Sunday, March 16, 2008

೨೪.ಹೆಬ್ಬೂರು ಕಾಮಾಕ್ಷಿ

ಕಂಚಿಯಲ್ಲಿ ನೆಲೆಸಿದ ಮಾತೆ ನಿನ್ನ ಕಂಡೆನು
ಹಲವು ಬಾರಿ ನಿನ್ನ ಕಂಡು
ನಿನ್ನ ಕೃಪೆಯ ಪಡೆದೆನು
ಪರಮಾಚಾರ್ಯರ ಕೀರ್ತಿ
ವಿಶ್ವ ವ್ಯಾಪಿ ಹೊಂದಿದೆ
ಅವರು ಗೈದ ನಿನ್ನ ಸೇವೆ
ಎಲ್ಲರನ್ನು ಹರಸಿದೆ
ನಮ್ಮ ಬೇಡಿಕೆಯನ್ನು ಮನ್ನಿಸಿ
ನಮ್ಮ ಮೊರೆಯನ್ನು ಆಲಿಸಿ
ನಮ್ಮ ಕಾಯಲೆಂದು ಬಂದ
ನಮ್ಮ ಮಾತೆ ವಂದನೆ
ಏನು ಕೇಳಬೇಕೆಂಬ ಚಿಂತೆ
ಅದು ಬಂದಿರಲು
ಏನು ಬೇಕು ಎಂದು ಅರಿತು
ಎನಗೆ ಅದನೇ ನೀಡಿದೆ
ಇಂದು ಬಂದ ಜ್ಯೋತಿ ಎರಡು
ನೀನೆ ಇತ್ತ ಕಾಣಿಕೆ
ನಿನ್ನ ಕರುಣೆ ಹೊಳೆಯ ಹರಿಸಿ
ನಡೆಸವರನು ಮುಂದಕೆ

No comments: