ಪುರಂದರದಾಸ
===========
|
|||
ದೇವಋಷಿ ನಾರದನು ಧರೆಗೆ ಬಂದನು | |||
ಸೀನಪ್ಪನಾಯಕನ ಹೆಸರಲಿದ್ದನು | |||
ಧನವನೆ ದೇವರೆಂದು ಪೂಜಿಸಿದ್ದನು | |||
ಕೃಪಣನೆಂಬ ಬಿರುದನ್ನು ತಾ ಗಳಿಸಿದನು | |||
ಅವನ ಮಡದಿ ಸರಸ್ವತಿಯೆಂದು ಖ್ಯಾತಳಾದಳು | |||
ಅಚ್ಯುತನ ಹಗಲಿರುಳೂ ಧ್ಯಾನಿಸಿದ್ದಳು | |||
ಪತಿಯ ನೆರಳಿನಲ್ಲೆ ತಾನು ನಡೆದಿದ್ದಳು | |||
ಪತಿಯಲ್ಲೇ ಪರಮೇಶ್ವರನ ತಾನು ಕಂಡಳು | |||
ವೃದ್ಧ ಬ್ರಾಹ್ಮಣನ ರೂಪದಲಿ ಹರಿಯು ಬಂದನು | |||
ಮಗನ ಉಪನಯನಕೆ ಹಣ ಕೇಳಿದನು | |||
ಕಿಲಿಬು ಕಾಸನೂ ಕೊಡೆ ಎಂದು ವರ್ತಕನೆನಲು | |||
ಅವನ ಮಡದಿಯ ಬಳಿ ಬಂದು ನೆರವು ಕೇಳಿದನು | |||
ತವರಿನ ಮೂಗುತಿಯನು ಅವಳು ‘ನೀಡಲು | |||
ಅದ ವರ್ತಕನಿಗೆ ನೀಡಿ ಹಣ ನೀಡೆಂದನು | |||
ಮಡದಿಯ ಬಳಿ ಬಂದು ಅವನು ನಿಜವ ಕೇಳಲು | |||
ಮೂಗುತಿಯು ಮರಳಿ ಬರಲು ಮೂಕನಾದನು | |||
ಎಲ್ಲ ಹಣ ದಾನವಿತ್ತು ದಾಸನಾದನು | |||
ಪುರಂದರ ನಾಮಾಂಕಿತದಿ ಹಾಡಿ ನಿಂದನು | |||
ವೇದದ ಸಾರವನು ಸುಲಭವಾಗಿ ಅರುಹುತ | |||
ವಿಠ್ಠಲನ ಹಿರಿಮೆ ಹಾಡಿ ಖ್ಯಾತನಾದನು |
Friday, January 27, 2017
Subscribe to:
Post Comments (Atom)
No comments:
Post a Comment