Friday, March 14, 2008

೧೮ ಶ್ರೀ ಮಾರುತಿ


ಮಹಾಲಕ್ಷ್ಮಿ ಕ್ಷೇತ್ರದಲಿ
ಮುಗಿಲೆತ್ತರಕೆ ನಿಂದು
ಮುದದಿ ಕಾಯುತಿರುವ
ಮಹಾ ಮಹಿಮನೆ
ಸಂಜೀವಿನಿ ಕೈಲಿ ಹಿಡಿದು
ಸಮುದ್ರವ ಲಂಘಿಸುವ ಭಂಗಿ
ತೋರುತಲಿ ದರ್ಶನ ನೀಡುವ
ಮಹಾ ಮಹಿಮನೆ
ಅಮ್ಬರದಲಿ ಹಾರಿ ತೆರಳಿ
ಲಂಕೆಯಲಿ ಜಾನಕಿಯ ಕಂಡು
ಮುದ್ರೆಯುನ್ಗುರವನಿತ್ತ
ಮಹಾ ಮಹಿಮನೆ
ಸಂಕಟಗಳ ತೋಡಿಕೊಂಡು
ಮಾರ್ಗವನ್ನು ಕೇಳುತಿರಲು
ಮಮತೆಯಿಂದ ತೋರಿದ
ಮಹಾ ಮಹಿಮನೆ
ವಿದ್ಯೆ ಮದುವೆ ಜ್ಞ್ಯಾನ ಮೋಕ್ಷ
ಕೇಳಿದ್ದೆಲ್ಲಕೊಡುವ ದೇವ
ಮನೆಯ ಬೆಳಗೋ ಮುತ್ತನಿತ್ತೆ
ಮಹಾ ಮಹಿಮನೆ

No comments: