Wednesday, March 12, 2008

v೧೦.ಶ್ರೀ ರಾಮ

ಬಾಲ್ಯದಿಂದ ಅಧ್ಯಾತ್ಮ ವೃದ್ಧಿಯನ್ನು ಮಾಡಿಸಿದ
ಭಾನುಕುಲದ ದೇವ ನಿನಗೆ ವಂದನೆಭಾಗವತರು ಬಂದು ದೇವರ ಕಥೆಗಳನು ಹೇಳುತಿರಲು
ಭಾಗ್ಯದ ಬಾಗಿಲನ್ನು ತೆರದ ದೇವನೇ ವಂದನೆ
ಬಾಳಿನಲಿ ಮಾನವನು ಹೇಗೆ ಬಾಳಬೇಕೆಂದು
ತೋರಿದ ಮಾರ್ಗದರ್ಶಿ ವಂದನೆ
ಸತ್ಯ ಧರ್ಮ ಎರಡು ಕಂಗಳಂತೆ ನೆನೆದು ಜೀವಿಸಿದ
ಸೀತಾಪತಿಯೇ ನಿನಗೆ ವಂದನೆ
ಮಾನವರು ವಾನರರು ರಕ್ಕಸರು ಯಾರಾದರು
ಶರಣಾಗಿ ಬಂದವರ ಕಾಯ್ದೆ ನೀ
ದುಷ್ಟರನ್ನು ದಮನಮಾಡಿ ಶಿಷ್ಟರನ್ನು ರಕ್ಷಿಸಿದ
ದಶರಥನ ಪ್ರಿಯ ಸುತನೆ ನಿನಗೆ ವಂದನೆ
ಕೇಳಿದ ವರಗಳನ್ನು ಕೊಟ್ಟು ಕಂಗಳಂತೆ ಕಾಯುತಿರುವ
ಕೋಸಲರಾಮ ನಿನಗೆ ವಂದನೆ
ಕುವರಿಯರಿಗೆ ಕುಡಿಗಳನ್ನು ಕೊಟ್ಟು ನಿತ್ಯ ಕಾಯುತಿರುವ
ಕಾರುಣ್ಯ ಸಿಂಧು ನಿನಗೆ ವಂದನೆ

No comments: