ಆ ಮೂರ್ತಿಯನ್ನು ಧ್ಯಾನಿಸುತ್ತಿದ್ದರೆ ಮಾತ್ರ, ಆ ಆನಂದವು ದೊರೆಯುತ್ತದೆ. ಆದ್ದರಿಂದ
ಶ್ರೀ ಭಗವತ್ಪಾದರು, ’ ಈ ಭಕ್ತಿಯೆಂಬ ಹಸುವಿನಿಂದ ನನಗೆ ಅಮಿತಾನಂದವೆಂಬ ಅಮೃತವು ದೊರಕುತ್ತದೆ.
ಈ ಭಕ್ತಿ ಸ್ಥಿರವಾಗಿರಲು, ಹೇ, ಭಗವಂತನೇ, ಅನುಗ್ರಹಿಸು, ಎಂದು ಪ್ರಾರ್ಥಿಸುತ್ತಾರೆ. ಅಂತಹ ಭಕ್ತಿಯಿದ್ದರೆ,ಭಗವಂತನು ಬೇರಾವ ಯೋಗ್ಯತೆಯನ್ನೂ ನೋಡುವುದಿಲ್ಲ. ನೀನು ಓದಿದವನಾ, ಬಹಳ ವಯಸ್ಸಾದವನಾ, ನೋಡಲು ಸ್ಫುರದ್ರೂಪಿಯಾ, ಎಂದು ಬೇರೇನನ್ನೂ ನೋಡುವುದಿಲ್ಲ.. ಅವನು ನೋಡುವುದು ಭಕ್ತಿಯೊಂದನ್ನೇ. ’ಭಕ್ತಿ ಎಂದರೆ, ಭಗವಂತನಲ್ಲಿ ಮನವನ್ನು ನಿಲ್ಲಿಸುವುದು ತಾನೆ.’
ನಮ್ಮ ಬದುಕಿನಲ್ಲಿ, ನಮ್ಮ ಮನಸ್ಸನ್ನು ಒಂದು ವಿಷಯದಲ್ಲಿ ಏಕಾಗ್ರಗೊಳಿಸುವುದು ಬಹಳ ಕಷ್ಟವಾಗಿದೆ.
ಎಷ್ಟೋ, ಜನರು ಶ್ರೀಗುರುಗಳ ಬಳಿ ಬಂದು, ’ಜಪ-ಪೂಜೆಗೆ ಕುಳಿತರೆ ಮನವೆಲ್ಲೋ ಅಲೆಯುತ್ತದೆ. ಮಿಕ್ಕ ಸಮಯದಲ್ಲಿ
ಶಾಂತವಾಗಿರುತ್ತದೆ’ ಎನ್ನುತ್ತಾರೆ.’ ’ಇದಕ್ಕೆ ಕಾರಣವೇನು’ ಎಂದು ಕೇಳುತ್ತಾರೆ’. ಎಷ್ಟೋ ಜನ್ಮಗಳಿಂದ, ನಮಗೀ ಪ್ರಾರಬ್ಧ ಬಂದಿದೆ.. ಮನಸನ್ನು ಏಕಾಗ್ರಗೊಳಿಸಲಾಗುತ್ತಿಲ್ಲ. ಭಗವಾನ್ ಶ್ರೀ ಕೃಷ್ಣನ ಸನ್ನಿಧಿಯಲ್ಲಿ, ಅರ್ಜುನನು
ಈ ಪ್ರಶ್ನೆಯನ್ನು ಕುರಿತು, ’ಸ್ವಾಮಿ, ನೀನು ಹೇಳುವುದೆಲ್ಲಾ ಸರಿ. ಆದರೆ, ”ಮನವನ್ನು ಏಕಮುಖಮಾಡಲಾಗುತ್ತಿಲ್ಲವಲ್ಲ.
ತುಂಬಾ
ಕಷ್ಟವಾಗಿದೆ. ಗಾಳಿಯನ್ನು ಹಿಡಿದು ನಿಲ್ಲಿಸುವಂತಿದೆಯಲ್ಲಾ, ಈ ಮನದ ಸಮಾಚಾರ’ ಎನ್ನುತ್ತಾನೆ. ಅದಕ್ಕೆ,ಭಗವಂತನು, ’ನೀನು ಹೇಳುವುದು ಸರಿ’.. ಮನವನ್ನು ಏಕಮುಖಗೊಳಿಸುವುದು ಕಷ್ಟ’. ಎನ್ನುತ್ತೀಯೆ. ಅದನ್ನು ನಾನು ಒಪ್ಪುತ್ತೇನೆ.. ಏಕಮುಖಗೊಳಿಸಲಾಗುವುದಿಲ್ಲ, ಎಂಬ ನಿನ್ನ ಮಾತನ್ನು ನಾನು ಒಪ್ಪುವುದಿಲ್ಲ.ಕಷ್ಟವೆನ್ನುತ್ತೀಯೆ. ಅದು ವಾಸ್ತವ.. ಆದರೆ ಅಭ್ಯಾಸ ಮಾಡುತ್ತಾ ಬಂದರೆ, ಅದು ಸಾಧ್ಯ. ’ವೈರಾಗ್ಯದಿಂದ ಮನ ನಿಯಂತ್ರಣ ಸಾಧ್ಯ,
ಎಂದನು. ’ಮನ ಯಾವಾಗಲೂ ಓಡುತ್ತಿದೆಯಲ್ಲಾ, ಅದು ಒಂದೆಡೆ ನಿಂತರೆ ತಾನೆ ಭಕ್ತಿಯನ್ನಿಟ್ಟುಕೊಳ್ಳಬಹುದು, ಎಂದು ಕೇಳಿದರೆ,’ ನಾವು ಆ ಭಗವಂತನಿಗೇ ಮೊರೆಹೋಗಬೇಕು.
ಶ್ರೀ ಭಗವತ್ಪಾದರು, ’ಕಪಾಲೀಶ್ವರನೇ, ಈ ಮನವೆಂಬ ಮರ್ಕಟವನ್ನು ನಿಯಂತ್ರಿಸುವುದು ನಿನ್ನಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ, ನಿನ್ನ ಬಳಿ ಬಂದಿದ್ದೇನೆ’ ಎಂದು ಪ್ರಾರ್ಥಿಸಿದರು. ’ಈ ಮನವಾನರವು ಮೋಹವೆಂಬ ಕಾಡಿನಲ್ಲಿ ಸಂಚರಿಸುತ್ತಿದೆ. ಆಸೆಗಳೆಂಬ ಮರದಲ್ಲಿ ಏರುತ್ತಿದೆ.ಇಳಿಯುವುದೇ ಇಲ್ಲ ಎನ್ನುತ್ತದೆ. ವಾನರವು ಮರದಿಂದ ಮರಕ್ಕೆ ಧುಮುಕುವಂತೆ ಮನವೂ ಹಲವು ವಿಧವಾದ ಆಸೆಗಳಿಂದ ಒಡುತ್ತಿದೆ. ಈ ಮರ್ಕಟವನ್ನು’ ನೀನೇ ವಶಪಡಿಸಿಕೊಳ್ಳಬೇಕು.’ ಎಂದು ಭಗವತ್ಪಾದರು ಪ್ರಾರ್ಥಿಸುತ್ತಾರೆ. ’ನಿನ್ನ ಬಳಿಯೇ ಇಟ್ಟುಕೊಳ್ಳಬೇಕೆಂದು ಪ್ರಾರ್ಥಿಸುತ್ತಾರೆ ಅಂದರೆ ನಮ್ಮ ಮನವನ್ನು ಭಗವಂತನ ಪದತಲದಲ್ಲಿ ಅರ್ಪಿಸಬೇಕೆಂದರ್ಥ.
ಭಗವಂತನಿಗೆ, ನಾವೇನು ಕೊಡಬಹುದು. ನಮ್ಮ ಬಳಿ ಏನಿದೆ. ಅವನ ಬಳಿ ಇಲ್ಲದ್ದು ನಮ್ಮ ಬಳಿ ಏನಿದೆ.
ಒದವೆಗಳನ್ನು ಕೊಡೋಣವೆಂದರೆ, ಸ್ವರ್ಣದಿಂದಾದ ಮೇರು ಪರ್ವತವೇ ಅವನ ಕೈಯ್ಯಲ್ಲಿದೆ. ಅದಕ್ಕಿಂತ ಹಿರಿದಾದ ಸ್ವರ್ಣವನ್ನು ಕೊಡಲಾಗುವುದೇ. ಹಣ ಕೊಡೋಣವೆಂದರೆ, ಕುಬೇರನೇ, ಅವನು ಹೇಳಿದಂತೆ ಕೇಳುತ್ತಾನೆ.. ನಾವು ಅವನಿಗಿಂತ ಹಣವಂತರೇ. ಅವನ ಐಶ್ವರ್ಯದ ಮುಂದೆ ನಮ್ಮ ಐಶ್ವರ್ಯ ಯಾವ ಲೆಕ್ಕ. ನಾವು ಭಗವಂತನಿಗೆ ಹಣ ಕೊಂಡುತಂದು
ಕೊಡುತ್ತೇವೆಂದು ಹೇಳುತ್ತೇವಲ್ಲ. ಹೊರ ನಾಡಿನಿಂದ ತಂದ ವಸ್ತುಗಳನ್ನು ಕೊಡೋಣವೆಂದರೆ, ಅವನ ಸನ್ನಿಧಿಯಲ್ಲಿ, ಈಗಲೇ,ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಅಂತಹ ಮಹತ್ವದ ವಸ್ತುಗಳಿವೆ. ಹೊಸದಾಗೇನಾದರೂ ಕೊಡುವುದು ಸಾಧ್ಯವೇ. ನಮ್ಮ ಬಳಿ ಭಗವಂತನಿಗೆ ಹೊಸದಾಗಿ ಕೊಡುವಂತಹ ವಸ್ತುಗಳು ಯಾವುದೂ ಇಲ್ಲ.ಇದನ್ನರಿತೇ, ಶ್ರೀ ಶಂಕರರು, ’ಭಗವಂತಾ, ನನ್ನ ಮನಸ್ಸನ್ನು ನಿನ್ನ ಚರಣಾರವಿಂದಗಳಲ್ಲಿ ಅರ್ಪಿಸುತ್ತೇನೆ.. ನನ್ನನ್ನು ಅನುಗ್ರಹಿಸು’ ಎಂದರು. ’ಭಗವಂತನ ಚರಣಾರವಿಂದಗಳಲ್ಲಿ ಮನ-
ಸ್ಸನ್ನಿಡುವುದು; ಎಂದರೆ ಅರ್ಥವೇನು. ಅದು ’ ಕೈಗೆಟುಕುವ ವಸ್ತುವೇ’. ಹಾಗಿದ್ದರೆ, ಸುಲಭವಾಗಿ ಎತ್ತಿ ಇಡಬಹುದಲ್ಲಾ.
ಅದರರ್ಥ, ’ಭಗವಂತನೇ, ಸದಾ ನಿನ್ನ ಪಾದಾರವಿಂದವನ್ನೆ ಧ್ಯಾನಿಸುವಂತೆ ಅನುಗ್ರಹಿಸು’ ಎಂದರ್ಥ.
ಎಷ್ತೋ ಲೌಕಿಕ ವಿಷಯಗಳನ್ನು ಚಿಂತಿಸುತ್ತಾ, ನಮ್ಮ ಮನವು ಶಾಂತಿಯಿಲ್ಲದೆ ಪರಿತಪಿಸುತ್ತಿದೆ. ಆದರೂ, ನಮಗೆ ಈ
ಲೌಕಿಕವು ಬೇಕೆಂದರೆ, ಅದರ ಮೇಲಿರುವ ’ಅತೀವ ಮೊಹವು’ ತಾನೇ ಕಾರಣ. ಅದನ್ನು ಬಿಟ್ಟು, ಭಗವಂತನನ್ನೇ ಸದಾ ಚಿಂತಿಸುವಒಂದು ಪವಿತ್ರವಾದ ಸಂಧರ್ಬ ನಮಗಿದ್ದರೆ ಅದೇ ನಮ್ಮ ಪವಿತ್ರ ದಿವಸ.
ಅದಕ್ಕೇ, ಒಬ್ಬ ಮಹಾಕವಿಯು,’ ಹೇ ಲೌಕಿಕ ಭೋಗಗಳೇ, ನನ್ನ ಬಳಿ ಬರದಿರಿ.’ ಕೇವಲ ,ಈ ಸಂಸಾರಕೂಪದಲ್ಲಿ ತಳ್ಳುವ ಭೋಗಗಳೇ, ನನ್ನ ಬಳಿ ಬಾರದಿರಿ ಎಂದರು..’ ಹಾಗೆ ಹೇಳಲು ಕಾರಣ, ನಿಮ್ಮ ಮೇಲೆ, ಆಸೆ, ಮೊಹ ವರ್ಜಿತನಾಗಿದ್ದೇನೆ.
ಶ್ರೀ ಕಪಾಲೀಶ್ವರನು ನನ್ನ ಮನದಲ್ಲಿ ಕುಳಿತಿದ್ದಾನೆ. ಈ ಭೋಗಗಳ ವಿಷಯದಲ್ಲಿ ನನಗೆ ಆಸಕ್ತಿಯಿಲ್ಲ. ನನಗೆ ಈ ಭೋಗಗಳು ಬೇಡವೆಂದರು. ಆದ್ದರಿಂದ, ಭಗವಂತಾ, ನನಗೆ ಈ ಲೌಕಿಕ-
ಆಸೆಗಳಿಂದ ವಿಮುಕ್ತಿಗೊಳಿಸಿ, ನಿನ್ನ ಚರಣಾವಿಂದಗಳಲ್ಲಿ ಮನ ನಿಲ್ಲುವಂತೆ ಅನುಗ್ರಹಿಸು, ಎಂದು ದೈವ ಸನ್ನಿಧಿಯಲ್ಲಿ ಪ್ರಾರ್ಥಿಸಿದರೆ, ಆಗ ನಮ್ಮ ಬಾಳು, ಪವಿತ್ರ-ಧನ್ಯವಾಗುತ್ತದೆ.
ಭಗವಂತನ ಪಾದಾರವಿಂದಗಳಲ್ಲಿ ತಮ್ಮ ಮನಸ್ಸನ್ನರ್ಪಿಸಿ, ತಮ್ಮ ಬಾಳನ್ನು ಧನ್ಯರಾಗಿಸಿಕೊಂಡ ಎಷ್ಟೋಮಹಾತ್ಮರು ನಮ್ಮನಾಡಿನಲ್ಲಿದ್ದರು.. ಭಗವಂತನ ಮಹಿಮೆ ಎಷ್ಟೆಂದು ಹೇಳಿದರೆ, ಙ್ಯಾನಿಗಳಾಗಿರುವ ಎಷ್ಟೋ ಮಹಾತ್ಮರು ಭಗವಂತನ ವಿಷಯದಲ್ಲಿ ತನ್ಮಯರಾಗಿಬಿಡುತ್ತಾರೆ. . ಮಹಾತ್ಮರಿಗೆ ಯವುದೇ ಆಸೆಗಳಿಲ್ಲ. ಯವುದೂ,ಅವಶ್ಯಕತೆಗಳಿಲ್ಲ.
ಕೇವಲ ಆತ್ಮಾರಾಮರಾಗಿರುತ್ತಾರೆ. ಅವರಿಗೂ, ಭಗವಂತನಲ್ಲಿ ಅವ್ಯಾಜವಾದ ಭಕ್ತಿಯುಂಟಾಗಿಬಿಡುವುದು.
. ಇಲ್ಲದಿದ್ದರೆ, ಸರ್ವಸಂಗಪರಿತ್ಯಾಗಿಗಳಾದ, ಶುಕಬ್ರಹ್ಮರು ಏಕೆ ಭಾಗವತ ಪ್ರವಚನ ಮಾಡಿದರು.
ಶ್ರೀ ಭಗವತ್ಪಾದರು ಏಕೆ ಭಗವಂತನನ್ನು ಸ್ತುತಿಸಿದರು. ಸೌಂದರ್ಯಲಹರಿ, ಶಿವಭುಜಂಗ ಸ್ತೋತ್ರಗಳಿಂದ ಏಕೆ ಭಗವಂತನನ್ನು ಸ್ತುತಿಸಿದರು.. ಭಗವಂತನ ಮಹಿಮೆ, ಆ ರೀತಿಯದು. ಆದ್ದರಿಂದ, ಎಲ್ಲರೂ, ಭಗವಂತನನ್ನು ಗೌರವಿಸಿ,, ಶ್ರದ್ಧಾ-ಭಕ್ತಿಗಳಿಂದ ಆರಾಧಿಸಿ, ತಮ್ಮ ಬಾಳನ್ನು ಧನ್ಯವನ್ನಾಗಿಸಿಕೊಳ್ಳಬೇಕು.
ಲೌಕಿಕವಾಗಿ ಎಷ್ತೇ ಪ್ರಗತಿಯಾಗಿದ್ದರೂ, ಭಗವಂತನ ಕೃಪೆಯಿಲ್ಲದಿದ್ದರೆ, ನಮ್ಮ ಬಾಳು ಸಾರ್ಥಕ ವಾಗುವುದಿಲ್ಲ.
ಹಣಗಳಿಕೆಯಿಂದಲೋ, ಬಹಳ ಓದುವದರಿಂದಲೋ, ನಾನು ದೊಡ್ಡಮನುಷ್ಯರೆಂದು ನೆನೆದುಕೊಳ್ಳಬಾರದು.ಆ ಭಗವತನಲ್ಲಿ ಅವ್ಯಾಜ್ಯ ಭಕ್ತಿಯಿಂದಿದ್ದ ಬೇದರ ಕಣ್ಣಪ್ಪನಿಗೆ ಹೇಗೆ ಭಗವಂತನ ಕೃಪೆ ದೊರೆಯಿತೋ, ಅದರಲ್ಲಿ ಸಾವಿರದಲ್ಲಿ ಒಂದು ಭಾಗ ದೊರೆತರೂ,, ನಮ್ಮ ಬಾಳು ಧನ್ಯವಾಗಿಬಿಡುವುದು. ಅವನು ಶ್ರೀಮಂತನಾಗಿದ್ದನೇ, ಅಧಿಕ ವಿದ್ಯಾವಂತನಾಗಿದ್ದಾನೆ, ದೊಡ್ದ ಅಧಿಕಾರ-ವಿದ್ದಿತೇ.ಪರಮ ಸುಂದರನಾಗಿದ್ದನೇ. ಆಚಾರಶೀಲನಾಗಿದ್ದನೇ. ಏನೂ ಇರಲಿಲ್ಲ.. ಅದಕ್ಕೇ,” ಭಕ್ತಿಯೊಂದಿದ್ದರೆ, ಬೇರೇನೂ ಬೇಡವೆಂದರು ಶ್ರೀ ಭಗವತ್ಪಾದರು.’ ಏನೂ ಅರಿಯದ, ಏನೂ ಓದದ ಒಬ್ಬ ಬೇಡನು
ಕೇವಲ ಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರನಾದನೆಂದರೆ,ಯಾವುದು ಹಿರಿದು. ..ಭಕ್ತಿಯೊಂದೇ.
ಅಂತಹ ಭಕ್ತಿಯನ್ನು ನಮ್ಮ ಮನದಲ್ಲಿ ಸತತವೂ, ಇಟ್ಟುಕೊಂಡು, ಭಗವಂತನನ್ನು ಚಿಂತಿಸುತ್ತಲೇ ಇದ್ದರೆ,ನಮ್ಮ ಜನ್ಮ ಸಾರ್ಥಕವಾಗಲು ಕಾರಣವಾಗುವುದು.
ಆದ್ದ್ದರಿಂದ ದಿನವೂ ಮನದಲ್ಲಿ ಭಗವಂತನನ್ನು ಧ್ಯಾನಿಸಿಕೊಂಡಿರು. ವಾಕ್ಕಿನಿಂದ ಅವನ ನಾಮವನ್ನುಚ್ಚರಿಸುತ್ತಿರು.. ಶರೀರದಿಂದ ಅವನ ಸೇವೆಯನ್ನು ಮಾಡುತ್ತಿರು.ನಿನ್ನ ಕಾಯಾ, ವಾಚಾ,ಮನಗಳು, ಅಂತಹ ಭಗವಂತನ ಸೇವೆಯಲ್ಲಿ ಲೀನವಾದರೆ, ನೀನು ಧನ್ಯನಾಗಿಬಿಡುತ್ತೀಯೆ. ..
ಇದೇ, ವಿಷಯವನ್ನು ಶ್ರೀ ಶಂಕರರು, ಮತ್ತೊಂದೆಡೆ,
ಸಾರಸನಾ ತೇ ನಯನೇ ತಾವೇವ ಕರೌ ಸ ಏವ ಕ್ರುತಕ್ರುತ್ಯಃ ಯಾ ಯೇ ಯೌ ಯೋ ಪರ್ಗಂ ವದದೀಕ್ಷೇತೇ ಸದಾರ್ಚತಃ ಸ್ಮರತಿ, ಎನ್ನುತ್ತಾರೆ.
.
’ನಾಲಿಗೆ ಯೆಂದರೆ ಯಾವುದು. ಭಗವನ್ನಾಮವನ್ನು ನುಡಿಯುವ ನಾಲಿಗೆಯೇ ನಾಲಿಗೆ. ಬೇಡದ ವಿಚಾರವನ್ನು ಆಡುವ ನಾಲಿಗೆ ನಾಲಿಗೆಯಲ್ಲ.. ಕಣ್ಣೆಂದರೆ ಯಾವುದು. ಭಗವಂತನ ಸನ್ನಿಧಿಗೆ ಬಂದು ಅವನ ಮೂರ್ತಿಯನ್ನು ದರ್ಶಿಸುವುದೇ ಕಣ್ಣು.. ಅದಿಲ್ಲದಿದ್ದರೆ ಅದು ಕಣ್ಣಲ್ಲ. ಭಗವಂತನನ್ನು ಪೂಜಿಸುವುದೇ ಕೈಗಳು. ಬೇರೆಯವು ಕೈಗಳಲ್ಲ.
ಅದು ಇದು ಎಂದು ಹೇಳಬೇಕಾದ್ದಿಲ್ಲ. ನಮ್ಮ ಸಮಸ್ತ ದೇಹೇಂದ್ರಿಯಗಳೂ, ಭಗವಂತನ ಸೇವೆಯಲ್ಲಿ ವಿನಿಯೋಗವಾದರೆ ಮಾತ್ರ ಇದಕ್ಕೆ ಪರಿಪೂರ್ಣವಾಗುತ್ತದೆ.. ಆದ್ದರಿಂದ, ಯಾವಾಗಲೂ, ಭಗವಂತನನ್ನು ಮರೆಯದೇ, ಅವನ ಸ್ವರೂಪವನ್ನು ಚಿಂತಿಸುತ್ತಿರು., ಎಂದು ಭಗವಾನ್ ಶಂಕರರು ತಮ್ಮ ಸ್ತೋತ್ರಸಾಹಿತ್ಯದಲ್ಲಿ ಬಹಳ ಚೆನ್ನಾಗಿ ಪ್ರತಿಪಾದಿಸಿದ್ದರೆ.
ಎಲ್ಲರೂ, ಅವರ ಸ್ತೋತ್ರಗಳನ್ನು ಪಠಿಸುತ್ತೀರಿ. ಅವರು ಹೇಳಿರುವುದನ್ನು ಚೆನ್ನಾಗಿ ಗ್ರಹಿಸಿ, ಅಂತೆಯೇ ನಡೆದು, ನಮ್ಮ
ಬಾಳನ್ನು ಧನ್ಯವಾಗಿಸಿಕೊಳ್ಳುವುದು ಬಹಳ ಅವಶ್ಯ ಎನ್ನುತ್ತಾರೆ.
.
===========
ಅಧ್ಯಾಯಾ-೧೬.
============
ಮೂಲ ತತ್ವಗಳು
================
ನಮ್ಮ ಕಲಾಚಾರವು ಬಹಳ ಉತ್ತಮವಾದದ್ದು.ದರ ಬಗ್ಗೆ ಅರಿತುಕೊಳ್ಳುವುದು ನಮ್ಮ ಕರ್ತವ್ಯ.
ನಾವೀ ದೇಶದಲ್ಲಿಯೇ ವಾಸಿಸುತ್ತಿದ್ದರೂ, ನಮ್ಮ ಕಲಾಚಾರದ ಬಗ್ಗೆ ನಮಗೆ ಪೂರ್ಣ ಅರಿವಿಲ್ಲ.
’ವಂಶೇ ಕಸ್ಮಿನ್ ನ ಜನಿಶೀ ಕಯೋಹೊ ಪುತ್ರತಾಮಗ್ರಹೀಶಂ’.ಶ್ರೀ ನೀಲಕಂಠ ದೀಕ್ಶಿತರು
ಒಂದು ಕಡೆ,’ನಾನು ಯಾವ ವಂಶಕ್ಕೆ ಸೇರಿದವನು. ನಾನು ಯಾವ ವಿಧ ಮಾತಾ-ಪಿತೃಗಳಿಗೆ ಜನಿಸಿದ್ದೇನೆ.
ನನ್ನ ನಡತೆ, ನನ್ನ ವಂಶಕ್ಕೂ, ನನ್ನ ಮಾತಾ-ಪಿತೃಗಳಿಗೂ, ತಕ್ಕಂತೆ ಇದೆಯೇ,, ಹೀಗೆ ನಾವು ಚಿಂತಿಸಬೇಕೆಂದು ಅವರು ಹೇಳುತ್ತಾರೆ.
ವಿಜ್ಞ್ಯಾನವು ಬೆಳೆದ ದೇಶಗಳ ಪ್ರಜೆಗಳೂ,’ನಾವು ಭಾರತದಲ್ಲಿ ಬೆಳೆಯಲು ಆಶಿಸುತ್ತೇವೆ.
ನಮಗೆ ಮತ್ತೊಂದು ಜನ್ಮವಿದ್ದರೆ, ನಾವು ಭಾರತದಲ್ಲಿ ಜನಿಸಲು ದೇವರು ಅನುಗ್ರಹಿಸಲಿ
ಎನ್ನುತ್ತಾರೆ. ಹಾಗಿರಲು, ನಮ್ಮ ಪ್ರಜೆಗಳಿಗೆ, ಅದರ ಬಗ್ಗೆ ಇರಬೇಕಾದ ವಿಶ್ವಾಸದ ಬಗ್ಗೆ
ಹೇಳಬೇಕ್ಕಾದ್ದೇ ಇಲ್ಲ. ಆ ತರಹದ ಕಲಾಚಾರದ ಬಗ್ಗೆ ನಮಗೆ ನಂಬಿಕೆ ಇದೆಯೇ-
ಇಲ್ಲವೇ, ಎಂಬುದರ ಬಗ್ಗೆ ನಾವೇ ಪ್ರಶ್ನಿಸಿ ತಿಳಿದುಕೊಳ್ಳಬೇಕು.
ನಮ್ಮ ಸಿದ್ಧಾಂತದಲ್ಲಿರುವ ಮೂಲ ತತ್ವಗಳು, ಎರಡು. ಅವು ’ಈಶ್ವರ ಮತ್ತು ಧರ್ಮ’
ಎಂಬುದು. ಇವೆರದನ್ನ್ನೂ, ನಮ್ಮ ಸಿದ್ಧಾಂತಕ್ಕೆ ಮೂಲವಾಗಿಟ್ಟುಕ್ಕೊಳ್ಳದಿದ್ದರೆ, ನಮಗೆ ಭಾರತೀ-
ಯರೆಂದು ಹೇಳಿಕೊಳ್ಳುವುದಕ್ಕೆ ಅರ್ಹತೆಯಿಲ್ಲ.’ಈಶ್ವರನೇ, ಈ ಜಗದ ಸೃಷ್ಟಿಕರ್ತ, ಎಂಬುದು
ನಮ್ಮ ಶಾಸ್ತ್ರಗಳ ತೀರ್ಮಾನ. ಶಾಸ್ತ್ರದಲ್ಲಿ ಹೇಳಲ್ಪಟ್ಟಿರುವ ಸಿದ್ಧಾಂತಗಳು ಪ್ರಪಂಚದ
ವ್ಯವಹಾರಗಳನ್ನು ಅನುಸರಿಸಿವೆಯೇ ಹೊರತು ಅವು ಅದಕ್ಕೆ ವಿರೊಧವಾದುದಲ್ಲ ಎಂದು ಕಾಣಬಹುದು.
ಯಾವುದೇ ಸಂಸ್ಥಾಪನೆಗೆ, ಅದಕ್ಕೆ ’ಸ್ಥಾಪಕ’ರೊಬ್ಬರಿರಬೇಕು. ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಕೆಲವು ’ನಿಯಮಾವಳಿಗಳಿರಬೇಕು.’ ಆ ಸಂಸ್ಥೆಯನ್ನು ನಡೆಸಲು ’ವ್ಯಕ್ತಿಯೊಬ್ಬ’
ನಿರಬೇಕು. ಆಗಲೇ, ಅ ಸಂಸ್ಥೆ ಚೆನ್ನಾಗಿ ನಡೆಯುತ್ತದೆ. ಈ ಉದಾಹರಣೆಯನ್ನು, ನಾವು ನಮ್ಮ
ಪ್ರಪಂಚದ ವ್ಯವಹಾರದಲ್ಲೂ, ಕಾಣಬಹುದು.’ಜಗವನ್ನು ಸೃಷ್ಟಿಸಿ ಅದನ್ನು ನಿರ್ವಹಿಸಲು
ವ್ಯಕ್ತಿಯೊಬ್ಬನ ಅವಶ್ಯವಿದೆ. ಹಾಗೆ ಒಬ್ಬ ವ್ಯಕ್ತಿಯಿದ್ದರೆ ಜಗದ ನಿರ್ವಹಣೆ ಸರಿಯಾಗಿ
ನಡೆಯುತ್ತದೆ. ಮುಂದಿನ ಪ್ರಶ್ನೆ. ’ಈ ಪ್ರಪಂಚದ ಸೃಷ್ಟಿಕರ್ತ ಯಾರು. ನಮ್ಮಂತಹ ಒಬ್ಬ
ವ್ಯಕ್ತಿಯೇ’ ಎಂದರೆ,’ ಇಲ್ಲವೆಂಬುದೇ’, ಉತ್ತರ. ಜಗದ ಸೃಷ್ಟಿಕರ್ತನಿಗೆ ಅದು ಹೇಗೆ ನಡೆ-
ಯುತ್ತದೆ’ ಎಂಬ ಅರಿವೂ, ಇರಬೇಕು.’ಪ್ರಪಂಚದ ಒಂದೊಂದು ವಸ್ತುಗಳು, ಹೇಗಿರುತ್ತವೆ, ಏನು
ಮಾಡುತ್ತವೆ, ಎಂಬ ಅರಿವು ನಮಗಿಲ್ಲ,’ಈಶ್ವರನೊಬ್ಬನೇ, ಅವನೇ ಸರ್ವಜ್ಞ್ಯ,’ ಎಂದು ಶಾಸ್ತ್ರವು
ಒಕ್ಕೊರೊಲಿಂದ ಸಾರುತ್ತವೆ. ಶಾಸ್ತ್ರಗಳಲ್ಲಿ ಹೇಳಿರುವದೆಲ್ಲವನ್ನೂ, ಅರಿತುಕೊಳ್ಳಲು, ನಾವು
ಶಾಸ್ತ್ರದಲ್ಲಿರುವದೆಲ್ಲವನ್ನೂ, ಅಧ್ಯಯನ ಮಾಡಿರಬೇಕು. ಆದರೆ, ಶಾಸ್ತ್ರಗಳೆಲ್ಲವನ್ನೂ,
ನಾವು ಅರಿತಿಹೆವೆಂದು ಹೇಳಲಾಗದು. ಕಾರಣ;
’ಅನಂತ ಶಾಸ್ತ್ರಂ ಬಹು ವೇದಿತವ್ಯಂ’
ಶಾಸ್ತ್ರವನ್ನು ಕಡಲಿಗೆ ಹೋಲಿಸಬಹುದು. ಕಡಲಿನ ಆಳವನ್ನು ಅರಿಯುವುದು ಎಷ್ಟು ಕಠಿನವೋ,
ಅಂತೆಯೇ, ಎಲ್ಲಾ ಶಾಸ್ತ್ರಗಳು ಬಹಲ ವಿಶಾಲವಾಗಿವೆ. ಎಲ್ಲಾ ಶಾಸ್ತ್ರಗಳನ್ನು ತಿಳಿಯುವುದು ಅಸಾಧ್ಯ ಕಾರ್ಯ.ವೇದಗಳೇ ತಮ್ಮ ಮಿತಿಯನ್ನು ಹೇಳಿವೆ.
ಒಬ್ಬ ಮುನಿಗೆ ವೇದಗಳೆಲ್ಲವನ್ನೂ, ಕಲಿಯುವ ಆಸೆಯಾಯಿತು. ಅದಕ್ಕಾಗಿ ಒಂದು ಜನ್ಮವನ್ನೇ ಕಳೆ-
ದರು. ಅದು ನರವೇರದಿದ್ದಾಗ ಮತ್ತೊಂದು ಜನ್ಮವನ್ನು ಪಡೆದರು. ಆ ಜನ್ಮವನ್ನೂ, ವೇದಗಳ
ಅಧ್ಯಯನಕ್ಕಾಗಿಯೇ ವಿನಿಯೋಗಿಸಿದರು. ಮತ್ತೊಂದು ಜನ್ಮವೂ ಅದಕ್ಕ್ಕೇ ವಿನಿಯೋಗವಾಯಿತು. ಆಗ,
ದೇವೇಂದ್ರನು ಬಂದು, ಅವರನ್ನು ’ನಿಮಗೆ ಮತ್ತೊಂದು ಜನ್ಮವಿತ್ತರೆ, ಏನು ಮಾಡುವಿರೆಂದು
ಕೇಳಿದನು. ’ನಿಶ್ಚಯವಾಗಿ ವೇದಾಧ್ಯಯನಕ್ಕೇ ಉಪಯೋಗಿಸುತ್ತೇನೆ;’ಇದು ಮುನಿಯಿಂದ ಬಂದ ಉತ್ತರ.
ಅವರಿಗೆ ದೇವೇಂದ್ರನು ಮೂರು ಬೆಟ್ಟಗಳನ್ನು ತೋರಿಸಿ, ಮೂರು ಹಿಡಿ ಮಣ್ಣನ್ನೂ ತೆಗೆದನು.’ಮುನಿಗಳೇ,
ಇದುವರೆಗೂ ನೀವು ಕಲಿತಿರುವುದು ಮೂರು ಹಿಡಿ ಮಣ್ಣಿನಷ್ಟು. ಕಲಿಯಬೇಕಾದದ್ದು ಮೂರು ಬೆತ್ತ-
ದಷ್ಟು. ’ಇನ್ನೂ ಎಷ್ಟು ಜನ್ಮಗಳನ್ನು ಈ ರೀತಿ ಕಳೆಯುವುರಿ’ ಎಂದು ಮುನಿವರನ್ನು ಕೇಳಿದನು.
ಮುನಿವರರು ಚಿಂತಾಕ್ರಾಂತರಾದರು. ’ವೇದಗಳಿಗೆ ಅಂತ್ಯವಿಲ್ಲ. ಎಲ್ಲವನ್ನೂ ಕಲಿಯುವುದು
ಅಸಾಧ್ಯ. ನಿಮ್ಮ ಆಸೆಯನ್ನು ವರ್ಜಿಸಿರಿ ಎಂದನು.
’ಈಶ್ವರನೊಬ್ಬನೇ ಸರ್ವಜ್ಞ್ಯ. ಮತ್ತೊಬ್ಬ ಸರ್ವಜ್ಞ್ಯನಿಲ್ಲ. ಇಬ್ಬರು ಸರ್ವಜ್ಞ್ಯರಿದ್ದರೆ
ಈಗಿರುವ ನಿಯಂತ್ರಣವಿರುವುದಿಲ್ಲ. ಕಾರಣ, ’ಒಬ್ಬರು ಸೃಷ್ಟಿಸಲು ಬಯಸಿದರೆ ಮತ್ತೊಬ್ಬರು
ಅಳಿಸಲು ಬಯಸಬಹುದು. ಈಶ್ವರನು, ನಮ್ಮಗೆ ನಲ್ಮೆಯನ್ನು ಮಾಡಲು ಬಯಸಿದರೆ, ಮತ್ತೊಬ್ಬ
ಸರ್ವಜ್ಞ್ಯನು ಕೆಟ್ಟದ್ದನ್ನು ಮಾಡಲು ಬಯಸಬಹುದು.ಪರಿಣಾಮ. ಒಬ್ಬನನ್ನು, ಇಬ್ಬರು ಎರಡು
ಕಡೆಯಿಂದ ಕೈ ಹಿಡಿದು ಎಳದರೆ ಅವನ ಗತಿಯೇನಾಗಬಹುದು.’ಈಶ್ವರನೊಬ್ಬನೆ.’. ಅವನ
ಬಗ್ಗೆ, ದೇವಃ ಸರ್ವಭೂತೇಷು ಗೂಡಃ ಸರ್ವ ವ್ಯಾಪಿಃ ಸರ್ವ ಭೂತಾಂತರಾತ್ಮಾ
ಕರ್ಮಾಧ್ಯಕ್ಶಃ ಸರ್ವ ಭೂತಾದಿವಾಸಃ ಸಾಕ್ಷೀ ಚೇತಃ ಕೇವಲೋ ನಿರ್ಗುಣಶ್ಚ
ಇಂತಹ ವರ್ಣನೆ ಶ್ವೇತೋಪನಿಷತ್ತಿನಲ್ಲಿದೆ. ಇದಲ್ಲದೆ, ವೇದಗಳ ಎಲ್ಲಾ ಭಾಗಗಳಲ್ಲಿಯೂ,
’ದೇವನೊಬ್ಬನೇ’ ಎಂದು ಸಾರಲಾಗಿದೆ. ಉದಾಹರಣೆಗೆ, ಋಗ್ವೇದದಲ್ಲಿ,
’ಉಪಾಸಕರು,[ ’ಬ್ರಾಹ್ಮಣರು]ಈ ಚೈತನ್ಯವನ್ನು, ಅಗ್ನಿ, ವಾಯು, ಸೂರ್ಯ, ಎಂಬ ಬೇರೆ ಬೇರೆ
ಹೆಸರಿನಿಂದ ಕರೆಯುವರು. ಆದರೆ, ಆ ಚೈತನ್ಯದಲ್ಲಿ ಸ್ವಲ್ಪವೂ, ಭೇದ ಭಾವಗಳಿಲ್ಲ.
ಈ ವಿಷಯವನ್ನು ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿವೆ.
’ಇದರಿಂದ,” ಈಶ್ವರನೇ, ಜಗದ ಸೃಷ್ಟಿಕರ್ತನೆಂದೂ, ನಮ್ಮಂತಲ್ಲದೆ, ಅವನು ಸರ್ವಜ್ಞ್ಯ-
ನೆಂದೂ,’ ತಿಳಿಯುತ್ತದೆ. ಈಶ್ವರನಿಗೆ, ಜಗದ ಒಂದೊಂದು ಅಣುವಿನ ಬಗ್ಗೆ ಅರಿವಿರುವುದರಿಂದ
ಅವನಿಗೇ, ಜಗವನ್ನು ನಿರ್ಮಿಸುವ ಅರ್ಹತೆಯಿದೆ. ಈಶ್ವರನೇ, ಜಗವನ್ನು ಸೃಷ್ಟಿಸಿ, ಅದನ್ನು
ರಕ್ಶಿಸಲು, ವೇದಗಳನ್ನು ಸೃಷ್ಟಿಸಿ, ಒಂದು ಸಂಸ್ಥೆಯ ನಿರ್ವಹಣೆಗೆ,ನಿಯಮಗಳನ್ನು
ರಚಿಸುವಂತೆ, ಭಗವಂತನೂ, ಜಗದ ನಿರ್ವಹಣೆಗೆ, ವೇದಗಳನ್ನು ಸೃಷ್ಟಿಸಿದನು.
ಯೋ ಬ್ರಹ್ಮಾಣಂ ವಿಧತಾತಿ ಪೂರ್ವಂ ಯೋ ವೈ ವೇದಾಂಶ್ಚ ಬ್ರಹಿಣೋತಿ ತಸ್ಮೈ
’ಬ್ರಹ್ಮನನ್ನು ಸೃಷ್ಟಿಸಿ, ವೇದಗಳನ್ನು ಕಲ್ಪಿಸಿದ ದೇವನೇ, ಭಗವಂತ.ಆತನೇ, ಜಗವನ್ನು ನಿಯಮಾನುಸಾರ ನಡೆಸುತ್ತಾನೆ. ಯಾವಾಗ ಅಸುರರು, ಒಳ್ಳೆಯವರನ್ನು ಹಿಂಸಿಸುವರೋ,
ಆಗ ಭಗವಂತನು ಅವತರಿಸಿ, ಒಳ್ಳೆಯವರನ್ನು ರಕ್ಷಿಸುತ್ತಾನೆ. ಧರ್ಮದ ವೃದ್ಧಿಯನ್ನು,
ಅಧರ್ಮದ ಅಳಿವನ್ನೂ, ಅವನು ಮಾತ್ರ ಮಾಡಲು ಸಾಧ್ಯ. ಆದ್ದರಿಂದಲೇ,, ಎಷ್ಟೇತಿಳಿದವನಾದರೂ, ಭಗವಂತನನ್ನು ನಮಸ್ಕರಿಸುವುದು ಅಗತ್ಯ.;’ಸ ಪೂರ್ವೇಶಾಮಪಿ ಕಾಲೇನವೈಛ್ಛೇತ್ತಾತ್. ’ನಮಗೆ ಒಬ್ಬ ಗುರುವಿದ್ದಾರೆ, ಅವರಿಗೊಬ್ಬ ಗುರುವಿದ್ದರು.. ಎಂದರೆ ನಮಗೆ ಭಗವಂತನೇ ಪ್ರಥಮ ಗುರುವಾಗಿಬಿಡುತ್ತಾನೆ.’
ಏತಕ್ಕೆ.’ಕಾಲೇನನವಚ್ಚೇತಾತ್’-ಕಾರಣ-ಅವನಿಗೆ ಕಾಲದಿಂದ ತಡೆಯಿಲ್ಲ. ಈಶ್ವರನೊಬ್ಬನೇ ನಮ್ಮಿಂದ ಚಿಂತಿಸಲ್ಪಡಬೇಕಾದವನು.
.ಹಣ, ಪದವಿ, ಅಂತಸ್ತು, ಎನೇ ಇದ್ದರೂ, ನಾವು ಈಶ್ವರನನ್ನು ಮರೆಯಕೂಡದು.
ನಮ್ಮ ಅಭಿವೃದ್ಧಿಗೆ ಕಾರಣ ಈಶ್ವರನೇ. ಆದ್ದರಿಂದ, ಈಶ್ವರನ ವಿಷಯದಲ್ಲಿ ನಮಗೆ ಅಸಾಧರಾಣವಾದ
ವಿಶ್ವಾಸವಿರಬೇಕು. ಈ ರೀತಿಯ ವಿಶ್ವಾಸದಿಂದ ನಾವು ಅವನನ್ನು ಪೂಜಿಸಿದರೆ, ನಮಗೆ ಅವನ ಆಶೀರ್ವಾದವು ನಿಶ್ಚಯಾಯಗಿ ದೊರಕುವುದು. ಜ್ಞ್ಯಾನಿಗಳಾಗಿಯೂ, ಶಕ್ತಿಶಾಲಿಗಳಾಗಿಯೂ, ಇದ್ದ ನಮ್ಮ ಹಿರಿಯರು, ಈಶ್ವರನಲ್ಲಿ ಬಹಳ ವಿಶ್ವಾಸವಿದ್ದವರಾಗಿದ್ದರು.
ಶ್ರೀ ಶಂಕರ ಭಗವತ್ಪಾದರು ಅದ್ವೈತ ಸಿದ್ಧಾಂತವನ್ನು ಉಪದೇಶಿಸಿದರು. ಅದ್ವೈತ ತತ್ವದಂತೆ, ಒಂದೇ ಒಂದು ವಸ್ತುವು ನಿಜವಾದದ್ದು.. ಇತರ ವಸ್ತುಗಳು ನೈಜವಾಗಿ ಕಂಡರೂ, ಹಾಗಿಲ್ಲ. ಕೆಲವರಿಗೆ, ಪೂರ್ವ ಜನ್ಮದ ಸಂಸ್ಕಾರದಿಂದ, ಸದ್ಗುರುವಿನ ಕೃಪೆಯಿಂದ, ಬ್ರಹ್ಮ ಙ್ಯಾನವು ದೊರಕಿಬಿಡುತ್ತದೆ.
ಅಂತಹವರಿಗೆ ಮಾತ್ರ, ಈ ವಿಶ್ವವು ಮಾಯೆ. ನಮಗಲ್ಲ. ’ನಾವು ಎಲ್ಲವೂ ಸುಳ್ಳೆಂದು’ ”ಹೇಳಿಬಿದಬಹುದು. ಆದರೆ, ಹಸಿವಾದಾಗ,’ ಊಟವನ್ನು ಸುಳ್ಳೆಂದು ಹೇಳಿದರೆ, ಸುಳ್ಳಾಗಿಬಿಡುವು-
ದಿಲ್ಲ.. ನಮಗೆ ನಿಶ್ಚಯವಾಗಿ ಊಟ ಬೇಕಲ್ಲವೇ. ಆದ್ದರಿಂದ,
ಭಗವಂತನನ್ನು ನಾವು ಅರಿಯದಿದ್ದರೆ, ನಾವು ಜಗದ ಮತ್ತವರ ಗುಂಪಿಗೆ ಸೇರುವೆವು.ನಮಗೆ
ಸಂಭಂಧಿಸಿದಂತೆ,, ಪುಜೆ, ಪೂಜಿಸುವವನು, ಪೂಜಿಸಲ್ಪಡುವನು ಬೇರೆ-ಬೇರೆಯಾಗಿ ಕಾಣುತ್ತಾರೆ. ಈ
ಬೇಧ-ಭಾವಗಳಿರುವವರೆಗೂ,ನಾವು ಈಶ್ವರನನ್ನು ಅರಾಧಿಸುತ್ತಿರಬೇಕೆಂದು ಶ್ರೀ ಭಗವತ್ಪಾದರು ನುಡಿಯುತ್ತಾರೆ. ಇದನ್ನು ಮನಸಿನಲ್ಲಿಟ್ಟುಕೊಂಡೇ ಅವರು ಕೆಲವು ಭಗವತ್ -ಸ್ತೊತ್ರಗಳನ್ನು ನಮ್ಮ ನಲ್ಮೆಗಾಗಿಯೇ ರಚಿಸಿದರು. ಅವುಗಳನ್ನು ಅಧ್ಯಯನ ಮಾಡಿದರೆ
ನಾವು ಭಗವದ್ವಿಷಯದಲ್ಲಿ ಹೇಗೆ ಭಕ್ತಿಯಿಂದಿರಬೇಕೆಂದು ತಿಳಿಯುತ್ತದೆ.
ಆದ್ದರಿಂದ, ನಮ್ಮ ಪರಂಪರೆಯ ಮುಖ್ಯ ಅಡಿಗಲ್ಲು ಈಶ್ವರನೇ ಆಗುತ್ತದೆ. ಈಶ್ವರನಲ್ಲಿ
ಭಕ್ತಿಯನ್ನೂ, ಶ್ರದ್ಧೆಯನ್ನೂ ಇಟ್ಟರೆ ಎಂತಹ ಸಂಧರ್ಭದಲ್ಲಿಯೂ, ನಮಗೆ ಮನಶ್ಯಾಂತಿ ಲಭಿಸುತ್ತದೆ. ನಮಗೆ ಎಂತಹ ಕಷ್ಟಗಳಿದ್ದರೂ. ಚಿಂತೆಗಳಿದ್ದರೂ,ದೇಗುಲದಲ್ಲಿ,, ಭಗವತ್ಸನ್ನಿಧಿಯಲ್ಲಿ ಹತ್ತು ನಿಮಿಷ ಕುಳಿತರೆ, ನಮ್ಮ ಮನ ಶಾಂತವಾಗಿ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕುವುದು. ಅಭ್ಯಾಸದ ಮೂಲಕ ಕೆಲವು ಸಜ್ಜನರು ಇಂತಹ
ಅನುಭವಗಳನ್ನು ಹೊಂದಿದ್ದಾರೆ.’ ದೇವರ ಸನ್ನಿಧಿಯಲ್ಲಿ ಹತ್ತು ನಿಮಿಷ ಕುಳಿತಿದ್ದೆ. ನನ್ನ ಮನ.ಪ್ರಸನ್ನವಾಯಿತೆಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ಈಶ್ವರ ನಂಬಿಕೆಯು ನಮಗೆ ಎಲ್ಲಾ ಕಾಲಗಳಲ್ಲಿಯೂ, ಎಲ್ಲಾ ಸ್ಥಿತಿಗಳಲ್ಲಿಯೂ ಒಳ್ಳೆಯದನ್ನೇ ತರುತ್ತದೆ.. ಆದ್ದರಿಂದ ದೈವ ನಂಬಿಕೆ ಬಹಳ ಅವಶ್ಯ.
ಮುಂದಿನದು, ನಮ್ಮ ಧರ್ಮವನ್ನು ಸದಾ ಅನುಷ್ಠಾನ ಮಾಡಬೇಕು. ಸದಾ ಸತ್ಯವನ್ನೇ ನುಡಿಯಬೇಕು. ಮಾತಾ-ಪಿತರ ವಾಕ್ಯದಂತೆ ನಡೆಯಬೇಕು.. ಉಪನಯನವಾದವನು ದಿನವೂ ಸಂಧ್ಯಾವಂದನೆಯನ್ನು ಮಾಡಬೇಕು.
ಗೃಹಸ್ತನು ಅಗ್ನಿಹೋತ್ರ ಮಾಡಬೇಕು. ಯತಿಯು ಪ್ರಣವ ಉಪಾಸನೆ ಮಾಡಬೇಕು.ಬ್ರಹ್ಮಚಾರಿ ವೇದವನ್ನು ಕಲಿಯಬೇಕು.
ಗೃಹಸ್ತನು ಪಂಚಮಹಾಯಜ್ಞ್ಯಗಳನ್ನು ಮಾಡಬೇಕು. ಇವೆಲ್ಲವೂ ಧರ್ಮವೆನಿಸುವುದು. ಇವು
ನಮ್ಮ ಶ್ರೇಯಸ್ಸಿಗಾಗಿ ಶಾಸ್ತ್ರಗಳಿಂದ ಉಪದೇಶಿಸಲ್ಪಟ್ಟಿವೆ. ಶಾಸ್ತ್ರಗಳು ನಮಗೆ ಶ್ರೇಯಸ್ಸಿನ ಪಥವನ್ನು ತೋರುತ್ತವೆ.
ಅದನ್ನು ಪಾಲಿಸಿದರೂ, ಪಾಲಿಸದಿದ್ದರೂ, ಶಾಸ್ತ್ರಗಳಿಗೆ ನಷ್ಟವೇನೂ ಇಲ್ಲ. ಸರಿಯಾದ ಮರ್ಗದಲ್ಲಿ ನಡೆದರೆ ಶ್ರೇಯಸ್ಸನ್ನು ಪಡೆಯಬಹುದು..ಇಲ್ಲದಿದ್ದರೆ ದುಃಖವೇ. ಆದರೆ, ಕೆಲವರಿಗೆ, ಶಾಸ್ತ್ರ ಹೇಲುವ ವಿಷಯಗಳಲ್ಲಿ ನಂಬಿಕೆಯೇ ಇಲ್ಲ..
’ಜ್ಯೋತಿಷ್ಠ ಹೋಮ ಮಾದಿದರೆ ಸ್ವರ್ಗ ದೊರಕುವುದೆನ್ನುತ್ತದೆ ಶಾಸ್ತ್ರ. ಸಂಧ್ಯಾವಂದನೆ ಮಾಡಿದರೆ ಪಾಪದಿಂದ ಬಿಡುಗಡೆ ದೊರಕುತ್ತದೆ.. ಮಾಡದಿದ್ದರೆ, ಪಾಪ ದೊರಕುತ್ತದೆ. ನಮಗೆ ಪಾಪವು ಬೇದ ಎನ್ನುತ್ತೇವೆ. ಕಾರಣ ,
ಪಾಪಗಳಿಂದ ಬರುವ ದುಃಖಗಳನ್ನು ತಪ್ಪಿಸಲು ಆಶಿಸುತ್ತೇವೆ. ಆದ್ದರಿಂದ, ಪಾಪನಿವಾರಣೆಗೆ ನಾವು ಸಂಧ್ಯಾವಂದನೆಯನ್ನು ಕ್ರಮವಾಗಿ ಮಾಡಬೇಕು.
.
ಕೆಲವರಿಗೆ ಸಂದೇಹ. ’ಸಂಧ್ಯಾವಂದನೆಯನ್ನು ಮಾಡಿದರೆ ಪಾಪನಿವೃತ್ತಿಯಾಗುವುದೆಂದು ಹೇಗೆ ಹೇಳುವಿರಿ.’
ಸಂಧ್ಯಾವಂದನೆ ಮಾಡದಿದ್ದರೆ, ಪಾಪವು ಬರುವುದಿಲ್ಲ, ಎಂದು ಕೂಡ ಹೇಳಬಹುದಲ್ಲಾ, ಎಂದರೆ,
ಸಂಧ್ಯಾವಂದನೆಯನ್ನು ಏಕೆ ಮಾಡಬೇಕು ಎಂದು ಶಾಸ್ತ್ರವೇ ತಿಳಿಸಿಬಿತ್ತಿದೆ.
ಸಂಧಿಗ್ದೇಪಿ ಪರೇಲೋಕೇ ಕರ್ತವ್ಯೋ ಧರ್ಮ ಏವಹಿ ನಾಸ್ತಿ ಶೇನ್ನಾಸ್ತಿ ನೋ ಹಾನಿರಸ್ತಿ ಶೇನ್ನಾಸ್ತಿಕೋ ಹತಃ
ಹೇಗೆ. ಇಬ್ಬರು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಪಯಣಿಸುತ್ತಿದ್ದರು. ದಾರಿಯಲ್ಲಿ ಅವರು ಒಂದು ಸರ್ಪದ
ಸರ್ಪದ ಹುತ್ತವನ್ನು ಕಂದರು. ’ಇದರಲ್ಲಿ ಹಾವಿದೆಯೇ’, ಎಂಬ ಸಂದೇಹವು ಇಬ್ಬರಿಗೂ ಬಂದಿತು. ಒಬ್ಬನು ’ಹುತ್ತದಲ್ಲಿ ಹಾವಿದೆ’ಎಂದನು ಮತ್ತೊಬ್ಬನು ’ಇಲ್ಲವೆಂದ’. ಹೀಗೆ ಇಬ್ಬರಿಗೂ, ಸಂದೇಹವಿರುವಾಗ, ಹುತ್ತದತ್ತ ತೆರಳುವುದನ್ನು ತಡೆಯುವುದುತಾನೆ ಬುದ್ಧಿವಂತಿಕೆ.. ಒಬ್ಬನು ’ಇಲ್ಲಿ ಹಾವಿದೆಯೋ ಇಲ್ಲವೋ’, ಪ್ರಶ್ನೆಯಲ್ಲ. ಅದನ್ನು ಬಿಟ್ಟು ಬಳಸಿ ಹೋಗುವುದೇ ಒಳ್ಳೆಯದು’ಎಂದನು.. ಮತ್ತೊಬ್ಬನು, ’ಅದರಲ್ಲಿ ಹಾವಿಲ್ಲವೆಂದು ಹೇಳುತ್ತಾ’, ಅದರ ಮೇಲೆ ಕಾಲಿಟ್ಟೇ, ನಡೆದನು. ಅಲ್ಲಿದ್ದ ಹಾವು ಅವನನ್ನು ಕಚ್ಚಿಬಿಟ್ಟಿತು.. ’ಹಾವಿದೆಯೇ ಎಂಬ ಸಂದೇಹವಿರಲು, ಹುತ್ತವನ್ನು ತುಳಿಯದೇ ಇದ್ದಿದ್ದರೆ ಯಾವ ಆಪತ್ತೂ ಇರುತ್ತಿ-
ರಲಿಲ್ಲ.
ಅಂತೆಯೇ, ಸಂಧ್ಯಾವಂಧನೆಯನ್ನು ಮಾಡದಿದ್ದರೆ, ಪಾಪವು ಬರುತ್ತದೆಯೇ ಎಂಬ ಸಂದೇಹವಿದ್ದರೂ, ಅದನ್ನು
ಮಾಡಿಬಿಡುವುದೇ ಒಳ್ಳೆಯದು. ಆದ್ದರಿಂದ, ಪುಣ್ಯಾರ್ಜನೆಗೆ, ಪಾಪ ವಿನಾಶಕ್ಕೆ, ಸಂಧ್ಯಾವಂದನೆಯನ್ನು ಮಾಡಲೇ-
ಬೇಕು.’ಸಂಧ್ಯಾವಂದನೆಯನ್ನು ಮಾಡಿದರೂ, ಮಾಡದಿದ್ದರೂ, ಪಾಪ ಬರುವುದಿಲ್ಲಾ, ಎಂದುಕೊಂಉ
ಸಂಧ್ಯಾವಂಧನೆಯನ್ನು ಮಾಡದಿದ್ದರೆ, ಅವನ ಸ್ಥಿತಿ, ’ಹುತ್ತದಲ್ಲಿ ಹಾವಿಲ್ಲವೆಂದುಕೊಂಡು, ಅದರ ಮೇಲೆ ನಡೆದು ಹೋದವನ ಸ್ಥಿತಿಯೇ ಆಗುತ್ತದೆ.. ಅವನಿಗೆ ಪಾಪವು ಬರುವುದು. , ಅವನ್ನು ಪಾಲಿಸುವುದರ ಅವಶ್ಯಕತೆಯ ಬಗ್ಗೆ ಸಂದೇಹಕ್ಕೆಡೆಯೇ ಇಲ್ಲ. ಸಂದೇಹವಿದ್ದರೂ ಧರ್ಮವನ್ನು ಪಾಲಿಸಲೇಬೇಕು. ಆಗ, ನಿರೀಕ್ಷಿಸಿದ ಫಲವು ದೊರಕಿದರೂ, ದೊರಕದಿದ್ದರೂ. ನಾವು ಸುಖವಾಗಿರಬಹುದು. ಹೀಗೆ ಶಾಸ್ತ್ರಗಳು ನಮಗೆ ಭೋದಿಸುತ್ತವೆ.
’ಧರ್ಮ ಪಾಲನೆ ನಮ್ಮೆಲ್ಲರಿಗೂ ಅವಶ್ಯ. ಅಂತೆಯೇ, ನಮ್ಮ ಭಾರತದ ಎರಡು ಅಡಿಪಾಯಗಳಾದ ದೈವ ನಂಬಿಕೆ,ಮತ್ತು ಧರ್ಮಪಾಲನೆಯಾಗುತ್ತದೆ.. ನಾವು ಇದನ್ನನುಸರಿಸಿದರೆ, ಅತ್ಯುತ್ತಮರಾಗಿಬಿಡುತ್ತೇವೆ. ಪಾಲಿಸದಿದ್ದರೆ, ಮೃಗಳಾಗಿಬಿಡುತ್ತೇವೆ.. ನಾವು ಮೃಗಗಳ ಮಟ್ಟಕ್ಕಿಳಿಯಬಾರದು. ಹಲವು ಲಕ್ಷೋಪಲಕ್ಷ ಜನ್ಮಗಳಿಂದ ಅಪೂರ್ಚವಾದ ಮಾನವ ಜನ್ಮ ದೊರೆತಿದೆ. ಪ್ರಾಣಿಗಳಿಗೆ, ಹಿಂದಿನ ಕರ್ಮಗಳ ಫಲವನ್ನನುಭವಿಸುವ ಅರ್ಹತೆಯಿದೆ.. ಆದರೆ, ಮನುಷ್ಯನಿಗೆ, ಹಿಂದಿನ ಜನ್ಮದ ಕರ್ಮ ಫಲಗಳ ಜೊತೆಗೆ ಹೊಸ ಕರ್ತವ್ಯಗಳನ್ನು ಮಾಡಲೂಅರ್ಹತೆಯಿದೆ.. ಆದ್ದರಿಂದ ಮಾನವ ಜನ್ಮವೆನ್ನುವುದು ಬಹಳ ದುರ್ಲಭವಾದದ್ದು. ಆದ್ದರಿಂದ, ಮಾನವಜನ್ಮವನ್ನು ಪಡೆದು, ಈ ಅದ್ಭುತವಾದ ನಾಡಿನಲ್ಲಿ ಜನಿಸಿದ ’ಈಶ್ವರನ ಭಕ್ತಿಯನ್ನು ಹೊಂದಿ, ಧರ್ಮ ಪರಿಪಾಲನೆಯನ್ನು ಮಾಡುತ್ತಾ ಬರಬೇಕು.. ಇಲ್ಲದಿದ್ದರೆ, ನಾವು ಮಹಾ ಅಪರಾಧವೆನ್ನು ಎಸಗಿದವರಾಗಿಬಿಡುತ್ತೇವೆ.
ಹಾಗೆ ಮಾಡದೆ, ಮೇಲೆ ಹೇಳಿದ ’ಈಶ್ವರ ಭಕ್ತಿ, ಧರ್ಮಾಚರಣೆ, ಎರಡೂ ಪರಿಪಾಲಿಸಿಕೊಂಡು ಬರಬೇಕು.
========================
ಅಧ್ಯಾಯ.-೧೭.
===========
ಭಕ್ತನಿಗೆ ಇರಬೇಕಾದ ಗುಣಗಳು
--------------------------------------
ಭಗವದ್ಗೀತೆಯು ನಾವೆಲ್ಲರೂ ಅಧಿಕವಾಗಿ ಗೌರವಿಸುವ ಗ್ರಂಥ. ಕಾರಣ, ಆ ಕೃತಿಯನ್ನು ಶ್ರೀ ಕೃಷ್ಣನೇ ಜಗತ್ತಿಗೆ ಅನುಗ್ರಹಿಸಿದನು.
.
ಗೀತಾ ಸುಗೀತಾ ಕರ್ತವ್ಯಃ ಕಿ ಮನ್ಯಂ ಶಾಸ್ತ್ರ ವಿಸ್ತರೈಃ ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾತ್ ವಿನಿಸೃತಾ- ಎಂದು ಗೀತೆಯ ಹಿರಿಮೆಯಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿಯು ಭಗವಂತನಿತ್ತ ಈ ಕೃತಿಯನ್ನು ಚೆನ್ನಾಗಿ ಓದಿದರೇ ಸಾಕು. ಬೇರೆ ಪುಸ್ತಕಗಳನ್ನೋದಿದರೆ ಫಲವೇನು. ಗೀತೆಯಲ್ಲಿ ಶ್ರೀ ಹರಿಯು ಜನಗಳಿಗೆ ಹಲವು ಉಪದೇಶಗಳನ್ನು ಮಾಡಿದನು. ಅದರಲ್ಲಿ ಒಂದು ಉಪದೇಶವನ್ನಾದರೂ ಬಾಳಿನಲ್ಲಿ ಅನುಷ್ಠಾನಕ್ಕೆ ತಂದರೆ ಬಹಳ ಒಳ್ಳೆಯ ಫಲವನ್ನು ತರುತ್ತದೆ,. ಎಲ್ಲರೂ ದಿನವೂ ಮಾಡಲೇಬೇಕಾದ ಅನುಷ್ಠಾನಗಳ ಬಗ್ಗೆ ಶ್ರೀ ಶಂಕರಭಗವತ್ಪಾದರು, ’ಗೇಯಂ ಗೀತಾ ನಾಮ ಸಹಸ್ರಂ’ ಎಂದರೆ.’ ದಿನವೂ ಭಗವತ್-ಗೀತೆಯನ್ನು ಅಧ್ಯಯನ ಮಾಡಿ, ಶ್ರೀ ವಿಷ್ಣುವಿನ ಸಹಸ್ರ ನಾಮಗಳನ್ನು ಜಪಿಸಿ’ ಎಂದರು.
ಎಷ್ಟೊ ಜನಗಳಿಗೆ ಗೀತೆಯ ಶ್ಲೋಕಗಳ ಅರ್ಥದರಿವಿಲ್ಲ.
ದಿನವೂ ಗೀತೆಯನ್ನು ಓದಿಕೊಂಡು ಬಂದರೆ, ಅದರರ್ಥ ತಿಳಿಯುವ ಹಂಬಲ ಮೂಡುವುದು.ಶ್ಲೋಕಗಳ ಅರ್ಥವನ್ನು ತಿಳಿದುಕೊಂದರೆ,ಬಹಳ ಸಂತೋಷವಾಗುತ್ತದೆ. ಭಕ್ತನಿಗಿರಬೇಕಾದ ಇರಬೇಕಾದ ಗುಣಗಳ ಬಗ್ಗೆ, ಸ್ವಾಮಿಯು, ಒಂದು ಅಧ್ಯಾಯದಲ್ಲಿ,
ಅನ್ವೇಷ್ಠಾಃ ಸರ್ವಭೂತಾನಾಂ ಮೈತ್ರಃ ಕರುಣ ಏವಚ ನಿರ್ಮಮೋ ನಿರಹಂಕಾರಃ ಸಮ ದುಃಖಸುಖಃ ಕ್ಷಮಿ
ಸಂತುಷ್ಠಃ ಸತತಂ ಯೋಗೀ ಯದಾತ್ಮಾ ದೃಢನಿಶ್ಚಯಃ ಮಯ್ಯರ್ಪಿತಮನೋಬುದ್ಧಿರ್ ಯೋಮದ್ ಭಕ್ತಃ ಸಮೇಪ್ರಿಯಃ ಎಂದು ವಿವರಿಸುತ್ತಾನೆ.. ಭಕ್ತರಿಗಿರಬೇಕಾದ ಲಕ್ಷಣಗಳಲ್ಲಿ ಮೊದಲನೆಯದು;
ಅನ್ವೇಷ್ಠಾಃ ಸರ್ವಭೂತಾನಾಂ-’ನಮ್ಮ ಬಾಳು ಪುನೀತವಾಗಬೇಕು. ನಾವೂ ಭಗವತ್ಭಕ್ತರಾಗಬೇಕು, ಎಂಬ ಆಸೆ ಬರುವವರೆಲ್ಲರಿಗೂ, ಇರಬೇಕಾದ ಮೊದಲ ಅರ್ಹತೆ;’ದ್ವೇಷರಹಿತಃ’ ಎಂಬುದು. ಇನ್ನೊಬ್ಬನನ್ನು ದ್ವೇಷಿಸಿ, ನಮಗೇನಾಗಬೇಕಿದೆ.. ದುಷ್ಟರನ್ನೂ ಕೂಡ ದ್ವೇಷದಿಂದ ನೋಡಬೇಕೆಂದಿಲ್ಲ.. ಅವರಿಂದ ದೂರವಿದ್ದರೆ ಸಾಕು.
ರಾಗ-ದ್ವೇಷಗಳಿಂದ ಜನಗಳು ತಮ್ಮ ಮನನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಕೆಲವರ ವಿಷಯದಲ್ಲಿ, ಅವರು ಅಯೋಗ್ಯರಾಗಿದ್ದರು,, ಅವರು ಬಂಧುವಾಗಿದ್ದರೆ, ಅವರ ಮೇಲೆ ಪ್ರಿತಿಯಿಟ್ಟಿರುತ್ತಾರೆ. ಅದೇ ರೀತಿ, ಬೇರೆಯವರಾದರೆ,ಅವರು ಒಳ್ಳೆಯವರಾದರೂ, ಅವರನ್ನು
ದ್ವೇಷಿಸುತ್ತಾರೆ. ಇಷ್ಟ-ಅನಿಷ್ಟಗಳಿಂದಲೇ, ನಮ್ಮ ಬಾಳಿನಲ್ಲಿ ಕಷ್ಟಗಳು ಬರುತ್ತವೆ. ರಾಗ-ದ್ವೇಷಗಳನ್ನು ವರ್ಜಿಸಿದರೆ ನಮಗೆ ಕಷ್ಟಗಳು ಬರುವುದಿಲ್ಲ.ಎಂತಲೇ, ಭಗವಂತನು ನಾವು ಯಾರನ್ನೂ, ದ್ವೇಷಿಸಕೂಡದೆಂದು ಅಪ್ಪಣೆಯನ್ನಿತ್ತಿದ್ದಾನೆ. ಹಾಗಾದರೆ, ನಾವು ಹೇಗೆ ನಡೆದುಕೊಳ್ಳಬೇಕು.
’ಮೈತ್ರಃ-ಎಲ್ಲರೊಂದಿಗೂ ಸ್ನೇಹದೊಂದಿರಬೇಕು.
ಶ್ರೀ ಭಗವತ್ಪಾದರು ಒಂದು ಕಡೆ;’ತ್ವಯಿಮಯಿಶಾನ್ಯತ್ರೇಕೋ ವಿಷ್ಣುಃ ವ್ಯರ್ಥಂ ಕುಪ್ಯಸಿ ಮೈಯ್ಯಸವಿಷ್ಣುಃ”
’ಒಂದೇ ಚೈತನ್ಯವು, ನನ್ನಲ್ಲೂ, ನಿನ್ನಲ್ಲೂ, ಎಲ್ಲೆಲ್ಲಿಯೂ ಇರುವಾಗ, ನನ್ನ ಮೇಲೆ, ಏತಕ್ಕೆ ಕೋಪಿಸಿಕೊಳ್ಳುತ್ತೀಯೆ’-ಎಂದು ಶ್ಲೋಕವೊಂದರಲ್ಲಿ ಹೇಳಿದ್ದಾರೆ. ಆದ್ದರಿಂದ, ನಾವೆಲ್ಲರೂ, ಎಲ್ಲರೊಡನೆಯೂ, ಪ್ರಿತಿಯಿಂದ ನಡೆದುಕೊಳ್ಳಬೇಕು.
ಅದೂ ಅಲ್ಲದೆ,’ಕರುಣ ಏವಚ’-ನಾವು ಎಲ್ಲರೊಡೆನೆಯೂ, ಕರುಣೆಯಿಂದಲೂ ಇರಬೇಕು. ’ಮತ್ತೊಬ್ಬರ ಕಷ್ಟಗಳನ್ನು ಹೋಗಲಾಡಿಸುವ ಕ್ರಿಯೆಗೆ ’ದಯೆ’ ಎನ್ನುವರು.
ನಮ್ಮ ಕಣ್ಣು ಮುಂದೆ ಎಷ್ಟೋ ಜನರು ಕಷ್ಟಗಳನ್ನನುಭವಿಸುತ್ತಿದ್ದಾರೆ.ಅವರ ಕಷ್ಟಗಳನ್ನು ಪರಿಹರಿಸುವ ಶಕ್ತಿಯಿದ್ದರೆ ನಾವು ಅವರ ಕಷ್ಟವನ್ನು ನೀಗಿಸಬೇಕು. ಅದು ಬಿಟ್ಟು, ನಾವು ಸ್ವಾರ್ಥಿಗಳಾದರೆ, ಅದರಿಂದ ಜಗತ್ತಿಗೆ, ನಮ್ಮಿಂದೇನು ಫಲ. ಪರೋಪಕಾರಮಾಡುವವನಿಗಿಂತಲೂ,ಪ್ರಾಣಿಗಳೆಷ್ಟೋ ಮೇಲೆಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.. ಪ್ರಾಣಿಗಳಿಂದ ನಮಗೆಷ್ಟೋ ಉಪಕಾರವಾ- ಗುತ್ತದೆ.
ಅವು ಸತ್ತಮೇಲೆ, ಅವುಗಳ ಚರ್ಮಗಳು ನಮಗೆ ಉಪಯೋಗವಾಗುತ್ತವೆ. ಮನುಷ್ಯರು ಸತ್ತರೆ ಅವರ ಚರ್ಮಗಳು ನಿರುಪಯೋಗವಗುತ್ತವೆ. ಎಂತಲೇ, ನಮ್ಮ ಜೀವನ ಸಾರ್ಥಕವಾಗಲು ನಾವು ಮತ್ತವರಿಗೆ, ದಯೆ ತೋರಬೇಕು.
.
ನಿರ್ಮಮೋ ನಿರಹಂಕಾರಃ;ಮನುಷ್ಯನಿಗೆ,’ ತಾನೊಂದು ಕಿರಿಯ ಕಾರ್ಯವನ್ನು ಮಾಡಿದರೂ, ’ನಾನೇ ಮಾಡಿದೆ’ ಎಂಬ ’ಅಹಂ’ ಬಂದುಬಿಡುವುದು.’. ಅದು ಹಲವು ತಪ್ಪುಗಳಿಗೆ ಕಾರಣವಾಗುತ್ತದೆ..’ನಾನು ತಪ್ಪನ್ನು ಮಾಡಿದರೆ,ನನ್ನಾರು ಕೇಳುತ್ತಾರೆ..ನಾನು ಸರ್ವಙ್ಯ. ’ನನಗಿಷ್ಟ ಬಂದದ್ದನ್ನು ನಾನು ಮಾಡುತ್ತೇನೆ,’ ಎಂಬ ಮನೋಭಾವನೆಯನ್ನು ಅಹಂಕಾರವು ಬೆಳೆಸುವುದು.
ಎಲ್ಲಾ ಕೆಟ್ಟ ಘಟನೆಗಳು ಇಂತಹ ಮನೋಭಾವನೆಗೆ ಕಾರಣವಾಗುತ್ತದೆ. ;
’ನಾನು ’ಅರಿತವನು ’ ಎನ್ನುವ ಬದಲು, ಎಷ್ಟೋ ಜನರು ಅಧಿಕವಾಗಿ ಅರಿತಿದ್ದಾರೆ’. ’ನಾನು ಶಕ್ತಿಶಾಲಿ ಎನ್ನುವದಕ್ಕಿಂತ, ನನಗಿಂತ ಶಕ್ತಿಶಾಲಿಗಳಿದ್ದಾರೀಂಬ ಸತ್ಯವು, ಅಹಂಕಾರಿಗಳಾದವರಿಗೆ
ತಿಳಿಯುವುದಿಲ್ಲ. ಅಲ್ಲದೆ, ಅವರು ತಾವು ಮಾಡುವ ದುಷ್ಕರ್ಮಗಳನ್ನು ಯಾರೂ ನೋಡುವುದಿಲ್ಲ ಎಂದು ಭಾವಿಸುತ್ತಾರೆ.ಹಾಗೆ ಭಾವಿಸುವುದು ತಪ್ಪು.
ಅದಕ್ಕೊಂದು ಕಥೆ ಹೇಳುತ್ತಾರೆ.
ಒಬ್ಬ ಗುರುವಿನ ಬಳಿ ಕೆಲವು ಶಿಷ್ಯರು ವಿದ್ಯೆಯನ್ನು ಕಲಿಯಲು ತೆರಳಿದರು. ಗುರುಗಳು ಶಾಸ್ತ್ರವನ್ನೆಲ್ಲಾ ಕಲಿಸಿಕೊಟ್ಟರು.. ಆಶ್ರಮವನ್ನು ಬಿಡುವ ಸಮಯ ಬಂದಿತು.ಆಗ ಗುರುಗಳು ಎಲ್ಲರಿಗೂ, ಪರೀಕ್ಷೆಯೊಂದನ್ನು ಇಟ್ಟರು.
ಎಲ್ಲರಿಗೂ, ಬಾಳೆಯ ಹಣ್ಣೊಂದನ್ನಿತ್ತು,’ಯಾರೂ, ನೋಡದ ಸ್ಠಳದಲ್ಲಿ ತಿಂದು ಬನ್ನಿರೆಂದರು. ’ಒಬ್ಬನನ್ನು ಬಿಟ್ಟು ಮಿಕ್ಕವರೆಲ್ಲರೂ ಬಾಳೆಯ ಹಣ್ಣನ್ನು ತಿಂದು ಬಂದರು. ಶಿಷ್ಯರೆಲ್ಲರನ್ನೂ, ಗುರುಗಳು ಕೇಳಲು, ಒಬ್ಬನು” ನಾನು ಕೊಠಡಿಯಲ್ಲಿ ಕದವನ್ನು ಹಾಕಿಕೊಂಡು, ಯಾರೂ ಕಾಣದಂತೆ ತಿಂದೆನು,ಎಂದನು.. ಎರಡನೆಯವನು,’ ನಾನು ಹಾಸಿಗೆಯಲ್ಲಿ ಮುಸುಕು ಹಾಕಿಕೊಂಡು, ಯಾರೂ ಕಾಣದಂತೆ ತಿಂದೆ ಎಂದನು’.. ಮತ್ತೊಬ್ಬ್ಬನು, ಜಲದಲ್ಲಿ ಮುಳುಗಿ ಹಣ್ಣನ್ನು ತಿಂದೆನೆಂದನು.
ಕಡೆಗೆ, ಹಣ್ಣನ್ನು ತಿನ್ನದ ಶಿಷ್ಯನ ಬಳಿ, ’ನೀನೇಕೆ ತಿನ್ನಲಿಲ್ಲವೆಂದು’ ಗುರುಗಳು,ಕೇಳಲು, ಶಿಷ್ಯನು ಯಾರೂ ನೋಡದ ಸ್ಠಳದಲ್ಲಿ ಹಣ್ಣನ್ನು ತಿನ್ನಬೇಕೆಂದಿರಿ’.’ ನನಗೆ ಅಂತಹ ಸ್ಠ್ಳ.ಸಿಕ್ಕಲಿಲ್ಲವೆಂದನು.’. ಮತ್ತವರು ಹೇಗೆ ಸ್ಠಳವು ಸಿಕ್ಕಿ, ತಿಂದರೆಂದು ಕೇಳಲು, ’ಯಾರೂ ನೋಡದ ಸ್ಥಳ ಅವರಿಗೆ ಹೇಗೆ ಸಿಕ್ಕಿತೋ, ಗೊತ್ತಿಲ್ಲ.
ನನಗೆ ತಿಳಿದ ಮಟ್ಟಿಗೆ,’ ದೇವನು ಎಲ್ಲೆಲ್ಲಿಯೂ, ಇರುವನೆಂಬ ನಿಮ್ಮ ಉಪದೇಶವನ್ನು
ಗ್ಯಾಪಿಸಿಕೊಂಡೆ.’ ಮನುಷ್ಯರು ನೋಡದ ಜಾಗದಲ್ಲಿ ಎಂದಿದ್ದರೆ, ನಾನು ತಿನ್ನುತ್ತಿದ್ದೆ, ನೀವು’ ದೇವರು ನೋಡದಸ್ಥಳವೆಂದಿರಲ್ಲಾ ಎಂದನು.’
’ಭಗವಂತನಿಂದ ನೋಡಲ್ಪಡದ ವಸ್ತುವು ಯಾವುದೆಂದು ನನಗೆ ಗೊತ್ತಿಲ್ಲ. ಆದ್ದರಿಂದಲೇ, ಬಾಳೆಯಹಣ್ಣಿನ ಸಮೇತ ತಿರುಗಿ ಬಂದುಬಿಟ್ಟೆ’ ಎಂದನು. ಬಹಳ ಹರ್ಷಗೊಂಡ ಗುರು, ಆ ಶಿಷ್ಯನನ್ನು ಕಂಡು , ’ನಾನು ಇದುವರೆಗೆ, ಹೇಳಿಕೊಟ್ಟ ಪಾಠಗಳನ್ನೆಲ್ಲಾ, ನೀನೊಬ್ಬನೇ ಚೆನ್ನಾಗಿ,ತಿಳಿದಿದೆ’, ಎಂದರು. ನಾವೂ ನಮ್ಮ ತಪ್ಪಾದ ಕಾರ್ಯಗ್ಳನ್ನು ಯಾರೂ ನೋಡುವುದಿಲ್ಲ ಎಂದುಕೊಂದಿದ್ದೇವೆ.
ಅದಿತ್ಯಚಂದ್ರಾವನಲೋನಿಲಶ್ಚ ದ್ಯೌ ಭೂಮಿರಾಪೋ ಹೃದಯಂ ಯಮಶ್ಚ ಅಹಶ್ಚ ರಾತ್ರಿಶ್ಚ ಉಪೇಚ ಸಂಧ್ಯೇ ಧರ್ಮಸ್ಯ ಆನಾತಿ ನರಸ್ಯ ವೃತ್ತಂ
ಎಂದು ಶಾಸ್ತ್ರಗಳು ಹೇಳುತ್ತವೆ. ನಾವು ಮಾಡುವ ಕಾರ್ಯಗಳನ್ನು, ಪಂಚಮಹಾಭೂತಗಳಾದ, ಪೃಥ್ವಿ, ತೇಜಸ್,ಜಲ, ಆಕಾಶ, ವಾಯು,,ಸೂರ್ಯ ಚಂದ್ರರು, ಸಂಧ್ಯಾ ಕಾಲ, ಮನುಷ್ಯನಲ್ಲಿರುವ ಅಂತರ್ಯಾಮಿಯಾದ ಪರಮಾತ್ಮ, ಇಷ್ಟು ಜನರು ನೋಡಿಕ್ಕೊಂಡಿರುವಾಗ, ’ಯಾರು ನೋಡಲಿಲ್ಲವೆಂದು ಹೇಳುವುದು ಸರಿಯೇ.’ ಇಂತಃ ಮಾತು ನಮ್ಮಿಂದ ಹೊರಬರಲು, ನಮ್ಮಲ್ಲಿರುವ ಅಹಂಕಾರವೇ ಕಾರಣ.. ಅಹಂಕಾರವೇ, ದೊಷಗಳನ್ನೆಸುಗುವುದಕ್ಕೆ ಕಾರಣ. ಆದ್ದರಿಂದಲೇ,ಅಹಂಕಾರವಿರಬಾರದು..
.
ಮತ್ತೊಂದು ಇರಬಾರದ ಗುಣ ’ಮಮಕಾರ.’ ’ಯಾರೋ, ಕೆಲವರ ವಿಷಯದಲ್ಲಿ, ’ಇವರು
ನನ್ನವರೆಂದು ನೆನೆದು, ಅವರು ತಪ್ಪು ಮಾಡಿದರೂ, ಅದನ್ನು ದೊಡ್ಡದು ಮಾಡದೆ, ಸುಮ್ಮನಿದ್ದುಬಿಡುತ್ತಾರೆ. ಅದೇ ಸಮಯದಲ್ಲಿ, ತನಗೆ ಬೇಡದ ಒಬ್ಬನು, ಒಂದು ಸಣ್ಣ ತಪ್ಪನ್ನು ಮಾಡಿದರೂ, ಅದನ್ನು ದೊಡ್ಡದು ಮಾಡಿ ತೋರಿಸುತ್ತಿರುತ್ತಾರೆ. ನಾವು, ಹೀಗಿರಬಾರದು.
ನಾವು ಎಲ್ಲರ ಬಳಿಯೂ ಪಾರಾಪಕ್ಷವಿಲ್ಲದೆ ನಡೆದುಕೊಳ್ಳಬೇಕು. ಇದಕ್ಕೆ, ’ಮಮಕಾರವು’ ಅಡ್ಡಬಂದರೆ, ಅದನ್ನು ವರ್ಜಿಸಿಬಿಡಬೇಕು.
ಮುಂದಿನ ಉಪದೇಶ.’ಸಮದುಃಖಸುಖಃ= ಒಬ್ಬ ವ್ಯಕ್ತಿಯು ಸುಖ-ದುಖಗಳಲ್ಲಿ ಸಮವಾಗಿರಬೇಕು. ಸ್ವಲ್ಪ ಸುಖ ಅಧಿಕವಾದರೆ,, ಕೆಲವರಿಗೆ, ’ನಮಗೆ ಸಮನಾರು’ ಎಂಬ ಭಾವನೆ, ಬಂದುಬಿಡುತ್ತದೆ.
ಹಾಗೆಯೇ,ಸ್ವಲ್ಪ ದುಃಖ ಬಂದರೆ, ’ಈ ಜೀವನವೇ ಬೇಡ, ಎಂಬ ಬೇಸರ ’ ಬಂದುಬಿಡುತ್ತದೆ. ಎರಡೂ ಸರಿಯಾದ ಸ್ಥಿತಿಯಲ್ಲ.
ಯಾರು ಸುಖದಲ್ಲೂ, ದುಃಖದಲ್ಲೂ, ಕಡಲಿನಂತೆ ಸಮತ್ವವನ್ನು ತಡೆಹಿಡಿಯುತ್ತಾರೋ,’ ಎಲ್ಲವೂ ದೈವೇಚ್ಚೆ’, ಎಂದು ಭಾವಿಸುತ್ತಾನೋ, ಅವನೇ ಉತ್ತಮ.. ಅದ್ದರಿಂದಲೇ, ಆದ್ದರಿಂದಲೇ, ಸುಖ-ದುಃಖಗಳಲ್ಲಿ ಸಮತ್ವನ್ನನುಸರಿಸಬೇಕೆಂದು ಹೇಳಿದೆ.
ಸುಖ-ದುಃಖಗಳೆರಡೂ, ಶಾಶ್ವತವಾಗಿರುವುದಲ್ಲ.
ಮಹಾಕವಿ ಕಾಳಿದಾಸನು ಒಂದು ಕಡೆಯಲ್ಲಿ,’ಕಸ್ಯಾತ್ ದ್ಯನ್ತ್ಯಂ ಸುಖಮುಪನದಂ ಧುಃಖಮೇಕಾಂತತೋವಾ
ಎನ್ನುತ್ತಾನೆ. ’ಯಾರಿಗೆತಾನೆ ನಿರಂತರ ಸುಖ ದೊರಕಿದೆ ಎಂದು ಹೇಳಬಹುದು. ಅಂತೆಯೇ,ಯಾರಿಗೆ ತಾನೆ, ಸಂಪೂರ್ಣವಾದ ದುಃಖಬಂದಿದೆ ಎಂದು ಹೇಳಬಹುದು.’ ಸುಖ-ದುಃಖಗಳೆರಡೂ, ಚಕ್ರದಂತೆ,ಅದಲು-ಬದಲಾಗುತ್ತಾ ಬರುತ್ತದೆ.
ಇವೆರಡೂ ಶಾಷ್ವತವಾಗಿರುವುದಲ್ಲ.
ಮತ್ತೊಂದು ಉಪದೇಶ.’ಕ್ಷ್ಮೀ-
’ತಾಳ್ಮೆ’ ಎಂಬುದು ಎಲ್ಲರಿಗೂ ಬಹಲ ಅವಶ್ಯ. ಚಿಕ್ಕ ಚಿಕ್ಕ ವಿಷಯಗಳಿಗೂ ಕೋಪಿಸಿಕೊಂಡು, ಅದರಿಂದ ಸಲ್ಲ್ಲದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪರಿಣಾಮಗಳನ್ನೆದುರಿಸಿದನಂತರವೇ, ನಾವು ಕೋಪಪಡಬಾರಾಗಿತ್ತೆಂದು ಅಂದುಕೊಳ್ಳುತ್ತೇವೆ.. ಆದ್ದರಿಂದ, ’ಕೋಪ ಬರುವ ಮುಂಚೆಯೇ, ಅದನ್ನು ತಡೆಹಿಡಿದು, ತಾಳ್ಮೆಯನ್ನು ಅನುಸರಿಸುವುದು ಅವಶ್ಯಕ.
. ನಮ್ಮ ಹಿಂದಿನವರ ಚರಿತ್ರೆಯನ್ನು ಅವಲೋಕಿಸಿದಾಗ, ಅವರು ಎಷ್ಟು
ತಾಳ್ಮೆಯನ್ನು ತಡೆಹಿಡಿದಿದ್ದರೆಂಬುದನ್ನರಿಯಬಹುದು. ಭಗವಂತ ಶ್ರೀ ಕೃಷ್ನನ ಚರಿತ್ರೆಯಿಂದ ಒಂದು ಘಟನೆಯನ್ನು ಅವಲೋಕಿಸೋಣ.
ಮಹಾನ್ ಸಭೆಯಲ್ಲಿ, ಭೀಷ್ಮ ಮೊದಲಾದ ಮಹಾತ್ಮರು ಆಸೀನರಾಗಿರುವಾಗ, ಆ, ಧರ್ಮರಾಜನು ನಡೆಸಿದ ರಾಜಸೂಯಯಾಗದಲ್ಲಿ ಯಾರಿಗೆ ಅಗ್ರಪೂಜೆ ಸಲ್ಲಬೇಕೆಂಬ ಪ್ರಶ್ನೆಯೆದ್ದಿತು.. ಶಿಶುಪಾಲನ ಹೊರತು, ಮತ್ತವರೆಲ್ಲರೂ, ಶ್ರೀ ಕೃಷ್ಣನೇ ಅರ್ಹನೆಂದು ಸಮ್ಮತಿಸಲು,
,ಶ್ರೀ ಕೃಷ್ಣನು ಆ ಪೂಜೆಗೆ ಅಯ್ಕೆಯಾದನು. ಪೂಜೆಯ ಪ್ರಾರಂಭದ ಸಮಯದಲ್ಲಿ ಶಿಶುಪಾಲನು ಶ್ರೀ ಕೃಷ್ಣನನ್ನು ಕಂಡಂತೆ ನಿಂದಿಸಲಾರಂಭಿಸಿದನು. ಭಗವಂತನು ಮೌನವಾಗಿದ್ದನು. ಅದೇ ತಾಳ್ಮೆ. ಇಂತಹ ಸಂಧರ್ಭ ನಮಗೆ ಬಂದರೆ, ಬೈದವನ ಮೇಲೆ ಹಗೆ ತೀರಿಸಿಕೊಳ್ಳುವುದಕ್ಕೆ ಉದ್ಯುಕ್ತರಾಗುತ್ತೇವೆ. ಶ್ರೀ ಕೃಷ್ಣನು ತಾಳ್ಮೆಯಿಂದಿದ್ದನು. ಆದರೆ, ಶಿಶುಪಾಲನ ಅಹಂಕಾರ ಮಿತಿಮೀರಿದಾಗ ಅವನಿಗೆ ದಂಡನೆಯಾಯಿತು. ಕ್ಷಮೆಯಿಂದ ಮನುಷ್ಯನು ಅತ್ಯುನ್ನತ ಫಲವನ್ನು ಪಡೆಯಬಹುದು. ತಾಳ್ಮೆಯಿಲ್ಲದವನು ಹಲವು ವಿಧವಾದ ಕಷ್ಟಗಳೆನ್ನೆದಿರುಸಬೇಕಾಗುತ್ತದೆ. ಆದ್ದರಿಂದಲೇ, ಭಗವಂತನು ಕ್ಷಮೆಯನ್ನುಪದೇಶಿಸಿದನು.
.
ಅದ್ದರಿಂದಲೇ, ಮೇಲೆ ಹೇಳಿದ ವಿಷಯಗಳಾದ, ದ್ವೇಷರಹಿತ, ಕ್ರೋಧ, ಅಹಂಕಾರ, ಮಮಕಾರವಿಲ್ಲದಿರುವುದು, ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು, ದಯೆ, ಕ್ಷಮೆ, ನಮ್ಮ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವುದು, ದಯೆ,ಕ್ಸಮೆ, ನಮ್ಮ ಬಾಲಿನಲ್ಲಿ ಇದ್ದುಬಿಟ್ಟರೆ, , ನಾವು ಬಾಳಿನಲ್ಲಿ ಯಾವಾಗಲೂ, ಆನಂದವನ್ನನುಭವಿಸಬಹುದು. ಅಂತಹ ಗುಣಗಳನ್ನು ಪಡೆಯಲು, ಭಗವಂತನ ಅನುಗ್ರಹ ಅವಶ್ಯ.. ಭಗವ್ಂತನ ಸನ್ನಿಧಿನಿಯಲ್ಲಿ’ಭಕ್ತನು, ’ನಾನು ನನ್ನ ಜೀವನವನ್ನು ಸನ್ಮಾರ್ಗದಲ್ಲಿ ರೂಢಿಸಿಕೊಳ್ಳಲು ಬಯಸುತ್ತೇನೆ..’ ನನ್ನನ್ನು ಅನುಗ್ರಹಿಸು., ಎಂದು ಬೇಡಿಕೊಂದರೆ, ನಮಗೆ ಖಂಡಿತ ಭಗವದನುಗ್ರಹ ದೊರೆಯುತ್ತದೆ.
ಅವನ ಮೂಲಕ ನಮ್ಮ ಬಾಳಿನ ಪ್ರಯತ್ನಗಳಲ್ಲಿ ಗೆಲುವನ್ನು ಪಡೆಯಬಹುದು.
==========================
ಅಧ್ಯಾಯ-೧೮.
===========
ಮೂರು ವಾಸನೆಗಳು.
================
’ಪುನರಪಿ ಮರಣಂ ಪುನರಪಿ ಜನನಂ ಪುನರಪಿ ಜನನೀ ಜಠರೇ ಶಯನಂ’ ಎಂಬಂತೆ ನಾವು ಈ ಜೀವನ-
ಚಕ್ರದಲ್ಲಿ ಸುತ್ತುತ್ತಲೇ ಇದ್ದೇವೆ. ಈಗ, ಈ ಮನುಷ್ಯ ಜನ್ಮದಲ್ಲಿ ಜನಿಸಿ, ಹಲವು ಸುಖ-ದುಃಖಗಳನ್ನು ಅನು-
ಭವಿಸುತ್ತಿದ್ದೇವೆ. ಎಂದೋ ಒಂದು ದಿನ ಈ ಶರೀರವನ್ನು ಬಿಡುತ್ತೇವೆ.ಮತ್ತೊಂದು ಶರೀರ ಬರುತ್ತದೆ. ಅದನ್ನೂ ಬಿಡುತ್ತೇವೆ.
. ಹೀಗೆ, ನಾವು ಒಂದು ಪ್ರವಾಹದಲ್ಲಿ ಓಡಿಹೋಗುತ್ತಿದ್ದೇವೆ. ಈ ಪ್ರವಾಹದಲ್ಲಿ, ಹೀಗೆಯೇ, ಓಡಿಕೊಂಡಿರಬೇಕಾ, ಅಥವಾ ಇದಕ್ಕೊಂದು ಕೊನೆಯಿದೆಯೇ.ಎಂಬ ಪ್ರಶ್ನೆಗೆ ಶ್ರೀ ಭಗವತ್ಪಾದರು;
’ಸಂಸಾರ ಕಾರಾಗೃಹೇ ಮೋಕ್ಷಮಿಛ್ಚೋಹೊ ಅಯೋಮಯಂ ಪಾದನಿಬದ್ದಶೃಂಕಲಂ
ವದಣ್ತಿ ತಜ್ಞ್ಯಾಃ ಪಡುವಾಸನತ್ರಯಂ ಯೋಸ್ಮಾತ್ವಿಮುಕ್ತಃ ಸಮುಪೈತಿ ಮುಕ್ತಿಂ
ಸಂಸಾರವೆಂಬ ಈ ಜನನ-ಮರಣ ಪ್ರವಾಹ ಒಂದು ಸೆರೆ. ಈ ಸೆರೆಯಲ್ಲಿ ನಾವು ಬಂಧಿಗಳಾಗಿದ್ದೇವೆ.ನಮ್ಮ ಕೈ-ಕಾಲಿಗೆ ಕಬ್ಬಿಣದ ಸಂಕೋಲೆಗಳನ್ನು ಹಾಕಲಾಗಿದೆ.. ಈ ಸಂಕೋಲೆಗಳಿಂದ ಬಿಡಿಸಿಕೊಳ್ಳದೆ ನಾವು ಹೊರಬರಲಾಗುವುದಿಲ್ಲ. ಸಂಕೋಲೆಗಳು ಗಟ್ಟಿಯಾಗಿರುವುದರಿಂದ, ನಮ್ಮ ಪ್ರಯತ್ನವೂ ಗಟ್ಟಿಯಾಗಿರಬೇಕು. ಆ ಕಬ್ಬಿಣದ ಸಂಕೋಲೆಗಳೇ ಮೂರು ವಿಧ ವಾಸನೆಗಳು.. ಇದರ ಬಗ್ಗೆ, ಹೇಳುವಾಗ ಶ್ರೀ ಭಗವತ್ಪಾದರು;
ಲೋಕವಾಸನೆಯಾ ಜಂತೋಃ ಶಾಸ್ತ್ರವಾಸನ ಯಾ ಪಿ ಚ ದೇಹವಾಸನೆಯಾ ಜ್‘ಜ್ಯಾನಂ ಯತಾವಂತೇವ ಜಾಯತೇ
ಎನ್ನುತ್ತಾರೆ. ಲೋಕ ವಾಸನೆ, ಶಾಸ್ತ್ರ ವಾಸನೆ, ದೇಹ ವಾಸನೆ ಈ ಮೂರೂ, ಈ ಸಂಕೋಲೆಗಳಂತೆ ಎನ್ನುತ್ತಾರೆ.
ಕೆಲವರಿಗೆ ಇದು ಹೊಸದಾಗಿ ಕಂಡರೂ, ಇವುಗಳ ಬಗ್ಗೆ ಈಗ ಪರಿಶೀಲಿಸೋಣ.
ಜಗದಲ್ಲಿ ನನ್ನನ್ನು ಯಾರು ದೂಷಿಸಬಾರದು, ಎಲ್ಲರೂ ಹೊಗಳಬೇಕು’ ಎಂಬುದೇ ’ಲೋಕವಾಸನೆ.’ ಇದು ಒಬ್ಬನ ’ಆತ್ಮ’ಬೆಳವಣಿಗೆಗೆ ತಡೆಯಾಗುತ್ತದೆ.. ಏಕೆಂದರೆ, ಒಬ್ಬನ ಇಂತಹ ಬಯಕೆ ನೆರವೇರುವುದಿಲ್ಲ. ಆದ್ದರೀಂದ,ನಾವು ನ್ಯಾಯವಾಗಿ ನಡೆದುಕೊಂಡರೆ ನಮ್ಮನ್ನೇಕೆ ಜನರು ದೂಷಿಸುತ್ತಾರೆ ., ಇಲ್ಲ ಹೊಗಳುತ್ತಾರೆ.ವಾಸನೆ ಇದ್ದರೆ, ಅದು ಹೇಗೆ ಅಸಾಧ್ಯವಾಗುತ್ತದೆ., ಎಂದು ನಾವು ಕೇಳಬಹುದು. ಅದು ಅಸಾಧ್ಯವೆಂದು ತೋರಲು ಶ್ರೀ ರಾಮಾಯಣವು ಒಂದು ಉದಾಹರಣೆಯನ್ನು ನೀಡುತ್ತದೆ. ಶ್ರೀ ರಾಮಾಯಣದ ಪ್ರಾರಂಭದಲ್ಲಿ,
ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್ ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋದೃಢೌವ್ರತಃ’- ಮಹರ್ಷಿ ವಾಲ್ಮಿಕಿ ನಾರಾದರ ಬಳಿ;’ ಸದ್ಗುಣಗಳನ್ನು ಹೊಂದಿದವನು, ಪರಾಕ್ರಮಶಾಲಿಯಾದವನು, ಧರ್ಮಜ್ಞನು,, ಕೃತಜ್ಞನು, . ಸದಾ ಸತ್ಯವನ್ನೇ ನುಡಿಯುವವನು, ದೃಢ ನಿಯಮವನ್ನಿಟ್ಟುಕೊಂಡಿರುವವನು, ಪವಿತ್ರವಾದ ಶೀಲವನ್ನು, ಹೊಂದಿರುವವನು, ಎಲ್ಲರ ವಿಷಯದಲ್ಲೂ ಕರುಣೆ ಹೊಂದಿರುವವನು,ಸರ್ವಜ್ಞನು, ಅಧಿಕ ಧೈರ್ಯವುಳ್ಳವನು,, ಕೋಪವಿಲ್ಲದವನು, ಅಸೂಯೆಯಿಲ್ಲದವನು, ತಮ್ಮ ಕರ್ಮಗಳನ್ನು ಮಾಡದ ಜನರಲ್ಲಿ ಭಯವನ್ನು ಹುಟ್ಟಿಸುವವನು, ಇಂತಹ ಗುಣಗಳನ್ನು ಹೊಂದಿರುವ ಮಹಾತ್ಮನು ಇದ್ದರೆ, ಆ ಮಹಾತ್ಮನ ಬಗ್ಗೆ, ತಿಳಿದುಕೊಳ್ಳಲು, ಆಶಿಸುತ್ತೇನೆ ಎಂದು ಕೇಳಿದರು.
ಅದಕ್ಕೆ, ನಾರದರು; ’ಇಕ್ಷ್ವಾಕು ವಂಶ ಪ್ರಭವೋ ರಾಮೋ ನಾಮ ಜನೈ ಶ್ರುತಃ’ ಎಂದರು.
ನೀವು ಕೇಳಿದ ಎಲ್ಲಾ ಯೋಗ್ಯತಾಂಶಗಳೂ ಒಬ್ಬನಲ್ಲಿವೆ. ಅವನೇ ದಶರಥ-ಕೌಸಲ್ಯೆಯ ಪುತ್ರನಾದ ಶ್ರೀರಾಮ.
ಅವರ ಚರಿತ್ರೆಯನ್ನು ಸಂಪೂರ್ಣವಾಗಿ ಹೇಳುತೇನೆ. ಮೇಲಿನ ಎಲ್ಲಾ ಗುಣಾತಿಶಯಗಳನ್ನೂ ಅವರಲ್ಲಿ ಕಾಣಬಹುದೆಂದರು.
ಅವರಪತ್ನಿ ಸೀತೆಯೂ ಶ್ರೀ ಮಹಾಲಕ್ಷ್ಮಿಯ ಅವತಾರವೇ. ಶ್ರೀ ರಾಮರೂ ಶ್ರೀ ನಾರಾಯಣನ ಅವತಾರವೇ. ಸೀತಾಮಾತೆಯು ಮಹಪತಿವ್ರತೆಯೆಂದು ಎಲ್ಲರೂ ಅರಿತಿದ್ದಾರೆ.. ಇಂತಹ ಸಕಲ ಸದ್ಗುಣ ಸಂಪನ್ನ ಶ್ರೀ ರಾಮರ ಬಗ್ಗೆಯೂ, ಶ್ರೀ ಸೀತಾಮಾತೆಯ ಬಗ್ಗೆಯೂ, ಯಾವನೋ ಬೇಡದವನು, ಒಂದು ಸಲ್ಲದ ಅಪವಾದವನ್ನು ಮಾಡಿದನೆಂದು ಉತ್ತರಕಾಂಡ ಹೇಳುತ್ತದೆ.. ಶ್ರೀ ರಾಮರು ಎಂತಃ ಮಹಾತ್ಮರಾದರೂ, ತನ್ನನ್ನು ಯಾರೂ, ನಿಂದಿಸಬಾರದೆಂದುಕೊಂಡಿದ್ದರೂ,ಅಂತಹ ಆಸೆಯು.ನೆರವೇರಲಿಲ್ಲ. ಮತ್ತವರ ವಿಷಯದಲ್ಲಿ, ನಾವೇನು ಹೇಳಲಾಗುತ್ತದೆ.
ಜನರು ಮತ್ತೊಬ್ಬರ ಬಗ್ಗೆ ಲೋಪ-ದೋಷಗಳನ್ನು ಹೇಳುವುದು, ಹಲ ವಿಧಗಳಲ್ಲಿವೆ. ಮೊದಲು
ಒಬ್ಬನ ಆಕಾರ, ಚೆನ್ನಾಗಿಲ್ಲದಿದ್ದರೆ, ಅವನನ್ನು ಕುರೂಪಿ ಎನ್ನುವರು. ಸುಂದರನಾಗಿದ್ದರೆ, ಓದಿಲ್ಲವೆನ್ನುವರು. ,
ಓದಿದವನಾದರೆ ,ಸದ್ಗುಣಗಳಿಲ್ಲ ಎನ್ನುವರು. ಸದ್ಗುಣಗಳಿದ್ದರೆ, ಸದಾಚಾರವಿಲ್ಲವೆನ್ನುವರು. ಅದ್ದರಿಂದ, ಮನುಷ್ಯನು, ಯಾವುದಾದರೊಂದು ಆಕ್ಷೇಪಣೆಗೆ, ಒಳಗಾಗುತ್ತಾನೆ.. ದಕ್ಷಿಣದವನು ಉತ್ತರದವನನ್ನು ಗೌರವಿಸುತ್ತಾನೆಯೇ.
ಅವನ ಆಚಾರದಲ್ಲಿ, ದಕ್ಷಿಣದವನಿಗೆ ತೃಪ್ತಿಯಿದೆಯೇ. ಅಂತೆಯೇ, ದಕ್ಷಿಣದವನಿಗೆ, ಉತ್ತರದವನ ಆಚಾರದಲ್ಲಿ ತೃಪ್ತಿಯಿದೆಯೇ.. ಇದು ಯಾವುದೂ ನಡೆಯುವುದಿಲ್ಲ. ಒಬ್ಬರೊನ್ನೊಬ್ಬರು ನಿಂದಿಸುತ್ತಲೇ ಇರಬೇಕು.ಇಂತಹ ಜಗತ್ತಿನಲ್ಲಿ ನಮ್ಮನ್ನು ಯಾರೂ ನಿಂದಿಸಬಾರದೆಂದರೆ ಅದು ಅಸಾಧ್ಯ ಕಾರ್ಯ.. ಆದ್ದರಿಂದ, ಅಂತಹ ಆಸೆ ಇರುವವನಿಗೆ, ಲೋಕವಾಸನೆ ಇರುವದರಿಂದ ಅಧ್ಯಾತ್ಮ ಪ್ರಗತಿ ಅಸಾಧ್ಯ.. ಭಗವಂತನು ಭಕ್ತನ ಲಕ್ಷಣಗಳ ಬಗ್ಗೆ ಹೇಳುವಾಗ,
’ತುಲ್ಯನಿಂದಾಸ್ತುತಿಃ’; ಎನ್ನುತ್ತಾನೆ. ’ಯಾರು ನಿನ್ನನ್ನು ನಿಂದಿಸಿದರೂ-ಹೊಗಳಿದರೂ, ಅದಕ್ಕೆ ಬೆಲೆ ಕೊಡಬಾರದು. ’ನೀನು ಯಾವ ಅಧ್ಯಾತ್ಮ ದಾರಿಯಲ್ಲಿ ಸಾಗುತ್ತಿದ್ದೀಯೋ,, ನಿನ್ನ ಗುರುವು ನಿನಗೆ ಯಾವ ಮಾರ್ಗವನ್ನುಪದೇಶಿದ್ದಾರೋ, ಆ ಮಾರ್ಗದಲ್ಲಿ ಸಾಗಬೇಕೇ ಹೊರತು, ಇದರ ನಡುವಿನಲ್ಲಿ ಯಾರ ತೆಗಳುವಿಕೆ-ಹೊಗಳುವಿಕೆ ನಿನಗೆ ಅವಶ್ಯವಿಲ್ಲ. ’ನೀನು ಲೋಕವಾಸನೆಗೆ ಬಲಿಯಾದರೆ,, ನಿನ್ನ ಅಧ್ಯತ್ಮ ಪ್ರಗತಿಯು ಹಿಮ್ಮೆಟ್ಟುತ್ತದೆ, ಎಂದು ಅರ್ಥೈಸಿ ಭಗವಂತ ಹೇಳುತ್ತಾನೆ. ಅಂತಲೇ,
ಲೋಕವಾಸನೆಯೆಂಬುದು ಇರಲೇ ಕೂಡದು. ಶ್ರೀ ಭಗವತ್ಪಾದರು, ’ಉಪದೇಶ ಪಂಚಕದಲ್ಲಿ,
’ಜನಕೃಪಾನೈಷ್ಟುರ್ಯಮುತ್ಸ್ರುಜ್ಯತಾಂ’;;ಜನರ ಕೋಪವೂ ಅವರ ದಯೆಯೂ ಅವಶ್ಯವಿಲ್ಲ. ನಮ್ಮ ಪೂರ್ವಜರು ಉಪದೇಶಿದ ಹಾದಿಯಲ್ಲಿ ಸಾಗುತ್ತಿರಬೇಕೆನ್ನುತ್ತಾರೆ.
ಮುಂದಿನದು, ’ಶಾಸ್ತ್ರವಾಸನೆಯ ಬಗ್ಗೆ ಅರಿಯೋಣ. ಅದು ’ಪಾಠ ವ್ಯಸನ, ಶಾಸ್ತ್ರ ವ್ಯಸನ, ಅನುಷ್ಠಾನ ವ್ಯಸನ,
ಎಂದು ಮೂರು ವಿಧಗಳು. ’ಪಾಠ ವ್ಯಸನವೆಂದರೆ, ಯಾವಾಗಲೂ, ಓದುತ್ತಲೇ ಇರುವುದು. ಇದಕ್ಕೆ, ಉದಾಹರಣೆ, ವೇದ-
ದಲ್ಲಿಯೇ ಇದೆ.’ಭಾರದ್ವಾಜೋ ಹ ತ್ರಿಭಿರಾಯುರ್ಭಿರ್ಬ್ರಹ್ಮಚರ್ಯಮುವಾಸ’;-
ಭಾರದ್ವಾಜ ಮಹರ್ಷಿಗಳು, ತಮ್ಮ ಜೀವನಪರ್ಯಂತ ಅಧ್ಯಯನ ಮಾಡುತ್ತಲೇ ಇದ್ದರು. ಮೂರು ಜನ್ಮಗಳೂ,ಅಧ್ಯಯನ ಅಧ್ಯಯನದಲ್ಲಿಯೇ ಕಳೆದರು.. ಅವರಿಗೆ ಹೆಚ್ಚು ಮುಂದುವರಿಯಲಾಗಲಿಲ್ಲ. ದೇವೇಂದ್ರನು ಪ್ರತ್ಯಕ್ಷವಾಗಿ, ಅವರನು ಮತ್ತೊಂದು
ಜನ್ಮವಿತ್ತರೆ, ’ಏನು ಮಾಡುವಿರೆಂದು ಕೇಳಲು, ಓದುತ್ತಲೇ ಇರುತ್ತೇನೆ, ಎಂದರು.’ ದೇವೆಂದ್ರನು ,ಹೀಗೆ ಎಷ್ಟೊಂದು ಜನ್ಮಗಳು ಓದುತ್ತಿರುವಿರಿ.. ವೇದಗಳು ಬೆಟ್ಟದಷ್ತು ದೊಡ್ಡದು. ನೀವು ಈಗ ಕಲಿತಿರುವುದು ಕೈಮುಷ್ಠಿಯಷ್ಟು. ನೀವು ಇನ್ನೂ ಓದುತ್ತಿರುವೆನೆಂದರೆ ಅದು ಉಚಿತವಲ್ಲ,ಎಂದು ತಿಳಿಸಿ ಅವರಿಗೆ ಸಗುಣೋಪಾಸನೆಯನ್ನು ಕಲಿಸಿದನು. ಭಾರದ್ವಾಜರ ವಿಷಯದಲ್ಲಿ ನಾವು ಕಾಣುವುದು ’ಪಾಠವಾಸನೆ.’; ’ಯಾವ ವ್ಯಕ್ತಿಯು ತನ್ನ ಸಂಪೂರ್ಣ ಜೀವನವನ್ನು ಓದಿನಲ್ಲೇ
ಕಳೆಯಲು ಬಯಸುತ್ತಾನೋ, ಅವನು ತನ್ನ ಬಾಳನ್ನು ಅಧ್ಯಯನದಲ್ಲೇ ಮುಗಿಸುವನೇ ಹೊರತು, ಅಧ್ಯಾತ್ಮ ಪ್ರಗತಿಯಲ್ಲಲ್ಲ.
ಎರಡನೆಯದು;’ಶಾಸ್ತ್ರವ್ಯಸನ’ವೆಂಬುದು. ಎಂದರೆ, ಚೆನ್ನಾಗಿ ಶಾಸ್ತ್ರಗಳನ್ನು ಕಲಿಯುವುದು.
ಅದು ತಪ್ಪೇ ಎಂದರೆ, ಶ್ರೀ ವಿದ್ಯಾರಣ್ಯರು, ಅದಕ್ಕೆ ಕಾರಣವನ್ನು ತಿಳಿಸುತ್ತಾರೆ. ’ಶಾಸ್ತ್ರ ವ್ಯಸನ ಇರಬಾರದೆಂಬುದಕ್ಕೆ ಕಾರಣ, ಅದು ಗರ್ವದಲ್ಲಿ ಮುಗಿಯುತ್ತದೆಂದು.’ ಅದು ಇರಬಾರದು. ಶಾಸ್ತ್ರವನ್ನು ನಿರಂತರವಾಗಿ ಅಭ್ಯಸಿಸುತ್ತಿದ್ದರೆ, ಅದು ಅಧಿಕ ಅಹಂಕಾರದಲ್ಲಿ ಮುಗಿಯುವುದು.. ’ಅಧಿಕ ಅಹಂಕಾರದಿಂದ ಅಧೊಗತಿಯೇ’. ಆದ್ದರಿಂದಲೇ, ಶಾಸ್ತ್ರ ವಾಸನೆ ಇರಬಾರದೆನ್ನುವರು. ಇದಕ್ಕೊಂದು ಉದಾಹರಣೆಯನ್ನು, ನಾವು ಚಾಂದೋಕ್ಯ ಉಪನಿಶತ್ತಿನಲ್ಲಿ ಕಾಣಬಹುದು.
’ಋಗ್ವೇದಂ ಭಗವೋತ್ಯೇಮಿ ಯಜುರ್ವೇದಮ್ ಸಾಮವೇದಮಾತರ್ವಣಂ’
ಮಹರ್ಷಿ, ನಾರದರು, ಒಂದೆಡೆಯಲ್ಲಿ, ’ನಾನು’ ಋಕ್’ ಮೊದಲಾದ ವೇದವೆಲ್ಲವನ್ನೂ, ಅಧ್ಯಯನ ಮಾಡಿದ್ದೇನೆ. ಅದು-ಇದು ಓದಿದ್ದೇನೆ ಎಂದು ಜೋಡಿಸಿಕೊಂಡೇ ಹೋಗಲು’ ’ಆತ್ಮದ ಬಗ್ಗೆ ತಿಳಿದಿದ್ದೀಯಾ,’ ಎನ್ನಲು,
ಎನ್ನಲು,’ಸೋಹಂ ಭಗವೋ ಮಂತ್ರವಿದೇವಾಸ್ಮಿ ನಾತ್ಮಾವಿತ್’ ಎಂದರು. ’ಮಂತ್ರಗಳನ್ನರಿತಿರುವೆನೇ ಹೊರತು ಆತ್ಮದ ಬಗ್ಗೆ ಅರಿಯಲಿಲ್ಲ’.. ಹೀಗಿರುವಿರುವುದರಿಂದ ಪ್ರಯೋಜನವೇನೂ ಇಲ್ಲ. ’ನಾನು ಅದಕ್ಕಾಗಿ ವ್ಯಸನ ಪಡುತ್ತೇನೆ, ನೀವೇ ನನ್ನನ್ನು ಕೈಹಿಡಿದು ಸಂರಕ್ಷಿಸಬೇಕೆಂದು’. ’ಸನತ್ಕುಮಾರರನ್ನು ನಾರದರು ಬೇಡಿದರು.. ಅಷ್ಟು ಓದಿದ ನಾರದರಿಗೆ, ಇನ್ನೂ ಓದಬೇಕಾಗಿತ್ತಾ ಎಂದರೆ,
ಎಂದರೆ, ’ಆತ್ಮ ತತ್ವವನ್ನರಿಯದೆ ಬೇರೇನನ್ನು ಓದಿದರೂ ಅದು ನಿಷ್ಪ್ರಯೋಜಕ.’
ಒಮ್ಮೆ, ದೂರ್ವಾಸ ಮಹರ್ಷಿಗಳು ತಾವು ಓದಿದ ಪುಸ್ತಕ ರಾಶಿಯನ್ನೆಲ್ಲಾ ಹೊತ್ತುಕೊಂಡು ಶಿವನ ಬಳಿ ಬಂದರು. ಆ
ಆ ಸಮಯದಲ್ಲಿ ಅಲ್ಲಿದ್ದ ಮತ್ತೊಬ್ಬ ಮಹಾತ್ಮರು, ದೂರ್ವಾಸರನ್ನು ಕುರಿತು, ’ನಿನಗೂ, ಕತ್ತೆಗೂ, ಏನೂ ವೆತ್ಯಾಸವಿಲ್ಲ’ ಎಂದರು.
ಕತ್ತೆಗೆ ತಾನು ಹೊತ್ತ ವಸ್ತುವಿನ ಬಗ್ಗೆ ಅರಿವಿರುವುದಿಲ್ಲ. ಶಾಸ್ತ್ರಾಧ್ಯನದ ಉದ್ದೇಶ ’ಆತ್ಮ ಜ್ಞಾನ ಗಳಿಕೆ’. ’ಆತ್ಮಜ್ಞಾನ ಅರಿವಿಲ್ಲದವನ ಅಧ್ಯಯನ ಕತ್ತೆಯಂತೆ.
ಈ ಉದಾ ಹರಣೆಗಳನ್ನು ಕಂಡಾಗ,’ ನಾವು ಶಾಸ್ತ್ರವನ್ನರಿತು, ಅದರಲ್ಲಿ ಪಾಂಡಿತ್ಯ ಗಳಿಸಿದರೆ ಮಾತ್ರ, ನಾವು ಮಾಡಬೇಕಾದ್ದನ್ನು ಮಾಡಿಬಿಟ್ಟೆವು ಎಂದರ್ಥವಲ್ಲ.’. ಶ್ರೀ ಭಗವತ್ಪಾದರು, ವಿವೇಕಚೂಡಾಮಣಿಯಲ್ಲಿ;
ವಾಗ್ವೈಖರೀ ಶಬ್ಧಜರೀ ಶಾಸ್ತ್ರವ್ಯಾಖ್ಯಾನ ಕೌಶಲಂ ವೈದುಷ್ಯಂ ವಿದುಷಾಂ ತತ್ವತ್ ಬುದ್ಧಯೇ ನ ತು ಮುಕ್ತಯೇ
ಎಂದು ಹೇಳಿದಂತೆ, ’ಚೆನ್ನಾಗಿ ಮಾತನಾಡಬಹುದು, ಒಳ್ಳೆಯ ವಾಕ್ಯಗಳನ್ನು ಬಳಸಬಹುದು, ಯಾವ ಪಂಕ್ತಿ ಬಂದರೂ ಬಹಳ ಸಮನ್ವಯ ಹೇಳಬಹುದು.. ಎಂತಹ ಕಠಿಣ ಜಾಗದಲ್ಲಿಯೂ, ತನ್ನ ವಿವೇಕವನ್ನುಪಯೋಗಿಸಿ ಸಮನ್ವಯ ಮಾಡಿ-. ನಮ್ಮ ಗುರುಗಳು; ’ಸಮನ್ವಯ ಪ್ರಾಕಾರಾ ಬಹವಃ ಸಂತಿ; ಎಂದು ಹೇಳುವಂತೆ;
’ಹೇಗೆ ಬೇಕಾದರೂ ಸಮನ್ವಯ ಮಾಡಬಹುದು. ಆದರೆ, ಅದು ಯಾತಕ್ಕೆ ಉಪಯೋಗವಾಗುವುದೆಂದರೆ;
ಬುದ್ಧಯೇ ನ ತು ಮುಕ್ತಯೇ’
ಅದು ’ಬರೀ ಭೋಗಕ್ಕೇ ಹೊರತು ಮುಕ್ತಿಗಲ್ಲ’ ಎಂದು ಅರಿವಾಗುತ್ತದೆ.’ ನಾವು ಎಷ್ಟೋ ವಿದ್ವಾಂಸರನ್ನು ನೋಡುತ್ತೇವೆ. ಹಣಕ್ಕಾಗಿ ಅವರು ವಿದ್ಯೆಯನ್ನು ಮಾರಿಕೊಳ್ಳುತ್ತಾರೆ..’ ಕಾಲ ಸ್ಠಿತಿಹೀಗಿದೆ ’ಎಂಬುದು ಬೇರೆಯ ವಿಚಾರ. ಆದರೆ, ಎಷ್ಟು ಶಾಸ್ತ್ರ ಓದಿದರೂ ಅದು ಹಣಕ್ಕಾಗಿಯೇ, ಎಂಬ ತೀರ್ಮಾನಕ್ಕೆ ಅವರು ಬಂದುಬಿಟ್ಟಿದ್ದಾರೆ.
’ಹಣ ಗಳಿಸಿದ ಮಾತ್ರದಿಂದಲೇ ತಾನು ಸರ್ವಜ್‘ಜ್ಯ ನಾಗಿಬಿಟ್ಟೆ .ಎಲ್ಲರಿಗಿಂತ ಹಿರಿಯನು ಎಂದು ಹೇಳಬಹುದೇ.’
’ಅಮೃತತ್ವಸ್ಯ ತು ನಾಶಾಸ್ತಿ ವಿತ್ತೇನ’. ಎಂದು ವೇದವೇ ಹೇಳುವದಾಗಿ ಶ್ರೀ ಭಗವತ್ಪಾದರು ತಿಳಿಸುತ್ತಾರೆ.
ಯಾಜ್ಞವಲ್ಕ್ಯರಿಗೆ ಇಬ್ಬರು ಪತ್ನಿಯರಿದ್ದರು. ಅವರು ತಾವು ಎಲ್ಲವನ್ನೂ ಬಿಟ್ಟು ಹೋಗುವುದಕ್ಕೆ ಮುಂಚೆ, ಪತ್ನಿ ಮೈತ್ರೇಯಿಯನ್ನು ಕುರಿತು, ನನ್ನ ಆಸ್ತಿಗಳೆನ್ನವನ್ನೂ ಹಂಚಿಕೊಳ್ಳಿ, ಎಂದು ಆಜ್ಞ್ಯಾಪಿಸಿದರು.
ಅದಕ್ಕೆ, ಮೈತ್ರೇಯಿಯು, ಯಾಜ್ಞವಲ್ಕ್ಯರನ್ನು ಕುರಿತು, ’ನಿಮಗೆ ಬೇಡದ ಸೊತ್ತುಗಳನ್ನು ನಮಗೆ ಕೊಡುತ್ತಿದ್ದೀರಿ,ನಿಮಗೆ ಬೇಡವಾದದ್ದು ನಮಗೂ ಬೇಡ’ ಎಂದಳು. ಅದಕ್ಕೆ ಭಾರದ್ವಾಜರು, ’ನಾನು ಮೋಕ್ಷವನ್ನರಸಿ ತೆರಳುತ್ತಿದ್ದೇನೆ.. ಹಾಗೆ ತೆರಳುವವರು, ’ಯಾವುದೇ ಹಣವನ್ನಿಟ್ಟುಕೊಂಡಿರಬಾರದು.’ ಆದ್ದರಿಂದ,’ ಇದನ್ನು ತೊರೆಯುತ್ತೇನೆ ಎಂದರು. ಅದಕ್ಕೆ ಮೈತ್ರೇಯಿ,’ ನನಗೂ ಮೋಕ್ಷ ಬೇಕು. ಹಣ ಬೇಡ’ ಎಂದಳು.
ಶಾಸ್ತ್ರಾಧ್ಯಯನವನ್ನು, ಕೇವಲ ಲೌಕಿಕವಾಗಿ ಧನಾರ್ಜನೆಗಾಗಿಯೇ, ಎಂದಿಟ್ಟುಕೊಂಡರೆ ನಮ್ಮ ಶಾಸ್ತ್ರ ಯಾವ ವಿಧವಾದ ಪ್ರಯೋಜನವನ್ನೂ ನೀಡುವುದಿಲ್ಲ. ಆದ್ದರಿಂದ, ಶಾಸ್ತ್ರ ವ್ಯಸನ ಎನ್ನುವುದು ಆತ್ಮೀಕ ಪಥದಲ್ಲಿ ಸಾಗಲು, ತಡೆಯಾಗಿದೆ.
ಅನುಷ್ಠಾನ ವ್ಯಸನದ ಬಗ್ಗೆ ಈಗ ಚರ್ಚಿಸೋಣ...ಎಷ್ಟೇ ಆತ್ಮತತ್ತ್ವದ ಬಗ್ಗೆಯೂ, ವೇದಾಂತ ಶಾಸ್ತ್ರದ ಬಗ್ಗೆಯೂ, ಹೇಳಿದರೂ, ಮತ್ತೆ ಮತ್ತೆ,
ಕರ್ಮಗಳನ್ನು ಮಾಡುತ್ತಲೇ ಇರುವುದು,’ಅನುಷ್ಠಾನ ವ್ಯಸನ’ ಎನ್ನುವರು.ಕರ್ಮಗಳನ್ನು, ಆದಷ್ಟು ಮಾಡಬೇಕೆಂದು ಶ್ರೀ ಭಗವತ್ಪಾದರೂ ಹೇಳುತ್ತಾರೆ.. ಅಲ್ಲಿಯವರೆಗೆ, ಕರ್ಮವನ್ನು ಮಾಡಬೇಕೆಂಬುದರಲ್ಲೇ, ಶ್ರೀ ಆಚಾರ್ಯರಿಗೂ,ಮೀಮಾಂಸ ವ್ರತವನ್ನಚರಿಸುವವರಿಗೂ, ಅಭಿಪ್ರಾಯಬೇಧವಿದೆ.. ಮೀಮಾಂಸಕರ ಅಭಿಪ್ರಾಯದಂತೆ,ಕರ್ಮವನ್ನು-ಕಡೆಯರೆಗೆ ಮಾಡುತ್ತಿರಬೇಕು.
ಶ್ರೀ ಭಗವತ್ಪಾದರ ಅಭಿಪ್ರಾಯದಂತೆ,ಕರ್ಮವನ್ನು ಒಂದು ಹಂತದವರೆಗೆ ಮಾಡಬೇಕು.
’ಧೃಡತರಂ ಕರ್ಮಸು ಸಂತ್ಯಜ್ಯತಾಂ’ ಎಂಬಂತೆ ಇದ್ದುಬಿಡಬಹುದು.. ಆದರೆ, ’ಅನುಷ್ಠಾನವ್ಯಸನ ಇರುವವರಿಗೆ, ಕರ್ಮವನ್ನು ಬಾಳಿನ ಪೂರ್ತಿ ಮಾಡಲು ತೋರುತ್ತದೆ,. ಈಗ ಒಂದು ಪ್ರಶ್ನೆ ಕೇಳಬಹುದು.
’ ಕರ್ಮವನ್ನು ಮಾಡಬಾರದು ಎನ್ನುತ್ತೀರಲ್ಲಾ,ಹಾಗಾದರೆ, ಸಂಧ್ಯಾವಂಧನೆಯನ್ನು ಮಾಡಬಾರದೇ, ,
ಬಿಟ್ಟುಬಿಡಬೇಕೆ, ಎಂದು ಕೇಳಿದರೆ, ಈ ಪ್ರಶ್ನೆಗೆ ಉತ್ತರಿಸಲು ನಾನು [ಗುರುಗಳು] ತಯಾರಿಲ್ಲ.. ಕಾರಣ, ಇಂತಹ ಪ್ರಶ್ನೆಗಳನ್ನು ಸೋಮಾರಿಗಳೇ ಕೇಳುವುದು. ಆಧ್ಯಾತ್ಮಿಕವಾದ,
ಲಕ್ಷವನ್ನು ಸಾಧಿಸಬೇಕಾದ ಮನುಷ್ಯನು ಸಾಧಾರಣ ಫಲ ತರುವ ಸಾಧಾರಣ ಅನುಷ್ಠಾನವನ್ನು ಮಾಡುದರಲ್ಲಿಯೇ, ಕಾಲ ಕಳೆಯುವುದು ಸರಿಯಲ್ಲ’ ಎಂದೇ ನಾನು [ಗುರುಗಳು]ಹೇಳುತ್ತಾರೆ.
ಅನುಷ್ಠಾನ ವ್ಯಸನದ ಕೊರತೆಯೆಂದರೆ, ಅದು ಪುನರ್ಜನ್ಮಕ್ಕೆ ಕಾರಣವಾಗುವುದು. ಮಾಡಿದ,ಕರ್ಮಕ್ಕೆ, ಫಲ ಬರದಿರುವುದಿಲ್ಲ. ಫಲವನ್ನನುಭವಿಸಲು,ಶರೀರ ಬರಲೇಬೇಕು.
ನಾವಾದರೋ, ’ಶರೀರ ಬೇಡವೆಂದೇ ಹೇಳುತ್ತಿದ್ದೇವೆ.’
ಮೃತ್ಯೋರ್ಪಿಬೇಶಿ ಕಿಂ ಮೂಢ ಭೀತಿಂ ಮುಂಚತಿ ಕಿಂ ಯಮಃ
ಅಜಾತಂ ದೈವ ಗೃಹ್ಣಾದಿ ಕುರುಯತ್ನಮಜನ್ಮನಿ-ಹೀಗೆ ಹೇಳಿರುವುದನ್ನೇ ನಾವು ಸಾಧಿಸಬೇಕು. ಜಗದಲ್ಲಿ, ಮನುಷ್ಯನು ಯಾರಿಗಾದರೂ ಭಯಪಡುವನೆಂದರೆ, ಅದು ಮೃತ್ಯುವಿಗೇ.ಅವನು ಹೆದರುವನೆಂದು ಮೃತ್ಯು ಅವನನ್ನು ಬಿಡುವುದಿಲ್ಲ.. ಹೆದರಿದರೂ,ಹೆದರದಿದ್ದರೂ, ಸಮಯ ಬಂದಾಗ, ಮೃತ್ಯು ಅವನನ್ನು ಕೊಂಡೊಯ್ಯುವುದು.
ಮೃತ್ಯುವನ್ನು ತಪ್ಪಿಸಲು ಒಂದೇ ಮಾರ್ಗ ಜನಿಸದಿರುವುದು.ಹುಟ್ಟಿದರೆ, ಮೃತ್ಯು ಅಟ್ಟಿಸಿಕೊಂಡು
ಬರುವುದು.
’ಅಜಾತಂ ದೈವ ಗೃಹ್ಣಾತಿ- ಹುಟ್ಟದವನನ್ನು ಮೃತ್ಯು ಬಾಧಿಸುವುದಿಲ್ಲ. ಆದ್ದರದಿಂದಲೇ,
’ಕುರುಯತ್ನಮಜನ್ಮನಿ’ ಎಂದು ಹೇಳಿರುವುದರಿಂದ, ಪುನರ್ಜನ್ಮ ಬರದಂತೆ ನೋಡಿಕೊಳ್ಳಬೇಕು.
ಈ ರೀತಿಯ ಗುರಿಯನ್ನು ಹೊಂದಿರುವಾಗ, ನಾವು ಕರ್ಮವನ್ನೇ ಮಾಡುತ್ತಿದ್ದರೆ, ನಾವು ಮನಸ್ಸಿನಲ್ಲಿ
ಇಟ್ಟಿರುವ ಲಕ್ಷ್ಯವೊಂದು ನಾವು ಮಾಡುವ ಅನುಷ್ಠಾನ ಬೇರೆ, ಎಂದಾಗಿಬಿಡುತ್ತದೆ. ಆದ್ದರಿಂದಲೇ,’ಅನುಷ್ಠಾನ ವ್ಯಸನವನ್ನು’ ಒಂದು ಬಂಧನವಾಗಿ ಹೇಳಲ್ಪಟ್ಟಿದೆ.
ಹೀಗೆ, ’ಶಾಸ್ತ್ರ ವಾಸನೆಯೆಂಬುದು ಪಾಠ ವ್ಯಸನ”ಶಾಸ್ತ್ರ ವ್ಯಸನ,’ ಅನುಷ್ಠಾನ ವ್ಯಸನ’
ಎಂದು ಮೂರು ವಿಧವಾಗಿ ಅಡಗಿದೆ. ಶ್ಲೋಕದಲ್ಲಿ, ಮುಂದಿನದಾಗಿ, ’ದೇಹ ವಾಸನೆಯ’ ಬಗ್ಗೆ
ಹೇಳಲ್ಪಟ್ಟಿದೆ. ’ದೇಹ ವಾಸನೆಯು ಮೂರು ವಿಧವಾಗಿದೆ.
’ದೇಹೇ ಅತ್ಮವತ್ ಬ್ರಾಂತಿಃ ದೇಹೇ ಗುಣದಾನ ಬ್ರಾಂತಿಃ ದೇಹೇ ದೋಷಾಪನಯಬ್ರಾಂತಿಃ’
ಇದರಲ್ಲಿ ಮೊದಲನೆಯದಾದ, ’ದೇಹೇ ಆತ್ಮವತ್ ಬ್ರಾಂತಿಃ’ಯ ಬಗ್ಗೆ ಈಗ ನೋಡೋಣ. ಚಾರ್ವಾಕರು
ದೇಹವನ್ನೇ ಆತ್ಮವೆನ್ನುತ್ತಾರೆ. ’ಶರೀರದಿಂದ ಬೇರೆಯಾದ ಆತ್ಮ’ವಿಲ್ಲವೆಂಬುದು ಅವರ ಅಭಿಪ್ರಾಯ.. ಆದರೆ, ಅದು ಬಹಳ ತಪ್ಪಾದದ್ದು, ಎಂದು, ಮಿಕ್ಕ ದಾರ್ಶನಿಕರೆಲ್ಲರೂ, ವಿವರಿಸಿಬಿಟ್ಟರು. ಶರೀರವೇ, ಆತ್ಮವಾದರೆ,’ ಹುಟ್ಟಿದ ಮಗುವಿಗೆ ಒಡನೇ ಹಾಲನ್ನು ಕುಡಿಯಬೇಕೆನ್ನುವ ’ಪ್ರೇರಣೆ’ ಹೇಗೆ ಬರುತ್ತದೆ..’ನೆನಪು ಈಗ ಬರಬೇಕಾದರೆ,’ ಹಾಲು ಕುಡಿದರೆ, ಹಸಿವಿಂಗುತ್ತದೆ’ ಎಂಬ ಅನುಭವ ಹಿಂದಿನ ಜನ್ಮದಲ್ಲೇ ಬಂದಿರಬೇಕು.. ಆದ್ದರಿಂದ, ಈಗಿನ ಜ್ಞಾನ ಹಿಂದಿನ ಅನುಭವದಿಂದಲೇ ಬಂದಿರಬೇಕು. ನಾವು ಮುಂಚೆ ಯಾರನ್ನಾದರೂ, ನೋಡಿದ್ದರೆ ಮಾತ್ರ ಅವರ ಜ್ಞ್ಯಾಪಕ ಬರುತ್ತದೆ.. ನೋಡದಿದ್ದರೆ ಜ್ಞಾಪಕ ಹೇಗಿಟ್ಟುಕ್ಕೊಳ್ಳುವುದು. ಮುಂಚೆ ಅ
ಅವರನ್ನು ನೋಡಿದ ವ್ಯಾಕ್ತಿಯೂ, ಜ್ಞಾಪಿಸಿಕೊಳ್ಳುವ ವ್ಯಕ್ತಿಯೂ, ಒಬ್ಬನೇ ಆಗಿರಬೇಕು. ಇಲ್ಲದಿದ್ದರೆ,
ಬೇರೊಬ್ಬರು ನೋಡಿದ್ದೊಂದನ್ನು, ’ಮತ್ತೊಬ್ಬರು ಹೇಗೆ ಜ್ಞಾಪಿಸಿಕೊಳ್ಳಲು ಸಾಧ್ಯ,’ ಎಂಬ ಪ್ರಶ್ನೆ
ಏಳುತ್ತದೆ. ಆದ್ದರಿಂದ, ಜನಿಸಿದ ಮಗುವು ಹಾಲು ಕುಡಿಯಬೇಕೆಂಬ ನೆನಪು ಹಿಂದಿನ ಜನ್ಮದ
ಫಲವೇ. ಇಂತಹ ಉದಾಹರಣೆಗಳನ್ನಿತ್ತು, ಇತರ ದಾರ್ಶನಿಕರು ಚಾರ್ವಾಕರ ವಾದವನ್ನು
ನಿರಾಕರಿಸಿದರು. ಆದ್ದರಿಂದಲೇ, ’ದೇಹ ವಾಸನೆಯಲ್ಲಿ’ ಮೊದಲ ವಿಧವಾದ, ’ದೇಹವೇ ಆತ್ಮಾ’
ಎಂಬ ಅಭಿಪ್ರಾಯವು ಬಹಳ ತಪ್ಪಾದದ್ದು.
ದೇಹ ವಾಸನೆಯಲ್ಲಿ ಎರಡನೆಯದಾಗಿ ಹೇಳಲ್ಪತ್ತಿರುವುದು "ಗುಣಾದಾನ ಬ್ರಾಂತಿ.’ ಶರೀರವನ್ನು
ಚೆನ್ನಾಗಿ ಇಟ್ಟುಕೊಳ್ಳಬೇಕೆಂಬ ಇಚ್ಚೆಯನ್ನು ಇದು ವ್ಯಕ್ತಪಡಿಸುತ್ತದೆ. ಶರೀರವನ್ನು ಸುಂದರವಾಗಿಟ್ಟುಕೊಳ್ಳುವುದರಲ್ಲಿ ಎರಡು ವಿಭಾಗವಿದೆ..೧.’ಲೌಕಿಕವಾದದ್ದು.ಶಾಸ್ತ್ರರೀತಿಯಾದದ್ದು.’ ದೇಹದಲ್ಲಿ ಸುಗಂಧ ವಾಸನಾ ದ್ರವ್ಯವನ್ನೂ, ಹಾರವನ್ನೂ,ಹಾಕಿಕೊಂಡರೆ, ಶರೀರ ಬಹಳ ಚೆನ್ನಾಗಿರುತ್ತದೆ ಎಂಬುದು ’ಲೌಕಿಕ ಗುಣಾದಾನವೆನಿಸುತ್ತದೆ.’ ತಕ್ಕ ಸಮಯದಲ್ಲಿ, ತಕ್ಕ ಕರ್ಮಗಳನ್ನು ಮಾಡಿದರೆ, ದೇಹವು, ತೇಜೋಮಯವಾಗುತ್ತದೆ ಎಂಬುದರಿಂದ ಸಂಭಂದಪಟ್ಟ ಕರ್ಮವನ್ನು ಮಾಡುವುದು ’ಶಾಸ್ತ್ರೀಯವಾದ ಗುಣಾದಾನದಲ್ಲಿ ’ಸೇರುತ್ತದೆ.
ದೇಹ ವಾಸನೆಯಲ್ಲಿ ಎರಡೆನೆಯ ವಿಧ,’ದೇಹ ಅಪನಯ ಬ್ರಾಂತಿ’ ಎಂಬುದಾಗುತ್ತದೆ. ಇದರರ್ಥ, ’ಕಲ್ಮಷವಿಲ್ಲದಂತೆ
ನೋಡಿಕೊಳ್ಳುವುದೆಂದರ್ಥ. ಇದು, ಲೌಕಿಕ ಮತ್ತು ಶಾಸ್ತ್ರೀಯವೆಂದು ಎರದು ವಿಧಾನಗಳಾಗುತ್ತವೆ.
’ಶೌಚೇ ಚ ದ್ವಿಧಂ ಪ್ರೋಕ್ತಂ ಬಾಹ್ಯಂ ಆಭ್ಯಂತರಂ ತಥಾ’
ಲೌಕಿಕ ಕಲ್ಮಷವೆಂದರೆ, ಶರೀರಕ್ಕೆ, ಎನೇನೋ, ವಸ್ತುಗಳನ್ನಿಟ್ಟು, ಉಜ್ಜಿ,ಕಲ್ಮಷ ಹೋಗುವಂತೆ ಮಾಡಿಕೊಳ್ಳುವುದು.
’ಶಾಸ್ತ್ರರೀತಿಯಾದ ಕರ್ಮಗಳನ್ನು ಮಾಡುವುದರಿಂದ ಶರೀರದ ಕಲ್ಮಷಗಳು ನೀಗುವುದು ಎಂಬ
ಭಾವನೆಯಿಂದ ಕರ್ಮಗಳನ್ನು ಮಾದುವುದು”ಶಾಸ್ತ್ರರೀತಿಯಾದ ದೇಹ ಅಪನಯವೆನಿಸುತ್ತದೆ.’ ಈ ಎಲ್ಲದರಲ್ಲಿಯೂ, ’ಶರೀರವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದೇ ಗುರಿಯಾಗುತ್ತದೆ.. ಅದಕ್ಕೆ ಸಂಭಂದಪಟ್ಟ ವಿಷಯದಲ್ಲಿ ಬುದ್ಧಿ ಹೋಗುವುದೇ ಹೊರತು ಅಧ್ಯಾತ್ಮ ವಿಷಯದಲ್ಲಿ ಹೋಗುವುದಿಲ್ಲ. ಉದಾಹರಣೆಗೆ, ’ಗುಣಾಧಾರ ಭ್ರಾಂತಿಯ ’ ವಿಷಯವನ್ನು ತೆಗೆದುಕೊಳ್ಳೋಣ. ಅದನ್ನು
ಅದನ್ನು ಯಾತಕ್ಕೆ ಭ್ರಾಂತಿ’ ಎನ್ನುತ್ತಾರೆ ಎಂದರೆ, ’ಒಳ್ಳೆಯ ಸುಗಂಧವನ್ನು ಧರಿಸಿಕೊಂಡರೂ,
ಒಳ್ಳೆಯ ಹಾರವನ್ನು ಹಾಕಿಕೊಂಡರೂ, ಶರೀರಕ್ಕೆ ಒಳ್ಳೆಯ ಸುಗಂಧ ಬರುತ್ತದೆ, ಎಂದು ಒಬ್ಬನು ಚಿಂತಿಸುತ್ತಾನೆ. ನಿಜದಲ್ಲಿ ಅದು ’ಶರೀರ ವಾಸನೆಯಲ್ಲ..’ ಸುಗಂಧ ಮತ್ತು ಹೂವಿನ ಹಾರದ ವಾಸನೆ ಬರುತ್ತದೆಯೇ ಹೊರತು, ಶರೀರದಿಂದಲ್ಲ.ಈ ಶರೀರದಲಕ್ಷಣ ಹೇಗೆಂದರೆ,
’ಸರ್ವಾಶುಚಿ ನಿದಾನಸ್ಯಕೃತಘ್ನಸ್ಯ ವಿನಾಶಿನಃ ಶರೀರ ಕಸ್ಯಾಪಿಕೃತೇ, ಮೂಡಾಃ ಪಾಪಾನಿ ಕುರ್ವತೇ’
ಎಂದು ಹೇಳಲ್ಪಟ್ಟಿದೆ. ಶರೀರಕ್ಕೆ ನವದ್ವಾರಗಳಿಂದ ಅಪವಿತ್ರ ವಸ್ತುಗಳೇ ಪ್ರವೇಶಿಸುತ್ತವೆ. ಅಂತಹ ಅಪವಿತ್ರ
ವಸ್ತುಗಳ ಕೋಶವೇ ಈ ಶರೀರ. ಅಲ್ಲದೆ, ಈ ಶರೀರವು ಶಾಶ್ವತವಾಗಿರುತ್ತದೆ. ಇದನ್ನು ಅಪರಿಮಿತವಾಗಿ ಅನುಭವಿಸಬಹುದೆಂದು ಒಬ್ಬನು ಹೇಳಿದರೆ ಅದು ತಪ್ಪಾಗುತ್ತದೆ. ಈ ಶರೀರವು ಯಾವಾಗ ಅಳಿಯುತ್ತದೆ ಎಂದು ಹೇಳಲಸಾಧ್ಯ.
’ನಿತ್ಯಂ ಸನ್ನಿಹಿತೋ ಮೃತ್ಯುಃ’- ಆದರೂ, ಈ ಶರೀರವನ್ನು ಪೋಷಿಸುವಂತಹ ತಪ್ಪನ್ನು ಕೆಲವರು ಮಾಡುತ್ತಾರೆ.
’ಮುಡಾಃ ಪಾಪಾನಿ ಕುರ್ವತೇ’; ಈ ತರಹ ಪಾಪಗಳನ್ನು ಮಾಡುವವರು ಮೂರ್ಖರು. ಎಲ್ಲಾ
ಅಶುದ್ಧಗಳ ಕೇಂದ್ರವಾದ ಈ ಶರೀರದಲ್ಲಿ, ಸುಘಂದದಂತಹ ಗುಣಗಳು ಬಂದಿರುವದಾಗಿಯೂ, ದುರ್ನಾತದಂತಹ ದೋಸ್ಷಗಳು ಹೋಗಿರುವುದಾಗಿಯೂ, ಹೇಳುವುದು, ದುರ್ಮತಿಯಾಗುತ್ತದೆ.
ಈ ಮೂರು ವಿಧವಾದ ವಾಸನೆಗಳು, ಲೋಕ-ಶಾಸ್ತ್ರ-ದೇಹ ವಾಸನೆಗಳು ಹುಟ್ಟು-ಸಾವುಗಳ ಚಾಕ್ರವಾದ ಸೆರೆಯಲ್ಲಿರುವ ಒಬ್ಬ ಮನುಷ್ಯ ಗಟ್ಟಿಯಾದ ಸಂಕೋಲೆಯಂತೆಯೇ.. ಈ ಸಂಕೋಲೆಗಳಿಂದ ಬಿಡುಗಡೆಯಾದರೆ ಮಾತ್ರ, ನಾವು ಈ ಸೆರೆಯಿಂದ ಬಿಡುಗಡೆಯಾಗಬಹುದು. ಆದ್ದರಿಂದ, ಎಲ್ಲಿಯ ತನಕ ಈ ವಾಸನೆಗಳನ್ನು ಬೆಳೆಸಿಕೊಳ್ಳುತ್ತೇವೋ, ಅಲ್ಲಿಯವರೆಗೆ, ನಾವು ಬಂಧನವನ್ನೇ ಬೆಳೆಸಿಕೊಳ್ಳುತ್ತೇವೆ. ಬಂಧಮುಕ್ತನಾಗಲು ನಾವು ಈ ವಾಸನೆಗಳಿಂದ ಮುಕ್ತರಾಗಬೇಕು.
ಅದಕ್ಕೆ, ’ಗುರುಗಳ ದಯೆ, ಭಗವಂತನ ಹರಕೆ’ ಅವಶ್ಯಕ.
ಶಾಸ್ತ್ರ ವಾಸನೆಯ ಬಗ್ಗೆ ಹೇಳುವಾಗ, ಶ್ರೀ ವಿದ್ಯಾರಣ್ಯರು,
’ಗುರುಕರುಣಾ ಹಿತಸ್ಯ ಶಾಸ್ತ್ರ ವ್ಯಸನಂ ವ್ಯಸನಮೇವ ಭವತಿ,’ ಎಂದರು.
ಗುರುಕರುಣೆಯಿಲ್ಲದವನಿಗೆ, ಶಾಸ್ತ್ರ ವ್ಯಸನವು ದುಃಖಮಯವಾಗಿಯೇ ಇರುತ್ತದೆ, ಎನ್ನುತ್ತಾರೆ.
ಕಾರಣ, ’ಆತ್ಮ ಜ್ಞ್ಯಾನ ಬರದೆ ಶಾಸ್ತ್ರವನ್ನು ಮಾತ್ರ ಕಲಿತಿದ್ದರೆ,ಅದು ನಿರುಪಯೋಗ.
ಒಬ್ಬ ಅನುಷ್ಠಾನ ವಿಷಯದಲ್ಲಿ ಬಹಳ ಜಾಗ್ರತೆಯಾಗಿರಬೇಕು. ಅನುಷ್ಠಾನ ಮಾಡುವುದು ವ್ಯಸನ [ಕಷ್ಟ] ಎಂದು
[ಕಷ್ಟ] ಎಂದರೂ, ಅನುಷ್ಠಾನ ಮಾಡುವದನ್ನು ವರ್ಜಿಸಬಾರದು. ಆತ್ಮಜ್ಞ್ಯಾನವೂ ಇಲ್ಲದೆ, ಅನುಷ್ಠಾನವನ್ನೂ ಮಾಡದೆ ಇರುವ ವ್ಯಕ್ತಿಗೆ,ಹದಲ್ಲೂ, ಪರದಲ್ಲೂ, ದುರ್ಗತಿಯೇ ಖಚಿತ.
’ಇತೋ ಬ್ರಷ್ಠೇತ್ ತತೋ ಭಷ್ಠಃ; ಅಧ್ಯಾತ್ಮ ವ್ಯಸನವಿರಬಾರದೆಂದು ಅಧ್ಯಾತ್ಮ ಮಾರ್ಗದಲ್ಲಿ ಮುನ್ನೇರುತ್ತಿರುವ ವ್ಯಕ್ತಿಗಾಗಿ ಹೇಳಲ್ಪಟ್ಟಿತು.. ನಾವು ಈಗತಾನೇ ಪ್ರಾರಂಭದ ಮಜಿನಲ್ಲಿದ್ದೇವೆ. ಶಾಸ್ತ್ರವನ್ನು ಅಭ್ಯಸಿಸಬೇಕು.
ಅನುಷ್ಠಾನ ಮಾಡಬೇಕು.ದೇಹ ವಾಸನೆಯನ್ನೂ, ಲೋಕ ವಾಸನೆಯನ್ನು ಬಿಡುವದಕ್ಕೆ ಪ್ರಯತ್ನಿಸಬೇಕು.
ಎಲ್ಲರೂ, ನನ್ನನ್ನು ಹೊಗಳಬೇಕು, ನನ್ನನ್ನು ಯಾರೂ ನಿಂದಿಸಬಾರದು, ಎಂಬ ಇಚ್ಚೆಯಲ್ಲಿ ನಮ್ಮ ಬಾಳನ್ನು ಸವೆಸುವುದು ತಪ್ಪಾಗುತ್ತದೆ.. ಅದು ಅಸಾಧ್ಯ ಕೂಡ. ಶ್ರೀರಾಮರಿಗೇ ಸಾಧ್ಯವಾದದ್ದು ನಮಗೆ ಹೇಗೆ ಸಾಧ್ಯವಾಗುತ್ತದೆ.
’ಶರೀರವನ್ನು ನಾವೇತಕ್ಕೆ ಇಟ್ಟುಕೊಳ್ಳಬೇಕು. ಶರೀರವಿಲ್ಲದಿದ್ದರೆ, ನಾವು ಮೋಕ್ಷ ಶಾಸ್ತ್ರವನ್ನು ಮನನ ಮಾದುವದೋ,ನಿಧಿಧ್ಯಾಸ ಮಾಡಲೋ ಆಗುವುದಿಲ್ಲ.. ಈ ಒಂದು ಕಾರಣಕ್ಕಾಗಿಯೇ, ನಾವು ಶರೀರಧಾರಣೆಯನ್ನು ಮಾಡಬೇಕು.
’ಆಹಾರಾರ್ಥಂ ಕರ್ಮ ಕುರ್ಯಾದನಿಂದ್ಯಂ ಕುರ್ಯಾಹಾರಂ ಪ್ರಾಣಸಂರಕ್ಷಣಾರ್ಥಂ
ಪ್ರಾಣಾರಕ್ಶ್ಯಾಸ್ತತ್ತ್ತ್ವಜಿಜ್‘ಜ್ಯಾಸನಾರ್ಥಂ ತತ್ವಂ ಜಿಜ್ಞ್ಯಾಸ್ಯಂ ಯೇನ ಬೂಯೋ ನ ಜನ್ಮ
’ಜನ್ಮ ಬರದಂತೆ ಮಾಡಿಕೊಳ್ಳಬೇಕಾದರೆ, ತತ್ವವಿಚಾರವನ್ನು ಮಾಡಬೇಕು.ಅದಕ್ಕೆ, ಪ್ರಾಣ ಅವಶ್ಯಕ.ಪ್ರಾಣ ರಕ್ಷಣೆಗೆ, ಆಹಾರ ಅವಶ್ಯಕ.. ಆಹಾರಸಂಪಾದನೆಗೆ, ’ಆಹಾರಾರ್ಥಂ ಕರ್ಮ ಕುರ್ಯಾತ್
ಅನಿಂದ್ಯಮ್, ಎಂದು ಹೇಳಿರುವಂತೆ,, ಶಾಸ್ತ್ರದಲ್ಲಿ ಹೇಳಿರುವ, ಕರ್ಮಗಳನ್ನು ಮಾತ್ರ ಮಾಡಬೇಕು. ನಾವು ಅಧ್ಯಾತ್ಮ ಪ್ರಗತಿಗೆ ಮಾತ್ರ ಈ ಶರೀರವನ್ನು ಸಾಧಕವಾಗಿಟ್ಟುಕೊಂಡು, ಆ ಮಟ್ಟಕ್ಕೆ ಅದನ್ನು ಉಪಯೋಗಮಾಡಿಕೊಳ್ಳಬೇಕು.
ನದಿಯೊಂದನ್ನು ಒಬ್ಬನು ದಾಟಬೇಕಿತ್ತು. ಅದಕ್ಕೆ, ಅವನಿಗೆ ದೋಣಿ ಬೇಕಾಯಿತು. ಮರವೆಂದು ತಿಳಿದು,
ಒಂದು ಮೊಸಳೆಯನ್ನೇರಿ, ಕುಳಿತು, ನದಿಯನ್ನು ದಾಟಲು ಯತ್ನಿಸಿದನಂತೆ. ಕಡೆಯಲ್ಲಿ, ಮೊಸಳೆಯೊಂದು ಅವನನ್ನು ತಿಂದುಬಿಟ್ಟಿತು.
ಹೀಗೆಯೇ, ಮೋಕ್ಷವನ್ನು ಪಡೆಯಲು ಅಪೇಕ್ಷಿಸುವವನೊಬ್ಬನು ಶರೀರವನ್ನು ಪೋಶಿಸಿಕೊಂಡು ಬಂದರೆ, ನದಿಯನ್ನು, ಮೊಸಳೆಯನ್ನುಉ ದೋಣಿಯಾಗಿಟ್ಟುಕೊಂಡವನ ಕಥೆಯಾಗುತ್ತದೆ. ಆದ್ದರಿಂದ -
ಶಇರವನ್ನು ಪೋಷಿಸುವದರಿಂದ, ಮೋಕ್ಷ ಪಡೆಯಬಹುದೆಂಬುವವರ ಗುಂಪಿಗೆ ನಾವು ಸೇರಬಾರದು.
ಆದ್ದರಿಂದ, ನಾವು ದೇಹ, ಲೋಕ ವಾಸನೆಯನ್ನು ಮರೆತುಬಿಡಬೇಕು. ಶಾಸ್ತ್ರ ವಾಸನ್ಯಲ್ಲಿರುವ,
ಪಾಠ ವ್ಯಸನ,ಶಾಸ್ತ್ರ ವ್ಯಸನ, ಅನುಷ್ಠಾನ ವ್ಯಸನ, ಇವುಗಳು, ನಾವೀಗಿರುವ ಸ್ಥಿತಿಯಲ್ಲಿ ಸ್ವಲ್ಪ ಇರುವುದು ಅವಷ್ಯವೇ. ಆದರೆ, ನಾವು ಇದನ್ನು ಮೀರಿ, ತ್ತಮ ಸ್ಥಿತಿಯನ್ನು ಹೊಂದಿಬಿಟ್ಟರೆ,, ನಾವು, ಶಾಸ್ತ್ರವ್ಯಸನವನ್ನು ಬಿಟ್ಟು, ನಿಧಿಧ್ಯಾಸನದಲ್ಲಿಯೇ, ಇದ್ದುಬಿಡಬಹುದು.. ಇದೇ, ಶಾಸ್ತ್ರದ ತತ್ವ. ಇದನ್ನರಿತು, ನಾವು ಸಾಧ್ಯವಾದಷ್ಟು ಮಟ್ಟಿಗೂ, ಅನುಷ್ಠಾನದಲ್ಲಿ ತಂದು,ಶ್ರೇಯಸ್ಸನ್ನು ಗಳಿಸಭೆಕು.
=======================================
ಅಧ್ಯಾಯ.೧೯.
==========
ಶ್ರದ್ಧೆ.
========
ಭಗವಂತನ ಮಹಿಮೆ ಅತ್ಯುತ್ತಮವಾದದ್ದು. ಅವನ ಮಹಿಮೆಯನ್ನು ನಮ್ಮಿಂದ ನುಡಿಗಳಿಂದ ವರ್ಣಿಸಲಸಾಧ್ಯ.
ಭಗವಂತನ ಮಹಿಮೆಯನ್ನು ಸಂಪೂರ್ಣವಾಗರಿತವರೇ, ಎನ್ನುವ ಪ್ರಶ್ನೆಗೆ, ಶ್ರಿ.ಪುಷ್ಪದಂತ ಎಂಬ ಕವಿಗಳು;
’ಭಗವಂತನ ಮಹಿಮೆಯನ್ನು ಪೂರ್ಣವಾಗಿ ಅರಿತವರೇ, ಅವನನ್ನು ಸ್ತುತಿಸಬೇಕೆಂದರೆ, ಬ್ರಹ್ಮನಿಂದಲೂ, ಸ್ತುತಿಸಲು ಸಾಧ್ಯವಿಲ್ಲ.. ಇದಕ್ಕೆ ಕಾರಣ, ಬ್ರಹ್ಮನಿಂದಲೂ, ಭಗವಂತನ ಮಹಿಮೆಯನ್ನು ಪೂರ್ಣವಾಗಿ ತಿಳಿದುಕೊಳ್ಳಲು ಶಕ್ತಿಯಿಲ್ಲ. ’ಅವನವನ ಯೋಗ್ಯತೆಯನ್ನರಿತು, ಅವನವನು ಸ್ತುತಿಸಬಹುದೆಂದಾರೆ,’ ನನ್ನ ಯೋಗ್ಯತೆಯನ್ನರಿತು, ನಾನೂ ಸ್ತುತಿಸುವುದಕ್ಕೆ ಅವಕಾಶವಿದೆ’,ಎನ್ನುತ್ತಾರೆ.. ಹೀಗೆ, ಪುಷ್ಪದಂತರು ಹೇಳಿದ ರೀತಿಯಲ್ಲಿ ಮತ್ತೊಬ್ಬ ಕವಿ,
ವಪುಃಬ್ರಾತುರ್ಭಾವಾದನುಮಿತಮಿತಂ ಜನ್ಮನಿ ಪುರಾ ಪುರಾರೇ ನ ಕ್ವಾಪಿಕ್ವಚಿದಪಿ ಭವಂತಂ ಪ್ರಣತವಾನ್
ನಮನ್ ಮುಕ್ತಃ ಸಂಪ್ರತ್ಯಃಮದನುರಗ್ರೇಪ್ಯನತಿಮಾನ್ ಇತೀಚ ಕ್ಷಂತವ್ಯಂ ದದಿತಮಪರಾಧದ್ವಯಮಪಿ’
ಎಂದು ಭಗವಂತನ ಮಹಿಮೆಯ ಬಗ್ಗೆ ಹೇಳಿದರು. ಭಗವಂತ,’ ನನ್ನ ಹಿಂದಿನ ಜನ್ಮದಲ್ಲಿ ನಾನು ಒಂದು ನಮಸ್ಕಾರವನ್ನೂ, ಮಾಡಲಿಲ್ಲ.. ಮುಂದಿನ ಜನ್ಮದಲ್ಲೂ, ಒಂದು ನಮಸ್ಕಾರವನ್ನೂ, ಮಾಡುವುದಿಲ್ಲ. ನನ್ನ ಈ ಎರಡು ಅಪರಾಧಗಳನ್ನೂ, ನೀನು ಕ್ಷಮಿಸಬೇಕುಎಂದು, ಆ ಕವಿಗಳು ಮೇಲೆ ಹೇಳಿದ ಶ್ಲೋಕದಲ್ಲಿ ಹೇಳಿದ್ದಾರೆ.’
ಏಕೆ ಈ ಕವಿಗಳು ಹೀಗೆ ಹೇಳಿದ್ದಾರೆ..’ ’ನಾವು ಹೃದಯ ಕರಗಿ, ಭಗವಂತನಿಗೆ, ಒಂದೇ ಒಂದು ನಮಸ್ಕಾರವನ್ನು ಹಾಕಿದರೂ, ಭಕ್ತನಿಗೆ ಮೋಕ್ಷವೇ ಸಿಕ್ಕಿಬಿಡುತ್ತದೆ.,’ ಎಂಬುದು ಆ ಕವಿಗಳ ತೀರ್ಮಾನ. ಮೋಕ್ಷ ಲಬ್ವ್ಯವಾಧರೆ, ಮತ್ತೆ, ಶರೀರವು ಬರುವುದಿಲ್ಲ.. ಈಗ ಶರೀರ ಬಂದಿರುವುದರಿಂದ, ಅವರು ಹಿಂದಿನ ಜನ್ಮದಲ್ಲಿ ಭಗವಂತನಿಗೆ, ಒಂದು ನಮಸಾರ ಮಾದಿಲ್ಲ ಎಂದು ಊಹಿಸಿಕೊಂಡರು.. ಈಗ ನಮಸ್ಕಾರವನ್ನು ಮಾಡಿರುವುದರೀಂದ, ಮುರುಜನ್ಮ ಬರುವುದಿಲ್ಲವೆಂಬ ನಂಬಿಕೆಯೂ ಅವರಿಗೆ. ಅದ್ದರಿಂದ ಮುಂದಿನ ಜನ್ಮದಲ್ಲೂ, ನಮಸ್ಕಾರ ಮಾಡುವುದಿಲ್ಲವೆಂದು ತಿಳಿಸಿದರು. ಈ ಶ್ಲೋಕದ ಸಾರಾಂಶ, ’ಭಗವಂತನು ಅಂತಹ ಅಗಾಧ ಮಹಿಮೆ-ಯುಳ್ಳವನೆಂದು ತಿಳಿಸುವುದೇ.’ ಇಷ್ಟು ಮಹಿಮೆಯುಳ್ಳ ಭಗವಂತನ ವಿಷಯದಲ್ಲಿ, ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು,
ಮುಹೂರ್ತಮಾತ್ರೇ ಅಧಿಕ್ರಾಂತೇ ಭಗವತ್ಚಿಂತನಂ ವಿನಾ ತಸ್ಯಬಿರ್ಮುಶಿತೇನೇವ ಯುಕ್ತಮಾರಂತಿತಂ ಧ್ರುವಂ
ಎಂಬ ಶ್ಲೋಕದಲ್ಲಿ ಹಿರಿಯರು ಹೇಳಿದ್ದಾರೆ. ಈಶ್ವರನ ನೆನಪಿಲ್ಲದೆ, ಒಂದು ಮುಹೂರ್ತ[೪೮ ನಿಮಿಷಗಳು],ಕಳೆದುಬಿಟ್ಟರೆ,ನಮ್ಮ ಹಣವನ್ನು ಕಳ್ಳರು ದೋಚಿಕೊಂಡು ಹೋದರೆ ನವು ಎಷ್ಟು ದುಃಖ ಪಡುತ್ತೇವೆಯೋ, ಅಷ್ಟು ದುಃಖ ಪಡಬೇಕು. ಇದು ನಾವಿರಬೇಕಾದ ಸ್ಥಿತಿ. ಆದರೆ, ನಾವು ದಿನದಲ್ಲಿ ಒಂದು ಮುಹೂರ್ತವೂ, ಭಗವಂತನನ್ನು ಚಿಂತಿಸುವುದಿಲ್ಲ.
’ಎಲ್ಲರಲ್ಲಿಯೂ, ಆಸ್ತಿಕತೆ ಇದೆ. ಪರಂಪರೆಯಾಗಿ ಬಂದ ದೈವ ಭಕ್ತಿಯಿದೆ. ಆದ್ದರಿಂದ ಎಲ್ಲರೂ, ದೇವತಾರ್ಚನೆಯನ್ನೋ, ಶಿವಪೂಜೆಯನ್ನೋ, ವಿಷ್ನು ಸಹಸ್ರೆನಾಮ ಪಾರಾಯಣವನ್ನೋ. ಇಟ್ಟುಕೊಂಡಿದ್ದಾರೆ.. ಹೀಗಿರಲು, ’ಒಂದು ಮುಹೂರ್ತವೂ,ನೀವು ದೇವರನ್ನು ನೆನೆಯುವುದಿಲ್ಲವೆಂದರೆ, ಅದು ಹೇಗೆ ಸರಿ.ಎಂದು ಕೆಲವರು ಪ್ರಶ್ನಿಸಿದರೆ, ಅದಕ್ಕೆ ಇದೇ ಉತ್ತರ.
’ನಾವು ಪೂಜಿಸುವ ಸಮಯದಲ್ಲಾಗಲಿ, ಪಾರಾಯಣ ಸಮಯದಲ್ಲಾಗಲಿ, ನಮ್ಮ ಮನ ಅದರಲ್ಲಿ ಲೀನವಾಗಿರುತ್ತದೆಯೇ;.
ಅಥವಾ, ಬೇರೆಲ್ಲಾದರೂ, ಯೋಚನೆ ಹೋಗುತ್ತದೆಯೇ.’ಮನವು ಬೇರೇನನ್ನೂ ಯೋಚಿಸದೆ, ಈಶ್ವರನ ಚಿಂತೆಯಲ್ಲಿಯೇ ಲೀನವಾಗಿದೆ ಎಂದು’,’ ಯಾವ ಸಮಯದಲ್ಲಿ ನಿಶ್ಚಯವಾಗಿ ನಂಬಿಕೆಯಿಂದ ಹೇಳುತ್ತೇವೋ,.ಆ ಸಮಯವನ್ನು ಭಗವತನನ್ನು ಚಿಂತಿಸಿದ ಸಮಯವಾಗಿ ತೆಗೆದುಕೊಳ್ಳಬಹುದು,’
. ಈ ಲೆಕ್ಕದ ಪ್ರಕಾರ,’ ನಾವು ಒಂದು ಮುಹೂರ್ತವೂ, ಭಗವಂತನನ್ನು ಚಿಂತಿಸಲಿಲ್ಲ’ ಎಂದು ಹೇಳುತ್ತೇನೆ.[ಗುರುಗಳು].
ಕಾರಣ ಅದರ ಫಲವೇ ಅಪೂರ್ವ. ಹೀಗಲ್ಲದೆ,’ ಮತ್ತವರು ನಮ್ಮ ಪೂಜೆ, ಪಾರಾಯಣವನ್ನು ಗಮನಿಸಬೇಕು, ಅವರಿಗೆ ಹೇಳಬೇಕೆಂದರೆ ಅದು ಪ್ರಯೋಜನವಾಗುವುದಿಲ್ಲ.. ಭಗವಂತನು,ಭಗವದ್ಗೀತೆಯಲ್ಲಿ, ಶ್ರೀ ಅರ್ಜುನನಿಗೆ ಉಪದೇಶಿಸಿದ ಸಮಯದಲ್ಲಿ;
’ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಮ್ ಕೃತಂ ಚಯತ್ ಅಸ್ಥೀತುಚ್ಯತೇ ಪಾರ್ಥ ನ ತತ್ ಪ್ರೇತ್ಯ ತೋ ಇಹ’
ಎಂಬ ಒಂದು ಮುಖ್ಯವಾದ ವಿಷಯವನ್ನು ಹೇಳಿದನು. ’ಶ್ರದ್ಧೆ ರಹಿತ ಯಾಗವೋ, ತಪಸ್ಸೋ, ದಾನವೋ, ಯಾವ ಫಲವನ್ನೂ ಕೊಡುವುದಿಲ್ಲವೆನ್ನುತ್ತಾನೆ..
ಭಗವಂತನೇ, ಶ್ರದ್ಧೆಗೆ ಬಹಳ ಮಹತ್ವನೀಡಿದ್ದಾನೆ,ಎನಿಸುತ್ತದೆ. .
ಆದ್ದರಿಂದ ನಾವು ಮಾಡುವ ಕಾರ್ಯ ಶ್ರದ್ಧೆಯಿಂದ ಕೂಡಿದ್ದರೆ, ಅದರ ಫಲ ಅತ್ಯುತ್ಕೃಷ್ಠಬಾದದ್ದು.
ಶ್ರೀ ಸದಾಶಿವ ಬ್ರಹ್ಮ್ಮೇಂದ್ರರು’;
’ಪ್ರಾಕೃತ ಭೋಗಾವಸರೇ ತಾಮ್ಯಸಿಚೇತೊ ಮುದರ ಕುದೋ ಹೇತೋಃ ನ್ಯಗ್ರೋಧ ಬೀಜಮುಪ್ತ್ವಾ ಶೋಶನ್ನಿವ ನಾಮ್ರಮಸ್ಯೇತಿ;;’ಎಮ್ದು ಹೇಳಿದರು. ಮಾವಿನ ಹಣ್ಣು ಬೇಕೆಂದರೆ, ಮಾವಿನ ಬೀಜವನ್ನು ನೆಡಬೇಕು. ಅದು ಬಿಟ್ಟು,ಆಲದ ಬೀಜವನ್ನು ನೆಟ್ಟು, ಮಾವಿನ ಹಣ್ಣನ್ನು ಬಯಸಿದವನ ಕಥೆಯಂತಾಗುತ್ತದೆ.
ಅಂತೆಯೇ, ಹಿಂದಿನ ಜನ್ಮದಲ್ಲಿ ಅಧಿಕ ಪಾಪಗಳನ್ನು ಮಾಡಿ, ಈಗ ದುಃಖವನ್ನನುಭವಿಸುತ್ತಾ, ಯಾತಕ್ಕೆ ಈ ದುಃಖ ಬಂದಿದೆ, ಎಂದು ಪ್ರಲಾಪಿಸಿದರೆ, ಪ್ರಯೋಜನವೇನು.. ಆಯಾಯಾ ಕಾರ್ಯಗಳಿಗೆ, ಅದಕ್ಕೆ ತಕ್ಕ ಕಾರಣವಿರಬೇಕೇ ಹೊರತು, ಆ ಕೆಲಸಕ್ಕೆ,ವಿಪರೀತವಾದ ಕಾರಣದಿಂದ ಆ ಕಾರ್ಯವಾಗಲಿಲ್ಲ, ಎಂದು ದುಃಖಿಸುವುದು ನ್ಯಾಯವಲ್ಲ. ಅಂತೆಯೆ, ಅತ್ಯುತ್ತಮ ಫಲವನ್ನಪೇಕ್ಷಿಸಿ, ಅದಕ್ಕೆ ಸಂಭಂಧವಾದ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಿಲ್ಲವೆನ್ನುತ್ತೇವೆ. ಹಾಗಿರಲು,ಉತ್ತಮ ಫಲ ನಿರೀಕ್ಷಿಸಲು, ಹೇಗೆ ಸಾಧ್ಯ.. ಇದು ಬಹಳ ಮೌಡ್ಯವಾದದ್ದು.’ಶ್ರದ್ಧೆ ಎಂಬ ಪದಕ್ಕೆ, ಅತ್ಯಂತ ಸ್ಪಷ್ಟವಾದ ಅರ್ಥವನ್ನು, ಶ್ರೀ ಶಂಕರರು, ಶ್ರೀ ವಿವೇಕಚೂಡಾಮಣಿಯಲ್ಲಿ ಇತ್ತಿದ್ದಾರೆ.
ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯ ಬ್ದ್ಬುಧ್ಯಾ ವತಾರಣಾ ಸದಾ ಶ್ರದ್ಧಾ ಕಥಿತಾ ಸದ್ಭಿರ್ಯಯಾ ವಸ್ತೂಪಲಭ್ಯತೇ
ಎಂದರೆ, ಶಾಸ್ತದಲ್ಲಿಯೂ, ಆಚಾರ್ಯರ ವಾಕ್ಯದಲ್ಲ್ಲಿಯೂ, ಅಧಿಕ ನಿಜವೆಂಬ ನಂಬಿಕೆ ಇದ್ದರೆ, ಅದಕ್ಕೆ,;ಶ್ರದ್ಧೆ’ಎನ್ನುವರು....’ಶಾಸ್ತ್ರದಲ್ಲಿ ಹೀಗಿದೆ. ಅದು ಹಾಗೆಯೇ ನಡೆಯುತ್ತದೆ’, ಎಂಬ ತೀರ್ಮಾನವಿರಬೇಕು. ಕೆಲವರು, ಶಾಸ್ತ್ರದಲ್ಲಿ ಹೇಳಿದಂತೆ, ಎಲ್ಲವನ್ನೂ ಮಾಡಿದೆ’..ಆದರೆ, ಅದರಲ್ಲಿ ಹೇಳಿದ ಯಾವ ಕಾರ್ಯವೂ ಆಗಲಿಲ್ಲ ಎಂದು’ ಕೊರಗುವರು..ಇದಕ್ಕೆ ಕಾರಣ ಅದರಲ್ಲಿ ಶ್ರದ್ಧೆ ಇಲ್ಲದಿರುವುದೇ. ’ಶಾಸ್ತ್ರದಲ್ಲಿ ಏನೋ ಇದೆ. ಮಾಡಿದರೆ, ಏನಾಗುವುದೋ ತಿಳಿಯದು.’. ಮಾಡಿಯೇ ನೋಡೋಣ ಎಂಬ ಭಾವನೆಯೇ, ಅಧಿಕ ಜನರಲ್ಲಿದೆ. ಶಾಸ್ತ್ರದಲ್ಲಿ ಹೀಗೆ ಹೇಳಿದೆ.’
ಆಚಾರ್ಯರ ನುಡಿಯೂ, ಹೀಗೆಯೇ ಇದೆ. ಅದರಂತೆಯೇ ನಡೆಯುವುದು’ ಎಂಬ ಧೃಢ ನಂಬಿಕೆ ಇರಬೇಕು.
ಅದಕ್ಕಾಗಿಯೇ, ಭ್ಹಗವತ್ಪಾದರು, ’ಸತ್ಯಬುಧಾವತಾರಣಾ’ ಎಂಬ ಪದವನ್ನು ಬಳಸಿದ್ದಾರೆ. ಹೀಗೆ, ಧೃಢ ನಂಬಿಕೆಯೊಂದಿಗೆ, ಕಾರ್ಯಗಳಿಗೆಲ್ಲಾ, ಉತ್ಕೃಷ್ಠ ಫಲ ದೊರಕಿದೆ. ಇದರಲ್ಲಿ ಸಂದೇಹವಿಲ್ಲ. ಶ್ರೀ ಭಗವತ್ಪಾದರು, ನಮಗೆ ಉಪದೇಷಿಸುವಾಗ, ’ವೇದಂ ನಿತ್ಯಮದೀಯತಾಂ’ ಕರ್ಮ ಸ್ವಾನುಷ್ಠೀಯತಾಂ’.
ಒಬ್ಬನು ತನ್ನ ವೇದ ಶಾಖೆಯನ್ನು ದಿನವೂ ಅಭ್ಯಸಿಸಬೇಕು. ಅದರಲ್ಲಿ ವಿಧಿಸಲ್ಪಟ್ಟ ಕರ್ಮಗಳನ್ನು ಚೆನ್ನಾಗಿ ಅನುಷ್ಠಾನ ಮಾಡಬೇಕು ಎಂದಿದ್ದಾರೆ.. ’ಸ್ವಾನುಷ್ಠಿಯಂ’ ಎಂಬ ಪದದಲ್ಲಿ, ’ಸೂ’ ಎಂಬ ಪದವನ್ನೇಕೆ ಉಪಯೋಗಿಸಿದರು..’ಶ್ರದ್ಧೆಯೂ ಇರಬೇಕೆಂದು ತಿಳಿಸುವದಕ್ಕಾಗಿಯೇ. ಹೀಗೆ ಶ್ರದ್ಧೆಗೆ ನಮ್ಮ ಶಾಸ್ತ್ರದಲ್ಲಿ ಪ್ರಾಧಾನ್ಯವು ಒಂದೊಂದು ಕಡೆಯೂ ಕೊಡಲ್ಪಟ್ಟಿದೆ.
.
ನಮ್ಮ ಹಿರಿಯರು ಶ್ರದ್ಧೆಯಿಂದ ಕೆಲಸಗಳನ್ನು ಮಾಡಿ ನಮಗೆ ಒಳ್ಳೆಯ ದಾರಿ ತೋರಿಸಿದ್ದಾರೆ. ಶಂಕರಭಗವತ್ಪಾದರ ಅವತಾರದನಂತರ
ಶ್ರೀ ಶಂಕರಭಗವತ್ಪಾದರನಂತರ ಗುರು ಪರಂಪರೆಯಲ್ಲಿ ಬಂದ ಒಬ್ಬೊಬ್ಬ ಗುರುಗಳಿಗೂ, ತಮ್ಮ ಗುರುಗಳ ಬಗ್ಗೆ ಇದ್ದ ಭಕ್ತಿ ಶ್ರದ್ಧೆ ಅಪಾರವಾದದ್ದು.. ನಮ್ಮ [ಗುರುಗುಗಳು] ಪರಮ ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳಿಗೆ,ಪೂರ್ವಾಶ್ರಮದಲ್ಲಿ, ಸುಂದರ ಕಾಂಡವನ್ನು ಪಾರಾಯಣ ಮಾಡುವ ಹವ್ಯಾಸವಿದ್ದಿತು. ಸುಂದರಕಾಂಡ ಪಾರಾಯಣ ಮಾಡುವ ಸಮಯದಲ್ಲಿ ಸುಂದರ ಕಾಂಡ ಪಾರಾಯನ ಮಾದುವ ಸ್ಥಸದಲ್ಲಿ ಶ್ರೀ ಹನುಮನು ನಿಶ್ಚಯವಾಗಿ ಬಂದು ಬಂದಿರುವರು, ಎಂಬ ವಿಷಯವನ್ನು ಅವರ ಹಿರಿಯರಿಂದ ಕೇಳಿ ತಿಳಿದಿದ್ದರು.. ಆದ್ದರಿಂದ ಪಾರಾಯಣದ ಪಕ್ಕದ ಪೀಠದಲ್ಲಿ, ಮತ್ತೊಂದು ಆಸನವನ್ನು ಹಾಕಿಡುತ್ತಿದ್ದರು.. ಸಾಮಾನ್ಯರಿಗೆ, ಅದು ಬರೀ ಪೀಠವಾಗಿದ್ದರೂ, ಅವರಿಗೆ, ಅದರಲ್ಲಿ ಶ್ರೀ ಹನುಮನು ಬಂದು ಕುಳಿತು ಕೇಳುವನೆಂಬ ಭಾವನೆಯಿದ್ದಿತು.. ಶ್ರದ್ಧೆಯ ಪರಿಧಿಗೆ ಇದಕ್ಕಿಂತ ಉದಾಹರಣೆ ಬೇಕೇ. ಆದ್ದರಿಂದ, ನಾವು ನಮ್ಮ ಹಿರಿಯರು ತೋರಿದ ದಾರಿಯಲ್ಲಿ ನಡೆಯದಿದ್ದರೆ ನಮ್ಮ ತಪ್ಪು.
ನಾವು ಮಾಡುವ ಕಾರ್ಯಗಳು, ಸ್ವಲ್ಪ ಸ್ಥಳ, ಕಾಲ, ಮುಂತಾದುವುಗಳ ವೆತ್ಯಾಸದಿಂದ, ಶಾಸ್ತ್ರದಲ್ಲಿ ಹೇಳಲ್ಪಟ್ಟಂತೆ,ಸ್ವಲ್ಪಲ್ಲೋಪದೋಷಗಳು ಬಂದಿರಬಹುದು.. ಆದರೆ, ಶ್ರದ್ಧೆಯಿದ್ದರೆ, ನಮ್ಮ ಕಾರ್ಯಗಳಿಗೆ ನಿಶ್ಚಯವಾಗಿ ಫಲ ದೊರಕುತ್ತದೆ..ಈ ವಿಷಯವನ್ನು ಶ್ರೀ ಭಗವದ್ಗೀತೆಯಲ್ಲಿ ನೋಡಬಹುದು.ಶ್ರೀ ಕೃಷ್ಣನು, ಅರ್ಜುನನಿಗೆ,
ಅನುಷ್ಠನ ಮಾಡುವ ವಿಧಾನವನ್ನು ಹೇಳಿದೊಡನೆ, ಅರ್ಜುನನಿಗೆ,
ಅಯತಿ ಶ್ರದ್ಧಯೋಪೇತಾಃ ಯೋಗಾಚ್ಚಲಿತ ಮಾನಸಃ
ಅಪ್ರಾಪ್ಯ ಯೋಗ ಸಮ್ಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಚತಿ,ಶ್ರೀ ಕೃಷ್ಣ, ಒಬ್ಬನು ಶ್ರದ್ಧೆಯಿಂದ ಯೋಗವನ್ನು ಅನುಷ್ಠಾನವನ್ನು ಮಾಡುತ್ತಾನೆ. ಆದರೆ, ಯವುದೋ ಒಂದು ಕಾರಣ ಅವನ ಮನ ಯೋಗದಿಂದ ಜಾರಿಬಿಡುತ್ತದೆ. ಯೋಗವನ್ನು ಹೊಂದದ ಅಂತಹ ವ್ಯಕ್ತಿಯ
ಗತಿ ಏನಾಗುತ್ತದೆ, ಎಂಬ ಸಂದೇಹವೊಂದು ಬಂದಿತು.’ಶ್ರದ್ಧೆಯಿಂದ ಯೋಗವನ್ನು ಅಭ್ಯಸಿಸುತ್ತಿದ್ದ ಸಮಯದಲ್ಲಿ ವ್ಯಕ್ತಿಯೊಬ್ಬನಿಗೆ, ತಡೆ ಏರ್ಪಟ್ಟು, ಪೂರ್ಣವಾಗಿ ಮಾಡಲಾಗಲಿಲ್ಲ. ಅಂತಹವನಿಗೆ,ಸಂಪೂರ್ಣವಾಗಿ, ಯೋಗವನ್ನು,ಅಭ್ಯಸಿಸಲು, ಸಾಧ್ಯವಾಗದ್ದರಿಂದ ಅದರ ಫಲವನ್ನು ಗಳಿಸಲಾಗುವುದಿಲ್ಲವೆಂಬುದು ನಿಶ್ಚಯವೇ. ಅವನು ಮಾಡಿದ ಯೋಗವೆಲ್ಲವೂ, ನಿಷ್ಪ್ರಯೋಜಕವಾಗುವುದೇ, ಎಂಬ, ಪ್ರಶ್ನೆಗೆ ಶ್ರೀ ಕೃಷ್ನನು ಉತ್ತರವಾಗಿ;
’ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯವಿದ್ಯತೇ ನ ಹಿ ಕಲ್ಯಾಣ ಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಚತಿ’
’ಒಳ್ಳೆಯ ಕಾರ್ಯವನ್ನು ಮಾಡುವ ಯಾವ ವ್ಯಕ್ತಿಗೂ ಕೇಡಾಗುವುದಿಲ್ಲ. ಅವನಿಗೆ, ಯಾವಾಗಲೂ, ಒಳ್ಳೆಯದೇ ಆಗುತ್ತದೆ ಎನ್ನುತ್ತಾನೆ. ಇದರಲ್ಲಿ ಸ್ವಾರಸ್ಯದ ವಿಷಯವೆಂದರೆ, ಅರ್ಜುನನ ಪ್ರಶ್ನೆಯಲ್ಲಿ, ’ಶ್ರದ್ಧಯೋಪೇತಃ’ ಎಂಬುದರಲ್ಲಿದೆ.
’ಶ್ರದ್ಧೆಯಾಗಿ ಕಾರ್ಯ ಮಾಡಿದವನ ಗತಿಯೇನು,’ ಎಂಬುದೇ, ಅರ್ಜುನನ ಪ್ರಶ್ನೆ. ಈ ಜನ್ಮದಲ್ಲಿ, ಯಾವುದೋ ವಿಧಾನದಿಂದ ಯೋಗಬ್ರಷ್ಠನಾದರೂ- ,
, ಮರು ಜನ್ಮದಲ್ಲಿ ಪರಿಶುದ್ಧ ವ್ಯಕ್ತಿಗಳ, ಗೃಹದಲ್ಲೋ, ಅಥವಾ ಅತ್ಯುತ್ತಮ ಯೋಗಿಗಳ ವಂಶದಲ್ಲೋ, ಜನಿಸುತ್ತಾನೆ, ಎನ್ನುತ್ತಾನೆ.
.
’ಶುಚೀನಾಮ್ ಶ್ರೀಮತಾಂ ಗೇಹೆ ಯೊಗಭ್ರಷ್ಠೊಭಿಜಾಯತೇ ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಂ
ಏತತ್ತಿ ದುರ್ಲಭತರಂ ಲೋಕೇ ಜನ್ಮ ಯತೀದೃಶಂ
ಎಂಬುದು ಭಗವಂತನ ನುಡಿಗಳು. ಆದ್ದರಿಂದ ಯಾವ ಕಾರ್ಯದಲ್ಲೂ ’ಶ್ರದ್ಧಾಲೋಪವಿರಬಾರದು.’ ಶಾಸ್ತ್ರದಲ್ಲಿ,, ಒಂದು ದೊಡ್ಡ ವೈದೀಕ ಕಾರ್ಯ ಮಾಡಿದರೆ, ಅದಕ್ಕೆಷ್ಟು ದಕ್ಷಿಣೆ ಕೊಡಬೇಕೆಂದು ಹೇಳಲಾಗಿದೆ. ಅಶ್ಟು, ಕೊಡಲಾಗದಿದ್ದರೆ,, ಯಥಾಶಕ್ತಿ ಕೊಡಬಹುದೆಂದುಶಾಸ್ತ್ರದಲ್ಲಿಯೇ. ಶ್ರೀ ಬೋಧಾಯನರು,;
ಮಹಾನ್ಯಾಸ ಪುರಸ್ಸರ ಅಭಿಶೇಕಕ್ಕೆ, ಸಂಗತಾ ಸಿದ್ಧಿಗಾಗಿದಕ್ಷಿಣೆ ದ್ ಹೇಗೆ ಕೊಡಬೇಕೆಂಬುದಕ್ಕೆ;
ದಶಕಾಃ ವೈತ್ಸರಃ ಸಪಯಸಃ ಸ್ವರ್ಣ ಶೃಂಗೀಃ
ಮೌಕ್ತಿಕವಾಲಾಃ ರೌಪ್ಯಕುರಾಃ ದದ್ಯಾತ್
ಅಥವಾ ಎಕಾಂ ಕಾಂ ದದ್ಯಾತ್ ಏಕಾದಶ ಬ್ರಾಹ್ಮಣಾನ್ಭೋಜಯೇತ್
ಅಶ್ವಮೇಧಶತಕ್ರತುಫಲಮವಾಪ್ನೋತಿ ಇತ್ಯಾಹ ಭಗವಾನ್ ಬೋಧಾಯನಃ
ಎಂದು ಹೇಳುತ್ತಾರೆ.
ಕೊಂಬಿಗೆ ಸ್ವರ್ಣ,ಕಾಲಿಗೆ ಬೆಳ್ಳಿ, ಬಾಲಕ್ಕೆ ಮುತ್ತು, ಎಂದು, ಹೀಗೆ ಅಲಂಕರಿಸಲ್ಪಟ್ಟ, ಚೆನ್ನಾಗಿ ಹಾಲು ಕರೆಯುವ,ಹತ್ತು ಹಸುಗಳನ್ನು , ಕರುಗಳೊಂದಿಗೆ, ದಾನ ಮಾಡಬೇಕು. ಹಾಗಿಲ್ಲದಿದ್ದರೆ,’ ಏಕಾಂ ಗಾಂ ದದ್ಯಾತ್’ಒಂದು ಹಸುವನ್ನು ದಾನ ಮಾಡಬೇಕೆಂದರು.. ಅವನ ಯೋಗ್ಯತೆಗೆ ತಕ್ಕಂತೆ, ಒಂದು ಹಸುವನ್ನು ದಾನ ಮಾಡಬಹುದು,
ಅಥವಾ, ಹತ್ತು ಬ್ರಾಹ್ಮಣರಿಗೆ ಭೋಜನ ಹಾಕಬಹುದೆಂದು ಶಾಸ್ತ್ರದಲ್ಲಿ ಅವಕಾಶವನ್ನಿತ್ತಿದ್ದಾರೆ. ಆದರೆ, ಶ್ರದ್ಧೆಯನ್ನು ಕಮ್ಮಿಮಾಡಿಕೊಳ್ಳಬೇಕೆಂದು ಯಾವ ಶಾಸ್ತ್ರದಲ್ಲೂ ಹೇಳಿಲ್ಲ.. ಇದರಂತೆ, ಶ್ರದ್ಧೆಯಿಂದ, ನಾವು ನಮ್ಮ ಕಾರ್ಯಗಳನ್ನು ಮಾಡಿಕೊಂದು ಬಂದರೆ, ಅತ್ಯುನ್ನತ ಫಲವನ್ನು ಪಡೆಯಬಹುದು ಎಂಬುದು ಶಾಸ್ತ್ರ ಮತ್ತು ಹಿರಿಯರ ಉಪದೇಶ
ಎಂದು ಹೇಳಿ, ಗುರುಗಳು ಅವರ ಉಪನ್ಯಾಸವನ್ನು ಮುಗಿಸುತ್ತಾರೆ.
ಅಧ್ಯಾಯ-೨೦.
==========
ಗುರುವಿನ ಅವಶ್ಯ.
============
ನಮ್ಮ ಭಾರತ ದೇಶದ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವನ್ನು ಕೊಡಲ್ಪಡುತ್ತಿದೆ. ಗುರುವಿನ ಅನುಗ್ರಹವಿಲ್ಲದೆ, ಯಾರೂ ಬಾಳಿನ ಗುರಿಯನ್ನು ಸಾಧಿಸಲಾಗುವುದಿಲ್ಲ. ನಾವೆಲ್ಲರೂ ಮೊಕ್ಷವನ್ನು ಅಪೇಕ್ಷಿಸುತ್ತೇವೆ.
ಅದನ್ನು ಹೊಂದಲು ಙ್ಯಾನ ಅವಶ್ಯವಾಗುತ್ತದೆ.
’ತಮೇವ ವಿದಿತ್ವಾದಿಂರುದ್ಯುಮೇತಿ ನಾನ್ಯಃ ಬಂಧಾ ವಿದ್ಯತೇಯಾನಯ
’ಫರಮಾತ್ಮನನ್ನು ಅರಿತರೆ ಮಾತ್ರ ನಮಗೆ ಸಾವಿನಿಂದ ತಪ್ಪಬಹುದು,’ ಎಂಬುದೇ ಇದರರ್ಥ. ಶಾಸ್ತ್ರದಲ್ಲಿ ಹಲವು ವಿಧವಾದ ಕರ್ಮಗಳನ್ನು ತಿಳಿಸಲಾಗಿದೆ.. ಆದರೆ, ಅವುಗಳನ್ನು ಮಾಡುವುದರ ಮೂಲಕ ಒಬ್ಬನು ಙ್ಯಾನವನ್ನು ಪಡೆಯಲಾಗುವುದಿಲ್ಲ.. ಕೆಲವರು ಙ್ಯಾನ-ಕರ್ಮಗಳು ಸೇರಿ ಮೋಕ್ಷಪ್ರಾಪ್ತಿಯಾಗುತ್ತದೆ, ಎನ್ನುತ್ತಾರೆ. ಇಂತಹ ಅವರ ವಾದಕ್ಕೆ ಙ್ಯಾನ-ಕರ್ಮ ಸಮುಚ್ಚಯ ವಾದವೆಂದು ಹೆಸರು.. ಶ್ರೀ ಭಗವತ್ಪಾದರ ವಾದಗಳಲ್ಲಿ, ’ಈ ವಾದವು ಮತ್ತೆ-ಮತ್ತೆ, ಖಂಡಿಸಲ್ಪಡುತ್ತದೆ. ಙ್ಯಾನದಿಂದ ಮೋಕ್ಷವನ್ನು ಪಡೆಯಬಹುದೆನ್ನುವ ವಾದಕ್ಕೆ, ಈ ಙ್ಯಾನ-ಕರ್ಮ ಸಮುಚ್ಚಯ ವಾದವು ವಿರೋಧವಾಗಿದೆ’. ಸರಿ,’ ಙ್ಯಾನವನ್ನು ಪಡೆಯುವುದು ಹೇಗೆ.’ ಶಾಸ್ತ್ರಾಧ್ಯಯನದಿಂದ ಮಾತ್ರ ಙ್ಯಾನ ಬರುವುದಾ. ಬರುವುದಿಲ್ಲ.. ಙ್ಯಾನವು ಗುರುವಿನ ಮೂಲಕ ಮಾತ್ರ ಬರುವುದು. ಮಹಾತ್ಮರು, ಶಾಸ್ತ್ರವೇತ್ತರು,’ಙ್ಯಾನಿಗಳನ್ನು ಹುಡುಕಿ,ನಮಗೆ ತತ್ವೋಪದೇಶಗಗಳನ್ನು ಉಪದೇಶಿಸಿರಿ ಎಂದು ವಿನಾಂತಿಸಿಕೊಲ್ಲುವುದನ್ನು’ ನಾವು ನೋಡಿದ್ದೇವೆ. ಶಿಷ್ಯರುಗಳಾಗಿ ಹೋಗುವ ಋಷಿಗಳು ಎಷ್ಟೇ ಶಾಸ್ತ್ರದಲ್ಲಿ ಪರಿಣಿತರಾದರೂ,’ ಙ್ಯಾನಾರ್ಜನೆ ಗುರುವನ್ನು ಅರಸುವ ಮೂಲಕವೇ..’
ಆಚಾರ್ಯಾತ್ಯೈವ ವಿದ್ಯಾ ವಿದಿತಾ ದಿಷ್ಟಂ ಪ್ರಯಾತ್-
’ಗುರುವಿನ ಮುಖಾರವಿಂದದಿಂದ ಬರುವ ಙ್ಯಾನವೇ ಫಲವೀಯುತ್ತದೆ. ಗುರುವಿಲ್ಲದೆ, ಎಷ್ಟು ಪುಸ್ತಕವನ್ನೋದಿದರೂ ಜ್ಞ್ಯಾನ ಗಳಿಸಲು ಸಾಧ್ಯವಿಲ್ಲ.. ಯಾವ ವಿಷಯವನ್ನು ತೆಗೆದುಕೊಂಡರೂ, ಆದು ವಿಷಯಗಳುಳ್ಳ ಹಳೆಯದಾದ ಸಂಪ್ರದಾಯವನ್ನು ಗುರುವಿನ ಮಾತ್ರ ಅರಿಯಬಹುದು.. ಗುರುವಿನ ಮಹತ್ವವನ್ನು ತಿಳಿಸುವ ಉದಾಹರಣೆಯನ್ನು ಈಗ ನೋಡೋಣ..
’ಒಬ್ಬನನ್ನೂ ಯೋಗಿಯೆಂದೂ, ಮಹಾತ್ಮನೆಂದೂ, ಜನರು ನೆನೆದು ಬಂದರು. ಅವನು ಬೆಳಿಗ್ಗೆ ನಿದ್ರಿಸಿ, ರಾತ್ರಿ ಎದ್ದಿರುವನು..ಯಾರೋ ಒಬ್ಬರು, ಅವನ ಬಳಿ ತೆರಳಿ, ’ಮಹಾತ್ಮರೇ, ನೀವೇಕೆ ಹೀಗೆ ನಡೆದುಕೊಳ್ಳುತ್ತೀದ್ದೀರಿ. ಸಾಮಾನ್ಯವಾಗಿ,ಒಬ್ಬನು ಹಗಲಿನಲ್ಲಿ ಎಚ್ಚರವಾಗಿದ್ದು, ಇರುಳಿನಲ್ಲಿ ಮಲಗುತ್ತಾರೆ.. ನಿಮ್ಮ ನಡವಳಿಕೆ ಇದಕ್ಕೆ ವಿರೋಧವಾಗಿದೆಯಲ್ಲಾ,’ ಎಂದು ಕೇಳಿದರು.. ಅದಕ್ಕೆ, ಆ ಯೋಗಿ, ’ಬೆಳಗಿನಲ್ಲಿ ಮಲಗಿರಬೇಕು, ರಾತ್ರಿಯಲ್ಲಿ ಎಚ್ಚರವಾಗಿರಬೇಕೆಂದು, ಶ್ರೀ ಕೃಷ್ಣ ಹೇಳಿದನಲ್ಲಾ,” ಎಂದನು.ಶ್ರೀ ಕೃಷ್ಣ ಜಗದ್ಗುರುತಾನೇ, ಇದೋ, ಅವರ ಬಗ್ಗೆ,
’ವಸುದೇವ ಸುತಂ ದೇವಂ ಕಂಸಚಾಣೂರ ಮರ್ಧನಂ ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ಎಂದು ಹೇಳಲ್ಪಟ್ಟಿದೆ.. ಆದ್ದರಿಂದ ಜಗದ್ಗುರು ಶ್ರೀ ಕೃಷ್ಣ ಹೇಳಿದ್ದನ್ನು ಅನುಸರಿಸುತ್ತಿದ್ದೇನೆ ಎಂದನು.
ಅದನ್ನು ಕೇಳಿದ ಮನುಷ್ಯನು,, ಶ್ರೀ ಕೃಷ್ಣನು,’ ಯಾವ ಭಾಗದಲ್ಲಿ ಆ ರೀತಿ ಉಪದೇಶಿಸಿದ್ದಾನೆ’ ಎಂದನು.
ಅದಕ್ಕೆ, ಆ ಯೋಗಿ, ’ಈ ಉಪದೇಶವು ಗೀತೆಯಲ್ಲಿಯೇ ಇದೆ.
’ಯಾ ನಿಶಾ ಸರ್ವಭೂತಾನಾಂ ತಸ್ಯಾತ್ ಜಾಗ್ರತಿ ಸಂಯಮಿ ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ’ಎಂಬುದೇ ಅದು.’ ಎಲ್ಲಾ ಜೀವಿಗಳೂ ಮಲಗಿರುವಾಗ ಯೋಗಿಯು ಎಚ್ಚರದಿಂದಿರುತ್ತಾನೆ. ಎಲ್ಲಾ ಜೀವಿಗಳೂ ಎಚ್ಚರವಾಗಿರುವಾಗ ಯೋಗಿಯು ಮಲಗಿರುತ್ತಾನೆ,’ ಎಂದನು.
ಯೋಗಿಯ ಬಳಿ, ಆ ಮನುಶ್ಯನು, ;’ಈ ಶ್ಲೋಕಕ್ಕೆ ಇದೇ ಅರ್ಥವೆಂದು ನಿಮಗೆ ಹೇಗೆ ಗೊತ್ತು’ ಎಂದು ಕೇಳಲು, ’ನನಗೆ ವ್ಯಾಕರಣ ಗೊತ್ತು.. ವ್ಯಾಕರಣದಿಂದ ಈ ಅರ್ಥ ತಿಳಿಯಿತು’ ಎಂದನು. ’ನೀನು ವ್ಯಾಕರಣವನ್ನು ಅರಿತಿರುವುದರಿಂದ, ಶಾಸ್ತ್ರದ ಅರ್ಥ ತಿಳಿಯುವುದಿಲ್ಲ.. ನಿಜವಾದ ಅರ್ಥ ತಿಳಿಯಲು ಸಂಪ್ರದಾಯವನ್ನರಿತಿರಬೇಕು. ಭಗವದ್ಗೀತಾ ಭಾಷ್ಯದಲ್ಲಿ, ಶ್ರೀ ಶಂಕರರು, ’ಅಸಂಪ್ರದಾಯವಿತ್ ಸರ್ವ ಶಾಸ್ತ್ರ ವಿತಪ ಮೂರ್ಖವದೈವೋಪೇಕ್ಷಣೀಯಃ-
ಎಂದು ಹೇಳಿದ್ದಾರೆ.’ಒಬ್ಬನು ಎಷ್ಟೇ ಶಾಸ್ತ್ರದಲ್ಲಿ ನುರಿತವನಾಗಿದ್ದರೂ, ಅವನಿಗೆ ಪರಂಪರೆಯ ಅರಿವಿಲ್ಲದಿದ್ದರೆ,ಅವನನ್ನು ದೂರವಿಡಬೇಕು.. ’ನೀವು ವ್ಯಾಕರಣಾವನ್ನರಿತವರಾದರೂ, ಸಂಪ್ರದಾಯದ ಅರಿವಿಲ್ಲಾವರಾಗಿದ್ದಿರಿ..’ಭಗವಂತನು ಹೇಳಿದ ತಾತ್ಪರ್ಯವೇ ಬೇರೆ’ ಎಂದನು.
ಆತ್ಮ ಜ್ಞಾನ ಸಾಧಾರಣ ಜನಗಳಿಗಿರುವುದಿಲ್ಲ. ಆದರೆ,ಇಂದ್ರಿಯಗಳನ್ನಡಗಿಸಿದ ಯೋಗಿಗಳಿಗಿರುತ್ತದೆ.
’ಯಾ ನಿಶಾ ಸರ್ವಭೂತಾನಾಂ ತಸ್ಯಾತ್ ಜಾಗರ್ತಿ ಸಂಯಮಿ’
’ನಿಜವಾದ ಯೋಗಿ, ಸಾಧಾರಣ ಜನಗಳು ಯಾವುದನ್ನು ಅರಿಯದೇ, ಇದ್ದಾರೋ, , ಅದನ್ನು ಅರಿತಿದ್ದಾನೆ’.ಇದೇ ಶ್ಲೋಕದ ತಾತ್ಪರ್ಯ. ಈ ಅರ್ಥವು ನಮಗೆ ಸಂಪ್ರದಾಯ ತಿಳಿದಿದ್ದರೆ ಮಾತ್ರ ತಿಳಿಯುತ್ತದೆ. ಸಂಪ್ರದಾಯವನ್ನರಿಯಲು,ಗುರುವಿನ ಅವಶ್ಯವಿಲ್ಲದೆ ಸಾಧ್ಯವಾಗದು.
.
’ಗುರುವಾಗಿರಲು ’ಯಾರು ಅರ್ಹರು’. ಶ್ರೀ ಶಂಕರರು, ’ಕೋ ಗುರುಃ’ ಎಂಬ ಪ್ರಶ್ನೆ ಎಬ್ಬಿಸುತ್ತಾರೆ. ಎಂದರೆ,”ಯಾರು ಗುರು’ ಎಂದು ಕೇಳುತ್ತಾರೆ. . ಅದಕ್ಕೆ ಅವರೇ, ಕೊಟ್ಟಿರುವ ಉತ್ತರ.
ಅಧಿಕ ತದತ್ತವಃ ಶಿಷ್ಯೈತಯೋದ್ಯತಃ ಸತತಂ-
ಇದರಲ್ಲಿ, ಇವೆರಡೇ ಗುರುಗಳ ಲಕ್ಷಣಗಳು. .’ಅಧಿಕತದತತ್ತವಃ’, ’ಗುರುವಿಗೆ ಶಾಸ್ತ್ರವೂ, ಸಂಪ್ರದಾಯವೂ ತಿಳಿದಿರುತ್ತದೆ.. ಅಲ್ಲದೆ ತತ್ವ ಙ್ಯಾನಿಯಾಗಿರುತ್ತಾರೆ. ಎರಡನೆಯ ಲಕ್ಷಣ, ’ಶಿಷ್ಯಹಿತಾಯೋತ್ಯತಃ ಸತತಂ’.
ಗುರುಗಳು ’ಯಾವಾಗಲೂ ಶಿಷ್ಯನ ಅಭಿವೃದ್ದಿಗಾಗಿಯೇ, ಶ್ರಮಿಸುತ್ತಾರೆ. ’ಒಬ್ಬನು ಪಂಡಿತನಾಗಿದ್ದು ಮತ್ತವರಿಗೆ ಕಲಿಸದಿದ್ದರೆ,’ ಆ ಪಂಡಿತನಿಂದೇನು ಪ್ರಯೋಜನ.’
ಆದರೆ,’ ಸರಿಯಾದ ದಾರಿಯಲ್ಲಿ ಗುರುವನ್ನು ಶಿಷ್ಯನು ಅರಸಿ ಹೋದರೆ,,ತತ್ವವನ್ನು ಉಪದೇಶಿಸುವುದು ಗುರುವಿನ ಕರ್ತವ್ಯವಾಗುತ್ತದೆ. ಎಂತಲೇ,’ ಶ್ರೀ ಭಗವತ್ಪಾದರು ತಿಳಿಸಿರುವ ಈ ಎರಡು ಅರ್ಹತೆಗಳು ಯಾರ ಬಳಿ ಇವೆಯೋ, ಅವರೇ ಗುರುವೆನಿಸುವರು’. ಅಂತಹ ಗುರುವಿನ ಬಳಿಯೇ ನಾವು,ಶರಣಾಗಬೇಕು.. ’ಶಾಸ್ತ್ರದಲ್ಲಿ ಪರಿಣಿತರಾಗಿ, ಮತ್ತೊಬ್ಬನ ಪ್ರಗತಯಲ್ಲಿ ಬಹಳ ಶ್ರದ್ಧೆಯಿದ್ದ್ದು, ಆತ್ಮಙ್ಯಾನವಿಲ್ಲದಿದ್ದರೆ, ಅವರು ಗುರುವಾಗಲು ಅನರ್ಹರು.. ಅವರ ಬಗ್ಗೆ ಮುಂದಿರುವಂತೆ ಹೇಳಲಾಗಿದೆ;
ವಾಚ್ಯತಾಂ ಸಮಯೋತೀತಃ ಸ್ಪಷ್ಟಮಗ್ರೇ ಭವಿಷ್ಯತಿ-
ಶಿಷ್ಯನು, ಒಂದು ಪ್ರಶ್ನೆಯನ್ನೆಬ್ಬಿಸಿದರೆ, ಗುರುವು, ’ವಾಚ್ಯತಾಂ. ಮುಂದೆ ಓದು. ನಾನು ಹೇಳಿದಂತೆ ಮಾಡು’ ಎನ್ನಬಹುದು..’ ಅಂತಹ ಉತ್ತರದಿಂದ ಶಿಷ್ಯನಿಗೇನು ಪ್ರಯೋಜನ. ಮತ್ತೊಂದು ಉತ್ತರ, ಸಮಯೋಚಿತಃ.’
ಎಂದರೆ, ’ನೀನು ಪ್ರಶ್ನೆಗಳನ್ನು ಕೇಳುತ್ತಲೇ ಇರುವೆ. ಸಮಯವಾದದ್ದರಿಂದ, ಇನ್ನು ಪಾಠ ಮುಂದುವರಿಸುವುದಿಲ್ಲ.ಎನ್ನಬಹುದು. .. ಮೂರನೆಯ ಉತ್ತರ, ’ಸ್ಪಷ್ಟಮಗ್ರೇ ಭವಿಷ್ಯತಿ.”ಓದುತ್ತಾ, ಓದುತ್ತಾ, ನಿನ್ನ ಸಂದೇಹ ತಾನಾಗಿಯೇ ತೀರುತ್ತದೆ.’ ಆದ್ದರಿಂದ ’ಮೇಲೆ ಓದು; ಎನ್ನಬಹುದು.
’ಇಂತಹ ಉತ್ತರವನ್ನು ಹೇಳುವವರು ,’ ಗುರುವಾಗಬಹುದೇ”.ಖಂಡಿತವಾಗಿ
ಸಾಧ್ಯವಿಲ್ಲ. ’ಶಿಷ್ಯನ ಸಂದೇಹಗಳನ್ನು ನಿವಾರಿಸುವ ಅರ್ಹತೆಗಳನ್ನು’ ’ಗುರುವು ಖಂಡಿತಾ ಹೊಂದಿರಬೇಕು. ಗುರುಗಳು ತಮಗೆ ತಿಳಿರುವುದನ್ನು ಶಿಷ್ಯನಿಗೆ ಕಲಿಸಬೇಕು. ಶ್ರೀ ಆಪಸ್ತಂಬರು,
’ಆಚಾರ್ಯೋಪನಾಚಾರ್ಯೋ ಭವತಿ ಶ್ರುತಾತ್ಪರಿಹರಮಾಣಃ’ ಎಂದರು. ’ತಾನರಿತ್ತಿದ್ದನ್ನು ಕಲಿಸದವರು ಆಚಾರ್ಯರಲ್ಲ’ ಎನ್ನುತ್ತಾರೆ.
’ಶಿಷ್ಯನ ಬಗ್ಗೆ,,’ ಅಂತೇವಾಸಿ ಅನಂತೇವಾಸಿ ಭವತಿ ಕುರಾವನೈ ಪುಣೀಮಾಪತ್ಯಮಾನಃ’
’ಗುರುವಿನಬಗ್ಗೆ ವಿಶ್ವಾಸವಿಲ್ಲದವನೂ, ಅವರಿಗೆ ಕಲಿಸುವ ಯೋಗ್ಯತೆಯಿಲ್ಲವೆಂದು ಚಿಂತಿಸುವನೂ’, ಶಿಷ್ಯನೇ ಅಲ್ಲವೆನ್ನುತ್ತಾರೆ.. ಅವನು’ ಗುರುವಿನ ಜ್ಞಾನವನ್ನು ಪರೀಕ್ಷಿಸಲು’ ಬಂದವನೇ ಹೊರತು, ಕಲಿಯುವುದಕ್ಕಲ್ಲ.’
ಒಬ್ಬ ಗುರುವಿಗಿರಬೇಕಾದ ಸಕಲ ಅರ್ಹತೆಗಳನ್ನು ಶ್ರೀಭಗವತ್ಪಾದರು ಹೊಂದಿದ್ದರು. ಅವರ ೩೨ ವರ್ಷಗಳ ಆಯುಶ್ಯದಲ್ಲಿ ಸನಾತನ ಧರ್ಮದ ಉದ್ಧಾರಕ್ಕೆ ಅವರು ಮಾಡಿದ ಕಾರ್ಯಗಳನ್ನು ಮತ್ತಾರೂ ಮಾಡಲು ಸಾಧ್ಯವಿಲ್ಲ.
ಇದು ಶಿಷ್ಯರಬಗ್ಗೆ ಅವರಿಗಿದ್ದ ಆಸಕ್ತಿಯನ್ನು ತೋರಿಸುತ್ತದೆ. ಅವರುಗ್ಯಾನಸಮುದ್ರವಾಗಿದ್ದರು. ಅವರನ್ನು ಇಂದು ಕಾಣಲು ಸಾಧ್ಯವಾಗದಿದ್ದರೂ,, ಅವರ ಭಾಷ್ಯಗಳನ್ನು ಕಾನುವ ಅದೃಷ್ಟವನ್ನು ನಾವು ಪಡೆದಿದ್ದೇವೆ.
ಆದ್ದರಿಂದ ’ಅಧಿಕತತತತ್ತವಃ ಮತ್ತು ಶಿಷ್ಯಾಹಿತಾಯೋದ್ಯತಃ ಸತತಂ ’ ಎಂಬ ತತ್ವಗಳು ಅವರಲ್ಲಡಗಿದ್ದವು. ಅವರ ಶಿಷ್ಯ ಪರಂಪರೆಗೆ ಸೇರಿರುವುದೇ ನಮ್ಮ ಮಹಾ ಸೌಭಾಗ್ಯ., ತಾವೇ ಜ್ಞಾನ ಸಮುದ್ರವಾಗಿದ್ದರೂ, ನರ್ಮದೆಯ ತೀರದಲ್ಲಿದ ಶ್ರೀ ಗೋವಿಂದಭಗವತ್- ಪಾದರನ್ನರಸಿ ತೆರಳಿದರು. ಕಾರಣ-’ಸಂಪ್ರದಾಯ ಪರಿಪಾಲನಬುದ್ಧಯ ’
’ಸಂಪ್ರದಾಯವನ್ನನುಸರಿಸುವುದಕ್ಕಾಗಿ’. ಗುರುವನ್ನರಸಿ ತೆರಳಲು ಅವರು ಒಂದು ಮಾದರಿಯಾಗಿರದಿದ್ದರೆ, ಇಂದು ನಾವು ಗುರುವನ್ನರಸಿ ತೆರಳುತ್ತಿರಲಿಲ್ಲ.
ಶ್ರೀ ರಾಮ-ಶ್ರೀ ಕೃಷ್ಣ ಗುರುಕುಲದಲ್ಲಿ ವಾಸಿಸಿದವರೇ. ಮಹಾತ್ಮರ ಕಾರ್ಯಗಳು ಮತ್ತವರ ನಡತೆಗೆ ಮಾರ್ಗದರ್ಶಿಯಾಗುರುತ್ತದೆ..
ಶ್ರೀ ಕೃಷ್ಣನು, ಶ್ರೀ ಭಗವದ್ಗಿತೆಯಲ್ಲಿ;
ಯದಿವ್ಯಹಂ ನವರ್ತೇಯಂ ಜಾತು ಕರ್ಮಣ್ಯಯತ್ರಿತಃ ಮಮವರ್ತ್ಮಾನು- ವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ಉತ್ಸಿತೇಯುರಿಮೇ ಲೋಕಾ ನ ಶ್ರುಯಾಂ ಕರ್ಮ ಚೇದಹಂ- ಎನ್ನುತ್ತಾನೆ.
’ನಾನು ಧರ್ಮವನ್ನನುಸರಿಸದಿದ್ದರೆ, ಮತ್ತವರೂ, ಅದೇ ಮಾರ್ಗದಲ್ಲಿ ತೆರಳುತ್ತಾರೆ. ನಾನು ಆ ಮಾರ್ಗದಲ್ಲಿ ಸಾಗದಿದ್ದರೆ ನನಗೇನೂ ದೋಷವಿಲ್ಲ.’ .
’ಆದರೆ, ಮತ್ತವರು ನನ್ನ ಮಾರ್ಗವನ್ನೇ ಅನುಸರಿಸಿದವರು, ಮಾರ್ಗ ತಪ್ಪಿದರೆ ಭ್ರಷ್ಠರಾಗಿಬಿಡುತ್ತಾರೆ.’. ಆದ್ದರಿಂದ ನಾನು ಧರ್ಮಮಾರ್ಗ-ವನ್ನು ತಡೆ ಹಿಡಿಯುವುದು ಅವಶ್ಯವಾಗಿದೆಯೆನ್ನುತ್ತಾನೆ. .
ಯದ್ಯದಾಚರತಿ ಶ್ರೇಷ್ಟಃ ತತ್ತದೇವೀತಿರೇಜನಃ-ಮಹಾತ್ಮರು’ ಮಾಡುವುದನ್ನೇ ಮತ್ತವರೂ ಅನುಸರಿಸುತ್ತಾರೆ.’
ಇದಕ್ಕಾಗಿಯೇ ಮಹಾ ಗುರುಗಳಾದ ಶ್ರೀ ಭಗವತ್ಪಾದರೂ ಶ್ರೀ ಗೊವಿಂದ ಭಗವತ್ಪಾದರನ್ನು ಅರಸಿ ತೆರಳಿದರು.
ಈ ಸಂಪ್ರದಾಯವನ್ನು ನಾವೂ ಅನುಸರಿಸಬೇಕು. ಆದ್ದರಿಂದಲೇ, ನಾವು, ಜೀವಿತದ ಫಲವನ್ನು ಪಡೆಯಲು, ನಾವು ಗುರುವೊಬ್ಬನ್ನರಸಿ ಅವರ ಅನುಗ್ರಹವನ್ನು ಪಡೆಯಬೇಕು.
===========================
ಅಧ್ಯಾಯ-೨೧.
===========
ಗುರುಭಕ್ತಿ
=========
ಮನುಷ್ಯನು ತನ್ನ ಬಾಳಿನಲ್ಲಿ ಎಷ್ಟೇ ಮುಂದಕ್ಕೇರಿದರೂ, ಗುರು ಭಕ್ತಿಯಿಲ್ಲದಿದ್ದರೆ ಅವಾನ ಬಾಳು ನಿಷ್ಪ್ರಯೋಜಕ,ಎಂದರು ಶ್ರೀ ಭಗವತ್ಪಾದರು...ಆದ್ದರಿಂದ, ನಾವು ಎಷ್ತೇ ದೊಡ್ಡ ,
ಮನುಷ್ಯರಾದರೂ,ಹಣವಂತರಾದರೂ, ವಿದ್ಯಾವಂತರಾದರೂ, ’ಗುರುಭಕ್ತಿ,’ಬಹಳ ಅವಶ್ಯಕ. ಶ್ರೀ ಭಗವತ್ಪಾದರ ಜೀವನವನ್ನವಲೋಕಿಸಿದರೆ, ಅವರಿಗೆಷ್ಟು ಗುರುಭಕ್ತಿಯಿದ್ದಿತು ಎಂಬುದು ತಿಳಿಯಬರುತ್ತದೆ. ತಮ್ಮ ಗುರುಗಳಾದ ಶ್ರೀ ಗೋವಿಂದ ಭಗವತ್ಪಾದರ ಸನ್ನಿಧಿಯಲ್ಲಿ, ವೇದಾಂತ ತತ್ವನ್ನು ಅವರು ತಿಳಿದುಕೊಂಡರು, ಎಂದು, ಶ್ರೀ ’ಮಾಧವೀಯ ಶಂಕರ
ದಿಗ್ವಿಜಯ’ ತಿಳಿಸುತ್ತದೆ. ವಾಸ್ತವವಾಗಿ, ಸರ್ವಜ್ಞ್ಯರಾಗಿದ್ದ ಅವರು, ಶ್ರೀ ಗೊವಿಂದ ಭಗವತ್ಪಾದರ ಬಳಿ ವೇದಾಂತ ತತ್ವವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದ್ದಿತೇ,, ಎಂದು ಕೇಳಿದರೆ, ’ಸಂಪ್ರದಾಯ ಪರಿಪಾಲನ ಬುದ್ಧಯಾ’
ಎಂದು ಶಂಕರ ದಿಗ್ವಿಜಯ ಉತ್ತರ ಹೇಳುತ್ತದೆ. ಸಂಪ್ರದಾಯವನ್ನನುಸರಿಸಬೇಕು.
ಸಾಮಾನ್ಯವಾಗಿ ಮನುಷ್ಯನ ಸ್ವಭಾವವು ಏನೆಂದರೆ, ’ದೊಡ್ಡವರಿರುವಂತೆ ತಾನೂ ಇರಬೇಕೆಂದು ಬಯಸುತ್ತಾನೆ." ತಾನು ಯಾರ ವಿಷಯಯದಲ್ಲಿ ಅಧಿಕ ಗೌರವ ಇಟ್ಟಿರುತ್ತಾನೋ, ಅವರಂತೆಯೇ, ಬಾಳಬೇಕೆಂದು, ಆಶಿಸುತ್ತಾನೆ.ಇದನ್ನೇ, ಶ್ರೀ ಕೃಷ್ನನು, ಶ್ರೀಮದ್ ಭಗವದ್ಗೀತೆಯಲ್ಲಿ,,
ಯದ್ಯದಾಚರತಿಶ್ರೇಷ್ಟಃ ತತ್ತದೇವೇತರೋ ಜನಾಃ ಸಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ಎಂದನು.
ಹಾಗಿರುವಾಗ, ನಮ್ಮೆಲ್ಲರಿಗೂ, ಗುರುಸ್ಥಾನದಲ್ಲಿರುವ ಶ್ರೀ ಶಂಕರ ಭಗವತ್ಪಾದರಿಗೇ, ಗುರುಭಕ್ತಿಯಿಲ್ಲವೆಂದರೆ,
ನಮಗ್ಯಾರಿಗೂ, ಗುರುಭಕ್ತೀ ಇರುವುದೇ ಇಲ್ಲ. ’ಶಂಕರರಿಗೇ, ಗುರುಭಕ್ತಿಯಿಲ್ಲ. ನಮಗೇತಕ್ಕೆ’, ಎಂದು ಹೇಳುತ್ತೇವೆ.
ಆದ್ದರಿಂದ, ’ಸಂಪ್ರದಾಯ ಪರಿಪಾಲನ ಬುಧ್ಯಾ’, ಎಂಬಂತೆ, ಶ್ರೀ ಶಂಕರ ಭಗವತ್ಪಾದರು
ತಮ್ಮ ಗುರುಗಳಾದ ಶ್ರೀ ಗೊವಿಂದ ಭಗವತ್ಪಾದರನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಸೇವಿಸಿದರು ಎನ್ನುವಾಗ, ನಮಗೂ ಗುರುಭಕ್ತಿ ಪರಮ ಅವಶ್ಯ ಎಂದು ಹೇಳಬೇಕಾದುದೇ ಇಲ್ಲ.
ಆ ಗುರುಭಕ್ತಿ ನಮಗೆ ಎಲ್ಲಾ ರೀತಿಯ ಶ್ರೇಯಸ್ಸನ್ನು ತರುತ್ತದೆ. ಶ್ರೀ ಗುರುಗಳ ಪರಮೇಷ್ಠಿ
ಗುರುಗಳಾದ, ಶ್ರೀ ನೃಸಿಂಹ ಭಾರತಿ ಮಹಾಸ್ವ್ವಾಮಿಗಳು, ಒಂದೆಡೆಯಲ್ಲಿ, ’ಗುರುವಿನ ಅನುಗ್ರಹ
ವಿಲ್ಲದಿದ್ದರೆ, ಜಗದಲ್ಲಿ ಯಾರಿಗೆ ತಾನೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ. ಆದ್ದರಿಂದ, ಎಲ್ಲಾ,
ಶ್ರೇಯಸ್ಸುಗಳಿಗೂ,’ ಎಲ್ಲಾ ನಲ್ಮೆಗಳಿಗೂ, ಸೌಖ್ಯಗಳಿಗೂ ಮೂಲಕಾರಣವಾದ ಶ್ರೀ ಗುರುಪಾದವನ್ನು ನೀನು ಸೇವಿಸು,’ ಎಂದು ಉಪದೇಶಿಸಿದರು. ನಮಗೆ ಮಹಾತ್ಮರು ಉಪದೇಶಿಸುವುದು
ಇಲ್ಲಿ ನಾವೆಲ್ಲರೂ ಶ್ರೇಯಸ್ಸನ್ನು ಪಡೆಯಲೆಂದೇ. ಅವರ ಉಪದೇಶಗಳನ್ನು ಅನುಸರಿಸಿ ನಾವು
ನಮ್ಮ ಬಾಳನ್ನು ನಡೆಸಿಕೊಂಡು ಬಂದರೆ, ನಮಗೆ ನಲ್ಮೆಯುಂತಾಗುತ್ತದೆ. ಆ ರೀತಿ ಆಲಿಸದಿದ್ದರೆ
ನಷ್ಟ ನಮಗೇ, ಅವರಿಗಲ್ಲ.
ಶಾಸ್ತ್ರದಲ್ಲಿ ’ಹೀಗಿರಬೇಕು, ಹೀಗಿರಬಾರದು’ ಎಂದು ಹೇಳಲಾಗಿದೆ. ಈ ನಿಷೇಧಗಳನ್ನು ಪರಿ-
ಪಾಲಿಸಿದರೆ, ನಮಗೇ ಶ್ರೇಯಸ್ಸಾಗುತ್ತದೆ.ಅದನ್ನು ತಿರಸ್ಕರಿಸಿದರೆ, ನಮಗೇ ಅಶ್ರೆಯಸ್ಸು.
ನಾವು ಆಚರಿಸದಿದ್ದರೆ, ಶಾಸ್ತ್ರಕ್ಕೋ, ಅದನ್ನು ಉಪದೇಶಿಸಿದ ಈಶ್ವರನಿಗೋ, ಯಾವ ನಷ್ಟವೂ
ಇಲ್ಲ.ಹಾಗೆಯೇ, ನಾವು ಶಾಲೆಯಲ್ಲಿ ಓದುವಾಗ, ಅಧ್ಯಾಪಕರು,’ ಇದನ್ನು ಮಾಡು, ಇದನ್ನು ಮಾಡಬೇಡ’
ಎಂದು ಹೇಳುತ್ತಾರೆ. ಅದನ್ನು ಕೇಳಿದರೆ, ಹುಡುಗರು ಪಾಸಾಗಿ ಮುಂದಿನ ತರಗತಿಗೆ ಹೋಗಬಹುದು.
ಅವರ ಮಾತನ್ನು ಕೇಳದಿದ್ದರೆ,ಅದೇ ತರಗತಿಯಲ್ಲಿ, ಕುಳಿತಿರಬೇಕು. ಅವರು ಹೇಳಿದಂತೆ
ಕೇಳಿದರೆ, ಕೇಳದಿದ್ದರೆ, ಅವರಿಗೇನೂ ನಷ್ಟವಿಲ್ಲ. ಅವರ ಕಾರ್ಯವನ್ನು ಅವರು ನರವೇರಿಸು-
ತ್ತಲೇ ಇದ್ದಾರೆ. ಆದ್ದರಿಂದ ನಮ್ಮ ಹಿರಿಯರು ಮಾಡಿದ ಉಪದೇಶಗಳು ನಮ್ಮ ಶ್ರೇಯಸ್ಸಿಗಾಗಿಯೇ.
ಆ ಉಪದೇಶಗಳನ್ನಾಚರಿಸುವುದು ನಮಗೆ ಅವಶ್ಯ. ಮನುಷ್ಯನು ಒಂದು ವಿಷಯವನ್ನು
ಜ್ಞ್ಯಾಪಕದಲ್ಲಿಟ್ಟುಕೊಳ್ಳಬೇಕೆಂದು ಭಗವಂತನು ಹೇಳಿದನು. ’ನಿನ್ನ ಶ್ರೇಯಸ್ಸಿಗೆ ನೀನೇ
ಶ್ರಮಿಸಬೇಕು. ಬೇರೆಯವರು ಶ್ರಮಿಸಲಾಗುವುದಿಲ್ಲ’ ಎಂದು.
’ಉದ್ಧರೇತಾತ್ಮನಾತ್ಮಾನಂ ಆತ್ಮಾನವಸಾಧಯೇತ್ ಅತ್ಮೈವನಾತ್ಮನೋ ಬಂದುಃ ಆತ್ಮಾನರಿಪುರಾತ್ಮನಃ’
’ನಿಮ್ಮ ಶ್ರೇಯಸ್ಸು ನಿಮ್ಮ ಬಳಿಯೇ ಇದೆ. ನೀವು ಸರಿಯಾದ ಮಾರ್ಗದಲ್ಲಿ ನಡೆದರೆ, ನಿಮಗೆ
ಶ್ರೇಯಸ್ಸು ಉಂಟಾಗುತ್ತದೆ.ನೀವು ತಪ್ಪು ದಾರಿಯಲ್ಲಿ ನಡೆದರೆ, ನಿಮಗೇ ಅಶ್ರೇಯಸ್ಸು.’ ಯಾರೋ
ಬೇರೊಬ್ಬನು ನಿಮಗಾಗಿ ಮಾಡುತ್ತಾನೆಂದುಕೊಳ್ಳಬೇಡಿ’. ನೀವು ಶ್ರೇಯ ಮಾರ್ಗದಲ್ಲಿ ನಡೆದರೆ, ನಿಮಗೆ
ನೀವೇ ಬಂದು. ತಪ್ಪು ಮಾರ್ಗದಲ್ಲಿ ನಡೆದರೆ, ನಿಮಗೆ ನೀವೇ ಶತ್ರು. ನಮಗೆ, ನಾವೇ ಬಂಧು,
ನಾವೇ ಶತ್ರು. ಆದರೆ, ಹೊರಗಡೆ, ನಮಗೆ ಬಹಳ ಶತ್ರುಗಳಿದ್ದಾರೆ, ಎಂದು ಭಾವಿಸುತ್ತೇವೆ.
ಹಾಗೆ ಯಾರೂ ಇಲ್ಲ. ನಾವು ಶ್ರೇಯಸ್ಸಿಗೆ ವಿರೋಧವಾದ ಕಾರ್ಯಗಳನ್ನು ಮಾಡಿದರೆ, ನಮಗೆ,
ನಾವೇ ಶತ್ರುವಾಗುತ್ತೇವೆ. ಅದ್ದರಿಂದ ಎಲ್ಲರೂ, ಶ್ರೇಯಸ್ಸನ್ನರಸಿ ಕಾರ್ಯಗಳನ್ನು ಮಾಡಬೇಕು.
ನಮ್ಮ ಬಾಳನ್ನು ಪವಿತ್ರವಾಗಿಸಿಕೊಳ್ಳಬೇಕು. ತನಗಿನ್ನೂ,ಉತ್ತಮವಾದ ಭಕ್ತಿಯನ್ನರಸಬೇಕು.
ಇದರಿಂದಲೇ, ನಮಗೆ, ನಮ್ಮ ಹಿರಿಯರು, ಉಪದೇಶಗಳನ್ನಿತ್ತರು. ಅಂತಹ ಉಪದೇಶಗಳಲ್ಲಿ
ಗುರುಭಕ್ತಿ ಬಹಳ ಅವಶ್ಯ. ಅಂತೆಯೇ, ಶ್ರೀ ಭಗವತ್ಪಾದರು ಅವರ ಗುರುಪಾದದಲ್ಲಿ ಅಪಾರ
ಭಕ್ತಿಯನ್ನಿಟ್ಟಿದ್ದರು. ನೀನು ಗುರುಪಾದದಲ್ಲಿ ಅಧಿಕ ಭಕ್ತಿಯಿಡು.’ನೀನು ಸಂಸಾರಸಾಗರದಿಂದ
ಬಿಡುಗಡೆಯಾಗಿ ಮುಕ್ತನಾಗಬಹುದು’.ಎಂದು ಉಪದೇಶಿಸಿದರು. ಅಂತಹ ಗುರುಭಕ್ತಿ, ನಮಗೆ
ಪಾರಂಪರ್ಯವಾಗಿದೆ ಎಂದು ಬಹಳ ಸಂತೋಷ ತರುವ ವಿಷಯ. ಈ ಗುರುಭಕ್ತಿ ಇನ್ನೂ ಬೇಳೆದು
ಅದರಿಂದ ಎಲ್ಲರೂ, ಶ್ರೇಯಸ್ಸನ್ನು ಹೊಂದಬೇಕುದು ಹೇಳಿ[ಗುರುಗಳು] ಈ ಉಪನ್ಯಾಸವನ್ನು ಮುಗಿಸುತ್ತಾರೆ. ’
================================
೨೨.ಜೀವ-ಈಶ್ವರ ತತ್ವ.
======================
ಶ್ರೀ ಶಂಕರ ಭಗವತ್ಪಾದರ ಕಾಲದಲ್ಲಿ, ಸನಾತನ ವೈದೀಕ ಧರ್ಮಕ್ಕೆ ವಿರೋಧವಾದ ಹಲವು ಮತಗಳಿದ್ದವು.
ಅವರು ಅವೆಲ್ಲವನ್ನೂ ನೀಗಿಸಿ ಸನಾತನ ಧರ್ಮ ವೈದೀಕ ಧರ್ಮವನ್ನು ಪ್ರತಿಷ್ಠಾಪಿಸಿದರು. ಹಾಗೂ, ಹಲವು ಕೃತಿಗಳನ್ನು ರಚಿಸಿ ಮಹದುಪಕಾರ ಮಾಡಿದ್ದಾರೆ. ಜನರ ಅರ್ಹತೆಗನುಸಾರವಾಗಿ, ಅವರಿಗೆ ತಕ್ಕ ರೀತಿಯಲ್ಲಿ, ಅವರು ತತ್ವೋಪದೇಶವನ್ನು ಮಾಡಿದರು. ’ನ್ಯಾಯ ಮುಂತಾದ ಶಾಸ್ತ್ರವನ್ನು ಅಭ್ಯಸಿಸಿದ ಪ್ರಕಾಂಡ ಪಂಡಿತರಿಗೆ,’ಸೂತ್ರ ಭಾಷ್ಯ-
ವನ್ನು ಕೊಟ್ಟರು. ಸಂಸ್ಕ್ರೃತವನ್ನು ಸಾಧಾರಣವಾಗರಿತು, ಶಾಸ್ತ್ರ ಕಲಿಯದವರಿಗೆ,ಪ್ರಕರಣ ಗ್ರಂಥಗಳನ್ನು’ ಅನುಗ್ರಹಿಸಿದರು.
.’ವಿವೇಕ ಚೂಡಾಮಣಿ, ಸರ್ವ ವೇದಾಂತ ಸಿದ್ಧಾಂತ ಶಾಸ್ತ್ರಸಂಗ್ರಹಂ
ಉಪದೇಶ ಸಹಸ್ರೀ, ಪ್ರಬೋಧ ಸುಧಾಕರಂ, ಇಂತಹವು ಪ್ರಕರಣ ಗ್ರಂಥಗಳೆನಿಸುತ್ತವೆ.
ಆ ಒಂದೊಂದು ಕೃತಿಗಳಲ್ಲಿಯೂ, ಸುಮಾರು ೫೦೦-ರಿಂದ ೧೦೦೦ ಶ್ಲೋಕಗಳಿವೆ. ಅಲ್ಪ ಸಂಸ್ಕೃತ ಜ್ಞ್ಯಾನವಿರುವವರಿಗೆ, ಮೇಲೆ ಹೇಳಿದ ಕೃತಿಗಳು, ಕಷ್ಟವಾಗಬಹುದೆಂದು ನಿಶ್ಚಯಿಸಿ, ಶ್ರೀ ಭಗವತ್ಪಾದರು,೧೦೦ ಶ್ಲೋಕಗಳುಳ್ಳ, ’ಶತಶ್ಲೋಕಿ’ ಎಂಬ ಕೃತಿಯನ್ನು ರಚಿಸಿದರು.. ೧೦೦ ಶ್ಲೋಕಗಳೂ ಅಧಿಕವೆಂದು ಬಯಸಿದರೆ, ಅವರು ಹೇಳಿದ ’ದಶಶ್ಲೋಕಿ’ಯನ್ನು ನೋಡಬಹುದು.’. ಅದುವೂ, ಅಧಿಕವೆನಿಸಿದರೆ, ’ಏಕಶ್ಲೋಕಿ’, ಎಂಬ ಒಂದೇ ಶ್ಲೋಕದಲ್ಲಿ ತತ್ವವನ್ನು ಹೇಳಿದರು,. ಅವರಿಗೆ, ನಮ್ಮ ಬಗ್ಗೆಯಿದ್ದ ಕರುಣೆಯನ್ನ್ನು ತಿಳಿಸಲೂ, ಊಹಿಸಲೂ, ನಮಗೆ ಶಕ್ತಿಯಿಲ್ಲ. ಆದ್ದರಿಂದ, ದಿನಕ್ಕೊಂದು ನಮಸ್ಕಾರವನ್ನು ಸಲ್ಲಿಸುವುದು ಕರ್ತವಾವಾಗುತ್ತದೆ.
ವೇದಾಂತ ಗ್ರಂಥಗಳಲ್ಲದೆ, ಶ್ರೀ ಶಂಕರರು, ಹಲವು ಸ್ತೋತ್ರ ಕೃತಿಗಳನ್ನೂ ರಚಿಸಿದರು. ಭಗವಂತನ ಸಗುಣ ಮೂರ್ತಿಗಳಲ್ಲೂ, ಸಗುಣ ಉಪಾಸನೆಯಲ್ಲೂ,,ಅಭ್ಯಾಸವಿರುವವರಿಗೆ,ಇರಬೇಕೆಂದು, ಕೆಲವು ’ಭಕ್ತಿ ಸ್ತೋತ್ರಗಳನ್ನು ರಚೀಸಿದರು..ಎಲ್ಲರ ಸ್ತೋತ್ರದಲ್ಲಿಯೂ, ಬಹಳ ಅಪೂರ್ವವಾದ ವಿಷಯಗಳಿವೆ. ಸ್ತೋತ್ರವೆಂದರೆ,’ಭಗವಂತನಿಗೆ ಸಂಭಂಧಿಸಿದ ಸಾಮಾನ್ಯ ವರ್ಣನೆಗಳೆಂದು’ ಅರಿತಿದ್ದೇವೆ’.. ಆದರೆ, ಶ್ರೀ ಶಂಕರರ ಕೃತಿಗಳಲ್ಲಿ, ’ವರ್ಣನೆಯಲ್ಲದೆ ವೇದಾಂತ ತತ್ವಗಳೂ ಅಡಗಿವೆ.’
.
ಶ್ರೀ ಶಂಕರರ ;ವೇದಾಂತ ಅಭಿಪ್ರಾಯ’ ಎಲ್ಲರಿಗೂ, ಗೊತ್ತು. ’ಪರಮಾತ್ಮ ಸಚ್ಚಿದಾನಂದ ಸ್ವರೂಪ. ಅದು ಒಂದೇ ಸದಾಕಾಲವೂ ನೆಲೆಸಿರಿವ ಸತ್ಯ.. ಅನೇಕ ವಿಶ್ವಗಳೂ, ಅಙ್ಯಾನದಿಂದ ತೋರುವುದಾಗುತ್ತದೆ. ಆತ್ಮಙ್ಯಾನ ತತ್ವದಿಂದ ಈ ಮಾಯೆಯ ಜಗವು ನಾಶವಾಗುತ್ತದೆ..’ ಪರಬ್ರಹ್ಮ ಸಾಕ್ಷಾತ್ಕಾರದಿಂದ ಮುಕ್ತಿ ದೊರೆಯುತ್ತದೆ’. ಪರಮಾತ್ಮ ನಿಜವಾಗಿ,ಗುಣಾತೀತನಾದರೂ,, ಭಕ್ತರ ನಲ್ಮೆಗೆ, ಶಿವ, ವಿಷ್ನು, ಮೊದಲಾದ ರೂಪಗಳನ್ನು ಪಡೆದು, ಅನುಗ್ರಹಿ-
ಸುತ್ತಾನೆ ಎಂದು ಶ್ರೀ ಭಗವತ್ಪಾದರು, ಉಪನಿಷತ್ತುಗಳ ಅಭಿಪ್ರಾಯ- ,ವನ್ನೇ ಹೊಂದಿದ್ದರು. ಈ ಕಾರಣದಿಂದಲೇ, ಅವರು, ಶ್ರೀ ಶಿವ,ಶ್ರೀ ವಿಷ್ಣು-
ವಿನ ಪ್ರತಿರೂಪಗಳಾದ ಶ್ರೀರಾಮ, ಶ್ರೀ ಕೃಷ್ಣ, ಶ್ರೀ ನರಸಿಂಹ, ಮೊದಲಾದವರನ್ನೂ,ಮತ್ತು ದೇವಿಯ ಮೂರ್ತಿಗಳನ್ನೂ ಸ್ತುತಿಸಿ,ಹಲವು ಸ್ತೋತ್ರಗಳನ್ನು ರಚಿಸಿದರು.
ಶ್ರೀ ಶಂಕರರು ಶ್ರೀ ಲಕ್ಶ್ನೀ ನರಸಿಂಹ ಸ್ತೋತ್ರದಲ್ಲಿ,ಶ್ರೀ ನರಸಿಂಹರನ್ನು ಕುರಿತು, ಸ್ತುತಿಸುವಾಗ,ಮನವನ್ನು ಕುರಿತು, ,’ತ್ವತ್ಪ್ರಭುಜೀವ ಪ್ರಿಯಮಿಛ್ಛಸಿ ಶೆನ್ನರಹರಿಪೂಜಂ ಕುರು ಸತತಂ
ಪ್ರತಿಬಿಂಬಾಲಂಕೃತಿ ದ್ರುತಿಕುಚಲೋ ಬಿಂಭಾಲಂಕಾರೀಅಕೃತಿಮಾದನುತೇ., ಎನ್ನುತ್ತಾರೆ.’ಮನವು ತನ್ನ ಪ್ರಭುವಾದ ಜೀವಕ್ಕೇ ಸಂತೋಷವನ್ನು ಕೊಡಬೇಕು’. ಎಂಬ ಅರ್ಥದಲ್ಲಿದೆ.’ ಮನವು ಜೀವನ ದಾಸ;.’ದಾಸನಿಗೆ ಏನಿಛ್ಛೆ ಇರುತ್ತದೆ’.;
ತನ್ನ ಪ್ರಭು ಸುಖವಾಗಿರಬೇಕೆಂಬುದೇ. ಆದ್ದರಿಂದಲೇ ಅವರು,
ತ್ವಯ ಪ್ರಭು ಜೀವಪ್ರಿಯಮಿಚ್ಚಸಿ ಚೇನ್ ನರಹರಿ ಪೂಜಾಂ ಕುರು ಸತತಂ ಎಂದರು.
’ನಿನ್ನ ಪ್ರಭುವಾದ ಜೀವನು ಸೌಖ್ಯವಾಗಿರಲು, ನೀನು ಭಗವಂತ- ನನ್ನಾರಾಧಿಸು’ ಎಂದರು.
ಒಂದು ಪ್ರಶ್ನೆ ಏಳಬಹುದು.’ ತನ್ನ ಪ್ರಭುವಿಗೆ ಸೌಖ್ಯ ಬರಲು ಪ್ರಭುವನ್ನು ತಾನೆ ಸೇವಿಸಬೇಕು..’ ಅದನ್ನು ಬಿಟ್ಟು ಬೇರೆ ಯಾರನ್ನೋ ಸೇವಿಸಿದರೆ, ಅದು ಹೇಗೆ ನೆರವು ನೀಡುವುದು’. ಇದಕ್ಕೊಂದು ಯುಕ್ತಿಯುಂಟು,
’ಜೀವನೂ, ಈಶ್ವರನೂ, ಕ್ರಮವಾಗಿ, ಪ್ರತಿಬಿಂಬ, ಬಿಂಬವಾಗುತ್ತದೆ.’ ಇದೇ ಶಾಸ್ತ್ರದಲ್ಲಿ ಸಿದ್ಧಾಂತವಾಗಿದೆ.. ಒಂದು ಕನ್ನಡಿಯ ಮುಂದೆ ನಿಂತು, ಮುಖವನ್ನು ನೋಡಿದರೆ,ಮುಖದ ಪ್ರತಿಬಿಂಬ ಕನ್ನಾಡಿಯಲ್ಲಿ ಕಾಣುವುದು.. ಇಲ್ಲಿ,’ ಬಿಂಬ ಮುಖ.ಕನ್ನಡಿಯಲ್ಲಿ ಕಾಣುವುದು ಪ್ರತಿಬಿಂಬ’. ಈ ಕನ್ನಡಿ ಎಂಬ ಉದಾಹರಣೆಯಲ್ಲಿ, ನಾವು ಹೆಳುವುದನ್ನು ಶಾಸ್ತ್ರದಲ್ಲಿ
’ಉಪಾದಿ’ ಎನ್ನುವರು. ಹಾಗಾಗಿ,’ ಬಿಂಬ, ಉಪಾದಿ ಮತ್ತು ಕನ್ನಾಡಿಯಲ್ಲಿ ಕಾಣುವ ಪ್ರತಿಬಿಂಬ, ಮೂರು ವಸ್ತುಗಳು ಇಲ್ಲಿವೆ.
’ಕನ್ನಡಿಯಲ್ಲಿ, ಮುಖವನ್ನು ನೋಡುವವನು, ಪ್ರತಿಬಿಂಬದ ಹಣೆಯಲ್ಲಿ ವಿಭೂತಿ ಇಲ್ಲವಲ್ಲ ಎಂದುಕೊಂದರೆ, ವಿಭೂತಿಯನ್ನು ಅವನೆಲ್ಲಿಡಬೇಕು.’. ’ವಿಭೂತಿಯನ್ನು ಕನ್ನಡಿಯಲ್ಲಿರುವ ಪ್ರತಿಬಿಂಬದ ಹಣೆಯ ಭಾಗದಲ್ಲಿ ಇಡಲಾಗುವುದಿಲ್ಲ.’
ಕಾರಣ, ಮುಖವನ್ನು ಸ್ವಲ್ಪ ಅಲ್ಲಾಡಿಸಿದರೂ, ಪ್ರತಿಬಿಂಬದ ಹಣೆಯ ಭಾಗದಲ್ಲಿ ವಿಭೂತಿ ಇಲ್ಲದೇ ಹೋಗಿಬಿಡುವುದು.
ಆದ್ದ್ದರಿಂದ, ಪ್ರತಿಬಿಂಬದಲ್ಲಿ ವಿಭೂತಿ ಕಾಣಬೇಕಾದರೇ, ನಮ್ಮ ಹಣೆಯಲ್ಲೇ, ವಿಭೂತಿ ಇಟ್ಟುಕೊಳ್ಳಬೇಕು. ಎಂದರೆ.
’ಪ್ರತಿಬಿಂಬಕ್ಕೆ ಅಲಂಕಾರ ಮಾಡಲು, ಬಿಂಬವನ್ನಲಂಕರಿಸಬೇಕು.’
ಜೀವನು,’ ಅವಿದ್ಯೆ’ ಎನ್ನುವ ಉಪಾದಿಯಲ್ಲಿ ಈಶ್ವರನ ಪ್ರತಿಬಿಂಬವಾಗಿ ಕಾಣುತ್ತಾನೆ.’ ಮಾಯೆಯೆಂಬುದು ಅವಿದ್ಯೆಯ ಹೆಸರು.’
ಆದ್ದರಿಂದಲೇ,’ ಪ್ರತಿಬಿಂಬವಾದ ಜೀವನಿಗೆ ಸೌಖ್ಯ ಬರಬೇಕೆಂದರೆ, ಬಿಂಬರೂಪವಾದ, ಸಗುಣವಾದ, ಈಶ್ವರನನ್ನು ಸೇವಿಸು.’. ಅದರಿಂದ, ಪ್ರತಿಬಿಂಬವಾದ ಜೀವಕ್ಕೆ, ತಾನಾಗಿಯೇ ಸೌಖ್ಯ ದೊರಕುತ್ತದೆ,’ ಎಂದು ಭಗವತ್ಪಾದರು, ಮಾನವನನ್ನು ಕುರಿತು ಹೇಳಿದರು.. ಅವರು ಶ್ರೀ ನರಸಿಂಹನನ್ನು ಸ್ಥುತಿಸುವ ಸಮಯದಲ್ಲಿ ಎಂತಹ ಅಧ್ಭುತ ತತ್ವವನ್ನು ಅಧ್ಭುತತತ್ವವನ್ನು ತೋರಿಸಿದ್ದಾರೆ.ಎಂಬುದನ್ನು ನಾವು ಕಾಣಬಹುದು.
ಇದೇ ರೀತಿ, ಶ್ರೀ ನೀಲಕಂಠ ದೀಕ್ಷಿತರು, ಒಂದು ಕಡೆಯಲ್ಲಿ,
ಅಯಿ ಪ್ರಾತಚ್ಚೇದಃ ಪರಮಮುಪದೇಶಾಂ ಶ್ರುಣು ಮಮ ಸ್ಮರಾರೇರರ್ಚಾಯಂ ಪಟುಶೂ ಕರಣೇಶೂ ಸ್ಮರ ಬಲಂ
’ ಹೇ ಮನವೇ, ’ನಿನಗೊಂದು ಒಳ್ಳೆಯ ಹಿತೋಪದೇಶವನ್ನು ಹೇಳುತ್ತೇನೆ ಕೇಳು.’ ’ಇಂದ್ರಿಯಗಳು ಸರಿಯಾಗಿರುವ ಸಮಯದಲ್ಲಿಯೇ ನೀನು ಭಗವಮ್ತನನ್ನು ಪೂಜಿಸಿ ಅವನನ್ನು ಸೇವಿಸಬೇಕು..’ ಎಂದರು. ಕಾರಣ, ಒಬ್ಬನು ದೇಗುಲಕ್ಕೆ ಹೋಗಬೇಕೆಂದರೂ, ಅವನ ಶಕ್ತಿ ಉಡುಗಿದಮೇಲೆ, ಹೋಗಲಾಗುವುದಿಲ್ಲ. ಶಿವರಾತ್ರಿಯಂದು, ಜಾಗರಣೆ ಮಾಡಿ ಶಿವಪೂಜೆ ಮಾಡಲೋ,ಗೋಕುಲಾಷ್ಟಮಿಯಂದು, ಅರ್ಧ ರಾತ್ರಿಯವರೆಗೆ ಪೂಜೆ ಮಾಡಲು ನೆನೆಸಿದರೆ ಆಗುವುದಿಲ್ಲ.. ಒಬ್ಬನು, ಕೃತಾರ್ಥನಾಗಲು, ಇಂದ್ರಿಯಗಳು ಸರಿಯಾಗಿರುವ್ಗೆ, ಭಗವದಾರಾದನೆ, ಸೇವೆ, ಮಾಡಬೇಕು. ಜೀವನಿಗೆ ಆನಂದ ದೊರಕಲು, ಮುಪ್ಪು’ಬರುವ ಮುಂಚೆಯೇ, ಶ್ರೀ ಭಗವತ್ಪಾದರು ಹೇಳಿದ ರೀತಿಯಲ್ಲಿ, ಈಶ್ವರನನ್ನು ಆರಾಧಿಸಬೇಕು.
ತವಹಿತಮೇಕಂ ವಚನಮ್ ಲಕ್ಷ್ಯೇ ಶ್ರುಣು ಸುಖಕಾಮೋ ಯದಿ ಸತತಂ
ಸ್ವಪ್ನೇ ದೃಷ್ಟಂ ಸಕಲಂ ಹಿ ಮ್ರುಶಾ ಜಾಗ್ರತಿ ಚ ಸ್ಮರ ತತ್ವದಿತಿ
ಎಂದು ಒಂದು ಸ್ಲೋಕವನ್ನು ರಚಿಸಿದ್ದಾರೆ. ’ಎಲ್ಲರಿಗೂ, ದುಃಖಮಯವಾದ ಈ ಸಂಸಾರ ಯಾವುದರಿಂದ ಉಂಟಾಯಿತು.’.ನಾವು ನೋಡುವ ಈ ವಿಶ್ವವು ಎಲ್ಲವೂ ನಿಜ,’ ಎಂಬ ಒಂದು ತಪ್ಪಾದ ಸಮಾಚಾರದ’ ಫಲವೇ.ಈ ಸಂಸಾರದ ಉದಯ.
ಒಬ್ಬನು, ಏನೇನೋ, ಕನಸುಗಳನ್ನು ಕಾಣುತ್ತಿರುತ್ತಾನೆ. ಕನಸಿನ ಸಮಯದಲ್ಲಿ ಅವನು ಕಾಣುವುದೆಲ್ಲಾ ನೈಜವಾಗೇ ತೋರುತ್ತ್ತದೆ.
ಶ್ರುತಿಯಲ್ಲಿಯೇ ಒಂದೆಡೆ, ’ನ ತತ್ರ ರಥಾ ನ ರಥಯೋಗಾ ನ ಬಂದನಃ’
ಎಂದು ಹೇಳಲ್ಪಟ್ಟಿದೆ. ಕನಸಿನಲ್ಲಿ, ಅವನು ದೊಡ್ಡ ದೊಡ್ಡ ರಥಗಳನ್ನೂ, ಸಾರಥಿಗಳನ್ನೂ, ಮಾರ್ಗ ಪಥಗಳನ್ನೂ, ಕಾಣುತ್ತಾನೆ..ಎಲ್ಲೆಲ್ಲೋ, ಹೋಗಿ ಬರುತ್ತಾನೆ.ಕನಸಿನಿಂದ ಜಾಗೃತ ನೆಲೆಗೆ ಬಂದೊಡನೆ’ ಏನು ಕಂಡೆ, ಎಂದರೆ, ಅದಕ್ಕವನು ಏನೋ ಕಂಡೆ. ಅದೆಲ್ಲವೂ ಸುಳ್ಳು,; ಎನ್ನುತ್ತಾನೆ.. ’ಹೇಗೆ ಕನಸಿನಲೋಕವನ್ನು ಸುಳ್ಳೆನ್ನುತ್ತೇವೆಯೋ’, ಹಾಗೆಯೇ, ’ಜಾಗೃತ ಸಮಯದ ನಾವು ಕಾಣುವ ಜಗವೂ, ಅನಿತ್ಯವೇ’. ಕನಸಿನ ಲೋಕವನ್ನು ಸುಳ್ಳೆಂದರೂ, ಎಚ್ಚರದಲ್ಲಿ ಕಾಣುವ ಜಗವನ್ನು ಅಷ್ಟು ಸುಲಭವಾಗಿ ಸುಳ್ಳೆನ್ನಲಾಗದು. ಇದರ ಬಗ್ಗೆ ಶ್ರೀ ಶಂಕರರು;
ತವ ಹಿತಮೇಕಂ ವಚನಮ್ ವಕ್ಷ್ಯೇ, ಶೃಣು;’ ನಿನ್ನ ಹಿತಕ್ಕಾಗಿ,ವಚನವೊಂದನ್ನು ಹೇಳುತ್ತೇನೆ ಕೇಳು’ ಎಂದರು.
ಅವರ ಉಪದೇಶ ಯಾವಾಗ ಉಪಯೋಗವಾಗುತ್ತದೆ. ’ಸುಕಕಾಮೋ ಯತಿ ಸತತಂ’
ಯಾವಾಗಲೂ ನೀನು ಸುಖವನ್ನರಸಿದರೆ, ಈ ಉಪದೇಶ ನಿನಗೆ ಉಪಯೋಗವಾಗುತ್ತದೆ,ಎನ್ನುತ್ತಾರೆ. ಏನದು ಉಪದೇಶ;
’ಸ್ವಪ್ನೇ ದೃಷ್ಟಂ ಸಕಲಂ ಹಿ ಮೃಶಾ ಜಾಗ್ರತಿ ಚ ಸ್ಮರ ತತ್ವದಿತಿ’
ಕನಸಿನಲ್ಲಿ ಕಾಣುವುದು ಸುಳ್ಳೆಂದು ತಿಳಿದಿರುವಂತೆಯೇ ಜಾಗ್ರತಿಯಲ್ಲಿಯೂ ಕಣುವುದೆಲ್ಲಾ ಸುಳ್ಳೆಂದು ಅರಿಯಬೇಕು.’ಎಂಬುದು ಅವರ ಉಪದೇಶ.
.
ಹೀಗೆ, ಶ್ರೀ ಭಗವತ್ಪಾದರು, ನಮಗೆ ವೇದಾಂತ ತತ್ವಗಳನ್ನೂ ಸೇರಿಸಿ,ಸ್ತೋತ್ರಗಳನ್ನಿತ್ತರು.
ಅದರಲ್ಲಿ ನಾವು, ಬರೀ, ಶ್ಲೋಕವನ್ನು ಮಾತ್ರ ಕಂಠಪಾಠ ಮಾಡಿ ಭಗವಂತನ ಸನ್ನಿಧಿಯಲ್ಲಿ ಹೇಳುವುದರ ಜೊತೆಗೆ, ಅದರಲ್ಲಿ ಶ್ರೀ
ಭಗವತ್ಪಾದರು ಹೇಳಿರುವ, ತತ್ವಗಳನ್ನು ಅನುಸಂಧಾನ ಮಾಡಿಕೊಂಡು ಬಂದರೆ, ನಮಗೆ ಬಹಳ ವಿಶೇಷ ಫಲ ದೊರಕುತ್ತದೆ.
ಗಾಯತ್ರಿ ಮಂತ್ರದ ಜೊತೆಗೆ ಇತರ ಮಂತ್ರವನ್ನೂ ಜಪಿಸುವಾಗ ಅದರರ್ಥ ತಿಳಿದು ಜಪಿಸಿದರೆ ಅ ಫಲವನ್ನು ಕೊಡುತ್ತದೆ..ಶ್ಲೋಕಗಳ ವಿಷಯದಲ್ಲಿಯೂ ಅಂತೆಯೇ. ಇದು ಭಗವತ್ಫಾದರು ನಮಗೆ ಗೈದ ಮಹಾ ದೊಡ್ಡ ಉಪಕಾರ.. ಅವರು ನಮಗೆ ಎಷ್ಟೇ ಉಪಕಾರವನ್ನು ಮಾಡಿದ್ದರು, ನಾವದೆಲ್ಲವನ್ನೂ ಮರೆತು,ಹೊರಗಿನ ವಿಷಯದಲ್ಲಿಯೇ ಆಸಕ್ತಿ ತೋರುತ್ತಿದ್ದೇವೆ..ಹೀಗಿರಬಾರದು. ಅವರ ತತ್ವವನ್ನು ತಿಳಿಸುವ ಗ್ರಂಥಗಳನ್ನು ಸಾಧ್ಯವಾದಷ್ಟೂ ಅನುಸಂಧಾನ ಮಾಡಬೇಕು..
ನೇಹಾಬಿಕ್ರಮ ನಾಶೋಸ್ತಿ ಪ್ರತ್ಯವಾಯೋ ನವಿದ್ಯತೆ ಸ್ವಲ್ಪಮಯಸ್ಯ ಧರ್ಮಸ್ಯ ತ್ರಾಯತೋ ಮಹತೋ ಭಯಾತ್
ಇದರಲ್ಲಿ, [ಕರ್ಮಯೋಗ] ಮಾಡಿದ ಪ್ರಯತ್ನ ವ್ಯರ್ಥವ್ಗುವುದಿಲ್ಲ. ಇದು ವಿರೋಧ ಫಲವನ್ನು ತರುವುದಿಲ್ಲ. ಈ ಧರ್ಮದ ಅಲ್ಪವು ಕೂಡಾ ಭಯದಿಂದ ಕಾಪಾಡುತ್ತದೆ..ಎಂದು ಶ್ರೀ ಕೃಷ್ಣನು ಶ್ರೀ ಭಗವತ್ ಗೀತೆಯಲ್ಲಿ ಹೇಳಿದ್ದಾನೆ.
ಇದಕ್ಕಾಗಿ ನಮ್ಮ ಬಾಳಿನಲ್ಲಿ ಸ್ವಲ್ಪ ಹೊತ್ತನ್ನಾದರೂ ಇದಕ್ಕೆ ವಿನಿಯೋಗಿಸಬೇಕು. ಎಷ್ಟೋ ಅನಾವಶ್ಯ ಕೆಲಸಗಳಲ್ಲಿ, ನಾವು ನಮ್ಮ ಸಮಯವನ್ನು ವ್ಯರ್ಥಮಾಡುತ್ತೇವೆ. ಅದರ ಬದಲು, ಶ್ರೀ ಭಗವತ್ಪಾದರ ಚಿಂತನೆ, ಅವರ ಕೃತಿಗಳ ಅಧ್ಯಯನ, ಮುಂತಾದ ಉಪಯುಕ್ತ ಕಾರ್ಯಗಳಲ್ಲಿ ವಿನಿಯೋಗಿಸಿದರೆ, ನಮಗೆ ಬಹಳ ’ಶ್ರೇಯಸ್ಸು’ ಉಂಟಾಗುತ್ತದೆ.
=====================
ಅಧ್ಯಾಯ-೨೩.
==========
ಶ್ರೀ ಶಂಕರರನ್ನು ನಾವು ಮರೆಯ ಕೂಡದು.
========================================
ನಮ್ಮ ಭಾರತ ದೇಶದಲ್ಲಿ ಎಷ್ಟೋ ಸಾವಿರಾರು ವರ್ಷಗಳಿಂದ ಒಂದು ಧರ್ಮ ಪರಂಪರೆ ಬರುತ್ತಿದೆ.
,
ದರ್ಮ-ಅಧರ್ಮ ಎಂಬ ಮಾತುಗಳನ್ನು, ನಾವು ನೆನ್ನೆ-ಮೊನ್ನೆಯಿಂದ ಉಪಯೋಗಿಸುತ್ತಿಲ್ಲ. ಸೃಷ್ಟಿಕಾಲದಿಂದಲೂ, ಈ ಮಾಥುಗಳುನ್ನು ಹೇಳಿಕೊಂಡು ಬರುತ್ತಿದ್ದೇವೆ. ಧರ್ಮಾಚರಣೆಯಿಂದ ನಲ್ಮೆ, ಅಧರ್ಮಾಚರಣೆಯಿಂದ ದುಃಖ ಎಂದು ಆಗಿನಿಂದಲೇ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ.. ನಾವು ಅದನ್ನು ಅನುಸರಿಸುತ್ತಲೇ ಇದ್ದೇವೆ. ಧರ್ಮ ರಕ್ಷಣೆಯೆಂಬ ಈ ಮಹತ್ಕಾರ್ಯಕ್ಕಾಗಿ ನಮ್ಮ ಈ ನಾಡಿನಲ್ಲಿ ಎಷ್ಟೋ ಮಹಾತ್ಮರು ಅವತರಿಸಿದ್ದು ಈ ನಾಡಿನ ಇತಿಹಾಸವನ್ನವಲೋಕಿಸಿದರೆ
ಅಗೆ ತಿಳಿಯುತ್ತದೆ. ಶ್ರೀ ರಾಮ, ಶ್ರೀ ಕೃಷ್ಣ, ಇದೇ ಉದ್ದೇಶಕ್ಕಾಗಿ ಅವತರಿಸಿದ ಮಹಾತ್ಮರು.
ಹಾಗೆಯೇ,ಶ್ರೀ ಆದಿದಿಶಂಕರರು, ಜನಗಳಿಗೆ, ಧರ್ಮ ತತ್ವವನ್ನು ಬಲು ಸುಲಭವಾಗಿ ವಿವರಿಸಿ, ಜನರು ಸನ್ಮಾರ್ಗದಲ್ಲಿ ನಡೆಯಲು ಸಹಕರಿಸಿದರು.. ತಪ್ಪಾದ ಮಾರ್ಗದಲ್ಲಿ ನಡೆಯುತ್ತಿದ್ದ ಜನರನ್ನು ಋಜುಮಾರ್ಗಕ್ಕೆ ತಂದರು.
ಶ್ರೀ ಶಂಕರರ ಅವತಾರಕ್ಕೆ ಮುಂಚೆ, ಎಷ್ಟೋ, ದುಷ್ಟ ಸಿದ್ಧಾಂತಗಳು, ಎಷ್ಟೋ ಧರ್ಮವಿರೋಧಿ ಮಾರ್ಗಗಳು,ಪ್ರಸಾರದಲ್ಲಿದುವು..ಎಲ್ಲವೂ ತಪ್ಪಾದ ಮಾರ್ಗಗಳಾಗುತ್ತವೆ. ಒಬ್ಬನು ಇನ್ನೊಬ್ಬನನ್ನು ಬಲಿ ಕೊಟ್ಟರೆ, ಒಳ್ಳೆಯದಾಗುವುದೆಂದು ಹೇಳುತ್ತಾನೆ.. ನಮ್ಮ ಎದುರಿರುವ ಒಬ್ಬ ವ್ಯಕ್ತಿಯ ಕತ್ತು ಕತ್ತರಿಸಿದರೆ, ಒಳ್ಳೆಯದೆಂದು ಹೇಳುವುದು, ಒಂದು
ಮಾರ್ಗವೇ. ಅದು ಧರ್ಮವೇ. ಅದನ್ನನುಸರಿಸಬೇಕೆ. ಇಂತಹ ಮಾರ್ಗದಲ್ಲಿ ನಾಡೆದರೆ, ಅಂತಿಮದಲ್ಲಿ ದುಃಖವನ್ನೇ ಎದುರಿಸಬೇಕಾವುದು..ಪ್ರಾರಂಭದಲ್ಲಿ, ಇದನ್ನು ಅವನಿಗೆ ಹೇಳಿಕೊಡುವಾಗ, ಬಹಳ ಹೊಗಳಿ ಮಾತನಾಡುತ್ತಾನೆ.
’ನಾನು ಹೇಳಿದಂತೆ ನೀನು ಮಾಡಿದರೆ, ಕಡೆಯಲ್ಲೇನಾಗುವುದು ನೋಡು. ಅರಸನೇ ನಿನ್ನ ಕೈಗೆ ಬರುತ್ತಾನೆ. ಜಗದ
ಜನರೆಲ್ಲರೂ, ನೀನು ಹೇಳಿದಂತೆ ಕೇಳುವರು. ಹೀಗೆ, ಹೇಳುವಾಗ ಯಾರಿಗೆ ತಾನೆ ಆಸೆಯುಂಟಾಗುವುದಿಲ್ಲ. ಹಾಗಾದರೆ, ’ಒಂದು ಕೈ ನೋಡೋಣವೆನಿಸುತ್ತದೆ..’ ಹಾಗೆ ಅನಿಸಿದರೆ,ನಾನೇನು ಮಾಡಬೇಕೆಂದು ಕೇಳುವನು.’ ಏನು ಮಾಡಬೇಕೆ. ನಿನ್ನ ಅಣ್ಣನ ತಲೆಯನ್ನು ಕಡಿದುಕೊಂಡು ಬಾ’ ಎನ್ನುವನು. ಹೆಚ್ಚು ಫಲದ ಆಸೆಗಾಗಿ, ಅನ್ನನ ತಲೆಯನ್ನು ಕಡಿದುಕೊಂದು ಬಂದರೆ,
’ಈಗೇನು ಮಾಡಬೇಕೆಂದರೆ, ತಂದೆಯ ತಲೆಯನ್ನು ತಾ ’ಎನ್ನುವನು ಅದನ್ನೂ ಮಾಡಿದ ಮೇಲೆ, ಕಡೆಗೆ, ವಿಪರೀತವಾದ ಫಲವನ್ನು ತರುವುದು.. ಅಧಿಕ ಫಲಕ್ಕೆ ಆಸೆ ಪಟ್ಟು, ಅಣ್ಣ, ಅಪ್ಪನನ್ನು ಕೊಂದೆ.ನು ಬಹಳ ಪಾಪಿಯಾದೆ.ನನಗೆ
ಎನೇನೋ ದೊರಕುವುದೆಂದು ಅವರು ಹೇಳಿದರು. ಅನ್ನ-ಅಪ್ಪರನ್ನು ಕೊಂದ ಪಾಪವೇ ನನಗುಳಿಯಿತು, ಎಂಬ ಪಶ್ಚಾತ್ತಾಪದಲ್ಲಿ ಮುಗಿಯುತ್ತದೆ..ಇಂತಹ ಎಷ್ಟೊ ದುಷ್ಟ ಪದ್ದತಿಗಳು ಆ ಕಾಲದಲ್ಲಿದ್ದುವು. ಶ್ರೀ ಭಗವತ್ಪಾದರು ಅವೆಲ್ಲವನ್ನೂ
ನೀಗಿಸಿದರು. ಶ್ರೀ ಶಂಕರ ಅಷ್ಟೋತ್ತರ ನಾಮಾವಳಿಯಲ್ಲಿ,
’ಓಂ ದ್ವಿಸಪ್ತತಿ ಮದೊಚ್ಚೇತ್ರೇ ನಮಃ ಓಂ ಸರ್ವ ದಿಗ್ವಿಜಯ ಪ್ರಭವೆ ನಮಃ’ ಎಂದಿದೆ.’ದ್ವಿಸಪ್ತತಿಮದೋಚ್ಚೇತ್ರೇ’
ಎಂದರೆ, ’ಇಂತಹ ವಿರೋಧ ಮತಗಳಿದ್ದುವು. ಅದೆಲ್ಲವನ್ನೂ, ಶ್ರೀ ಶಂಕರರು ನಾಶಗೊಳಿಸಿದರು.’ಸರ್ವ ದಿಗ್ವಿಜಯ-
ಪ್ರಭವೇ’ ಈ ಭಾರತ ದೇಶವನ್ನೆಲ್ಲಾ ದಿಗ್ವಿಜಯ ನಡೆಸಿದ ಮಹಾಪ್ರಭು ಆದಿಶಂಕರರು.
ಅಂತಹ ಮಹತ್ಕಾರ್ಯವನ್ನು ನಡೆಸಿದ ಶ್ರೀ ಆದಿಶಂಕರರು ಅವತರಿಸದಿದ್ದರೆ,ಈ ದಿನ ನಮ್ಮ ಪರಿಸ್ಥಿತಿ ಏನಾಗುತ್ತಿತೆಂದು ಊಹಿಸಲೂ ಸಾಧ್ಯವಾಗುವುದಿಲ್ಲ..
.
ಈ ದಿನ ನಾವು ಎಷ್ಟೋ ಧರ್ಮಸ್ಥಾಪನೆಗಳನ್ನು ನೋಡುತ್ತೇವೆ. ಈ ’ವಿವೆಕಾನಂದ ಕೇಂದ್ರ ಒಂದು ದೊಡ್ಡ ಧರ್ಮ-
ಸ್ಥಾಪನೆ. ಸನಾತನ ಧರ್ಮಕ್ಕೆ ಮಹಾನ್ ಸೇವೆ ಸಲ್ಲಿಸುತ್ತಿರುವ ಸ್ಥಾಪನೆ. ಆದಿನ ಶ್ರೀ ಶಂಕರರು ಅವತರಿಸಿದ್ದ-
ರಿಂದಲೇ, ಈ ದಿನ ಇಂತಹ ಹಲವು ಸಂಸ್ಥೆಗಳು ಹಲವು ಸತ್ಕಾರ್ಯಗಳನ್ನು ಮಾಡುವುದನ್ನು ನವು ಕಾಣಬಹುದು.
ಶ್ರೀ ಶಂಕರರು ಅವತರಿಸಿ, ಧರ್ಮಸಂರಕ್ಷಣೆಣೆಯನ್ನು ಮಾಡಿ, ಒಂದು ಪರಂಪರೆಯನ್ನು ಏರ್ಪಡಿಸಿದ್ದರಿಂದ,
ಆ ಪರಂಪರೆಯಲ್ಲಿ ಬಂದ ’ತೋತಾಪುರಿ’ ಎಂಬ ಮಹಾತ್ಮರಿಂದ ದೀಕ್ಷೆ ಪಡೆದವರು ಶ್ರೀ ರಾಮಕೃಷ್ಣ ಪರಮಹಂಸರು.. ಇವರ ಬಳಿ ದೀಕ್ಷೆ ಪಡೆದವರು ಶ್ರೀ ಸ್ವಾಮಿ ವಿವೇಕನಂದರು. ಶ್ರೀ ಭಗವತ್ಪಾದರ ಪರಂಪರೆ-
ಯಲ್ಲಿ ಶ್ರೀ ತೋತಾಪುರಿ ಮಹಾಸ್ವಾಮಿಗಳು ಬರದಿರದಿದ್ದರೆ, ಶ್ರೀ ರಾಮಕೃಷ್ಣರು ಹೇಗೆ ಬರುತ್ತಿದ್ದರು. ಶ್ರೀ
ವಿವೇಕನಂದರು ಹೇಗೆ ಬರುತ್ತಿದ್ದರು. ಅವರಿಲ್ಲದಿದ್ದರೆ, ಇಂತಹ ಆಶ್ರಮಗಳು ಕಾರ್ಯಗಳು, ಹೇಗೆ ನಡೆಯುತ್ತವೆ.
ಇದಕ್ಕೆಲ್ಲಾ ಮೂಲಕಾರಣ, ಅಂದು ಶ್ರೀ ಶಂಕರರು ನಡೆಸಿದ ಮಾಹಾಕಾರ್ಯ.ಅಂದು ಶ್ರೀ ಆದಿಶಂಕರರು ಅವತರಿಸಿದ್ದು.
ಆದ್ದರಿಂದ, ಈ ದಿನ ಸನಾತನ ಧರ್ಮವನ್ನಾಚರಿಸುವವನು, ತನ್ನನ್ನು, ’ಹಿಂದು, ಎಂದು ಹೇಳಿಕೊಳ್ಳುವವನು, ಶ್ರೀ ಶಂಕರರಿಗೆ ಬಹಳ ಕೃತಞ್ಜ್ಯನಾಗಿರಬೇಕು.
ಶಂಕರರಿಗೆ ಬಹಳ ಕ್ರುತಜ್ಞ್ಯನಗಿರಬೇಕು. ನಾವಿಂದು, ಒಂದು ಸರಿಯಾದ ನೆಲೆಯಲ್ಲಿದ್ದೇವೆಂದರೆ, ಅದಕ್ಕೆ ಕಾರಣ,
ಶ್ರೀ ಆದಿ ಶಂಕರರ ಅವತಾರದ ಫಲವನ್ನು ನಾವೆಂದೂ ಮರೆಯಕೂಡದು. ಇದನ್ನು ಮರೆತರೆ, ಅದು ಒಂದು ಮಹಾನ್ ತಪ್ಪಾಗುತ್ತದೆ.
.
ಒಂದು ದೊಡ್ಡ ಮರವನ್ನು ನೋಡುತ್ತೇವೆ.ಆ ಮರದಲ್ಲಿ, ಕೊಂಬೆಗಳು, ಕಾಯಿಗಳು,ಪುಷ್ಪಗಳು, ಮತ್ತು ಹಣ್ಣುಗಳಿವೆ.
ಆದರೆ, ಅವೆಲ್ಲವೂ, ಇರುವುದು ಮರದ ಬೇರಿರುವುದರಿಂದ. ಬೇರಿಲ್ಲದಿದ್ದರೆ ಫಲವೆಲ್ಲಿರುತ್ತದೆ. ಆದ್ದರಿಂದ, ಈ ಕೊಂಬೆ,
ಕಾಯಿ, ಪುಷ್ಪ, ಫಲಗಳನ್ನು ಹೊಗಳಿ, ಬೇರನ್ನು ಮರೆತರೆ ಹೇಗೆ. ಅದು ಮಹಾ ತಪ್ಪಾಗುತ್ತದೆ..ಆದ್ದರಿಂದ, ಎಲ್ಲಕ್ಕೂ, ಮೂಲ ಕಾರಣವಾದ ಬೇರನ್ನು ಮೊದಲು ಜ್ಞಾಪಿಸಿಕೊಳ್ಳಬೇಕು.. ಅದು ಸರಿಯಾಗಿರುವವರೆಗೆ, ಮಿಕ್ಕೆಲ್ಲವೂ, ಸರಿಯಾಗಿರುತ್ತದೆ.
ಅಂತೆಯೆ, ಭಗವಾನ್ ಶಂಕರರ ಅವತಾರದಿಂದ ಇವೆಲ್ಲವೂ ಆಗಿವೆ. ಅದ್ದರಿಂದ ನಮಗೆ, ಶ್ರೀ ಶಂಕರರು ಪ್ರಥಮ
ಪೂಜಾರ್ಹರು. ಅಂತಹ ಶ್ರೀ ಶಂಕರರು,ಭಾರತ ದೇಶದಲ್ಲಿ ಧರ್ಮ ಪ್ರಸಾರವು ಸತತವಾಗಿರಬೇಕೆಂಬ, ಒಂದು ಮಹಾನ್ ದೃಷ್ಟಿಯಿಂದ, ಚತುರಾಮ್ನಾಯ ಮಠಗಳನ್ನು ಸ್ಥಾಪಿಸಿದರು.
ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಚತುರಾಮ್ನಾಯ ಮಠಗಳನ್ನು ಸ್ಥಾಪಿಸಿದರು. ಆ ಚತುರಾಮ್ನಾಯ ಮಠಗಳಿಗೆ ಶ್ರೀ ಶಂಕರರು ಒಂದು ಮಹಾಶಾಸನವನ್ನು ಮಾಡಿದರು.. ಅದರಲ್ಲಿರುವ ಅವರ ಆದೇಶವನ್ನನುಸರಿಸಿ ನಮ್ಮ [ಗುರುಗಳ] ಯಾತ್ರೆ ತೊಡಗುತ್ತದೆ.ಎಲ್ಲಿ ಹೋದರೂ, ಜನರಿಗೆ, ಶ್ರೀ ಆದಿಶಂಕರರ ಹೆಸರನ್ನು ಕೇಳಿದರೆ, ಅಪರಿಮಿತ
ಭಕ್ತಿಯು, ಶ್ರದ್ಧೆಯೂ ಉಕ್ಕುವುದು. ಇದನ್ನು ನಾವು [ಗುರುಗಳು], ಕನ್ಯಕುಮಾರಿಯಿಂದ, ಶ್ರೀ
ಶ್ರೀನಗರದವರೆಗೂ, ಕಂಡಿದ್ದಾರೆ. ಸನಾತನಿ ಎಂದರೆ, ’ಹಿಂದು’ ಎಂದರೆ, ಅವನಿಗೆ ಶ್ರೀ ಶಂಕರರ ಬಗ್ಗೆ ಒಂದು
ಶಂಕರರ ಬಗ್ಗೆಒಂದು ಶ್ರದ್ಧೆಯೂ, ಗೌರವವೂ ತನಗರಿವಿಲ್ಲದಂತೆಯೇ ಬಂದುಬಿಡುತ್ತದೆ. ಅವರು ಒಬ್ಬ ಮಹಾತ್ಮರು. ಅವರಂತಹ ಒಬ್ಬ ಮಹಾತ್ಮರು
ಇದುವರೆಗೆ ಭಾರದಲ್ಲಿ ಜನಿಸಲಿಲ್ಲ ಎಂದು ಯಾರನ್ನು ಕೇಳಿದರೂ, ಪರಮ ತೃಪ್ತಿಯಿಂದ ಹೇಳುವರು. ಅಂತಹ ಮಹಾ ವ್ಯಕ್ತಿ ನಮ್ಮ ಗುರುಪರಂಪರೆಗೆ,ನಾಯಕಮಣಿಯಾಗಿದ್ದರು. ಅವರ ಪರಂಪರೆಯಲ್ಲಿ ಬಂದ ನಾವೂ [ಗುರುಗಳು]ಬಹಳ ಪುಣ್ಯಶಾಲಿಗಳೆಂದೇ ಹೇಳಬೇಕು.
=============================
ಅಧ್ಯಾಯ-೨೪.
============
ಆತ್ಮ ಜ್ಞಾನವೇ ಬಾಳಿನ ಗುರಿ.
============================
ಶ್ರೀ ಭಗವದ್ ಗೀತೆಯಲ್ಲಿ ಶ್ರೀ ಕೃಷ್ನನು, ’ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ಎಂದನು.
. ಎಂದರೆ,’ ಜ್ಞಾನಕ್ಕೆ ಸಮಾನವಾದ ಪರಿಶುದ್ಧ ಮಾಡುವ ವಸ್ತು ,
ಬೇರಿಲ್ಲ ಎನ್ನುವುದು ಇದರರ್ಥ. ಇಲ್ಲಿ, ಜ್ಞಾನವೆಂಬ’ ಪದವು ’ಲೌಕಿಕ ಞ್ಞಾನವನ್ನು’ ತಿಳಿಸುವದಿಲ್ಲ.ಭಗವಂತನ ಬಗೆಗಿನ ಜ್ಞಾನವನ್ನು ಸೂಚಿಸುತ್ತದೆ. ಅದ್ದರಿಂದ ಮನುಷ್ಯರಾಗಿ ಜನಿಸಿದವರು, ಎನನ್ನಾದರೂ,ಸಂಪಾದಿಸಬೇಕೆಂದಿದ್ದರೆ. , ಅದು ’ಈ ಪರಮಾತ್ಮ ಜ್ಞ್ಯಾನವನ್ನು’ ಹೊರತು ಬೇರಲ್ಲ..’ ಮನುಷ್ಯನ ಎಲ್ಲಾ ಪ್ರಯತ್ನಗಳೂ,ಈ ಈಶ್ವರ ಸಾಕ್ಷಾತ್ಕಾವನ್ನು ಪಡೆಯಲು ಕಾರ್ಯಗತವಾಗಬೇಕು.
.
’ಈಶ್ವರ ಸಾಕ್ಷಾತ್ಕಾರವನ್ನು ’ಮುಕ್ತಿ’ ಎಂದೂ ಕರೆಯಬಹುದು. ಮುಕ್ತಿ ಎಂದರೆ ’ಬಿಡುಗಡೆ.’
ಯಾವುದರಿಂದ ಬಿಡುಗಡೆ. ’ಬಂಧನದಿಂದ ಬಿಡುಗಡೆ.’ ಬಂಧವೆಂದು ಇಲ್ಲಿ ಏನನ್ನು ಹೇಳುತ್ತೇವೆ.’
’ಹುಟ್ಟು-ಸಾವುಗಳನ್ನೇ ಬಂಧವೆನ್ನುವರು.’ ಈಗ ಈ ಜೀವನ ದೊರಕಿದೆ. ಹಿಂದೆ ಎಷ್ಟೋ ಜನ್ಮಗಳು ದೊರಕಿದ್ದವು.. ಮುಂದೆ ಎಷ್ಟೋ ಜನ್ಮಗಳು ದೊರಕಲಿವೆ.ಇಲ್ಲೊಂದು ಪ್ರಷ್ನೆ ಏಳಬಹುದು. ಜನ್ಮಗಳು ಬಂದರೇನು,,..ಇದರಿಂದ ದೊಡ್ಡ ಪ್ರಶ್ನೆ ಏನು ಉದ್ಭವಿಸುವುದು. , ಎಂದು ಕೆಲವರು ಚಿಂತಿಸಬಹುದು.
ಮತ್ತೆ ಮತ್ತೆ ಹುಟ್ಟು-ಸಾವಿನ ಚಕ್ರದಲ್ಲಿ ಸಿಲುಕಿದರೆ,ಮನುಷ್ಯನು ಸಂತೋಷವನ್ನು ಕಳೆದುಕೊಳ್ಳುತ್ತಾನೆ..ಇದೇ ಪ್ರಶ್ನೆ. ಮತ್ತೊಂದು ಪ್ರಶ್ನೆ ಉದ್ಭವಿಸಬಹುದು. ’ಏನು ಸ್ವಾಮಿಗಳೇ, ಸಂತೋಷವೇ ಇಲ್ಲ ಎನ್ನುವಿರಲ್ಲಾ’. ಸೌಖ್ಯವಾಗಿ ಉಂಡು-ಮಲಗುತ್ತೇವೆ.ಬಾಳನ್ನು ಚೆನ್ನಾಗಿಅನುಭವಿಸುತ್ತಿದ್ದೇವೆ, .ಎಂದು ಕೇಳಿದರೆ,ಇಲ್ಲಿ ನಾವು ಚೆನ್ನಾಗಿ ಯೋಚಿಸಿ ನೋಡಬೇಕು.’ಚೆನ್ನಾಗಿ
ಮಲಗಿ ತಿಂದರೆ ಸಂತೋಷಕ್ಕೆ’, ಕಾರಣವಾಗುವುದೇ.ಖಂಡಿತವಾಗಿಲ್ಲ. ಏಕೆಂದರೆ, ಇದು ಶಾಶ್ವತವಾದುದಲ್ಲ.. ಇಂತಹ ಸಂತೋಷಗಳಿಗೆ ಒಂದು ಅಂತ್ಯವಿದೆ.ಅದಿಕ ಊಟದ ಫಲ ವೈದ್ಯರ ದರ್ಶನ.. ಊಟದಲ್ಲಿ ರುಚಿ ಹೆಚ್ಚು ಹೆಚ್ಚಾದರೂ ವೈದ್ಯನ ದರ್ಶನ ತಪ್ಪಿಸಲಾಗುವುದಿಲ್ಲ.. ಇಂತಹ ಸಂತೋಷದಿಂದ ಲಾಭವೇನು. ಅಂತೆಯೇ, ಅಧಿಕ ,
ನಿದ್ದೆಯಿಂದಲೂ ಎದ್ದರೆ, ಶರೀರ ತೊಂದರೆಗಳು, ಉದ್ಯೋಗ ಬಾಧೆಗಳು, ಗೃಹ ತೊಂದೆರಗಳೆಂದು, ಹಲವು ಸಮಸ್ಯೆಗಳು ಎದುರಾಗುತ್ತವೆ..ನಾವು ಕಛೇರಿಗೆ ಹೋಗಿ, ಎಲ್ಲರ ಬಳಿಯೂ, ಅನುಭವಿಸುವ ಕಷ್ಟದ ಬಗ್ಗೆ ಚಿಂತಿಸಬೇಕಾಗುವುದು..ಎಂತಲೇ,ದುಃಖವೂ ಶಾಶ್ವತ ಸಂತೋಷವನ್ನು ಕೊಡುವುದಿಲ್ಲ.
’ಸ್ವಾಮಿಗಳೇ,’ ನಮಗೆ ಸಂತೋಷವಿರುವುದಿಲ್ಲ ಎನ್ನುವುದು ಸರಿ, ಆದರೆ, ’,
’ಅರಸರು, ದೊಡ್ಡ ಮನುಷ್ಯರ ಸ್ಠಿತಿಯೇನು,ಅವರು ಆನಂದವಾಗಿಯೇ ಇರುವರಲ್ಲಾ’.ಎಂದು ಕೆಲವರು ನನ್ನ [ಗುರುಗಳ]ಬಳಿ, ಕೇಳುವುದುಂಟು.. ಒಬ್ಬ ಅರಸನು ಮುಳ್ಳು ಕಿರೀಟವನ್ನೇ ಹೊತ್ತಿದ್ದಾನೆನ್ನುವದನ್ನು ನಾವರಿಯಬೇಕು.. ಒಬ್ಬ ಅರಸನು ಎಷ್ಟು ದೊಡ್ಡವನೋ, ಆಷ್ಟು ಕಷ್ಟವೆಂದೇ ಅರಿಯಬೇಕು. ಅವನಿಗೆ ಜವಾಬ್ದಾರಿ ಮತ್ತು ಕರ್ತವ್ಯಗಳು ಅಧಿಕ..ಅಂತಲೇ, ಒಬ್ಬ ಅರಸನು ಸಂತೋಷವಗಿದ್ದಾನೆನ್ನಲಾಗದು.
ಯಾರಿಗೆ ಸಂತೋಷವಿರುತ್ತದೆಂದರೆ, ಹುಟ್ಟದವನಿಗೆಂದು ಹೇಳಬಹುದು. ಕಾರಣ, ಹುಟ್ಟಿದವನು
ಕಾರಣ ಹುಟ್ಟದವನು,ಸತತವಾಗಿ ದುಃಖದಲ್ಲಿಯೇ ಇರುವನು. ಬಾಲ್ಯದಲ್ಲಿ ತನಗೆ ಬೇಕಾದ ವಸ್ತುವನ್ನು ಅತ್ತೇ ಪಡೆಯಬೇಕು..ನಂತರ ಶಾಲೆಯ ತರುಣದಲ್ಲಿಯೂ, ದುಃಖವೇ. ನಂತರ ವಿವಾಹವಾಗುತ್ತಾನೆ.
ವಿವಾಹವಾದವರು, ’ಮದುವೆಗೆ ಮುಂಚೆ ಸಂತೋಷವಾಗಿದ್ದೆನು. ಈಗಿಲ್ಲ, ಎಂದು ಹೇಳುವುದನ್ನು ಕೇಳಿದ್ದೇವೆ.
ಮುದುಕನಾದಮೇಲೆ, ಚಿಂತೆ, ಕಷ್ಟ, ಒಬ್ಬನನ್ನು ಆಕ್ರಮಿಸಿ ಬಿಡುತ್ತದೆ. .’ ಹೀಗೆ, ಹರ್ಷಕ್ಕೆಡೆಯೇ ಇಲ್ಲ..’ವ್ಯಾಕ್ರೀವ ತಿಷ್ಠತಿ ಜರಾ ಪರಿತರ್ಜಯಂತಿ’ ’,
ಮುಪ್ಪನ್ನೂ, ಅದರಿಂದ ಬರುವ ಕಷ್ಟಗಳನ್ನು ಯಾರಿಂದಲೂ, ತಪ್ಪಿಸಲು ಸಾಧ್ಯವಿಲ್ಲ.
ರೋಗಾಚ್ಚ ಶತ್ರವ ಇವ ಪ್ರಹರಂತಿ ದೇಹಂ
ಈ ಶರೀರವು ವ್ಯಾಧಿಯಿಂದ ಹೆದರಿಸಲ್ಪಡುತ್ತದೆ.ವ್ಯಾಧಿಗಳನ್ನು ಕಂಡು ಹೆದರುವುದಿಲ್ಲ ಎಂದು ಯಾರಿಂದಲೂ, ಹೇಳಲಾಗುವುದಿಲ್ಲ. ವ್ಯಾಧಿಯಿಲ್ಲದ ವ್ಯಕ್ತಿಯನ್ನು ಕಾಣುವುದು ಕಷ್ಟ.
ಹಾಗಿರುವಾಗ ಮನುಷ್ಯನಿಗೆ ’ಶಾಸ್ವತ ಸುಖವೆಲ್ಲಿ”.ಮರಣ, ಮತ್ತೆ ಮಾತೆಯ ಉದರದಲ್ಲಿ ಮತ್ತೆ, ಜನನ, ಎಂದು ಸುತ್ತಿಕೊಂಡಿದ್ದರೆ,, ಸಂತೋಷವನ್ನೆಲ್ಲಿ ಅನುಭವಿಸುವುದು. ಈ ಜನನ-ಮುಪ್ಪು, ಮರಣ,, ಎಂಬ ಚಕ್ರದಲ್ಲಿ ಸುತ್ತುತ್ತಲೇ ಇದ್ದು, ಒಂದು ಬಲೆಯಲ್ಲಿ ಬಿದ್ದಿದ್ದೆವೆ. ಇದೇ,
ಬಂಧನ. ಯಾರಿಗೆ ಈ ಬಂಧವಿದೆ. ಇದು’ ಶರೀರಕ್ಕೋ ಅಥವಾ ಅತ್ಮಕ್ಕೋ’.ಶರೀರಕ್ಕೇ ಬಂಧನ.ಆತ್ಮಕ್ಕಲ್ಲ.
.
’ನಾನು-ನೀನು ಎಂದು ಹೇಳುವಾಗ, ಒಬ್ಬನ ದೇಹಸಂಭಂದ ವಿವರವನ್ನು ಕೊಡುತ್ತೇವೆ. ಆದರೆ, ನಮ್ಮ ’ನೈಜ ಸ್ವರೂಪ’ಅತ್ಮವೆಂದರಿಯುವುದೀಲ್ಲ.’. ಆದ್ದರಿಂದ ನಾವು ಮೊದಲಿನಿಂದ ದೇಹಭಾವನೆಯನ್ನೇ ಹೊಂದಿದ್ದೇವೆ. ಈ ಬಂಧವು ಬಹು ಕಾಲದಿಂದ ಮುಂದುವರಿದುಕೊಂಡು ಬರುತ್ತಿದೆ.ಯಾರು ಆತ್ಮವನ್ನು-
ಅರಿತವರೋ, ಅವರುಗಳು ಈ ಜನನ-ಮುಪ್ಪು-ಮರಣ, ಎಂಬ ಚಕ್ರದಿಂದ ತಮ್ಮನ್ನು ಬಿಡಿಸಿಕೊಂಡಿದ್ದರಿಂದ ಅವರಿಗೆ ಬಂಧನವಿಲ್ಲ., ..ಆತ್ಮದ ನಿಜ ಸ್ವರೂಪವೇನು.’ ಶ್ರೀ ಭಗವದ್ಗೀತೆಯಲ್ಲಿ
ಶ್ರೀ ಕೃಷ್ನನು ಹೇಳುತ್ತಾನೆ.
ನ ಜಾಯತೇ ಮೃಯತೇವಾ ಕದಾಚಿತ್ ನಾಯಂ ಭೂತ್ವ ಭವಿತಾ ವಾ ನ ಭೂಯಃ
ಅಜೋ ನಿತ್ಯಃ ಶಾಸ್ವತೋಯಮ್ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ
’ಆತ್ಮ ಒಂದೇ ಬದಲಾಗದ್ದು, ವಿಕಾರವಿಲ್ಲದ್ದು. ಹುಟ್ಟುವ ಒಂದೊಂದು ಜೀವನೂ, ಬೆಳೆದು, ಮತ್ತೆ ಬಂದನಂತರ ಸಾಯುವುದು ಎನಲ್ಪಡುತ್ತದೆ...ಇದು ಎಲ್ಲಾ ಜೀವಿಗಳಿಗೂ, ಸ್ವಾಭಾವಿಕವಾದದ್ದು. ಆದರೆ,” ಆತ್ಮವೊಂದಕ್ಕೆ ಮಾತ್ರ ಇಂತಹ ಬದಳಾವಣೆಯಿಲ್ಲ.. ಅದು ಶಾಶ್ವತವಾದದ್ದು. ಆದ್ದರಿಂದಲೇ, ಅದನ್ನು ಸತ್[ಇರುವುದು] ಸ್ವರೂಪ ಎನಲ್ಪಡುತ್ತದೆ..ಯವ ವಸ್ತುವೂ, ಉತ್ಪತ್ತಿಗೆ ಮುಂಚೆ, ಅದರ ಅಳಿವಿನನಂತರವೂ, ಇರುವುದಿಲ್ಲ. ಹುಟ್ಟುವುದಕ್ಕೆ ಮುಂಚೆಯೋ, ಅಳಿದನಂತರವೋ, ಇರುವಿಕೆ ಈ ದೇಹಕ್ಕಿರುವುದಿಲ್ಲ.. ಆತ್ಮಕ್ಕೆ ಹುಟ್ಟು-ಸಾವಿಲ್ಲ. ಕಾರಣ, ಅದು ಹುಟ್ಟು-ಸಾವಿಗೆ ಕಟ್ಟುಪಡುವುದಿಲ್ಲ.
ಆತ್ಮವು ಙ್ಯಾನ ಸ್ವರೂಪ.’ಆತ್ಮವೇ ಙ್ಯಾನ, ಙಾನವೇ ಆತ್ಮ.’ ಸೂರ್ಯನನ್ನೂ ಅದರ ಪ್ರಕಾಶವನ್ನೂ ಬೇರ್ಪಡಿಸಲಾಗುವುದಿಲ್ಲ. ಸೂರ್ಯನ ಪ್ರಕಾಶವನ್ನೂ ಬೇರ್ಪಡಿಸಲಾಗುವುದಿಲ್ಲ.
ಹಾಗೆಯೇ, ಆತ್ಮವೂ, ’ಸ್ವಯಂ ಪ್ರಕಾಶವೇ. ಅದು ಶಾಶ್ವತವಾಗಿ ಪ್ರಕಾಶಿಸಿಕೊಂಡೇಯಿರುವ ಜ್‘ಜ್ಯಾನ.
ಇದನ್ನು ನಾವು ಸರಿಯಾಗಿ ಅರಿತಿಲ್ಲವಾದ್ದರಿಂದ, ಇಂತಹ ಸಂದೇಹಗಳು ಉಂಟಾಗುತ್ತವೆ.
ಸುಖವು ಹೊರಗಿನಿಂದ ಬರುವುದಿಲ್ಲ. ಆತ್ಮವನ್ನರಿತರೆ, ಅದುವೇ ಸುಖ. ಗುರುಗಳು ಒಂದು ಉದಾಹರಣೆಯನ್ನು ಹೇಳುತ್ತಾರೆ..’ಒಬ್ಬನು ತನ್ನ ಕತ್ತಿನಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದನು.. ಇದ್ದಕ್ಕಿದ್ದಂತೆ, ಒಂದು ದಿನ, ಅದು ಕಾಣಲಿಲ್ಲವೆಂದು ನೆನೆದು, ಮನೆಯ ಪೂರ್ತಿ ಹುಡುಕಿದನು. ಸರ ಸಿಕ್ಕಲಿಲ್ಲ. ಬೇರೆಯವರ ಮನೆಯಲ್ಲಿಟ್ಟಿರಬಹುದೆಂದು ಅಲ್ಲಿಯೂ ಹುಡಿಕಿದ.
ಅಲ್ಲೂ, ಸಿಗಲಿಲ್ಲ. ಒಬ್ಬ ವ್ಯಕ್ತಿ ಅವನನ್ನು ಕಂಡು, ಮರುಕದಿಂದ, ’ಸ್ವಾಮಿ, ಹಾರ ನಿಮ್ಮ ಕತ್ತಿನಲ್ಲಿಯೇ ಇದೆ. ಎಕೆ, ಬೇರೆಲ್ಲೋ ಹುಡುಕುತ್ತಿರಿ, ಎಂದನು. ’ನನಗೆ ಗೊತ್ತು.’ ನನ್ನ ವಸ್ತುಗಳು ಎಲ್ಲೂ ಕಳೆಯುವುದಿಲ್ಲ.ಮತ್ತೆ ದೊರಕುವುದು-
ಎಂದು’ ನಿಭಾಯಿಸಿದನು. ’ಅವನು ’ಕಳೆದಿದ್ದರೆತಾನೆಮತ್ತೆ ಹುಡುಕುವುದು.’. ’ಅ’ವನಿಗೆ ಅದರ ಇರುವಿಕೆಯ ಬಗ್ಗೆ ಅರಿವಿಲ್ಲ.ಅಷ್ಟೇ.’ ಕಡೆಯಲ್ಲಿ ಮಾತ್ರ
ಮಾತ್ರ,ಅವನು ನೈಜ ಸ್ಥಿತಿಯನ್ನರಿತನು. ಅಂತೆಯೇ, ’ಸುಖವನ್ನು ಹೊರಗೆಲ್ಲೂ, ಹುಡುಕಬೇಕಾದ್ದಿಲ್ಲ.ಅದು ನಮ್ಮಲ್ಲಿಯೇ ಇದೆ.’. ಅದಕ್ಕೆ ’ಸಂಭಂದಿಸಿದ ಙ್ಯಾನವಿಲ್ಲವಾದ್ದರಿಂದ ನಮಗೆ ದುಃಖ,ಕಷ್ಟಗಳ ಅನುಭವವಾಗುತ್ತದೆ.’ ಇದೇ, ವೇದಾಂತ ತತ್ವದ ಸಾರ.
’ಮಹದಾನಂದ ನಮ್ಮಲ್ಲಿಯೇ ಇದೆ,ಹೊರಗಲ್ಲ. ಅದನ್ನು ಹೊರಗೆ ಹುಡುಕುವ ಅವಶ್ಯವೂ ಇಲ್ಲ’.
ನಾವು ’ಸಚ್ಚಿದಾನಂದ ಸ್ವರೂಪ’ಎಂದರಿಯಬೇಕು.ಇದನ್ನರಿತರೆ, ನಾವು ನಮ್ಮ ಗುರಿಯನ್ನರಿತವರಾಗುತ್ತೆವೆ..ಇದೇ ’ಮುಕ್ತಿ.’ ಜನನ-ಮರಣಗಳ ಸಂಕೋಲೆಯಿಂದ ಬಿಡುಗಡೆಯೇ ಮುಕ್ತಿ.ಙ್ಯಾನವೇ ಮಾರ್ಗಮುಕ್ತಿ ಪಡೆಯಲು ಒಂದೇ ಮಾರ್ಗ.
..’
ಮನುಷ್ಯನು ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ, ಮತ್ತೆ, ಮತ್ತೆ ಜನಿಸುತ್ತಾನೆ.. ಒಬ್ಬೊಬ್ಬ ಜೀವಿಯೂ,’ ಒಳ್ಳೆಯದೋ-ಕೆಟ್ಟದ್ದೋ, ಪಾಪ ಪುಣ್ಯಗಳನ್ನು ಮಾಡುತ್ತಲೇ’ ಇರುತ್ತಾನೆ. ಇವೆರಡನ್ನೂ ಅವನಿಂದ ಮಾಡದಿರಲಾಗುವುದಿಲ್ಲ.. ಒಬ್ಬೊಬ್ಬ ವ್ಯಕ್ತಿಯೂ, ತನ್ನ ಬಾಳಿನಲ್ಲಿ, ಒಂದೊಂದು ನಿಮಿಷವೂ, ಏನಾದರೂ, ಕಾರ್ಯನಿರತನಾಗಿರುತ್ತನೆ. ಒಂದೊಂದು ಜನ್ಮದಲ್ಲೂ, ಗೈದ ಕರ್ಮವು ಮತ್ತೊಂದು ಜನ್ಮದಲ್ಲಿ ನಿಶ್ಚಯವಾಗಿ ಮತ್ತೊಂದು ಜನ್ಮವನ್ನು ಕೊಡುತ್ತದೆ.ಇದರಿಂದ ತಪ್ಪಲು ದಾರಿಯೊಂದೇ.
ಅದೇ ಅತ್ಮಜ್ಞಾನವನ್ನು ಪಡೆಯುವುದು.
ಜ್ಞಾನಾಗ್ನಿಯು ಕರ್ಮಫಲವನ್ನು ದಹಿಸುವುದು. ಜನನ-ಮರಣ ಇರುವವರೆವಿಗೂ, ಒಬ್ಬನಿಗೆ ಅದರಿಂದ ಕಷ್ಟ, ದುಃಖಗಳಿರುತ್ತವೆ.. ಅವು ಇರುವವರೆಗೂ ಮುಕ್ತಿಯಿಲ್ಲ. ಆದ್ದರಿಂದ’ ಆತ್ಮಜ್ಞಾನವೇ ಮುಕ್ತಿಗೆ ದಾರಿ.’. ಆದ್ದರಿಂದ ಆ ಜ್ಞಾನವೇ ಮನುಷ್ಯನಿಂದ ಪಡೆಯಬೇಕಾದದ್ದು’. ಆಗಲೇ, ನಮ್ಮ ಬದುಕು ಪೂರ್ಣವಾಗುವುದು.. ಅಂತಹ ಜ್ಞನವಿರುವವನು, ಜನನ-ಮರಣಗಳ ಚಕ್ರದಿಂದ ಬಿಡುಗಡೆಯಾಗುವನು. ಅವನು ಮುಕ್ತನಾಗುವನು. ಅಂತಹ ಜ್ಞ್ಯಾನ ಪಡೆದವನು ಬಂಧಮುಕ್ತನಾಗುತ್ತಾನೆ. ಅಂತಲೇ, ಆ ಙ್ಯಾನವನ್ನು ಹೊಂದುವುದೇ ನಮ್ಮ ಬಾಳ ಗುರಿಯಾಗಬೇಕು.
============================
ಅಧ್ಯಾಯ.೨೫.
ಅದ್ವೈತ.
===========
ಶ್ರೀ ಶಂಕರರು ಅದ್ವೈತ ತತ್ವವನ್ನು ಪ್ರಸಾರ ಮಾಡಲು ಈ ದೇಶದಲ್ಲಿ ಉದಿಸಿದರು. ’ವೇದಂತವೆಂದರೆ ವೇದದ ಮುಗಿದಭಾಗವೆಂದರ್ಥ’.ಆವುಗಳನ್ನೆ’ಉಪನಿಷತ್ತುಗಳೆನ್ನುತ್ತಾರೆ.’
ವೇದಗಳು ಕರ್ಮಜ್ಞಾನಗಳ ಬಗ್ಗೆ ಬಲವಾಗಿ ಪ್ರತಿಪಾದಿಸುತ್ತವೆ. ’ವೇದದ ’ಮೊದಲ ಭಾಗ ಕರ್ಮದ ಬಗ್ಗೆಯೂ,ಎರಡನೆಯದು, ಎಂದರೆ,, ’ಉಪನಿಷತ್ತುಗಳು ’ಜ್ಞಾನದ ಬಗ್ಗೆಯೂ ವಿವರಿಸುತ್ತವೆ’.. ಮಹರ್ಷಿ ’ಜೈಮಿನಿಗಳು ಕರ್ಮಕಾಂಡವನ್ನು ಒಂದುಗೂಡಿಸಿ, ಅದಕ್ಕೆ,’ ಭಾಷ್ಯವನ್ನು ಬರೆದಿದ್ದಾರೆ, ’ಮೀಮಾಂಸೆ’ ಎಂದು ಅದಕ್ಕೆ ಹೆಸರು. ’ಶ್ರೀ ವೇದವ್ಯಾಸರು,
’ಉಪನಿಷತ್ತುಗಳನ್ನು ಒಂದುಗೂಡಿಸಿ, ಙ್ಯಾನ ಮಾರ್ಗ’ವನ್ನು’ ವಿವರಿಸಿದ್ದ್ದಾರೆ. ಇಬ್ಬರು ಮಹಾತ್ಮರೂ, ’ಮೀಮಾಂಸ ಮತ್ತು ವೇದಂತಗಳನ್ನು ಉಪದೇಶಿಸಿ ಮನುಜ ಕುಲಕ್ಕೆ, ಮಹಾನ್ ಸೇವೆ ಗೈದಿದ್ದಾರೆ.
ಶ್ರೀ ವೇದವ್ಯಾಸರ,’ ಬ್ರಹ್ಮ ಸೂತ್ರ ತತ್ವದ ಬಗ್ಗೆ’, ಬರೆದಿರುವ ಸಂಯೋಜನೆಗೆ,’ ಶ್ರೀಶಂಕರರು ಭಾಷ್ಯವನ್ನು ಬರೆದಿದ್ದಾರೆ’..ಶ್ರೀ ಶಂಕರರು ಹಾಗೆ ವಿವರಿಸಿದ್ದೇ ಅದ್ವೈತ ಸಿದ್ದಾಂತವೆನಿಸುತ್ತದೆ.,.ಶ್ರೀ ಶಂಕರರು, ಅದ್ವೈತ ತತ್ವವನ್ನು ಕಂಡುಹಿಡಿದರೆಂದರೆ,ಅದು ತಪ್ಪಾಗುತ್ತದೆ.. ಶ್ರೀ ಶಂಕರರು ಪ್ರಸಾರ ಮಾಡಿದ ವೇದಾಂತ, ಅವರು ಕಂಡು ಹಿಡಿದದ್ದಲ್ಲ. ಅದ್ವೈತವೆಂಬ ಮಾತು,ಉಪನಿಷತ್ತಿನಲ್ಲಿದೆಯೇ ಹೊರತು, ಶ್ರೀ ಶಂಕರರ ಕಾಲದಲ್ಲಿ ತೋರಿದ್ದಲ್ಲ..’ಸಲಿಲ ಏಕೋ ದ್ರಷ್ಟಾ ಅದ್ವೈತಃ’, ಎಂದು ’ಬ್ರುಹದಾರಣ್ಯ ಉಪನಿಷತ್ತಿನಲ್ಲಿ ಹೇಳಲಾಗಿದೆ.. ಮಾಂಡೂಕ್ಯ ಕಾರಿಕೆಯಲ್ಲಿ, ’ಮಾಯಾಮಾತ್ರಮಿದಂ ದ್ವೈತಂ ಅದ್ವೈತಂ ಪರಮಾರ್ತತಃ’ ಎಂದು ಹೇಳಲಾಗಿದೆ,
..
ಆದ್ದರಿಂದ, ಅದ್ವೈತವೆಂಬ ಮಾತು ಉಪನಿಷತ್ತಿನಿಂದ ಮೊದಮೊದಲು ಬಂದಿತು. ಶ್ರೀ ಶಂಕರರು ಕಂಡುಹಿಡಿಯಲಿಲ್ಲ.. ಆದರೆ,’ಅವರೇ, ಅವೆಲ್ಲವನ್ನೂ ಸಂಯೋಜಿಸಿ, ಜನಗಳಿಗೆ ಬಹು ಸುಲಭವಾಗಿ’, ಅರ್ಥ-ವಾಗುವಂತೆ, ಭಾಷ್ಯವನ್ನು ಬರೆದು ವಿವರಿಸಿದ್ದಾರೆ.’ ಶ್ರೀ ಶಂಕ-
ರರಿಗಿಂತ ಮುಂಚೆ,,” ಅಷ್ಟು ಅಧ್ಭುತವಾಗಿ ಅದ್ವೈತ ತತ್ವಕ್ಕೆ ವಿವರಣೆ ನೀಡಿರಿಲಾಗಲಿಲ್ಲ’,’ ಅದರಲ್ಲಿರುವ ಸೂಕ್ಷ್ಮವಾದ ಅಭಿಪ್ರಾಯಗಳನ್ನು ಜನರಿಗೆ ತಿಳಿಯ ಹೇಳುವ ಒಂದು ಕಾರ್ಯ ’ಶ್ರೀ ಶಂಕರರಿಗಿತ್ತು..
’ಸಮಸ್ತ ಪ್ರಪಂಚವೂ ಮಾಯೆಯೇ ಹೊರತು ಬೇರಲ್ಲ. ಮಾಯೆಯು ಅವಿದ್ಯೆಯ ಫಲ.’ ಪರಮಾರ್ಥ ತತ್ವವೊಂದೇ ಹೊರತು ಎರಡಲ್ಲ’.. ಇದೇ, ಶ್ರೀ ಶಂಕರರಿಂದ ಮಂಡಿಸಲ್ಪಟ್ಟಿತು.’ ದ್ವೈತದ ಫಲ ಮನುಜರಿಗೆ ಭಯ.’.’ ಎರಡಿಲ್ಲದಿದ್ದರೆ ಮಾತ್ರ ಭಯರಹಿತ ಮತ್ತು ಸತ್ಯವನ್ನೂ
ಪಡೆಯಬಹುದು’. ಸಾಧಾರಣವಾಗಿ,’ ತನಗೆ ಸಮನಾದ ಮತ್ತೊಬ್ಬ ವ್ಯಕ್ತಿಯನ್ನು ಕಂಡರೆ, ಭಯ ಪಡುವುದನ್ನು’ ನೋಡಬಹುದು.’ಅಂತಹ ವ್ಯಕ್ತಿಯಿಂದ ತಾನು ಆಕ್ರಮಿಸಲ್ಪಡಬಹುದೆಂಬ ಭಯ ಅವನಿಗಿರುತ್ತದೆ...’ವಿರೋಧಿಯಿಲ್ಲದಿದ್ದರೆ,ಅವನಿಗೆ,ಭಯವಿರುವುದಿಲ್ಲ’., ಪರಮಾರ್ಥ ತತ್ವದಲ್ಲೂ, ’ಯದಾ ಹ್ಯೇವೈಏತಸ್ಮಿನ್ನುದರ ಮನ್ತರಂ ಕುರುತೇ, ತ ತಸ್ಯ ಭಯಂ ಭವತಿ’.
ಎಂದು ಶ್ರುತಿ ಹೇಳುತ್ತದೆ. ಇಲ್ಲಿ, ’ಉದರಂ’ ಎಂದರೆ ಹೊಟ್ಟೆಯಲ್ಲ. ’ಉತ್=ಅರಂ=’ಎನ್ನುವುದನ್ನೇ ತಿಳಿಸುವುದು.
. ’ಪರಮಾತ್ಮ ಎರಡೆಂದು ನೋಡಿದರೆ, ಪರಿಣಾಮ ಭಯವೇ’. ’ಎರಡಲ್ಲದ ಪರಿಸ್ಥಿತಿಯಲ್ಲಿಯೇ, ಭಯವಿಲದ ಪರಿಸ್ಥಿತಿ ಉಂಟಾಗುತ್ತದೆ.’ ಎಂದರೆ, ’ಅಲ್ಲಿ ಎರಡು ಪರಮಾತ್ಮರಿಲ್ಲ.’ ’ಭೇದರಹಿತ ಸ್ಥಿತಿಯೇ ಭಯವಿಲ್ಲದ ಸ್ಥಿತಿಯನ್ನು ಕೊಡುವುದು.’ .’ಅದುವೇ ಮೋಕ್ಷ’.ಈ ಅದ್ವೈತ ಪರಿಸ್ಥಿತಿಯನ್ನು ಪಡೆಯದಿದ್ದರೆ, ಮೋಕ್ಷವಿಲ್ಲ.. ಅದ್ವೈತ ಸ್ಥಿತಿಯೇ ಭಯವಿಲ್ಲದ ಸ್ಥಿತಿಗೆ ದಾರಿ ತೋರಿಸುತ್ತದೆ..’ ಇರುವುದು ಒಂದೇ’ ಎಂಬುದು ಸತ್ಯ. ಹಾಗಾದರೆ, ನಾವು ’ಕಾಣುವ ಪ್ರಪಂಚಎಂಬುದು ಯಾವುದು.. ಅದರ ಸ್ವರೂಪವೇನು’ ಎಂದು ಕೇಳಿದರೆ, ’ಪರಮಾತ್ಮನೇ ತನ್ನನ್ನು ಪ್ರಪಂಚವಾಗಿ ತೋರಿಸಿಕೊಳ್ಳುತ್ತದೆ’ ಎನ್ನುವುದೇ ಉತ್ತರ.,’ .
ಹಾಗಾದರೆ, ’ನಾವು ಕಾಣುವ ಈ ಪ್ರಪಂಚವು ಮಾಯೆಯೇ”. ಈ ಉಪನ್ಯಾಸವು ಸತ್ಯವಲ್ಲವಾ, ನಾವು ಕೇಳುವುದು ನಿಜವಲ್ಲವಾ,’ಎಂಬ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ.ಹಾಗಲ್ಲ.
’ಬ್ರಹ್ಮಂ ಸತ್ಯಂ ಜಗತ್ ಮಿಥ್ಯಂ’ ಎಂದರೆ, ’ಬ್ರಹ್ಮ ಸತ್ಯ, ಜಗತ್ತು ಸುಳ್ಳು, ಎಂದು ಅರ್ಥೈಸಬಾರದು,’ ಎನ್ನುವುದೇ ಉತ್ತರ.
ಒಂದು ವಸ್ತುವಿನ ಸ್ವಭಾವವನ್ನು, ’ಸತ್-ಅಸತ್’ ಎಂದು ಎರಡು ಬಗೆಯಾಗಿ ವರ್ಣಿಸಬಹುದು.’ಸತ್’ಎಂದರೆ.’ ಸದಾಕಾಲವೂ ಇರುವುದು.. ಅದು ಬದಲಾಗದ್ದು. ಪ್ರಪಂಚ ನಿಜವಾಗಿ ಆ ತರಹದ್ದಲ್ಲ.
ಆದ್ದರಿಂದ’ ನಾವು ಕಾಣುವ ಈ ಜಗವನ್ನು ’ಸತ್’ ಎಂದು”ಹೇಳಲಾಗುವುದಿಲ್ಲ. . ’ಯಾವುದು ಯಾವ ಕಾಲದಲ್ಲೂ ಇರಲಿಲ್ಲವೋ’, ಅದನ್ನು ’ ’ಅಸತ್’ಎನ್ನುವರು. ಉದಾಹರಣೆಗೆ,’ ಮೊಲದ ಕೋಂಬನ್ನು’ ಯಾರಾದರೂ, ನೋಡಿರಬಹುದೆ.. ಕಾರಣ ಅದು’ ಯಾವತ್ತೂ ಇರಲಿಲ್ಲ’. ಮೊಲದ ಕೊಂಬಿನಂತೆ ಈ ಜಗವೂ ಸತ್ಯವಲ್ಲವೇ,ಎಂದರೆ,, ಅದು ಹಾಗಲ್ಲ. ನಾವು ಜಗವನ್ನು ಕಣ್ಣುಗಳಿಂದ ನೋಡುತ್ತೇವೆ. ಹಾಗೆಯೆ, ಎಲ್ಲಾ ಜೀವಿಗಳೂ ಜನಿಸುತ್ತಾರೆ. ಸಾಯುತ್ತಾರೆ..ಈ ಒಂದು ಕಾರಣದಿಂದ,’ಜಗವು ನಿರಂತರವಾದದ್ದು ಮತ್ತು ನಶ್ವರವಾದದ್ದೆಂದು , ಹೇಳಲಾಗುವುದಿಲ್ಲ.. ಅದ್ದರಿಂದ ಜಗವು ನಿಜವೊ-ಮಿಥ್ಯೆಯೋ ಅಲ್ಲ. ಹಾಗಾದರೆ,ಅವೆರಡೂ, ಸೇರಿದ್ದೆಂದು ಹೇಳಬಹುದೇ ಹಾಗೂ ಹೇಳಲಾಗುವುದಿಲ್ಲ. ಒಂದಕ್ಕೊಂದು ವಿರೋಧವಾದ ವಸ್ತುಗಳು ಒಂದೆಡೆಯಲ್ಲಿ ಇರಲಾಗುವುದಿಲ್ಲ. ಉದಾಹರಣೆಗೆ, ಬೆಳಕೂ-ಕತ್ತ್ತಲೂ, ಒಂದೆಡೆ ಇರಲಾಗುವುದಿಲ್ಲ.. ಆದ್ದರಿಂದ, ಈ ಜಗವನ್ನು,’ ಹೀಗೆಯೆ ಇದೆ’ ಎಂದು ಹೇಳಿ, ನಿಶ್ಚಯವಾಗಿ ವಿವರಿಸಲಾಗುವುದಿಲ್ಲ.. ಅದು ನಿಜವೋ- ಅದರ ಸುಳ್ಳೋ ಅಲ್ಲ. ಅದು ’ಮಿಥ್ಯೆ’ ಎನ್ನುವರು. ಮಿಥ್ಯೆ ಎಂದರೆ”ಅನಿರ್ವಚನೀಯಂ-’ ವಿವರಿಸಲಾಗದ್ದು.
’ಇರುವುದು ಒಂದೇ ವಸ್ತು. ಅದುವೇ ಪರಮಾತ್ಮ ಅದುವೇ ಬ್ರಹ್ಮ.ಜೀವರಾಶಿಗಳೇ.ಜೀವಾತ್ಮರು. . ಅದರ ಸ್ವರೂಪವೇನೆಂದರೆ,’ ಅದು ಪರಬ್ರಹ್ಮದಿಂದ ಬೇರಲ್ಲ ಎಂದಾಗುವುದು’.’ ನಾವೂ, ದೇವರೂ, ಒಂದೇ’,ಎಂದು ಕೇಳಿದರೆ, ಹಾಗೆ ಹೇಳಲಾಗುವುದಿಲ್ಲ. ಪರಮಾತ್ಮ, ’ಸಗುಣ ಮತ್ತು ನಿರ್ಗುಣ’ ಎಂದು ಎರಡು ವಿಧವಾಗಿವೆ.. ನಾವು ’ದೇವರೆಂದು ಪೂಜಿಸುವುದು, ಸಗುಣ ಬ್ರಹ್ಮ್ಮವನ್ನೇ.
ರೂಪರಹಿತ ಗುಣರಹಿತವಾದುದನ್ನು ನಿರ್ಗುಣ, ನಿರಾಕಾರವೆನ್ನ್ನುತ್ತೇವೆ. ನಾವು ’ದಿನವೂ ಆರಾಧಿಸುವ ಸ್ವರೂಪ ಬ್ರಹ್ಮ್ಮವನ್ನು ತೋರುವುದಿಲ್ಲ’ ಎಂಬ ಭಾವನೆಯನ್ನು ಬಳಸಿಕೊಳ್ಳಬೇಕು. ಆಗಲೇ,’ ಅದ್ವೈತ ಸ್ಥಿತಿ ಉಂಟಾಗಿ ಭಯವಿಲ್ಲದ ಸ್ಥಿತಿ’ ಏರ್ಪಡುವುದು. ದ್ವೈತ ಸಂಭಂಧ ಭಯವಿರಬೇಕಾದ್ದಿಲ್ಲ.
ನಾವು ’ಸಗುಣ ಬ್ರಹ್ಮ್ಮನನ್ನು ಆರಾಧಿಸುತ್ತೇವೆ.ದೇಗುಲಗಲಗಳನ್ನು ಕಟ್ಟುತ್ತೇವೆ’. ’ಅದರಲ್ಲಿ ಪ್ರತಿಷ್ಠಿಸಿದ ಮೂರ್ತಿಯನ್ನು,ದೇವರೆಂದು’ ನವು ಎಲ್ಲಾ ಸ್ಥಳದಲ್ಲಿಯೂ, ಹೇಳುತ್ತೇವೆ’. ಆದ್ದರಿಂದ, ’ನಾವು ದೇವರೆಂದು ಹೇಳುವಾಗ ಅಲ್ಲಿ ಅದ್ವೈತಕ್ಕೆ ಸ್ಥಾನವೇ ಇಲ್ಲ.’
’ಪರಮಾತ್ಮ ಅಥವಾ ಪರಬ್ರಹ್ಮವೆಂಬುದೊಂದೇ’.ಈ ಪರಬ್ರಹ್ಮ್ಮಕ್ಕೂ ಜೀವಾತ್ಮಾವಿಗೂ, ವೆತ್ಯಾಸವೇ ಇಲ್ಲ.’
ಇದನ್ನರಿಯದ್ದೆ, ಎಲ್ಲಾ ಸಂದೇಹಗಳಿಗೂ ಕಾರಣ. ಇದೇ ಶ್ರೀ ಶಂಕರ ಭಗವತ್ಪಾದರ ಉಪದೇಶ.
.
ನಾನೇ ಬ್ರಹ್ಮನೆಂದರೆ, ಪೂಜೆ, ಕಾಣಿಕೆ, ಮುಂತಾದುವುಗಳನ್ನು ಏಕೆ’ ಮಾಡಬೇಕು,’ ಎಂದು ಕೆಲವರು ಕೇಳುತ್ತರೆ.. ಅದ್ವೈತ ಅನುಭೂತಿ ಒಬ್ಬನಿಗೆ ಚೆನ್ನಾಗಿ ಆಗಿಬಿಟ್ಟರೆ, ಪೂಜೆ, ಮುಂತಾದ,ಅನುಷ್ಠಾನಗಳಿಗೆ ಅ ಅವಶ್ಯವೇ ಇರುವುದಿಲ್ಲ.. ತಾನೇ, ಬ್ರಹ್ಮನೆನ್ನುವ ಸ್ಥಿತಿಯನ್ನು ,ಪಡೆದವರಿಗೆ,ಪೂಜೆ ಮತ್ತು ಇತರ ಅನುಷ್ಠಾನಗಳ ಬಗ್ಗೆ ಚಿಂತಿಸುವ ಅವಶ್ಯವೇ ಇಲ್ಲ.
.
ಹರ ನಮಃ ಪಾರ್ವತಿ ಪತಯೇ ಹರ ಹರ ಮಹದೇವ ಜಾನಕೀಕಾಂತ ಸ್ಮರಣಂ ಜಯ ಜಯ ರಾಮ
ರಾಮ.
ಓಂ ತತ್ ಸತ್
ದು
’ಪ್ರಕರಣ
ದನ್ನು
/
ಕಾರ
ನುಡಿಗಲಿಂದ ವರ್ಣಿಸಲಸಾಧ್ಯ.
ತ್
;
ಅನೆ
ಜ್