Sunday, March 16, 2008

೨.ಗೋರೂರು ಮಹಾಲಕ್ಷ್ಮಿ

೩ಕ್ಸೀರಾಬ್ಧಿಯಿಂದ ಬಂದವಳೇ
ಶ್ರೀಹರಿ ಹೃದಯದಿ ನಿನ್ದವಳೇ
ಶ್ರೀ ಸೂಕ್ತ ಸ್ತುತಿ ಪ್ರಿಯಳೆ
ಶ್ರೀದೇವಿ ನಿನ್ನನು ವಂದಿಸುವೆ
ಶ್ರೀ ಮಾತ್ರ ಇದ್ದರೆ ಸಾಲದು
ಶ್ರೀದೇವಿ ಜತೆಗೆ ಇರಬೇಕು
ಶ್ರೀ ಲಕ್ಷ್ಮಿ ಸರಸ್ವತಿ ಉಮೆ ಜೊತೆಗಿರಲು
ಶ್ರೀಮಂತ ಎಂದವನ ಕರೆಯಬೇಕು
ಶ್ರೀದೇವಿ ನೀನಿಲ್ಲಿ ನೆಲೆಸಿರುವೆ
ಶ್ರೀ ಮಾತೆ ಸೇವೆಯ ಪಡೆದಿರುವೆ
ಶ್ರೀಪಾದ ದ್ವಯವನು ನಮಿಸಿರಲು
ಶ್ರೀಹರಿಯ ಸಖ್ಯವ ಕೊಡಿಸಿರುವೆ
ಶ್ರೀ ಮಾತೆ ನಿನ್ನನು ಬೇಡಿರಲು
ಶ್ರೀ ಕಾರ ಹಾಕಿ ವರ ನೀಡುವೆ
ಶ್ರೀ ಮತ್ತು ಶ್ರೀಮತಿ ಎಂಬ ಕಾಣಿಕೆಯ
ಶ್ರೀಮಂತ ಹೃದಯದಿಂದ ನೀಡಿರುವೆ

No comments: