Saturday, March 15, 2008

೨೦,ಕುಕ್ಕೆ ಶ್ರೀ.ಸುಬ್ರಮಣ್ಯ


ಕುಕ್ಕೇಪುರ ವಾಸನೆ
ಕುಕ್ಕುಟ ದ್ವಜ ಧರನೆ
ಕುಲವನ್ನು ಕಾಯುವವನೆ
ಕುಮಾರ ನಿನಗೆ ವಂದನೆ
ಆದಿ ಸುಬ್ರಮಣ್ಯನ ಜೊತೆ
ಆಶ್ರಿತರ ಕಾಯುವವನೆ
ಆದರವ ಕೋರಲು
ಆನಂದದಿಂದ ನೀಡುವವನೆ
ವರ್ಷಕೊಮ್ಮೆ ಷಷ್ಠಿ ಸೇವೆ
ಭವ್ಯವಾಗಿ ಪಡೆಯುವವನೆ
ಹರ್ಷದಿಂದ ಭಕ್ತರೆಲ್ಲ
ಬಾಳಲು ನೆರವಗುವವನೆ
ನಮ್ಮ ಬಾಳ ದೀಪವಾಗಿ
ಮನೆ ಮಂದಿಯ ಜ್ಯೋತಿಯಾಗಿ
ಮಮತೆಯಿಂದ ಕಾಯುತಿರುವ
ಮಹಾಮಹಿಮ ವಂದನೆ
ಕುವರಿಯರಿಗೆ ವಿವಾಹವನ್ನೂ
ಬೇಡಲು ಅದ ನದಸಿದೆ
ಅವರಿಗೆ ಸಂತಾನ ಕೇಳೇ
ಅದನು ಇಂದು ನೀಡಿದೆ
ಕುಮಾರರನ್ನು ಕಾಯ್ದಿರು
ಎಲ್ಲರನ್ನು ಹರಸಿರು
ದರ್ಶನ ಭಾಗ್ಯವ ನೀಡುತ
ದಯಾಸಿನ್ಧು ಕಾಯ್ದಿರು

No comments: