Friday, March 14, 2008

೧೪.ಆವನಿ ಮಹಾಸ್ವಾಮಿಗಳು

ನಮ್ಮ ಹಿತವನು ಚಿಂತಿಸುತ
ನಮ್ಮ ನಲ್ಮೆಯ ಬಯಸುತ್ತ
ನಮಗೆ ಮಾರ್ಗ ತೋರಿಸುತ
ನಡೆಸುವ ಗುರುವೇ ನಿಮಗೆ ನಮೋ
ಕರುಣೆಯ ಹೊಳೆಯ ಹರಿಸುತಲಿ
ಕಷ್ಟಗಳನು ಹೊಡೆದು ಓಡಿಸುತಲಿ
ಕಣ್ ಮಣಿ ಯಂತೆ ಕಾಯುತಲಿ
ಕಾಪಾಡುವ ಗುರುವೇ ನಿಮಗೆ ನಮೋ
ಬಂದಾಗ ದರ್ಶನ ನೀದುತಲಿ
ಅಹವಾಲುಗಳನು ಕೇಳುತಲಿ
ಅದಕೆ ಪರಿಹಾರ ನೀದುತಲಿ
ಆದರಿಸುವ ಗುರುವೇ ನಿಮಗೆ ನಮೋ
ಸಂತತಿಯನ್ನು ಬೇಡಿರಲು
ಸಂತಸದಿಂದ ಪ್ರಾರ್ಥಿಸಲು
ಶರವಣ ಶಾರದೆ ಪೂಜೆ ಗೈಯ್ಯಲು
ವರ ಕೊಡಿಸಿದ ಗುರುವೇ ನಿಮಗೆ ನಮೋ

No comments: