Thursday, March 13, 2008

೧೨.ಶ್ರೀ ಕಾಡು ಮಲ್ಲೇಶ್ವರ

ಮೂಲ ದೇವನಾಗಿ ಈ ಕ್ಷೇತ್ರದಲಿ
ಮಲ್ಲೇಶ್ವರ ಸ್ವಾಮಿ ನೀ ನೆಲೆಸಿದೆ
ಬರುವ ಭಕ್ತರು ಮುದದಿ ಭಜಿಸಲು
ಅವರ ಕಷ್ಟಗಳ ನೀ ಹರಿಸಿದೆ
ಶಿವರಾತ್ರಿಯಲಿ ನಡೆವ ರಥೋತ್ಸವ
ಸ್ವಾಮಿಯೇ ಬಹು ವರ್ಷ ನೋಡಿರುವೆ
ಪೇಟೆಯ ಮಧ್ಯದಿ ನೀ ನಿಂದಿರಲು
ಸೇವೆಯ ಪಡೆವುದ ನೀ ನೋಡಿರುವೆ ಅಧ್ಯಾತ್ಮ ಕೇಂದ್ರ ಎನಿಸಿದ ಕ್ಷೇತ್ಹ್ರದಲಿ
ಅಹರ್ನಿಶಿ ಕಾಯುವ ದೇವ
ಕುವರಿಯರೀರ್ವರಿಗೂ ಕರುಳ ಕುಡಿಯನಿತ್ತು
ಹರಸಿದೆ ಅವರನು ಮಹಾನುಭಾವ

No comments: