Saturday, March 15, 2008

೨೧.ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥ


ಶಿವನಿಗೆ ಕಣ್ಣುಗಳು ಮೂರು
ಮಾನವನಿಗೆ ಗುಣಗಳು ಮೂರು
ತ್ರಿಮೂರ್ತಿಗಳ ಆಕಾರವು ಮೂರು
ಕಾಲದಲ್ಲಿ ನಿತ್ಯವದೂ ಮೂರು
ಮಾತೆಯ ಶಕ್ತಿಗಳು ಮೂರು
ಆಹ್ನಿಕ ಮಾಡುವುದು ಮೂರು
ಶಿವನ ಹೆಸರ ಅಕ್ಷರವು ಮೂರು
ಉಮೆಯ ಹೆಸರ ಅಕ್ಷರವೂ ಮೂರು
ತ್ರಿಮೂರ್ತಿಗಳ ಕಾರ್ಯವದು ಮೂರು
ಮಾನವನ ಅವಸ್ಥೆಗಳು ಮೂರು
ದೇಶ ಕಾಯ್ವ ರಕ್ಷಕರು ಮೂರು
ನ್ಯಾಯಾಲಯದ ಕರೆಯು ಮೂರು
ಪ್ರಖ್ಯಾತ ಸ್ಥಳಗಳು ಮೂರು
ಪ್ರಖ್ಯಾತ ದೈವಗಳು ಮೂರು
ಶಿವ ಮಾಧವ ಕಾರ್ತಿಕೇಯರು ಮೂರು
ಅವರು ಕೊಡುವ ವರವು ಮೂರು
ನಮಗೆ ಇರುವ ರತ್ನ ಮೂರು
ನಮಗೆ ಇರುವ ಬೇಡಿಕೆಯು ಮೂರು
ದರ್ಶನ ಮಾಡಿದ ಸ್ಥಳ ಮೂರು
ದಯೆ ತೋರಿ ಕಾಯ್ವ ದೈವ ಮೂರು

No comments: