Wednesday, March 12, 2008

೯,ಶ್ರೀ ರಾಘವೇಂದ್ರ

ಮಂತ್ರಾಲಯದಿ ಕುಳಿತ ಯತಿವರನೆ
ಸಲಿಸುವರು ಅಲ್ಲಿ ಬಂದು ವಂದನೆ
ಮಾಡುವರು ನಿನ್ನ ಎದುರು ಪ್ರಾರ್ಥನೆ
ಮುದದಿ ಕೇಳುವೆ ಯತಿವರನೆ
ದೇವರ ರಸ್ತೆಯ ಪ್ರಾರಂಭದಲ್ಲಿ
ಕುಳಿತಿಹೆ ನೀನು ಬೃಂದಾವನದಲ್ಲಿ
ಭಕ್ತರು ಮಗ್ನರಾಗಿಹರು ಪೂಜೆಯಲ್ಲಿ
ಅಲ್ಲಿ ಜಗದ ಚಿಂತೆಗೆ ಸ್ಥಳವೆಲ್ಲಿ
ಕಲ್ಪತರುವಾದ ಶ್ರೀ ರಾಘವೇಂದ್ರ
ನಿನ್ನ ದಯೆಯಿಂದ ಬಾಳಾಯಿತು ಮಧುಚಂದ್ರ
ಕುವರಿಯರಿಬ್ಬರಿಗೆ ನೀಡಿರಲು ರತ್ನಗಳ
ಬಾಳಿನಲಿ ಉದಿಸಿದ ಪೂರ್ಣಚಂದ್ರ

No comments: