Tuesday, March 11, 2008

೭.ಬಂಡೆ ಗಣಪತಿ

ಬಂಡೆ ಗಣಪತಿಯ ನೋಡು
ಕಂಡು ಮನಸಿನಿಂದ ಹಾಡು
ಅವನ ನೆನೆಯದ ಬಾಳು ಕಾಡು
ನೆನೆದರೆ ಆಗುವುದು ಸಂತಸದ ಬೀಡು
ಚಿಕ್ಕ ವಯಸಿನಿಂದ ಸ್ವಾಮಿ ನಮಗೆ ಸ್ನೇಹಿತ
ನಮ್ಮ ಮನೆಯ ಜನಕೆ ಆದ ಅವನೇ ವರದಾತ
ಅವನ ಗುರಿಯು ಆಗಿಹುದು ಸತತ ಜನಹಿತ
ಅದರಿಂದಲೇ ಹಾಡುವರು ಅವನಿಗೆ ಸುಪ್ರಭಾತ
ಸಿರಿಯ ಕೇಳಿದರೆ ಅವನು ಸಿರಿಯ ಕೊಡುವನು
ಜ್ಞ್ಯಾನವನುಕೇಳಿದರೆ ಜ್ಞ್ಯಾನ ಕೊಡುವನು
ಮುಕ್ತಿಯನು ಕೇಳಿದರೆ ಅದನು ಕೊಡುವನು
ಮುಮುಕ್ಷತ್ವ ಕೇಳಿದರೆ ಅದನು ಕೊಡುವನು
ನಮ್ಮ ತಂದೆ ಕೇಳಲು ನಮ್ಮನಿತ್ತನು
ಚಿಕ್ಕ ಮಗಳಿಗೆ ಪುತ್ರಿ ರತ್ನವಿತ್ತನು
ದೊಡ್ಡ ಮಗಳಿಗೆ ಒಬ್ಬ ಕುವರನಿತ್ತನು
ಅದಕೆ ಆಗಿಹನು ಅವನೇ ಮಹಾಮಹಿಮನು

No comments: