Sunday, March 16, 2008

೨೫ ಶಿವಗಂಗೆ ಶ್ರೀ ಶಾರದೆ

x
ಎತ್ತರದ ಗಿರಿಯ ನಡುವೆ
ಇರುವುದು ಶಿವ ಗಂಗೆ
ಅಲ್ಲೇ ಘ್ರುತವು ನವನೀತವಾಗಲು
ಅದುವೇ ದೇವಗಂಗೆ
ಶಾರದೆಯೂ ಶಂಕರರೂ ಇರಲು
ಅದಕೆ ಜ್ಞಾನ ಗಂಗೆ
ಸಿದ್ದವಾಗಿ ಸಿದ್ಧಿ ಇಹುದು
ಅದಕೆ ಸಿದ್ಧಗಂಗೆ
ಶಂಕರರ ಪ್ರತಿನಿಧಿ ಇಹರು
ಅದಕೆ ದಯೆಯ ಗಂಗೆ
ವೇದ ಘೋಶ ಮೊಳಗಿಹುದು
ಅದಕೆ ವೇದ ಗಂಗೆ
ಶಾರದೆಯು ಅನುಗ್ರಹಿಸಲು
ಅದುವೇ ಪ್ರೇಮ ಗಂಗೆ
ಶಾಸ್ತ್ರ ರೀತಿ ಪೂಜೆ ನಡೆಯೇ
ಅದುವೇ ಆತ್ಮ ಗಂಗೆ
ಶಾಂತಿ ಇಲ್ಲಿ ನೆಲಸಿರಲು
ಅದಕೆ ಶಾಂತಿ ಗಂಗೆ
ಸಂತತಿಯ ತಾಯಿ ಕೊಡಲು
ಅದುವೇ ಮಮತೆ ಗಂಗೆ

No comments: