Friday, March 14, 2008

೧೭.ಶ್ರೀ ರಂಗನಾಥ

ಶಾಂತಿಯಾ ಪ್ರತಿರೂಪವಾಗಿ ಮಲಗಿರುವೆ
ಅದರೂ ಎಲ್ಲರ ಮೊರೆಯ ಕೇಳಿರುವೆ
ಲೋಕದ ವಿದ್ಯಮಾನಗಳ ಅರಿತಿರುವೆ
ಸ್ವೀಕರಿಸು ವಂದನೆಯ ಶ್ರೀ ರಂಗನಾಥ
ಜಗವೆಲ್ಲ ಮಲಗಿರಲು ನೀನು ಎದ್ದಿರುವೆ
ಜಗವೆಲ್ಲ ಎದ್ದಿರಲು ನೀನು ಮಲಗಿರುವೆ
ವೆದಾನ್ತದಲಿ ಎಚ್ಚರವು ಎಂದರೆ ನಿದ್ದೆ
ನಿದ್ದೆಯೆಂದರೆ ಎಚ್ಚರವು ರಂಗನಾಥ
ಮೂರು ರೂಪದಲಿ ನೀನು ಮಲಗಿರುವೆ
ಆದಿ ಮಧ್ಯ ಅಂತ್ಯ ರಂಗನೆನ್ದೆನಿಸುರುವೆ
ಅಲ್ಲೆಲ್ಲೂ ಹೋಗಲಾಗದವರಿಗೆ ಇಲ್ಲಿ
ನೆಲೆಸಿ ಕಾಯುತಲಿರುವೆ ಶ್ರೀ ರಂಗನಾಥ
ಮೊದಲಿನಿಂದಲೂ ನಮ್ಮ ಸೇವೆ ಪಡೆದಿರುವೆ
ನಮ್ಮೆಲ್ಲ ಆಸೆಗಳ ಪೂರೈಸುತಿರುವೆ
ಕುವರಿಯರಿರ್ವರ ಮೊರೆಯನ್ನು ಕೇಳುತ್ತ
ಕಂದಮ್ಮಗಳ ನೀಡಿರುವೆ ರಂಗನಾಥ

No comments: