Thursday, March 13, 2008

೧೩.ಶ್ರೀ ನಾರಸಿಂಹ

ಪ್ರಹ್ಲಾದ ಕರೆಯಲು ಬಂದವನೇ
ಪ್ರತ್ಯಕ್ಷ ದೈವ ಆದವನೆ
ಪ್ರಾರ್ಥನೆಗೆ ಒಲಿವ ನರಸಿಂಹನೆ
ಪ್ರಣಾಮ ಸ್ವೀಕರಿಸು ಹೇ ದೇವನೇ
ಹಿರಣ್ಯ ಕಷಿಪುವ ಕೊಂದವನೇ
ಹಿತವಾದ ಪ್ರಾರ್ಥನೆಗೆ ಒಲಿಯುವವನೆ
ಹಾಲು ಜೀನಿನ ಮೈತ್ರಿಯ ತೆರದಲಿ
ಹಾರ್ದಿಕ ಪ್ರೇಮವ ತೋರುವಾತನೆ
ಸದಾ ಭಕ್ತರ ಕಾಯುವವನೆ
ಸತತವು ಅವರ ಹಿತ ಚಿಂತಿಸುವವನೆ
ಸಂತಾನ ಭಿಕ್ಷೆಯ ಬೇಡಿದ ಮಕ್ಕಳಿಗೆ
ಸಂತಸದಿ ಇತ್ತ ಸರಸಿಜ ನಾಭನೆ

No comments: