Sunday, March 16, 2008

೨೭.ದೇವಿ ವಂದನೆ

ಮಾತೆ ನಿನಗೆ ವಂದನೆ
ಅರಿತೆ ನಮ್ಮ ವೇದನೆ
ತಿಳಿದೆ ನಮ್ಮ ಭಾವನೆ
ಮಾಡೇ ನಿನ್ನ ಚಿಂತನೆ
ಸತತ ನಿನ್ನ ಧ್ಯಾನ ಮಾಡೇ
ಹೃದಯ ಆಯಿತು ನಿನ್ನ ಮನೆ
ಸಹೃದಯದಿಂ ನಿನ್ನ ಸ್ಮರಿಸೆ
ಅಯಿತಿಂದೆ ಚಿಂತೆಗೆ ಕೊನೆ
ಸತತವು ಕಾಯುವೆ ಎಂದು
ನಿನಗೆ ಶರಣಾದನೆ
ಸದ್ಗತಿ ಪಾಲಿಸುವ ಮಾತೆ
ಸತತವು ನೀಡಿರು ಸಹನೆ
ನೀನೆ ನಮಗೆ ಇತ್ತೆ ತಾಯೆ
ದೇವಲೋಕದ ಕುಸುಮಗಳನೆ
ಅದಕೆ ಇಂದು ಕಾಣಿಕೆ ರೂಪದಿ
ಈವೆ ಕಾವ್ಯ ಮಾಲೆಯನೆ

No comments: