ಋಷಿ
ಅಂದು ನಿನ್ನ ಬೇಡಿದೆ
ನೀನು ಕರುಣೆ ತೋರಿದೆ
ಕರುಣೆಯಿಂದ ನೋಡಿದೆ
ಕುಲದೀಪವ ನೀಡಿದೆ
ತಾಯಿಗೆ ಹರ್ಷ ತಂದಿದೆ
ತಂದೆ ಮನವು ನಲಿದಿದೆ
ಮನೆಯು ಸ್ವರ್ಗವಾಗಿದೆ
ಇದರ ಕೀರ್ತಿ ನಿನ್ನದೆ
ಮುಗ್ಧತೆಯನು ನೀಡಿದೆ
ಅಫಾರ ಮತಿಯ ನೀಡಿದೆ
ಕೀರ್ತಿ ತಾನು ಗಳಿಸಿದರೆ
ಅದರ ಹಿರಿಮೆ ನಿನ್ನದೆ
ಕಣ್ಗಳಲ್ಲಿ ಕಾಂತಿಯಿದೆ
ಮಾತಿನಲ್ಲಿ ಒಲವಿದೆ
ಹೃದಯದಲ್ಲಿ ಪ್ರೀತಿಯಿದೆ
ಆನಂದವು ತುಂಬಿದೆ
ಅವನ ಏಳ್ಗೆ ನಿನ್ನದೆ
ಅವನ ನಲ್ಮೆ ನಿನ್ನದೆ
ಅವನ ಶಾಂತಿ ನಿನ್ನದೆ
ಅವನ ಪ್ರೇಮ ನಿನ್ನದೆ
ಅವನ ಬಗ್ಗೆ ಬರೆಸಿದೆ
ಅದರ ಸ್ಫೂರ್ತಿ ನಿನ್ನದೆ
ಅವನ ನಿನ್ನ ವರವೆಂದೆ
ಇಂದು ಮನವು ಹೇಳಿದೆ
---------------------
೨.ಗೋಪಿಕ
---------
ಮಾಧವ ನುಡಿಸಿದ ಮುರಳಿಯ ಗಾನ
ಮನೆಯನು ಬೆಳಗಿತ್ತು
ಮಹಾದೇವಸುತ ಸುಬ್ರಂಮಣ್ಯನ
ಹರಕೆಯು ಸೇರಿತ್ತು
ತಂದೆಯು ನುಡಿಸಿದ ವೀಣಾಗಾನ
ಹೃದಯವ ತಲುಪಿತ್ತು
ತಾಯಿಯು ತಾನು ದೇವನ ಬೇಡಲು
ವರವಾಗಿ ಬಂದಿತ್ತು
ಕಣ್ಣಲಿ ಮುಗ್ದತೆ ಮಾತಲಿ ಮಾದಕತೆ
ಕುವರಿಯದಾಗಿತ್ತು
ಕಂಡವರೆಲ್ಲರ ಕಣ್ಮಣಿಯಾಗಲು
ವಿಶ್ವವೆ ಹರಸಿತ್ತು
ಜನಜಂಗುಳಿಯ ನಗರದಲಿಂದು
ಶಾಂತಿಯು ನೆಲಸಿತ್ತು
ಜಗನ್ನಾಯಕನ ಹರಕೆಯು ತಾನು
ಬಲವನು ನೀಡಿತ್ತು
ಸಂಪತ್ ಸಮೃದ್ಧಿ ಚಿರಾಯು ಏಳ್ಗೆಯು
ದೆವನಿಂದ ಬಂದಿತ್ತು
ಏಕೆಂದರೆ ಆ ಮುದ್ದು ಕುವರಿಯು
ಅವ ನೀಡಿದ ಸ್ವತ್ತು
--------------------
ರಾಜ
----
ನಮ್ಮೆಲ್ಲರ ಮುದ್ದುರಾಜ
ಇವನು ಭವ್ಯ ತೇಜ
ನಮ್ಮ ಮಗಳಿಗಾಗಿಹನು
ಇವನು ಹೃದಯರಾಜ
ಕೃಷ್ಣ ಹೆಸರ ತಂದೆಗೆ
ಇವನು ಪ್ರಿಯರಾಜ
ತಾವರೆ ಹೆಸರ ಮಾತೆಗೆ
ಇವನು ಸುಂದರರಾಜ
ಸೋದರರು ಸೋದರಿಯರ
ಪಾಲಿಗೆ ಮಹರಾಜ
ಮೋಹಕತೆಯ ಮಾತಿನಲ್ಲಿ
ಇವನು ನಾಗರಾಜ
ಕಾರ್ಯ ನಿರ್ವಹಣೆಯಲ್ಲಿ
ಇವನು ವೀರರಾಜ
ಸಹಚರರ ಚಿಂತೆಯಲ್ಲಿ
ಇವನು ತ್ಯಾಗರಾಜ
ಸಭೆಯು ತಾನು ನಡೆದಿರೆ
ಇವನು ಭೋಜರಜ
ಸಮಸ್ಯೆಗಳ ಪರಿಹಾರಕೆ
ಇವನೆ ಚತುರರಾಜ
ಕೆಚ್ಚೆದೆಯ ಧೈರ್ಯದಲ್ಲಿ
ಇವನೆ ಮೃಗರಾಜ
ನಮ್ಮ ಹೃದಯ ಸಿಂಹಾಸನದಲ್ಲಿ
ಇವನೆ ರಾಜಾಧಿರಾಜ
--------------------
ಶುಭ
-------
ನಮ್ಮ ಮನೆಯ ಶ್ರೀಗಂಧ
ನೀನು ತಂದೆ ಆನಂದ
ಅದಕೆ ಹರಿಯ ಪಾದಾರವಿಂದ
ನಮಿಸುವೆ ಮುದದಿಂದ
ಸ್ಕಂದ ತೋರೆ ದಯೆಯಿಂದ
ಮನೆಯಲುದಿಸಿದಾ ಕಂದ
ಎಲ್ಲರಿಗು ಸಂತಸ ತಂದಿತು
ನಿನ್ನಯ ಮುಖಾರವಿಂದ
ಆಕರ್ಷಿಸಿ ಪ್ರೀತಿಯಿಂದ
ಜನರ ಗೆದ್ದೆ ಒಲವಿಂದ
ನಾವು ದೂರ ಇದ್ದರೇನು
ವರ್ಧಿಸಿದೇ ನೀ ಹಿರಿಮೆಯಿಂದ
ಮೆಟ್ಟಿಲೇರಿ ಪ್ರತಿಭೆಯಿಂದ
ಉತ್ತುಂಗಕೇರಿ ಛಲದಿಂದ
ಕಡಲ ದಾಟಿ ಅಂದು ಬಂದ
ನಿನ್ನ ವರನಿಲ್ಲಿ ಬಂದ
ಧೈರ್ಯಗೆಡಬೇಡ ಎಂದ
ಅಭಯಹಸ್ತ ಕೊಡುವೆನೆಂದ
ದಶವರ್ಷವು ಸಾಗಿ ಬಂದ
ದಿನಗಳು ಅದೆಂತು ಚೆಂದ
ಮನೆ ಬೆಳಗಿತು ಕುವರನಿಂದ
ಸ್ವರ್ಗವಾಯ್ತು ಪ್ರೀತಿಯಿಂದ
ಜೊತೆಗೆ ಇರಲು ಇಲ್ಲಿ ಬಂದ
ತಂದೆತಾಯಿಗಿದೆ ಆನಂದ
-------------------------
ಮೋಹನ
--------
ಓ!ನನ್ನ ಮೋಹನ
ಇದಲ್ಲ ಬರಿಯ ಗಾಯನ
ಮೂಡಿಬರಲು ಚಿಂತನ
ಹೊರಹೊಮ್ಮಿತು ಕವನ
ಪ್ರಥಮದಲ್ಲಿ ನಮಿಸುವೆನಾ
ನಮಗೆ ನಿನ್ನ ಇತ್ತವನ
ಕುವರಿಯ ಕೈ ಹಿಡಿದವನ
ಕೃಷ್ಣನ ಹೆಸರಾದವನ
ತಂದೆಗೆ ಪ್ರಿಯನಾದವನ
ತಾಯ ಪ್ರೀತಿ ಕುವರನ
ಕಷ್ಟದಿಂದ ಮೇಲೆ ಬಂದ
ಛಲದಂಕ ಮಲ್ಲನ
ಮನರಂಜನೆ ನೀಡುವವನ
ಮನಗಳನು ಗೆದ್ದವನ
ಮಮತೆಯನ್ನು ತೋರಿದವನ
ಮಗಳ ಹೃದಯ ಗೆದ್ದವನ
ಜನರೊಡನೆ ಬೆರೆಯುವವನ
ಜನನಾಯಕನಾದವನ
ಮುದ್ದುಕುವರಿ ಜನಕನ
ಮುಗ್ಧ ಹೃದಯ ಪಡೆದವನ
ಕಡಲ ತೀರದಲಿರುವವನ
ಕರೆದೊಡನೆ ಬರುವವನ
ಕಂಡವರ ಹೃದಯ ಗೆಲುವ
ಕಂದರ್ಪನ ಹೆಸರಿನವನ
------------------------
ಅನುಪಮ
--------
ದೀಪಾವಳಿ ಬಂದಿತು
ಪಟಕಿಗಳು ಸಿಡಿಯಿತು
ಸುರ್ಸುರ್ಬತ್ತಿ ಬೆಳಗಿರಲು
ಮನೆಯು ಇಂದು ಬೆಳಗಿತು
ಹಂಡೆ ನೀರು ತುಂಬಿತು
ಬಿಸಿನೀರು ಸಿದ್ದವಾಯಿತು
ಎಣ್ಣೆ ತಲೆಗೆ ಹಚ್ಚಿರಲು
ಮಂಗಳ ಸ್ನಾನವಾಯಿತು
ಬೆಳೆಯೆ ದಿನವು ಕಳೆಯಿತು
ಸಂಸಾರ ಯಾತ್ರೆ ನಡೆಸಿತು
ಊರಿಂದೂರಿಗೆ ಹೋಯಿತು
ಜೊತೆಗೆ ಮಗಳ ಸೇರಿಸಿತು
ರಕ್ತದಲೆ ಧೈರ್ಯ ಬಂದಿತು
ಛಲವ ಬಿಡೆನು ಎಂದಿತು
ಶ್ರಮಿಸಿ ಅಧ್ಯಯನವನಡೆಸಿ
ಕೀರ್ತಿ ಕಳಸವೇರಿತು
ಉದ್ಯೋಗ ಹಲವು ಬಂದಿತು
ಹಣವ ಹೆಸರ ತಂದಿತು
ಮುರಳಿಲೋಲ ಕೈ ಹಿಡಿಯೆ
ಮನೆಯು ಸ್ವರ್ಗವಾಯಿತು
ಕುವರಿ ತಾನು ಜನಿಸಿತು
ಕುಲದ ದೀಪ ಬೆಳಗಿತು
ಕುವರನ ಆಕಾಂಕ್ಷೆಯು ಬೆಳೆಯಿತು
ಜತಯಲಿರುವ ಶಿಶುವು ತಾನು
ತಾಳ್ಮೆ ಇರಲಿ ಎಂದಿತು
ನವ ವಸಂತ ಮೂಡಿಬರಲು
ನಾನು ಬರುವೆ ಎಂದಿತು
----------------------
ಕಿರಣ
--------
ನಮ್ಮ ಮನೆಯ ಆಶಾಕಿರಣತ್
ನೀನು ಹೋಳಿಗೆ ಹೂರಣ
ನೀನು ಬಂದ ದಿನದು ಹರ್ಷಿಸಿ
ಕಟ್ಟಿದೆವು ಮಾವಿನ ತೋರಣ
ನಮ್ಮ ಪ್ರೀತಿಯ ದಿನ ನಿತ್ಯವು
ಧಾರೆ ಎರೆದೆವು ಪ್ರತಿಕ್ಷಣ
ನೀನು ಮನೆಯಲಿ ಇರದ ಸಮಯದಿ
ಮನೆಯು ಆಯಿತು ಭಣ ಭಣ
ಹೃದಯದಲ್ಲೂ ಮನಸಿನಲ್ಲೂ
ಅನುರಾಗ ತುಂಬಿದೆ ಕಣ ಕಣ
ಬೇರೆ ಎಲ್ಲವ ಕೊಳ್ಳಬಹುದು
ಅನಾವಶ್ಯ ಅನುರಾಗಕೇ ಹಣ
ಎಲ್ಲಿ ಇದ್ದರು ನಿನ ನಲ್ಮೆಗೆ
ಪರಿತಪಿಸಿದೆ ಎಲ್ಲರ ಮನ
ದೇವ ಬಂಧಿಸಿರುವನು ನಮ್ಮನು
ಪ್ರೇಮ ಬಂಧವೇ ಆ ಕಾರಣ
ಇಂದು ಈ ಕವನವು ಹೊಮ್ಮಲು
ಅವನೆ ಆಗ್ಗಿಹ ಪ್ರೇರಣ
ಅವನು ಇತ್ತ ವಸ್ತುವೆಲ್ಲವ
ಭಕ್ತಿಯಿಂದ ಅರ್ಪಿಸುವೆ ಅವಗಿಂದು ಈ ಆಭರಣ
-----------------------------------------
ಶಾರದೆ
---------
ಓ!ನಮ್ಮ ಶಾರದೆ
ಈ ಕವನ ನಿನ್ನದೆ
ಹೃದಯದಿಂದ ಬಂದಿದೆ
ಅದಕೇ ನಿನಗರ್ಪಿಸಿದೆ
ಕಣ್ಣಿನಲ್ಲಿ ಕಾಂತಿಯಿದೆ
ಮಾತಲಿ ಮಾಧುರ್ಯವಿದೆ
ಕೇಳಲು ಹಿತವಾಗಿದೆ
ಮನದಲಧಿಕ ಪ್ರೀತಿಯಿದೆ
ಕೈಗಳಲ್ಲಿ ಅಮೃತವಿದೆ
ಹೃದಯದಲ್ಲಿ ಪ್ರೀತಿಯಿದೆ
ನಡೆಯಲ್ಲಾಕರ್ಷಣೆಯಿದೆ
ನಗುವಿನಲಿ ಮುಘ್ದತೆಯಿದೆ
ನಿನ್ನ ಸೇವೆ ಬೆಳದಿದೆ
ಜನಕೆ ಅದು ಬೇಕಿದೆ
ಬೇಡಿಕೆಯು ಹೆಚ್ಚಿದೆ
ಅದಕೆ ಕೀರ್ತಿ ಪಸರಿಸಿದೆ
ದೇವನ ಹರಕೆ ನಿನಗಿದೆ
ಅದಕೆ ಶಕ್ತಿ ನೀಡಿದೆ
ನೂರು ವರುಷ ಬಾಳು ಎಂದು
ದೇವನಲ್ಲಿ ಬೇಡಿದೆ
------------------
ತಾತ
-----
ಓ!ಗಾಂಧಿ ತಾತ
ನೀನು ಪ್ರೀತಿ ತಾತ
ಸ್ವತಂತ್ರ ತಂದನೀತ
ಅದಕೆ ಆದೆ ರಾಷ್ಟ್ರಪಿತ
ದಾರಿಯಲಿ ಹೋಗುವಾಗ
ಕರೆದನೊಬ್ಬ ತಾತ
ಕೋಪ ತಾನು ಬರಲು
ನಿಜವ ಹೇಳ್ದೆಯೆಂದನಾತ
ಜನುಮ ಕೊಟ್ಟ ಭಗವಂತ
ದಾರಿ ತೋರಿ ನಡೆ ಎನುತ
ತಂದೆ ತಾಯಿ ಕೈಯ ಹಿಡಿದು
ನಡೆಸಿದರು ಅನವರತ
ನಾನು ಒಬ್ಬನೆ ಇದ್ದರೆ
ಕಾದಿದೆ ಆಘಾತ
ಅದಕೆ ನಲ್ಲೆ ಜೊತೆಯಿರಲು
ತಪ್ಪಿತು ಅಪಘಾತ
ಸಾಕೆಂಬ ವಾಣಿಯು
ಆಗಿತ್ತು ನಮಗೆ ಬಲುಹಿತ
ಅವರ ಏಳ್ಗೆ ಮನದಲಿರಲು
ನಮ್ಮಾಸೆಯು ಅತಿಮಿತ
ಕಡಲ ದಾಟಿ ಧಾವಿದಳು
ದೊಡ್ಡವಳು ಟಾಟಾ ಎನ್ನುತ
ಮುಂಬಯ್ ವಾಸಿಯಾದವಳು
ಬಾ ಎಂದಳು ಕರೆಯುತ
ಮುದ್ದು ಮಕ್ಕಳೆರಡು ಇರಲು
ಆದೆನಾನು ಮುದ್ದಿನ ತಾತ
ಹಿರಿಯನಾಗಿ ಎಲ್ಲರೊಳಿತು
ಬಯಸೆ ಅದುವೆ ಶಾಸ್ವತ
-----------------------------
ಅಂದು ನಿನ್ನ ಬೇಡಿದೆ
ನೀನು ಕರುಣೆ ತೋರಿದೆ
ಕರುಣೆಯಿಂದ ನೋಡಿದೆ
ಕುಲದೀಪವ ನೀಡಿದೆ
ತಾಯಿಗೆ ಹರ್ಷ ತಂದಿದೆ
ತಂದೆ ಮನವು ನಲಿದಿದೆ
ಮನೆಯು ಸ್ವರ್ಗವಾಗಿದೆ
ಇದರ ಕೀರ್ತಿ ನಿನ್ನದೆ
ಮುಗ್ಧತೆಯನು ನೀಡಿದೆ
ಅಫಾರ ಮತಿಯ ನೀಡಿದೆ
ಕೀರ್ತಿ ತಾನು ಗಳಿಸಿದರೆ
ಅದರ ಹಿರಿಮೆ ನಿನ್ನದೆ
ಕಣ್ಗಳಲ್ಲಿ ಕಾಂತಿಯಿದೆ
ಮಾತಿನಲ್ಲಿ ಒಲವಿದೆ
ಹೃದಯದಲ್ಲಿ ಪ್ರೀತಿಯಿದೆ
ಆನಂದವು ತುಂಬಿದೆ
ಅವನ ಏಳ್ಗೆ ನಿನ್ನದೆ
ಅವನ ನಲ್ಮೆ ನಿನ್ನದೆ
ಅವನ ಶಾಂತಿ ನಿನ್ನದೆ
ಅವನ ಪ್ರೇಮ ನಿನ್ನದೆ
ಅವನ ಬಗ್ಗೆ ಬರೆಸಿದೆ
ಅದರ ಸ್ಫೂರ್ತಿ ನಿನ್ನದೆ
ಅವನ ನಿನ್ನ ವರವೆಂದೆ
ಇಂದು ಮನವು ಹೇಳಿದೆ
---------------------
೨.ಗೋಪಿಕ
---------
ಮಾಧವ ನುಡಿಸಿದ ಮುರಳಿಯ ಗಾನ
ಮನೆಯನು ಬೆಳಗಿತ್ತು
ಮಹಾದೇವಸುತ ಸುಬ್ರಂಮಣ್ಯನ
ಹರಕೆಯು ಸೇರಿತ್ತು
ತಂದೆಯು ನುಡಿಸಿದ ವೀಣಾಗಾನ
ಹೃದಯವ ತಲುಪಿತ್ತು
ತಾಯಿಯು ತಾನು ದೇವನ ಬೇಡಲು
ವರವಾಗಿ ಬಂದಿತ್ತು
ಕಣ್ಣಲಿ ಮುಗ್ದತೆ ಮಾತಲಿ ಮಾದಕತೆ
ಕುವರಿಯದಾಗಿತ್ತು
ಕಂಡವರೆಲ್ಲರ ಕಣ್ಮಣಿಯಾಗಲು
ವಿಶ್ವವೆ ಹರಸಿತ್ತು
ಜನಜಂಗುಳಿಯ ನಗರದಲಿಂದು
ಶಾಂತಿಯು ನೆಲಸಿತ್ತು
ಜಗನ್ನಾಯಕನ ಹರಕೆಯು ತಾನು
ಬಲವನು ನೀಡಿತ್ತು
ಸಂಪತ್ ಸಮೃದ್ಧಿ ಚಿರಾಯು ಏಳ್ಗೆಯು
ದೆವನಿಂದ ಬಂದಿತ್ತು
ಏಕೆಂದರೆ ಆ ಮುದ್ದು ಕುವರಿಯು
ಅವ ನೀಡಿದ ಸ್ವತ್ತು
--------------------
ರಾಜ
----
ನಮ್ಮೆಲ್ಲರ ಮುದ್ದುರಾಜ
ಇವನು ಭವ್ಯ ತೇಜ
ನಮ್ಮ ಮಗಳಿಗಾಗಿಹನು
ಇವನು ಹೃದಯರಾಜ
ಕೃಷ್ಣ ಹೆಸರ ತಂದೆಗೆ
ಇವನು ಪ್ರಿಯರಾಜ
ತಾವರೆ ಹೆಸರ ಮಾತೆಗೆ
ಇವನು ಸುಂದರರಾಜ
ಸೋದರರು ಸೋದರಿಯರ
ಪಾಲಿಗೆ ಮಹರಾಜ
ಮೋಹಕತೆಯ ಮಾತಿನಲ್ಲಿ
ಇವನು ನಾಗರಾಜ
ಕಾರ್ಯ ನಿರ್ವಹಣೆಯಲ್ಲಿ
ಇವನು ವೀರರಾಜ
ಸಹಚರರ ಚಿಂತೆಯಲ್ಲಿ
ಇವನು ತ್ಯಾಗರಾಜ
ಸಭೆಯು ತಾನು ನಡೆದಿರೆ
ಇವನು ಭೋಜರಜ
ಸಮಸ್ಯೆಗಳ ಪರಿಹಾರಕೆ
ಇವನೆ ಚತುರರಾಜ
ಕೆಚ್ಚೆದೆಯ ಧೈರ್ಯದಲ್ಲಿ
ಇವನೆ ಮೃಗರಾಜ
ನಮ್ಮ ಹೃದಯ ಸಿಂಹಾಸನದಲ್ಲಿ
ಇವನೆ ರಾಜಾಧಿರಾಜ
--------------------
ಶುಭ
-------
ನಮ್ಮ ಮನೆಯ ಶ್ರೀಗಂಧ
ನೀನು ತಂದೆ ಆನಂದ
ಅದಕೆ ಹರಿಯ ಪಾದಾರವಿಂದ
ನಮಿಸುವೆ ಮುದದಿಂದ
ಸ್ಕಂದ ತೋರೆ ದಯೆಯಿಂದ
ಮನೆಯಲುದಿಸಿದಾ ಕಂದ
ಎಲ್ಲರಿಗು ಸಂತಸ ತಂದಿತು
ನಿನ್ನಯ ಮುಖಾರವಿಂದ
ಆಕರ್ಷಿಸಿ ಪ್ರೀತಿಯಿಂದ
ಜನರ ಗೆದ್ದೆ ಒಲವಿಂದ
ನಾವು ದೂರ ಇದ್ದರೇನು
ವರ್ಧಿಸಿದೇ ನೀ ಹಿರಿಮೆಯಿಂದ
ಮೆಟ್ಟಿಲೇರಿ ಪ್ರತಿಭೆಯಿಂದ
ಉತ್ತುಂಗಕೇರಿ ಛಲದಿಂದ
ಕಡಲ ದಾಟಿ ಅಂದು ಬಂದ
ನಿನ್ನ ವರನಿಲ್ಲಿ ಬಂದ
ಧೈರ್ಯಗೆಡಬೇಡ ಎಂದ
ಅಭಯಹಸ್ತ ಕೊಡುವೆನೆಂದ
ದಶವರ್ಷವು ಸಾಗಿ ಬಂದ
ದಿನಗಳು ಅದೆಂತು ಚೆಂದ
ಮನೆ ಬೆಳಗಿತು ಕುವರನಿಂದ
ಸ್ವರ್ಗವಾಯ್ತು ಪ್ರೀತಿಯಿಂದ
ಜೊತೆಗೆ ಇರಲು ಇಲ್ಲಿ ಬಂದ
ತಂದೆತಾಯಿಗಿದೆ ಆನಂದ
-------------------------
ಮೋಹನ
--------
ಓ!ನನ್ನ ಮೋಹನ
ಇದಲ್ಲ ಬರಿಯ ಗಾಯನ
ಮೂಡಿಬರಲು ಚಿಂತನ
ಹೊರಹೊಮ್ಮಿತು ಕವನ
ಪ್ರಥಮದಲ್ಲಿ ನಮಿಸುವೆನಾ
ನಮಗೆ ನಿನ್ನ ಇತ್ತವನ
ಕುವರಿಯ ಕೈ ಹಿಡಿದವನ
ಕೃಷ್ಣನ ಹೆಸರಾದವನ
ತಂದೆಗೆ ಪ್ರಿಯನಾದವನ
ತಾಯ ಪ್ರೀತಿ ಕುವರನ
ಕಷ್ಟದಿಂದ ಮೇಲೆ ಬಂದ
ಛಲದಂಕ ಮಲ್ಲನ
ಮನರಂಜನೆ ನೀಡುವವನ
ಮನಗಳನು ಗೆದ್ದವನ
ಮಮತೆಯನ್ನು ತೋರಿದವನ
ಮಗಳ ಹೃದಯ ಗೆದ್ದವನ
ಜನರೊಡನೆ ಬೆರೆಯುವವನ
ಜನನಾಯಕನಾದವನ
ಮುದ್ದುಕುವರಿ ಜನಕನ
ಮುಗ್ಧ ಹೃದಯ ಪಡೆದವನ
ಕಡಲ ತೀರದಲಿರುವವನ
ಕರೆದೊಡನೆ ಬರುವವನ
ಕಂಡವರ ಹೃದಯ ಗೆಲುವ
ಕಂದರ್ಪನ ಹೆಸರಿನವನ
------------------------
ಅನುಪಮ
--------
ದೀಪಾವಳಿ ಬಂದಿತು
ಪಟಕಿಗಳು ಸಿಡಿಯಿತು
ಸುರ್ಸುರ್ಬತ್ತಿ ಬೆಳಗಿರಲು
ಮನೆಯು ಇಂದು ಬೆಳಗಿತು
ಹಂಡೆ ನೀರು ತುಂಬಿತು
ಬಿಸಿನೀರು ಸಿದ್ದವಾಯಿತು
ಎಣ್ಣೆ ತಲೆಗೆ ಹಚ್ಚಿರಲು
ಮಂಗಳ ಸ್ನಾನವಾಯಿತು
ಬೆಳೆಯೆ ದಿನವು ಕಳೆಯಿತು
ಸಂಸಾರ ಯಾತ್ರೆ ನಡೆಸಿತು
ಊರಿಂದೂರಿಗೆ ಹೋಯಿತು
ಜೊತೆಗೆ ಮಗಳ ಸೇರಿಸಿತು
ರಕ್ತದಲೆ ಧೈರ್ಯ ಬಂದಿತು
ಛಲವ ಬಿಡೆನು ಎಂದಿತು
ಶ್ರಮಿಸಿ ಅಧ್ಯಯನವನಡೆಸಿ
ಕೀರ್ತಿ ಕಳಸವೇರಿತು
ಉದ್ಯೋಗ ಹಲವು ಬಂದಿತು
ಹಣವ ಹೆಸರ ತಂದಿತು
ಮುರಳಿಲೋಲ ಕೈ ಹಿಡಿಯೆ
ಮನೆಯು ಸ್ವರ್ಗವಾಯಿತು
ಕುವರಿ ತಾನು ಜನಿಸಿತು
ಕುಲದ ದೀಪ ಬೆಳಗಿತು
ಕುವರನ ಆಕಾಂಕ್ಷೆಯು ಬೆಳೆಯಿತು
ಜತಯಲಿರುವ ಶಿಶುವು ತಾನು
ತಾಳ್ಮೆ ಇರಲಿ ಎಂದಿತು
ನವ ವಸಂತ ಮೂಡಿಬರಲು
ನಾನು ಬರುವೆ ಎಂದಿತು
----------------------
ಕಿರಣ
--------
ನಮ್ಮ ಮನೆಯ ಆಶಾಕಿರಣತ್
ನೀನು ಹೋಳಿಗೆ ಹೂರಣ
ನೀನು ಬಂದ ದಿನದು ಹರ್ಷಿಸಿ
ಕಟ್ಟಿದೆವು ಮಾವಿನ ತೋರಣ
ನಮ್ಮ ಪ್ರೀತಿಯ ದಿನ ನಿತ್ಯವು
ಧಾರೆ ಎರೆದೆವು ಪ್ರತಿಕ್ಷಣ
ನೀನು ಮನೆಯಲಿ ಇರದ ಸಮಯದಿ
ಮನೆಯು ಆಯಿತು ಭಣ ಭಣ
ಹೃದಯದಲ್ಲೂ ಮನಸಿನಲ್ಲೂ
ಅನುರಾಗ ತುಂಬಿದೆ ಕಣ ಕಣ
ಬೇರೆ ಎಲ್ಲವ ಕೊಳ್ಳಬಹುದು
ಅನಾವಶ್ಯ ಅನುರಾಗಕೇ ಹಣ
ಎಲ್ಲಿ ಇದ್ದರು ನಿನ ನಲ್ಮೆಗೆ
ಪರಿತಪಿಸಿದೆ ಎಲ್ಲರ ಮನ
ದೇವ ಬಂಧಿಸಿರುವನು ನಮ್ಮನು
ಪ್ರೇಮ ಬಂಧವೇ ಆ ಕಾರಣ
ಇಂದು ಈ ಕವನವು ಹೊಮ್ಮಲು
ಅವನೆ ಆಗ್ಗಿಹ ಪ್ರೇರಣ
ಅವನು ಇತ್ತ ವಸ್ತುವೆಲ್ಲವ
ಭಕ್ತಿಯಿಂದ ಅರ್ಪಿಸುವೆ ಅವಗಿಂದು ಈ ಆಭರಣ
-----------------------------------------
ಶಾರದೆ
---------
ಓ!ನಮ್ಮ ಶಾರದೆ
ಈ ಕವನ ನಿನ್ನದೆ
ಹೃದಯದಿಂದ ಬಂದಿದೆ
ಅದಕೇ ನಿನಗರ್ಪಿಸಿದೆ
ಕಣ್ಣಿನಲ್ಲಿ ಕಾಂತಿಯಿದೆ
ಮಾತಲಿ ಮಾಧುರ್ಯವಿದೆ
ಕೇಳಲು ಹಿತವಾಗಿದೆ
ಮನದಲಧಿಕ ಪ್ರೀತಿಯಿದೆ
ಕೈಗಳಲ್ಲಿ ಅಮೃತವಿದೆ
ಹೃದಯದಲ್ಲಿ ಪ್ರೀತಿಯಿದೆ
ನಡೆಯಲ್ಲಾಕರ್ಷಣೆಯಿದೆ
ನಗುವಿನಲಿ ಮುಘ್ದತೆಯಿದೆ
ನಿನ್ನ ಸೇವೆ ಬೆಳದಿದೆ
ಜನಕೆ ಅದು ಬೇಕಿದೆ
ಬೇಡಿಕೆಯು ಹೆಚ್ಚಿದೆ
ಅದಕೆ ಕೀರ್ತಿ ಪಸರಿಸಿದೆ
ದೇವನ ಹರಕೆ ನಿನಗಿದೆ
ಅದಕೆ ಶಕ್ತಿ ನೀಡಿದೆ
ನೂರು ವರುಷ ಬಾಳು ಎಂದು
ದೇವನಲ್ಲಿ ಬೇಡಿದೆ
------------------
ತಾತ
-----
ಓ!ಗಾಂಧಿ ತಾತ
ನೀನು ಪ್ರೀತಿ ತಾತ
ಸ್ವತಂತ್ರ ತಂದನೀತ
ಅದಕೆ ಆದೆ ರಾಷ್ಟ್ರಪಿತ
ದಾರಿಯಲಿ ಹೋಗುವಾಗ
ಕರೆದನೊಬ್ಬ ತಾತ
ಕೋಪ ತಾನು ಬರಲು
ನಿಜವ ಹೇಳ್ದೆಯೆಂದನಾತ
ಜನುಮ ಕೊಟ್ಟ ಭಗವಂತ
ದಾರಿ ತೋರಿ ನಡೆ ಎನುತ
ತಂದೆ ತಾಯಿ ಕೈಯ ಹಿಡಿದು
ನಡೆಸಿದರು ಅನವರತ
ನಾನು ಒಬ್ಬನೆ ಇದ್ದರೆ
ಕಾದಿದೆ ಆಘಾತ
ಅದಕೆ ನಲ್ಲೆ ಜೊತೆಯಿರಲು
ತಪ್ಪಿತು ಅಪಘಾತ
ಸಾಕೆಂಬ ವಾಣಿಯು
ಆಗಿತ್ತು ನಮಗೆ ಬಲುಹಿತ
ಅವರ ಏಳ್ಗೆ ಮನದಲಿರಲು
ನಮ್ಮಾಸೆಯು ಅತಿಮಿತ
ಕಡಲ ದಾಟಿ ಧಾವಿದಳು
ದೊಡ್ಡವಳು ಟಾಟಾ ಎನ್ನುತ
ಮುಂಬಯ್ ವಾಸಿಯಾದವಳು
ಬಾ ಎಂದಳು ಕರೆಯುತ
ಮುದ್ದು ಮಕ್ಕಳೆರಡು ಇರಲು
ಆದೆನಾನು ಮುದ್ದಿನ ತಾತ
ಹಿರಿಯನಾಗಿ ಎಲ್ಲರೊಳಿತು
ಬಯಸೆ ಅದುವೆ ಶಾಸ್ವತ
-----------------------------
No comments:
Post a Comment