ಕಲಿಯುಗದಲಿ ಭಕ್ತರನು
ಕಾಯಲೆಂದು ಧರೆಗೆ ಬಂದ
ಕರುಣಾಮಯ ಸ್ವಾಮಿಯೇ
ಹೇ ಶ್ರೀನಿವಾಸ
ಕಾಣಲೆಂದು ಮನಸು ಇತ್ತು
ನಿನ್ನ ಕ್ಷೇತ್ರಕೆ ಕರೆಸಿಕೊಂಡು
ಸೇವೆ ಪಡೆವ ದಯಾಸಿಂಧು
ಹೇ ಶ್ರೀನಿವಾಸ
ಅಲ್ಲಿ ಬರಲು ಆಗಲಿಲ್ಲ
ಎಂಬ ಚಿಂತೆ ಬೇಕಿಲ್ಲ
ಎಂದು ಇಲ್ಲೇ ನೆಲಸಿ ಕಾಯ್ವೆ
ಶ್ರೀ ಶ್ರೀನಿವಾಸ
ಅಂದು ನಿನ್ನ ಬಳಿಗೆ ಬಂದು
ಕಣ್ಣು ಮುಚ್ಚಿ ಪ್ರಾರ್ಥಿಸಿರಲು
ಕುವರಿಯರಿಗೆ ಸಂತಾನ ವರವ
ಇತ್ತೆ ಶ್ರೀನಿವಾಸ
No comments:
Post a Comment