Friday, March 7, 2008

೧. ಗಣೇಶ ಸ್ತುತಿ

ಪ್ರಸನ್ನ ಗಣಪತಿ ವಂದಿಸುವೆ
ಪ್ರತ್ಯಕ್ಷ ದೈವವೇ ವಂದಿಸುವೆ
ಪ್ರಥಮ ಪೂಜಿತನೆ ವಂದಿಸುವೆ
ಪ್ರಶಾಂತ ವದನನೆ ವಂದಿಸುವೆ
ಪ್ರಣವ ಸ್ವರೂಪನೆ ವಂದಿಸುವೆ
ಪ್ರಾಗ್ನ್ಯಸ್ವರೂಪನೆ ವಂದಿಸುವೆ
ಪ್ರತಿಬಾ ಪ್ರದಾತನೆ ವಂದಿಸುವೆ
ಪ್ರಾಣ ಸಖನೆ ವಂದಿಸುವೆ
ಪ್ರಸ್ತುತ ಬೇಡಿಕೆ ಸಲಿಸಿರಲು
ಪೌತ್ರನ ನೀಡಿದೆ ಜೊತೆಯಿರಲು
ಪ್ರಶ್ನೆಗಲೆಲ್ಲವ ಹರಿಸಿರುವಾತನೆ
ಪ್ರಾರ್ಥಿಸಿ ನಮಿಸುವೆ ಸ್ವೀಕರಿಸು ವಂದನೆ

No comments: