Thursday, March 13, 2008

೧೧ ಶ್ರೀ ಕೃಷ್ಣ

ಯಶೋದ ಕಂದನೆ ವೇಣು ಗೋಪಾಲ
ಎಲ್ಲರಿಗೂ ಆದೆನೀ ಹೃದಯ ಭೂಪಾಲ
ನಿನ್ನನ್ನು ಭಜಿಸಲು ಅದುವೇ ಪುಣ್ಯಕಾಲ
ನಿನ್ನನ್ನು ನೆನೆಯದಿರೆ ಅಪಾಯದ ಕಾಲ
ಯಶೋದೆಯು ಪೋಷಿಸಿದ ಬಾಲಗೋಪಾಲ
ದೇವಕಿಯು ಜನ್ಮಕೊಟ್ಟ ನಂದಗೋಪಾಲ
ಕಂಸನ ಮರ್ದಿಸಿದ ಶೂರ ಗೋಪಾಲ
ರುಕ್ಮಿಣಿಯು ವರಿಸಿದ ರಾಜಗೋಪಾಲ
ಗೀತೆಯ ಭೋಧಿಸಿದ ಗುರುಗೋಪಾಲ
ಪಾರ್ಥನ ರಥ ನಡೆಸಿದ ಜಾಣ ಗೋಪಾಲ
ಕ್ಷತ್ರಿಯರ ಅಳಿಸಿದ ವೀರಗೊಪಾಲ
ಪಾಂಡವರ ಕಾಯ್ದ ಪ್ರಿಯ ಗೋಪಾಲ
ಭಕ್ತರ ಕಾಯುವ ಭಾಮ ಗೋಪಾಲ
ಭುವನೈಕ ಸುಂದರ ಶೇಷಗೊಪಾಲ
ಪುತ್ರ ರತ್ಹ್ನವನಿತ್ತೆ ಚೆಲುವ ಗೋಪಾಲ
ಪುರುಷಾರ್ಥ ನೀಡುವ ಸ್ವಾಮಿ ಗೋಪಾಲ

No comments: