Friday, November 29, 2019

ayyappa


ಹರಿಹರರ ಹರಕೆಯಿಂದ ಬಂದ ಸ್ವಾಮಿ ಅಯ್ಯಪ್ಪ ಹರಸು ನಮ್ಮನು ಎಂದೆಂದೂ ಐಯ್ಯಪ್ಪ ಹಸ್ತದಲ್ಲಿ ಅಭಯವನ್ನು ತೋರುತಿರುವ ಅಯ್ಯಪ್ಪ ಹಸನ್ಮುಖ ವದನನೇ ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಮಹಿಷಿಯನ್ನು ಸಂಹರಿಸಿದ ಸ್ವಾಮಿ ಅಯ್ಯಪ್ಪ ಮಲೆಯಮೇಲೆ ನೆಲೆಸಿರುವ ಸ್ವಾಮಿ ಅಯ್ಯಪ್ಪ ಮಂಡಲದ ವ್ರತ ಮಾಡೋ ಭಕ್ತರ ಅಯ್ಯಪ್ಪ ಮಮತೆಯಿಂದ ಕಾಯುತಿರುವ ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಪಂದಳ ರಾಜಕುಮಾರನೇ ಸ್ವಾಮಿ ಅಯ್ಯಪ್ಪ ಪದವಿ ಬೇಡವೆಂದವನೇ ಸ್ವಾಮಿ ಅಯ್ಯಪ್ಪ ಪಾಯಸಾನ್ನ ಪ್ರಿಯನೇ ಸ್ವಾಮಿ ಅಯ್ಯಪ್ಪ ಪಾಪ ಹರಿಸೋ ಪುಣ್ಯ ನೀಡೋ ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ತಾಯಿ ಹುಲಿಯ ಹಾಲು ಕೇಳೆ ಸ್ವಾಮಿ ಅಯ್ಯಪ್ಪ ತಡಮಾಡದೆ ಒಡನೆ ತಂದ ಸ್ವಾಮಿ ಅಯ್ಯಪ್ಪ ತ್ಯಾಗಮಾಡಿ ದೇವನಾದ ಸ್ವಾಮಿ ಅಯ್ಯಪ್ಪ ತಮ್ಮನಿಗೆ ರಾಜ್ಯವಿತ್ತ ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ನೀತಿನಿಯಮಗಳ ಪಾಲಿಸೋ ಜನರ ಅಯ್ಯಪ್ಪ ನಿಷ್ಠೆಯಿಂದ ಇರುವ ಜನರ ಕಾಯ್ವ ಅಯ್ಯಪ್ಪ ನಿಯಮಗಳ ದರ್ಶನಕೆ ಮಾಡಿ ಅಯ್ಯಪ್ಪ ನಿತ್ಯ ಪಾಲಿಸುವವರನ್ನು ಕಾಯ್ವ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಇಂದು ಧರ್ಮಗ್ಲಾನಿಯಾಗಿದೆ ಸ್ವಾಮಿ ಅಯ್ಯಪ್ಪ ಖಳರ ಕೈಗೆ ಸಿಕ್ಕಿ ಅದು ನಲುಗಿದೆ ಅಯ್ಯಪ್ಪ ದೈತ್ಯ ತಾಂಡವನಾಡಿದೆ ಸ್ವಾಮಿ ಅಯ್ಯಪ್ಪ ದಯೆತೋರಿ ಸನ್ಮಾರ್ಗ ತೋರು ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಪ್ರಳಯ ತಾಂಡವವಾಡಿತು ಉಗ್ರವಾಗಿ ಅಯ್ಯಪ್ಪ ಪ್ರಕೃತಿಯು ವಿಕೋಪವ ತೋರಿತು ಅಯ್ಯಪ್ಪ ಪ್ರಾಜ್ಞನಾದ ದೇವ ನೀನು ಸ್ವಾಮಿ ಅಯ್ಯಪ್ಪ ಪರಿಹಾರ ತೋರಿ ರಕ್ಷಿಸು ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ನ್ಯಾಯವಾದ ಕೆಲಸವಿದು ಹಿರಿಯ ತತ್ವ ಅಯ್ಯಪ್ಪ ನೀನೆ ಇದಕೆ ನ್ಯಾಯವಾದಿ ಸ್ವಾಮಿ ಅಯ್ಯಪ್ಪ ನೀತಿಬದ್ಧ ದಾರಿ ತೋರಿ ಸ್ವಾಮಿ ಅಯ್ಯಪ್ಪ ನಿನ್ನ ಭಕ್ತರ ರಕ್ಷಿಸೈಯ್ಯ ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ==============================================

No comments: