ಶೃಂಗೇರಿ ಯಲ್ಲಿ ಕುಳಿತಿರುವೆ
ಇಲ್ಲಿ ಏತಕೆ ನಿಂತಿರುವೆ
ಬಂದ ಭಕ್ತರ ಶೀಘ್ರ ಹರಸಲು
ತಾಯೆ ಇಲ್ಲಿ ನಿಂದಿರುವೆ
ನಿತ್ಯ ಪೂಜೆ ಪಡೆದಿರುವೆ
ವೇದ ಮಂತ್ರಗಳ ಕೇಳಿರುವೆ
ಮಧುರ ಸಂಗೀತ ಆಲಿಸಿರುವೆ
ಮಮತೆಯ ಮಾತೆಯೇ ವಂದಿಸುವೆ
ನವರಾತ್ರಿಯಲಿ ಹತ್ತು ದಿನಗಳು
ಅಲಂಕಾರ ಸೇವೆ ನಡೆದಿರಲು
ವಿವಿಧ ರೂಪದಿ ಬೆಳಗುತಲಿ
ವಿಶ್ವದ ಜನರನು ಹರಸಿರುವೆ
ಆಚಾರ್ಯರು ನಿತ್ಯ ಸೇವಿಸಲು
ಅವರಿಂದ ಸೇವೆ ಪಡೆದಿರುವೆ
ಅವರ ಮೂಲಕ ಆಶೀರ್ವದಿಸುತ
ಆಶಾ ಜ್ಯೋತಿ ದ್ವಯವ ನೀಡಿರುವೆ
Subscribe to:
Post Comments (Atom)
No comments:
Post a Comment