Saturday, March 15, 2008

೧೯.ಶ್ರೀ ಸೋಮೇಶ್ವರ


ಹಲಸೂರಿನಲ್ಲಿ ನೆಲಸಿ
ಹರಸುತ್ತಲಿರುವ ದೇವ
ಹಲವು ಬಾರಿ ನಮಿಸುವೆನು
ಸೋಮೇಶ್ವರ
ಅಧ್ಯಾತ್ಮ ಕ್ಷೇತ್ರದಲಿ
ಅತ್ಯುನ್ನತ ಸ್ಥಾನ ಪಡೆದ
ಮಾವನ ಮಗಳ ಎನಗೆ ಇತ್ತೆ
ಸೋಮೇಶ್ವರ
ನಿನ್ನ ದೇಗುಲದಲೇ ಇರುವ
ದುರ್ಗೆಯನ್ನು ಪೂಜಿಸಲು
ಕುವರಿಗೆ ವಿವಾಹ ಆಯಿತು
ಸೋಮೇಶ್ವರ
ಕುಮಾರನಿಗೆ ಜನ್ಮವಿತ್ತೆ
ಕುಮಾರನ ಪ್ರಿಯ ಜನಕನೆ
ಕುಲ ದೀವಿಗೆಗಳನಿತ್ತೆ
ಸೋಮೇಶ್ವರ

No comments: