Sunday, March 16, 2008

೨೬.ಶ್ರೀ.ರಾಜ ರಾಜೇಶ್ವರಿ

ಹಣವಿರುವನು ರಾಜನಲ್ಲ
ಜ್ನ್ಯಾನಿಯೂ ಅವ ರಾಜನಲ್ಲ
ಶಕ್ತಿಶಾಲಿಯೂ ರಾಜನಲ್ಲ
ದೈವ ಭಕ್ತನೆ ರಾಜ
ಮಡದಿ ಅವಳು ರಾಣಿಯಲ್ಲ
ಅರಸಿ ಅವಳು ರಾಣಿಯಲ್ಲ
ರಾಜ್ಯವಿರಲು ರಾಣಿಯಲ್ಲ
ಶಿವನರಸಿಯೇ ರಾಣಿಯು
ಹಣವ ಕೊಡುವಳು ಶ್ರೀದೇವಿ
ಜ್ನ್ಯಾನವ ನೀದುವಳು ವಾಣಿ
ಶಕ್ತಿಯ ಕೊಡುವಳು ಕಾತ್ಯಾಯಿನಿ
ಮುಕ್ತಿಯ ನೀದುವಳು ಜಗಜ್ಜನನಿ
ಜಗವನ್ನೇ ಕಾಯುವವಳು ಜಗದೀಶ್ವರಿ
ಮಹಾದೇವನ ಮಡದಿ ಮಾಹೆಶ್ವರಿ
ಬೇಡಿದನ್ನು ನೀದುವವಳು ಕಾಮೆಶ್ವರಿ
ರತ್ಹ್ನಗಳನು ಇತ್ತವಳು ರಾಜರಾಜೇಶ್ವರಿ

No comments: