ವಿಜಯನಗರ ರಾಮಮಂದಿರ
ಅದ ನೋಡಲು ಅದೆಷ್ಟು ಸುಂದರ
ಸಕಲ ದೇವತೆಗಳು ಸೇರಿ
ಸಂಗಮವಾಗಿಸಿದ ಭವ್ಯ ಮಂದಿರ
ಗುಹನ ನೋಡಿ ಬನ್ನಿ ಮೇಲೆ
ಇಲ್ಲೇ ಇರುವ ನಮ್ಮ ಗಣಪ
ರಜತ ಮೂರ್ತಿ ಬಲು ಅಂದ
ನಿಂತು ನೋಡಿದಷ್ಟು ಚೆಂದ
ಸಂಕಷ್ಟಹರ ಚೌತಿಯಂದು
ಭಕ್ತಿಯಿಂದ ಎದುರುನಿಂದು
ಬೇಡಿರಲುಸಲಹು ಎಂದು
ರಕ್ಷಿಸಲು ಅವನು ಮುಂದು
ತಮ್ಮ ಸರಿ ಎಂದೊಡನೆ
ಅಣ್ಣ ಬೇಡ ಎನ್ನುವನೆ
ಅದಕೆ ಕುವರನನ್ನು ಬೇಡೆ
ಮಗಳಿಗಿತ್ತ ತಾ ಸುಮ್ಮನೆ
Subscribe to:
Post Comments (Atom)
No comments:
Post a Comment