Monday, March 10, 2008

೪.ಶ್ರೀ.ಶಿವ

ವಿಜಯನಗರ ರಾಮಮಂದಿರದಲ್ಲಿ
ಕುಳಿತ ಶಿವನು ನಗುತ ಇಲ್ಲಿ
ನಿತ್ಯ ಸೇವೆ ಪಡೆವನಿಲ್ಲಿ
ಹರನಿಗು ಹರಿಗೂ ಭೇದವೆಲ್ಲಿ
ಸೋಮವಾರ ಬರುವರಿಲ್ಲಿ
ಜನರು ನಿಂತು ನಮಿಪರಿಲ್ಲಿ
ಅಭಿಷೇಕ ಅರ್ಚನೆಗಳ
ಮಾಡಿ ಸಂತಸ ಪಡುವರಿಲ್ಲಿ
ಶಿವರಾತ್ರಿಯ ದಿನವು ಇಲ್ಲಿ
ಅದ್ಭುತ ಅಲಂಕಾರವಿಲ್ಲಿ
ಜಾಗರಣೆ ಎಲ್ಲಿ ನಿದ್ದೆ ಎಲ್ಲಿ
ರಾತ್ರಿಯೆಲ್ಲ ಶಿವನಾಮವೇ ಇಲ್ಲಿ
ಮೌನ ಪ್ರಾರ್ಥನೆ ಸಲಿಸಲಿಲ್ಲಿ
ಮುದದಿ ವರವನಿತ್ತನಿಲ್ಲಿ
ಮುದದಿ ಕಂದ ಬರುವನಿಲ್ಲಿ
ಮನದ ಸಂತಸಕೆ ಕೊನೆಯೆಲ್ಲಿ

No comments: