Saturday, March 15, 2008

೨೨.ಉಡುಪಿ ಶ್ರೀ ಕೃಷ್ಣ


ವ್ಯಾಸರಾಯರಿಂದ ಇಲ್ಲಿ
ಬಂದು ನೆಲಸಿ ನಿಂತಿರುವ
ಕೊಳಲನೂದೋ ಮಾಧವನೆ
ನಿನಗೆ ವಂದನೆ
ಅಷ್ಟ ಮಠಗಳಲ್ಲಿ ಇರುವ
ಯತಿವರರು ಒಂದು ಗೂಡಿ
ನಡೆಸೋ ಪೂಜೆ ಪಡೆವ ಹರಿಯೇ
ನಿನಗೆ ವಂದನೆ
ಭಕ್ತನ ಮೊರೆಯನ್ನು ಕೇಳಿ
ಕಿಂಡಿ ಕಡೆಗೆ ತಿರುಗಿ ನಿಂತು
ದರ್ಶನವನ್ನು ಇತ್ತ ದೇವ
ನಿನಗೆ ವಂದನೆ
ಹಲವು ಭಾರಿ ದರ್ಶಿಸಿರಲು
ನಮ್ಮ ಪ್ರಾರ್ಥನೆ ಸಲಿಸಿರಲು
ಕುಲದ ಕುಡಿಗಳನ್ನು ಇತ್ತ
ಕೃಪಾಳು ವಂದನೆ

No comments: