Wednesday, March 12, 2008

೮.ಕನ್ಯಕಾ ಪರಮಶ್ವರಿ

ವೈಶ್ಯ ಕುಲದ ದೀವಿಗೆಯೇ
ಕನ್ಯಕಾ ಪರಮೆಶ್ವರಿಯೇ
ಪವಿತ್ಹ್ರವು ನಿನ್ನಯ ಸಂನಿಧಿಯೇ
ಪ್ರೀತಿ ಮನೆ ಮಾಡಿಹುದು ನಿನ್ನಲ್ಲಿಯೇ
ಅರಸ ನಿನ್ನ ಬಯಸಿರಲು
ನೀನು ಅವನ ತ್ಯಜಿಸಿರಲು
ಬಲವಂತ್ಹಕೆ ಶಿರ ಬಾಗದೆ
ಅಗ್ನಿದೇವನ ಮಡಿಲ ಸೇರಿದೆ
ಅದರಿಂದ ಬೆಳಗಿತು ನಿನ್ನಯ ಕೀರ್ತಿ
ಕನ್ಯಾಕುಮಾರಿ ನೀ ಸಾಕಾರ ಮೂರ್ತಿ
ಮನಸಿನಿಂದ ಮಾಡೇ ಧ್ಯಾನದ ಆರತಿ ನೀಡುವೆ ಜನರಿಗೆ ಸ್ಪೂರ್ತಿ
ನಿನ್ನಂತೆ ಮಗಳಿಗೆ ಕುವರಿಯ ಕೊಟ್ಟೆ
ಆಕೆಯ ಇಚ್ಚೆಯ ಪೂರೈಸಿಬಿಟ್ಟೆ
ಹಿರಿಯ ಮಗಳಿಗೆ ಕುವರನ ಕೊಟ್ಟೆ
ಹೃದಯದಲಿ ಅದಕೆ ಸ್ಥಿರವಾಗಿ ಇಟ್ಟೆ

No comments: